ಎಷ್ಟು ದೇವರ ನೀನೆಷ್ಟು ನಂಬಿದರೇನೊಂ-
ದಿಷ್ಟು ನೀ ನಂಬದಿರೆ ನಿನ್ನ ನೀನು?

ಹತ್ತುಸಾವಿರ ಜನರು ಸುತ್ತಲಿದ್ದೊಡಮೇನು
ಚಿತ್ತಹತ್ಯಕೆ ಯಾರು ತಡೆಯ ಕಟ್ಟುವರಯ್ಯ?
ಹೆರರ ಕೊಲ್ಲಲು ಕತ್ತಿ ಪರಶು ತೋಮರ ಬೇಕು;
ತನ್ನ ಕೊಲ್ಲಲು ಸಣ್ಣದೊಂದು ಸೂಜಿಯೆ ಸಾಕು!

ಶ್ರದ್ಧೆಯಿಂದಲೆ ಸೂರ್ಯ ಗಗನದೇಶದಿ ನಿಂತು
ನೂರು ಲೋಕವ ಹಿಡಿವ ಶಕ್ತಿ ಪಡೆದಿಹನಯ್ಯ:
ಶ್ರದ್ಧೆಯಿರುವುದೆ ನಾಕ, ಅಶ್ರದ್ಧೆಯೇ ನರಕ;
ಶ್ರದ್ಧೆಯಿದ್ದರೆ ಕೋಟಿ ದೇವರೆಮಗಾಳಯ್ಯ!

ಮಾನವನೆ ದೇವತೆಯು; ನರನೆ ನಾರಾಯಣನು;
ನಮ್ಮ ವಿಶ್ವಕೆ ನಾವೆ ನಿರುಪಮಾದ್ಭುತವಯ್ಯ!
ಕ್ರಿಸ್ತ ಬುದ್ಧರು ಎಲ್ಲ ‘ಅಹಮಸ್ಮಿ’ ಸಾಗರದಿ
ಮಿಂಚಿ ಮುಳುಗುವ ಬರಿಯ ಕಿರಿಯ ಬುದ್ಬುದವಯ್ಯ!

೩-೭-೧೯೩೧

�6ak�r������ಾಗಿಹನೈ:
ಕವಿಗರಸುಗಿರಸುಗಳ ಋಣವಿಲ್ಲ!
ಅವನಗ್ನಿಮುಖಿ!
ಪ್ರಲಯಶಿಖಿ!

 

೯-೧-೧೯೩೧