ಬಡತನ ಬಯಲಾಗೆ ನಮಕೈಯಿ ಮೇಲಾಗೆ
ಅಂಬರದ ಬಾಯಿ ಅಡಿಯಾಗಿ | ಬಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅಂಬುರದ ಬಾಯಿ ಅಡಿಯಾಗ ಇದ್ದರೆ
ಅಂಗಳಕ್ಯಲಕ್ಕಿ ನ್ಯೇರಿವಾಳೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ತುಂಬಿದ ಕೇರಿಯ್ಯಾಗೆ ತೂಬು ಎತ್ತುವನ್ಯಾರೆ
ಗಂಗಮ್ಮನಡುದ ಮಾಗುಜಾಣ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಸೂರಯ್ಯ ಪಾಪಯ್ಯ ದೊಡ್ಡೊರ ನೀವಯ್ಯ
ಒಡ್ಡಿದ ಬಿಲ್ಲು ಬಾಲಗೈಲಿ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಒಡ್ಡಿದ ಬಿಲ್ಲು ಬಲಗೈಲಿ ಸ್ವಾಮಲಬಂಡಿ
ವಬ್ಬಿಲ್ಯಾಡ್ಯಾನೆ ಜಾಗೂಜ್ಯಾಟೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಬಾವನೆ ಓಬಯ್ಯ ಬಾಮೈದ್ನ ಪಾಪಯ್ಯ
ಇಬ್ಬರೂ ಒಂದಾಗಿ ನ್ಯಾಡುದಾರೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಇಬ್ಬರೂ ಒಂದಾಗಿ ನ್ಯಾಡುದಾರೆ ದೇವರಟ್ಟಿ
ಗೊಗ್ಗುರದಾಗ್ತು ಕಾದಿಲಾವೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಆಯ್ತುವಾರದಯ್ಯ ಆವ ಸೀಳೆನಯ್ಯ
ಯಾರು ಐದೀರಯ್ಯ ಗೂಡಿಯಾಗೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಯಾರು ಐದೀರಯ್ಯ ಗುಡಿಯಾಗೆ ಪಾಪಯ್ಯ
ಆಲೇ ತಂದೇನಿ ಸೋಲುಸಯ್ಯ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಆಲೆನೆ ತಂದಾರೆ ಕಾಯೆಲ್ಲಿ ಕಾಸೆಲ್ಲಿ
ನೀ ಸಚ್ಚಲಡದ ಮಗನೆಲ್ಲಿ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ನೀವು ಸಚ್ಚಲಡದ ಮಗನೆಲ್ಲಿ ಗದ್ದಿಗೆ ಮ್ಯಾಲೆ
ಬಾಲಮ್ಮನ ಮಂಡೆ ತಾಗೀಸೇವೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಈ ಭೂತಿ ರುದ್ರಾಕ್ಷಿ ಇನ್ನ್ಯಾರಿಗೆ ಸಲ್ಲೋದೆ
ಇನಕೊಸ್ತುನವರ ಮಗನಿಗೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಇನ್ನೂ ಕಸ್ತೂರವರ ಮಗನೂ ಪಾಪಯ್ಯಗೆ
ಈಬತಿ ರುದ್ರಾಕ್ಷಿ ಸಾಲ್ಲುವೋದೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಮುತ್ತಿನ ಗದ್ದಿಗೆ ಮತ್ಯಾರಿಗೆ ಸಲ್ಲುದೆ
ಮತ್ತೆತ್ತಿನವರ ಮಗನಿಗೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಮತ್ತಿತ್ತನವರ ಮಗನು ಪಾಪಯ್ಯಗೆ
ಈಭೂತಿ ರುದ್ರಾಕ್ಷಿ ಸಾಲ್ಲುವೋದೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಆಯ್ತುವಾರ ದಿನ ಅವು ಸೀಳೇನಯ್ಯ
ಅತಿಂಜಲಯ್ಯ ಕಾರವುಂಡೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಆಲು ಎಂಜಲಯ್ಯ ಕರವುಂಡೆ ಪಾಪಯ್ಯ
ಅಣ್ಣು ಎಂಜಲಯ್ಯ ಗೀಣಿಮುಟ್ಟಿ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅಣ್ಣು ಎಂಜಲಯ್ಯ ಗಿಣಿ ಮುಟ್ಟಿ ಪಾಪಯ್ಯ
ನೀರೆಂಜಲಯ್ಯ ಜಾನು ಬಳಸಿ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ನೀರು ಎಂಜಲಯ್ಯ ಜನ ಬಳಸಿ ಪಾಪಯ್ಯ
ಆಲೆಂಜಲಯ್ಯ ಕಾರವುಂಡೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಜಗಲೂರು ಪಾಪಯ್ಯ ಸಸಿಗಳು ನಾವಯ್ಯ
ಏಸು ದಿನವಯ್ಯ ಬಾಡುತಾನ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಏಸೇನೇ ದೀನಯ್ಯ ಬಡತನ ಪಾಪಯ್ಯ
ರೀತುಳ್ಳ ಕೊಣ್ಣು ತೇರುವಯ್ಯ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಜಗಲೂರು ಪಾಪಯ್ಯ ಎಣ್ಮಕ್ಕಳು ನಾವಯ್ಯ
ಕರುಣ ಇರಲಯ್ಯ ನಾಮ ಮೇಲೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಕರುಣಾವು ಇರಲಯ್ಯ ನಾಮ ಮೇಲೆ ಪಾಪಯ್ಯ
ರೀತುಳ್ಳ ಕೊಣ್ಣು ತೇರುವಯ್ಯ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಒಡಿಯ ಕಾಣಿರಿ ನಮಗೆ ಒಡುದು ಮೂಡಿದಯ್ಯಾ
ನಡುರಾಜ್ಯದಾಗೆ ಈರುವೊರೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ನಡುರಾಜ್ಯದಾಗ ಈರುವು ಪಾಪಯ್ಯನ
ನಡುಗುತಲೆ ಕೈಯ್ಯೀ ಮುಗಿದೇವೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಬಿಂದಿಗಾಲು ಕರವೋ ಸೆಂದ್ರೆಮ್ಮಿ ಗಿಡ್ಡಿಯ
ಅಕ್ಕ ಬೇಡಾಳೆ ಬೋಳವೊಲೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅಕ್ಕಾನೆ ಬೇಡ್ಯಾಳೆ ಬೆಳೆವೋಲೆ ಪಾಪಯ್ಯ
ಮಕ್ಕಳ ತಾಯಿ ವಾಡಾಕೊಡೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಬಿಂದಿಗಾಲು ಕರವೋ ಸೆಂದ್ರೆಮ್ಮೆ ಗಿಡ್ಡಿಯ
ತಂಗಿ ಬೆಡಾಳೇ ಬೋಳವೊಲೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ತಂಗೇನೆ ಬೇಡಾಳೆ ಬೋಳವೊಲೆ ಪಾಪಯ್ಯ
ಕಂದಾನಾ ತಾಯಿ ವಾಡಕೊಡ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅತ್ತಿಗೆ ಅಡುದಾರೆ ಅದು ನಮ್ಮ ಪುಣ್ಣೇವು
ಅಣ್ಣಯ್ಯವುಂಬೋದು ಅರೀವಾಣ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅಣ್ಣಯ್ಯ ವುಂಬೋದು ಅರಿವಾಣ ಕರುಎಮ್ಮೆ
ಅದು ನಮ ಮಗಳಿಗೆ ಬೊಳವೊಲೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಊವಿಗೊಗಲದಿರು
ಊವೇ ಪಾಪಯ್ಯನ ಗುಡಿ ಇಂದೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಊವೇನೆ ಪಾಪಯ್ಯನ ಗುಡಿ ಹಿಂದೆ ಸೂರ್ಯಕಾಂತಿ
ಊವರಳಿ ಬಾಯಿ ಬಿಡುತಾವೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಮಗ್ಗೆ ಇಲ್ಲವೆಂದು ಮಗ್ಗಿಗೊಗುಲುದೀರು
ಮೊಗ್ಗೇ ಪಾಪಯ್ಯನ ಗುಡಿ ಇಂದೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಮೊಗ್ಗಿಸೆ ಪಾಪಯ್ಯನ ಗುಡಿ ಹಿಂದೆ ಸೂರ್ಯಕಾಂತಿ
ಮೊಗ್ಗುರುಳಿ ಬಾಯಿ ಬಿಡುತಾವೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅತ್ತಾಲಿತ್ತಾ ಹೂವು ಒಪ್ಪಾನೆ ಪಾಪಯ್ಯ
ಸಿಕ್ಕು ಗೊರ್ಲುಕಟ್ಟಿ ಅಳಿಗಿಲೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಸಿಕ್ಕುಗೋರ್ಲು ಕಟ್ಟಿ ಇಳಿಗಿಲೆ ಕಲ್ಲಿದೂವು
ಮಲ್ಲಿಗೆ ಸರವೊಂದೆ ಮೂಡುದಾರೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅಲ್ಲಿ ಇಲ್ಲಿ ಹೂವ ವಲ್ಲನೆ ಪಾಪಯ್ಯ
ಅಲ್ಲಿ ಗೊರ್ಲ್ಲುಕಟ್ಟಿ ದಾಳಿಗೀಲೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅಲ್ಲಿ ಗೊರ್ಲೂ ಕಟ್ಟಿ ದಳಗಿಲೆ ಕಲ್ಲಿದೂವು
ಮಲ್ಲಿಗೆ ಸರವೊಂದೆ ಮೂಡದಾರೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಪೂಜಾರಿ ತಂದ ಊವು ಪೂಜೆಗೆ ಸಾಲವಂದು
ಸ್ವಾಮಿ ಪಾಪಯ್ಯ ಮಾನ ಮುನುದೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಸ್ವಾಮಿನೆ ಪಾಪಯ್ಯ ಮನ ಮುನುದು ಪಾಪಯ್ಯ
ವೋಗಿ ಒಂಬಾಳೆ ಕಾಡಿಸ್ಯಾನೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಒಕ್ಕಲು ತಂದ ಊವು ಪಕ್ಕಿಗೆ ಸಾಲವೊಂದು
ಪಾಪಯ್ಯ ಮಾನ ಮುನಿದೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅಪ್ಪಾನೆ ಪಾಪಯ್ಯ ಮನ ಮುನುದು ಪಾಪಯ್ಯ
ವೊಕ್ಕೆ ಒಂಬಾಳೆ ಕಾಡಿಸ್ಯಾನೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಪಟ್ಟೆ ಮ್ಯಾಲೊಗುತ್ತ ಉತ್ತುಗಳ ನೋಡುತಾ
ಒಪ್ಪಕ್ಕೊಂದಜ್ಜೆ ನ್ಯಾಡಾವುತ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಒಪ್ಪಕ್ಕೆ ಒಂದೆಜ್ಜೆ ನೆಡುವುತಾ ಪಾಪಯ್ಯ
ಅಪ್ಪಾಗೆ ಊವು ಕೊಯಿಸಾನೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಏರಿಮ್ಯಾಲೋಗುತ್ತ ಯ್ಯಾಳೇವು ನೋಡುತ
ಜಾವಕ್ಕೊಂದೆಜ್ಜೆ ನ್ಯಾಡಾವುತ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಜಾವಾಕೆ ಒಂದೆಜ್ಜೆ ನ್ಯಡಾವುತ ಪಾಪಯ್ಯ
ಸ್ವಾಮಿಗೆ ಊವು ಕೋಯಿದಾಣೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅಂದವುಳ್ಳ ತ್ವಾಟಕ್ಕೆ ಸಂದವುಳ್ಳೇಣಿಯಾಕಿ
ಸಂಜೆಯಚ್ಚಾಡ ಮಾಡುಲುಡ್ಡಿ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಸಂಜೆನೇ ಅಚ್ಚಡ ಮುಡಲುಡ್ಡೆ ಪಾಪಯ್ಯ
ತಂದಿಗೆ ಊವು ಕೊಯಿದಾನೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಆಯವುಳ್ಳಾ ತ್ವಾಟಕ್ಕೆ ಸೇವುಳ್ಳೇಣೀ ಆಕೀ
ಸಾದಿನಚ್ಚಡ ಮಾಡುಲೊಡ್ಡಿ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಸಾದಿನಚ್ಚಡ ಮಡುಲೊಡ್ಡಿ ಪಾಪಯ್ಯ
ಸ್ವಾಮಿಗೆ ಊವು ಕೋಯಿಸಾನೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ರಾಗಿ ರಾಗಿ ಪೂಜಿ ರಾಗಿ ರನ್ನದ ಪೂಜಿ
ರಾಯರು ಕಟ್ಟಿಸಿದ ವಸ ಪೂಜೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ರಾಯರು ಕಟ್ಟಿಸಿದ ವಸಪೂಜೆ ಗೊರ್ಲಾಕಟ್ಟಿ
ರಾಯನುನ್ನೆಂಥ ದಾನುಕೊರಿ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ಅಕ್ಕಿ ಅಕ್ಕಿ ಪೂಜೆ ಅಕ್ಕಿ ರನ್ನದ ಪೂಜೆ
ಒಕ್ಕಲು ಕಟ್ಟಿಸಿದ ವಾಸಾ ಪೂಜೆ | ಬಿಲ್ಲಿಡಿದು ಬ್ಯಾಟ್ಯಾಡಿದ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ
ಕೊಲ್ಲೆತ್ತಿ ದಣಿ ತೋರಿದ||

ರಾಗಿ ರಾಗಿ ಪೂಜೀ ರಾಗಿ ರನ್ನದ ಪೂಜಿ
ರಾಯರು ಕಟ್ಟಿಸಿದಾ ವಸ ಪೂಜಿ | ಗೊರ್ಲುಕಟ್ಟಿ
ರಾಯರಿನ್ನೆಂತಾ ದೋನುಕೋರೆ |
ಬಿಲ್ಲಿಡಿದು ಬ್ಯಾಟ್ಯಾಡಿದಾ ಪಾಪಯ್ಯ||

ಅಕ್ಕಿಪೂಜೀ ಮಾಡಿ ಬಟ್ಟೆರಡು ನೊಂದಾವೆ
ಸಿಕ್ಕಾನು ಪೂಜಾರೀ ಸ್ಯದಿರಾನೆ || ಪಾಪಯ್ಯ
ಒತ್ತಿ ತೂಗ್ಯಾನೆ ವಾಸು ಗಂಟೆ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ||

ಎಲಿಯಾ ಪೂಜೀ ಮಾಡೀ ಬೊಳ್ಳೆರಡು ನೊಂದಾವೆ
ಸಣ್ಣನು ಪೂಜಾರೀ ಸ್ಯಾದೀರಾನೆ || ಪಾಪಯ್ಯ
ಒತ್ತಿ ತೂಗ್ಯಾನೆ ವಾಸುಗಂಟಿ
ಬಿಲ್ಲಿಡಿದು ಬ್ಯಾಟ್ಯಾಡಿದ ಪಾಪಯ್ಯ||

ದೂಪು ದೂಪದ ನಾತ ದೂಪದ ವಗಿ ನಾತ
ದೂಪುದೆಣ್ಣೇಲೇ ನ್ಯಾಲುಗಾರೆ || ಮಾಡರೆ
ಸ್ವಾಮಿ ಪಾಪಯ್ಯನ ಗೂಡಿಯಾಗೆ
ಬಿಲ್ಲಿಡಿದು ಬ್ಯಾಟ್ಯಾಡಿದಾ ಪಾಪಯ್ಯ||

ಗಂಧದ ವಸು ನಾತ ಗಂಧದ ವಗಿನಾತ
ಗಂಧದೆಣ್ಣೇನೇ ನ್ಯಾಲುಗಾರೆ || ಮಾಡಾರೆ
ತಂದೆ ಪಾಪಯ್ಯನ ಗೂಡಿಯಾಗೆ
ಬಿಲ್ಲಿಡಿದು ಬ್ಯಾಟ್ಯಾಡಿದಾ ಪಾಪಯ್ಯ||

ಇಡಿಯಾ ಟೆಂಗಿನ ಕಾಯಿ ಒಡಿಯಾ ಟೆಂಗಿನ ಕಾಯಿ
ಒಕ್ಕಾಲು ತಂದಾ ಹೊಸು ಕಾಯಿ | ಪಾಪಯ್ಯ
ರಟ್ಟೆ ಈಡಾಡಿ ಓಡುದಾನೆ ||
ಬಿಲ್ಲಿಡಿದು ಬ್ಯಾಟ್ಯಾಡಿದಾ ಪಾಪಯ್ಯ||

ಇಡಿಯಾ ಟೆಂಗಿನ ಕಾಯಿ ಒಡಿಯಾ ಟೆಂಗಿನ ಕಾಯಿ
ಬಡವಾರು ತಂದ ಎಳೀಗಾಯಿ || ಪಾಪಯ್ಯ
ತೋಳೇ ಈಡಾಡಿ ವಾಡುದಾನೆ ||
ಬಿಲ್ಲಿಡಿದು ಬ್ಯಾಟ್ಯಾಡಿದಾ ಪಾಪಯ್ಯ||

ಇಂಡಿಗಿನ್ನಲುತೂಮಿ ಎನ್ನಪೂಸಾಲೇಸಿ
ಎಲ್ಲಿರಾಮಾ ಮಾಡಿ ತೋಪುಲಾಕೇ || ಈ ಊರು ಪಚ್ಚಾಪದಿ ಪಾಪಣ್ಣ
ನೀಕಾರುತಿ ಜಯನೆನ್ನೀರೇ ಜಯ ಮಂಗಳೆನ್ನಿರಿ

ಗಿಂಡಿಯಾ ತಕ್ಕೊಂಡು ಗಂಗೀಗೆ ನಾನೋದು
ಗಂಗಿನಾಗಳಾ ಮೀನು ಮನಿಗಿದ್ದಾವೆ
ಈ ಊರು ನಿಂತಾರೆ ಸ್ವಾಮಿ ಶಿವಪೂಜೆಗೆ
ಜಯನೆನ್ನಿರೆ ಜಯ ಮಂಗಳೆನ್ನಿರಿ||

ತಾಲಿಯ ತಕ್ಕೊಂಡು ಹಾಲಿಗೆ ನಾನೋದೆ
ಹಾಲಿನಾಗಳಾವು ಮನಿಗಿದ್ದಾವೆ || ಈ ಊರು
ನಿಂತಾರೇ ಸ್ವಾಮಿ ಶಿವಪೂಜಿಗೆ
ಜಯನೆನ್ನಿರೆ ಜಯ ಮಂಗಳೆನ್ನಿರಿ||

ಜೋಳಿಗೆ ತಕ್ಕೊಂಡು ಪತ್ರಿಗೆ ನಾನೋದೆ
ಪತ್ರ್ಯಾಗಳ ಸರ್ಪ ಮನಿಗಿದ್ದಾವೆ || ಈ ಊರು
ನಿಂತಾರೆ ಸ್ವಾಮಿ ಶಿವಪೂಜಿಗೆ
ಜಯನೆನ್ನಿರೆ ಜಯ ಮಂಗಳೆನ್ನಿರಿ||

ಬಾವಿಯ ಸುತ್ತಿಕ್ಕಿ ಬಸವನ ಕೊಂದಯ್ಯಗೆ
ದೀರಾ ಮೂರುತಿ ನಮ್ಮಪ್ಪಯ್ಯಗೆ || ಗೊರ್ಲೂಕಟ್ಟಿ
ನಾಗರುಗನ್ನೇರುಕೈಯ ಆರುತಿ ತಂದಿತ್ತೆರೆ
ಜಯನೆನ್ನಿರೆ ಜಯ ಮಂಗಳೆನ್ನಿರಿ||

ಅಪ್ಪಾನ ಗುಡಿ ಮುಂದೆ ತುಪುಳ್ಳಜಾರಿಕೆ
ನಿಸ್ತ್ರೇರು ನೆರಿಗೆ ಮುದಾರಿಡಿರೆ || ಕೈಯ್ಯಾಗಳಾ
ಮುತ್ತಿನಾರುತೆ ಈ ಜಾತುನಾವೆ
ಜಯನೆನ್ನಿರೆ ಜಯ ಮಂಗಳೆನ್ನಿರಿ||

ಅಣ್ಣಾನ ಗುಡಿಮುಂದೆ ಹೆಣ್ಣುಳ್ಳಾ ಜಾರಿಕೆ
ಕನ್ನೇರು ನೆರಿಗೆ ಮೂದರಿಡಿರೆ || ಕೈಯ್ಯಗಳಾ
ಹೊನ್ನಿನ ಆರುತಿ ಈ ಜಾತೂನಾವೆ
ಜಯನೆನ್ನಿರೆ ಜಯ ಮಂಗಳೆನ್ನಿರಿ||

ಕುಂಕುಮದೆರುಡಾರುತಿ, ಕುಂಕುಮದೆರುಡಾರುತಿ
ಕುಂತಲ್ಲಿ ಜತಿ ಮಾಡಿ ಕುಂತಲ್ಲಿ ಜತಿ ಮಾಡಿ
ಮಂದಾಗಮಾನಿ ಆರುತಿಗಾಳು ಬೆಳಾಗುವೆ
ಸ್ವಾಮಿ ನಿಮಾಗೆ|

ಅರಿಶಿಣದೇರುಡಾರುತಿ, ಅರಿಷಿಣದೇರುಡಾರುತಿ
ಆರುಸದಿಂದಾಲಿ ತಂದು ಹರಸದಿಂದಾಲಿ ತಂದು
ಮಂದಾಗಮಾನಿ ಆರುತಿಗಾಳು ಬೆಳುಗಾವೆ
ಸ್ವಾಮಿ ನಿನಗೆ

ಮುತ್ತಿನೆರುಡಾರುತಿ, ಮುತ್ತಿನೆರುಡಾರುತಿ
ಮುತ್ತೈದರಿಡಕೊಂಡು, ಮುತ್ತೈದ್ಯೆರಿಡಾಕೊಂಡು
ಮಂದಾಗಮಾನಿ ಆರುತಿಗಾಳೂ ಬೆಳುಗೂವೆ
ಸ್ವಾಮೀ ನಿಮಗೆ