ಕೆರೆಗೋಗುವಾಗ ಕ್ಯಾದಿಗಾಲ್ಲ್ಯಾಡಾವೇ
ಕೆರೆಗೋಗಿ ಗುಡಿಗೇ ಬರುವಾಗ | ಪಾಲಯ್ಯ ನಿಮ್ಮ
ತಡದಾ ಮಳಿಯಾಂಗೇ ಬೆವೂತಾನೆ ||ತಾನೆಂತಾ ಚೆಲುವಾ||

ಅಣ್ಣಯ್ಯ ಬರುವಾಗ ಇನ್ನ್ಯಾರೂ ನಡಿಗಾರೆ
ಸಣ್ಣ ನನ್ನೀವಾಳಾ ದೊರೆಗಾಳು | ಮನಿಯಾಗೆ
ಹೊನ್ನಿನ ಕರುಗನ ನಡೀದಾವೆ ||ತಾನೆಂತಾ ಚೆಲುವಾ||

ಅಪ್ಪಯ್ಯ ಬರುವಾಗ ಮತ್ತಾರೂ ನಡಿಗಾರೆ
ಸಿಕ್ಕ ನನ್ನೀವಾಳ ದೊರೆಗಾಳೂ | ಮನಿಯಾಗೆ
ಮುತ್ತಿನ ಕರುಗನ ನಡೀಗಾವೆ ||ತಾನೆಂತಾ ಚೆಲುವಾ||

ಆನೆಗಳೂ ಉರಿಮೆಗಳೂ ಸಾಲಿಟ್ಟು ಬರುವಾಗ
ಗಿಂಡಿಯ ಹುಡುಗಾ ಕಡಗೋಗ | ನನ್ನೀವಾಳಾ
ಅಣ್ಣಯ್ಯಗಾರೂತಿ ಬೆಳಗೇನೆ ||ತಾನೆಂತಾ ಚೆಲುವಾ||

ಸತ್ತರಿಕೆ ಸತ್ತರಿಕೆ ಸಾಲಿಟ್ಟೂ ಬರುವಾಗ
ಕತ್ತಿಯಾ ಹುಡುಗಾ ಕಡೀಗೋಗು | ನನ್ನೀವಾಳ
ಅಪ್ಪಯ್ಯಗಾರೂತಿ ಬೆಳಾಗೇನೆ ||ತಾನೆಂತಾ ಚೆಲುವಾ||

ಬಾಗುವಲ್ಲಾ ಮ್ಯಾಲೆ ಏನೇನೋ ಬರುದಾರೆ
ಬಾದ್ದೂರನೆಂಬೋ ಸಲಗೆತ್ತು | ಪಾಲಯ್ಯ ನಿಮ್ಮ
ಬಾಗಾಲಾಮ್ಯಾಲೆ ಬರೂದಾರೆ ||ತಾನೆಂತಾ ಚೆಲುವಾ||

ಕಂಬಿಯ ಮ್ಯಾಲೇ ಏನೇನೋ ಬರುದಾರೆ
ಗಂಬೀರಾನೆಂಬೋ ಸಲಗೆತ್ತು | ಪಾಲಯ್ಯ ನಿಮ್ಮ
ಕಂಬಿಯ ಮ್ಯಾಲೆ ಬರೂದಾರೆ ||ತಾನೆಂತಾ ಚೆಲುವಾ||

ಬಾಗುಲ ಮ್ಯಾಲೆ ಏನೇನೋ ಬರುದಾರೆ
ಬಾದ್ದೂರನೆಂಬೋ ಸಲಗೆತ್ತು | ಪಾಲಯ್ಯ ನಿಮ್ಮ
ಬಾಗಾಲಾಮ್ಯಾಲೆ ಬರುದಾರೆ ||ತಾನೆಂತಾ ಚೆಲುವಾ||

ಗುಡಿಯ ಸುತ್ತ ಮುತ್ತು ದಡಿಯಲ ಚ್ಚೊದುದೋರೆ
ಗುಲುಗುಂಜೆ ತಾತೆ ಮಣಿಯೋರೇ | ಬಗುತಾರೇ
ಗುಡಿಮುಂದೇ ಪರಿಸೆ ನ್ಯರೀಸ್ಯಾರೇ ||ತಾನೆಂತಾ ಚೆಲುವಾ||

ಅಣ್ಣಾನ ಪಗಿಳ್ಳಾಗೇ ಇನ್ನೋನು ಗದ್ದಲೇ
ಇನ್ನೇತ್ತಿನೋರು ಹಿರಿಯೋರು | ಬಾಟ್ಟೂರಿಗೇ
ಗಗ್ಗಾರಾಂತ ಹಿರಿಯೂರು ||ತಾನೆಂತಾ ಚೆಲುವಾ||

ಅಪ್ಪಾನಾ ಪೆಗಿಳ್ಯಾಗೆ ಇನ್ನೇನುಗದ್ದಲೇ
ಮನ್ನೇತ್ತಿನೋರು ಹಿರಿಯೋರು | ಕ್ಯಾಂದೋರಿಗೆ
ಗಗ್ಗರಾಂತ ಹಿರಿಯೂರು ||ತಾನೆಂತಾ ಚೆಲುವಾ||

ದೂಳೇ ದುಮ್ಮ ದುಮ್ಮೇ ಪಾಲಯ್ಯ
ಬಾಳೇ ನುಗ್ಗು ಮಗ್ಗೇ | ನಲ್ಲೆತ್ತು ಬರುವಾಗ
ಬೆಲ್ಲದಾ ಸಾಲಾಗಿದ್ದೆ ಬೆಲ್ಲದಾರೂತಿ ಇಡದಿದ್ದೇ ||ದುಮ್ಮಾ ದಮ್ಮೇ||

ಬೆಲ್ಲದಾರೂತಿ ಇಡದಿದ್ದೆ ಪಾಲಯ್ಯ ನಿಮ್ಮ
ನಲ್ಲತ್ತಿ ಪಗಳೀ ಹೋಗುವಾಗ
ಬೆಟ್ಟತ್ತಿ ಬರುವಾಗ ಪಟ್ಟೆ ಸಾಲಾಗಿದ್ದೆ
ಮುತ್ತಿನಾರೂತ್ತೀ ಈಡಾದಿದ್ದೆ | ಪಾಲಯ್ಯಲ ನಿಮ್ಮ
ಬಟ್ಟೆತ್ತಿ ಪಗಳೀ ಹೋಗುವಾಗ || ದೂಳೇ ದುಮ್ಮಾ ದುಮ್ಮೇ ||

ಬಾಗುತಾ ಬಂದಾವೇ ಬಾಗಿಗೊಂಬಿನೆತ್ತು
ತೂಗುತಾ ಬಂದಾವೇ ಯಾಳೀಹೋರೀ | ಪಾಲಯ್ಯ
ಪಾಲಯ್ಯ ನಮ್ಮ ಊಜಾದ ಮನಿಗೆ ನ್ಯಾಡೂದಾವಾ || ದೂಳೇ ದುಮ್ಮಾ ದುಮ್ಮೇ ||

ತಗ್ಗೂತಾ ಬಂದಾವೇ ನುಗ್ಗಿ ಗೊಂಬಿನೆತ್ತು
ನುಗ್ಗುತಾ ಬಂದಾವೇ ಯಾಳೀಹೋರೀ | ಪಾಲಯ್ಯ
ನಿಮ್ಮ ಉಗ್ರಾಣದ ಮನಿಗೆ ನ್ಯಾಡುದಾವಾ || ಧೂಳೀ ದುಮ್ಮಾ ದುಮ್ಮೇ ||

ಅಪ್ಪನಾ ಪಗಿಳಾಗೆ ಒಪ್ಪದ ಗಿರಿತಂಕಾ
ಸಾಲಗಿನ್ನಿತಂಕಾ ಸ್ವಾಮಿ ಪಾಲಯ್ಯನ | ಗುಡಿತಂಕಾ
ಎತ್ತಿನೂರು ಬಾಲಮತಯಾಗ ನಾಡಿಸ್ಯಾರೆ || ಧೂಳೀ ದುಮ್ಮಾ ದುಮ್ಮೇ ||

ಸಾಲೂ ಬೇತಂಕಾ ಸಾಲು ದೇವಿತಂಕಾ
ಸ್ವಾಮಿ ಪಾಲಯ್ಯನ ಗೂಡಿತಂಕಾ | ಎತ್ತಿನೂರು
ಪುತ್ರಮತಿಯಾಗ ನಾಡಿಸ್ಯಾರಾ || ಧೂಳೀ ದುಮ್ಮಾ ದುಮ್ಮೇ ||

ಅಣ್ಣನಾ ಪಗಿಳ್ಯಾಗೇ ಬಣ್ಣದಾ ಪಗಿಳ್ಯಾಗೇ
ವಾಲಾಡಿ ಬೆಳವಾ ಎಳೀಬೇವೂ | ಮರದಡಿಯ
ಆಡಿ ಪಾಪಯ್ಯ ಕಾರುದಾನೆ || ಧೂಳೀ ದುಮ್ಮಾ ದುಮ್ಮೇ ||

ಅಪ್ಪಾನ ಪಗಿಳ್ಳಾಗೆ ಒಪ್ಪಾದ ಪಗಿಳ್ಯಾಗೇ
ಒತ್ತ್ಯಾಡಿ ಬೇಳವೋ ಎಳಿ ಬೇವು | ಮರದಡಿಯ
ಎತ್ತಿ ಪಾಪಯ್ಯನಾ ಕರುದಾನೇ || ಧೂಳೀ ದುಮ್ಮಾ ದುಮ್ಮೇ ||

ಗಂಟೆ ಮಾತಾಡುತಾವೇ ಪಾಲಯ್ಯ ನಿಮ್ಮ
ಗಿಡಯಾಗೆ ಸುಂಕೆ ಬೋರಾಡುತಾವೇ

ಬಾಗಿಲ ಕಟ್ಟಿದಯ್ಯಾಗೆ ಬಾಳೆಹಣ್ಣು ಕೊಡಿವೇ
ಮ್ಯಾಲೇ ಜೋಳಿಗೆ ಹಣ ಕೊಡುವೇ || ಪಾಪಯ್ಯ ||
ಬಾಗಿಲ ಕಟ್ಟಿದಾ ಬಾಡಗೀಗೆ || ಗಂಟೆ ಮಾತಾಡುತಾವೆ ||

ಹೊಸ್ತಿಲ ಕಟ್ಟಿದಯ್ಯಾಗೇ ಉತ್ತಾತ್ತಣ್ಣಾ ಕೊಡುವೇ
ಮತ್ತೆ ಜೋಳಿಗೆ ಹನಾ ಕೊಡುವೇ | ಪಾಪಯ್ಯ
ಹೊಸ್ತಲ ಕಟ್ಟಿದಾ ಬಾಡಗೀಗೆ || ಗಂಟೆ ಮಾತಾಡುತಾವೆ ||

ಹೂವ ಇಲ್ಲ ಒಂದೂ ಹೂವಿಗೋಗೊದೀರೂ
ಹೂವಾ ಪಾಲಯ್ಯನ ಗುಡಿ ಹಿಂದೆ | ಸೂರ್ಯಕಾಂತಿ
ಹೂವರಳಿ ಬಾಯಿ ಬೀಡುತಾವೇ || ಗಂಟೆ ಮಾತಾಡುತಾವೆ ||

ಮಗ್ಗೆ ಇಲ್ಲವೊಂದು ಮಗ್ಗಿಗೋಗಲುದೀರು
ಮಗ್ಗೆ ಪಾಲಯ್ಯನ ಗುಡಿ ಹಿಂದೆ | ಸೂರ್ಯೆಕಾಂತಿ
ಮೊಗ್ಗರಳಿ ಬಾಯಿ ಬೀಡುತಾವೆ || ಗಂಟೆ ಮಾತಾಡುತಾವೆ ||

ಅಲ್ಲಿ ಇಲ್ಲೀ ಹೂವ್ವಾ ವಲ್ಲಾನೇ ಪಾಲಯ್ಯ
ಅಲ್ಲಿ ನನ್ನಿವಾಳಾ ಅಳಿಗೇಲಿ | ಕಲ್ಲೇದುವ್ವು
ಮಲ್ಲಿಗೆ ಸರವೊಂದೇ ಮೂಡುದಾನೆ || ಗಂಟೆ ಮಾತಾಡುತಾವೆ ||

ಅತ್ತಲಿತ್ತಾಲುವ್ವ ವಪ್ಪಾನೆ ಪಾಲಯ್ಯ
ಸಿಕ್ಕ ನನ್ನೀವಾಳಾ ಅಳಿಗೇಲಿ | ಕಲ್ಲೇದುವ್ವು
ಮುತ್ತಿನ ಸರವೊದೇ ಮಾಡುದಾನೆ || ಗಂಟೆ ಮಾತಾಡುತಾವೆ ||

ಪೂಜಾರಿ ತಂದಾ ಹೂವು ಪೂಜೆಗೆ ಸಾರವೊಂದು
ಸ್ವಾಮಿ ಪಾಲಯ್ಯ ಮನಮುನುದೆ | ಪಾಲಯ್ಯ
ಹೋಗಿ ವೊಂಬಾಳೆ ಕಾಡಿಸ್ಯಾನೆ || ಗಂಟೆ ಮಾತಾಡುತಾವೆ ||

ಒಕ್ಕಲು ತಂದಾ ಹೂವೂ ಪಕ್ಕಿಗೆ ಸಾಲಾವೊಂದು
ಅಪ್ಪ ಪಾಲಯ್ಯ ಮನಮುನುದೆ | ಪಾಲಯ್ಯ
ಹೊಕ್ಕಿ ವೊಂಬಾಳೆ ಕಾಡಿಸ್ಯಾನೆ || ಗಂಟೆ ಮಾತಾಡುತಾವೆ ||

ಪೂಜಾರಿ ತಂದಾ ಹೂವೂ ಪೂಜೆಗೆ ಸಾಲವೊಂದು
ಸ್ವಾಮಿ ಪಾಲಯ್ಯ ಮನಮುನಿದೆ | ಪಾಲಯ್ಯ
ಹೊಕ್ಕಿ ಹೊಂಬಾಳಿ ಕಡಿಸ್ಯಾನೇ || ಗಂಟೆ ಮಾತಾಡುತಾವೆ ||

ದಾಸೀವಾಳದುವ್ವಾ ಬಾಸಿ ಮಟ್ಟೀಕಟ್ಟಿ
ದಾಸಾರ ಕೂಟೆ ಕಳಿವೇನೇ | ನನ್ನೀವಾಳಾ
ಸ್ವಾಮಿ ಪಾಲಯ್ಯ ಊಲಪೀಗೆ || ಗಂಟೆ ಮಾತಾಡುತಾವೆ ||

ಮದ್ಯನದಾ ಮಲ್ಲಿಗೆ ಬಾಸಿ ಮಟ್ಟೀಕಟ್ಟಿ
ಸಂಪನ್ನರ ಕಾಟೇ ಕಾಳುವೇನೇ | ನನ್ನಿವಾಳಾ
ಸಾಮ್ಮಿ ಪಾಲಯ್ಯನ ಊಲಪೀಗೆ || ಗಂಟೆ ಮಾತಾಡುತಾವೆ ||

ಗಂಧಗಂಧದ ನಾತ ಗಂಧದ ಹೂಗಿನಾತ
ಗಂದದೆಣ್ಣೇಲಿ ನ್ಯಾಲುಗಾರೆ ಮಾಡ್ಯಾರೆ | ತಂದೆ
ಪಾಲಯ್ಯನ ಗುಡಿಯಾಗೇ || ಗಂಟೆ ಮಾತಾಡುತಾವೆ ||

ಧೂಪ ಧೂಪದ ನಾತ ಧೂಪದ ಹೊಗಿನಾತ
ಧೂಪದ ಎಣ್ಣೆಲಿ ನ್ಯಾಲುಗಾರೆ ಮಾಡ್ಯಾರೆ | ಸ್ವಾಮಿ
ಪಾಲಯ್ಯನ ಗೂಡಿಯಾಗೇ || ಗಂಟೆ ಮಾತಾಡುತಾವೆ ||

ಧೂಪದ ವಗಿ ಹೋಗಿ ಆಕಾಸಕ್ಕೆ ಮುಟ್ಟ್ಯಾವೆ
ಸ್ವಾಮಿ ಪಾಲಯ್ಯ ಶಿವಪೂಜೆ | ಕೂಡವತ್ತಿಗೆ
ಆಕಾಶದ ಗಂಟೆ ಢಣಾಲೊಂದೇ || ಗಂಟೆ ಮಾತಾಡುತಾವೆ ||

ಗಂಧದ ವೂಗಿ ಹೋಗಿ ಅಂಬಾರಕ ಮುಟ್ಟ್ಯಾವೆ
ತಂದೆ ಪಾಲಯ್ಯ ಶಿವಪೂಜೆ | ಕೊಡವತ್ತೀಗೆ
ಅಂಬಾರದ ಗಂಟೆ ಢಣಾಲೊಂದೇ || ಗಂಟೆ ಮಾತಾಡುತಾವೆ ||

ಮದ್ದರಾಕೂಟೆ ಕಳಿವ್ಯಾನೆ ನನ್ನೀವಾಳಾ
ಸ್ವಾಮಿ ಪಾಲಯ್ಯಗೆ ಉಲುಪಿಗೆ | ಮದ್ದನದ
ಮಲ್ಲಿಗೆ ನಿಂತು ಮಟ್ಟೆದಟ್ಟಿ || ಗಂಟೆ ಮಾತಾಡುತಾವೆ ||

ಕಟ್ಟೆಮೇಲೋಗುತಾ ಹುತ್ತುಗಳೂ ನೋಡುತಾ
ಒಪ್ಪಕೊಂದೆಜ್ಜೆ ನೆಡುವೊತಾ | ಪಾಲಯ್ಯ
ಅಪ್ಪಗೆ ಹೂವೂ ಕೊಯ್ದಾನೇ || ಗಂಟೆ ಮಾತಾಡುತಾವೆ ||

ಏರಿಮ್ಯಾಲೋಗುತಾ ಎಳ್ಳ್ಯೇವು ನೋಡುತಾ
ಜಾವಕೊಂದೆಜ್ಜೆ ನೇಡವೂತಾ | ಪಾಪಯ್ಯ
ಸ್ವಾಮಿಗೆ ಹೂವು ಕೊಯ್ದಾನೆ || ಗಂಟೆ ಮಾತಾಡುತಾವೆ ||

ಆಯಾವುಳ್ಳ ತ್ವಾಟಕ್ಕೆ ಚಂದವುಳ್ಳಳ್ಳೇಣಿ ಹಾಕಿ
ಸಾದಿನಚ್ಚಾಡ ಮುಡಾಲೊಡ್ಡಿ | ಪಾಪಯ್ಯ
ಸ್ವಾಮಿಗೆ ಹುವೂ ಕೊಯ್ದಾನೆ || ಗಂಟೆ ಮಾತಾಡುತಾವೆ ||

ಅಂದವುಳ್ಳಾ ತ್ವಾಟಕ್ಕೆ ಸಂದವುಳ್ಳೇಣೀ ಹಾಕಿ
ಗಂಜಿನ ಅಚ್ಚಾಡ ಮುಡಾಲೊಡ್ಡಿ | ಪಾಪಯ್ಯ
ಸ್ವಾಮಿಗೇ ಹೂವೂ ಕೊಯ್ದಾನೆ || ಗಂಟೆ ಮಾತಾಡುತಾವೆ ||

ರಾಗಿ ರಾಗಿ ಪೂಜೆ ರಾಗಿ ರನ್ನದ ಪೂಜೆ
ರಾಯರು ಕಟ್ಟಿಸಿದ ವಸಪೂಜೆ | ಪಾಲಯ್ಯ
ರಾಯರಿನ್ನೆಂತಾ ದಾನೀಕೋರೇ || ಗಂಟೆ ಮಾತಾಡುತಾವೆ ||

ಅಕ್ಕಿ ಅಕ್ಕಿ ಪೂಜಿ ಅಕ್ಕಿ ರನ್ನದ ಪೂಜಿ
ಒಕ್ಕಲು ಕಟ್ಟಿಸಿದ ವಸಪೂಜಿ | ಪಾಲಯ್ಯ
ಒಕ್ಕಲಿನ್ನೆಂತಾ ದನಿಕೋರೇ || ಗಂಟೆ ಮಾತಾಡುತಾವೆ ||

ಎಲಿಯ ಪೂಜೆಯ ಮಾಡಿ ಬೊಳ್ಳೆರಡು ನೊಂದಾವೆ
ಸಣ್ಣನ ಪೂಜಾರಿ ಸ್ಯಾದಿರಾನೇ | ಪಾಪಯ್ಯ
ಹೋಗಿ ತೂಗ್ಯಾನೆ ಶೀವುಗಂಟೆ || ಗಂಟೆ ಮಾತಾಡುತಾವೆ ||

ಅಕ್ಕಿ ಪೂಜೆಯ ಮಾಡಿ ಬೊಟ್ಟೆರಡು ನೊಂದಾವೇ
ಸಿಕ್ಕನು ಪೂಜಾರಿ ಸ್ಯಾದಿರಾನೆ | ಪಾಪಯ್ಯ
ಒಕ್ಕಿ ತೂಗ್ಯಾನೆ ವಸುಗಂಟೆ || ಗಂಟೆ ಮಾತಾಡುತಾವೆ ||

ಒಡಿಯಾ ಟೆಂಗಿನ ಕಾಯಿ ಇಡಿಯ ಟೆಂಗಿನಕಾಯಿ
ಬಡುವಾರು ತಂದ ಎಳಿಗಾಯಿ | ಪಾಪಯ್ಯ
ತೋಳೆ ಈಡಾಡಿ ವಾಡುದಾನೆ || ಗಂಟೆ ಮಾತಾಡುತಾವೆ ||

ಇಡಿಯಾ ಟೆಂಗಿನಕಾಯಿ ಒಡಿಯಾ ಟೆಂಗಿನಕಾಯಿ
ವಕ್ಕಾಲು ತಂದಾ ವಾಸುಕಾಯಿ | ಪಾಪಯ್ಯ
ರಟ್ಟೆ ಈಡಾಡಿ ವಾಡುದಾನೆ || ಗಂಟೆ ಮಾತಾಡುತಾವೆ ||

ಗಂಡಾದ ಭೂಸುಕ್ರ ಇನ್ನ್ಯಾರಿಗೆ ಸಲ್ಲೋದೆ
ಇನಕೊಸ್ತುರೂರಾ ಮಗನು | ಪಾಲಯ್ಯಗೆ
ಸಿನ್ನದ ಭೂಸುಕ್ರ ಸೋಲ್ಲಬೋದೆ || ಗಂಟೆ ಮಾತಾಡುತಾವೆ ||

ಮುತ್ತೀನ ಗದ್ದುಗೆ ಮತ್ತ್ಯಾರಿಗೆ ಸಲ್ಲೋದೆ
ಮುತ್ತೇತ್ತಿನೋರ ಮಗನು | ಪಾಲಯ್ಯಗೆ
ಮುತ್ತಿನ ಗದ್ದಿಗೆ ಸಲ್ಲುವೋದೆ || ಗಂಟೆ ಮಾತಾಡುತಾವೆ ||

ಎಲ್ಲಿಂದ ಬಂದಾರೆ ಮಲ್ಲಿಗೆ ಮುಡಿದಾಸಾರು
ನೆಲ್ಲಕ್ಕಿನಂಗೀ ಸೂಲವುಲ್ಲು | ದಾಸಾರು
ಎಲ್ಲಿಂದ ಗಿರಿಗೇ ಈಳುದಾರೆ || ಗಂಟೆ ಮಾತಾಡುತಾವೆ ||

ಎತ್ತ್ಲಿಂದ ಬಂದಾರೆ ಮುತ್ತಿನ ಮುಡಿ ದಾಸಾರು
ಕೊಚ್ಚಿಕ್ಕಿ ನಂಗೇ ಸೊಲವುಲ್ಲು | ದಾಸಾರು
ಎತ್ತ್ಲಿಂದ ಗಿರಿಗೆ ಈಳುದಾರೆ || ಗಂಟೆ ಮಾತಾಡುತಾವೆ ||

ಅಣ್ಣಾ ನಿಮ್ಮ ದಾಸಾರು ಎಣ್ಣೆಬಾನಾ ಉಂಡು
ಸಣ್ಣ ಬೂತಾಳ ಕೈಯಲ್ಲಿಡುದೇ | ಮೂಡುನಾಡ
ಅಣ್ಣಗಾಡಾರೇ ಆರಿಸ್ಯಾವೇ || ಗಂಟೆ ಮಾತಾಡುತಾವೆ ||

ಅಕ್ಕಾ ನಿಮ್ಮ ದಾಸಾರು ತುಪ್ಪಾಬಾನಾ ಉಂಡು
ಸಿಕ್ಕ ಬೂತಾಳ ಕೈಯಲ್ಲಿಡದು | ಮೂಡನಾಡ
ಅಪ್ಪಾಗಾಡಾರೇ ಆರಿಸ್ಯಾವೇ || ಗಂಟೆ ಮಾತಾಡುತಾವೆ ||

ಎಲ್ಲಿಂದ ಬಂದಾರೆ ಮಲ್ಲಿಗೆ ಮುಡಿದಾಸಾರು
ನೆಲ್ಲಕ್ಕಿನಂಗೇ ಸೂಲವುಲ್ಲು | ದಾಸಾರು
ಎಲ್ಲಿಂದ ಗಿರಿಗೆ ಈಳುದಾರೆ || ಗಂಟೆ ಮಾತಾಡುತಾವೆ ||

ಎಲ್ಲೆಂದ ಬಂದಾರೆ ಮುತ್ತಿನ ಮುಡಿದಾಸಾರು
ಕೊಚ್ಚಕ್ಕಿನಂಗೇ ಸೂಲವಲ್ಲದ | ದಾಸರು
ಎಲ್ಲೆಂದ ಗಿರಿಗೇ ಈಳುದಾರೆ || ಗಂಟೆ ಮಾತಾಡುತಾವೆ ||

ಆಲಾದ ಎಲಿ ಹಾಸಿ ನೀಡ್ಯಾರೇ ಬೆಲ್ಲಾವು
ಹನ್ನೊಂದು ಆಲಾದ ಸಸಿನೆಟ್ಟೀ | ಪಾಲಯ್ಯ
ಸಣ್ಣ ದಾಸರಿಗೆ ನ್ಯಾರುಳಾಗೆ || ಗಂಟೆ ಮಾತಾಡುತಾವೆ ||

ಎಕ್ಕಿಯ ಎಲಿ ಹಾಸಿ ಇಕ್ಕ್ಯಾರೇ ಬೆಲ್ಲಾವು
ಇಪ್ಪತ್ತು ಆಲಾದ ಸಸಿನೆಟ್ಟೀ | ಪಾಲಯ್ಯ
ಸಿಕ್ಕದಾಸರಿಗೇ ನ್ಯಾರುಳಾಗೆ || ಗಂಟೆ ಮಾತಾಡುತಾವೆ

ಹೊನ್ನಿನಾ ಉರುಮೆ ಇನ್ನೆಲ್ಲಿ ವೈಸಾರೆ
ಸಣ್ಣ ನನ್ನೀವಾಳಾ ಬಾಯಿಲಾಗೇ | ಪಾಲಯ್ಯ
ಹೊನ್ನಕೊಟ್ಟೆ ಉರಿಮೆ ವೋಯಿಸಾವೆ || ಗಂಟೆ ಮಾತಾಡುತಾವೆ ||

ಮುತ್ತೆನಾ ಉರಿಮೆ ಮತ್ತೆಲ್ಲಿ ವೈಸಾರೆ
ಸಿಕ್ಕ ನನ್ನೀವಾಳಾ ಬಾಯಿಲಾಗೆ | ಪಾಲಯ್ಯ
ಮುತ್ತು ಕೊಟ್ಟೆ ಡಗಮು ವೋಯಿಸಾವೆ || ಗಂಟೆ ಮಾತಾಡುತಾವೆ ||

ತ್ವಾಟ ಸುತ್ತಾ ಮುತ್ತಾ ಯಾಕಮ್ಮ ಕೈಪಂಜು
ದೊರಿಯೆ ಪಾಲಯ್ಯ ವಾರಹೊಂಟು | ಮುಂದಾಗಿ
ದೊರಿಗಳ ಶಾಲಾಮು ಕೊಡಿರಮ್ಮ || ಗಂಟೆ ಮಾತಾಡುತಾವೆ ||

ತಾಯಿ ನನ್ನೀವಾಳಾ ಹೊಗಿ ನೋಡನು ಬನ್ನಿ
ಕಾಗಿಯ ಎದುರೆ ದಾಣಲೊಂದೆ | ಕ್ವಾಟಿಯ
ಸಣ್ಣನ ಪಾಲಯ್ಯ ವಾರಿಹೊಂಟು || ಗಂಟೆ ಮಾತಾಡುತಾವೆ ||

ಮುಂದಾಗಿ ದೊಡ್ಡರ ಶಾಲಾಮು ಕೊಡುತಾವೆ
ಅಕ್ಕಾ ನನ್ನೀವಾಳಾ ವೊಕ್ಕಿನೋಡಲು ಬನ್ನಿ
ಅಕ್ಕಿ ಆರಿದುರೆ ದಾಣಲೊಂದೆ | ಕ್ವಾಟಿಯಾ
ಸಿಕ್ಕನು ಪಾಲಯ್ಯ ವಾರಿಹೊಂಟು || ಗಂಟೆ ಮಾತಾಡುತಾವೆ ||

ಸಣ್ಣ ಸಣ್ಣ ಪದವಾ ಸಣ್ಣ ಭರಣಿಗೇ ತುಂಬೀ
ಸಣ್ಣ ಮುದ್ದೂರಿ ಬಿಗದತ್ತಿ | ಪಾಲಯ್ಯ
ಸಣ್ಣನಿಗರ್ಪಿಸಿದ ಪಾದನೂರು || ಗಂಟೆ ಮಾತಾಡುತಾವೆ ||

ದೊಡ್ಡ ದೊಡ್ಡ ಪದವಾ ದೊಡ್ಡ ಬರಣಿಗೆ ತುಂಬೀ
ದೊಡ್ಡ ಮುದ್ದೂರಿ ಬೀಗದತ್ತಿ | ಪಾಲಯ್ಯ
ದೊಡ್ಡನಿಗರ್ಪಿಸಿದ ಪಾದನೂರು || ಗಂಟೆ ಮಾತಾಡುತಾವೆ ||

ಅಣ್ಣಾ ನಿಮ್ಮ ಹಾಡೀವಿ ಅಣ್ಣ ನಿಮ್ಮ ಪಾಡೀವಿ
ಅಣ್ಣಾ ನಿಮ್ಮ ನಿದ್ರೆ ಕಾಳದೀವಿ | ಪಾಲಯ್ಯ
ಬಣ್ಣದ ಮಂಚುದಲೇ ಪಾವಡಿಸೆ || ಗಂಟೆ ಮಾತಾಡುತಾವೆ ||

ಅಪ್ಪಾ ನಿಮ್ಮಾಡಿವಿ ಅಪ್ಪಾನಿಂಪಾಡೀವಿ
ಅಪ್ಪಾ ನಿಮ್ಮ ನಿದ್ರೆ ಕಾಳದೀವಿ | ಪಾಲಯ್ಯ
ಪಟ್ಟೆ ಮಂಚದಲೀ ಪಾವಡೀಸೆ || ಗಂಟೆ ಮಾತಾಡುತಾವೆ ||

ಬಾಗೀರೀ ಬಾಗೀರೀ ಬಾಗಿ ಶರಣೆನ್ನಿರಿ
ಬಾಗಲಾಗೆ ಇರುವ ಒಡಿಯಾಗೆ | ಪಾಲಯ್ಯಗೆ
ಬಾಲೆಯರಾರುತಿ ತುಂಬಿಟ್ಟೀರಿ ||

ಜಯನೆನ್ನಿರೀ ಜಯ ಮಂಗಳೆನ್ನೀರಿ
ಜಯನೆನ್ನಿರೀ ಒಯ ಮಂಗಳೆನ್ನೀರಿ
ಬಗ್ಗಿರಿ ಬಗ್ಗಿರಿ ಬಗ್ಗಿ ಶರಣೆನ್ನಿರಿ
ಮಗ್ಗುಲಾಗ ಇರುವ ಒಡಿಯಾಗೆ | ಪಾಲಯ್ಯ
ಬದ್ರೇರಾರುತಿ ತಂದಿತ್ತೇರಿ || ಜಯ ವೆನ್ನಿರಿ ||

ಹಾಲುದಿರಸ ಸೆಂದಾ ನಿಲುದ್ದಿರಿಸೇವಾ
ಬಾಲದಲ್ಲಿ ಚಲುವ ಬಸವಯ್ಯನ | ಪಾದಕೆ
ಯಾಮವಂತರು ಬಂತು ಶರಣೆಂದರು || ಜಯ ವೆನ್ನಿರಿ ||

ಇಂಬು ಕಣಸಾ ಶಂಭುಲಿಂಗ ಮುದ್ದರಿಸೆಂದಾ
ಕೊಂಬಿನಲ್ಲಿ ಚಲುವಾ ಬಸವಯ್ಯ | ಪಾದಕೆ
ಲಿಂಗಾವಂತರು ಬಂದು ಶರಣೆಂದರು || ಜಯ ವೆನ್ನಿರಿ ||

ಹಸಿ ಅಡಿಕೆ ಗೊನೆಯಂತೆ ಎಸಳು ಕ್ಯಾದಿಗೆಂತೀ
ಹೊಸ ಮುತ್ತಿನಾಗಳರುಳಂತೆ | ಪಾಲಯ್ಯಗೆ
ಸಸಿಗಳಾರುತಿ ತಂದಿಕ್ಕೀರಿ || ಜಯ ವೆನ್ನಿರಿ ||

ಹಣ್ಣಡಕಿ ಗೊನೆಯಂತೆ ಸಣ್ಣಕ್ಯಾದಿಗಾಂತೆ
ಸಣ್ಣ ಮುತ್ತಿನಗಳರುಳಂತೆ | ಪಾಲಯ್ಯಗೆ
ಹೆಣ್ಣುಮಕ್ಕಳಾರುತಿ ತಂದಿಕ್ಕೆರೀ || ಜಯ ವೆನ್ನಿರಿ ||

ಕಾಲು ಗಗ್ಗುರಿ ಸೆಂದಾ ನಿಲು ಮುದ್ದರಿ ಸೆಂದಾ
ಬಾಲದಲೀ ಚಲುವ ಬಸಯ್ಯನೋರು | ಪಾದಕೆ
ಯಾಮವಂತರು ಬಂದು ಶರಣೆಂದರೆ || ಜಯ ವೆನ್ನಿರಿ ||

ಅಣ್ಣಾನ ಗುಡಿ ಮುಂಚೆ ಹೆಣ್ಣುಳ್ಳ ಜಾರಿಕೆ
ಕನ್ನೆರು ಧರೆಗೆ ಮುದರಿಡಿ | ಕೈಯಾಗಾಳ
ಹೊನ್ನೀನಾರುತಿ ಈಜಾತುನಾವೆ || ಜಯ ವೆನ್ನಿರಿ ||

ಅಪ್ಪಾನ ಗುಡಿ ಮುಂದೆ ತುಪ್ಪುಳ್ಳ ಜಾರಿಕೆ
ನಿಸ್ತ್ರೇರು ನರೀಗೆ ಮುದರುಡೀರೆ | ಕೈಯಾಗಳಾ
ಮುತ್ತಿನಾರುತಿ ಈಜಾತುನಾವೇ || ಜಯ ವೆನ್ನಿರಿ ||

ತಾಲೀಯ ತಕ್ಕೊಂಡು ಹಾಲೀಗೆ ನಾನೋದೆ
ಅಲಿನಾಗಾಳಾವು ಮಲಿಗಿದ್ದಾವೆ | ಈವೂರು
ನಿಂತಾರೆ ಸ್ವಾಮಿ ಶಿವಪೂಜೆಗೆ || ಜಯ ವೆನ್ನಿರಿ ||

ಬಿಂದಿಗಿಯ ತಕ್ಕೊಂಡು ಗಂಗೆಗೆ ನಾನೋದೇ
ಗಂಗಾನ್ಯಾಗೊಳಮೀನು ಮಲಗಿದ್ದಾವಾ | ಈವೂರು
ನಿಂತಾರೆ ಸ್ವಾಮಿ ಶಿವಪೂಜೆಗೆ || ಜಯ ವೆನ್ನಿರಿ ||

ಜೋಳಿಗೆ ತಕ್ಕೊಂಡು ಪತ್ರಿಗೆ ನಾನೋದೆ
ಪತ್ರಯಗಳ ಕನಡಗ ಮಲಿಗಿಡ್ಡಾವೇ | ಈವೂರು
ನಿಂತಾರೆ ಸ್ವಾಮಿ ಶಿವ ಪೂಜೆಗೆ || ಜಯ ವೆನ್ನಿರಿ ||

ಇಂಡಿಗಿನ್ನಲಸ್ವಾಮಿ ಎನ್ನಕೊ ಸಾವೇಸಿ
ಎಲ್ಲೀರಾಮಾಮಾಡಿ ತೊಪುಲಾಕೆ | ಈ ಊರು
ಪಚ್ಚಪತಿ ಪಾಪನ್ನ ನೀಕಾರುತಿ || ಜಯ ವೆನ್ನಿರಿ ||

ಬಾವಿಯ ಸುತ್ತಿಕ್ಕಿ ಬಸವನ ಕೊಂದಯ್ಯಾಗೆ
ದೀರಾ ಮೂರುತಿ ನಮ್ಮಪ್ಪಯ್ಯಗೆ | ನನ್ನೀವಾಳಾ
ನಾಗುರಗೆನ್ನಾರಾರುತಿ ತಂದಿತ್ತಾರೆ || ಜಯ ವೆನ್ನಿರಿ ||