ಹತ್ತಿಯಾ ಕಾಯಂಗೆ ತೆಕ್ಕಿ ತುಂಬಾ ಗೆಜ್ಜೆ
ಒಕ್ಕುಲ ನಡುವೇ ಬರುವೋ | ಪಾಲಯ್ಯ
ಒಕ್ಕುಲಿನ್ನಂತೆ ದೋನುಕೋರೇ ||ರಾಯರಿಗೆ||

ಹಾವಿನ ಮುಂದೇ ಬರುವ ಗೇರು ಗಂಧದು ತಮ್ಮ
ಹಾವಿನ ಪಾಲಯ್ಯ ಮಗನೋ | ಕೊರಳಾಗಿರುವೋ
ಹೂವಿನ ಮಾಲೆ ನಾಮ್ಮುದಯ್ಯೋ ||ರಾಯರಿಗೆ||

ಎತ್ತಿನ ಮುಂದೇ ಬರುವೋ ಸುಕ್ಕಾ ಬಟ್ಟಿನ ತಮ್ಮ
ಎತ್ತಿನ ಪಾಲಯ್ಯ ಮಗನೋ | ಕೊರಳಾಗಿರುವೋ
ಮುತ್ತಿನ ಮಾಲೇ ನಾಮ್ಮುದಯ್ಯೇ ||ರಾಯರಿಗೆ||

ಚಂದಗಣ್ಣೀನಯ್ಯ ಗಂಗಿಗೋಗಿ ಬರುವಾಗ ಗಂಭೀರ ಕಾಣೇ
ಮಡಿವಾಳ ಸಿಳ್ಳಾಕ್ಯಾರೆ ಗಂಜೀಯಾ ಸೀರೇ ನ್ಯಾಡಮೂಡಿ | ಪಾಲಯ್ಯ
ಗಂಜಿಯಾ ಮೇಲೆ ನ್ಯಾಡುದಾನೆ ||ರಾಯರಿಗೆ||

ಬಟ್ಟಿಗಣ್ಣಿನಯ್ಯ ಉತ್ತಾಕೋಗಿ ಬರುವಾಗ ಉತ್ತಮಾ ಕಾಣೇ
ಮಡಿವಾಳ ಸಿಳ್ಳಾಕ್ಯಾರೆ ಪಟ್ಟೇದು ಸೀರೇ ನ್ಯಾಡಮೂಡೆ ||ರಾಯರಿಗೆ||

ಜಾಡಿಸಿ ಹಾಕ್ಯಾರೆ ಈರಾ ಮದ್ದಲಿ ಸವ್ಲೀ
ಜನವೆಲ್ಲ ಮುಂದೆ ಗವುದಾವೇ | ಮೆಕ್ಕಿಮವ್ವಾ
ಈರ ಮುದ್ದುರಿ ವಾಸುಸವ್ಲಿ ||ರಾಯರಿಗೆ||

ಜಗ್ಗೀಸಿ ಹಾಕ್ಯಾರೆ ಲಿಂಗ ಮುದ್ದಲಿ ಸವ್ಲಿ
ಜನವೆಲ್ಲ ಮುಂದೆ ಗೋವುದಾರೇ | ಮೆಕ್ಕಿಮವ್ವಾ
ಈರ ಮುದ್ದುರೆ ವಾಸು ಸವ್ಲಿ ||ರಾಯರಿಗೆ||

ಮಲ್ಲಾನೇ ಬರುವಾಗ ಸೆಲ್ಲ್ಯಾರೇ ಮಲ್ಲೀಗಿ
ಮಲ್ಲಾರ ಪಾಲಯ್ಯ ಬರುವಾಗೋ | ಸಿಳ್ಳಾಕ್ಯಾರೆ
ಹಳ್ಳಾಲ್ಲಾ ಮುಂದೆ ಗೋವುದಾರೆ ||ರಾಯರಿಗೆ||

ಆತಾನು ಬರುವಾಗ ನಾತಾವೇ ಮಲ್ಲೀಗೆ
ಆತಾನೆ ಪಾಲಯ್ಯ ಬರುವಾಗ | ಸಿಳ್ಳಾಕ್ಯಾರೆ
ಪ್ಯಾಟ್ಯಲ್ಲ ಮುಂದೆ ಗೋವುದಾವೆ ||ರಾಯರಿಗೆ||

ಆವೇನೇ ಬಂದಾವೇ ಪಾಲಯ್ಯ ಬರಲಿಲ್ಲ
ಸಾಲೇಳಜೆಮ್ಮೆ ತುರುವಾನೂರು | ಅಬ್ಬೇಲೆ
ಸಾಲೇಗೂಡಿಕ್ಕೆ ಕರೂದಾರೆ ||ಸೋಬಾನಾವೇ||

ಎತ್ತಾನೇ ಬಂದಾವೇ ಪಾಲಯ್ಯ ಬರಲಿಲ್ಲ
ಸುತ್ತೇಳೆಜೆಮ್ಮೆ ತುರುವಾನೂರು | ಅಬ್ಬೇಲೆ
ಸುತ್ತೇ ಗೂಡಿಕ್ಕಿ ಕರೂದಾರೆ ||ಸೋಬಾನಾವೇ||

ಉದ್ದೀನಾ ಕಾಳಂಗೆ ತಿದ್ದರಿ ಕೂಡಿನ ಬಸುವಾ
ಎದ್ದಾನೆ ಭೂಮಿ ಧರಣೀ ಮ್ಯಾಲೆ | ಗಾದರೆ
ನುಗ್ಗೆ ತುಗ್ಗಾಲಿ ನೆರಾಳೀಗೆ ||ಸೋಬಾನಾವೇ||

ಕಡ್ಲೀಯ ಕಾಳಂಗೆ ಕೊಡುದರೆ ಕೂಡಿನ ಬಸುವಾ
ನಡುದಾನೆ ಭೂಮಿ ಧರಣೀಮ್ಯಾಲೆ | ಗಾದರೆ
ಜಾಲಿ ತುಗ್ಗುಲಿ ನೆರಾಳೀಗೆ ||ಸೋಬಾನಾವೇ||

ಆವಿಗೇ ಕೊಡಿರಣ್ಣ ಮ್ಯಾಲೊಂದು ಕಾವಾಲ
ಸಣ್ಣಾಗಾದಾರೆ ಕಡೀಮೀಯ | ಕಾವಲು ಮೇದು
ಅವೇಗಾವುದುಕೇ ಒಳೂದಾವೇ ||ಸೋಬಾನಾವೇ||

ಎತ್ತೀಗೆ ಕೊಡಿರಣ್ಣ ಮತ್ತೊಂದು ಕಾವಾಲ
ಸಿಕ್ಕಾಗಾದಾರೆ ಕಡೀಮಿಯ | ಕಾವಲು ಮೇದು
ಎತ್ತೇ ಗಾವುದಕೇ ಒಳೂದಾವೇ ||ಸೋಬಾನಾವೇ||

ಎತ್ತೆಲ್ಲಿ ಕಾದೆಣ್ಣ ಮುತ್ತೆಲ್ಲಿ ಮುಡಿದೆಣ್ಣಾ
ಎತ್ತಿಗೆ ನೀರೆಲ್ಲೆ ಕುಡಾಸೀದ | ಗಂಜೀಗಟ್ಟೆ
ಸತ್ಯವ್ವನೆಂಬ ವಳೆಯೀಲೀ ||ಸೋಬಾನಾವೇ||

ಆವೆಲ್ಲಿ ಕಾದೆಣ್ಣ ಹೂವೆಲ್ಲ ಮುಡಿದೆಣ್ಣಾ
ಆವಿಗೆ ನೀರೆಲ್ಲಿ ಕುಡಾಸೀದ | ಗಂಜೀಗಟ್ಟಿ
ತಾಯವ್ವನೆಂಬೋ ವಳೀಯೇಲಿ ||ಸೋಬಾನಾವೇ||

ಅಣ್ಣಾ ನಿಮ್ಮಾ ಕಾಲು ಬೆಣ್ಣೀಗಿನ್ನಾ ಮಿದುವು
ಇನ್ನೆಲ್ಲಿ ತುಳಿದು ಎಳೀ ಮುಳ್ಳು | ಗಾದರೆ
ಸಣ್ಣ ತುಗ್ಗೂಲಿ ನೆರಾಳಲ್ಲಿ ||ಸೋಬಾನಾವೇ||

ಅಪ್ಪಾ ನಿಮ್ಮಾ ಕಾಲು ತುಪ್ಪಾಗಿನ್ನಾ ಮಿದುವು
ಮತ್ತೆಲ್ಲಿ ತುಳಿದು ವಸಾ ಮುಳ್ಳು | ಗಾದರೆ
ಸಿಕ್ಕ ತುಗ್ಗೂಲಿ ನೆರಾಳಲ್ಲಿ ||ಸೋಬಾನಾವೇ||

ಎತ್ತಿನಾರ ಹಿಂದೆ ಹತ್ತಿ ಬಂದಳು ಮಿಕ್ಕಿಮವ್ವ
ತಾವುರದ ಸೆಂಬೇ ಬಲಾಗೈಲಿ | ಮಿಂಚೇರಿ
ತಾವೊಳ್ಳೇದಂದೇ ನೆಲೇಗೊಂಡೆ ||ಸೋಬಾನಾವೇ||

ಅಕ್ಕಾನೇ ಮಿಕ್ಕಿಮವ್ವ ಮುತ್ತಿನ ಮುಡಿಯಾ ಮ್ಯಾಲೆ
ಮುಚ್ಚೀಕೊಂಡಾವೆ ಎಳೀನಾಗ | ಮಿಕ್ಕಿಮವ್ವ
ಮುತ್ತಿನ ಮುಡಿಗೇ ಬಿಸಾಲೊಂದೆ ||ಸೋಬಾನಾವೇ||

ತಾಯಾನೇ ಮಿಕ್ಕೀಮವ್ವ ತಾವುರ ಮುಡಿಯಾಮ್ಯಾಲೆ
ತಾವೇ ಗೋಂಡಾವೆ ಎಳೀನಾಗ | ಮಿಕ್ಕಿಮವ್ವ
ತಾವುರದ ಮುಡಿಗೇ ಬಿಸಾಲೊಂದೆ ||ಸೋಬಾನಾವೇ||

ಏರೀ ಮ್ಯಾಲೇ ಕಾಗೀ ನೀರು ಗುಕ್ಕೂತಾವೇ
ಸ್ವಾಮಿ ಪಾಲಯ್ಯ ಅನಾಮುನುಸೇ | ಗುಡುವಾಗ
ಆವಿನಾ ಹಿಂಡೇ ಎರಾವಂದೇ ||ಸೋಬಾನಾವೇ||

03_84_MDK-KUH

ಏರೀ ಮ್ಯಾಲೇ ಕಾಗೀ ನೀರು ಗುಕ್ಕೂತಾವೆ

ಸ್ವಾಮಿ ಪಾಲಯ್ಯ ಅನಾ ಮುನುಸೇ | ಗುಡುವಾಗ
ಎತ್ತೀನಾ ಹಿಂಡು ಎರಾವುಂದೇ ||ಸೋಬಾನಾವೇ||

ಏರೂಲಾರದು ಗುಡ್ಡಾ ಏರ್ಯಾನೇ ಪಾಲಯ್ಯ
ದೂರು ನೋಡ್ಯಾನೇ ತನಾ ಪರಿಸೆ | ಎತ್ತಿನೋರು
ಆಲಾದ ಕೊಂಬೆ ಬರಾಲೊಂದೇ ||ಸೋಬಾನಾವೇ||

ಅತ್ತುಲಾರದು ಗುಡ್ಡಾ ಅತ್ತ್ಯಾನೇ ಪಾಲಯ್ಯ
ಸುತ್ತಾ ನೋಡ್ಯಾನೇ ತನಾ ಪರಿಸೆ | ಎತ್ತಿನೋರು
ತುಪ್ಪಾದ ಕೊಂಬೆ ಬರಾಲೊಂದೇ ||ಸೋಬಾನಾವೇ||

ಆಲಾದ ಮರುದಡಿಯ ಆಲುದ ಕೊಂಬೇ ನಿಳಿವೆ
ಕಾಗಿಯಾ ಸುಗುಣ ಕೇಳೂತಾನೆ | ಪಾಲಯ್ಯ
ಆವಿನ ಹಿಂಡು ಎರಾವೊಂದೇ ||ಸೋಬಾನಾವೇ||

ಹತ್ತಿಯ ಮರುದಡಿಯ ತುಪ್ಪುದ ಕೊಂಬೆನಿಳಿವೆ
ಪಕ್ಷಿಯ ಸುಗುಣ ಕೆಳೊತಾನೆ | ಪಾಲಯ್ಯ
ಎತ್ತಿನಾ ಹಿಂಡು ಎರಾವೊಂದೇ ||ಸೋಬಾನಾವೇ||

ಆವಿನ ಹೆಜ್ಜೆ ಆವೇನು ಬಲ್ಲಾವೆ
ಆವೇ ಕಾವಣ್ಣ ಮಗೂ ಜಾಣಾ | ಪಾಪಯ್ಯ
ಹೋದಾಗ ದಾರಿ ಮಲೀನಾಡ ||ಸೋಬಾನಾವೇ||

ಎತ್ತೀನಾ ಹೆಜ್ಜೇ ಎತ್ತೇನು ಬಲ್ಲಾವೆ
ಎತ್ತೇ ಕಾವಣ್ಣ ಮಗೂ ಜಾಣ | ಪಾಪಯ್ಯ
ಹೊಕ್ಕೋಗ ದಾರಿ ಮಲೀನಾಡ ||ಸೋಬಾನಾವೇ||

ಆವಿನಾ ಗೂಡಾಗೇ ಆವ್ಯಾಕೆ ಬೆದಿರಾವೆ
ಗಾರೇ ಬಣ್ಣಾದ ಹುಲೀರಾಜ | ಎದುರಾದಾಗ
ಆವೀನಾ ಹಿಂಡು ಬೆದೀರಾವೆ ||ಸೋಬಾನಾವೇ||

ಎತ್ತೇನಾ ಗೂಡಾಗೇ ಎತ್ತ್ಯೇಕೇ ಬೆದಿರಾವೆ
ಸುಕ್ಕೇ ಬಣ್ಣಾದ ಹುಲೀರಾಜ | ಎದುರಾದಾಗ
ಎತ್ತೇನಾ ಹಿಂಡೇ ಬೆದೀರಾವೆ | ||ಸೋಬಾನಾವೇ||

ಆಳ್ಳಳ್ಳು ದೊಪ್ಪದ ಅಡುಗಾದಿರು ಪಾಲಯ್ಯ
ಕಡುಗಾದ ಕಾಲು ಹುಲೀರಾಜ | ಬರಾವಾಗ
ಆವಿನಾ ಹಿಂಡೇ ಬೆದೀರಾವೆ ||ಸೋಬಾನಾವೇ||

ಗುಂಡುಗುಂಡು ದೊಪ್ಪದ ಕುಂಡಾದಿರು ಪಾಲಯ್ಯ
ಪೆಂಡೇದ ಕಾಲು ಹುಲೀರಾಜ | ಬರುವಾಗ
ಎತ್ತೀನಾ ಹಿಂಡೇ ಬೆದೀರಾವೆ ||ಸೋಬಾನಾವೇ||

ಹೆಬ್ಬುಲಿ ಬೇಟೆಕಾರ ಪಾಲಯ್ಯ
ಎದ್ದು ನಾಂಟ್ಯವನಾಡಿದ ||

ಪೆಂಡೆದನ್ನಾಕಾಲು ಹುಲಿರಾಜರು ಬರುವಾಗ
ಗುಂಡು ನಿನ್ನ ಕಾವಾಲಾ ಅರಿಯಾವೇ
ಹೆಬ್ಬುಲಿ ಬೇಟೆಕಾರ ಪಾಲಯ್ಯ
ಎದ್ದು ನಾಂಟ್ಯವ ನಾಡಿದ ||

ತಗ್ಗು ತಗ್ಗು ದೊಪ್ಪಾದ ತಗ್ಗಾದಿರು ಪಾಲಯ್ಯ
ಗಗ್ಗುರುದಾ ಕಾಲು ಹುಲಿರಾಜ | ಬರುವಾಗ
ತಗ್ಗು ನಿಮ್ಮ ಕಾವಾಲಾ ಆರಿಯವೇ ||ಹೆಬ್ಬುಲಿ ಬ್ಯಾಟೆಕಾರ||

ಗುಂಡು ಗುಂಡು ದೊಪ್ಪಾದ ಕುಂಡಾದಿರು ಪಾಲಯ್ಯ
ಪೆಂಡೇದ ಕಾಲು ಹುಲೀರಾಜ | ಬರುವಾಗ |
ಗುಂಡು ನಿಮ್ಮ ಕಾವಾಲ ಅರಿಯಾವೇ ||ಹೆಬ್ಬುಲಿ ಬ್ಯಾಟೆಕಾರ||

ಹುಲಿಗೇ ಭಾಷೇ ಕೊಟ್ಟು ಹುಲಿ ಮಕ್ಕಳು ಕೊಂದಾರೆ
ಹುಲಿಗಿನ್ನಾ ವೀರ ಕಲೀವೀರ | ಪಾಲಯ್ಯ
ಹುಲಿಯಾಗ ಎದುರೇ ಮಾಡಿಗಾನೆ ||ಹೆಬ್ಬುಲಿ ಬ್ಯಾಟೆಕಾರ||

ನರಿಗೇ ಭಾಷೇ ಕೊಟ್ಟು ನರಿ ಮಕ್ಕಳು ಕೊಂದಾರೆ
ನರಿಗಿನ್ನಾ ವೀರಾ ಕಲಿವೀರ | ಪಾಲಯ್ಯ
ನರಿಯಾಗ ಎದುರೇ ಮಾಡಿಗಾನೆ ||ಹೆಬ್ಬುಲಿ ಬ್ಯಾಟೆಕಾರ||

ಹಾಲೆಲ್ಲಿ ಹಾಲೆಲ್ಲಿ ಆಲೋಮೀ ಸಾಲೆಲ್ಲ
ಹಾಲೇ ಮಿಂಚೇರಿ ಬಯಲಾಗ | ಪಾಲಯ್ಯ
ಹಾಲೊಯ್ದೆ ಸೆರಿಯಾ ಬೀಡಿಸಯ್ಯ ||ಹೆಬ್ಬುಲಿ ಬ್ಯಾಟೆಕಾರ||

ಕಾಯಲ್ಲಿ ಕಾಯಲ್ಲಿ ಕಾಯೇನೇ ಸಾಲೆಲ್ಲಿ
ಕಾಯೇ ಮಿಂಚೇರಿ ಬಯಲಾಗ | ಎತ್ತೀನೂರು
ಕಾಯೋಡದೆ ಸೆರಿಯಾ ಬಿಡೀಸಯ್ಯ ||ಹೆಬ್ಬುಲಿ ಬ್ಯಾಟೆಕಾರ||

ಅಪ್ಪಾ ನಿಮು ಬಂಟುಗುಳೂ ಅಡಿವಿ ಪಾಲಾದರೆ
ಅಡಿವೆಲ್ಲ ರಾಮಾ ರಗೂತಾವೆ | ಗಂಜೀಗಟ್ಟಿ
ಮ್ಯಾಲಂದೂಳೀಗೆ ಬರಾಲಿಲ್ಲ ||ಸೋಬಾನವೇ||

ಅಪ್ಪಾನಿಮು ಬಂಟುಗಳೂ ಗಿಡುಕೊಬ್ಬಾರಾದರೇ
ಗಿಡವೆಲ್ಲ ರಾಮಾ ರಗೂತಾವೆ | ಗಂಜೀಗಟ್ಟಿ
ಮತ್ತೊಂದೂಳೀಗಿ ಬರಾಲಿಲ್ಲ ||ಸೋಬಾನವೇ||

ಓಣ್ಯಾಗೆ ಪಾಲಯ್ಯ ಜಾರಿ ಬಿದ್ದೈದಾನೆ
ಓಣ್ಯೆಲ್ಲಾ ರಾಮ ರಗೂತಾವೆ | ಮಲ್ಲಮ್ಮ
ವಾರೆಲಿಡತನ್ನಿ ಕುದಾರಿಯಾ ||ಸೋಬಾನವೇ||

ಹಟ್ಟ್ಯಾಗೆ ಪಾಲ್ಯಯ ಸುತ್ತೀ ಬಿದ್ದ್ಯದಾನೆ
ಹಟ್ಟ್ಯಲ್ಲಾ ಕಾಮಾ ರಗೂತಾವೆ | ಮಲ್ಲಮ್ಮ
ವತ್ತೇಲಿಡ ತನ್ನಿ ಕುದಾರಿಯಾ ||ಸೋಬಾನವೇ||

ಆವೀನಾ ಗುಡಾಗೆ ತಾವುಡಾವಾ ತೆರಿಕಟ್ಟೆ
ಬಾಲಾಗೆ ಮಲಿಯಾ ಕೊಡಾವೊಳೆ | ಕಾಮವ್ವ
ನಿಮ್ಮ ಆವಿನ ಪಾಲಯ್ಯ ಮಡೀಗ್ಯಾನೆ ||ಸೋಬಾನವೇ||

ಎತ್ತೇನೇ ಗುಡಾಗೆ ಅಚ್ಚಡದ ತೆರಿಕಟ್ಟಿ
ಪುತ್ರಾಗೆ ಮಲಿಯಾ ಕೊಡವೋಳೆ | ಕಂಚವ್ವ
ನಿಮ್ಮ ಎತ್ತಿನ ಪಾಲಯ್ಯ ಮಡಿಗಾನೆ ||ಸೋಬಾನವೇ||

ಮಡಗಿದರೇ ಮಡುಗಾಲೀ ಮಡಿಯ ತಗುಡೀಡಾಲಿ
ನಿಲುವಾಗನ್ನಡಿ ಬಲಾಗೈಲಿ | ಮಿಂಚೇರಿ
ಎಳಿ ಮಾವಿನಾಗೆ ಮೆರಿಯಾಲಿ ||ಸೋಬಾನವೇ||

ಮಡಿದರೇ ಮಡುಗಾಲಿ ಮುಡಿಯಾ ತಗುದೀಡಾಲಿ
ಬಟ್ಟಗನ್ನಡಿ ಬಲಾಗೈಲಿ | ಮಿಂಚೇರಿ
ಸಸಿ ಮಾದಿನಾಗೆ ಮೆರಿಯಾಲಿ ||ಸೋಬಾನವೇ||

ಅಂದನೂರು ಗಂಜೀಗಟ್ಟಿ ರಂಬೇರು ಮಜ್ಜಿಗೆ ಮಾರಿ
ಕಂದವಾಡಂಬೋ ಕಣೀಮ್ಯಾಗೆ | ಕಂಚ್ಚವ್ವ
ರಾಯಾನಾ ಸುದ್ದಿ ನೆರೀವಾಳೆ ||ಸೋಬಾನವೇ||

ಕರಿಯಾ ಆಕಾಳಾಲು ಕಿರಿಯ ತಪ್ಪಾದಂಗೇ
ಕಿರುದನು ಪಾಲಯ್ಯ ಕರಾದೊಯ್ಯೋ | ಹುಲಿರಜ
ಎಲ್ಲೊದರು ನಮ್ಮ ಬಿಡಾದಯ್ಯ ||ಸೋಬಾನವೇ||

ಅಚ್ಚಾ ಆಕಾಳಾಲು ಸತ್ತ್ಯೋ ತಪ್ಪಾದಂಗೇ
ಸಿಕ್ಕನು ಪಾಲಯ್ಯ ಕರಾದೊಯ್ಯೊ | ಹುಲಿರಾಜ
ಎತ್ತೋದರು ನಮ್ಮ ಬಿಡಾದಯ್ಯ ||ಸೋಬಾನವೇ||

ಉಪ್ಪಿರಿಗೆ ಉಪ್ಪಿರಿಗೆ ಮೇಲೆರಡು ಉಪ್ಪಿರಿಗೆ
ಉಪ್ಪಿರಿಗೆ ಕೆಳಗೇ ಮೆರಾವಣಿಗೇ | ಆಗೂಲಾವಾಗಾ
ಅಪ್ಪಾ ಬಂದಾನೇ ಮಕಾ ತೋರೇ ||ಸೋಬಾನವೇ||

ಅಪ್ಪಾ ಬಂದಾರಾನೇ ಕೊಪ್ಪ ತಂದಾರೆನೇ
ಒಪ್ಪುಣದಾ ಪುರುಷ ಸೇರೀ ಸೂರೆ | ಆಗಲುವಾಗ
ಅಪ್ಪಾನಾ ಗೊಡವೀ ನಮೀಗೇನೇ ||ಸೋಬಾನವೇ||

ವಾವಿರಿಗೇ ವಾವಿರಿಗೇ ಮೇಲೆಲ್ಡು ವಾವಿರಿಗೇ
ವಾವಿರಿಗೆ ಕ್ಯಳುಗೇ ಮೆರಾವಣಿಗೆ | ಆಗುಲುವಾಗಾ
ಮಾವ ಬಂದಾನೇ ಮಕಾ ತೋರೇ ||ಸೋಬಾನವೇ||

ಮಾವ ಬಂದಾರೇನೇ ವಾಲೀ ತಂದಾರೇನೆ
ವಾರುಣಾದಾ ಪುರುಷಾ ಸೆರೀ ಸೂರೇ | ಆಗುಲವಾಗಾ
ಮಾವಯ್ಯನ ಗೊಡವೀ ನನೀಗೇನೇ ||ಸೋಬಾನವೇ||

ಓಣ್ಯಾಗೇ ಕಾಮವ್ವ ನ್ಯಾರನ್ನ ಹಂಗೂಸ
ನೀರಿಗೋದೋಳೇ ಬರಾಲಿಲ್ಲಾ | ಗಂಜೀಗಟ್ಟೀ
ಓಣ್ಯಗೆ ಕಾಮವ್ವ ಮಯಾವಾಗೆ ||ಸೋಬಾನವೇ||

04_84_MDK-KUH

ಅಟ್ಟ್ಯಾಗಿ ಕಾಮವ್ವ ಗುಟ್ಟನ್ನು ಹೆಂಗೂಸಾ
ಕುಟ್ಟಕೋದೋಳೇ ಬರಾಲಿಲ್ಲಾ | ಗಂಜೀಗಟ್ಟೀ
ಅಟ್ಟ್ಯಗೆ ಕಾಮವ್ವ ಮಯವಾಗೆ ||ಸೋಬಾನವೇ||

ಓಡಿ ಹೋದಾರೆಂದು ಕಾಡು ಆಕುಸಬ್ಯಾಡಾ
ಓಡಿ ಹೋಗೋರಾ ಮಗೂಳಲ್ಲಾ | ಮಾವಾಕಟ್ಟೀ
ಜೋಡಿ ಹೊಂಡುಗಳ ತಗಾಸಯ್ಯ ||ಸೋಬಾನವೇ||

ಕದ್ದು ಹೋದಾರಂದು ದಿಡ್ಡು ಆಕುಸು ಬ್ಯಾಡ
ಕದ್ದು ಹೋಗೋರಾ ಮಗೂಳಲ್ಲ | ಮಾವಾಮಲ್ಲಿ
ದಿಡ್ಡಿ ಹೊಂಡುಗಳು ತಗೂಸಯ್ಯ ||ಸೋಬಾನವೇ||

ಓಡಿ ವೋದರೊಂದು ರಾಡುವಾಕುಸು ಬ್ಯಾಡಾ
ಓಡಿ ವೋಗೋರಾ ಮಗುಳಲ್ಲ | ಮಾವಕಟ್ಟಿ
ಜೋಡಿ ಚಂಡಗಳೂ ತಗೂಸಯ್ಯ ||ಸೋಬಾನವೇ||

ಅಸಿಯಾ ತುಗ್ಗುಲಿ ಸೆಕ್ಕಿ ಬಿಸಿಬಿಸಿ ಬೇಯ್‌ವಾಗ
ಹೊಸ ಮಗಳು ಕಾಮವ್ವ ಮೆರಿವಾಗ | ಅಗ್ನಿದೇವಿ
ಕುಸುಲಾರದು ನಗುವೆ ನಗೂತಾಳೆ ||ಸೋಬಾನವೇ||

ಬೆಣ್ಣಿ ತುಗ್ಗುಲಿ ಬೆಣ್ಣೀಸಿಸೆಕ್ಕೆ ಬೇಯ್‌ವಾಗ
ಸಣ್ಣಳ ಕಂಚವ್ವ ಮೆರೀವಾಗ | ಅಗ್ಗಿನಿದೇವಿ
ಹೂವಾರದ ನಗುವೇ ನಗುತಾಳೆ ||ಸೋಬಾನವೇ||

ಮೆರೆಯ ಮೆರೆಯೆಂದರೆ ನಾನೆಂಗೆ ಮೆರಿಯಲೆ
ಮೆರವಣಿಗೆ ಕಡ್ಡಿ ಮಡುಲಾಗಿಟ್ಟುಕೊಂಡು | ಮೆರಸ
ಬಂದಾರೆ | ಜವಾದೊರು ||ಸೋಬಾನವೇ||

ಕುಣಿಯೆ ಕುಣಿಯಂದಾರೆ ನಾನೆಂಗೆ ಕುಣಿಯಾಲೆ
ಕುಣುವುಣಿಗೆ ಕಡ್ಡಿ ಮಾಡುಲಾಗಿಟ್ಟುಕೊಂಡು | ಕುಣುಸಾ ಬಂದಾರೇ
ಜವಾದೋರು ||ಸೋಬಾನವೇ||

ಅಪ್ಪಾನೇ ಮಾತನಾಡೋ ಸಿಕ್ಕದು ನನ್ನೀವಾಳಾ
ಎತ್ತಿನ ಮನೆಗಾರ ತಪ್ಪುದಲೇ ಮಾತನಾಡೋ |

ಸತ್ತೊನೂ ಬಾರಯ್ಯ ಎತ್ತಿಕೊಂಡು ಆದರಿಸಿ
ನೆತ್ತೀಲೇ ಧೂಳಾ ಕೊಡವೀರೀ | ಅಪ್ಪನೇ ಮಾತನಾಡೋ
ಪಾಲಯ್ಯ ಸತ್ಯವೇ ಪಡದ ಶೀವನಲ್ಲಿ ||ಅಪ್ಪನೇ ಮಾತನಾಡೋ||

ತೀರಿದಾ ಪಾಲಯ್ಯ ಏಳು ಕುಂಡಾಲಿರಿಸಿ
ಮಾರೀಲಿ ದೂಳಾ ಕೊಡಾವಿರಿ | ಪಾಲಯ್ಯ
ಕೀರೂತಿ ಪಡದಾ ಶೀವನಲ್ಲಿ ||ಅಪ್ಪನೇ ಮಾತನಾಡೋ||

ಸತ್ತಾನೆ ಪಾಲಯ್ಯ ಎತ್ತಿಕೊಂಡಾಡಿಸಿ
ಸಪ್ಪಳಾಗೊಂಡ ನೆಗಿಮಾರಿ | ಪಾಲಯ್ಯ
ಸತ್ತೇವ ಪಡೆದು ಶಿವನಲ್ಲಿ ||ಅಪ್ಪನೇ ಮಾತನಾಡೋ||

ಈರಿಗ ಪಾಲಯ್ಯ ಕೀರುತಿನಿಲ್ಲೈತೋ
ಸಾವಳಗೊಂಡೆ ನೆಗಿಮಾರಿ | ಪಾಲಯ್ಯ
ಕೀರುತಿ ಪಡದಾ ಶೀವನಲ್ಲಿ ||ಅಪ್ಪನೇ ಮಾತನಾಡೋ||

ಕತ್ತಿ ಪಾಲಯ್ಯಾಗೆ ಕಡಗಲ ಕಾಮವ್ವಗೇ
ಮುತ್ತಿನಾರುತಿ ಶೀವನಿಗೇ | ಹೊನ್ನಿನಾ
ಟೆಕ್ಕಿಲುರು ಗೆಜೆಬಾಸುವಾಗೆ ||ಅಪ್ಪನೇ ಮಾತನಾಡೋ||

ಹಲಗೆ ಪಾಲಯ್ಯಗೆ ಕಡಗಲ ಕಂಚವ್ವಗೆ
ಹವಳದಾರುತಿ ಶಿವನಿಗೇ | ಹೊನ್ನಿನಾ
ಟೆಕ್ಕೆಲಾರುಗೆಜ್ಜಿ ಬಾಸುವಾಗೇ ||ಅಪ್ಪನೇ ಮಾತನಾಡೋ||

ಆರೋಸುತ್ತಿನಾ ಕ್ವಾಟೆ ಹಾರೀ ಬಂದಯ್ಯಾಗೆ
ಆರೂತಿ ಹೂವು ಎದಾರಿಗೆ ಅವನಂತ ಸೆಲುವಾ
ಹೂವೇ ಸೂರಾಡಿ ಮಠಕೋ ಬರಲು
ಆರೂತಿ ಹೂವೇ ಎದೆಗೂಡಿಸಿಕಟ್ಟಿ ಹಾರೀ
ಬಂದಂತ ವಡೀಯಾಗೆ ||ತಾನೆಂತಾ ಚೆಲುವಾ||

ಹತ್ತುಸುತ್ತಿನ ಕ್ವಾಟೆ ಹತ್ತಿ ಬಂದಯ್ಯಾಗೆ
ಸತ್ತರಿಕೆ ಹೂ ಎದಾರಿಗೆ | ಹುಣಿಸಿಕಟ್ಟಿ
ಹತ್ತಿ ಬಂದಂತಾ ವಡೀಯಾಗೆ ||ತಾನೆಂತಾ ಚೆಲುವಾ||

ವಾರುಣಿಗಿತ್ತೇಕುರೆಲ್ಲ ಹೋಗಿತಿಪ್ಪೆನೇರೀ
ವಾಲೀ ಬೀಳುದೀ ಹರಿಹಾರ | ನನ್ನೀವಾಳ
ಪಾಲಯ್ಯ ಬರುವ ರವಾಸೀಗೆ ||ತಾನೆಂತಾ ಚೆಲುವಾ||

ಒಪ್ಪಣಿಗೆ ತೇರಲ್ಲಾ ಒಕ್ಕಿತ್ತಿತ್ತೇನೆರೀ
ಕುಪ್ಪಿ ಬೀಳುದೇ ಹರಿಹರಾ | ನನ್ನಿವಾಳ
ಅಪ್ಪಯ್ಯ ಬರುವ ರವಾಸಿಗೇ ||ತಾನೆಂತಾ ಚೆಲುವಾ||

ಹಳ್ಳಾವಾ ಇಳಿವಾಗ ಸೆಲ್ಲೆವು ಪಾದದಗೆಜ್ಜೆ
ಉಲ್ಲಂಗಾದುಡಿಗೆ ಸಡೀಲ್ಯಾವೆ | ಮೆಕ್ಕಿಮವ್ವ
ಹಳ್ಳವಾ ಇಳಿವಾ ರವಾಸೀಗೆ ||ತಾನೆಂತಾ ಚೆಲುವಾ||

ಹಳ್ಳವಾ ಇಳಿವಾಗ ಸೆಲ್ಲೆವ ಪಾದದ ಗೆಜ್ಜಿ
ಉಟ್ಟಾಂಗದುಡುಗಿ ಸಡಿಲ್ಯಾವೆ | ಮಿಕ್ಕಿಮವ್ವ
ಬೆಟ್ಟಾವಾ ಇಳಿವಾ ರವಾಸೀಗೆ ||ತಾನೆಂತಾ ಚೆಲುವಾ||

ಹೊಳಿಗೇ ಹೋಗುವಾಗ ಹೋಂಬಾಳಾಲ್ಲ್ಯಾಡಾವೆ
ಹೊಳಿಗೋಗಿ ಗುಡಿಗೇ ಬರುವಾಗ | ಪಾಲಯ್ಯ ನಿಮ್ಮ
ತಡದಾ ಮಳಿಯಂಗೆ ಬೆವೂತಾನಾ ||ತಾನೆಂತಾ ಚೆಲುವಾ||