ಅಂತರಂಗದ ಅಷ್ಟಮದಗಳು :
ಸಂಸ್ಥಿತ ತೃಣೀಕೃತ ವರ್ತಿನಿ ಕ್ರೋಧಿನಿ ಮೋಹಿನಿ ಅತಿಚಾರಿಣಿ ಗಂಧಚಾರಿಣಿ ವಾಸಿನಿ

ಅಂತಃಕರಣ ಚತುಷ್ಟಯ :
ಬುದ್ಧಿ ಮನ ಚಿತ್ತು ಅಹಂಕಾರ

ಅಖಂಡ ಗೋಳಕಾಕಾರಲಿಂಗ :
ಪಂಚ ಸಂಜ್ಞೆಗಳುಳ್ಳ ಲಿಂಗ

ಅಗ್ನಿಯುತ್ಪತ್ಯ :
ಕ್ಷುದೆ ತೃಷೆ ನಿದ್ರೆ ಆಲಸ್ಯ ಸಂಗ

ಅನಾದಿತ್ರಿತತ್ವ :
ಅನಾದಿ ಶಿವತತ್ವ ಅನಾದಿ ಈಶ್ವರ ತತ್ವ ಅನಾದಿ ಮಹೇಶ್ವರತತ್ವ

ಅಪ್ಪುವಿನುತ್ಪತ್ಯ :
ಮೇಧಸ್ಸು ಶ್ಲೇಷ್ಮ ಶುಕ್ಲ ಶೋಣಿ ಮೂತ್ರ

ಅವಸ್ಥಾ :
ತ್ರಯಜಾಗ್ರ ಸ್ವಪ್ನ ಸುಷುಪ್ತಿ
ಪಂಚಕಪ್ರೇರಕಾವಸ್ಥೆ ಮಧ್ಯಾವಸ್ಥೆ ಕೆಳಗಾದವಸ್ಥೆ ಮೇಲಾದವಸ್ಥೆ ನಿರ್ಮಲಾವಸ್ಥೆ

ಅಷ್ಟ :
ದಿಕ್ಪಾಲಕರುಇಂದ್ರ ಅಗ್ನಿ ಯಮ ನಿರರುತಿ ವರುಣ ವಾಯು ಕುಬೇರ ಈಶಾನ

ತನುಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮ

ನಾದಸಿಂಹನಾದ ದಿವ್ಯನಾದ ಪ್ರಣವನಾದ ಮೇಘನಾದ ಭೇರಿ ನಾದ ಘಂಟಾ ನಾದ ವೀಣಾನಾದ ಪೆಣ್ದುಂಬಿನಾದ

ವಿಧನಾದವೀಣಾ ಘಂಟಾ ಭೇರಿ ಮೇಘ ದಿವ್ಯಸಿಂಹ ನಿಶ್ಶಬ್ದ ನಿಶ್ಶೂನ್ಯ

ಭ್ರಮೆಜಾತಿ ವರ್ಣ ಆಶ್ರಮ ಕುಲಗೋತ್ರ ನಾಮಭ್ರಮೆ

ಮದಕುಲ ಛಲ ಧನ ಯೌವನ ರೂಪ ವಿದ್ಯಾ ರಾಜ್ಯ ತಪ

ಅಹಂಕಾರ :
ಚಿತ್ತದಿಂದಾದುದು

ಅಕ್ಷರತ್ರಯ :
ಅ ಉ ಮ


ಆಕಾಶದುತ್ಪತ್ಯ :
ವಿರೋಧಿಸುವ ಅಂಜುವ ನಾಚುವ ಮೋಹಿಸುವ ಅಹುದಾಗದೇನುವ.

ಆಧಾರಚಕ್ರ :
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಆತ್ಮ


ಈರೇಳುಲೋಕ :
೧) ಭೂ ಭುವರ್ ಮಹರ್ ಜನರ್ ತಪರ್ ಸತ್ಯ ಗೋ ಎಂಬ ಏಳು ಊರ್ಧ್ವಲೋಕಗಳು
೨) ಅತಲ ವಿತಲ ಸುತಲ ತಲಾತಲ ರಸಾತಲ ನಿರಾತಲ ಪಾತಾಳ ಎಂಬ ಏಳು ಅಧೋಲೋಕಗಳು


ಕದಳಿ :
ಸಂಸಾರ, ದೇಹ, ಮಾಯೆ, ಭವ, ಚಕ್ರ, ಜ್ರಾನಮಂಡಲ

ಕರ್ಮತ್ರಯ :
ಸಂಚಿತ ಪ್ರಾರಬ್ಧ ಆಗಾಮಿ

ಕರ್ಮಾಂಗ :
ಪಾಯು ಗುಹ್ಯ ಪಾದ ಪಾಣಿ ಅಂತರ

ಕಲಾಧ್ವ :
ಶಾಂತ್ಯತೀತ್ತೋರಕಲೆ ಶಾಂತ್ಯಾತೀತಕಲೆ ಶಾಂತಿಕಲೆ ವಿದ್ಯಾಕಲೆ ಪ್ರತಿಷ್ಠಾಕಲೆ ನಿವೃತ್ತಿಕಲೆ

ಕಾಮಾಂಗೆ :
ಚಿತ್ತ ಬುದ್ಧಿ ಅಹಂಕಾರ ಮನ ಜ್ಞಾನ ಭಾವ

ಕಾಲತ್ರಯ :
೧) ಜಾಗ್ರತ ಸ್ವಪ್ನ ಸುಘಪ್ತಿ
೨) ಭೂತ ವರ್ತಮಾನ ಭವಿಷತ್

,
ಗುಣತ್ರಯ :
ಸತ್ವ ರಜ ತಮ

ಚತುರ್ವಿಧ ಪ್ರಸಾದ :
ಶುದ್ಧ ಸಿದ್ಧ ಪ್ರಸಿದ್ಧ ಶಿವಜ್ಞಾನ

ಚತುರ್ವೇದ :
ಋಕ್ ಯಜಸ್ ಸಾಮ ಅಥರ್ವಣ

ಚಿತ್ತ :
ಬುದ್ಧಿಯಿಂದಾದುದು

ಚೌರಾಸಿ :
ಅಂಡಜ ಸ್ವೇದಜ ಉದ್ಬಿಖಿ ಜರಾ ಯುಜ


ಜೀವ :
ಅಹಂಕಾರದಿಂದಾದುದು

ಜೀವ ಪಂಚಕ :
ಮನ ಬುದ್ಧಿ ಚಿತ್ತ ಅಹಂಕಾರ ಜೀವ

ಜ್ಞಾನತ್ರಯ :
ಜ್ಞಾತೃ ಜ್ಞಾನ ಜ್ಞೇಯ


ತತ್ವಗಳು :
ಇಪ್ಪತ್ತುನಾಲ್ಕು
ಗುಣತ್ರಯ ಬುದ್ಧಿ ಅಹಂಕಾರ ಚಿತ್ತ ಶ್ರೋತ್ರ ತ್ವಕ್ಕು ಚಕ್ಷು ಜಿವ್ಹೆ ಘ್ರಾಣ ವಾಕ್ಕು ಪಾಣಿ ಪಾದ ಪಾಯು ಗುಹ್ಯ ಶಬ್ದ ಸ್ಪರ್ಶ ರೂಪು ರಸ ಗಂಧ ಆಕಾಶ ವಾಯು ತೇಜ ಅಪ್ಪು ಪೃಥ್ವಿ

ಮೂವತ್ತಾರು :
ಗುಹ್ಯ ಜಿವ್ಹೆ ಬುದ್ಧಿ ರಸ ಅಪ್ಪು ಪಾದ ನೇತ್ರ ಅಹಂಕಾರ ರೂಪು ಅಗ್ನಿ ರುದ್ರ ಗುಹ್ಯ ಜಿವ್ಹೆ ಬುದ್ಧಿ ಅಪ್ಪು ವಿಷ್ಣು ಗುದ ಘ್ರಾಣ ಚಿತ್ತ ಗಂಧ ಬ್ರಹ್ಮ

ತನುತ್ರಯ :
ಸ್ಥೂಲ ಸೂಕ್ಷ್ಮ ಕಾರಣ

ತನ್ನ ಮೂರ್ತಿಯಿಂದಾದ ಪಂಚ ಪಂಚಕಗಳು :
೧) ಜ್ಞಾನೇಂದ್ರಿಯ ಪಂಚಕ
೨) ಕಮೇಂದ್ರಿಯ ಪಂಚಕ
೩) ವಿಷಯ ಪಂಚಕ
೪) ಜೀವ ಪಂಚಕ
೫) ಕರಣೇಂದ್ರಿಯ ಪಂಚಕ

ತಾಪತ್ರಯ :
ಅಧ್ಯಾತ್ಮಿಕ ಆದಿಭೌತಿಕ ಆದಿ ದೈವಿಕ

ತಾಳೋಷ್ಟ್ರ ಸಂಪುಟ :
ನಾದ ಬಿಂದು ಕಳಾತೀತವೆಂಬುದು

ತ್ರಿನಾಡಿ :
ಇಡಾ ಪಿಂಗಳ ಸುಷುಮ್ನ

ತ್ರಿವಿಧಪದ :
ತ್ವಂ ತತ್ ಅಸಿ

ತ್ರಿವಿಧಪ್ರಸಾದ :
ಶುದ್ಧ ಸಿದ್ಧ ಪ್ರಸಿದ್ಧ

ತ್ರಿವಿಧಲಿಂಗ :
ಇಷ್ಟ ಪ್ರಾಣ ಭಾವ


ದಶತತ್ವಗಳು :
ಪರಾಶಕ್ತಿ ಸದಾಶಿವ ಈಶ್ವರ ಶುದ್ಧ ವಿದ್ಯೆ ಮಾಯೆ ಕಾಲ ನಿಯತಿ ಕಲೆ ವಿದ್ಯೆ ರಾಗ ಇವು ನಿಃಕಲ ತತ್ವ ದಲುತ್ಪತ್ಯ

ದಶನಾಡಿ :
ಇಡಾ ಪಿಂಗಳ ಸುಘಮ್ನ ಗಾಂಧಾರಿ ಹ ಸ್ತಿ ಜಿ ವ್ಹಾ ಪೂಷ ಪಯಶ್ವಿನಿ ಅಲಂಬು ಲಕುಹ ಶಂಕಿನಿ

ದಶವಾಯು :
ಪ್ರಾಣ ಅಪಾನ ಉದಾನ ವ್ಯಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯ

ದಶ ಆಸನಯೋಗ :
ವಜ್ರಾಸನ ಪದ್ಮಾಸನ ಸ್ವಸ್ತಿಕಾಸನ ಗೋಮುಖಾಸನ ಕುಕ್ಕುಟಾಸನ ಮಂಡೂಕಾಸನ ಸಿಂಹಾಸನ ಭದ್ರಾಸನ ಸುಖಾಸನ

ದಶಚಕ್ರ :
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾ ಬ್ರಹ್ಮ ರಂಧ್ರ ಶಿಖಾ ಪಶ್ಚಿಮ ಅಣು

ದೇಹ :
ಪಂಚವಿಂಶತಿಗುಣಂಗಳಿಂದಾದುದು


ನವ ಅಧಿದೇವತೆಗಳು :
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಆತ್ಮ ಅಂತರಾತ್ಮ ಪರಮಾತ್ಮ ಸರ್ವಾತ್ಮ

ನವ ಪದ್ಮ :
ಷಡ್ದಳ ದಶದಳ ದ್ವಾದಶದಳ ಷೋಡಶದಳ ದ್ವಿದಳ ಸಹಸ್ರದಳ ತ್ರಿದಳ ಏಕದಳ ನಿರಂಜನಾತೀತ

ನವಶಕ್ತಿ :
ನಿರ್ಭಿನ್ನ ನಿಭ್ರಾಂತ ನಿರ್ಮಾಯ ಹಾಕಿನಿ ಠಾಕಿನಿ ಶಾಕಿನಿ ಲಾಕಿನಿ ಶಾಕಿನಿ ಕೌಕಿನಿ

ನಿರಂಜನ ದಶಚಕ್ರಗಳಲ್ಲಿ ಷಟ್ಚಕ್ರಗಳು :
ನಿರಂಜನ ಆಜ್ಞಾನಿರಂಜನ ಅನಾಹತ ನಿರಂಜನ ವಿಶುದ್ಧಿ ನಿರಂಜನ ಮಣಿಪೂರಕ ನಿರಂಜನ ಸ್ವಾಧಿಷ್ಠಾನ ನಿರಂಜನ ಆಧಾರ ನಿರಂಜನ ಷಟ್‌ಚಕ್ರಗಳಿವು. ಇವುಗಳ ಮೇಲಿವೆ ನಾಲ್ಕು. ಸ್ವಯಾನಂದಚಕ್ರ ಸ್ವಯಾನಂದ ಘನಚಕ್ರ ಸ್ವಯಾನಂಗ ಮಹಾಘನಚಕ್ರ ಸ್ವಯಾನಂದ ಮಹಾಘನಾತೀತಚಕ್ರ

ನಿರಂಜನಾತೀತ ಷಟ್ ಸ್ಥಲಬ್ರಹ್ಮ :
ನಿರಂಜನಾತೀತ ಭಕ್ತಾದಿ ನಿರಂಜನಾತೀತ ಐಕ್ಯಾಂತ ಷಟ್‌ಸ್ಥಲಗಳು


ಪಂಚ ಕರ್ಮೇಂದ್ರಿಯ ತನ್ಮಾತ್ರಯಂಗಳು :
ವಚನ, ಗಮನ, ಆದಾನ, ವಿಸರ್ಜನ, ಆನಂದ

ಪಂಚಕೋಶಗಳು :
ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯ

ಪಂಚಧಾರಣೆ :
ನಾಡಿಧಾರಣೆ ವಾಯುಧಾರಣೆ ಅಮೃತಧಾರಣೆ ಅಗ್ನಿಧಾರಣೆ ಆಧಾರಧಾರಣೆ

ಪಂಚಮೂರ್ತಿ :
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ

ಪಂಚವಾಯುಗಳು :
ಅಪಾನ ಉದಾನ ವ್ಯಾನ ಸಮಾನ

ಪಿಂಡದುತ್ಪತ್ಯಕ್ರಮ :
ಅನ್ನರಸ ರುಧಿರ ಮಾಂಸ ಮೇಧಸ್ಸು ಅಸ್ತಿ ಮಜ್ಜೆ ಶುಕ್ಲ

ಪ್ರಣವತ್ರಯ :
ಶಿವಪ್ರಣವ ಶಿಕ್ತಿಪ್ರಣವ ಮಹಾಪ್ರಣವ

ಪ್ರಳಯಕಾಲರುದ್ರ :
ಬ್ರಹ್ಮಕಪಾಲ ವಿಷ್ಣುಕಂಕಾಳ ದಂಡವ ಹಿಡಿದವ

ಪ್ರಾಣವಾಯುಕ್ರಿಯೆಗಳು :
ರೇಚಕ ಪೂರಕ ಕುಂಭಕ

ಪೃಥ್ವಿಯಿಂದುತ್ಪತ್ಯಗಳು :
ಅಸ್ಥಿ ಮಾಂಸ ಚರ್ಮ ನರ ರೋಮ

,
ಬಹಿರಂಗದಷ್ಟಮದಂಗಳು :
ಕುಲಮದ ಛಲಮದ ಧನಮದ ಯೌವನಮದ ರೂಪುಮದ ವಿದ್ಯಾಮದ ರಾಜಮದ ತಪೋಮದ

ಬುದ್ಧಿ :
ಮನದಿಂದಾದುದು

ಭೂತಾಂಗ :
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಕ್ಷೇತ್ರಜ್ಞ


ಮಂಡಲತ್ರಯ :
ಸೂರ್ಯಮಂಡಲ ಚಂದ್ರಮಂಡಲ ಅಗ್ನಿಮಂಡಲ

ಮನ :ಇಂದ್ರಿಯಗಳಿಗೆ ಒಡೆಯನಾದುದು

ಮಲತ್ರಯ :
ಆಣವಮಲ ಮಾಯಾಮಲ ಕಾರ್ಮಿಕಮಲ

ಮಹಾಘನ :
ನಾಮ ರೂಪ ಕ್ರಿಯಾತೀತವಾದುದು

ಮಹಾಪುರುಷ :
ವಿಶ್ವತೋಮುಖ ವಿಶ್ವತೋಚಕ್ಷು ವಿಶ್ವತೋಬಾಹು ವಿಶ್ವತೋಪಾದಗಳುಳ್ಳಾತನು

ಮಹಾಶರಣ :
ಸಹಜ ನಿರಾಲಂಬ ತಾನಾದವನು

ಮೂವತ್ತಾರು ತತ್ವ :
ಆಕಾಶ ಚೈತನ್ಯ ಭಾವ ಕರ್ತ ಕ್ಷೇತ್ರಜ್ಞ ಶಿವ ವಾಕ್ಕು ಶ್ರೋತ್ರ ಜ್ಞಾನ ಶಬ್ದ ಮಹಾಕಾಶ ಸದಾಶಿವ ಪಾಣಿ ತ್ವಕ್ ಮನ ಸ್ಪರ್ಶ ವಾಯು ಈಶ್ವರ

,
ಯೋಗದ ಅಷ್ಟಾಂಗಗಳು :
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ

ಯೋಗಾಂಗ :
ಗಂಧ ರಸ ರೂಪು ಸ್ಪರ್ಶ ಶಬ್ದ ತರ್ಕ


ವಾಯುವಿನುತ್ಪತ್ಯ :
ಪರಿವ ಪಾರುವ ಸುಳಿವ ಕೂಡುವ ಅಗಲುವ

ವಿದ್ಯಾಂಗ :
ಘ್ರಾಣ ಜಿವ್ಹೆ ನೇತ್ರ ತ್ವಕ್ಕು ಶೋತ್ರ ಚೇತನ

ವಿರಾಟ್ ಪುರುಷ :
ಸಹಸ್ರಶಿರ ಸಹಸ್ರಾಕ್ಷ ಸಹಸ್ರ ಪಾದವನುಳ್ಳವ

ವೇದಾಂತ ವಾದತ್ರಯ :
ತ್ವಂ ಪದವಾದ, ತತ್‌ಪದವಾದ, ಅಸಿಪದವಾದವೆಂಬುವು


ಶಿವಾಂಗ :
ಬ್ರಹ್ಮ, ವಿಷ್ಣು, ರುದ್ರ, ಈಶ್ವರ; ಸದಾಶಿವ


ಷಟ್ಚಕ್ರ :
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯ

ಷಟ್ಪ್ರಣವ :
ಆದಿಪ್ರಣವ ಅನಾದಿಪ್ರಣವ ಕಲಾಪ್ರಣವ ಅವಾಚ್ಯಪ್ರಣವ ನಿರಂಜನಪ್ರಣವ ನಿರಾಮಯಪ್ರಣವ

ಷಟ್ಶಕ್ತಿ :
ಚಿಚ್ಛಕ್ತಿ ಪರಾಶಕ್ತಿ ಆದಿಶಕ್ತಿ ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ

ಷಟ್ಶಕ್ತಿ ನಿವೃತ್ತಿ :
೧) ಜ್ಞಾನಶಕ್ತಿಯ ಸಹಸ್ರಾಂಶದಲ್ಲಿ ಕ್ರಿಯಾಶಕ್ತಿ ಅಡಗಿದಳು
೨) ಇಚ್ಛಾಶಕ್ತಿಯ ಸಹಸ್ರಾಂಶದಲ್ಲಿ ಜ್ಞಾನಶಕ್ತಿ ಅಡಗಿದಳು
೩) ಆದಿಶಕ್ತಿಯ ಸಹಸ್ರಾಂಶದಲ್ಲಿ ಇಚ್ಛಾಶಕ್ತಿ ಅಡಗಿದಳು
೪) ಪರಾಶಕ್ತಿಯ ಸಹಸ್ರಾಂಶದಲ್ಲಿ ಆದಿಶಕ್ತಿ ಅಡಗಿದಳು
೫) ಚಿಚ್ಛಕ್ತಿಯ ಸಹಸ್ರಾಂಶದಲ್ಲಿ ಪರಾಶಕ್ತಿ ಅಡಗಿದಳು
೬) ಚಿಂತಾಶಕ್ತಿಯ ಸಹಸ್ರಾಂಶದಲ್ಲಿ ಚಿಚ್ಛಕ್ತಿ ಅಡಗಿದಳು

ಷಟ್ಸ್ಥಲ :
ಆರು ಲಿಂಗಗಳು ಆರು ಅಂಗಗಳು ಆರು ಚಕ್ರಗಳು ಆರು ಜ್ಞಾನಗಳು ಆರು ಕರಣಗಳು

ಷಡಂಗ :
ಶಿವಾಂಗ ಭೂತಾಂಗ ಯೋಗಾಂಗ ಕಾಮಾಂಗ ವಿದ್ಯಾಂಗ ಕರ್ಮಾಂಗ

ಷಡಂಗನಿವೃತ್ತಿ :

ಭಾವ ಜ್ಞಾನ ಮನ ಅಹಂಕಾರ ಬುದ್ಧಿಚಿತ್ತ ಈ ಆರು ಕಾಮಾಂಗವು ಇಚ್ಛಾಶಕ್ತಿಯಲ್ಲಿ ಅಡಗಿತ್ತು
ಚೇತನ ಶ್ರೋತ್ರ ತ್ವಕ್ಕು ನೇತ್ರ ಜಿವ್ಹೆ ಘ್ರಾಣ ಈ ಆರು ವಿದ್ಯಾಂಗವು ಜ್ಞಾನಶಕ್ತಿಯಲ್ಲಿ ಅಡಗಿತ್ತು.
ಅಂತರ ವಾಕ್ ಪಾಣಿ ಪಾದ ಗುಹ್ಯ ವಾಯು ಈ ಆರು ಕರ್ಮಾಂಗವು ಕ್ರಿಯಾಶಕ್ತಿಯಲ್ಲಡಗಿತ್ತು.

ಷಡಂಗ :
ಶಿವ ಸದಾಶಿವ ಈಶ್ವರ ರುದ್ರ ವಿಷ್ಣು ಬ್ರಹ್ಮ ಈ ಆರು ಶಿವಾಂಗವು ಚಿಚ್ಛಕ್ತಿಯಲ್ಲಡಗಿತ್ತು. ಕ್ಷೇತ್ರಜ್ಞ ಆಕಾಶ ವಾಯು ತೇಜ ಅಪ್ಪು ಪೃಥ್ವಿ ಈ ಆರು ಭೂತಂಗವು ಪರಾಶಕ್ತಿಯಲ್ಲಡಗಿತ್ತು.
ಕರ್ತ ಶಬ್ದ ಸ್ಪರ್ಶ ರೂಪು ರಸ ಗಂಧ ಈ ಆರು ಯೋಗಾಂಗವು ಆದಿಶಕ್ತಿಯಲ್ಲಡಗಿತ್ತು.
ಷಡಕ್ಷರ :
ಓಂ ನಮಃಶಿವಾಯ

ಷಡಧ್ವ :
ಮಂತ್ರ ಪದ ವರ್ಣ ಭುವನ ತತ್ವ ಕಲಾ

ಷಡಧ್ವದುತ್ಪತ್ಯ :
ಪ್ರಣವದರ್ಪಣಾಕಾರದಲ್ಲಿ ಈಶಾನ ವಕ್ತ್ರ, ಪ್ರಣವದ ಅರ್ಧಚಂದ್ರಕದಲ್ಲಿ ತತ್ಪುರುಷವಕ್ತ್ರ, ಪ್ರಣವದ ಕುಂಡಲಾಕಾರದಲ್ಲಿ ಅಘೋರ ವಕ್ತ್ರ, ಪ್ರಣವದ ದಂಡಕ ಸ್ವರೂಪದಲ್ಲಿ ವಾಮದೇವಕ್ತ್ರ, ಪ್ರಣವದ  ತಾರಕಸ್ವರೂಪದಲ್ಲಿ ಸದ್ಯೋಜಾತವಕ್ತ್ರ, ವಚನಗಳು ೩೮೦-೩೮೮ ರ ವರೆಗೆ ನೋಡಿ

ಷಡ್ಭಾವ ವಿಕಾರಗಳು :
ಅಸ್ತಿ ಜಾಯತೆ ವಿಪರಿಣತೆ ವರ್ಧತೆ ವಿನಮಶ್ಯತೆ

ಷಡ್ವಿಧ ಕಲೆಗಳು :
ಶಾಂತ್ಯತೀತೋತ್ತರ ಶಾಂತ್ಯತೀತ ಶಾಂತಿ ವಿದ್ಯಾ ಪ್ರತಿಷ್ಠಾ ನಿವೃತ್ತಿ ಇವು  ಷಡ್ವಿಧ ಕಲೆಗಳು

ಷಡ್ವಿಧ ದ್ರವ್ಯ :
ಗಂಧ ರಸ ರೂಪು ಸ್ಪರ್ಶ ಶಬ್ದ ತೃಪ್ತಿ

ಷಡ್ವಿಧ ದೇವತೆಗಳು :
ಆತ್ಮ ಸದಾಶಿವ ಈಶ್ವರ ರುದ್ರ ವಿಷ್ಣು ಬ್ರಹ್ಮ

ಷಡ್ವಿಧ ಪರಿಣಾಮ :
ಪರಿಣಾಮ ಶಬ್ದ ಸ್ಪರ್ಶ ರೂಪ ರಸ ಗಂಧ

ಷಡ್ವಿಧ ಭಕ್ತಿ :
ಸಮರಸಭಕ್ತಿ ಆನಂದಭಕ್ತಿ ಅನುಭಾವಭಕ್ತಿ ಅವಧಾನಭಕ್ತಿ ನೈಷ್ಠಿಕಾಭಕ್ತಿ ಸದ್ಭಕ್ತಿ

ಷ್ವಡಿಧ ಭೂತ :
ಅ) ಪೃಥ್ವಿ ಅಪ್ಪು ಅಗ್ನಿ ವಾಯು ಆಕಾಶ ಮನಸ್ಸು
ಬ) ಪೃಥ್ವಿ ಅಪ್ಪು ಅಗ್ನಿ ವಾಯು ಆಕಾಶ ಆತ್ಮ

ಷಡ್ವಿಧ ಮುಖಗಳು :
೧) ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ ನಿರ್ಭಾವ
೨) ಪಂಚಜ್ಞಾನೇಂದ್ರಿಯ ಮತ್ತು ಮನಸ್ಸು

ಷಡ್ವಿಧ ಲಿಂಗ :
ಮಹಾಲಿಂಗ ಪ್ರಸಾದಲಿಂಗ ಜಂಗಮಲಿಂಗ ಶಿವಲಿಂಗ ಗುರುಲಿಂಗ ಆಚಾರಲಿಂಗ

ಷಡ್ವಿಧ ಸಾದಾಖ್ಯ :
ಮಹಾಸಾದಾಖ್ಯ ಶಿವಸಾದಾಖ್ಯ ಅಮೂರ್ತಸಾದಾಖ್ಯ ಮೂರ್ತಸಾದಾಖ್ಯ ಕರ್ತೃಸಾದಾಖ್ಯ ಕರ್ಮಸಾದಾಖ್ಯ

ಷಡ್ವಿಧ ಹಸ್ತ :
೧) ಭಾವಹಸ್ತ ಜ್ಞಾನಹಸ್ತ ಸುಮನಹಸ್ತ ನಿರಹಂಕಾರಹಸ್ತ ಸುಬುದ್ಧಿಹಸ್ತ ಸುಚಿತ್ತಹಸ್ತ
೨) ಷಡ್ವಿಧ ಜ್ಞಾನೇಂದ್ರಿಯಗಳೇ ಷಡ್ವಿಧ ಹಸ್ತಗಳು

ಷಡೂರ್ಮಿಗಳು :
ಕ್ಷುತ ಪಿಪಾಸೆ ಶೋಕ ಮೋಹ ಜನನ ಮರಣ


ಸದಾಶಿವ ತತ್ವಗಳು :
ಅಷ್ಟತನುಗಳು

ಸಹಜನಿರಾಲಂಬ :
ಊರ್ಧ್ವಶೂನ್ಯ ಮಧ್ಯಶೂನ್ಯ ಸರ್ವಶೂನ್ಯವಾದ ತತ್ವ

ಸಪ್ತಕುಲಪರ್ವತ :
ಮಲಯ ಶಕ್ತಿ ವಿಂದ್ಯ ಮಹೇಂದ್ರ ಋಷು ಸಹ್ಯ ರಜತ

ಸಪ್ತಧಾತುಗಳು :
ರಸ ರುಧಿರ ಮಾಂಸ ಮೇಧಸ್ಸು ಅಸ್ತಿ ಮಜ್ಜೆ ಶುಕ್ಲ

ಸಪ್ತದ್ವೀಪಗಳು :
ಜಂಬು ಲಕ್ಷ ಕುಶ ಶಾಖ ಶಾಲ್ಮಲೀ ಪುಷ್ಕರ ಕ್ರೌಂಚ

ಸಪ್ತವ್ಯಸನ :
ತನುವ್ಯಸನ ಮನವ್ಯಸನ ರಾಜ್ಯವ್ಯಸನ ವಿಶ್ವವ್ಯಸನ ಉತ್ಸಾಹವ್ಯಸನ ಸೇವಕವ್ಯಸನ

ಹಂಸತ್ರಯ :
ಜೀವಹಂಸ ಪರಮಹಂಸ ಪರಾಪರಹಂಸ