ವನುವಾ ನೋಡಿರಿ ನಮ್ಮಮ್ಮನ ತನುವಾಬೇಡಿರಿ
ಮ್ಟಮದ್ಯನುದಾಗೆ ಅತ್ತ್ಯಾಳ ಬೇವಿನ ಮರ
ಅತ್ತುತಲೇ ಕಾಯಿ ಜಡಾವುತಲೇ | ಮಾರಕ್ಕ
ಅತ್ತ್ಯಾಳು ಬೇವಿನ ಮಾರೂದಾಗೆ || ವನುವಾ ನೋಡಿರಿ ||

ಮಾರಾ ಮದ್ಯನುದಾಗೆ ಏರ್ಯಾಳು ಬೇವಿನ ಮಾರ
ಏರುತಲೇ ಕಾಯಿ ಜಡಾವುತಲೇ | ಮಾರಕ್ಕ
ಏರ್ಯಾಳು ಬೇವಿನ ಮರೂದಾಗೆ || ವನುವಾ ನೋಡಿರಿ ||

ಅಕ್ಕಾನೇ ಮಾರವ್ವ ಇಕ್ಕಿದ್ದುಂಬೋಳಲ್ಲ
ಅಚ್ಚಾಕೆಂಬಕ್ಕೆ ಕೆನೀ ಮಸರು | ಉಂಡೇನೆಂದು
ಅಟ್ಟೀ ಗೊಲ್ಲರುಗೆ ವಲೂದಾಳೆ || ವನುವಾ ನೋಡಿರಿ ||

ತಾಯೇನೆ ಮಾರವ್ವ ಆರಿದ್ದುಂಬೋಳಲ್ಲ
ಆಲಗೆಂಬಕ್ಕೆ ಕ್ಯನೀ ಮಸರು | ಉಂಡೇನೆಂದು
ಆದಿ ಗೊಲ್ಲರುಗೆ ವಲೂದಾಳೆ || ವನುವಾ ನೋಡಿರಿ ||

ಕಟ್ಟೀಯ ಇಂದಾಕಿ ಹೋದಾಳೆ ಮಾರಕ್ಕ
ನ್ಯೆಟ್ಟನ್ನಾ ಬಿದುರು ಕಡೀಸಾಳೆ | ಮಾರಕ್ಕ
ಸೆಟ್ಟಾರೆಂಡರಿಗೇ ವರೀಸಾಳೆ || ವನುವಾ ನೋಡಿರಿ ||

ಏರೀಯ ಇಂದಾಕೆ ಹೋದಾಳೆ ಮಾರಕ್ಕ
ನ್ಯಾರನ್ನ ಬಿದುರು ಕಡೀಸಾಳೆ | ಮಾರಕ್ಕ
ರಾಯರೆಂಡರಿಗೇ ವರೀಸಾಳೇ || ವನುವಾ ನೋಡಿರಿ ||

ಏರೀ ಮ್ಯಾಲೇ ಮಾರಕ್ಕಾ ವಾರಿಲಿ ಶಾನೂಬೋಗ
ಏರಿಂದ ಕ್ಯಳುಗೇ ತಳೂವಾರ | ಬಾರಿಕರಣ್ಣ
ವಾಲಿ ಸಿಂತಾಕೋ ಜತಾನಾವೇ || ವನುವಾ ನೋಡಿರಿ ||

ಕಟ್ಟಿ ಮೇಲೆ ಮಾರಕ್ಕ ವತ್ತೇಲಿ ಶಾನುಭೋಗ
ಕಟ್ಟಿಂದ ಕ್ಯಳಗೇ ತಳೂವಾರ | ಬಾರಿಕುರಣ್ಣ
ಕೊಪ್ಪಿ ಸಿಂತ್ಯಾಕೋ ಜತಾನಾವೇ || ವನುವಾ ನೋಡಿರಿ ||

ಮಟ್ಟಿ ಮೇಲೆ ಮಾರಕ್ಕ ಬೊಟ್ಟುಂಗರಿಡುವಾಗ
ಅತ್ತೀ ಮಕ್ಕಾಳು ಅಳುತಾವೆ | ಬೊಮ್ಮಯ್ಯಲಿಂಗ
ಹೊಟ್ಟೆ ಒಯ್ಯ್ ಒಯ್ದೇ ನಗುತಾವೇ || ವನುವಾ ನೋಡಿರಿ ||

ಏರೀ ಮ್ಯಾಲೆ ಮಾರಕ್ಕ ಕಾಲುಂಗರಿಡುವಾಗ
ಆರೇ ಮಕ್ಕಾಳು ಅಳೂತಾವೆ | ಬೊಮ್ಮಯ್ಯಲಿಂಗ
ಮಾರೀ ಒಯ್ಯ್ ಒಯ್ದೇ ನಗೂತಾವೇ || ವನುವಾ ನೋಡಿರಿ ||

ಗಂಡ ಇಲ್ಲಾ ದೋಳ ಗಂಬೀರ ನೊಡೀರೇ
ಗಂಧಾದ ರಾಶೀ ಗುಡೀ ಮುಂದೆ | ಗೌರೂಸಂದ್ರ
ಗಂಡಿಲ್ಲದ ಪರಿಸಿ ನ್ಯರೀಸ್ಯಾಳೆ || ವನುವಾ ನೋಡಿರಿ ||

ಮೋಸಾ ಇಲ್ಲಾದವಳ ಸರಸಾವಾ ನೋಡೀರೆ
ಅರಿಷಣದಾ ರಾಶೀ ಗುಡೀ ಮುಂದೆ | ಗೌರೂಸಂದ್ರ
ಪುರುಸಿಲ್ಲದ ಪರಿಸೇ ನ್ಯರೀಸ್ಯಾಳೆ || ವನುವಾ ನೋಡಿರಿ ||

ಮಂಗುಳಾರ ದೀನಾ ಅಂಗೂಳ ಸಾರೀಸೀ
ಬಂಡಾರುದ ಬರಣೀ ವರಾಗಿಟ್ಟೆ | ಗೌರೂಸಂದ್ರ
ದಂಡೀಗೋಗದೇ ಸಡಗಾರ || ವನುವಾ ನೋಡಿರಿ ||

ಸುಕ್ಕುರುವಾರದ ದೀನಾ ವಸ್ತೂಲಿ ಸಾರೂಸಿ
ಬಟ್ಟೀನ ಬರುಣೀ ವರಾಗಿಟ್ಟೆ | ಗೌರೂಸಂದ್ರ
ದಂಡಿಗೋಗದೇ ಸಡಾಗಾರ |
ವನವಾ ನೋಡಿರಿ ನನ್ನಮ್ಮನ ತನುವಾ ಬೇಡಿರೆ

ಇಂಪ್ಪು ನೋಡೇ ತಾಯಿ ಕೆಂಪು ನೋಡೆ
ಕೆಂಪ್ಪೆ ಸ್ಯಾವಂಚೀಗೆ ಹೂವ ನೋಡೇ
ಇಂಪ್ಪು ನೋಡೇ ತಾಯಿ ಕೆಂಪು ನೋಡೆ
ಕೆಂಪೆ ಸ್ಯಾವಂಚೀಗೆ ಹೂವ ನೋಡೇ

ತಾಯಮ್ಮ ಬರುತಾಳೆ ತಾಳಿ ಸಾಮನುದೋಳು
ಬಗುತಾರು ಬಾಜೂ ಬೀಡಿರಣ್ಣಾ | ಕ್ವಾಟೇಗುಡ್ಡ
ತಾಯಮ್ಮನೆಂಬ ಶಾರಣೀಗೆ || ಇಂಪು ನೋಡೇ ||

ಅಕ್ಕಾಯ್ಯ ಬರುತಾಳೆ ಪಟ್ಟೆ ಸಾಮಾನುದೋಳು
ಸಂಪನ್ನರು ಬಾಜೂ ಬೀಡಿರಣ್ಣಾ | ಕ್ವಾಟೇಗುಡ್ಡ
ತಾಯಮ್ಮೇರಾಳೇ ಕೂದರೀಯ || ಇಂಪು ನೋಡೇ ||

ಆರು ಇಂಡಿನ ಸಗಣಿ ಕೇರೀದ ಕೆಮ್ಮಣ್ಣ
ನಾರೆಲ್ಲಗೆ ಪಟುವಾ ತಾಗುದಾಳೆ | ಕ್ವಾಟೇಗುಡ್ಡ
ತಾಯವ್ವ ಕುಂತಿರುವಾ ಜಾಗಲೀ ಜಮ್ಮೇ
ಮರುಕೆ ಆಲುದ ಸಳ್ಳೇವು ಕೋಡಿರಣ್ಣಾ || ಇಂಪು ನೋಡೇ ||

ಹತ್ತು ಇಂಡಿನ ಸಗಣಿ ಕೆತ್ತೀದ ಕೆಮ್ಮಣ್ಣು
ನಿಸ್ತ್ರೇಲ್ಲಿಗೆ ಪಟುವಾ ತಾಗುದಾಳೆ | ಕ್ವಾಟೇಗುಡ್ಡ
ಸತ್ಯವ್ವ ಕುಂತಿರುವಾ ಜಾಗಲೀಯ | ಜಮ್ಮೇ
ಮರುಕೆ ತುಪ್ಪುದ ಸೆಳ್ಳೇವು ಕೋಡಿರಣ್ಣಾ || ಇಂಪು ನೋಡೇ ||

ಜೀರಿಗೆ ವಲುದಾಗೆ ಆದಾವ ಅಮ್ಮನ ಸೇವೆ
ಮಾಲೆ ಕಟ್ಟೋರೇ ಬಾರಾಲಿಲ್ಲಾ | ಬರಮಾಗಿರೆ
ರೇವಣ್ಣ ಗ್ವಾಲೀ ಬಾರುದಾರೆ || ಇಂಪು ನೋಡೇ ||

ಮೆಂತೀಯ ವಲುದಾಗೆ ನಿಂತಾವ ಅಮ್ಮನ ಸೇವೆ
ಕುಂಚ ಕಟ್ಟೋರೇ ಬಾರಾಲಿಲ್ಲಾ | ಬರಮಾಗಿರೆ
ಕೆಂಚಣ್ಣ ಗ್ವಾಲಿ ಬಾರೂದಾರೆ || ಇಂಪು ನೋಡೇ ||

ಆರು ಕೋಳೀ ನಿನಗೆ ಸೂಡು ಬೆಲ್ಲಾ ನಿನಗೆ
ದಾವಣಿ ಕುರಿ ಕ್ವಾಣ ನೀಮಿಗವ್ವ | ಕ್ವಾಟೇಗುಡ್ಡ
ಗ್ರಾಮದಗಿರುವೋ ಗಾರತೀಗೆ || ಇಂಪು ನೋಡೇ ||

ಅಚ್ಚಾ ಕೋಳೀ ನಿನಗೆ ಅಚ್ಚ ಬೆಲ್ಲಾ ನಿನಗೆ
ಪಟ್ಟದ ಕುರಿ ಕ್ವಾಣ ನೀನಿಗವ್ವಾ | ಕ್ವಾಟಗುಡ್ಡ
ಪಟ್ಟಾದಗಿರುವಾ ಗಾರತೀಗೆ || ಇಂಪು ನೋಡೇ ||

ಹತ್ತೇನೆ ವರುಸಾದ ತುಪ್ಪುಂಡ ಕ್ವಾಣಾನ
ಜತ್ತೇ ಮಿಣಿ ಹಾಕೀ ಈಡತನ್ನಿ | ಕ್ವಾಣಾನ
ನೆತ್ತೀಲಿ ನ್ಯಣುವಾ ತಾಗುದಾರೆ || ಇಂಪು ನೋಡೇ ||

ನೆತ್ತೀಲಿ ನ್ಯಣುವ ತಗುದ ಕರ್ಪೂರ ಮಾಡಿ
ಅಕ್ಕಯ್ಯ ಜ್ಯೋತೀ ಊರಿಸೇನೆ | ಅಕ್ಕಯ್ಯಗೇ
ಜ್ಯೋತಿ ಉರುಸದಿದ್ದರೆ ನಾನು
ಹಟ್ಟಿಗೀ ಸ್ವರುನಾ ಮಗೂಳಲ್ಲ || ಇಂಪು ನೋಡೇ ||

ಆರೋನೇ ವರುಸಾದ ಆಲುಂಡ ಕ್ವಾಣಾನ
ಜೋಡೇ ಮಿಣಿ ಹಾಕಿ ಈಡತನ್ನಿ | ಕ್ವಾಣನಾ
ನಾಲಿಗೆ ನ್ಯಣವಾ ತಾಗಿಸೇನೆ || ಇಂಪು ನೋಡೇ ||

ನಾಲಿಗೇ ನ್ಯಣವಾ ತಗಿಸೀ ಕರಪೂರ ಮಾಡಿ
ತಾಯವ್ವಗೆ ಜ್ಯೋತಿ ಊರಿಸೇನೆ
ತಾಯೀಗೆ ಜ್ಯೋತಿ ಉರುಸಾದಿದ್ದರೆ ನಾನು
ರೂಡೀಗೀಸ್ವರುನಾ ಮಾಗುಳಲ್ಲಾ || ಇಂಪು ನೋಡೇ ||

ಅಕ್ಕಾ ನಿನ್ನಾ ಪರಿಸಿ ಮಟ್ಟ ಮದ್ಯನಾದಾಗೆ
ಮಳೆ ಬಂದರೆಲ್ಲಿ ಈರತೀರಿ | ಗೌರುಸೆಂದ್ರ
ಸಾಲೆ ತಗ್ಗೂಲಿ ನ್ಯಾರಳಲ್ಲಿ || ಇಂಪು ನೋಡೇ ||

ಅಕ್ಕಾ ನಿನ್ನಾ ಪರಿಸಿ ಮಟ್ಟ ಮದ್ಯನಾದಾಗೆ
ಹನಿ ಬಂದರೆಲ್ಲಿ ಈರತೀರಿ | ಗೌರುಸೆಂದ್ರ
ಸಾಲೆ ಬೇವೀನ ಮಾರುದಾಗೆ || ಇಂಪು ನೋಡೇ ||

ಎದ್ದು ನೀರು ಒಯ್ಕ್ಯಂಡು ಎದ್ದು ಬಾರೋ ಪೂಜಾರಿ
ಗಾದ್ದಾಟ ಬ್ಯಾಡಾ ಮಾನಿಯಾಗೆ | ಪೂಜಾರಿ
ದೊಡ್ಡೋಳ ಪೂಜೇ ತಾಡುದಾವೆ || ಇಂಪು ನೋಡೇ ||

ಆದ ನೀರು ಒಯ್ಕ್ಯಂಡು ವಡುಬಾರೊ ಪೂಜಾರಿ
ಕಾದಾಟ ಬ್ಯಾಡಾ ಮಾನಿಯಾಗೆ | ಪೂಜಾರಿ
ತಾಯವ್ವನ ಪೂಜೇ ತಾಡುದಾವೆ || ಇಂಪು ನೋಡೇ ||

ಅಕ್ಕಯ್ಯ ಪುಡವೊದು ನಲುವತ್ತು ಮಳುದಾಸೀರಿ
ಬೇಗನೆ ಪೂಜಾರಿ ನ್ಯಾರಿಗೊಯ್ಯೋ | ಮಾರವ್ವಗೆ
ವಾಲು ಮ್ಯಾಲೆ ಬರಲೋ ಕೋನೀ ಮುಸುಗು || ಇಂಪು ನೋಡೇ ||

ತಾಯವ್ವ ವುಡುವೋದು ಇಪ್ಪತ್ತು ಮಳುದಾಸೀರಿ
ಗಕ್ಕನೆ ಪೂಜಾರಿ ನ್ಯರಿಗೊಯ್ಯ | ಮಾರವ್ವಗೆ
ವಾಲಿ ಮ್ಯಾಲೆ ಬರಲೋ ಕೋನೀ ಮುಸುಗ

ಇಂಪು ನೋಡೇ ತಾಯಿ ಕೆಂಪು ನೋಡೇ
ಕೆಂಪೆ ಸ್ವಾವಂತೀಗೆ ಹೂವ ನೋಡೆ
ಜಾಲಾತಾಳೇ ಜಂಬ ಮಾಡುತಾಳೇ
ಕಟ್ಟೆ ಮ್ಯಾಲೆ ಮಾರಕ್ಕೆ ತೂಗುತಾಳೆ ದ್ಯಾನ ಮಾಡುತಾಳೆ |

ಕಂಚೀನ ಬಟ್ಲಾಗೆ ಮಿಂಚೆಣ್ಣಿ ಒಯ್ಕ್ಯಂಡು
ಕೆಂಚಿ ಮಾರವ್ವನ ತ್ಯಾಲೀ ಬಾಸೊ | ಪೂಜಾರಿ
ಸಂಪೀಗೆ ಮುಡಸೋ ತೂರಬೀಗೆ || ಜಾಲೂತಾಳೇ ಜಂಬ ||

ಬೆಳ್ಳಿದೂ ಬಟ್ಲಾಗೆ ಒಳ್ಳೆಣ್ಣಿ ಒಯ್ಕ್ಯಂಡು
ನಲ್ಲೆ ಮಾರವ್ವನ ತ್ಯಾಲಿ ಬಾಸೋ | ಪೂಜಾರಿ
ಮಲ್ಲೀಗೆ ಮುಡುಸೋ ತೂರಬೀಗೆ || ಜಾಲೂತಾಳೇ ಜಂಬ ||

ಎಳ್ಳೇನೆ ಕಾಳೋಟು ಸೆಲ್ಲೇವುಟ್ಟೀದಾಳೆ
ಸೆಲ್ಲ್ಯಾಡಿ ನ್ಯರಿಗೇ ವೋಯಿದಾಳೆ | ಮೂರಕ್ಕ
ಅಳ್ಳಾಕಾ ಕಾಣೇ ಕೋನಿ ಮುಸುಗು || ಜಾಲೂತಾಳೇ ಜಂಬ ||

ಸಾಸೀವಿ ಕಾಳೋಟು ರೇಸೀಮುಟ್ಟಿದಾಳೆ
ಏಸೊಂದು ನೆರಿಗೇ ವೋಯಿದಾಳೆ | ಮಾರಕ್ಕ
ಕ್ವಾಟಗಾಕ್ಯಾಳೇ ಕೋನಿ ಮುಸುಗು || ಜಾಲೂತಾಳೇ ಜಂಬ ||

ಎದ್ದಾಳೇ ಮಾರಕ್ಕೆ ಗೆಜ್ಜಿ ಗಲ್ಲೆಂಬೂತ
ಗಗ್ಗರುದ ಕೀಲು ಸಡೀಲಾವೆ | ಮರಕ್ಕ
ಎದ್ದಾಳೆ ಬಟ್ಟಾ ಬಯಲಾಗೆ || ಜಾಲೂತಾಳೇ ಜಂಬ ||

ನ್ಯಡುದಾಳೆ ಮಾರಕ್ಕಾ ಕಡುಗ ಗಲ್ಲೆಂಬೂತ
ಕಡುಗಾದ ಕೀಲು ಸಡೀಲಾವೆ | ಮಾರಕ್ಕ
ನ್ಯಡುದಾಳೆ ಬಟ್ಟಾ ಬಾಯಲೀಗೆ || ಜಾಲೂತಾಳೇ ಜಂಬ ||

ಉದ್ದೀನ ಕಾಳಂಗೆ ತಿದ್ದ್ಯವ ಮಾರಕ್ಕಾನ
ಉಜ್ಜೂಣಿ ಕಡಿಗೇ ಮಾಕ ಮಾಡಿ | ಮಾರಕ್ಕಾನ
ತಿದ್ದ್ಯಾವೇ ಬಟ್ಟಾ ಬಾಯಲೀಗೆ || ಜಾಲೂತಾಳೇ ಜಂಬ ||

ಕಡ್ಲೀಯ ಕಾಳಂಗೆ ಕೇಡದರ ಮಾರಕ್ಕಾನ
ಕಡವೂರ ಕಡಿಗೇ ಮಕ ಮಾಡಿ | ಮೂರಕ್ಕಾನ
ಕೊಡುದಾರೇ ಬಟ್ಟಾ ಬಯಾಲೀಗೆ || ಜಾಲೂತಾಳೇ ಜಂಬ ||

ಬೇವಿನ ಸೀರೇದೋರು ಬಾಯ ಬೀಗಾದೋರು
ಮ್ಯಾಲೆ ಅಂತುರಲೇ ಸೀಡಿಯೋರು | ಬರುತಾರೆ
ಮಾರಕ್ಕ ಕದುವಾ ತಾಗಿಯಂದಾ || ಜಾಲೂತಾಳೇ ಜಂಬ ||

ಕದುವೇನೆ ತಗಿಯೋಕೆ ನಿನಗಿನ್ನ ಸಿಕ್ಕೋಳು
ಸುತ್ತಿ ಬಾರಮ್ಮ ಪಾಗಳೀಯ | ಬಾಗಲ ಮುಂದೆ
ಸುತ್ತಿರುವ ಬೀಗ ತಾಗಿಸೇನೆ || ಜಾಲೂತಾಳೇ ಜಂಬ ||

ನಡಿಬೀಡಿ ವೋದಾಳೆ ದಿನ್ನೆತ್ತಿ ನೋಡ್ಯಾಳೆ
ಆವಿನ ಕೋಡು ಮೂರಿಸಾಳೆ | ಆವಿನ ಕೊಂಬು
ಮುರಿಸಿದರೆ ಆವೇನೇ ಬಲ್ಲಾವೆ ಆಡು
ಮುಕ್ಕುಳಾಗೆ ಸಾಳಿ ಜ್ವಾರ || ಜಾಲೂತಾಳೇ ಜಂಬ ||

ಆಡು ಮಕ್ಕುಳಿಗೆ ಸಳಿ ಜಾರುಂಟಾದಾರೆ
ಬೇವಿನುಡಿಗೇಲಿ ಬಾರುತಾವೆ || ಜಾಲೂತಾಳೇ ಜಂಬ ||

ಬಂಡೆ ಉಳ್ಳಿಸಿರಣ್ಣ ಬಂಡೆ ನಿಲ್ಲಿಸಿರಣ್ಣ
ಬಂಡೆಗೆ ಬಂಡಾರ ಈಡಿರಣ್ಣಾ | ಗೌರೂಸಂದ್ರ
ದಂಡಿಗೋಗದೇ ಸಾಡುಗಾರ || ಜಾಲೂತಾಳೇ ಜಂಬ ||

ಹಾಲಿ ಉಳ್ಳಸಿರಣ್ಣ ಗಾಲಿ ನಿಲ್ಲಿಸಿರಣ್ಣ
ಗಾಲಿಗೆ ಗಂದಾವೂ ಈಡಿರಣ್ಣಾ | ಗೌರೂಸಂದ್ರ
ದಾಳಿಗೋಗೊದೇ ಸಾಡುಗಾರ || ಜಾಲೂತಾಳೇ ಜಂಬ ||

ನೀಲು ಆದ ಕುದರಿ ಏರ್ಯಾಳೆ ಮಾರಕ್ಕ
ನೀರಾಗಿ ಸಾರಿ ವೋರುಟಾಳೆ | ಮಾರಕ್ಕ
ಮೇರಿದರಿಗೆ ಗಟುವಾ ವೋರಿಸಾಳೆ || ಜಾಲೂತಾಳೇ ಜಂಬ ||

08_84_MDK-KUH

ಕೆಂದು ಆದ ಕುದರಿ ಏರ್ಯಾಳೆ ಮಾರಕ್ಕೆ
ಕೆಂಡುದಾಗೆ ಸಾರಿ ವೋರುಟಾಳೆ | ಮಾರಕ್ಕ
ಲಿಂಗದರಿಗೆ ಗಮವಾ ವೋರಿಸಾಳೆ || ಜಾಲೂತಾಳೇ ಜಂಬ ||

ಅಡ್ಡಗಲ್ಲಿನ ಮ್ಯಾಲೆ ಎಡ್ಡಾಗಿ ಕುಂತಾಳೆ
ಗುಡ್ಡಾಕೆ ಮಾರೀ ತೀರುವಾಳೆ | ಮಾರಕ್ಕಾನ
ಅಡಾಣಗಿ ಕಾಳುವ್ಯಾರೇ ಗಾವುಡಾರು || ಜಾಲೂತಾಳೇ ಜಂಬ ||
ಸಾಣಿಗಲ್ಲಿನ ಮ್ಯಾಲೆ ಲೇಸಾಗಿ ಕುಂತಾಳೆ
ದೇಸಾಕೆ ಮಾರೀ ತೀರುವಾಳೆ | ಮಾರಕ್ಕಾನ
ಬೀಸಣಿಗೆ ಕಾಳುವ್ಯಾರೇ ಗಾವುಡಾರು || ಜಾಲೂತಾಳೇ ಜಂಬ ||

ಸತ್ತೇನೆ ನುಡಿಯ್ವ ಮುತ್ತೇನಿ ಮುಡಿಯವ್ವ
ಎತ್ತಲೋಗಿದ್ದೇ ದಯಮಾರಿ | ಗೌರೂಸಂದ್ರ
ಬಿತ್ತಾಲೋಗಿದ್ದೇ ಬೀಳಿಜ್ವಾಳ || ಜಾಲೂತಾಳೇ ಜಂಬ ||

ಸುರುಡೇನೆ ಗುಡಿಯವ್ವ ಮಲ್ಲೀಗೆ ಮುಡಿಯವ್ವ
ಎಲ್ಲಿ ಗೋಗಿದ್ದೇ ದಾಯಮಾರಿ | ಗೌರೂಸಂದ್ರ
ಸೆಲ್ಲಾಲೋಗಿದ್ದೇ ಬೀಳಿ ಜ್ವಾಳ || ಜಾಲೂತಾಳೇ ಜಂಬ ||

ಅಕ್ಕಾನೆ ಕರವೋಕೆ ನಲವತ್ತೇಳು ಮಂದಿ
ಜತ್ತಿರುವೇರು ಸಾವಡೀಕಿ | ಸೋಬನದೋರು
ಅಕ್ಕಾ ಮಾರವ್ವನ ಕಾರವೋಕೆ || ಜಾಲೂತಾಳೇ ಜಂಬ ||

ತಾಯೇನೆ ಕರವೋಕೆ ಇಪ್ಪತ್ತೇಳು ಮಂದಿ
ಜೋಡಿಲಯ್ಯನೋರು ಸವಡಿಕೆ | ಸೋಬನದೋರು
ತಾಯಿ ಮಾರವ್ವನ ಕಾರವೋಕೆ || ಜಾಲೂತಾಳೇ ಜಂಬ ||

ಪೂಜಾಗಲೇಳೇ ಲಿಂಗದಾ ಮಾತಾಗಲೆಳೇ
ಮಾತಾಗಲೆಳೇ ಲಿಂಗದಾ ಪೂಜಾಗಲೇಳಮ್ಮಾ

ಆರೇನೆ ಮಾಕ್ಕಾಳು ತೋಳಾಗೋಯಿಸಿಕೊಂಡು
ವೊದಾಳೆ ಊರ ವಳಾಗೆಲ್ಲ | ಗುರೂಮಾನೆ
ನೀಡೆಂದಳು ನೊರೇ ಆಲು || ಮಾತಾಗಲೆಳೇ ||

ಅತ್ತೇನೆ ಮಕ್ಕಾಳು ತೆಕ್ಕೆ ಗೋಯಿಸಿಕೊಂಡು
ವೊಕ್ಕಾಳೆ ಊರ ವಳಾಗೆಲ್ಲ | ಗೌಡರ ಮನೆ
ಇಕ್ಕೆಂದಳು ಎಮ್ಮಿ ನೊರೇ ಆಲು || ಮಾತಾಗಲೆಳೇ ||

ದೊಡ್ಡ ಮಣೀ ಸಿರೆ ಅಡ್ಡಾಣಿ ನ್ಯಡೀಗೊಟ್ಟು
ಗಡ್ಡ್ಯಾ ಗಡ್ಡಾಡಿ ಬರಾವೋಳೆ | ಮಾರಕ್ಕಾನ
ರೊಡ್ಡೀಸ ನೊಂದೆ ಕಾರದೇನೆ || ಮಾತಾಗಲೆಳೇ ||

ಮಾಸಿನಿ ಸೀರೇ ಮ್ಯಾಲೆ ಕೂಸಾನೆತ್ತೀ ಕೊಂಡು
ದೇಸಾವ ನೋಡಲೊರೂಟಾಳೆ | ಮಾರಕ್ಕ
ಮ್ಯಾಸ ಮಾನ್ಯರಿಗೆ ತಿಳೀಯಾವೆ || ಮಾತಾಗಲೆಳೇ ||

ಗಂಜೀ ಸೀರೇ ಮ್ಯಾಲೆ ಕಂದಾನೆತ್ತೀ ಕೊಂಡು
ಮಂದೀಯ ನೋಡಲೊರೂಟಾಳೆ | ಮಾರಕ್ಕ
ಮಂದ ಮಾನ್ಯರಿಗೆ ತಿಳಿಯಾವೆ || ಮಾತಾಗಲೆಳೇ ||

ಬಡುಗಾನೇ ಬೇಡಮ್ಮ ಎಡಗಡೆ ಮಾಳೀ ಗುರುನ
ಬಡಿಯಲಚ್ಚಾಡ ಗವೂಡಾನ | ಬೋರಯ್ಯ
ಕಡುಗ ಬೇಡಮ್ಮ ಎಡಗೈಯ್ಯಗೆ || ಮಾತಾಗಲೆಳೇ ||

ಬಂಡಿಯ ಬೇಡಮ್ಮ ಮುಂದು ಮೊಳೀಗುರುನ
ಗಂಜಿಯಚ್ಚಾಡ ಗವುಡಾನ | ಬೋರಯ್ಯನ
ಬಂದೇ ಬೇಡಮ್ಮ ಬಲಗೈಯ್ಯಗೆ || ಮಾತಾಗಲೆಳೇ ||

ವಾಲೇನ ಬೇಡಮ್ಮ ಸಾಲು ಮಾಳೀಗುರುನ
ಸಾದಿನಚ್ಚಾಡ ಗವುಡಾನ | ಬೋರಯ್ಯನ
ವಾಲೆ ಬೇಡಮ್ಮ ಸವಾಜೋಡೆ || ಮಾತಾಗಲೆಳೇ ||

ಸಂದ್ಯಗೇ ಮಾರಕ್ಕಾ ಮಂದ್ಯಾಗೆ ಬೋರಣ್ಣ
ಅಂದುರುವ ತೆನಿಯ ಇಡಾಕಂಡು | ನೋಡ್ಯಾಳೆ
ಮಂದ್ಯಾಗ ಬರುವ ಗವೂಡಾನ || ಮಾತಾಗಲೆಳೇ ||

ಸಂದಿ ಸಂದಗೇ ದೆವ್ವಾ ಅಂಟಿಕೊಂಡೈದಾವೆ
ಸಂದಿಗೆ ಮಾರಕ್ಕ ಇಳೂದಾಳೆ | ಹೊಗ್ಯಾರೆ
ಮುಂದೆ ನೋಡಿ ಬ್ಯಾಟಿ ಕಡೀರಣ್ಣ || ಮಾತಾಗಲೆಳೇ ||

ಕ್ವಾಟೀ ಕ್ವಾಟಿಗೇ ದೆವ್ವಾ ಆತು ಕೊಂಡೈದಾವೆ
ಕ್ವಾಟಿಗೇ ಮಾರಕ್ಕಾ ಇಳೂದಾಳೆ | ಹೋಗ್ಯಾರೆ
ಮಾತ್ನಾಡಿ ಬ್ಯಾಟಿ ಕಡೀರಣ್ಣ || ಮಾತಾಗಲೆಳೇ ||

ಕುಂಬಾರಾ ಗೇರೀಗೆ ವೋದಾಳೇ ಮಾರಕ್ಕಾ
ಕುಂಬಾರಣ್ಣಾನ ಕರೀಸಾಳೆ | ನಿಲ್ಲಿಸಿ ಕೇಳಿ
ಸವುಗಾಕೆ ಹೇಳೋ ಮಗೀ ಬೇಕು || ಮಾತಾಗಲೆಳೇ ||

ಮ್ಯಾದಾರಾ ಗೇರೀಗೆ ವೋದಾಳೇ ಮಾರಕ್ಕ
ಮ್ಯಾದರಣ್ಣಾ ಕರೀಸ್ಯಾಳೆ | ನಿಲ್ಲಿಸಿ ಕೇಳಿ
ಸವುಗಾಕೆ ಹೇಳೋ ಮರಾ ಬೇಕು || ಮಾತಾಗಲೆಳೇ ||

ಬ್ಯಾಗಾರ ಗೇರೀಗೆ ವೋದಾಳೆ ಮೂರಕ್ಕ
ಬ್ಯಾಗಾರಣ್ಣಾನ ಕರೀಸಾಳೆ | ನಿಲ್ಲೀಸಿ ಕೇಳಿ
ಅರುಗಾಕೇ ಏಳು ಮೀಣಿ ಬೇಕು || ಸೋಬಾನಾವೇ ||

ಗೆಜ್ಜೇ ಬಿದ್ದಾವ್ ಸಣ್ಣ ಮಳುಲಾಗೆ
ವಜ್ಜುರುದ ನೆರಿಗಾಗೆ

ಹತ್ತು ವರುಸದ ಮಗುನ ಹತ್ತಂದಳು ಸಿಡಿಗಳು
ಅತ್ತಾಲದುನಾ ಎದಿರೇನೆ | ಬೆದಿರೇನೆ
ಜೋಡೇಲೆ ಬರುತೇನೆ ನಡಿ ಮಗುನೇ || ಸಿರಿಗಂದಾದ ||

ಆರೊರಸುದಾ ಮಗುನ ಆಡೆಂದಳು ಸಿಡಿಗಳು
ಆಡಾಲಾರೆಮ್ಮಾ ಎದೀರೇನೆ | ಬೆದಿರೇನೆ
ಜೋಡೇಲೆ ಬರುತ್ತೇನೆ ನಡಿ ಮಗುನೇ || ಸಿರಿಗಂದಾದ ||

ಎಡಗೈಲೆ ಬಾಳೇ ಹಣ್ಣು ಗಡಿಗೇಲಿ ಆಲು ಮಸರು
ವಡುದಾಡಿ ಮೀಸಾಲು ವರುಟಾವೇ | ಗೌರೂಸಂದ್ರ
ವಕ್ಕೂ ಮಾರವ್ವನ ಪಗೀಳಾಗೇ || ಸಿರಿಗಂದಾದ ||

ಹೂವಾ ಇಲ್ಲಾವೆಂದು ಹೂವೀಗೋಗುಲುದಿರು
ಹೂವೇ ಮಾರಮ್ಮನ ಗುಡಿ ಇಂದೆ | ಸೂರ್ಯೇಕಾಂತಿ
ಹೂವರಳಿ ಬಾಯಿ ಬಿಡೂತಾವೆ || ಸಿರಿಗಂದಾದ ||

ಮಗ್ಗೇ ಇಲ್ಲಾವೆಂದು ಮೋಗ್ಗೇಗುಲುದಿರು
ಮೊಗ್ಗೇ ಮಾರವ್ವನ ಗುಡಿ ಇಂದೆ | ಸೂರ್ಯೇಕಾಂತಿ
ಮಗ್ಗುರುಳಿ ಬಾಯಿ ಬಿಡೂತಾವೆ || ಸಿರಿಗಂದಾದ ||

ಅಲ್ಲೇ ಇಲ್ಲೇ ಹೂವು ವಲ್ಲಾಳೆ ಮಾರಕ್ಕ
ಅಲ್ಲಿ ನನ್ನಿವಾಳದಳಗೇಲಿ | ಕಲ್ಲೇದುವ್ವ
ಮಲ್ಲಿಗೆ ಸರುವೊಂದೇ ಮುಡಿದಾಳೆ || ಸಿರಿಗಂದಾದ ||

ಅತ್ತಾ ಲಿತ್ತಾ ಹುವು ವಪ್ಪಾಳೇ ಮಾರಕ್ಕ
ಸಿಕ್ಕಾ ನನ್ನಿವಾಳದಳಿಗೇಲಿ | ಕಲ್ಲೇದುವ್ವ
ಮುತ್ತಿನ ಸರವೋಂದೇ ಮುಡುದಾಳೆ || ಸಿರಿಗಂದಾದ ||

ಕಟ್ಟೇ ಮೇಲೋಗುತ ಎತ್ತುಗುಳು ನೋಡುತಾ
ವಪ್ಪಾಕೊಂದೆಜ್ಜೆ ನ್ಯಡಾವೂತ | ಪೂಜಾರಿ
ಅಕ್ಕಾಗೆ ಹೂವೂ ಕೊಯಿದಾನೆ || ಸಿರಿಗಂದಾದ ||

ಏರೀ ಮ್ಯಾಲೋಗುತ ಯಾಳ್ಳ್ಯೆವು ನೋಡುತ
ಜಾವಕ್ಕೊಂದೆಜ್ಜೆ ನ್ಯಾಡುವೂತ | ಪೂಜಾರಿ
ಅಕ್ಕಯ್ಯಗೆ ಹೂವು ಕೊಯ್ದಾನೆ || ಸಿರಿಗಂದಾದ ||

ಅಂದವುಳ್ಳ ತ್ವಾಟಕ್ಕೆ ಸೆಂದವುಳ್ಳೇಣೀ ಆಕಿ
ಗಂಜಿಲಚ್ಚಾಡ ಮಡಿಲೊಡ್ಡಿ | ಪೂಜಾರಿ
ಅಕ್ಕಯ್ಯಗೆ ಹೂವು ಕೊಯ್ದಾನೆ || ಸಿರಿಗಂದಾದ ||

ಆಯವುಳ್ಳ ತ್ವಾಟಕ್ಕೆ ಸೇಯವುಳ್ಳೇಣೀ ಆಕಿ
ಸಾದಿನಚ್ಚಾಡ ಮಡಲೊಡ್ಡಿ | ಪೂಜಾರಿ
ತಾಯವ್ವಗೆ ಹೂವು ಕೊಯ್ದಾನೆ || ಸಿರಿಗಂದಾದ ||

ಪೂಜಾರಿ ತಂದಾ ಹೂವು ಪೂಜೇಗೆ ಸಾಲಾವಂದು
ತಾಯೀ ಮಾರವ್ವ ಮನಮುನುದೆ | ಪೂಜಾರಿ
ವೋಗಿ ವಂಬಾಳೆ ಕಡಿಸಾನೆ || ಸಿರಿಗಂದಾದ ||

ವಕ್ಕಲು ತಂದಾ ಹೂವು ಪಕ್ಕಿಗೆ ಸಾಲಾವಂದು
ಅಕ್ಕಾ ಮಾರವ್ವನ ಮನಾ ಮುನುದೆ | ಪೂಜಾರಿ
ವೊಕ್ಕೇ ವಂಬಾಳೆ ಕಡಿಸಾನೆ || ಸಿರಿಗಂದಾದ ||

ಸಿಕ್ಕದು ಕಾಟೇನಟ್ಟಿ ಸಿನ್ನುದ ಬಾವೀ ನೀರು
ಹಟ್ಟಿಗೆ ಸೆಳ್ಳೇವು ಕೊಡಿರಣ್ಣಾ | ಕಾಟೇನಟ್ಟಿ
ಸತಿ ಬಂದು ಊರೂ ವೊಗುದಾಳೆ || ಸಿರಿಗಂದಾದ ||

ಸಿನ್ನದು ಕಾಟ್ಟೇನಟ್ಟಿ ಸಿನ್ನಾದ ಬಾವೀ ನೀರು
ವೊಣಿಗೆ ಸೆಳ್ಳೇವು ಕೊಡಿರಣ್ಣಾ | ಕಾಟೇನಟ್ಟಿ
ತಾಯಿ ಬಂದು ಊರು ವೊಗುದಾಳೆ || ಸಿರಿಗಂದಾದ ||
ತಾಯಿ ಬಾರೇ ತಾಯಮ್ಮ ಬಾರೇ
ಕ್ವಾಟೆಗುಡ್ಡದ ತಾಯೀ ನೀನೇ ಬಾರೆ

ಸಿನ್ನದರಗಿಣಿ ಬಾರೆ ಬಣ್ಣದ ನವಲೀ ಬಾರೆ
ಸನ್ನೆಲಿವುರುನ ಕಾರುದಾಳೆ | ಕ್ವಾಟೇ ಗುಡ್ಡ
ಯಾಲಕ್ಕಿ ಮರುನಾ ಸಾರಣೀಗೆ || ತಾಯಿಬಾರೇ ||

ಸಿನ್ನದರಗಿಣಿ ಬಾರೆ ಬಣ್ಣದ ನವಲೀ ಬಾರೆ
ಸನ್ನೆಲಿವುರುನಾ ಕಾರುದಾಳೆ | ಕ್ವಾಟೇಗುಡ್ಡ
ಉತ್ತುತ್ತಿ ಮರುನಾ ಸಾರಣೀಗೆ || ತಾಯಿಬಾರೇ ||

ಜಾಲುತಾಳೆ ಜಂಬ ಮಾಡುತಾಳೆ
ಕಟ್ಟೆ ಮೆಲೆ ಮಾರಕ್ಕ ತೂಗುತಾಳೆ ದ್ಯಾನ ಮಾಡುತಾಳೆ ||
ಗಾದುಗದುಲೇ ಬೆನ್ನು ನಡುಗ್ಯಾವೆ ಪೂಜಾರಿ
ಕಾಶೀಯದಟ್ಟೀ ವೋಗಿಸಾವೇ || ಜಾಲೂತಾಳೇ ಜಂಬ ||

ಕಲ್ಲೇನೆ ಗುಡಿಯವ್ವ ಮಲ್ಲೀಗೆ ಮುಡಿಯವ್ವ
ಎಲ್ಲಿ ಹೋಗಿದ್ದೇ ದಾಯಮಾರಿ | ಗೌರೂಸಂದ್ರ
ಸೆಲ್ಲಾಲೋಗಿದ್ದೇ ಬೀಳಿಜ್ವಾಳಾ || ಜಾಲೂತಾಳೇ ಜಂಬ ||

ಸುತ್ತೇನೆ ಗುಡಿಯವ್ವ ಮುತ್ತೇನೆ ಮುಡಿಯವ್ವ
ಎತ್ತಲೋಗಿದ್ದೇ ದಯಮಾರಿ | ಗೌರೂಸಂದ್ರ
ಬಿತ್ತಲೋಗಿದ್ದೇ ಬೀಳಿಜ್ವಾಳ || ಜಾಲೂತಾಳೇ ಜಂಬ ||

ದೊಡ್ಡ ದೊಡ್ಡಾ ಪದುವ ದೊಡ್ಡ ಬರಣಿಗೆ ತುಂಬಿ
ದೊಡ್ಡ ಮುದ್ದೂರಿ ಬೀಗದತ್ತಿ || ಜಾಲೂತಾಳೇ ಜಂಬ ||

ದಿಡಿ ದೀಡಿ ವೋದಾಳೆ ದಿನ್ನತ್ತಿ ನೋಡ್ಯಾಳೆ
ಕೈ ಬೀಸನುಮಾನ ಕಾರುದಾಳೆ | ನಿಲ್ಲಿಸಿ ಕೇಳಿ
ಇಂಬಟ್ಟಿ ಅನುಮಾ ನಾಮಗೀಟು || ಜಾಲೂತಾಳೇ ಜಂಬ ||

ಎಲ್ಲೇಲ್ಲಿ ಇಂಬಮ್ಮ ಇಲ್ಲೇಲ್ಲಿ ಇಡು ತಮ್ಮ
ವಡಿಯಮ್ಮ ರತುವಾ ವರಿಯಕೆ | ಗುರೂಸಂದ್ರ
ತನುವಿದ್ದು ತಾವಾ ಮ್ಯಾರಿಯಮ್ಮ || ಜಾಲೂತಾಳೇ ಜಂಬ ||

ಸಣ್ಣ ಸಣ್ಣಾ ಸದುವ ಸಣ್ಣ ಬರಣಿಗೆ ತುಂಬಿ
ಸಣ್ಣ ಮುದ್ದೂರಿ ಬೀಗದತ್ತಿ | ಮಾರವ್ವ
ಸಣ್ಣಳಿಗೊಪ್ಪಿಸುವೇ ಪಾದನೂರು || ಜಾಲೂತಾಳೇ ಜಂಬ ||

ಅಕ್ಕಾ ನಿಮ್ಮ ಅಡೇವಿ ಅಕ್ಕಾ ನಿಮ್ಮ ಪಾಡೇವಿ
ಅಕ್ಕಾ ನಿಮ್ಮ ನಿದ್ರಿ ಕಳದೇವಿ | ಮಾರಕ್ಕ
ಪಟ್ಟೆ ಮಂಚದುಲೇ ಪಾವಡಿಸೆ || ಜಾಲೂತಾಳೇ ಜಂಬ ||

ತಾಯಿ ನಿಮ್ಮಾಡೇವಿ ತಾಯಿ ನಿಮ್ಮ ಪಾಡೇವಿ
ತಾಯಿ ನಿಮ್ಮ ನಿದ್ರಿ ಕಳದೇವಿ | ಮಾರಕ್ಕ
ಬಣ್ಣದ ಮಂಚದುಲೇ ಪಾವಡಿಸೇ || ಜಾಲೂತಾಳೇ ಜಂಬ ||

|| ಜಯನೆನ್ನಿರೀ ಜಯ ಮಂಗಳೆನ್ನಿರಿ ||

ತಾಲಿಯ ತಕ್ಕೊಂಡು ಹಾಲಿಗೆ ನಾನೋದೆ
ಹಾಲಿಗೆ ನಾನೋದೆ
ಹಾಲಿನಾಗಳಾವು ಮನಿಗಿದ್ದಾವೆ | ಈ ಊರು
ನಿಂತಾರೇ ಸ್ವಾಮಿ ಶಿವಪೂಜಿಗೆ
|| ಜಯನೆನ್ನಿರೀ ಜಯ ಮಂಗಳೆನ್ನಿರಿ ||

ಜೋಳಿಗೆ ತಕ್ಕೊಂಡು ಪತ್ರಿಗೆ ನಾನೋದೆ
ಪತ್ರ್ಯಾಗಳ ಸರ್ಪ ಮನಿಗಿದ್ದಾವೆ | ಈ ಊರು
ನಿಂತಾರೆ ಸ್ವಾಮಿ ಶಿವಪೂಜಿಗೆ |
|| ಜಯನೆನ್ನಿರೀ ಜಯ ಮಂಗಳೆನ್ನಿರಿ ||

ಬಾವಿಯ ಸುತ್ತಿಕ್ಕಿ ಬಸವನ ಕೊಂದಯ್ಯಗೆ
ದೀರಾ ಮೂರುತಿ ನಮ್ಮಪ್ಪಯ್ಯಗೆ || ಗುರ್ಲೂಕಟ್ಟಿ
ನಾಗರುಗನ್ನರನ್ಯಕೈಯ ಆರುತಿ ತಂದಿತ್ತೆರೆ |
|| ಜಯನೆನ್ನಿರೀ ಜಯ ಮಂಗಳೆನ್ನಿರಿ ||

ಅಪ್ಪನಾ ಗುಡಿ ಮುಂದೆ ತುಪುಳ್ಳದಾರಿಕೆ
ನಿಸ್ತ್ರೇರು ನೆರಿಗೆ ಮುದಾರಿಡಿರೆ || ಕೈಯ್ಯಾಗಳಾ
ಮುತ್ತಿಣರುತೆ ಈ ಜಾತುನಾವೆ
|| ಜಯನೆನ್ನಿರೀ ಜಯ ಮಂಗಳೆನ್ನಿರಿ ||

ಅಣ್ಣಾನಾ ಗುಡಿಮುಂದೆ ಹೆಣ್ಣುಳ್ಳಾ ಜಾರಿಕೆ
ಕನ್ಯೇರು ನೇರಿಗೆ ಮೂದರಿಡಿರೆ | ಕೈಯ್ಯಗಳಾ
ಹೊನ್ನಿನ ಆರುತಿ ಈ ಜಾತೂನಾವೆ |
|| ಜಯನೆನ್ನಿರೀ ಜಯ ಮಂಗಳೆನ್ನಿರಿ ||

ಕಂಕುಮದೆರುಡಾರುತಿ, ಕುಂಕುಮುದೆರುಡಾರುತಿ
ಕುಂತಲ್ಲಿ ಜೊತಿ ಮಾಡಿ ಕುಂತಲ್ಲಿ ಜೊತಿ ಮಾಡಿ
ಮಂದಾಗಮಾನಿ ಆರುತಿಗಾಳು ಬೆಳಾಗುವೆ
ಸ್ವಾಮಿ ನಿಮಾಗೆ |

ಅರಿಶಿಣದೇರುಡಾರುತಿ, ಆರಿಷಿಣದೇರುಡಾರುತಿ
ಅರುಸದಿಂದಾಲಿ ತಂದು ಹರನುದಿರಿದಾಲಿ ತಂದು
ಮಂದ್ಲಾಗಮಾನಿ ಆರುತಿಗಾಳು ಬೆಳುಗಾವೆ
ಸ್ವಾಮಿ ನಿಮಗೆ

ಮುತ್ತಿನೆರುಡಾರತಿ, ಮುತ್ತಿನೆರುಡಾರುತಿ
ಮುತ್ತೈದರಿಡಕೊಂಡು, ಮುತ್ತೈದೈರಿದಾಕೊಂಡು
ಮಂದಾಗಮಾನಿ ಆರುತಿಗಾಳು ಬೆಳುಗಾವೆ
ಸ್ವಾಮಿ ನಿಮಾಗೆ |