ಪಾಲಿಕೆ ತಂದೆವೆಯ್ಯ ಪಾಪಯ್ಯ
ಪಾದಾಕೆ ಬಂದೆವಯ್ಯ
ಜಗಲೂರು ಅಂಬೊದು ಮುಗಲು ಮುತ್ತಿನ ಕ್ವಾಟಿ
ಅದುರಾಗೈದಾನೆ ಮಾನಿಗಾರ||

ಪಾಲಿಕೆ ತಂದೆವಯ್ಯ ಪಾಪಯ್ಯ
ಪಾದಕೆ ಬಂದೆವೆಯ್ಯಾ||

ಅದುರಾಗೆ ಐದಾನೆ ಮನಿಗಾರ ಪಾಪಯ್ಯ
ಗುಲಗುಂಜಿ ಗುರಿಯ ವಾಡುವೋನೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಜಗಲೂರು ಪಾಪಯ್ಯ ಬಲಂಚುಗಾರನೆ
ಕುಂತ ಕೇಳಾನೆ ಕುಡುವೊಕ್ಕು
ಪಾಲಿಕೆ ತಂದೆವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಕುಂತನೆ ಕೇಳ್ಯಾನೆ ಕುಣಿಯಾಕೆ ಸಿಳ್ಳಾಕ್ಯಾರಿ
ಮಂಚ ಬೇಡಾನೆ ಮಲಗೋಕೆ
ಪಾಲಿಕೆ ತಂದೆವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಅಕ್ಕಾನೇ ತಂಗೇರು ಸೆರಗೊಡ್ಡಿ ಬೇಡೇವೆ
ಗೆಜ್ಜಿಯ ಕಾಲು ಮಗ ಬೇಡಿ
ಪಾಲಿಕೆ ತಂದೆವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ ||

ಸ್ವಾಮವಾರ ದಿನ ಸ್ವಾಮಿ ನಮ್ಮನಿಯಾಗೆ
ಸಾರುಸುತಿದ್ದೆ ನಡುಮನೆ
ಪಾಲಿಕೆ ತಂದೆವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಸಾರುಸುತ್ತಿದ್ದ ನಡುಮನೆ ಪಾಪಯ್ಯ
ಜಾರಿಕೆ ನಂದು ತೀರಿಗೇನೆ
ಪಾಲಿಕೆ ತಂದೆವಯ್ಯಾ ಪಾಪಯ್ಯ
ಪಾದಕೆ ಬಂದೆವಯ್ಯಾ||

ಸ್ವಾಮವಾರ ದಿನ ಅವು ಸೇಳೇನ
ಯಾರಿದಿರಯ್ಯ ಗುಡಿಯಾಗೆ
ಪಾಲಿಕೆ ತಂದೆವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಯಾರು ಐದಿರಯ್ಯ ಗುಡಿಯ್ಯಾಗೆ ಪಾಪಯ್ಯ
ಆಲೆ ತಂದೀನಿ ಸೋಲಸಯ್ಯ
ಪಾಲಿಕೆ ತಂದೆವಯ್ಯೋ ಪಾಪಯ್ಯ
ಪಾದಕ್ಕೆ ಬಂದೆವಯ್ಯಾ||

ಆಲೆನೆ ತಂದಿವಿ ಕಾಯೆಲ್ಲ ಕಾಸೆಲ್ಲಿ
ನೀಸಚ್ಚಿಲಡದ ಮಾಗನೆಲ್ಲಿ
ಪಾಲಿಕೆ ತಂದೆವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ನೀವು ಸಚ್ಚಿಲಡದ ಮಗನಿಗೆ ಗದ್ದಿಗೆಮ್ಯಾಲೆ
ಬಾಲಮ್ಮನ ಮಂಡೆ ತಾಗಿಸೇವೆ
ಪಾಲಿಕೆ ತಂದೆವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಕಂಟುಕ ಬಂದೆಲ್ಲಿ ಕಾಯಾ ಜಗಲೂರು ಮಾನ್ಯ
ಮಂಟಪ ಕಟ್ಟಿಸಿದೇ ಮಾಲಿಕಿನಾ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಮಂಟುಪ ಕಟ್ಟಿಸಿದಿ ಮಲಿಕಿನಿಸ್ಯಾವಂಚಿಗೆ
ವರತೆ ಕಟ್ಟಸಿದಿ ತಿಳಿನೀರ
ಪಾಲಿಕೆ ತಂದೆವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ತುಂಬಿದ ಕೆರಿಯ್ಯಾಗೆ ಎಂಗಿದ್ದ ಪಾಪಾಯ್ಯ
ಒಂಬತ್ತು ಗೆಜ್ಜೆ ನ್ಯಾನಿಯಾವೆ
ಪಾಲಿಕೆ ತಂದೆವಯ್ಯ ಪಾಪಯ್ಯ
ಪಾದಕೆ ಬಂದೆವಯ್ಯಾ||

ಒಂಬತ್ತ ಗೆಜ್ಜೆ ನೆನಿಯ ತೆರಿಗಿನ ಮಡಗು
ಗಂಗಿಗೆ ನಮಗೆ ಏನವೊಂದೆ
ಪಾಲಿಕೆ ತಂದೆವಯ್ಯ ಪಾಪಯ್ಯ
ಪಾದಕೆ ಬಂದೆವಯ್ಯಾ||

ತುಂಬಿದ ಕೆರಿಯಾಗೆ ತೊಬಯತ್ತುರನ್ಯಾರೆ
ಗಂಗಮ್ಮ ನಡುದಾ ಮಾಗುಜಾಣ
ಪಾಲಿಕೆ ತಂದೆವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಗಂಗಮ್ಮ ನಡುದ ಮಾಗು ಜಾಣ ಪಾಪಯ್ಯ
ನಿಂಬೀಗೆ ನೀರು ತೀರಿವ್ಯಾನೆ
ಪಾಲಿಕೆ ತಂದೇವೆಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಕರಿಯ ಕೊಲ್ಲಾಗಿರುವ ಕೊರುವು ಕಾವು ಅಣ್ಣು
ನೆಲಮಾಳಿಗ್ಯಾಗೆ ಈರುವೊರೆ|
ಪಾಲಿಕೆ ತಂದೇವೆಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ನೆಲಮಾಳಿಗಾಗೆ ಇರುವ ಪಾಪಯ್ಯನ
ಬಾಗ್ಯಾವೆ ನಮ್ಮ ಬಾಲಬುಜು|
ಪಾಲಿಕೆ ತಂದೇವೆಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಒಡಿಯ ಕಾಣಿರಿ ನಮಗೆ ಒಡದು ಮೂಡಿದಯ್ಯ
ನಡುರಾಜ್ಯದಾಗೆ ಇರುವೋರೆ
ಪಾಲಿಕೆ ತಂದೇವೆಯ್ಯೋ ಪಾಪಯ್ಯ
ಪಾದಕೆ ಬಂದೇವಯ್ಯಾ||

ನಡುರಾಜ್ಯದಾಗೆ ಇರುವೋರೆ ಪಾಪಯ್ಯಗೆ
ನಡುಗುತ್ತಲೆ ಕೈಯಿ ಮುಗದೀವಿ
ಪಾಲಿಕೆ ತಂದೇವೆಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಜಗಲೂರು ಪಾಪಯ್ಯ ಜಗಳ ತಂದವನಲ್ಲ
ಒಡ್ಡಿದ ಬಿಲ್ಲು ಬಲಗೈಲಿ
ಪಾಲಿಕೆ ತಂದೇವೆಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಒಡ್ಡಿದ ಬಿಲ್ಲು ಬಲಗೈಲಿ ಸ್ವಾಮಲಬಂಡೆ
ಒಬ್ಬಿಲ್ಯಾಡಾನೆ ಜಾಗುಬೇಟೆ
ಪಾಲಿಕೆ ತಂದೇವೆಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಜಗಲೂರು ಅಂಬೋದು ಮುಗಲ ಮುತ್ತಿನ ಕ್ವಾಟೆ
ಅದುರಾಗೈದಾನೆ ಮಾನಿಗಾರ
ಪಾಲಿಕೆ ತಂದೇವೆಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಅದುರಾಗೈದಾನೆ ಮನಿಗಾರ ಪಾಪಯ್ಯ
ಗುಲಗಂಜಿ ಗುರಿಯಾ ಒಡುದಾನೆ
ಪಾಲಿಕೆ ತಂದೇವೆಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಸೂರಯ್ಯ ಪಾಪಯ್ಯ ಸೂರಾಡಿ ಬರುವಾಗ
ನೀಲಾದ ಮರುನೇ ನಡುಗ್ಯಾವೆ|
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

05_84_MDK-KUH

ನೀಲುವಾದೆ ಮರುನೆ ನುಡಿದಾವೆ ಜಗಲೂರ
ಗಾಜಿನ ಕಂಬ ಕಾದಿಲಾವೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಸುರುವ ತಪ್ಪ ಮಾಡಿ ಸ್ವಾಮಿಯ ಮರಿಬಿದ್ದೆ
ಸುರುವೊನ್ನಿನಿದಾಗೆ ಅಡಿಕೇಯ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ದೂರುವ ನೆನೆದಾಗೆ ಅಡಕೆ ಗೊನಿಯ ಮುರುದು
ಸ್ವಾಮಿ ಪಾಪಯ್ಯ ಮರಿಬಿದ್ದೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಗಿರಿಯಾಗೆ ಇರುವೊರು ಮಡಿವಾಳೆಂಬಾತಿದ್ದೆ
ಮಡಿವಾಳನಲ್ಲ ಮನಿಸ್ವಾಮಿ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಮಡಿವಾಳನಲ್ಲ ಮನಿಸ್ವಾಮಿ ಪಾಪಯ್ಯ
ಮಡಿ ಮಾಡುತಿದ್ದಾ ಜಾಡಿಗಳು
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಕಟ್ಟಿಗೆ ಇರುವೊರು ಸೆಟ್ಟಿಗೆಂಬತಿದ್ದ
ಸೆಟ್ಟಿಗನಲ್ಲ ಮನಿಸ್ವಾಮಿ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಸೆಟ್ಟಗನಲ್ಲ ಮನಿಸ್ವಾಮಿ ಪಾಪಯ್ಯ
ಗಟ್ಟುಸುತ್ತಿದ್ದ ಜಾಡಿಗಾಳು
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಕೆರಿಯಾಗೆ ಕೆಂದೂಳ ಬರಿಯಾ ನೆಗ್ಗಿಲಿ ಮುಳ್ಳು
ಬರುಲಾರನಯ್ಯ ಗಿರಿದೂರ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಬಾರೂಲಾರನೆಯ್ಯ ಗಿರಿದೂರ ನಿಮ್ಮಲಿಗೆ
ಬರುವರ ಕೂಟೆ ಕಾಳಿವೇನೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಜಗಲೂರ ಪಾಪಯ್ಯ ಹರಕೆ ಹನ್ನೆರಡೊರುಸ
ಮರೆತಿಲ್ಲವಯ್ಯ ಮನುದಾಗೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಮರೆತಿಲ್ಲವಯ್ಯ ಮನುದಾಗೆ ನಿಮ್ಮರಿಕೆ
ಬರುವೂರ ಕೊಟೇ ಕಾಳಿವೆನೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಮದ್ದ್ಯಾನಕೆ ಮಳಿ ಬಂದು ಮಜ್ಜಣ ಬಾವಿ ತುಂಬಿ
ಮಗ್ಗಿಲೊಂಬಾಳೆ ತ್ಯಾರಿಕಟ್ಟೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಮಗ್ಗೀಲಿ ವಂಬಾಳಿ ತೆರಿಕಟ್ಟಿ ಸುರೈಪಾಪ
ಮದ್ದೆನಕೆ ಪೂಜೆ ಮುಗುದಾವೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಸಂಜೆಗೆ ಮಳಿ ಬಂದು ಸೆಂದ್ರಮ್ಮನ ಕೆರಿತುಂಬಿ
ತೆಂಗಿನೊಂಬಾಳಿ ತ್ಯಾರಿಕಟ್ಟೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ತೆಂಗಿಲಿ ವಂಬಾಳಿ ತೆರಿಕೆಟ್ಟೆ ಸುರೈಪಾಪ
ಸಂಜಿಗೆ ಪೂಜೆ ಮುಗುದಾವೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಅಂದನೂರ ಮ್ಯಾಲೆ ಗಂಜೀಗಟ್ಟಿಮ್ಯಾಲೆ
ಒಂದೊಂದೆ ಹೂವ ಬೀಡಿಸೋರೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಒಂದೊಂದೆ ಹೂವ ಬಿಡಿಸು ಪಾಪಯ್ಯಗೆ
ಒಂದೊತ್ತ ಏನಾ ಶೀವನಿಗೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಸ್ವಾಮೀನೆ ಪಾಪಯ್ಯ ಕೂಗಿಯಾಗುಲವಾಗ
ಬಾಗೀಲತೋಳ ಈಡದಿದ್ದೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಬಾಗಾಲ ತೊಳ ಹಿಡಿದ ಬೇಡಿಕೊಂಡೆ
ಬಾಲಮ್ಮನ ವರವ ಪಾಡಕೊಂಡೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಆಲು ಕೊಡ ಪಾಪಯ್ಯ ನಾ ಒಪ್ಪಲಾದೇವಿ
ಆವಿನ ಮುಂದೆ ಮಗ ಬಂದು
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಆವಿನ ಮುಂದೆ ಮಗ ಬಂದು ನಿಂತಾರೆ
ಅವುಳದ ನಿದ್ದೆ ಒಯಿದೆನೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಹೆಜ್ಜೆ ಕೊಡು ಪಾಪಯ್ಯ ನಾ ಒಕ್ಕಾಲಾದೇವಿ
ಎತ್ತಿನ ಮುಂದೆ ಮಗ ಬಂದು
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಎತ್ತಿನ ಮುಂದೆ ಮಗ ಬಂದು ನಿಂತಾರೆ
ರೊಕ್ಕದ ನಿದಿಯ ಓಯಿಸೇನೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಬಾಳಿಯ ವನದಾಗೆ ಬಾಯಿ ಮಾಡೋನ್ಯರೆ
ಬಾಲ ಕಾಣಮ್ಮ ನೀಮ ಮಗ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಬಾಲನೆ ಕಾಣಮ್ಮ ನಿನ ಮಗ ಪಾಪಯ್ಯ
ಬಾಳಿಗೆ ನೀರು ತೀರಿವ್ಯಾನೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ ||

ನಿಂಬಿಯ ವನುದಾಗೆ ದೊಂಬಿ ಮಾಡವನ್ಯಾರೆ
ಕಂದ ಕಾಣಮ್ಮ ನೀನು ಮಗ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಕಂದಾನೆ ಕಾಣಮ್ಮ ನಿನ ಮಗ ಪಾಪಯ್ಯ
ನಿಂಬೀಗೆ ನೀರು ತೀರಿವ್ಯಾನೆ
ಪಾಲಿಕೆ ತಂದೇವಯ್ಯೋ ಪಾಪಯ್ಯ
ಪಾದಕೆ ಬಂದೆವಯ್ಯಾ||

ಬಿಲ್ಲಿಡುದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಎಡಗೈಲಿ ಬಾಳಿಯಣ್ಣು ಗಡಿಗೆಲಿ ಆಲು ಮೊಸರು
ಒಡಗಡ ಮೀಸಾಲು ಒರಟಾವೆ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ|

ಒಡದಾಡೆ ಮಿಸಾಲು ಒರಟು ಗೋರ್ಲುಕಟ್ಟಿ
ಒಕ್ಕ ಪಾಪಯ್ಯನ ಪಾಗಿಳ್ಯಾಕೆ| ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಜಗಲೂರು ಪಾಪಯ್ಯ ಬಡವ ನ್ನಲದಿರು
ಬಲಗಡೆಗೆ ಬಾಳಿ ವನವೈತಿ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಬಲಗಡೆಗೆ ಬಾಳಿ ವನವೈತಿ ಬೆನ್ನಿಂದೆ
ಸುರಿಬ್ರಹ್ಮನಂತ ಕ್ಯಾರಿ ಐತಿ| ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅಡಕೆಯ ಒಂಬಾಳೆ ಒಪ್ಪಿಕೊ ಪಾಪಯ್ಯ
ಮುಂದೆ ನನ ಗಮ ದೋರಿಯಾಗಿ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಮುಂದೆನೆ ನನಮಗ ದೊರಿಯಾಗಿ ಆಳಿದುರೆ
ಬೆಳ್ಳಿ ಒಂಬಾಳಿ ಕಾಳಿಸೇನೆ| ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಬಿಂದಿಗಾಲು ಕರುವ ತಂದಿಗೆ ಮೀಸಾಲು
ಅಂಜದುಲೆ ನಾನು ಬಾಳಿಸೇನೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅಂಜುದಲೆ ನಾನು ಬಳಿಸೇನೆ ಪಾಪಯ್ಯ
ಕಂಡ ತಪ್ಪುಗಳ ಕಡಿಯಾಸ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಹರಿವಿಲಿ ಆಲು ಕರುದು ಗುರುವಿಗೆ ಮೀಸಲು
ಅರಿಯದಲೆ ನಾನು ಬಾಳಿಸೇನೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅರಿದೊಲೆ ನಾನು ಬಳಸೇನೆ ಪಾಪಯ್ಯ
ಸರುವ ತಪ್ಪುಗಳು ಕಡಿಯಾಸು | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಜಗಲೂರ ಪಾಪಯ್ಯ ಏನು ಬೆಡುವನಲ್ಲ
ಗೂಡುವೆಂಟೆತ್ತು ಕರು ಎಮ್ಮಿ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಹೂಡುವ ಎಂಟೆತ್ತು ಕರುವಿನ ಮುತ್ತಿನ ಸೆಂಡು
ಗೋಲಿಲಾಡುಕೆ ಮಗ ಬೇಡೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಜಗಲೂರ ಕೇರಿ ತುಂಬಿ ಬುಗಲುಗುಟ್ಟುತಾವೆ
ಹದಿನಾರು ತೂಬೂ ತಗಿಸಾರೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅದಿನಾರು ತೂಬೂ ತಗಿಸರೆ ಸೂರೈಪಾಪ
ರಕುತದ ಕಾಲೆವು ತೀರಿವ್ಯಾರೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಸ್ವಾಮಿಯ ಮದುವಿಗೆ ಭೂಮಿಯ ಸಪ್ಪರ
ದಾಳಿಂಬರದಕೆ ಆಸೆ ಬರದು | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ದಾಳಿಯಂಬುರದಕ್ಕೆ ಆಸಿ ಬರದು ಪಾಪಯ್ಯ
ಗೋವಿಂದನ ಮದುವೆ ಸಾಣಿವಾರು | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಜಗಲೂರು ಪಾಪಯ್ಯ ತೋಪು ನೋಡಲೊದೆ
ಸಾಪಿಗಲ್ಲುಗಳು ಎಡವಿದೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಸಾಪೆನೆ ಗಲ್ಲುಗಳು ಎಡವಿ ನಿಂತೈದೆವೆ
ತೋರುಸುವಯ್ಯ ನಿಮ್ಮ ತೋಪು | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಜಗಲೂರು ಪಾಪಯ್ಯ ಸತ್ಯದುದಿಯ ಮುಂದೆ
ಇಪ್ಪತ್ತೆ ತಾಸು ತಾಡದೀವಿ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಇಪ್ಪತ್ತೆ ತಾಸು ತಡದು ಬೇಡಿಕೊಂಡೆ
ಮತ್ತೆಲ್ಲಿನಯ್ಯ ಬಾಡುತನ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಜಗಲೂರು ಪಾಪಯ್ಯ ಬಣ್ಣದುದಿಯ ಮುಂದೆ
ಅನ್ನೊಂದೇ ತಾಸು ತಾಡದೇವೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅನ್ನೊಂದೆ ತಾಸು ತಡದು ಬೇಡೀಕೊಂಡೆ
ಇನ್ನೆಲ್ಲಿನಯ್ಯ ಬಾಡುತನ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||