ವಾಲ್ಮೀಕಿಗಳು ರಚಿಸಿದ ರಾಮಾಯಣದ ಕತೆಯಲ್ಲಿ ಒಂದು ಮಾತು ಬರುತ್ತದೆ, “ನುಡಿದಂತೆಯೆ ನಡೆಯುವವನು ಪುರುಷೋತ್ತಮ.” ನಾವು ಎಷ್ಟೋ ತತ್ವ ಹೇಳುತ್ತೇವೆ. ನೀತಿ ಹೇಳುತ್ತೇವೆ. ಆದರೆ ಅದನ್ನೆಲ್ಲ ನಡೆಸುವುದು ಮಾತ್ರ ಅಪರೂಪ.

ಶ್ರೀರಾಮ ನುಡಿದಾಂತೆ ನಡೆದ, ಹರಿಶ್ಚಂದ್ರ ನಡೆದ, ಏಸುಕ್ರಿಸ್ತ ನಡೆದ, ಗಾಂಧೀಜಿಯೂ ನಡೆದರು. ಅಲ್ಲವೇ ? ಅದಕ್ಕೇ ಅವರೆಲ್ಲ ಮಹಾಪುರುಷರು.

ಅದೇ ರೀತಿ ಹಲವು ಮಹಾವ್ಯಕ್ತಿಗಳು ನಮ್ಮ ಕಾಲದಲ್ಲೆ ಇದ್ದರು. ನುಡಿದಂತೆ ನಡೆದವರು. ದೇಶಸೇವೆಯಲ್ಲಿ ಜೀವ ಸವೆಸಿದವರು. ನೀತಿವಂತರಾಗಿ ಬಾಳಿದವರು, ಸತ್ಯವಂತರಾಗಿ ನಡೆದುಕೊಂಡವರು ಅಧಿಕಾರಕ್ಕೆ ಆಸೆ ಪಡದೆ ಸೇವೆ ಮಡಿದವರು. ಅಂತಹ ಮಹಾಪುರುಷರಲ್ಲಿ ಪುರುಷೋತ್ತಮ ದಾಸ್‌ಟಾಂಡನ್‌ಒಬ್ಬರು.

ಟಾಂಡನ್ನರನ್ನು ಗಾಂಧೀಜಿ “ರಾಜರ್ಷಿ” ಎಂದು ಕರೆದರು. ರಾಜನಾಗಿದ್ದರೂ ಋಷಿಯ ಹಾಗೆ ಇರುವವರು ರಾಜರ್ಷಿ, ಸಾಧುವಾಗಿ, ಸತ್ಯವಂತನಾಗಿ, ನೀತಿವಂತನಾಗಿ, ಧರ್ಮಪರನಾಗಿ, ಜ್ಞಾನಿಯಾಗಿ, ನಿಷ್ಠನಾಗಿ ಇರುವ ರಾಜ ರಾಜರ್ಷಿ. ರಾಮಾಯಣದ ಸೀತೆಯ ತಂದೆ ಜನಕ ಹಾಗೆ ರಾಜರ್ಷಿ ಎನ್ನಿಸಿಕೊಂಡದ್ದ. ಪುರುಷೋತ್ತಮ ದಾಸರು ಹಾಗೆಯೆ. ರಾಜಕಾರಣದಲ್ಲಿದ್ದರೂ ಋಷಿಯಂತೆಯೇ ಇದ್ದರು. ಅವರ ತ್ಯಾಗ ನೀತಿ ನಿಷ್ಠೆ ಸೇವೆ ಮನಸ್ಸು ಹಾಗಿತ್ತು.

ಈಗಿನ ಉತ್ತರಪ್ರದೇಶಕ್ಕೆ ಹಿಂದೆ ಸಂಯುಕ್ತ ಪ್ರಾಂತ ಎಂದು ಹೆಸರು. ಅದು ಪುರಾಣ ಕಾಲದ ಶ್ರೀರಾಮ ಶ್ರೀ ಕ್‌ಋಷ್ಣರು ಇದ್ದ ನಾಡು. ಆ ಕಾಲದಲ್ಲಿ ಮದನ ಮೋಹನ ಮಾಳವೀಯ, ಮೋತಿಲಾಲ್‌ನೆಹರು. ಜವಾಹರ ಲಾಲ್‌ನೆರು, ಲಾಲ್‌ಬಹಾದೂರ್‌ಶಾಸ್ತ್ರಿ, ಗೋವಿಂದವಲ್ಲಭ ಪಂತ್‌, ಆಚಾರ‍್ಯ ನರೇಂದ್ರ ದೇವ್‌, ಗಣೇಶ ಶಂಕರ ವಿದ್ಯಾರ್ಥಿ ಮುಂತಾದ ಮಹಾ ನಾಯಕರು ಹುಟ್ಟಿದ ನಾಡು.

ಪ್ರಾರಂಭದ ವಿದ್ಯಾಭ್ಯಾಸ

ಪ್ರಯಾಗ ಅಥವಾ ಅಲಹಾಭಾದ್‌ಅಲ್ಲಿನ ದೊಡ್ಡ ನಗರ. ತೀರ್ಥಕ್ಷೇತ್ರ, ಗಂಗಾ ಯಮುನಾ ನದಿಗಳ ಸಂಗಮ, ಜೊತೆಗೇ ನಮ್ಮ ರಾಷ್ಟ್ರದ ಸ್ವಾತಂತ್ರ‍್ಯ ಹೋರಾಟದ ಒಂದು ಕೇಂದ್ರ.

ಅಲ್ಲಿ ‘’ಟಾಂಡನ್‌’’ ಎಂಬ ಮನೆತನ. ಅದರ ಹಿಂದಿನವರು ಪಂಜಾಬಿನವರು. ಆ ಮನೆತನದಲ್ಲಿ ಸಾಲಗ್ರಾಮ ಟಾಂಡನ್‌ಎಂಬ ಒಬ್ಬ ಸಜ್ಜನರು ಇದ್ದರು. ಸರ್ಕಾರಿ ಕಚೇರಿ ನೌಕರರು, ಸಂಪ್ರದಾಯಶೀಲರು, ದೈವಭಕ್ತರು. ಅವರು ರಾಧಾಸ್ವಾಮಿ ಎಂಬ ಭಕ್ತರ ಮತಕ್ಕೆ  ಸೇರಿದವರು.

ಪುರುಷೋತ್ತಮದಾಸ್‌ ಟಾಂಡನ್‌ ಅವರು ೧೮೮೨ನೆಯ ಇಸವಿ ಆಗಸ್ಟ್‌ಒಂದರಂದು ಹುಟ್ಟಿದರು. ಆಗ ನಮ್ಮ ಪಂಚಾಂಗದ ಪ್ರಕಾರ ಅದು ಶ್ರಾವಣ ಮಾಸ. ಆ ಸಲ ಅದು ಅಧಿಕ ಶ್ರಾವಣ. ಅಧಿಕಮಾಸಕ್ಕೆ ಪರುಷೋತ್ತಮ ಮಾಸ ಎಂದೂ ಹೆಸರು. ಹಾಗಾಗಿ ಮಗುವಿಗೆ ಪುರುಷೋತ್ತಮ ಎಂದೇ ಹೆಸರಿಟ್ಟರು. ಆ ಮಗುವಿಗಿಂತ ಮೊದಲೇ ಹುಟ್ಟಿದ್ದ ಒಂದೆರಡು ಮಕ್ಕಳು ಎಳೆತನದಲ್ಲೆ ಸತ್ತು ಹೋಗಿದ್ದವು. ಆದ್ದರಿಂದ ಪುರುಷೋತ್ತಮ ಮನೆಯ ಪ್ರೀತಿಯ ಮಗು ಆದ. ಮುಂದೆ ಮನೆತನಕ್ಕೆ ಆಧಾರವೂ ಆದ.

ಪುರುಷೋತ್ತಮ ಬುದ್ದಿಶಾಲಿ. ಮೃದು ಆದರೂ ಧೈರ್ಯಶಾಲಿ. ಮ್‌ಋದು ಆದರೂ ದೃಢವಾದ ಮನಸ್ಸು. ತನಗೆ ಸರಿ ಎಂದು ತೋರಿದ್ದನ್ನು ಬಿಡದೆ ನಡೆಸುವ ಛಲವಂತ.

ಟಾಂಡನ್ನರ ಮನೆಯ ಹತ್ತಿರ ಒಂದು ಅರಳೀಕಟ್ಟಿ, ಅಲ್ಲಿ ಒಬ್ಬ ಮುಸಲ್ಮಾನ ಮೌಲ್ವಿ ಪಾಠಶಾಲೆ ನಡೆಸುತ್ತಿದ್ದರು. ಅವರೇ ಪುರುಷೋತ್ತಮನಿಗೆ ಮೊದಲನೆಯ ಗುರು. ಮುಂದೆ ಸಿ. ಎ. ವಿ. ಶಾಲೆಗೆ ಸೇರಿದ. ಎರಡು ಸಲ ಡಬ್ಬಲ್ ಪ್ರಮೋಷನ್‌ಪಡೆದ. ಆಮೇಲೆ ಸರ್ಕಾರಿ ಹೈಸ್ಕೂಲು, ಅಲ್ಲೂ ಆತ ಪಾಠದಲ್ಲಿ ಆಟದಲ್ಲಿ ಮುಂದು. ಕ್ರಿಕೆಟ್,  ಚದುರಂಗ ಆಟಗಳು ಅವನಿಗೆ ತುಂಬ ಇಷ್ಟ, ವ್ಯಾಯಾಮವೂ ಅಷ್ಟೆ. ಅಲ್ಲದೆ ಶಾಲೆಯಲ್ಲಿ ವಾಗ್ವರ್ಧಿನೀ ಸಭಾ ಎನ್ನುವ ಸಂಸ್ಥಲ್ಲಿ ಬೌದ್ಧಿಕ ಬೆಳವಣಿಗೆಯ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುತ್ತಿದ್ದ.

ಕಾಲೇಜು ಶಿಕ್ಷಣ:

ಆಗ ಇದ್ದ ಎಂಟ್ರೆನ್ಸ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆಯಾದ. ಕಾಯಸ್ಥ ಪಾಠಶಾಲೆಯಲ್ಲಿ ಇಂಟರ ಪರೀಕ್ಷೆ ಆಯಿತು. ಮುಂದೆ ಸೇರಿದ್ದು ಮ್ಯೂರ್‌ಸೆಂಟ್ರಲ್‌ಕಾಲೇಜಿಗೆ. ಅದು ಹೆಸರುವಾಸಿ ಆದ ಕಾಲೇಜು. ಅನೇಕ ಮಹಾಪುರುಷರು ಓದಿದ್ದು ಅಲ್ಲೆ.

ಪುರುಷೋತ್ತಮ ಸ್ವಭಾವ ಸಾಧು. ನಡತೆಯೂ ಮೇಲುಮಟ್ಟದ್ದು. ಬೇರೆ ಹುಡುಗರಿಗೆ ಮಾದರಿ ಆಗಿತ್ತು.

ಪುರುಷೋತ್ತಮನಿಗೆ ಆಟಗಳಲ್ಲಿ ಆಸಕ್ತಿ ಎಂದೆವೆಲ್ಲ. ಕ್ರಿಕೆಟ ಎಂದರೆ ಪ್ರಾಣ; ಒಳ್ಳೆ ಆಟಗಾರ . ಕಾಲೇಜು ಟೀಮಿಗೆ ಅವನೇ ನಾಯಕ. ಅಲಹಾಬಾದು ವಿಶ್ವವಿದ್ಯಾಲಯದ ಟೀಮಿಗೂ ನಾಯಕ ಆಗಿದ್ದ.

ಹಾಗೆಯೇ ಚದುರಂಗ ಗಂಟೆಗಟ್ಟಲೆ ಆಡಿದ್ದೂ ಆಡಿದ್ದೆ. ಒಂದು ಸಲ ಚದುರಂಗದಲ್ಲಿ  ಮುಳುಗಿಹೋಗಿ ಪಾಠವನ್ನೆಲ್ಲ ಮರೆತುಬಿಟ್ಟಿದ್ದ. ಪರೀಕ್ಷೆ ಹೋಯಿತು. ಅದು ಟಾಂಡನ್‌ಮನಸ್ಸಿಗೆ ತುಂಬ ನಾಟಿತು. ಅಲ್ಲಿಗೆ ಚದುರಂಗವನ್ನೇ ಬಿಟ್ಟುಬಿಟ್ಟ.

ಆಟದ ಜೊತೆಗೆ ವ್ಯಾಯಾಮವೂ ಬೇಕಲವೆ? ಟಾಂಡನ್‌ಕುಸ್ತಿಯಲ್ಲಿ ಅನುಭವ ಪಡೆದಿದ್ದ.

ಆಗಲೇ ಆತನಿಗೆ ಹಿಂದೀ ಭಾಷೆ ಎಂದರೆ ಆಸಕ್ತಿ, ಬಿ. ಎ. ಪರೀಕ್ಷೆ ಆಗುವುದಕ್ಕೆ ಮೊದಲೇ ಒಂದು ಹಿಂದೀ ವ್ಯಾಕರಣ ಬರೆದಿದ್ದ. ಕಬೀರದಾಸರ ಪದ್ಯ ಆತನಿಗೆ ತುಂಬ ಇಷ್ಟ. ಚೆನ್ನಾಗಿ ಓದಿ ತಿಳಿದುಕೊಂಡಿದ್ದ.

ಆಗ ನಮ್ಮ ದೇಶದಲ್ಲಿ ಸ್ವಾತಂತ್ರ‍್ಯ ಬೇಕು ಎನ್ನುವ ಕೂಗು ಜೋರಾಗುತ್ತಿತ್ತು. ಅದು ಯುವಕರ ಮನಸ್ಸನ್ನು ಸೆಳೆಯುತ್ತಿತ್ತು. ಪುರುಷೋತ್ತಮನಲ್ಲಿ ಇದ್ದ ದೇಶಭಕ್ತಿ ಅರಳಿ ಬೆಳೆಯುತ್ತ ಬಂತು.

ಒಂದು ಸಲ ಕಾಲೇಜಿನಲ್ಲಿ ಆಟದ ಪಂದ್ಯಗಳು ನಡೆದವು. ರಕ್ಷಣೆಯ ವ್ಯವಸ್ಥೆಗಾಗಿ ಪೊಲೀಸರನ್ನು ಕರೆಸಿದರು. ನಾವೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಪೊಲೀಸರೇಕೆ ಎಂದು ಯುವಕರು ಎದುರು ನಿಂತರು. ಪುರುಷೋತ್ತಮನೇ ನಾಯಕ. ಕಾಲೇಜಿನ ಆಡಳಿತದ ವಿರುದ್ಧ ಹುಡುಗರನ್ನೆಲ್ಲ ಜೊತೆ ಗೂಡಿಸಿದ. ಹರತಾಳ ನಡೆಯಿತು. ಕಾಲೇಜಿನ ಅಧಿಕಾರಿಗಳ ಕಣ್ಣು ಕೆಂಪಾಯಿತು. ಪುರುಷೋತ್ತಮನನ್ನು ಕಾಲೇಜಿನಿಂದ ವಜಾ ಮಾಡಿದರು.

ಮುಂದಿನ ವರ್ಷ ಮತ್ತೆ ಕಾಲೇಜು ಸೇರಿದ. ಬಿ.ಎ ಆಮೇಲೆ ಎಂ.ಎ. ಪರೀಕ್ಷೆ ಮುಗಿಸಿದ. ಕಾನೂನು ಪರೀಕ್ಷೆಯನ್ನೂ ಮುಗಿಸಿದ. ವಕೀಲನಾದ.

ಪುರುಷೋತ್ತಮ ದಸರಿಗೆ ಹದಿನೈದನೆಯ ವಯಸ್ಸಿಗೆ ೧೮೯೭ ರಲ್ಲಿ -ಮದುವೆ ಆಯಿತು. ಆ ಕಾಲದಲ್ಲಿ ಚಿಕ್ಕ ವಯಸ್ಸಿಗೇ ಮದುವೆ ಮಾಡುವುದು ರೂಢಿಯಲ್ಲಿತ್ತು. ಹೆಂಡತಿ ಚಂದ್ರಮುಖೀದೇವಿ. ಸಂಪ್ರದಾಯದಲ್ಲಿ ನಿಷ್ಠೆ ಉಳ್ಳವರು. ಸರಳ ಸ್ವಭಾವದವರು, ದ್‌ಐವಭಕ್ತರು, ಮುಂದೆ ಟಾಂಡನ್ನರು ದೇಸ ಸೇವೆಯಲ್ಲಿ ಮುಳುಗಿದಾಗ ಅವರಿಗೆ ಜೊತೆಯಾಗಿ ನಿಂತು ಸಹಕರಿಸಿದರು. ಆಕೆ ಆ ಸೇವೆಯ ಕೆಲಸದಲ್ಲಿ ಅವರು ತುಂಬ ತ್ಯಾಗಮಾಡಬೇಕಾಯಿತು. ಕಷ್ಟ ಅನುವಿಸಬೇಕಾಯಿತು. ಆದರೆ ಆಕೆ  ಅದನ್ನೆಲ್ಲ ಧೈಯದಿಂದ  ಸಹಿಸಿಕೊಂಡರು

ವಕೀಲರಾಗಿ

ಸರ್ ತೇಜ್‌ ಬಹದ್ದೂರ್‌ಸಪ್ಪು ಆಗ ಅಲಹಾಬಾದಿನ ದೊಡ್ಡ ವಕೀಲರು. ರಾಜಕೀಯ ಪಂಡಿತರು. ಅವರ ಜೊತೆಯಲ್ಲಿ ಪುರುಷೋತ್ತಮದಾಸರು ಕೆಲಸ ಆರಂಭಿಸದರು.

ಓದುವಾಗ ಹೇಗೋ ಹಾಗೆಯೇ ಕೆಲಸದಲ್ಲೂ ಟಾಂಡನ್‌ತುಂಬ ನಿಷ್ಠರು. ಬುದ್ದಿವಂತರು. ಬಡವರ ವ್ಯವಹಾರಗಳನ್ನು ಹಣ ತೆಗೆದುಕೊಳ್ಳದೆಯೇ ನಡೆಸಿ ಕೊಡುತ್ತಿದ್ದರು. ಎಷ್ಟೇ ಹಣ ಬರುವ ಹಾಗಿರಲಿ, ಸುಳ್ಳು ವ್ಯವಹಾರಗಳನ್ನು ಮುಟ್ಟುತ್ತಲೇ ಇರಲಿಲ್ಲ. ಇಂತಹ ಒಳ್ಳೆಯ ಗುಣಗಳಿಂದ ಮೂರು ನಾಲಕ್ಕು ವರ್ಷದಲ್ಲೆ ಪುರುಷೋತ್ತಮ ದಾಸರು ಜನಪ್ರಿಯ ವಕೀಲರಾದರು. ಸಂಪಾದನೆಯೂ ಚೆನ್ನಾಗಿ ಬೆಳೆಯಿತು.

ಆದರೆ ಈ ನೆಮ್ಮದಿ ಬಹುಕಾಲ ಉಳಿಯಲಿಲ್ಲ. ಸ್ವಾತಂತ್ರಯ ಹೋರಾಟ ಎಲ್ಲರನ್ನೂ ಸೆಳೆದುಕೊಳ್ಳುತ್ತಿತ್ತು. ಅದು ಟಾಂಡನ್ನರನ್ನೂ ಬಿಡಲಿಲ್ಲ.

ಮಾಳವೀಯರ ಪ್ರಭಾವ, ಸಹವಾಸ

ಪಂಡಿತ ಮದನಮೋಹನ ಮಾಳವೀಯ ಆ ಕಾಲದ ದೊಡ್ಡ ನಾಯಕರು, ದೇಶಭಕ್ತರು, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ, ಉದ್ಧಾರಕ್ಕಾಗಿ ಬಹಳ ದುಡಿದರು.

ಮಾಳವೀಯರು ಒಳ್ಳೆಯ ಋಷಿಯಂಥ ಮಹಾ ಪುರುಷರು. ಅವರು ಪುರುಷೋತ್ತಮದಾರನ್ನು ಆಕರ್ಷಿಸಿದರು. ಟಾಂಡನ್ನರು ಅವರ ಅನುಯಾಯಿ ಆದರು. ಮಾಳವೀಯರ ನಿತಿ, ನಿಷ್ಠೆ, ದೈವಭಕ್ತಿ, ಸರಳತನ, ಭಾರತೀಯ ಮೇಲಿನ ಪ್ರೀತಿ, ಹಿಂದೀ  ಭಾಷೆಯ ಅಭಿಮಾನ ಈ ಗುಣಗಳನ್ನೆಲ್ಲ ಟಾಂಡನ್ನರೂ ಪಡೆದು ಕೊಂಡರು.

ಕನ್ನಡ ನಾಡಿನ ಭಾಷೆ ಕನ್ನಡ, ಹಾಗೆಯ ಉತ್ತರ ಭಾರತದ ಬಹುಪಾಲು ಜನರ ಭಾಷೆ ಹಿಂದಿ. ಅದು ದೊಡ್ಡ ಭಾಷೆ. ತುಲಸೀದಾಸ್‌, ಕಬೀರದಾಸ್‌, ಸೂರದಾಸ್‌, ಮೀರಾಬಾಯಿ ಮುಂತಾದ ಮಹಾ ಭಕ್ತರೆಲ್ಲ ಹಾಡಿರುವುದು ಆ ಭಾಷೆಯಲ್ಲೆ.

ಮಾಳವೀಯರಿಗೆ ಹಿಂದೀ ಭಾಷೆಯ ಮೇಲೆ ಆದರ, ಅದರ ಉದ್ದಾರಕ್ಕಾಗಿ  ಕೆಲಸ ಮಾಡಬೇಕು ಎಂದು ಮನಸ್ಸು. ಇದು ಟಾಂಡನ್ನರಿಗೂ ಹಿಡಿಸಿತು, ಅವರಲ್ಲೂ ತಾಯಿ ನುಡಿಯ ಮೇಲೆ ಪ್ರೇಮ ಹುಟ್ಟಿತ್ತು.

ಆಗಲೇ ಪಂಡಿತ ಬಾಲಕೃಷ್ಣ ಭಟ್‌ಎನ್ನುವವರ ಪರಿಚಯವೂ ಆಯಿತು. ಪಂಡಿತರು ದೊಡ್ಡ ಹಿಂದೀ  ಸಾಹಿತಿಗಳು. ಅವರಿಬ್ಬರ ಜೊತೆಯಿಂದ ಟಾಂಡನ್ನರು ಹಿಂದೀ ಸಾಹಿತ್ಯ ಸಮ್ಮೇಳನ ಎನ್ನುವ ಸಂಸ್ಥೆಗೆ ಸೇರಿದ್ದರು.

೧೯೯೧ರಲ್ಲಿ ವಾರಣಾಸಿಯಲ್ಲಿ ಹಿಂದೀ ಸಾಹಿತ್ಯ ಸಮ್ಮೇಳನ ನಡೆಯಿತು. ಮಾಳವೀಯರು ಸಮ್ಮೇಳನದ ಅಧಕ್ಷತೆ ವಹಿಸಿದ್ದರು. ಟಾಂಡನ್ನರೂ ಹೋಗಿದ್ದರು. ಅವರನ್ನೇ ಸಮ್ಮೇಳನದ ಕಾರ್ಯದರ್ಶಿಯನ್ನಾಗಿ ಆರಿಸಲಾಯಿತು. ಅಂದಿನಿಂದ ತಮ್ಮ ಕೊನೆಯುಸಿರು ಇರುವ ತನಕ ಟಾಂಡನ್ನರು ಆ ಸಂಸ್ಥೆಗೆ ಸೇವೆ ಸಲ್ಲಿಸಿದರು.

‘’ಅಭ್ಯುದಯ’’ ಎನ್ನುವ ಹಿಂದೀ ಪತ್ರಿಕೆ ಒಂದು ಇತ್ತು. ಹಿಂದೀ ಸಾಹಿತ್ಯ ಏಳಿಗೆಯೆ ಅದರ ಗುರು. ಅದನ್ನು ನಡೆಸುವ ಕೆಲಸವೂ ಟಾಂಡನ್ನರ ಕಡೆಗೇ ಬಂತು. ಹತ್ತು ವರ್ಷದಲ್ಲೆ ಹಿಂದೀ ಸಾಹಿತ್ಯ ಸಮ್ಮೇಳನಕ್ಕೆ ಭಾರತದಲ್ಲೆಲ್ಲ ಪ್ರಖ್ಯಾತಿ ದೊರಕಿತು.

ಹಿಂದಿಯಲ್ಲಿ ಒಳ್ಳೆಯ ಶಿಕ್ಷಣ ಪಡೆಯಲು ಅವಕಾಶ ಇರಬೇಕು. ಎಲ್ಲ ಜ್ಞಾನವೂ ಸಿಗಬೇಕು ಎಂದು ಟಾಂಡನ್ನರು ಯೋಚನೆ ಮಾಡಿದರು. ಅದಕ್ಕಾಗಿ ಉನ್ನತ ಮಟ್ಟದ ವಿದ್ಯಾಲಯವನ್ನು ಏರ್ಪಡಿಸಬೇಕು ಎಂದುಕೊಂಡರು. ಕೆಲಸವನ್ನು ಆರಂಭಿಸಿಯೇಬಿಟ್ಟರು. ೧೯೧೮ರಲ್ಲಿ ಪ್ರಯಾಗದ ಹಿಂದೀ ವಿದ್ಯಾಪೀಠ ಆರಂಭವಾಯಿತು. ಮೊದಮೊದಲು ತಮ್ಮ ಮತ್ತು ತಮಗೆ ಪರಿಚಿತರಾದವರ ಮಕ್ಕಳನ್ನೆ ವಿದ್ಯಾರ್ಥಿಗಳನ್ನಾಗಿ ಸೇರಿಸಿದರು. ದಿನ ಕಳೆದಂತೆ ಸಂಸ್ಥೆ ಬೆಳೆಯಿತು.

ಟಾಂಡನ್ನರು ವಿದ್ಯಾರ್ಥಿಯಾಗಿದ್ದಾಗಲೇ ದೇಶಪ್ರೇಮಿ ಆಗಿದ್ದರು, ಎಂದೆನಲ್ಲ. ೧೮೯೯ರಲ್ಲಿ, ಅಂದರೆ ಅವರ ೧೭ನೆಯ ವಯಸ್ಸಿನಲ್ಲೇ, ಲಖ್ನೋದಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೇಸಿನ ಮಹಾಸಭೆಗೆ ಟಾಂಡನ್‌ಸ್ವಯಂ ಸೇವಕರಾಗಿ ಹೋಗಿದ್ದರು. ಅಂದಿನಿಂದ ಸುಮಾರು ಅರವತ್ತು ವರ್ಷ ಆ ಸಂಸ್ಥೆಯಲ್ಲಿ ದುಡಿದರು.

ಇವರ ಕೆಲಸಗಾರಿಕೆ, ನಿಷ್ಠೆ, ಸತ್ಯವಂತಿಕೆ, ಪ್ರಾಮಾಣಿಕತೆ ಎಲ್ಲವೂ ಮಾಳವೀಯರಿಗೆ ಮೆಚ್ಚಿಗೆ ಆಗಿದ್ದವು. ಅವರು ಟಾಂಡನ್ನರನ್ನು ಒಂದು ಕೆಲಸಕ್ಕೆ ಕಳಿಸಿದರು. ಪಂಜಾಬ್‌ಪ್ರಾಂತದಲ್ಲಿ ನಾಭಾ ಎಂಬ ಸಣ್ಣ ರಾಜಯ ಇತ್ತು. ಅದಕ್ಕೆ ರಾಜ ಹೀರಾಸಿಂಹ. ಅಲ್ಲಿಗೆ ಕಾನೂನು ಮಂತ್ರಿಯಾಗಿ ಟಾಂಡರನ್ನರನ್ನು ಮಾಳವೀಯರು ಕಳಿಸಿದರು. ಟಾಂಡನ್ನರ ಕೆಲಸದ ದಕ್ಷತೆ. ಪ್ರಾಮಾಣಿಕತೆ ರಾಜನಿಗೆ ಹಿಡಿಸಿತು. ಸ್ವಲ್ಪ ದಿನದಲ್ಲೆ ಅವರು ನೆಚ್ಚಿನ ಮಂತ್ರಿಯಾದರು. ನಾಲ್ಕು ವರ್ಷ ಕೆಲಸ ಮಾಡಿದರು.

೧೯೧೭ರಲ್ಲಿ ಹಿಂದೀ ಸಮ್ಮೇಳನ ಬಂತು. ಅದಕ್ಕೆ ಹೋಗಲು ರಜಾ ಕೇಳಿದರು ಟಾಂಡನ್‌, ರಜಾ ಸಿಗಲಿಲ್ಲ. ಕೆಲಸವೇ ಬೇಡ ಎಂದು ರಾಜೀನಾಮೆ ಕೊಟ್ಟು ಸಮ್ಮೇಳನಕ್ಕೆ ಹೊರಟುಹೋದರು.

ದೇಶಕ್ಕಾಗಿ ಬಡತನಕ್ಕೆ ಸ್ವಾಗತ

ಅಲಹಾಬಾದಿಗೆ ಬಂದು ಮತ್ತೆ ವಕೀಲಿ ಆರಂಭಿಸಿದರು.

೧೯೨೦-೨೧ರ ಕಾಲ. ನಮ್ಮ ದೇಶದಲ್ಲಿ ಸ್ವಾತಂತ್ರ‍್ಯದ ದೊಡ್ಡ ಚಳುವಳಿ ಆರಂಭವಾಗುತ್ತಿತ್ತು. ಗಾಂಧೀಜಿ ನಾಯಕರಾಗಿ ಬಂದಿದ್ದರು. ಅದು ಹಿಂದಿನ ಚಳುವಳಿಗಳ ಹಾಗಲ್ಲ. ಅದು ಅಹಿಂಸೆಯ ಸತ್ಯಾಗ್ರಹ. “ಪರದೇಶದ ಬಟ್ಟಬರೆ ಕಿತ್ತೆಸೆಯಿರಿ, ಬ್ರಿಟಿಷರ ಶಾಲೆ ಕಾಲೇಜು ಬಿಟ್ಟು  ಬನ್ನಿ, ಅವರ ಕೋರ್ಟ ಕಚೇರಿಗಳಿಗೆ ಹೋಗಬೇಡಿ” ಎಂದು ಗಾಂಧೀಜಿ ಕರೆಕೊಟ್ಟರು. ಜನ ಸಹಕರಿಸಿದರೆ ತಾನೇ ಸರಕಾರ ನಡೆಯುವುದು ? ಸಹಕರಿಸದ ಇದ್ದರೆ ಆಡಳಿತ ಅಸಾಧ್ಯ. ಆಗ ಬ್ರಿಟಿಷರು ನಮ್ಮನ್ನು ಆಳಲು ಆಗದೆ ಹೋಗಲೇಬೇಕು. ಇದು ಗಾಂಧೀಜಿಯವರ ವಿಚಾರ.

ಈ ಮಾತುಗಳನ್ನು ಕೇಳಿ ಜನರಲ್ಲೆಲ್ಲ ಹೊಸ ಹುರುಪು ಬಂತು. ಮಿಂಚಿನ ಹಾಗೆ ಶಕ್ತಿ ಹರಿಯಿತು. ಎಲ್ಲರೂ ಗಾಂಧೀಜಿಯ ಮಾತಿನ  ಹಾಗೆಯೆ ಅಸಹಕಾರದ ಚಳುವಳಿಗೆ ಬಂದರು. ಟಾಂಡನ್ನರಿಗೆ ವಕೀಲರಾಗಿ ಬಿಡುವೇ ಇಲ್ಲ. ಕೈತುಂಬಾ ಹಣ. ಶ್ರೀಮಂತ ಕಕ್ಷಿಗಾರರ ತಂಡವೇ ಅವರದು. ಆದರೆ ವಕೀಲಿ ವೃತ್ತಿಯನ್ನು ಬಿಟ್ಟು ಚಳುವಳಿಗೆ ಧುಮುಕಿದರು. ದೇಶದಲ್ಲೆಲ್ಲ ಲಕ್ಷಾಂತರ ಜನ ಚಳುವಳಿಗೆ ಸೇರಿ ಜ್‌ಐಲುವಾಸ ಅನುಭವಿಸಿದರು. ಟಾಂಡನ್ನರಿಗೂ ಸೆರೆಮನೆಯೆ ಮನೆ ಆಯಿತು.

ಟಾಂಡನ್ನರ ದೊಡ್ಡ ಕುಟುಂಬ ಕಷ್ಟಕ್ಕೆ ಒಳಗಾಯಿತು. ಇದನ್ನು ಎಲ್ಲರೂ ಸಹಿಸಿಕೊಂಡರು. ಜೈಲಿನಲ್ಲಿ ಇದ್ದಾಗಲೂ ಟಾಂಡನ್ನರಿಗೆ ದೇಶದ ಚಿಂತೆ, ಕಾಂಗ್ರೇಸ್ಸಿನ ಚಿಂತೆ, ಹಿಂದಿಯ ಚಿಂತೆಯೇ.

ಲಾಲಾ ಲಜಪತರಾಯರ ಒಡನಾಡಿ

ಜೈಲಿನಿಂದ ಬಿಡುಗಡೆ ಆಗಿ ಬಂದ ಮೇಲೆಯೂ ಅದೇ ಕೆಲಸವೇ. ಇವರ ಸಂಸಾರದ ತೊಂದರೆ ನೊಡಿ ಎಷ್ಟೋ ಜನ ಮತ್ತೆ ವಕೀಲಿ ಆರಂಭಿಸಿ ಎಂದರು. ಟಾಂಡನ್‌ಒಪ್ಪಲಿಲ್ಲ. ಒಂದು ಸಲ ತ್ಯಾಗ ಮಾಡಿದ್ದನ್ನು ಮತ್ತೆ ಹಿಡಿಯುವುದಿಲ್ಲ ಎಂದರು. ತುಂಬ ಕಷ್ಟದಿಂದ ಅವರು ದಿನ ತಳ್ಳಬೇಕಾಯಿತು.

ಹೀಗಿರುವಾಗ ಒಮ್ಮೆ ಲಾಲಾ ಲಜಪತರಾಯ್‌ಪ್ರಯಾಗಕ್ಕೆ ಬಂದರು. ಅವರು ಪಂಜಾಬಿನ ಸಿಂಹ ಎನ್ನಿಸಕೊಂಡಿದ್ದ ನಾಯಕರು. ಟಾಂಡನ್ನರಿಗೆ ಅವರ ಮೇಲೆ ಗೌರವ, ಆದರ, ಲಜಪತರಾಯರು  ಟಾಂಡನ್ನರ ಸ್ಥಿತಿಗತಿ ನೊಡಿದರು. ಇಂಥ ದೇಶಭಕ್ತನಿಗೆ ಸಹಾಯ ಮಾಡಬೇಕು ಎನ್ನಿಸಿತು. ಅವರು ಪಂಜಾಬ್‌ನ್ಯಾಷನಲ್‌ಬ್ಯಾಂಕನ್ನು ಸ್ಥಾಪಿಸಿದ್ದರು. “ಬ್ಯಾಂಕಿನ ಮ್ಯಾನೇಜರ್‌ಆಗಿ ಬನ್ನಿ” ಎಂದು ಒತ್ತಾಯ ಮಾಡಿದರು. ಅವರ ಒತ್ತಾಯಕ್ಕೆ ಟಾಂಡನ್ನರು ಒಪ್ಪಲೇಬೇಕಾಯಿತು. ೧೯೨೩ ರಿಂದ ೧೯೨೯ರ ವರೆಗೆ ಇಲ್ಲಿ ಕೆಲಸ ಮಾಡಿದರು.

೧೯೨೫ರಿಂದ ನಾಲ್ಕು ವರ್ಷ ಅವರು ಲಾಹೋರಿನಲ್ಲಿ ಬ್ಯಾಂಕಿನ ಮ್ಯಾನೇಜರ್‌ಆಗಿ ಕೆಲಸ ಮಾಡಿದರು. ಆಗಲೂ ಅವರಿಗೆ ಹಿಂದಿಯದೇ ಚಿಂತೆ, ದೇಶದ್ದೆ ಚಿಂತೆ. “ಬೇಕಿದ್ದರೆ ನೀವು ರಾಜಕೀಯ ಕೆಲಸವನ್ನು ಮಾಡಬಹುದು” ಎಂದು ಲಜಪತರಾಯ್‌ಹೇಳಿದ್ದರು. ಆದರೆ ಟೆಂಡನ್‌ಮಾಡಲಿಲ್ಲ. ಒಂದು ಕಡೆ ಸಂಬಳ ಪಡೆದು ಕೆಲಸದಲ್ಲಿ ಇರುವಾಗ ರಾಜಕೀಯದಲ್ಲಿ ಓಡಾಡುವುದು ನೀತಿ ಅಲ್ಲ ಎಂದು ಅವರ ವಿಚಾರ. ಬ್ಯಾಂಕಿನ ಕೆಲಸವನ್ನು ನಿಷ್ಠೆಯಿಂದ ನಡೆಸಿದರು. ಅನೇಕ ಸುಧಾರಣೆಗಳನ್ನು ಮಾಡಿದರು. ಬ್ಯಾಂಕು ಏಳಿಗೆ ಹೊಂದುವಂತೆ ದುಡಿದರು.

ಲಾಲಾ ಲಜಪತರಾಯರೊಂದಿಗೆ

ಅದೇ  ಕಾಲಕ್ಕೆ ಆಂಗ್ಲ ಸರ್ಕಾರ ಕಳಿಸಿದ ಸೈಮನ್‌ಸಮಿತಿಯ ವಿರುದ್ಧ ಸತ್ಯಾಗ್ರಹ ಶುರುವಾಯಿತು. ಎಲ್ಲೆಲ್ಲೂ ಸಭೆ, ಮೆರವಣಿಗೆ, ಸಂಘಟನೆ. ಟಾಂಡನ್ನರು ಮ್ಯಾನೇಜರ್‌ಕೆಲಸದಲ್ಲಿ ಹಾಯಾಗಿ ಕುಳಿತಿರಲು ಸಾಧ್ಯವಾಗಲಿಲ್ಲ. ಕೆಲಸ ಬಿಟ್ಟು ಮತ್ತೆ ಚಳುವಳಿಗೆ ಬಂದರು

ಒಂದು ಮೆರವಣಿಗೆಯಲ್ಲಿ ಲಾಲಾ ಲಜಪತರಾಯರಿಗೆ ಲಾಠಿ ಏಟು ಬಿತ್ತು. ಕೆಲವು ದಿನದಲ್ಲಿ ಅವರು ತೀರಿಕೊಂಡರು. ಟಾಂಡನ್ನರಿಗೆ ತುಂಬ ದುಃಖವಾಯಿತು. ಲಾಲಾಜಿಯವರು ಬಿಟ್ಟು ಹೋಗಿದ್ ಕೆಲಸಕ್ಕೆ ತಾವೇ ಸಜ್ಜಾಗಿ ನಿಂತರು. ಅವರ ಸ್ಮಾರಕ ನಿಧಿಗಾಗಿ ಐದು ಲಕ್ಷ ರೂಪಾಯಿ ಸಂಗ್ರಹಿಸಿದರು. ನಡುನಡುವೆ ಕಾಂಗ್ರೇಸ್ ಕೆಲಸ ಚಳುವಳಿ ಜೈಲುವಾಸ ನಡೆದೇ ಇತ್ತು.

ಜೊತೆಗೆ ಹಿಂದೀ ಸಾಹಿತ್ಯ ಸಮ್ಮೇಳನದ ಕೆಲಸ. ಪ್ರತಿ ಸಮ್ಮೇಳನದಲ್ಲೂ ಟಾಂಡನ್‌ಹಾಜರಿರುತ್ತಿದ್ದರು. ಅವರೇ ಸಮ್ಮೇಳನದ ಜೀವಾಳ. ಸಂಸ್ಥೆಯ ನಿಯಮಾವಳಿಯನ್ನು ರಚಿಸಿಕೊಟ್ಟರು. ೧೯೨೩ರಲ್ಲಿ ಕಾನ್‌ಪುರದಲ್ಲಿ ನಡೆದ ಸಮ್ಮೇಳನಕ್ಕೆ ಅವರೇ ಅಧ್ಯಕ್ಷರು. ಹಿಂದೀ ಭಾಷೆಗಾಗಿ ಮಂಗಲಾಪ್ರಸಾದ ಪಾರಿತೋಷಕ ಎಂಬ ಬಹುಮಾನವನ್ನು ಏರ್ಪಡಿಸಿದರು.

ರೈತರ ಬಡವರ ಸೇವೆ

ಆ ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಬಡ  ರೈತರ ಸ್ಥಿತಿ ತುಂಬ ಕೀಳು ಆಗಿತ್ತು. ಭಾರಿ ಜಮೀನುದಾರರ ದಬ್ಬಾಳಿಕೆಗೆ ಸಿಕ್ಕಿ ಆ ರೈತರು ಸೊರಗಿಹೋಗಿದ್ದರು. ದುಡಿಮೆ ಒಂದೇ ಅವರ ಪಾಲಿಗೆ ಇದ್ದದ್ದು. ಅದಕ್ಕೆ ಸಿಗುತ್ತಿದ್ದ ಕೂಲಿ ಹೊಟ್ಟೆ ಬಟ್ಟೆಗೆ ಸಾಲುತ್ತಿರಲಿಲ್ಲ. ಆ ರೈತರು ಅದರಲ್ಲೂ ಗತಿ ಇಲ್ಲದ ಜನರ ಮೇಲೆ ಟಾಂಡನ್ನರಿಗೆ ತುಂಬ ಕರುಣೆ. ಅವರ ಸೇವೆಯನ್ನು ಕೈಗೆತ್ತಿಕೊಂಡರು.

ಅದಕ್ಕಾಗಿ ಹಳ್ಳಿ ಹಳ್ಳಿ ಅಲೆದರು. ರ್‌ಐತರನ್ನು ಜೊತೆ ಗೂಡಿಸಿದರು. ರೈತರ ಸಮ್ಮೇಳನ ನಡೆಸಿದರು. ಸಂಘ ಕಟ್ಟಿದರು. ಹಳ್ಳಿಗರ ಜೊತೆಗೇ ಇರುತ್ತ ಅವರ ಕಷ್ಟ ಸುಖ ವಿಚಾರಿಸಿದರು. ಅವರ ಪರವಾಗಿ ನಿಂತು ಬಲವಾಗಿ ಹೋರಾಡಿದರು. ಗೋವಿಂದ ವಲ್ಲಭ ಪಂತರು, ಜವಹರ ಲಾಲ್‌ನೆಹರು ಮುಂತಾದವರು ಜೊತೆಗೆ ಸೇರಿಕೊಂಡರು. ದೊಡ್ಡ ಪ್ರಮಾಣದಲ್ಲಿ ರೈತರ ಚಳುವಳಿ ಆಯಿತು. ಅದರ ಫಲವಾಗಿ ಟಾಂಡನ್ನರಿಗೆ ಮತ್ತೆ ಮತ್ತೆ ಜೈಲುವಾಸ ಆಗುತ್ತಿತ್ತು. ಆಗ ಸರ್ಕಾರ ನಡುವೆ ಬಂದು ರೈತರಿಗೆ ಅನೇಕ ಅನುಕೂಲಗಳನ್ನು ಒದಗಿಸಲು ಏರ್ಪಡಿಸಿತು. ಟಾಂಡನ್ನರು ಬಡ ರೈತರ ಬಂಧು ಆಗಿದ್ದರು.

ಲಾಲಾ ಲಜಪತರಾಯರು ದೇಶಸೇವಕರ ಸಂಸ್ಥೆಯನ್ನು ಕಟ್ಟಿದ್ದರು. ಅದೇ ಭಾರತ ಸೇವಕರ ಸಂಘ. ಲಾಲಾಜಿ ತೀರಿಕೊಂಡ ಮೇಲೆ ಸಂಘಕ್ಕೆ ಯಾರು ನಾಯಕರು ? ಎಂಬ ಪ್ರಶ್ನೆ ಬಂತು. ಉನ್ನತ ನೀತಿ ನಿಷ್ಠೆಯ ವ್ಯಕ್ತಿ ಬೇಕಾಗಿತ್ತು. ಆಗ ಗಾಂಧೀಜಿ ಟಾಂಡನ್ನರ ಹೆಸರನ್ನು ಸೂಚಿಸಿದರು.  ಟಾಂಡನ್ನರು ಭಾರತ ಸೇವಕ ಸಂಘದ ಅಧ್ಯಕ್ಷರಾದರು. ಆ ಕೆಲಸಕ್ಕಾಗಿ ಆಗಾಗ್ಗೆ ಲಾಹೋರಿಗೆ ಓಡಾಡಬೇಕಾಗುತ್ತಿತ್ತು. ಆ  ಸಂಘದ ಕೆಲಸ, ರ್‌ಐತರ ಕೆಲಸ, ಕಾಂಗ್ರೆಸ್‌ಕೆಲಸ, ಹಿಂದೀ ಕೆಲಸವನ್ನು ಎಲ್ಲವನ್ನೂ ಒಟ್ಟೊಟ್ಟಿಗೆ ನಿಭಾಯಿಸುತ್ತಿದ್ದರು ಟಾಂಡನ್‌.

ರೈತರ ಬಂಧು

೧೯೩೦ರಲ್ಲಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದರು. ಸಬರಮತಿ ಆಶ್ರಮದಿಂದ ಸಮುದ್ರ ತೀರದ ದಾಂಡಿಗೆ ನಡೆದು ಹೋಗಿ ಉಪ್ಪಿನ ಕಾನೂನನ್ನು ಮುರಿದರು. ಆ ಉಪ್ಪಿನ ಚಳುವಳಿ ಭಾರತ ದೇಶದಲ್ಲೆಲ್ಲ ಕಾಡು ಕಿಚ್ಚಿನ ಹಾಗೆ ಹಬ್ಬಿತ್ತು. ಲಕ್ಷಾಂತರ ಜನ ಸತ್ಯಾಗ್ರಹ ಮಾಡಿದರು. ಜೈಲಿಗೆ ಹೋದರು. ಕಷ್ಟನಷ್ಟ ಅನುಭವಿಸಿದರು. ಆಗ ಉತ್ತರ ಪ್ರದೇಶದಲ್ಲಿನ ಸತ್ಯಾಗ್ರಹಕ್ಕೆ ಟಾಂಡನ್ನರು ನಾಯಕರು. ಅವರಿಗೆ ಒಂದೂವರೆ ವರ್ಷ ಜ್‌ಐಲುವಾಸ ಆಯಿತು.

ವಿಧಾನಸಭೆಯ ಅಧ್ಯಕ್ಷರು

ಅದು ಮುಗಿಯುವ ವೇಳೆಗೆ ಚಳುವಳಿ ಇಳಿದಿತ್ತು. ಬ್ರಿಟಿಷ್‌ಸರ್ಕಾರ ಒಂದಿಷ್ಟು ರಾಜಕೀಯ ಸುಧಾರಣೆ ತಂದಿತ್ತು. ಆ ಪ್ರಕಾರ ಚುನಾವಣೆ ನಡೆಯಿತು. ಕಾಂಗ್ರೆಸ್‌ಏಳು ಪ್ರಾಂತಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂತು. ಉತ್ತರ ಪ್ರದೇಶದಲ್ಲೂ ಗೆದ್ದಿತು. ಪ್ರಯಾಗದಿಂದ ಟಾಂಡನ್ನರು ಆರಿಸಿ ಬಂದರು. ಲವರನ್ನು ಯಾರೂ ವಿರೋಧಿಸಿರಲಿಲ್ಲ.

ವಿಧಾನಸಭೆಗೆ ಅಧ್ಯಕ್ಷರು ಇರಬೇಕಲ್ಲ. ಹಿರಿಯರು, ಜ್ಙಾನಿಗಳು, ಎಲ್ಲರಿಗೂ ಬೇಕಾದವರು, ಪಕ್ಷಪಾತ ಇಲ್ಲದೆ ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳುವವರು, ಸಮರ್ಥರು ಆದ ವ್ಯಕ್ತಿ ಇರಬೇಕು. ಎಲ್ಲರೂ ಪುರುಷೋತ್ತಮದಾಸರನ್ನೇ ಸೂಚಿಸಿದರು, ಅವರು ಅಧ್ಯಕ್ಷರಾದರು.

ಅಧ್ಯಕ್ಷರಾದವರು ಸಾಮಾನ್ಯವಾಗಿ ಯಾವ ಪಕ್ಷದಲ್ಲೂ ಇರಬಾರದು. ಪಕ್ಷಪಾತ ಮಾಡಬಾರದು ಎನ್ನುವುದು ರೂಢಿ. ಟಾಂಡನ್‌ಹೇಳಿದರು: “ನಾನು ಕಾಂಗ್ರೇಸ್ಸಿನ ಸೇವಕ. ಅಧ್ಯಕ್ಷನಾದೆ ಅಂದರೆ ಪಕ್ಷ ಬಿಡಲೇ ? ಪಕ್ಷದಲ್ಲೆ ಇರುತ್ತೇನೆ, ಆದರೆ ಪಕ್ಷಪಾತ ಮಾಡುವುದಿಲ್ಲ. ವಿಧಾನಸಭೆಯ ಒಬ್ಬ ಸದಸ್ಯನಾದರೂ ನನ್ನಲ್ಲಿ ವಿಶ್ವಾಸ ಇಲ್ಲ ಎಂದರೂ ಸಾಕು ಕೂಡಲೇ ನಾನು ಅಧಿಕಾರ ಬಿಡುತ್ತೇನೆ” ಹಾಗೆಯೆ ನಡೆದುಕೊಂಡರು. ಸರ್ಕಾರದ ಪಕ್ಷದವರಾಗಲಿ ಎದುರು ಪಕ್ಷದವರಾಗಲಿ ಒಬ್ಬನೂ ಅವರ ವಿರುದ್ದ ಒಂದು ಮಾತೂ ಎತ್ತುವ ಹಾಗೆ ಇರಲಿಲ್ಲ.

ಒಂದು ಸಲ ವಿಧಾನಸಭೆಯಲ್ಲಿ ಒಬ್ಬರು ಪ್ರಶ್ನೆ ಕೇಳಿದರು. ಮುಖ್ಯಮಂತ್ರಿಗಳು ಅದಕ್ಕೆ ಉತ್ತರ ಕೊಡಬೇಕಾಗಿತ್ತು. ಮುಖ್ಯಮಂತ್ರಿಗಳು ಗೋವಿಂದ ವಲ್ಲಭ ಪಂತರು. ಟಾಂಡನ್ನರಷ್ಟೆ ದೊಡ್ಡ ನಾಯಕರು, ಸ್ನೇಹಿತರು. ಅವರು ಉತ್ತರ ಕೊಡುವುದಕ್ಕೆ ಬದಲಾಗಿ ತಾವೇ ಇನ್ನೊಂದು ಉತ್ತರ ಕೊಡುವುದಕ್ಕೆ ಬದಲಾಗಿ ತಾವೇ ಇನ್ನೊಂದು ಪ್ರಶ್ನೆ ಹಾಕಿದರು. ಆಗ ಅಧ್ಯಕ್ಷ ಟಾಂಡನ್‌ಹೇಳಿದರು: “ಪ್ರಶ್ನೆ ಕೇಳುವುದು ಸದಸ್ಯರ ಹಕ್ಕು, ಉತ್ತರ ಕೊಡುವುದು ಸರ್ಕಾರದ ಹೊಣೆ. ಉತ್ತರ ಕೊಡಬೇಕು.” ಹಾಗೆ ಸದಸ್ಯರ ಹಕ್ಕನ್ನು ಗೌರವಿಸುತ್ತಿದ್ದರು. ವಿಧಾನಸಭೆಯಲ್ಲಿ ಹಿಂದೀ, ಉರ್ದು ಭಾಷೆಗಳನ್ನು ಬಳಸುವುದನ್ನು ರೂಢಿಗೆ ತಂದರು ಟಾಂಡನ್‌.

ಮತ್ತೆ ಸ್ವಾತಂತ್ರ ಹೋರಾಟದಲ್ಲಿ

೧೯೩೯ರಲ್ಲಿ ಮತ್ತೆ ಬಿರುಗಾಳಿ ಬೀಸಿತು. ಎರಡನೆಯ ಮಹಾಯುದ್ದ ಶುರುವಾಗಿತ್ತು. ಬ್ರಿಟಿಷರು ಹೇಳದೆ ಕೇಳದೆ ಭಾರತವನ್ನೂ ಯುದ್ಧದಲ್ಲಿ ಸೇರಿಸಿಬಿಟ್ಟಿದ್ದರು. ಎಲ್ಲೆಲ್ಲೂ ಅಶಾಂತಿಯ ಪರಿಸ್ಥಿತಿ. ಆಗ ಗಾಂಧೀಜಿ ವ್‌ಐಯಕ್ತಿಕ ಸತ್ಯಾಗ್ರಹ ಆರಂಭಿಸಿದರು. ಒಬ್ಬೊಬ್ಬನೇ ಸತ್ಯಾಗ್ರಹಿ ಚಳುವಳಿ ನಡೆಸುವುದು, ಕಾಂಗ್ರೆಸ್‌ಸರ್ಕಾರಗಳು ರಾಜೀನಾಮೆ ಕೊಟ್ಟವು. ಟಾಂಡನ್ನರೂ ಅಧಿಕಾರ ಬಿಟ್ಟರು. ಚಳುವಳಿಗೆ ಸೇರಿದರು. ಮತ್ತೆ ಒಂದು ವರ್ಷ ಜೈಲುವಾಸ ಕಾದಿತ್ತು.

ಯುದ್ಧ ಜೋರಾಯಿತು.  ಚಳುವಳಿಯೂ ಜೋರಾಯಿತು. ೧೯೪೨ರ ಆಗಸ್ಟ್‌೯ ರಂದು ಗಾಂಧೀಜಿ ಬ್ರಿಟಿಷರ ವಿರುದ್ದ “ಭಾರತ ಬಿಟ್ಟು ತೊಲಗಿ” ಎಂಬ ಹೋರಾಟ ಪ್ರಾರಂಭಿಸಿದರು. ಅದೇ ಕೊನೆಯ ಸ್ವಾತಂತ್ರ‍್ಯ ಹೋರಾಟ. ಗಾಂಧೀಜಿ ಮೊದಲಾದ ಎಲ್ಲ ನಾಯಕರನ್ನೂ ಸರ್ಕಾರ ಜೈಲಿಗೆ ಹಾಕಿತು. ಲಕ್ಷಾಂತರ ಜನ ಚಳುವಳಿ ನಡೆಸಿ ಸೆರೆಮನೆಗೆ ಹೋದರು. ಕೋಟಿ ಕೋಟಿ ಜನ “ವಂದೇ ಮಾತರಂ” “ಭಾರತ ಮಾತಾಕಿ ಜೈ” “ಮಹಾತ್ಮಾ ಗಾಂಧೀ ಕೀ ಜೈ” ಎಂದು ಕೂಗುತ್ತಾ ಸತ್ಯಾಗ್ರಹ ನಡೆಸಿದರು. ಎಲ್ಲೆಲ್ಲೂ ಸಭೆ, ಮೆರವಣಿಗೆ, ಹರತಾಳ, ಪೊಲೀಸರಿಂದ ಲಾಠಿ ಏಟು, ಗುಂಡು ! ಜನ ಅಪಾರ ತ್ಯಾಗ ಮಾಡಿದರು. ನೂರಾರು ಜನ ಜೀವ ತೆತ್ತರು. ಬಹುಪಾಲು ಎಲ್ಲ ಕಡೆ ಅಹಿಂಸೆಯಿಂದಲೇ ಚಳುವವಳಿ ನಡೆಯಿತು.

ಟಾಂಡನ್ನರಿಗೆ ಗಾಂಧೀಜಿಯ ಸತ್ಯಾಗ್ರಹದಲ್ಲಿ ಶ್ರದ್ಧೆ. ಅವರು ಸತ್ಯದ ಭಕ್ತರು. ಅಹಿಂಸೆಯನ್ನು ಒಪ್ಪಿದ್ದರು. ಆದರೆ ರಾಜಕೀಯದಲ್ಲಿ ಪೂರ್ತಿಯಾಗಿ ಅಹಿಂಸೆಯಿಂದ  ನಡೆದುಕೊಳ್ಳುವುದು ಸಾಧ್ಯವಿಲ್ಲ ಎಂದು ಅವರ ವಿಚಾರ. ಹಾಗೆಂದು ಅವರು ಬೇರೆ ಆಗಲಿಲ್ಲ. ಗಾಂಧೀಜಿಯವರ ಜೊತೆ ಹೋರಾಟದಲ್ಲಿ ಭಾಗವಹಿಸಿದ್ದರು. ಬರೈಲಿ ಜೈಲುವಾಸ ಆಯಿತು. ಎರಡು ವರ್ಷ. ಅದು ಟಾಂಡನ್ನರ ಏಳನೆಯ ಜೈಲುಯಾತ್ರೆ, ಕೊನೆಯದು ಸಹ.

ಜೈಲುವಾಸ ಮುಗಿಯು ವೇಳೆಗೆ ವಿಶ್ವಯುದ್ಧ ನಿಂತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಬ್ರಿಟನ್‌ ಯೋಚಿಸುತ್ತಿತ್ತು. ನಾಯಕರೆಲ್ಲ ಹೊರಗೆ ಬಂದಿದ್ದರು. ರಾಜಕೀಯ ಒಪ್ಪಂದಕ್ಕಾಗಿ ಮಾತುಕತೆ ನಡೆಯುತ್ತಿತ್ತು.

ಈ ನಡುವೆ ೧೯೪೬ ರಲ್ಲಿ ಮತ್ತೆ ಚುನಾವಣೆ ಬಂತು. ಟಾಂಡನ್ನರು ಅಲಹಾಬಾದ್ ಕ್ಷೇತ್ರದಿಂದ ಚುನಾವಣೆಗೆ ನಿಂತರು. ಅವರೇ ಗೆದ್ದರು. ಮತ್ತೆ ವಿಧಾನಸಭೆಗೆ ಅಧ್ಯಕ್ಷರಾದರು. ಹಿಂದಿನಂತೆಯೇ ಪಕ್ಷಪಾತವಿಲ್ಲದೆ ಕೆಲಸ ಮಾಡಿದರು. ಜಮೀನುದಾರಿ ಪದ್ಧತಿಯಿಂದ  ಬಡ ರ್‌ಐತರಿಗೆ ಕಷ್ಟ ಆಗುತ್ತಿತ್ತಲ್ಲ. ಅದು ಹೋಗಬೇಕು. ರ್‌ಐತರಿಗೆ ಅನುಕೂಲ ಆಗಬೇಕು ಎಂದು ಹಿಂದೆ ಚಳುವಳಿಯ ಮಾಡಿರಲಿಲ್ಲವೇ. ಈಗ ಸರ್ಕಾರ ಜಮೀನುದಾರಿ ಪದ್ಧತಿಯನ್ನು ತೆಗೆದು ಹಾಕಲು ಮನಸ್ಸು ಮಾಡಿತು, ಟಾಂಡನ್ನರಿಗೆ ಅದು ತುಂಬ ಇಷ್ಟವಾಯಿತು. ಆ ಕಾನೂನು ಆದಮೇಲೆ ಅವರು ೧೯೪೮ರಲ್ಲಿ ವಿಧಾನಸಭೆಯ ಅಧ್ಯಕ್ಷಗಿರಿಯನ್ನು ಬಿಟ್ಟರು.

ಸ್ವತಂತ್ರ ಭಾರತದಲ್ಲಿ ಬಹುಮುಖ ಸೇವೆ

೧೯೪೭ರಲ್ಲಿ ಭಾರತ ಸ್ವತಂತ್ರವಾಯಿತು. ಆದರೆ ಎರಡು ಹೋಳಾಗಿತ್ತು; ಭಾರತ -ಪಾಕಿಸ್ತಾನ ಎಂದು ಇದು ಎಷ್ಟೋ ಜನಕ್ಕೆ ಒಪ್ಪಿಗೆ ಆಗಿರಲಿಲ್ಲ. ಟಾಂಡನ್ನರಿಗಂತು ಇದಕ್ಕೆ ತುಂಬ ವಿರೋಧ ಇತ್ತು. ಹೀಗೆ ಮಾಡಬಾರದು ಎಂದು ಹೇಳಿದರು. ಗಾಂಧೀಜಿಯವರಿಗೂ ಹೇಳಿದರು. ಆದರೆ ಉಳಿದ ನಾಯಕರೆಲ್ಲ ಒಪ್ಪಿದ್ದರು. ದೇಶ ಎರಡು ಭಾಗವಾಯಿತು. ಟಾಂಡನ್ನರಿಗೆ ಸಂಕಟ ಆಯಿತು. ಸ್ವಾತಂತ್ರ‍್ಯದ ಉತ್ಸವಕ್ಕೆ ಅವರು ಬರಲೇ ಇಲ್ಲ.

ಮುಂದೆ ನಮ್ಮ ದೇಶಕ್ಕೆ ರಾಜ್ಯಂಗ ರಚಿಸಲು ರಾಜ್ಯಾಂಗ ಚಳುವಳಿ ಏರ್ಪಾಟಯಿತು; ಅದರಲ್ಲೂ ಟಾಂಡನ್ನರು ಸದಸ್ಯರಾಗಿದ್ದರು.

ದೇಶ ಅಂದಮೇಲೆ ಅದಕ್ಕೆ ಒಂದು ಬಾವುಟ, ಒಂದು ರಾಷ್ಟ್ರಗೀತೆ, ಒಂದು ಭಾಷೆ ಬೇಕಲ್ಲವೆ! ಭಾರತದಲ್ಲಿ ಅನೇಕ ಭಾಷೆ ಇವೆ. ಯಾವುದು ನಮ್ಮ ರಾಷ್ಟ್ರಭಾಷೆ? ಈ ಪ್ರಶ್ನೆ ಬಂತು ದೇಶದ ಬಹುಪಾಲು ಜನರ ಭಾಷೆ ಹಿಂದಿ. ಅದೇ ರಾಷ್ಟ್ರಭಾಷೆ ಆಗಬೇಕು ಎಂದು ಟಾಂಡನ್‌ಬಲವಾಗಿ ವಾದಿಸಿದರು. ಹಿಂದಿಗಿಂತ, ಹಿಂದೂಸ್ತಾನಿ ಇರಲಿ, ಅದು ಜನ ಸಾಮಾನ್ಯರ ಮಾತು ಎಂದು ಇನ್ನು ಕೆಲವರು ಹೇಳಿದರು. ಗಾಂಧೀಜಿಯ ಅಭಿಪ್ರಾಯವೂ ಅದೇ. ಆದರೆ ಹಿಂದೀನೇ ಇರಲಿ ಎಂದು ಬಹುಜನ ಹೇಳಿದರು. ಅವರಲ್ಲಿ ಟಾಂಡನ ಮುಖ್ಯರು. ಹಿಂದೀಗೋಸ್ಕರ ಗಾಂಧೀಜಿಗೂ ವಿರೋಧವಾಗಿ ನಿಂತರು. “ಹಿಂದೀ ನನ್ನ ಆತ್ಮ, ಬೇಕಾದರೆ ನನ್ನ ದೇಹವನ್ನೇ ಕೊಟ್ಟೇನು, ಆತ್ಮವನ್ನು ಹೇಗೆ ಬಿಡಲಿ ?” ಎಂದರು. ಕೊನೆಗೆ ಇಂಗ್ಲೀಷನೊಂದಿಗೆ ಹಿಂದೀ ಆಡಳಿತ ಭಾಷೆ ಎಂದು  ತೀರ್ಮಾನವಾಯಿತು.

ಒಂದೆರಡು ವರ್ಷದಲ್ಲಿ ರಾಜ್ಯಂಗ ಸಿದ್ಧವಾಯಿತು. ಅದರಂತೆ ಚುನಾವಣೆ ನಡೆದು ಸರ್ಕಾರಗಳು ರಚಿತವಾದವು. ಟಾಂಡನ್ನರು ಯಾವ ಅಧಿಕಾರಕ್ಕೂ ಆಸೆ ಪಡಲಿಲ್ಲ. ೧೯೫೩ರಲ್ಲಿ ಒರಿಸ್ಸಾ ರಾಜ್ಯದ ರಾಜ್ಯಪಾಲರಾಗಿ ಆಹ್ವಾನ ಬಂತು. ಬೇಡ ಎಂದು ಬಿಟ್ಟರು. ಆದರೆ ಹಿಂದೀ ಪದಕೋಶ ರಚನೆಯ ಕೆಲಸ ಮಾಡಿದರು.

ಕಾಂಗ್ರಸಿನ ಅಧ್ಯಕ್ಷರು

ಅಖಿಲ ಭಾರತ ಕಾಂಗ್ರೆಸ್ಸಿನ ಅಧ್ಯಕ್ಷರ ಪದವಿ ತುಂಬ ದೊಡ್ಡ ಗೌರವದ ಸ್ಥಾನವಾಗಿತ್ತು. ೧೯೫೦ರಲ್ಲಿ ಟಾಂಡನ್‌ರನ್ನು  ಆ ಪದವಿಗೆ ಆರಿಸಲಾಯಿತು. ನಾಸಿಕ ಎಂಬ ಕಡೆ ಕಾಂಗ್ರೆಸ್ ಸಮ್ಮೇಳನ. ಅಲ್ಲಿಗೆ ಅಧ್ಯಕ್ಷರು ಟಾಂಡನ್ನರು. ಭಾರತ ತನ್ನ ಹಿಂದಿನ ಹಿರಿತನವನ್ನು ಮತ್ತೆ ಕಾಣಬೇಕು. ನಮ್ಮ ಸಂಸ್ಕ್ರತಿಯ ದೊಡ್ಡ ಗುಣಗಳನ್ನು ನಾವು ಬಿಡಬಾರದು, ನಮ್ಮ ಹಳ್ಳಿಗಳು ಚೆನ್ನಾಗಬೇಕು. ಹಿಂದೀ ಒಂದೇ ಅಲ್ಲ, ನಮ್ಮ ಎಲ್ಲ ಭಾಷೆಗಳು ಚೆನ್ನಾಗಿ ಬೆಳೆಯಬೇಕು, ನಾವು ಬಲವಾದ ರಾಷ್ಟ್ರ ಆಗಬೇಕು, ಒಗ್ಗಟ್ಟಾಗಿ ಇರಬೇಕು, ಜಾತಿ ಮತ್ತು ಎಂದು ಜಗಳ ಆಡಬಾರದು- ಹೀಗೆ ಟಾಂಡನ್‌ಭಾಷಣ ಮಾಡಿದರು.

ಆದರೂ, ಟಾಂಡನ್ನರು ಹಳೆಯ ಕಾಲದ ಗೊಡ್ಡು ಸ್ವಭಾವದವರು, ತುಂಬ ಜಿಗುಟನ ವ್ಯಕ್ತಿ, ಭಾಷೆ ಬಗ್ಗೆ ಮೊಂಡು-ಹೀಗೆಲ್ಲ ಕೆಲವು ಜನ ಭಾವಿಸಿದ್ದರು. ನಿಜವಾಗಿಯೂ ಅವರು ಹಾಗಿರಲಿಲ್ಲ. ಉದಾರ ಮನಸ್ಸಿನವರೇ ಆಗಿದ್ದರು. ಆದರೆ ತತ್ತ್ವಗಳ ವಿಷಯದಲ್ಲಿ  ತುಂಬ ಕಟ್ಟುನಿಟ್ಟು. ತಮಗೆ ಸರಿ ಎನ್‌ಇಸಿದ್ದನ್ನು ಬಿಡಲು ಒಪ್ಪುತ್ತಿರಲಿಲ್ಲ.

ಹೀಗಾಗಿ ಕಾಂಗ್ರೆಸ್‌ಅಧ್ಯಕ್ಷರ ಕೆಲಸ ಅವರಿಗೆ ಕಷ್ಟವಾಯಿತು. ನೆಹರೂರವರ ಜೊತೆಯಲ್ಲಿ ಭಿನ್ನಾಭಿಪ್ರಾಯ ಬಂತು. ಅವರಿಬ್ಬರೂ ಮೊದಲಿನಿಂದಲೂ ಅಣ್ಣತಮ್ಮ ಇದ್ದಂತೆಯೆ ಇದ್ದರು.  ಟಾಂಡನ್ನರನ್ನು ನೆಹರೂ ’ಬಡೇ ಭಾಯಿ’ (ಅನ್ಣ) ಎಂದೇ ಕರೆಯುತ್ತಿದ್ದರು. ಆದರೂ ತತ್ತ್ವಗಳ ವಿಚಾರ ಬಂದಾಗ ಟಾಂಡನ್ನರು ನೆಹರೂ ಅವರ ಮಾತನ್ನು ಒಪ್ಪಲಿಲ್ಲ. ಅಧ್ಯಕ್ಷ ಪದವಿಯನ್ನೇ ಬಿಟ್ಟುಬಿಟ್ಟರು. “ನನಗಿಂತ ದೇಶ ದೊಡ್ಡದು. ದೇಶಕ್ಕೆ ನೆಹರೂ ನಾಯಕರು. ದೇಶಕ್ಕೆ ಅವರು ಅಗತ್ಯ, ನಾನು ಅವರಿಗೆ ಅಡ್ಡಿ ಮಾಡುವುದಿಲ್ಲ” ಎಂದು ಹೇಳಿದರು ಆಗ. ಎಂಥ ತ್ಯಾಗದ ಮಾತು !

ಅಧ್ಯಕ್ಷ ಪದವಿ ಬಿಟ್ಟರು. ಆದರೆ ಕಾಂಗ್ರೆಸ್ ಸೇವೆ ಬಿಡಲಿಲ್ಲ. ಮುಂದೆ ನೆಹರೂ ಅವರೇ ಅಧ್ಯಕ್ಷರಾದಾಗ, ಕಾರ‍್ಯಕಾರಿ ಸಮಿತಿಗೆ ಬರಲು ಕರೆದರು. ಟಾಂಡನ್ನರು ತಮ್ಮ ವಿರೋಧವನ್ನು  ಬಿಟ್ಟು ಒಪ್ಪಿಕೊಂಡರು.

ಪುರುಷೋತ್ತಮದಾಸ ಟಾಂಡನ್ನರು ೧೯೫೨ರಲ್ಲಿ ಲೋಕಸಭೆಯ ಮತ್ತು ೧೯೫೬ರಲ್ಲಿ ರಾಜ್ಯಸಭೆಯ  ಸದಸ್ಯರಾಗಿದ್ದರು. ೧೯೫೬ ನಂತರ ಅವರ ಆರೋಗ್ಯ ಕಡಿಮೆ ಆಗುತ್ತಾ ಬಂದಾಗ ರಾಜ್ಯ ಸಭೆಯ ಸದಸ್ಯತ್ವವನ್ನು ಬಿಟ್ಟು ಪ್ರಯಾಗಕ್ಕೆ ಹಿಂದಿರುಗಿದರು.

ಅಧಿಕಾರ ಇಲ್ಲದಿದ್ದರೂ ಟಾಂಡನ್ನರು ಎಂದರೆ ಜನರಿಗೆಲ್ಲ ಪ್ರೀತಿ, ಗೌರವ. ಅವರ ಮನೆ ಒಂದು ಯಾತ್ರಸ್ಥಳ ಆಗಿತ್ತು. ಸದಾ ಜನವೇ ಅಲ್ಲಿ. ಎಲ್ಲರಿಗೂ ಅವರು “ಬಾಬೂಜಿ.” ಗಾಂಧೀಜಿ ಕೊಟ್ಟ ಹೆಸರು “ರಾಜರ್ಷಿ”. ೧೯೬೦ರಲ್ಲಿ ಟಾಂಡನ್ನರನ್ನು ಗೌರವಿಸಲು ದೊಡ್ಡ ಸಭೆ ಏರ್ಪಾಟಾಯಿತು.  ಸಾವಿರ ಗಟ್ಟಲೆ ಜನ ನೆರೆದರು. ದೆಹಲಿಯಿಂದ ರಾಷ್ಟ್ರಪತಿ ರಾಜೇಂದ್ರ ಪ್ರಸದರೇ ಬಂದಿದ್ದರು. ಆ ಸಭೆಯಲ್ಲಿ ಬಾಬೂಜಿಯವಿರಗೆ ’ಟಾಂಡನ್‌ಅಭಿನಂದನ್‌ಗ್ರಂಥ್‌’ ಎಂಬ ಸ್ಮರಣ ಗ್ರಂಥವನ್ನು ಅಪಿðಸಿದರು.

೧೯೬೧ರಲ್ಲಿ ಭಾರತ ಸರ್ಕಾರ ’ಭಾರತ ರತ್ನ’ ಪ್ರಶಸ್ತಿ ಕೊಟ್ಟು ಗೌರವಿಸಿತು.

ಆ ವೇಳೆಗೆ ಬಾಬೂಜಿಯವರ ಆರೋಗ್ಯ ಕೆಡುತ್ತಿತ್ತು. ಕೆಮ್ಮು ತುಂಬ ನರಳಿಸುತ್ತಿತ್ತು. ಪ್ರಯಾಗದ ತಮ್ಮ ಸಣ್ಣ ಮನೆಯಲ್ಲೆ ಇದ್ದರು. ಅವರಿಗೆ ತಮ್ಮ ಕಾಯಿಲೆಯ ಚಿಂತೆಗಿಂತ ದೇಶ ಚೆನ್ನಾಗಿ ಬಲವಾಗಿ ಬೆಳೆಯಬೇಕು ಎನ್ನುವುದೇ ಚಿಂತೆ. ಹಾಸಿಗೆ ಹಿಡಿದಿದ್ದರೂ ಹಿಂದೀ ಸೇವೆಯೆ. ನಡುನಡುವೆ ರೇಡಿಯೋದಲ್ಲಿ ಕ್ರಿಕೆಟ ಸಮಾಚರ ಕೇಳುವುದು. ನಮ್ಮ ಬದುಕನ್ನೂ ಆಟದ ಹಾಗೆಯೇ ಆನಂದದಿಂದ ನಡೆಸಬೇಕು. ಸೋತರೆ ಕುಗ್ಗಬಾರದು, ಗೆದ್ದರೆ ಹಿಗ್ಗಬಾರದು ಎನ್ನುತ್ತಿದ್ದರು. ಹಾಗೆಯೆ ಬದುಕಿದರು.

೧೯೬೧ ಜುಲೈ ಒಂದನೆಯ ತಾರೀಖು. ರಾಜರ್ಷಿ ಪುರುಷೋತ್ತಮದಾಸ ಟಾಂಡನ್‌ನಿಧನರಾದರು. ಸುದ್ದಿ ಕೇಳಿ ಲಕ್ಷಗಟ್ಟಲೆ ಜನ  ಓಡಿಬಂದರು. ತಮ್ಮ ಪ್ರಿಯ ಬಾಬುಜಿಗೆ ಅಳುತ್ತ ಗೌರವ ಸಲ್ಲಿಸಿದರು.

ಶಿಸ್ತಿನ ಮೂರ್ತಿ

ಟಾಂಡನ್ನರು ತುಂಬ ನೀತಿ ನಿಷ್ಠೆಯ ವ್ಯಕ್ತಿ, ವಿಧಾನ  ಸಭೆಯ ಅಧ್ಯಕ್ಷರಾಗಿದ್ದಾಗ ಅವರಿಗೆ ಸರ್ಕಾರದ ಸೌಕರ್ಯ ಇರುತ್ತಿತ್ತಲ್ಲ. ಅದನ್ನೆಲ್ಲ ಅವರು ಸರ್ಕಾರದ ಕೆಲಸಕ್ಕೆ ಮಾತ್ರ ಬಳಸುತ್ತಿದ್ದರು. ಸ್ವಂತ ಕೆಲಸಕ್ಕೆ ಮುಟ್ಟುತ್ತಿರಲಿಲ್ಲ.

ಒಂದು ಸಲ ಮಹಾಕುಂಭ ಎನ್ನುವ ಜಾತ್ರೆ ಬಂತು. ಆಗ ಗಂಗಾಸ್ನಾನ ಮಾಡುವುದು ರೂಢಿ. ಟಾಂಡನ್ನರ ಹೆಂಡತಿಯವರು ಸ್ನಾನಕ್ಕೆ ಹೊರಟರು. ಬೆಳಗಿನ ಜಾವಕ್ಕೇ, “ಸ್ವಲ್ಪ ಕಾರು ತರಿಸಿ, ಗಂಗೆಗೆ ಹೋಗಿ ಬರುತ್ತೇನೆ” ಎಂದು ಕೇಳಿದರು. ಟಾಂಡನ್‌ಹೇಳಿದರು; “ಅದು ವಿಧನಸಭೆಯ ಅಧ್ಯಕ್ಷನ ಕಾರು. ಬೇರೆ ಜನಕ್ಕೆ ಅಲ್ಲ. ನಾನು ಅದರಲ್ಲಿ ಹೊರಟಾಗ ಬೇಕಾದರೆ ಜೊತೆಗೆ ಬ. ನಾನಿಲ್ಲದೆ ಇದ್ದಾಗ ನೀನು ಹೋಗಬಾರದು.” ಸರಿ, ಚಂದ್ರಮುಖೀದೇವಿ ರ್‌ಐಲಿನಲ್ಲೆ ಹೋಗಿ ಬರಲು ನಿರ್ಧರಿಸದರು. ಹಲವು ದಿನಗಳ ನಂತರ ಒಂದು ದಿನ ಟಾಂಡನ್‌ಕೇಳಿದರು: “ಹೇಗೆ ಹೋಗುತ್ತೀಯಾ?”

“ರೈಲಿನಲ್ಲಿ”

“ಒಬ್ಬಳೇ ಹೋಗುತ್ತೀಯಾ ? ಟಿಕೆಟ್‌ತೆಗೆದು ಕೊಳ್ಳುತ್ತೀತಾನೆ ? ”

“ಜೊತೆಗೆ ಹೆಂಗಸರಿದ್ದಾರೆ, ಹೋಗುತ್ತೇನೆ. ತುಂಬ ನೂಕುನುಗ್ಗಲು. ಟಿಕೆಟ್‌ತೆಗೆದುಕೊಳ್ಳುವುದು ಕಷ್ಟ. ರಾಮಬಾಗ್‌ಸ್ಟೇಷನ್‌ನಿಂದ ಬಾರಾಗಂಜಿಗೆ ಹೋಗಿ ಇಳಿದು  ಅಲ್ಲಿ ಟಿಕೆಟ್‌ಕಲೆಕ್ಟರಿಗೆ ಟಿಕೆಟ್‌ಹಣ ಕೊಟ್ಟು ಹೋಗುತ್ತೇನೆ” ಎಂದರು ಆಕೆ.

“ತಪ್ಪು. ಟಿಕೆಟ್‌ ಪಡೆದೇ ಹೋಗಬೇಕು” ಎಂದರು ಟಾಂಡನ್‌. ಮಾರನೆಯ ದಿನ ಪರೀಕ್ಷೆ ಮಾಡಲು ತಾವೇ ರೈಲ್ವೆ ಸ್ಟೇಷನ್ನಿಗೆ ಹೋಗಿ ನೋಡಿ ಬಂದರು.

ಇನ್ನೊಂದು ಸಲ ಗೋರಖಪುರ ಜೈಲಿನ್ಲಿ  ಇದ್ದರು. ಆಗ ಅವರ ನಾಲಕ್ಕನೆಯ ಮಗ ಅಮಿಯಾ ಬಿಂದು ತಂದೆಯ ಹೆಸರು ಹೇಳಿಕೊಂಡು ಒಂದು ಸರ್ಕಾರಿ ಕೆಲಸ ಗಿಟ್ಟಿಸಿದ್ದ. ಜೈಲಿನಿಂದ ಬಂದ ಮೇಲೆ ಟಾಂಡನ್‌ರಿಗೆ ಇದು ತಿಳಿಯಿತು. ಕೋಪ ಬಂತು, “ನನ್ನ ಹೆಸರು ಬಳಸಿ ಕೆಲಸ ಗಿಟ್ಟಿಸಿದ್ದು ತಪ್ಪು. ಕೆಲಸವನ್ನು ಬಿಟ್ಟುಬಿಡು” ಎಂದುಬಿಟ್ಟರು. ಅಮಿಯಾ ಕೆಲಸ ಬಿಡಲೇಬೇಕಾಯಿತು.

ಟಾಂಡನ್ನರ ಹಿಂದೀ ಪ್ರೇಮ ಎಷ್ಟಿತ್ತೆಂದು ಆಗಲೇ ನೋಡಿದ್ದೇವೆ. ಸುಮಾರು ಅರವತ್ತು ವರ್ಷ ಅದಕ್ಕಾಗಿ ದುಡಿದರು. ಹಿಂದಿಗಾಗಿ ಏನು ತ್ಯಾಗಮಾಡಲೂ ಸಿದ್ಧ. ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ಸಂಬಳದ ಸ್ವಲ್ಪ ಭಾಗವನ್ನು ಹಿಂದೀ ಭಾಷೆಗೇ ಮೀಸಲಾಘಿಟ್ಟಿದ್ದರು. ವೇದದ ಮಂತ್ರಗಳನ್ನು ಹಿಂದಿಯಲ್ಲಿ ರಚಿಸಿದ್ದರು. ವಿಧಾನಸಭೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಹಿಂದಿಯನ್ನೇ ಬಳಸಲು ಶುರು ಮಾಡಿದರು.

ಟಾಂಡನ್ನರು ತುಂಬ ಧರ್ಮಿಷ್ಠರು. ಸಾಧು ಸನ್ಯಾಸಿಯ ಹಾಗೇ ಇದ್ದರು. ನೋಡಲೂ ಹಾಗೆಯೇ, ಋಷಿಗಳ ಗಡ್ಡ!

ಆದರೆ ಅವರಿಗೆ ತಮ್ಮ ಧರ್ಮ ಹೇಗೋ ಹಾಗೆಯೆ ಇತರ ಧರ್ಮಗಳ ಲಮೇಲೂ ಗೌರವ. ಸ್ವಂತ ಕೆಲಸಕ್ಕೆ ಒಬ್ಬ ಮುಸಲ್ಮಾನ ನೌಕರನನ್ನೇ ಇಟ್ಟುಕೊಂಡಿದ್ದರು. ಎಲ್ಲ ಧರ್ಮಗಳೂ, ಜನರೂ ದೇಶದಲ್ಲಿ ಅಣ್ಣ ತಮ್ಮಂದಿರ ಹಾಗೆ ಬಾಳಬೇಕು ಎನ್ನುತ್ತಿದ್ದರು.

ದಿಟ್ಟತನ

ಟಾಂಡನ್ನರು ಅಷ್ಟೇ ರ್ಧ್ಯಶಾಲಿ. ೧೯೧೧ರಲ್ಲಿ ವಕೀಲರಾದರಲ್ಲ, ಆಗ ಫಿಜಿ ದ್ವೀಪಗಲಲ್ಲಿ ಕೂಲಿ ಕೆಲಸ ಮಾಡಲು ಬಡ ರೈತರಿಗೆ ಆಸೆ ತೋರಿಸಿ ಸೆಳೆದುಕೊಂಡು ಹೋಗುತ್ತಿದ್ದುದು ಟಾಂಡನ್ನರ ಗಮನಕ್ಕೆ ಬಂತು. ಕೂಡಲೇ ಅವರು ಅದನ್ನು ವಿರೋಧಿಸಿದರು. ಒಬ್ಬ ಇಂಗ್ಲೀಷ ನ್ಯಾಧೀಶರು “ಇದಕ್ಕೆಲ್ಲ ನೀನು ಹೋಗಬೇಡ. ನಿನ್ನ ಭವಿಷ್ಯ ಹಾಳಾದೀತು” ಎಂದರಂತೆ. ಟಾಂಡನ್‌ಒಪ್ಪಲಿಲ್ಲ. “ಹಾಗಾದರೆ ನೀನು ಇಂಗ್ಲಿಷರ ವಿರೋಧಿಯೇನು?” ಎಂದು ಕೇಳಿದರು ನ್ಯಾಯಧೀಶರು. “ಸ್ವಾಮಿ, ಅದನ್ನು ಇಷ್ಟು ತಡವಾಗಿ ತಿಳಿದಿರಲ್ಲ ನೀವು?” ಎಂದುಬಿಟ್ಟರು ಟಾಂಡನ್‌. ನ್ಯಾಯಾಧೀಶ ದಂಗಾದ. ಅಷ್ಟು ಧೈರ‍್ಯ ಟಾಂಡನ್ನರಿಗೆ.

ಇನ್ನೊಂದು ಸಲ. ಟಾಂಡನ್‌ ಅಲಹಾಬಾದ್ ಪುರಸಭೇಯ ಅಧ್ಯಕ್ಷರಾಗಿದ್ದರು. ಆ ಸ್ಥಾನಕ್ಕೆ ಬಂದ ಭಾರತೀಯರಲ್ಲಿ ಅವರೇ ಮೊದಲಿಗರು. ಆಗ ಪ್ರಾಂತದ ಗವರ್ನರ್‌ಸರ್‌ಹರ್‌ಕೋರ್ಟ ಬಟ್ಲರ್‌ಅಲ್ಲಿಗೆ ಬಂದು ಸರ್ಕಾರಿ ಬಂಗಲೆಯಲ್ಲಿ ತಂಗಿದ್ದರು.  ಬಂಗಲೆಯಲ್ಲಿ ಬಳಸುತ್ತಿದ್ದ ನೀರಿಗೆ ಬಹು ದಿನದಿಂದ ಹಣ ಕೊಟ್ಟಿರಲಿಲ್ಲ. ಸಾವಿರಾರು ರೂಪಾಯಿ ಬಾಕಿ ಇತ್ತು. “ಬಕಿ ಕೊಡುವವರೆಗೂ ನೀರು ನಿಲ್ಲಿಸಿಬಿಡಿ” ಎಂದು ಟಾಂಡನ್‌ಅಪ್ಪಣೆ ಮಾಢಿದರು. ಗವರ್ನರ ಸಾಹೇಬರಿಗೆ ನೀರೆಏ ಇಲ್ಲ ! ಸ್ನಾನದ ತೊಟ್ಟಿ ಖಾಲಿ ! ಬಂಗಲೆಯ ಅಧಿಕಾರಿಗಳಿಗೆ ಬೆವರು ಕಿತ್ತುಕೊಂಡಿತು. ಓಡಿದರು ಟಾಂಡನ್ನರ ಮನೆಗೆ.

“ಗರ್ವನರ್‌ ಬಂದಿದ್ದಾರೆ. ಸ್ನಾನದ ತೊಟ್ಟಿ ಖಾಲಿ, ಕೊಡಲೇ ನಿರು ಬಿಡಬೇಕು” ಎಂದರು.

“ಗರ್ವನರ್‌ಬಂದರೆ ನನಗೇನು ? ಮೊದಲು ಬಾಕಿ ಹಣ ಕೊಡಿ ಆಮೇಲೆ ನೀರಿನ ಮಾತು. ಬಡವರಿಗೆ ಕುಡಿಯುವುದಕ್ಕೇ ನೀರಿಲ್ಲ. ಸಾಹೇಬರ ತೊಟ್ಟಿಗೆ ಎಲ್ಲಿಂದ ತರುವುದು?” ಎಂದರು ಟಾಂಡನ್‌.

ಅಧಿಕಾರಿಗಳ ತೆಪ್ಪಗೆ ಹಿಂದಕ್ಕೆ ಹೋದರು. ಬಕಿ ಹಣ ತೆತ್ತಮೇಲೆಯೆ ಅವರಿಗೆ ನೀರು ಸಿಕ್ಕದ್ದು !

ಉತ್ತರ ಭಾರತದಲ್ಲಿ ರಾಮಲೀಲಾ ಎನ್ನುವುದು ದೊಡ್ಡ ಉತ್ಸವ. ವಿಜಯ ದಶಮಿಯ ದಿನ ರಾಮ ರಾವನ ನಾಟಕ ನಡೆಯುತ್ತದೆ. ಸಾವಿರಗಟ್ಟಲೆ ಜನ ಸೇರುತ್ತಾರೆ. ಪ್ರಯಾಗದಲ್ಲಿ ರಾಮಲೀಲಾ ಉತ್ಸವದ ಜೊತೆಗೇ ಸ್ವದೇಶಿ ವಸ್ತು ಪ್ರದರ್ಶನವೂ ನಡೆಯುತ್ತಿತ್ತು. ೧೯೪೮ರಲ್ಲಿ ದೇಶದಲ್ಲೆಲ್ಲ ಗಲಭೆ. ಆಗ ಉತ್ಸವ, ಪ್ರದರ್ಶನ ನಡೆಸಬಾರದು ಎಂದರು ಕೆಲವರು. ಪ್ರದರ್ಶನಕ್ಕೆ  ಏರ್ಪಾಡೆಲ್ಲ ಆಗಿತ್ತು. ಏರ್ಪಾಡು  ಮಾಡಿದವರಿಗೆ ತಲೆನೋವು, ಏನಪ್ಪ ಮಾಡುವುದು ಎಂದು. ಆರಂಭಕ್ಕೆ ಎರಡೇ ದಿನ ಇತ್ತು. ಆರಂಭಿಸಲು ಟಾಂಡನ್ನರೇ ಬರಬೇಕಾಗಿತ್ತು. ಆಗ ಅವರು ಲಖ್ನೋದಲ್ಲಿ ಇದ್ದರು. ಅವರನ್ನೇ ಕೇಳೋಣ ಎಂದು ಕಾರ‍್ಯಕರ್ತರು ಲಖ್ನೋಗೆ ಹೋದರು. ಪರಿಸ್ಥಿತಿ ಟಾಂಡನ್ನರಿಗೆ ಗೊತ್ತಾಗಿತ್ತು. ಕಾರ‍್ಯಕರ್ತರನ್ನು ನೋಡಿದ್ದೇ ತಡ ಹೇಳಿದರು. “ಯಾಕೆ ಬಂದಿರಿ? ಪ್ರದರ್ಶನ ನಿಲ್ಲಿಸುವ ಯೋಚನೆ ಮಾಡಿದ್ದೀರಾ ? ನಿಲ್ಲಿಸಬೇಡಿ, ಹೋಗಿ ನಡೆಸಿ. ನಾಳೆ ನಾನು ಬರುತ್ತೇನೆ. ಯಾರೋ ನಾಲ್ಕು ಜನ ಬೇಡ ಅಂದರೆ, ಗಲಾಟೆ ಮಾಡಿದರೆ ನಾವು ನಮ್ಮ ಹಬ್ಬ ನಿಲ್ಲಿಸಬೇಕೆ ? ಹೇಡಿಗಳೇ ನಾವು ? ಹಿಂದೆ ಒಂದು ಸಲ ಹೀಗೇ ರಾಮಲೀಲಾ ಉತ್ಸವಕ್ಕೆ ಅಡ್ಡಿ ಬಂದಿತ್ತು  ರಾಮ ಲಕ್ಷ್ಮಣರ ವೇಷ ಹಾಕಲು ಉಯಾರಿಗೂ ಧೈರ‍್ಯ ಇರಲಿಲ್ಲ. ಆಗ ನನ್ನ ಇಬ್ಬರು ಮಕ್ಕಳನ್ನೆ ಕಳಿಸಿದೆ. ಆ ಇಬ್ಬರಿಗೆ ಏನಾದರೂ ಆಗಿದ್ದರೆ. ಇನ್ನು ಇಬ್ಬರು ಮಕ್ಕಳನ್ನು ಕಳಿಸುತ್ತಿದ್ದೆ. ರಾಮಲೀಲಾ ಸೊಗಸಾಗಿ ನಡೆಯಿತು” ಎಂದು ಧೈರ್ಯ ಹೇಳಿದರು.

ಬಡವರಿಗೆ ಕುಡಿಯುವುದಕ್ಕೇ ನೀರಿಲ್ಲ, ಸಾಹೇಬರ ತೊಟ್ಟಿಗೆ ಎಲ್ಲಿಂದ ತರುವುದು

ಮಾರನೆಯ ದಿನ ಅಲಹಾಬಾದ್‌ಸೇರಿದರು ಟಾಂಡನ್‌. ಪ್ರದರ್ಶನ  ಆರಂಭಿಸಿದರು. ಒಂದು ರಾತ್ರಿ ಪ್ರದರ್ಶನಕ್ಕೆ ಬೆಂಕಿ ಬಿತ್ತು ಎಂದು ಯಾರೋ ಸುದ್ದಿ  ಹಬ್ಬಿಸಿದರು. ಕಾರ್ಯಕರ್ತರು ರಾತ್ರಿ ಬಹಳ ಹೊತ್ತಿನವರೆಗೆ ಇದ್ದು ಎಲ್ಲ ಭದ್ರಪಡಿಸಿ, ಜೋಪಾನ ಮಾಡಿ ಮನೆಗೆ ಹೊರಟರು. ಕತ್ತಲು ರಾತ್ರಿ, ಎಂದುರಿಗೆ ಕೈಲಿ ಟಾರ್ಚ್‌ದೀಪ ದೊಣ್ಣೆ ಹಿಡಿದುಕೊಂಡು ಒಬ್ಬ ಮುದುಕರು ಬರುತ್ತಿದ್ದರು. ನೋಡಿದರೆ ಟಾಂಡನ್‌! “ಬೆಂಕಿ ಬಿತ್ತು ಎಂದು ಕೇಳಿದೆ. ನೊಡೋಣ  ಏನಾಯಿತೊ ನಡೆಯಿರಿ” ಎಂದರು.

“ಇಲ್ಲ ಅದೆಲ್ಲ ಸುಳ್ಳು ಸುದ್ದಿ’ ಎಂದರು ಕಾರ‍್ಯಕರ್ತರು.

“ಇರಲಿ ನೋಡೋಣ ಬನ್ನಿ” ಎಂದು ಟಾಂಡನ್‌ ಎಲ್ಲರೊಡನೆ ಪ್ರದರ್ಶನಕ್ಕೆ ಬಂದರು. ಏನೂ ಆಗಿರಲಿಲ್ಲ, ಪ್ರತಿ ಅಂಗಡಿಗೂ ಹೋಗಿ ವಿಚಾರಿಸಿ ಎಲ್ಲರಿಗೂ ಧೈರ್ಯ ಹೇಳಿದರು. ಅಷ್ಟೆ ಅಲ್ಲ, ಪ್ರತಿದಿನವೂ ಬಂದು ವಿಚಾರಿಸುತ್ತಿದ್ದರು. ಯಾವ ಗಲಭೆಯೂ ಆಗಲಿಲ್ಲ, ಪ್ರದರ್ಶನ ಚೆನ್ನಾಗಿ ನಡೆಯಿತು.

ರಾಮಲೀಲಾ ಉತ್ಸವವನ್ನು ಸ್ವಾತಂತ್ರ ಹೋರಾಟದ ಹಾಗೆಯೆ ನಡೆಸಲು ಏರ್ಪಡಿಸಿದ್ದರು ಟಾಂಡನ್‌.

ತ್ಯಾಗ, ಸೇವೆ, ಸರಳತೆ

ನಮ್ಮ ದೇಶದಲ್ಲಿ ಓದು ಬರಹ ಬಾರದವರು ಬಹಳ ಜನ. ವಿದ್ಯೆ ಇಲ್ಲದೆ ಅಭಿವೃದ್ಧಿ ಇಲ್ಲ, ಎಲ್ಲರೂ ವಿದ್ಯಾವಂತರಾಗಬೇಕು ಎಂದು ಟಾಂಡನ್‌ಹೇಳುತ್ತಿದ್ದರು. ಹೇಳುವುದಷ್ಟೆ ಅಲ್ಲ, ತಾವೇ ಕೆಲಸಕ್ಕೆ ಮೊದಲು ಮಾಡಿದರು, ಆಗ ಅವರು ವಿಧಾನಸಭೆಯ ಅಧ್ಯಕ್ಷರು. ಆ ಕೆಲಸದ ನಡುವೆಯೂ ಈ ವಿದ್ಯೆ ಕಲಿಸುವ ಚಳುವಳಿ ಆರಂಭಿಸಿದರು. ತಮ್ಮ ಮನೆಯ ಮುಂದೆ ಗುಡಿಸಿಲು ಹಾಕಿಸಿ ಶಾಲೆ ಆರಂಭಿಸಿದರು. ಅನೇಕ ಕೆಲಸಗಾರರೂ ಜೊತೆಗೆ ಬಂದರು. ಸಾವಿರಾರು ಜನ ಅವರಿಂದ ಅಕ್ಷರ ಕಲಿತರು.

ಅದೇ ರೀತಿ ನಮ್ಮ ಹಳ್ಳಿಯ ಜನ ಸುಖವಾಗಿರಬೇಕು, ಅವರ ಬಾಳು ಹಸನಾಗಬೇಕು, ಅವರಿಗೆ ಉದ್ಯೋಗ ಇರಬೇಕು, ಅನುಕೂಲ ಇರಬೇಕು ಎಂದು ಟಾಂಡನ್ನರ ಆಸೆ, ಅದಕ್ಕಾಗಿ ಅವರು ’ಗೃಹವಿಕಾಸ ಯೋಜನೆ’ ಎಂಬ ಒಂದು ಕಾರ‍್ಯಕ್ರಮವನ್ನು ಆರಂಭಿಸಿದರು. ಮನೆ ಮನೆಯನ್ನು ಉತ್ತಮ ಪಡಿಸುವ ಕಾರ್ಯಕ್ರಮ ಅದು.

ಟಾಂಡನ್‌ದೊಡ್ಡ ನಾಯಕರು. ಆದರೂ ತುಂಬ ಸರಳರು, ಸಣ್ಣ ಮನೆಯಲ್ಲೆ ದೊಡ್ಡ ಸಂಸಾರ ನಿಭಾಯಿಸಿದರು. ಒಂದು ಪಂಚೆ ಜುಬ್ಬಾ ಅಷ್ಟೆ ಅವರ ಉಡುಪು. ವಕೀಲರಾಗಿದ್ದಾಗ ಹೊಲಿಸಿದ್ದ ಎರಡು ಕೋರ್ಟುಗಳನ್ನು ಕೊನೆಯತನಕ ಬಳಸುತ್ತಿದ್ದರು. ಒಂದು ಜೊತೆ ಪಂಚೆ ಆರೇಳು ವರ್ಷ ಬಾಳಿಕೆ ಬರುತ್ತಿತ್ತು. ಅಷ್ಟು ಜೋಪಾನ ! ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ಸಮ್ಮೇಳನಗಳಿಗೆ ಹೋದಾಗಲೂ ಅಷ್ಟೆ. ಬೇರೆ ಯಾಗೂ ಒಗೆಯಲು ಬಿಡುತ್ತಿರಲಿಲ್ಲ. “ಬಟ್ಟೆ ಒಗೆಯುವುದು ಆನಂದದ ಕೆಲಸ. ಬಟ್ಟೆಯ ಕೊಳೆ ಹೋಗುವ ಹಾಗೆಯೆ ನ್ಮ ಆತ್ಮದ ಕೊಳೆಯೂ ಹೊಗಿ ಶುಚಿಯಾಗುತ್ತದೆ” ಎನ್ನುತ್ತಿದ್ದರು.

ಆಹಾರದ ವಿಚಾರದಲ್ಲೂ ಟಾಂಡನ್ನರು ತುಂಬ ಕಟ್ಟುನಿಟ್ಟು. ಎಷ್ಟೋ ವರ್ಷ ಹಣ್ಣು ಹಂಪಲು ತಿಂದು ಕೊಂಡೇ ಇದ್ದರು. ಹಾಲು ಮೊಸರು, ತುಪ್ಪ, ಮಸಾಲೆ  ಪದಾರ್ಥ, ಉಪ್ಪು, ಸಕ್ಕರೆಗಳನ್ನೆಲ್ಲ ತಿನ್ನುತ್ತಿರಲಿಲ್ಲ. ಹಣ್ಣು ತರಕಾರಿ ರೊಟ್ಟಿ ಅಷ್ಟೆ ಅವರ ಆಹಾರ. ಹಾಗೆ ಇದ್ದರೆ ಯಾವ ಕಾಯಿಲೆಯೂ ಬಾರದು, ಏನಾದರೂ ಸ್ವಲ್ಪ ವ್ಯತ್ಯಾಸವಾದರೂ ಆಹಾರ ಪಥ್ಯದಿಂದಲೇ ಸರಿಪಡಿಸಿಕೊಳ್ಳಬಹುದು ಎನ್ನುವುದು ಅವರ ವಿಚಾರ.

ಹೀಗೆ ಪುರುಷೋತ್ತಮದಾಸ್ ಟಾಂಡನ್ನರು ದೊಡ್ಡ ರೀತಿಯಲ್ಲಿ ಬಾಳಿದರು. ದೊಡ್ಡ ತತ್ತ್ವಗಳನ್ನು ನಂಬಿಕೊಂಡು ನಡೆಸಿದರು. ನುಡಿದಂತೆ  ನಡೆಯುತ್ತಿದ್ದರು, ಸರಳವಾಗಿ ಬದುಕಿ ಉನ್ನತವಾದ ಸೇವೆ ಮಾಡಿದರು.