ದೂರ ಎಷ್ಟು?
ತಾಲ್ಲೂಕು : ಪಾವಗಡ
ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೯೭ ಕಿ.ಮೀ

ಪಾವಗಡ ಹಿಂದೆ ಪಾವುಕೊಂಡ, ಪಾಮುಕೊಂಡ, ಪಾಗೊಂಡೆ, ಪಾವ್ಗಡ, ಪಾವಗಡ ಈ ರೀತಿ ಕರೆಯಿಸಿಕೊಳ್ಳುತ್ತಾ ಬಂದಿದೆ ಈ ಊರು, ಪಾವಗಡದ ಬೆಟ್ಟವೂ ಹಾವಿನ ಹೆಡೆಯಂತೆ ಈಗಲೂ ಕಾಣುತ್ತಿದೆ. ಆದ್ದರಿಂದಲೇ ಏನೋ ಇದಕ್ಕೆ ಪಾವು=ಪಾಮು=ಹಾವು ಎಂತಲೂ, ಕೊಂಡ ಎಂದರೆ ಬೆಟ್ಟ ಎಂದು ಕರೆಯುವ ಇತಿಹಾಸವಿದೆ.

ಪಾವಗಡದ ಶ್ರೀ ಶನೇಶ್ವರ ದೇವಸ್ಥಾನವು ಯಾತ್ರಿಕರನ್ನು ಕೈಬೀಸಿ ಕರೆಯುತ್ತಿದೆ. ಶ್ರೀ ಶನಿದೇವರು ವಿಸ್ವಂತನೆಂಬ ಸೂರ್ಯನಿಂದ ಛಾಯಾದೇವಿಯಲ್ಲಿ ಜನಿಸಿದವ. ನವಗ್ರಹ ಸಮುದಾಯಗಳಲ್ಲಿ ಅತ್ಯಂತ ಪ್ರಭಾವಿತನು, ಅತಿ ಬೇಗ ಪೂಜೆಗೆ ಫಲಿಸುವವನು ಆಗಿದ್ದಾನೆ. ಶನಿದೇವನೆಂದರೆ ದೇವಾನುದೇವತೆಗಳಿಗೂ ಭಯಭ ಕ್ತಿ. ಯಾರನ್ನೂ ಬಿಡದೇ ವರ್ಷವಾರು ಕಾಡಿದವ. ಆದ್ದರಿಂದ ಜನತೆಗೆ ಅತ್ಯಂತ ಭಯ ಭಕ್ತಿಗಳಿಂದ ಹರಕೆ, ಧ್ಯಾನ, ಮುಡಿ ಸಲ್ಲಿಸಿ ಪೂಜೆ ಸಲ್ಲಿಸುತ್ತಾರೆ.

 

ಶ್ರೀ ಶನಿ ಮಹಾತ್ಮ ದೇವಸ್ಥಾನ

ದೂರ ಎಷ್ಟು?
ತಾಲ್ಲೂಕು : ಪಾವಗಡ
ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೯೭ ಕಿ.ಮೀ

ಸಹೃದಯ ಭಕ್ತಾದಿಗಳು ಹಾಗೂ ದಾನಿಗಳ ಸಹಾಯದಿಂದ ಈ ಕಾರ್ಯವು ಉತ್ತರೋತ್ತರ ಪ್ರಗತಿಯನ್ನು ಹೊಂದುತ್ತಾ ೧೯೫೫ ರಲ್ಲಿ ದೇವಸ್ಥಾನದ ನಿರ್ಮಾಣವಾಗಿ ಶ್ರೀ ಶನಿಮಹಾತ್ಮನ ವಿಗ್ರಹದ ಪ್ರತಿಷ್ಟಾಪನೆಯಾಯಿತು. ನವಗ್ರಹಗಳ ಪ್ರತಿಷ್ಟಾಪನೆ ಆಯಿತು. ಗಣಪತಿ, ಲಕ್ಷ್ಮಿ ಹಾಗೂ ಶ್ರೀ ಸತ್ಯನಾರಾಯಣ ಸ್ವಾಮಿಯ ಪುಟ್ಟ ದೇಗುಲಗಳು ದೇವಾಲಯದ ಪ್ರಾಂಗಣದಲ್ಲೇ ನಿರ್ಮಾಣವಾದವು.

ಶ್ರೀ ಶನೈಶ್ವರ  ಸ್ವಾಮಿ ದೇವಾಲಯದ ಗೋಪುರದಲ್ಲಿ ನಿರ್ಮಿತವಾಗಿರುವ ಶೈವ ಹಾಗೂ ವೈಷ್ಣವ ಪಂಥದ ಬಹುವರ್ಣ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುತ್ತದೆ. ದೇವಸ್ಥಾನದ ಹೊರಾಂಗಣದಲ್ಲಿರುವ ವರ್ಣಾಲಂಕೃತ ಶ್ರೀ ಶನೈಶ್ವರ ಸ್ವಾಮಿಯ ಸುಂದರ ಮೂರ್ತಿ, ಪಂಚಮುಖಿ ಆಂಜನೇಯ, ನಾಟ್ಯ ಗಣಪತಿ, ವೆಂಕಟರಮಣಸ್ವಾಮಿ, ಅನಂತಶಯನ ಮೂರ್ತಿಗಳು, ಚಿತ್ತಾಕರ್ಷಕವಾಗಿದ್ದು, ದೇವಾಲಯದ ಸೌಂದರ್ಯವನ್ನು ನೂರ್ಮಡಿಗೊಳಿಸಿವೆ.

 

ಪಾವಗಡದ ಕೋಟೆ

ಮಧುಗಿರಿ ಊರು ಬಾಗಿಲು

ಪಾವಗಡ ಬೆಟ್ಟವು ಚಾರಣಿಗರಿಗೆ, ಸಾಹಸ ಪ್ರಿಯರಿಗೆ, ಸವಾಲೆಸೆದರೆ: ಇತಿಹಾಸಕಾರರಿಗೆ, ಸಂಶೋಧಕರಿಗೆ ಮೊಗೆದಷ್ಟು ಐತಿಹಾಸಿಕ ವಿಚಾರಗಳನ್ನುಸಾರುವ ಚಿಲುಮೆಯಾಗಿದೆ.

ಪಾವಗಡದ ಬೆಟ್ಟಕ್ಕೆ/ಕೋಟೆಗೆ ಹತ್ತು ದಿಡ್ಡಿ ಬಾಗಿಲು ಅಥವಾ ಹೆಬ್ಬಾಗಿಲುಗಳಿವೆ. ಇವುಗಳ ಮೂಲಕ ಬೆಟ್ಟದ ಮೇಲೇರಬಹುದು. ಬೆಟ್ಟವನ್ನೇರಲು ಮೆಟ್ಟಿಲುಗಳ ವ್ಯವಸ್ಥೆ ಸಹ ಇದೆ. ಬೆಟ್ಟದ ತಪ್ಪಲಲ್ಲಿ ಕಮ್ಮಾರ ಮಂಟಪವಿದೆ. ಇಲ್ಲಿ ಆಯುಧ ಯುದ್ದಾಸ್ತ್ರಗಳ ತಯಾರಿ ಹಾಗೂ ಹದಗೊಳಿಸುವಿಕೆ ನಡೆಯುತ್ತಿತ್ತೆಂದು ಹೇಳಲಾಗುತ್ತದೆ. ಅದಕ್ಕೆ ಸಂಬಂದಿಸಿದಂತೆ ಕುಲುಮೆಗಳು ಇಲ್ಲಿ ಇದ್ದವೆಂದು ಹಿರಿಯರು ಹೇಳುತ್ತಾರೆ, ಇಲ್ಲಿಂದ ಮುಂದೆ ಹೋದರೆ ಆಂಜನೇಯಸ್ವಾಮಿ ಮೂರ್ತಿ ಸಿಗುತ್ತದೆ. ಬೃಹದಾಕಾರದ ಈ ಮೂರ್ತಿಯು ಹೆಬ್ಬಂಡೆಯಲ್ಲಿ ಕೆತ್ತಲ್ಪಟ್ಟಿದೆ. ಈ ವಿಗ್ರಹದ ಕೆಳಭಾಗದಲ್ಲಿ ಅತಿ ಚಿಕ್ಕದಾದ ವಾನರ(ಕಪಿ) ಏನನ್ನೋ ಕೈಯಲ್ಲಿಡಿದು ಕಚ್ಚಿ ತಿನ್ನುತ್ತಿರುವಂತೆ ಕೆತ್ತಲ್ಪಟ್ಟಿದೆ. ಇಲ್ಲಿಂದ ಮುಂದೆ ಹೋದರೆ ಕೋನೇರು (ಕಲ್ಯಾಣಿ) ದೊಣೆ ಸಿಗುತ್ತದೆ. ಇದರ ಸನಿಹದಲ್ಲೇ ಕೋನೇರು ಮಂಟಪವಿದೆ. ಹತ್ತಿರದಲ್ಲೇ ತುಪ್ಪದ ಕೊಳವಿದೆ. ಇದರಲ್ಲಿ ತುಪ್ಪವನ್ನು ಸಂಗ್ರಹಿಸಿಡುತ್ತಿದ್ದರು.

 

ನಾಗಲಮಡಿಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

ದೂರ ಎಷ್ಟು?
ತಾಲ್ಲೂಕು : ಪಾವಗಡ
ತಾಲ್ಲೂಕು ಕೇಂದ್ರದಿಂದ: ೩೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೩೫ ಕಿ.ಮೀ

ಪಾವಗಡ ತಾಲ್ಲೂಕಿನ ಮತ್ತೊಂದು ಸುಪ್ರಸಿದ್ದವಾದ ಪವಿತ್ರ ಪುಣ್ಯಕ್ಷೇತ್ರ ನಾಗಲಮಡಿಕೆ. ಇಲ್ಲಿರುವ ಸುಬ್ರಮಣ್ಯ ದೇವಾಲಯ ತನ್ನದೇ ಆದ ವಿಶೇಷತೆ ಹಾಗೂ ಇತಿಹಾಸದಿಂದ ಅಪಾರ ಭಕ್ತ ಸಮೂಹವನ್ನು ದಕ್ಷಿಣ ಭಾರತಾದ್ಯಂತ ಹೊಂದಿದೆ. ಈ ದೇವಾಲಯದ ಸನಿಹದಲ್ಲೇ ಉತ್ತರ ಪುನಾಕಿನಿ ನದಿ ಹರಿಯುತ್ತದೆ.

ನಾಗಾಮಡಿಕೆ ಜಾತ್ರಾ ದೃಶ್ಯ

ಇಲ್ಲಿ ಪ್ರತಿವರ್ಷ್ ವು ರಥೋತ್ಸವ ಹಾಗೂ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ಡಿಸೆಂಬರ್ ಜನವರಿ ಮಾಹೆಯಲ್ಲಿ ನಡೆಯುತ್ತವೆ. ಕರ್ನಾಟಕ ಆಂದ್ರಪ್ರದೇಶ ತಮಿಳುನಾಡಿನ ವಿವಿಧ ಭಾಗಗಳ ಭಕ್ತರನ್ನು ಹೊಂದಿರುವ ಈ ದೇವಾಲಯವು ಭಕ್ತರ ಸಂಕಷ್ಟಗಳನ್ನು ದೂರ ಮಾಡಿ ಮಂಗಳವನ್ನುಂಟು ಮಾಡುವ ಪುಣ್ಯಸ್ಥಳವಾಗಿದೆ. ಇಲ್ಲಿ ಭಕ್ತಾದಿಗಳಿಗೆ ನಾಗಪೂಜೆ, ನಾಗಪ್ರತಿಷ್ಠೆ ಮುಂತಾದ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಈ ದೇವಾಲಯವು ಪಾವಗಡದಿಂದ ೧೮ ಕಿ.ಮೀ ದೂರದಲ್ಲಿದೆ.

ನಾಗಲಮಡಿಕೆ ಜಾತ್ರಾ ಸಂದರ್ಭದಲ್ಲಿ ಹೆಂಜಲು ಎಲೆಯನ್ನು ಹೊತ್ತ ಭಕ್ತಾದಿಗಳು ಪಿನಾದಿನಿ ನದಿಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯ.