ಪಲ್ಲವಿ : ಪಾದ ನಾ ನಂಬಿದೆ ಕೃಷ್ಣನ ಪಾದ
ಪಾದ ನಾ ಹಿಡಿದೆ ಕೃಷ್ಣನ ಪಾದ
ಚರಣ : ಪಾದ ಬ್ರಹ್ಮನು ತೊಳೆದ ಪಾದ
ಪಾದ ಬಲಿಯನು ತುಳಿದ ಪಾದ
ಪಾದ ಭವಸಾಗರ ದಾಟಿಸು ಪಾದ
ಪಾದ ನಾದಕೆ ಒಲಿಯುವ ಪಾದ
ಪಾದ ಗರುಡನ ಏರಿದ ಪಾದ
ಪಾದ ಗುಹನು ಮುಟ್ಟಿದ ಪಾದ
ಪಾದ ಕಾಳಿಂಗನ ತುಳಿದ ಪಾದ
ಪಾದ ಅಹಲ್ಯ ಮೋಚನ ಪಾದ
ಪಾದ ಇಂದ್ರನು ಹಿಡಿದ ಪಾದ
ಪಾದ ಚಂದ್ರನ ಕಳೆಗಳ ಪಾದ
ಪಾದ ಲಕ್ಷ್ಮಿ ಒತ್ತಿದ ಪಾದ
ಪಾದ ಭಕ್ತರ ನಿಧಿಯದು ಪಾದ
ಪಾದ ಪುಷ್ಪಕ ಏರದಿ ಪಾದ
ಪಾದ ಜಯವನು ನೀಡುವ ಪಾದ
Leave A Comment