ಬಿರುಗಾಳಿ ಬೀಸುತಿದೆ, ಬಿರುಮಳೆಯು ಕರೆಯುತಿದೆ;
ಮೇಲೆ ಮೇಲ್ವಾಯ್ದು ಮುಂಗಾರ್ಮುಗಿಲು ಮುತ್ತುತಿದೆ
ಕಣ್ಗಳಿಗೆ ಮೆತ್ತಿ ಕಗ್ಗತ್ತಲೆಯನು; ಸಿಡಿಲೆರಗಿ
ಮಿಂಚೆಸೆದು ಲೋಕ ಕಂಪಿಸುತಿದೆ; ಹೊನಲೇರಿ
ಹೊಳೆಯುಕ್ಕಿ ಮನುಜರನು ಕೊಚ್ಚುತಿದೆ. ಬೆಚ್ಚುತಿದೆ
ನರನೆದೆ ನೆಚ್ಚುಗೆಟ್ಟು. ಎಲ್ಲೆಡೆಯು ಕೇಳುತಿದೆ
ಹಾಕಾರವು. ಕ್ರಾಂತಿ ಎಂಬುವ ಭೂತು ತಲೆಗೆದರಿ
ಹುಚ್ಚೆದ್ದು ಸುತ್ತುತಿದೆ ಭೀಮಛಾಯೆಯ ಚೆಲ್ಲಿ.
ಓ ಎಲ್ಲಿ? ಶಾಂತಿ ಸೂರ್ಯನು ಎಲ್ಲಿ? ಮುಳುಗಿದನೆ?
ಮುಂದೆಂದು ಮೂಡದಿಹನೆ? ಕೊನೆಗಾಣದಿರುವುದೇ
ಈ ಕಾಳರಾತ್ರಿ? ನರಹೃದಯದಲಿ ತುಂಬಿರುವ
ಪಂಕದಿಂದಲೆ ಮರಳಿ ಕಮಲಗಳು ಕಾಣಿಸವೆ?
ಮನವೇ, ನಿರಾಶೆಯಲಿ ಕೊರಗದಿರು! ಸಾಗರದ
ಮಥನದಲಿ ವಿಷವು ಜನಿಸಿದೆ ಇಂದು! ಮೂಡುವುದು
ಮುಂದೆ ಸೊದೆ! ಹಗಲು ಬರುವುದು ತೊಲಗಿ ಕಾಳರಾತ್ರಿ!

೧೧-೧೧-೧೯೩೧

ont-si�?20�r����amily:”Times New Roman”,”serif”;color:black’>:
ಕವಿಗರಸುಗಿರಸುಗಳ ಋಣವಿಲ್ಲ!
ಅವನಗ್ನಿಮುಖಿ!
ಪ್ರಲಯಶಿಖಿ!

 

೯-೧-೧೯೩೧