ಜನನ: ೫-೧೨-೧೯೧೭, ಗೋಕರ್ಣ ಕ್ಷೇತ್ರದ್ಲಲಿ

ಮನೆತನ: ವಂಶಪಾರಂಪರ್ಯವಾಗಿ ಬಂದ ಸಂಗೀತದ ಮನೆತನ.

ಗುರು ಪರಂಪರೆ: ತಂದೆಯವರಿಂದಲೇ ಸಂಗೀತ, ಸಂಸ್ಕೃತ, ಹರಿಕಥೆಗಳಲ್ಲಿ ಶಿಕ್ಷಣ, ಮುಂದೆ ರಾಮರಾವ್ ಪಿತ್ರೆ ಅವರಲ್ಲಿ ಉನ್ನತ ಶಿಕ್ಷಣ.

ಸಾಧನೆ: ಅತಿ ಚಿಕ್ಕ ವಯಸ್ಸಿನಲ್ಲೆ ಹರಿಕೀರ್ತನೆಗಳನ್ನು ಮಾಡುತ್ತಿದ್ದರು. ಮುಂದೆ ಸುಗಮ ಸಂಗೀತದ ಕಡೆ ಮನಸ್ಸು ಕೊಟ್ಟು ೧೯೩೬ರಿಂದ ಕನ್ನಡ ಗೀತೆಗಳನ್ನು ಹಾಡಲಾರಂಭಿಸಿದರು. ಆಕಾಶವಾಣಿ ಮುಂಬಯಿ, ಧಾರವಾಡ ಕೇಂದ್ರಗಳಿಂದ ಇವರ ಸುಗಮ ಸಂಗೀತ ಗಾಯನ ಪ್ರಸಾರವಾಗುತ್ತಿತ್ತು. ಕೇವಲ ಗಾಯನವೇ ಅಲ್ಲದೆ ಸಂಗೀತ ರೂಪಕಗಳನ್ನು ರಚಿಸಿ ರಾಗ ಸಂಯೋಜನೆ ಮಾಡಿ ಪ್ರಸಾರ ಮಾಡಿದ್ದಾರೆ.

ಹಾರ್ಮೋನಿಯಂ, ಜಲತರಂಗ್, ತಬಲಾ ವಾದನದಲ್ಲೂ ಪರಿಶ್ರಮ ಹೊಂದಿದ್ದ ಭಾಗವತ್ ಅವರು ಬಾಲ ರಂಗ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿ ಅನೇಕ ಶಿಷ್ಯರನ್ನು ತಯಾರು ಮಾಡಿರುತ್ತಾರೆ. ೧೯೭೪ರಲ್ಲಿ ಹವ್ಯಾಸಿ ನಾಟಕ ಮಂಡಳಿಯೊಂದನ್ನು ಸ್ಥಾಪಿಸಿ ಸಂಗೀತ ನಿರ್ದೇಶಕರಾಗಿ ಹಲವು ಕಾಲ ದುಡಿದಿದ್ದಾರೆ.೧೯೫೦ ಕೊಲಂಬಿಯಾ ಗ್ರಾಮಫೋನ್ ಸಂಸ್ಥೆ ಇವರ ಗಾಯನವನ್ನು ಧ್ವನಿ ಮುದ್ರಿಸಿ ಕೊಂಡಿದೆ.

ಪ್ರಶಸ್ತಿ-ಸನ್ಮಾನ: ಉತ್ತರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ, ಚಿತ್ರದುರ್ಗದ ಶಿಶುಸಂಗಮ ವತಿಯಿಂದ ಸನ್ಮಾನ, ೧೯೮೨-೮೩ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಇವರಿಗೆ ಸಂದಿದೆ.