ಮನೆತನ : ಸಂಗೀತಗಾರರ ಮನೆತನ. ತಾಯಿ ಲಕ್ಷ್ಮಮ್ಮ ಸಂಗೀತ ಬಲ್ಲವರು.

ಗುರುಪರಂಪರೆ : ತಾಯಿ ಲಕ್ಷ್ಮಮ್ಮನವರೇ ಪ್ರಥಮ ಗುರುಗಳು. ಮುಂದೆ ಹೆಚ್. ಟಿ. ರಾಮಸ್ವಾಮಿ, ಬಿ.ಕೆ.ಪದ್ಮನಾಭರಾವ್, ಪ್ರೊ|| ಗೌರಿಕುಪ್ಪುಸ್ವಾಮಿ, ಪ್ರೊ|| ವಿ.ರಾಮರತ್ನಂ, ಆನೂರು, ಎಸ್.ರಾಮಕೃಷ್ಣ ಮುಂತಾದವರ ಬಳಿ ಕಠಿಣ ಸಂಗೀತ ಅಭ್ಯಾಸ ನಡೆಸಿ ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.

ಸಾಧನೆ: ಶಾಸ್ತ್ರೀಯ ಸಂಗೀತದ ಜೊತೆ ಜೊತೆಗೆ ಲಘು ಸಂಗೀತ ಭಕ್ತಿಗೀತೆಗಳ ಗಾಯನವನ್ನು ರೂಢಿಸಿಕೊಂಡು ಅದರಲ್ಲೂ ಪ್ರಾವೀಣ್ಯತೆ ಪಡೆದಿದ್ದಾರೆ. ಆಕಾಶವಾಣಿ ನಿಲಯ ಕಲಾವಿದೆಯಾಗಿ ಸೇವೆಯಲ್ಲಿದ್ದು ಅನೇಕ ಸಂಗೀತ ರೂಪಕಗಳನ್ನು ನಿರ್ದೇಶಿಸಿರುವುದೆ ಅಲ್ಲದೆ ರಾಗ ಸಂಯೋಜನೆಯನ್ನು ಮಾಡಿರುತ್ತಾರೆ. ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್ತು. ’ಶ್ರೀ ಕೃಷ್ಣ ಸಂಗೀತ ಸಭಾ’, ಮೈಸೂರಿನ ಗಾನ ಭಾರತಿ ಮುಂತಾದ ಸಂಸ್ಥೆಗಳ್ಲಿನ ಸಂಗೀತ ಸಭಾಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವುದೇ ಅಲ್ಲದೆ ರೇಡಿಯೋ ಸಂಗೀತ ಸಮ್ಮೇಳನಗಳಲ್ಲೂ ಪಾಲ್ಗೊಂಡಿದ್ದಾರೆ. ಆಕಾಶವಾಣಿಯ ಬಹುತೇಕ ಸಂಗೀತ ರೂಪಕಗಳಿಗೆ ರಾಗ ಸಂಯೋಜನೆ ಇವರದ್ದೇ. ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿನ ಡಾ|| ಶಂಕರನಾರಾಯಣ ಅಯ್ಯರ್ ಸ್ಮಾರಕ ಪಾರಿತೋಷಕ, ಡಾ|| ಎಂ. ಎಲ್.ವಿ. ಅವರ ತಾಯಿಯವರ ಸ್ಮಾರಕ ನೀಡುವ ಲಲಿತಾಂಗಿ ಸ್ಮಾರಕ ತಂಬೂರಿ ಬಹುಮಾನ, ಬೆಂಗಳೂರು ಗಾಯನ ಸಮಾಜದ ಸಮ್ಮೇಳನ ಶ್ರೇಷ್ಠ ಗಾಯಕಿ ಬಹುಮಾನ ಇವರಿಗೆ ದಕ್ಕಿದೆ.

ಪ್ರಶಸ್ತಿ – ಸನ್ಮಾನ : ಅನೇಕ ಸಂಗೀತ ಸಭಾಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೯-೨೦೦೦ ರ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.