ಓಣ್ಯಾಗ ರಂಗಯ್ಯ ಹಾಲುಲ್ಲ ಗೊನೀಬಾಳು
ತಾನಂದಾನಾನು ||
ಹಾಲೇನೇ ಮಾರಂಬೋ ಬಡವಾರು
ರನ್ನಾದ ಕೋಲುಕೋಲೆ
ಹಾಲೇನೇ ಮಾರೆಂಬೋ ಬಡವಾರ | ಮಕ್ಕಳಿಗೆ
ಬಣ್ಣಾದ ಬವನಾಸೆ ಒರಿಸ್ಯಾರೆ || ರನ್ನಾದ ಕೋಲು ಕೋಲೆ ||

ಹಟ್ಟ್ಯಾಗೆ ರಂಗಯ್ಯ ತುಪ್ಪುಳ್ಳ ಗೋನೀಗಾಳು
ತುಪ್ಪಾನೆ ಮಾರೆಂಬೋ ಬಡವಾರು | ಮಕ್ಕುಳಿಗೆ
ಬಣ್ಣಾದ ಬವನಾಸಿ ಒರಿಸ್ಯಾರೆ. || ರನ್ನಾದ ಕೋಲು ಕೋಲೆ ||

ಅಣ್ಣಾನಿನ ಗಿರೀ ಮ್ಯಾಲೆ ಹನ್ನೊಂದು ಗಿಣಿ ಕುಂತು
ಬಣ್ಣಾನೇ ತುಂಬ್ಯಾರೆ ಗಿರಿಗೆಲ್ಲಾ | ಲಸ್ಸುಮವ್ವಾ
ಹೊನ್ನೇನೆ ತುಂಬಾರೆ ಕಣುಸಾಕೆ || ರನ್ನಾದ ಕೋಲು ಕೋಲೆ ||

ಅಪ್ಪಾ ನಿಮ ಗಿರೀ ಮ್ಯಾಲೆ ಇಪ್ಪತ್ತು ಗಿಣಿ ಕುಂತು
ಒಪ್ಪೇನೆ ತುಂಬ್ಯಾರೆ ಗಿರಿಗೆಲ್ಲ | ಲುಸ್ಸುಮವ್ವಾ
ಮುತ್ತೆನೆ ತುಂಬ್ಯಾರೆ ಕಣುಸಾಕೆ || ರನ್ನಾದ ಕೋಲು ಕೋಲೆ ||

ಕಂಪಲ್ಲಿ ಓಬಯ್ಯ ಸೂಳೆ ಮನಿಗೋಗುವಾಗ
ಕಾಲಾಗಳ ಮಂಜು ಕೈಯ ಪಂಜು | ದ್ಯಾವರಟ್ಟೆ
ಮದನಾರಿ ಕದುವಾ ತಗಿ ಎಂದಾ || ರನ್ನಾದ ಕೋಲು ಕೋಲೆ ||

ಕದವೇನೇ ತಗೂದಾಳೆ ಕೈಯತ್ತಿ ಮುಗುದಾಳೆ
ವಲ್ಲಿಯನ್ನ ಸೆರುಗು ಇಡುದಾಳೆ ||
ಬಾರೇನು ಹೋಗೆಂದು ಕರುದಾಳ ಲಸುಮವ್ವ
ವಲ್ಲಿಯನ್ನ ಸೆರುಗು ಇಡುದಾಳೆ || ರನ್ನಾದ ಕೋಲು ಕೋಲೆ ||

ಸೆರಗು ಬೀಡೇ ಲಸಿಮಿ
ತಿರಿಗ್ಯನ್ನ ಬಾರುತೀನಿ || ತಾನಂದಾನಾನು ||
ಆರು ಅಣ್ಣೆದಾಗೆ ಪರಿಶಿಯಾ ನೆರಸೀದೈನಿ || ರನ್ನಾದ ಕೋಲು ಕೋಲೆ ||

ದೊರೆಗಳ ಮಗಳು ಬಿಡು ಸೆರಗು
ರನ್ನಾದ ಕೋಲು ಕೋಲೆ ||

ಹಟ್ಟ್ಯಾಗೆ ರಂಗಯ್ಯ ರೊಚ್ಚೆದ್ದು ಬರೂತಾವೆ
ಸುತ್ತುಲೋಗಿರೆಲ್ಲ ಸಸಿಗಾಳು | ಮಮ್ಮಕ್ಕಾಳು
ಮುತ್ತಿನಾ ಆರುತಿ ಇಡುದಾರೆ || ರನ್ನಾದ ಕೋಲು ಕೋಲೆ ||

ಓಣ್ಯಾಗೆ ರಂಗಯ್ಯ ರವಳೆದ್ದು ಬರುತಾನೆ
ದೂರುಲೋಗ್ಯರೆಲ್ಲಾ ಸಸಿಗಾಳು | ಮೊಮ್ಮಕ್ಕಾಳು
ಅವಳಾದ ಆರುತಿ ಇಡುದಾರೆ || ರನ್ನಾದ ಕೋಲು ಕೋಲೆ ||

ದಾಸ ನಿಮ ಕೂದರೀಗೆ ಸೊಸಿಡಿರಿ ಬ್ಯಾಲ್ಲವೋ
ದಾಸರ ಒಬಯ್ಯನ ಕುದರೀಗೆ | ಲಸುಮವ್ವಾ
ಸೋಸಿ ಇಡರಿ ಬಾಳೀ ಗೋನಿಹಣ್ಣು || ರನ್ನಾದ ಕೋಲು ಕೋಲೆ ||

ರಂಗಾ ನಿನ ಕುದರೀಗೆ ತಂದಡಿರಿ ಬ್ಯಾಲ್ಲಾವೋ
ಅಪ್ಪಾನೇ ಓಬಯ್ಯನ ಕುದರೀಗೆ | ಲಸುಮವ್ವಾ
ತಂದು ಇಡಿರಿ ಬಾಳೀ ಗೊನೀಹಣ್ಣು || ರನ್ನಾದ ಕೋಲು ಕೋಲೆ ||

ರಂಗಾ ನಿನ ಕುದರೀಗೆ ತಂದಡಿರಿ ಬ್ಯಾಲ್ಲಾವೋ
ಅಪ್ಪಾನೇ ಓಬಯ್ಯನ ಕುದರೀಗೆ | ಲಸುಮವ್ವಾ
ತಂದು ಇಡಿರಿ ಬಾಳೀ ಗೊನೀಹಣ್ಣು || ರನ್ನಾದ ಕೋಲು ಕೋಲೆ ||

ದಾಸ ನಿಮ ಕೂದರೀಗೆ ರೇಶಿಮಿದಲ್ಯಾಣ
ಜಾತೇನೆ ಮುತ್ತಿಟ್ಟು ಮಕುರಂಬ | ದ್ಯಾವರಹಟ್ಟಿ
ದಾಸಯ್ಯ ಸ್ವಾಮಿ ವರುಟಾನೆ || ರನ್ನಾದ ಕೋಲು ಕೋಲೆ ||

ಕೆರಿಯಾಗೆ ಕೆಂದೂಳಾ ಬರಿಯಾ ನೆಗ್ಗಿಲಿ ಮುಳ್ಳು
ಬಾರುಲಾರೆನಯ್ಯ ಗಿರಿದೂರ | ನಿಮ್ಮರಿಕೆ
ಬಾರುವೋರಾ ಕೂಟೆ ಕಳುವೇನೆ || ರನ್ನಾದ ಕೋಲು ಕೋಲೆ ||

ಅಪ್ಪಗಳ ದೇವರಿಗೆ ಒಪ್ಪಿದ ಮಗಳೂ ನಾನು
ತುಪ್ಪನೆ ಮೀಸಾಲು ಕಳುವೇನೆ | ಗುಡಿಯ
ಮುಂದೆ ರೊಕ್ಕಾನೇ ಸೂರಾಡೆ ಬರುವೇನೆ || ರನ್ನಾದ ಕೋಲು ಕೋಲೆ ||

06_84_MDK-KUH

ಕಂಪಲ್ಲ ಓಬಯ್ಯ ಹರಕೇ ಹನ್ನೆಲ್ಡೋರುಸೋ
ಮಾರಾತಿವಯ್ಯ ಮನುದಾಗೆ | ನಿಮ್ಮರಿಕೆ
ಸರುಪೋಣಿ ಮಗುನ ಕಳುವೇನೇ || ರನ್ನಾದ ಕೋಲು ಕೋಲೆ ||

ಅರಸ ಕೋಟ್ಟೀಳೇವು ಅಂಗೈಯಲಿಡಕೊಂಡ
ಶಿವಾ ಕೊಟ್ಟ ಮಗುನಾ ನೆಡಸೂತಾ | ಓಬಯ್ಯ
ನಗುತಾವೆ ನಿಮ ಗಿರಿಗೆ ಬರುವೇನೆ || ರನ್ನಾದ ಕೋಲು ಕೋಲೆ ||

ಅಣ್ಣುಗಳ ದೇವರಿಗೆ ಎಣ್ಣು ಮಗಳು ನಾನು
ಅಣ್ಣೇನೆ ಮೀಸಲು ಕಳುವೇನೇ | ಗುಡಿಯಾ ಮುಂದೆ
ಹೊನ್ನೇನೆ ಸೂರ್ಯಾಡಿ ಬರುವೇನೇ || ರನ್ನಾದ ಕೋಲು ಕೋಲೆ ||

ಅಕ್ಕಿಯ ತರುಲೋಗಿ ಆಕಾಸ ತಿರಿಗ್ಯಾನೆ
ಆಕೇನೆ ಲಸುಮವ್ವನ ತರಲೋಗಿ | ಓಬಯ್ಯ
ದೊಡ್ಡ ಆದ ಮರುಕೆ ಸೊರಿಗ್ಯಾನೆ || ರನ್ನಾದ ಕೋಲು ಕೋಲೆ ||

ರಂಬೆಯ ತರಲೋಗಿ ಅಂಬಾರ ತಿರೀಗ್ಯಾನೆ
ರಂಬೇನೆ ಲಸುಮವ್ವನ ತರಲೋಗಿ || ರಂಗಯ್ಯ
ಗಂಡು ಅದ ಮರುಕೇ ಸೊರಿಗ್ಯಾನ || ರನ್ನಾದ ಕೋಲು ಕೋಲೆ ||

ಹಟ್ಟಿ ಕಂಪುಳದಯ್ಯ ಅತ್ತುರಕ್ಕೆ ಬಂದಾನೆ
ಅಕ್ಕು ಅಯ್ಯ ಹೋಗಿ ಶರಣೆನ್ನೇ | ಓಬಯ್ಯಗೆ
ಮಕ್ಕಳಾ ಪಲುವಾ ಕೊಡುತಾನೆ || ರನ್ನಾದ ಕೋಲು ಕೋಲೆ ||

ಸಣಿವಾರ ಸಾದೋಸೆ ಉಣ ಬಂದರು ದಾಸಾರು
ಗುಣುವಂತೆ ನೀಡೇ ಅಡುದಮ್ಮ | ನಿಮ್ಮನೆ
ಆರೇ ನಾಮಾದಯ್ಯ ಉಣಬಂದಾ || ರನ್ನಾದ ಕೋಲು ಕೋಲೆ ||

ಕೇಸು ಅಕ್ಕಿ ಬಾನ ಸೂಸಲು ಬದನೇ ಕಾಯೀ
ಮೀಸಾಲು ನಮ್ಮ ಮನಿಯಾಗಿ | ಓಬಯ್ಯ
ದಾಸರು ಉಂಡಿಲ್ಲ ಸಣಿವಾರ || ರನ್ನಾದ ಕೋಲು ಕೋಲೆ ||

ಸಣಿವಾರ ಸಾದೊಸೆ ಉಣ ಬಂದರು ದಾಸರು
ಗುಣವಂತೆ ನೀಡೇ ಅಡುದಮ್ಮ | ನಮ್ಮನೆ
ಆರೇ ನಾಮಾದಯ್ಯ ಉಣಬಂದ || ರನ್ನಾದ ಕೋಲು ಕೋಲೆ ||

ದಾಸಯ್ಯ ಬರುತಾನೆಂದು ಆಸಮ್ಮ ಗದ್ದಿಗೆ
ದಾಸು ಅಯ್ಯಾನಲ್ಲಾ ಮನಿಸ್ವಾಮಿ | ಓಬಯ್ಯ
ದೇಶಾವ ತಿರುಗಿ ಬರುತಾನೆ || ರನ್ನಾದ ಕೋಲು ಕೋಲೆ ||

ಊರಿಗೆ ಹಿಂಬಾರಿ ನೀರಿಗೆ ಮಕುಮಾಡಿ
ನಾಮಾನೇ ಇಡುವೋರು ಇವರ್ಯಾರೇ | ದ್ಯಾವಾರಟ್ಟಿ
ನ್ಯಾರು ಅನ್ನಾ ಮಕುದ ಕರಿ ಓಬಾ || ರನ್ನಾದ ಕೋಲು ಕೋಲೆ ||

ಹಟ್ಟಿಗೆ ಹಿಂಬಾಗಿ ಕಟ್ಟೇಗೆ ಮಕೂ ಮಾಡಿ
ಬೋಟ್ಟೇ ಇಡುವೋರು ಇವರ್ಯಾರೇ | ದ್ಯಾವರಟ್ಟಿ
ಬಟ್ಟು ಅನ್ನಾ ಮಕುದಾ ಕರೀ ಓಬಾ || ರನ್ನಾದ ಕೋಲು ಕೋಲೆ ||

ಹಟ್ಟಿ ಹಟ್ಟೀಗುಂಟಾ ವಾರದಯ್ಯ ಬಂದು
ನಾನು ಏನು ನೀಡಲೋ ಬಡುವೆಯ್ಯಾ | ಸಣಿವಾರ
ಹಾಲೇನೆ ನೀಡೆನೆ ಸಲುಸಯ್ಯ || ರನ್ನಾದ ಕೋಲು ಕೋಲೆ ||

ಕಂಬಾಳಿ ಗೂಡ್ಯಾರು ಎಂಬತ್ತು ವೊಯಿಸಾರೆ
ದುಂಡೆ ಮುತ್ತಿಟ್ಟು ವಾಲುದಾರೆ ದಾಸಾರಾ ದಂಡು ಕಾಣೆ
ಓಬಯ್ಯ ಹರಿದಾಸರು ಅವ್ರೆ ಕಾಣೆ
ದುಂಡೇನೆ ಮುತ್ತಿಟ್ಟು ಬಿಗುದಾರ ಗುಡಾರ ಮ್ಯಾಲೆ
ಮಂಡೆಲೋಬಯ್ಯ ಮದುಮಾಗ || ದಾಸರಾ ದಂಡುಕಾಣೆ ||

ಮಂಡೇಲಿ ಓಬಯ್ಯ ಮದುಮಾಗಂಬೋ ಸುದ್ದಿ
ಹನ್ನೆರಡು ರಾಜ್ಯಕ್ಕೇ ಆರಿಕ್ಕಾಗಿ || ದಾಸರಾ ದಂಡುಕಾಣೆ ||

ಜ್ಯಾಡಿಯ ಗುಡಾರ ನಲವತ್ತು ವೈಸಾರೆ
ಜಾತಿ ಮುತ್ತಿಟ್ಟು ಬೀಗುದಾರೆ || ಗುಡಾರು ಮ್ಯಾಲೆ
ವಾರಿಲೋಬಯ್ಯ ಮದುಮಾಗು || ದಾಸರಾ ದಂಡುಕಾಣೆ ||

ವಾರೀಲೆ ಓಬಯ್ಯ ಮದುಮಾಗಂಬೋ ಸುದ್ದಿ
ನಲುವತ್ತು ರಾಜ್ಯಕ್ಕೆ ಹೆಸೊರಾಗೆ || ದಾಸರಾ ದಂಡುಕಾಣೆ ||

ಮಲ್ಲಿಗನ್ನಾ ಬೀಜ ಇಲ್ಲಿ ಸೆಲ್ಲಿದರೇನೆ
ಅಳ್ಳಾ ಕೊಳ್ಳೆದಲೇ ಸಸಿ ಉಟ್ಟೆ | ಓಬಯ್ಯ
ಎಲ್ಲದ್ದರೂ ನೀನು ಸಸಿ ಕಾಣೆ || ದಾಸರಾ ದಂಡುಕಾಣೆ ||

ಉತ್ತು ಉತ್ತಿ ಬೀಜ ಎತ್ತ ಸೆಲ್ಲಿದರೇನೆ
ಅತ್ತ ಕೊತ್ತದುಲೇ ಸಸಿನೆಟ್ಟಿ | ಓಬಯ್ಯ
ಎತ್ತಿದ್ದರು ನೀನು ನೀರುವಾಣಿ || ದಾಸರಾ ದಂಡುಕಾಣೆ ||

ಸ್ವಾಮಿಯ ಮದುವೀಗೆ ಭೂಮಿಲೇ ಸಪ್ಪಾರ
ದಾಳಿಂಬರದಕ್ಕೇ ಆಸೆ ಬರುದೂ | ಉಡೇವು
ಗೋವಿಂದನ ಮದುವಿ ಸಾಣೀವಾರ || ದಾಸರಾ ದಂಡುಕಾಣೆ ||

ದೊಡ್ಡ ಗುಡ್ಡದ ನಡುವೆ ಒಬ್ಬಳೆ ಬರುತ್ತಿದ್ದೆ
ಅಬ್ಬುರಸುತಾವೇ ಊಲೀ ಕರಡಿ | ಓಬ್ಬಯ್ಯ
ಸುದ್ದಿ ಮಾಡಯ್ಯ ಪಾಗಿಳಾಗೆ || ದಾಸರಾ ದಂಡುಕಾಣೆ ||

ಗುಡ್ಡಾಲ ಸೀಮಿಗೆ ದೊಡ್ಡಾನೆ ಓಬಯ್ಯ
ಅಡ್ಡಲಾಕ್ಯಾನೆ ಪಗಾಡಿಯಾ | ಜರುಮಾಲಿ
ಗುಡ್ಡಾಲ ಸೀಮೆ ನಾಮದೊಂದೆ || ದಾಸರಾ ದಂಡುಕಾಣೆ ||

ಕೆರಿಯಾಗಿ ಇರವೋರು ಸೆಟ್ಟಿ ಎಂಬಾತಿದ್ದೆ
ಸೆಟ್ಟೆಗಾನಲ್ಲ ಮನಿಸ್ವಾಮಿ | ಓಬಯ್ಯ
ಗುಟ್ಟುಸೂತಿದ್ದ ಜಡಿಗಾಳು || ದಾಸರಾ ದಂಡುಕಾಣೆ ||

ಕೆರಿಯಾಗಿ ಇರುವೋರು ಮಡಿವಾಳಂಬಾತಿದ್ದೆ
ಮಡಿವಾಳನಲ್ಲ ಮನಿಸ್ವಾಮಿ | ಓಬಯ್ಯ
ಮಡಿ ಮಾಡಾತಿದ್ದ ಜಡಿಗಾಳು || ರನ್ನಾದ ಕೋಲು ಕೋಲೆ ||

ಅಡ್ಡಾಗುಡ್ಡದ ನಡುವೆ ಒಬ್ಬಾಳೇ ಬರಾತಿದ್ದ
ಅಬ್ಬರುಸಾತಾವೇ ಉಲಿ ಕರಡೀ | ಓಬಯ್ಯ
ಸುದ್ದಿ ಮಾಡಯ್ಯ ಪಗಿಳಾಗೆ || ರನ್ನಾದ ಕೋಲು ಕೋಲೆ ||

ಮುತ್ತು ಮುತ್ತಂದರೇ ಮುತ್ತೆಲ್ಲಿ ಬ್ಯಾಳುದಾವೆ
ಮುತ್ತು ದ್ಯಾವರಟ್ಟೆ ಬಯಲಾಗೆ | ಓಬಯ್ಯ
ಮುತ್ತು ಆಗಿ ಜನಕೆ ವಳುದಾನೆ || ರನ್ನಾದ ಕೋಲು ಕೋಲೆ ||

ಹೊನ್ನು ಹೊನ್ನೆಂದರೇ ಹೊನ್ನೆಲ್ಲಿ ಬ್ಯಳುದಾವೆ
ಹೊನ್ನು ದ್ಯಾವರಟ್ಟೆ ಬಯಲಾಗೆ | ಓಬಯ್ಯ
ಹೊನ್ನು ಆಗಿ ಜನುಕೆ ವಳುದಾನೆ || ರನ್ನಾದ ಕೋಲು ಕೋಲೆ ||

ರಂಗಯ್ಯ ಬರುತಾನೆಂದು ಮಂಗಾಳಾರಾತಿಡದೇ
ಮುಂಗೈಲಿ ಮುತ್ತು ಜಡುದಾವೆ | ದ್ಯಾವರಟ್ಟೆ
ರಂಗಯ್ಯನ ಸ್ವಾಮಿ ಬರಿಹೇಳೇ || ರನ್ನಾದ ಕೋಲು ಕೋಲೆ ||

ಕೊಟ್ಟಾನೆ ಗುರು ಎನಗೆ ಮುಟ್ಟೀದಾ ಪಲಾದಿಂದಾ ||
ಹುಟ್ಟೆನಾ ಓಬಯ್ಯಗೆ ಹೆಸರಿಟ್ಟು ಬೆಳಗೀರಿ
ಗ್ಯಾನಪೂರ್ಣ ಗ್ಯಾನಂಜ್ಯೋತಿ
ನಿರ್ಮಲವಾದ ಮನುವೇ ಕರ್ಪುರದಾರುತಿ
ಇನ್ನಾನು ಗುಣುಗಾಳು ಇಂದರಿಸಿ ಬೆಳಾಗೀರಿ ||

ತಾನೇ ಗತಿ ಎಂದು ಮನ ಮುಟ್ಟಿ ಬೆಳಾಗೀರಿ
ಜಾನಪೂರ್ಣ ಜಾಗಂಜ್ಯೋತಿ
ನಿರ್ಮಲವಾದ ಮನುವೇ ಕರ್ಪುರದಾರುತಿ
ನಾನೀನೆಂಬುದ ಬೀಡೀರೋ
ಮಂಚನ ಜಲ್ಮ ಗ್ಯಾನಾಗಾಳ್ಯಾರ ನೋಡೀರೋ

ಆರುತಿ ಬೆಳಗಿದಿನೇ ನಾನೊಂದು ಆರುತಿ ಬೆಳಗಿದಿನೇ
ನಾನೊಂದಾರತಿ ಬೆಳಗಿದಿನೇ | ಇನ್ನು ಸೆಳುದಾವೆಲಿ
ಹೊನ್ನ ಮಿಣುಕುಸಿದಂಗೆ ಆರುತಿ ಬಳಗಿದೆನೇ ||ಸ

ಆರುತಿ ಬೆಳಗಿದಿನೇ ನಾನೊಂದು ಆರುತಿ ಬೆಳಗಿದಿನೇ
ನಾನೊಂದು ಆರತಿ ಬೆಳಗಿದನೇ ಮೂರು ಕಣ್ಣಯ್ಯಗೆ
ಮುಕ್ಕಣ್ಣ ಸನಿದೇವಾಗ ಆರುತಿ ಬೆಳಗಿದಿನೆ ||

ಆರುತಿ ಬೆಳಗಿದಿನೀ ನಾನೊಂದು ಹಗಲದೊಂದರ ಶಿವಗೇ
ನಮ್ಮ ಶಿವಾ ಪಾತಳ ಗಂಗಿಯ ಪುರುಷ ಇನ್ನು ಸೆಳುಗರಿಲಿ
ಹೊನ್ನ ಮಿಣಿಕಿಸಿದಂಗೆ ಸನಿದೇವಗೆ ಬೆಳಗಿದಿನಿ ||

ಆರುತಿ ಬೆಳಗಿದಿನೀ ನಾನೊಂದು ಆರುತಿ ಬೆಳಗಿದಿನಿ
ಮೂರು ಲೋಕಾವೆಲ್ಲ ಸಲುವೋ ಸನಿದೇವಗೊಂದು
ಆರುತಿ ಬೆಳಗಿದಿನಿ ||
ಆರುತಿ ಬೆಳಗಿದಿನೀ ನಾನೊಂದು ಆರುತಿ ಬೆಳಗಿದಿನಿ
ಸತ್ಯರಿಗೆ ಶರುಣರಿಗೆ ಬಡುವರಿಗೊಲುದಂತ ಸನಿದೇವಗೆ
ಬೆಳಗಿದಿನಿ ||