ತಿಳಿದು ಭಕ್ತಿಮಾಡು ಗುರುವಿನ ಪಾದದಲ್ಲಿ
ನಿನ್ನ ಮನಸ್ಸಿನಲ್ಲಿ ನಿನ್ನ ಮನಸ್ಸಿನಲ್ಲಿ
ಬಲವಂತ ಮಾಡೋ ಸ್ಥಾನವಲ್ಲ
ನೀ ಕೇಳೊ ಸೊಲ್ಲ || ತಿಳಿದು ||

ಕೋಪ ಪಾಪದಿಂದ ಸತ್ಯಜ್ಞಾನ ನಾಶ ಮಾಯಾ
ಪಾಸಿ || ತಾಪ ಸ್ತೋತ್ರ ಮರಸೇವೆ, ಕ್ಷೇಮನಾಶ
ನಿನ್ನ ಭವನಾಶ || ತಿಳಿದು ||

ಆಶತ್ರಯದಿಂದ ನೀನು ಘಾಸಿಯಾಗುವೆ
ನೀನು ಮೋಸ ಹೋಗುವೆ ನೀನು ಈಶನಲ್ಲಿ
ಆಶೆಯಿಡು ಹೇಸಿ ಜೀವವೆ ಮುಕ್ತನಾಗುವೇ || ತಿಳಿದು ||

ತನುತ್ರಯ ಬೆಳಗುವ ಆತ್ಮನೊಬ್ಬನೆ ಸತ್ಯವೆಂದು
ಇದು ಕನಸಿನಂತೆ ತೋರ್ಪ ಜಗ ಮಿಥ್ಯವೆಂದು
ನಿನ್ನ ಮನಸಿನೊಂದು || ತಿಳಿದು ||

ಗುರುದೇವ ಸರ್ವಕರ್ತ ಬೋಧಕರ್ತ
ಕೇಳುವಂಥ ಗುರುಪಾದ
ಬಂದರಿರೆ ಜನ್ಮ ವ್ಯರ್ಥ ಇದು ಸತ್ಯ