ಶೀವಧು ರಾಗದಿಂದಗಲದಾವನ ವಕ್ಷದೊಳಿರ್ಪಳಾವಗಂ
ದೇವನಿಕಾಯಮೋಲಗಿಪುದಾವನ ನಾಭಿಸರೋಜದೊಳ್ ವಚ-
ಶ್ರೀವರನುತ್ಸವಂಬೆರಸು ಪುಟ್ಟಿದನಾವನಶೇಷ ದೆತ್ಯವಿ-
ದ್ರಾವಣನೀಗೆ ದುರ್ಗವಿಭುಗಚ್ಯುತನಚ್ಯುತಸೌಖ್ಯಕೋಟಿಯಂ         ೧

ಅವತಂಸೀಕೃತಬಾಂಕೆತಕಶಿಖಾಸಂದಿಗ್ಧಮುಗ್ಧಾಮೃತಾಂ-
ಶುವಿಹಾಯಸರಿದಂಬುಚುಂಬಿತ ಜಟಾಜೂಟಾಂತರಂ ಮಾಡುಗು-
ತ್ಸವಮಂ ಭಾಳವಿಲೋಚನಪ್ರಭವಭಾಸ್ವಜ್ಜಾತ ವೇದಶ್ಯಿಖಾ-
ನಿವಹಪ್ಲುಷ್ಟರತೀಶನಿಷ್ಟಸುಖಮಂ ದುರ್ಗಂಗೆ ದೀರ್ಘಾಯುಮಂ         ೨

ತೋಯಜಗರ್ಭನಾದಿಮುನಿಮುಖ್ಯಮತಪ್ರಕಟೀಕೃತಾಖಿಳಾ
ಮ್ಯಾಯಪರಂಪರಾಯತನಶೇಷ ಜಗಜ್ಜನಕಂ ಸರಸ್ವತೀ
ವ್ಯಾಯತಲೋಲಲೋಚನಮದಾಳಿನಿಪೀತಮುಖಾಬ್ಜನೊಲು
ದೀರ್ಘಾಯುಮನೀಗೆಶಿಷ್ಟನಿಗಭ್ಯುದಿತಾರ್ಕಮಹಂಪಿತಾಮಹಂ   ೩.

ಮಾನಿತಪುಂಡರೀಕರುಚಿರಂ ವಿಲಸದ್ಯರಗಂಡಮಂಡಳಂ
ಶ್ರೀನಿಲಯಂ ಮಹಾಶ್ರುತಿಯುತಂ ದ್ವಿಜಸಂಕುಲಭಾಸಿತಾನನಂ
ಕಾನನದಂತಸೇವ್ಯಗುಣಸಂಗತಮಾಗಿರದೆಂದು ದುರ್ಗಸಿಂ
ಹಾನನಪದ್ಮದೊಳ್ ನೆಲಸಿ ನಿಲ್ಗೆ ಸರಸ್ವತಿ ಬಂದು ರಾಗದಿಂ     ೪

ಅತನುಶ್ರೀ ಜನ್ಮಗೇಹಂ ಕುಮುದವನಸಖಂ ತಾರಕಾನೀಕ ಲಕ್ಷ್ಮೀ-
ಪತಿಸದ್ದ್ಯೋಮಂದ್ವಿ*ಪೇ**ಂದ್ರಾಮಲದಶನನಿಭಚ್ಛಾಯನದ್ರೀಂದ್ರಪುತಿ-
ಪತಿಚೂಡಾರತ್ನನೀಗಾಗಳುಮತಿಮುದಮಂ ರೋಹಿಣೀಜೀವಿತೇಶಂ
ಶತಪತ್ರಾರಾತಿ ವಿಪ್ರಾನ್ವಯಗಗನಶರಚ್ಚಾರುಚಂದ್ರಂಗೆ ಚಂದ್ರಂ      ೫

ನನೆಯಂಬಿಂ ಹಿಮವನ್ಮಹೀಧರತನೂಜಾಶನಂ ಗೆಲ್ದ ವೀ-
ರನಜೇಯಂ ಮಧುರೋಹಿಣೀ ಪ್ರಿಯಸಖಂ ಮೀನದ್ವಜಂ ಕಾಮೀನೀ-
ಜನಕೇಳೀಗುರು ಚಿತ್ತಜಂ ಸುರತಲೀಲಾನಾ *ಟಿ* ಕಾಸೂತ್ರಧಾ-
ರನ್ಮದಾರಂ ರತಿವಲ್ಲಭಂ ಕುಡುಗೆ ಮತ್ಕಾವ್ಯಕ್ಕೆ ಸೌಭಾಗ್ಯಮಂ       ೬

ಕಮಲಾನಂದಕರಂ ಸುರಪ್ರಕರ ಚೂಡಾಪೀಡ ಮಾಣಿಕ್ಯ ಜಾ-
ಳ ಮರೀಚಿಪ್ರಚಯಾಂಚಿತಾಂಘ್ರಿಕಮಳಂ ತ್ರೆಲೋಕ್ಯನ್ಭೆತ್ರಂ ತ್ರಿವೇ-
ದಮಯಂ ಧ್ವಸ್ತತಮಸ್ತಮಂ ಹೃತನಿಶಾಟೋಪನೊಲ್ದೀಗೆ ಗೌ-
ತಮಗೋತ್ರಾಂಬುಜಷಂಡ ಚಂಡಕಿರಣಂಗಾದಿತ್ಯನುತ್ಸಾಹಮಂ      ೭

೧. ಯಾರ ವಕ್ಷಃಸ್ಥಳದಲ್ಲಿ ಅಗಲದೆ ಲಕ್ಷಿಯು ನೆಲಸಿರುವಳೋ ಸದಾ ದೇವತೆಗಳ ಸಮೂಹವು ಯಾರನ್ನು ಓಲೆಸುತ್ತದೋ ಯಾರ ನಾಭೀಕಮಲದಲ್ಲಿ ಬ್ರಹ್ಮನು ಸಂತೋಷದಿಂದ ಹುಟ್ಟಿದನೋ ಯಾರು ಸಮಸ್ತ ದೆತ್ಯರನ್ನು ನಾಶಪಡಿಸಿದನೋ ಆ ಅಚ್ಯುತನು ದುರ್ಗವಿಭುವಿಗೆ ಅಕ್ಷಯ ಸುಖಕೋಟಿಯನ್ನು ಕೊಡಲಿ. ೨.  ಎಳೆಯ ಕೇದಗೆಯನ್ನು ಆಭರಣವಾಗಿ ಮಾಡಿಕೊಂಡ ಶಿಖೆಯಿಂದ ಮುಚ್ಚಿದ ಮುಗ್ಧ ಚಂದ್ರನನ್ನುಳ್ಳ ಆಕಾಶಗಂಗೆಯ ನೀರಿನಿಂದ ಚುಂಬಿತವಾದ ಜಟಾಜೂಟವನ್ನುಳ್ಳ ಶಿವನು ಸುಖವನ್ನು ಮಾಡಲಿ. ಹಣೆಗಣ್ಣಿನಿಂದ ಹುಟ್ಠಿದ ಉಜ್ವಲವಾದ ಅಗ್ನಿಯ ಜ್ವಾಲೆಗಳಿಂದ ಕಾಮನನ್ನು ಸುಟ್ಟ ಆ ಈಶ್ವರನು ದುರ್ಗಸಿಂಹನಿಗೆ ಇಷ್ಟ ಸುಖವನ್ನೂ, ದೀರ್ಘಾಯುಸ್ಸನ್ನೂ ಉಂಟುಮಾಡಲಿ. ೩. ಪೂರ್ವಮುನಿಶ್ರೇಷ್ಠರಿಂದ ಪ್ರಕಟವಾದ ಸಮಸ್ತ ವೇದಪರಂಪರೆಯಿಂದ ಕೂಡಿದವನೂ ಸಮಸ್ತ ಲೋಕಗಳ ತಂದೆಯೂ ಸರಸ್ವತಿಯ ವಿಶಾಲವೂ ಚಂಚಲವೂ ಆದ ಕಣ್ಣೆಂಬ ಹೆಣ್ದುಂಬಿಯಿಂದ ಆಸ್ವಾದಿಸಿದ ಮುಖಕಮಲವುಳ್ಳವನೂ ಶಿಷ್ಟರಿಗೆ ಹಬ್ಬವನ್ನುಂಟುಮಾಡುವವನೂ ಪಿತಾಮಹನೂ ಆದ ಬ್ರಹ್ಮನು ಪ್ರೀತಿಯಿಂದ ದೀರ್ಘಾಯಸ್ಸನ್ನು ನೀಡಲಿ. ೪. ಸುಂದರವಾದ ಕಮಲದಿಂದ ಮನೋಹರವಾಗಿಯೂ ಕಾಂತಿಯುತವಾದ ಕಪೋಲಮಂಡಲದಿಂದ ಕೂಡಿ ತೇಜಸ್ವಿಯಾಗಿಯೂ ವೇದಸಂಪನ್ನನಾಗಿಯೂ ಬ್ರಾಹ್ಮಣಸಮೂಹದಿಂದ ಹೊಳೆಯುವ ದುರ್ಗಸಿಂಹನ ಮುಖಕಮಲವು ಕಾನನದಂತೆ ಅನುಸರಿಸಬಾರದ ಗುಣಗಳಿಂದ ಕೂಡಿರದೆ ಇದೆ ; ಅಂತಹ ಅವನ ಮುಖಕಮಲದಲ್ಲಿ ಸರಸ್ವತಿ ಪ್ರೀತಿಯಿಂದ ಬಂದು ನೆಲಸಿರಲಿ. ೫. ರತಿಗೆ ಜನ್ಮಸ್ಥಳವಾಗಿರುವವನೂ ಕನ್ನೆದಿಲೆಗಳ ವನಕ್ಕೆ ಸಖನಾಗಿರುವವನೂ ನಕ್ಷತ್ರ ಸಮೂಹಕ್ಕೆ ಪತಿಯಾಗಿ ಬೆಳಗುವ ಆಕಾಶಮಂಡಲವುಳ್ಳವನೂ ಐರಾವತದ ದಂತದಂತೆ ಹೊಳೆಯುವವನೂ ಈಶ್ವರನ ಶಿರೋಭೂಷಣನೂ ರೋಹಿಣೀಪ್ರಿಯನೂ ಕಮಲಗಳ ವೆರಿಯೂ ಆಗಿರುವ ಚಂದ್ರನು ಬ್ರಾಹ್ಮಣವಂಶವೆಂಬ ಆಕಾಶಕ್ಕೆ ಶರಚ್ಚಂದ್ರನಂತೆ ಮನೋಹರನಾದ ದುರ್ಗಸಿಂಹನಿಗೆ ಅತಿಶಯವಾದ ಆನಂದವನ್ನು ನೀಡಲಿ. ೬. ಪುಪ್ಪ ಬಾಣಗಳಿಂದ ಪಾರ್ವತೀಪತಿಯನ್ನು ಗೆದ್ದ ವೀರನೂ, ಅಜೇಯನೂ ವಸಂತ ಚಂದ್ರರ ಪ್ರಿಯಸಖನೂ ವೀನಕೇತನನೂ ಕಾಮಿನಿಯರ ಕಾಮಕೇಳಿಗೆ ಗುರುವೂ ಮನಸ್ಸಿನಲ್ಲಿ ಹುಟ್ಟಿದವನೂ ಸಂಭೋಗಕೇಳಿಯೆಂಬ ನಾಟಿಕೆಯ ಸೂತ್ರಧಾರಿಯೂ ಉದಾರನೂ ಆದ ಕಾಮನು ನನ್ನ ಕಾವ್ಯಕ್ಕೆ ಸೌಭಾಗ್ಯವನ್ನು ನೀಡಲಿ. ೭. ಕಮಲಗಳಿಗೆ ಆನಂದವನ್ನುಂಟುಮಾಡುವವನೂ ದೇವತೆಗಳ ಸಮೂಹದ ಶಿರೋಭೂಷಣಗಳ ಮಾಣಿಕ್ಯ ಸಂದೋಹದ ಕಾಂತಿಯಿಂದ ಕೂಡಿದ ಪಾದಕಮಲವುಳ್ಳವನೂ ಮೂರು ಲೋಕಗಳಿಗೂ ಕಣ್ಣಾದವನೂ ಮೂರುವೇದಗಳಿಂದ ಕೂಡಿದವನೂ ಕತ್ತಲೆಯನ್ನು ನಾಶಪಡಿಸಿದವನೂ ರಾತ್ರಿಯ ಆಟೋಪವನ್ನು ಪರಿಹರಿಸಿದವನೂ ಆದ ಸೂರ್ಯನು ಗೌತಮಗೋತ್ರವೆಂಬ ಕಮಲ ಸಮೂಹಕ್ಕೆ ಸೂರ್ಯನಂತಿರುವ ದುರ್ಗಸಿಂಹನಿಗೆ  ಉತ್ಸಾಹವನ್ನುಂಟುಮಾಡಲಿ.

* ಎಲ್ಲ ಪ್ರತಿಗಳಲ್ಲೂ ’‘ದ್ವಿಜೇಂದ್ರ  ಎಂದಿದೆ. ‘ದ್ವಿಜ  ಎಂದರೆ ಆನೆ ಎಂಬ ಅರ್ಥವಿಲ್ಲ.

‘ನಾಟಕ  ಎಂದು   ಎಲ್ಲ ಪ್ರತಿಗಳಲ್ಲಿದೆ. ‘ನಾಟಕಾ  ಎಂಬ ಶಬ್ದ ಸಂಸ್ಕೃತದಲ್ಲಿ ಇಲ್ಲದಿರುವುದರಿಂದ ಇದು ‘ನಾಟಕಾ ಎಂದಿರಬೇಕು ಹೋಲಿಸಿರಿ : ಜಗನ್ನಾಟಕ ಸೂತ್ರಧಾರಿ.

ಉಗ್ರಭುಜಂಗಭೂಷಣನಶೇಷ ಸುರಾಸುರಭಾಸುರೋರು ಚೂ-
ಡಾಗ್ರಮಣಿ ಪುಭಾಪಟಲ ಪಾಟಲಿತೋತ್ತಮ ಪಾದಪೀಠನ-
ವ್ಯಗ್ರಮನಂ ವಿನಾಯಕನಿಭಾನನನುಗ್ರತನೂಭವಂ ಗಣೆ-
ಕಾಗ್ರಣಿ ಸಂವಿಗ್ರಹಿಗಣಾಗ್ರಣಿಗೀಗೆ ವಿಶುದ್ಧ ಬುದ್ಧಿಯಂ    ೮

ಎನಗನುರಕ್ತೆಯಾಗೆ ದಿಗಶ್ವರರಾನತರಾಗೆ ಮಾಡುವೆಂ
ಮನಮೊಸೆದೀವೆನಗ್ರಮಹಿಷೀಪದಮಂ ನಿನಗೆಂದ ಪಾಣ್ಬನಂ
ದನುಜನನುಗ್ರಖಡ್ಗಮುಖದಿಂದಿಱ*ದೊತ್ತಿದ ದುರ್ಗೆ ದುರ್ಗಸಿಂ-
ಹನನತುಳಪ್ರತಾಪಪರನಂಪರಿರಕ್ಷಿಸುತಿರ್ಕನಾರತಂ   ೯

ಲೋಕಾಗಮಜ್ಞರಖಿಳ ಕ-
ಳಾಕುಶಲರುಪೇತವಿದ್ಯರನವದ್ಯಯಶ-
ಶ್ಯ್ರೀಕಾಂತಾದಯಿತರ್ ವಾ-
ಲ್ಮೀಕಿ ವ್ಯಾಸಾದಿ ಕವಿಗಳೀಗೆಮಗಱ*ವಂ        ೧೦*

ನೆಗೞ್ದ ಗುಣಾಢ್ಯನ ಮೃದುಮಧು-
ರ ಗಭೀರತರ ಪ್ರಸನ್ನ ಕವಿತಾಗುಣಮಂ
ಪೊಗೞಲ್ಕಜನುಂ ನೆಱೆಯಂ
ಜಗದೊಳಗಿನ್ನುಱ*ದ ಜಡರದೇಂ ನೆಱೆದಪರೊ ೧೧

೮. ಭಯಂಕರವಾದ ಸರ್ಪಗಳನ್ನು ಆಭರಣ ಮಾಡಿಕೊಂಡವನೂ ಸಮಸ್ತದೇವದಾನವರ ಪ್ರಕಾಶಮಾನವಾದ ಶ್ರೇಷ್ಠ ಶಿರೋಭೂಷಣಗಳ ಕಾಂತಿಸಮೂಹದಿಂದ ಕೆಂಪಾದ ಉತ್ತಮ ಪಾದಪೀಠವುಳ್ಳವನೂ ಸ್ಥಿರಚಿತ್ತನೂ ಗಜಮುಖನೂ ಶಿವನ ಮಗನೂ ಗಣಗಳ ಅಪತಿಯೂ ಆದ ವಿನಾಯಕನು ಸಂವಿಗ್ರಹಿಗಳ ಸಮೂಹಕ್ಕೆ ಅಪತಿಯಾದ ದುರ್ಗಸಿಂಹನಿಗೆ ನಿರ್ಮಲ ಜ್ಞಾನವನ್ನು ನೀಡಲಿ. ೯. ನನಗೆ ಅನುರಕ್ತೆಯಾದರೆ ದಿಕ್ಪತಿಗಳನ್ನು ಶರಣಾಗತರನ್ನಾಗಿ ಮಾಡುವೆನು, ಮನಃಪೂರ್ವಕವಾಗಿ ರಾಣಿಪಟ್ಟವನ್ನು ಕಟ್ಟುವೆನು ಎಂದು ಹೇಳಿದ ದುಷ್ಟನಾದ ರಾಕ್ಷಸನನ್ನು ತನ್ನ ಖಡ್ಗಧಾರೆಯಿಂದ ಚುಚ್ಚಿಸಾಯಿಸಿದ ದುರ್ಗೆಯು ಅತುಲ ಪರಾಕ್ರಮಿಯಾದ ದುರ್ಗಸಿಂಹನನ್ನು ಸದಾ ರಕ್ಷಿಸುತ್ತಿರಲಿ. ೧೦. ಲೋಕದ ಶಾಸ್ತ್ರಜ್ಙರೂ, ಅಖಿಲ  ಕಲಾಕುಶಲರೂ, ವಿದ್ಯಾವಂತರೂ ನಿರ್ದೋಷವಾದ ಯಶಸ್ಸೆಂಬ ಲಕ್ಷ್ಮಿಗೆ ಪ್ರಿಯರಾದವರೂ ಆದ ವಾಲ್ಮೀಕಿ ವ್ಯಾಸಾದಿ ಕವಿಗಳು ನಮಗೆ ಅರಿವನ್ನು ನೀಡಲಿ.* ೧೧. ಪ್ರಸಿದ್ಧನಾದ ಗುಣಾಢ್ಯನೆಂಬ ಕವಿಯ ಮೃದುಮಧುರತರ ಪ್ರಸನ್ನ ಕವಿತಾಗುಣವನ್ನು ಹೊಗಳಲು ಬ್ರಹ್ಮನೂ ಸಮರ್ಥನಾಗನು ; ಜಗತ್ತಿನಲ್ಲಿ ಇನ್ನು ಬೇರೆ ಜಡರು ಅದೇನು

——-

* ಮುಂದಿನ ಎರಡು ಪೂರ್ಣವಾಗದ ಪದ್ಯಗಳನ್ನು ಪ್ರಕ್ಷಿಪ್ತವೆಂದು ಬಿಡಲಾಗಿದೆ.

 

ವರವಾಗ್ವಿಲಾಸದಿಂದಂ
ಸುರವಂದಿತೆಯೆನಿಪ ಗಂಗೆಯಂ ವ್ಮೆಚ್ಚಿಸಿ  ಸೌಂ-
ದರ ರತ್ನಕಟಕಮಂ ತಂ-
ದರಾರೊ ವರರುಚಿವೊಲಾದಿಕವಿವರಾರುಂ ೧೨

ಪರಮಕವೀಂದ್ರವೃಂದ ವಿನುತೋತ್ತಮವಾಣಿ ಸರಸ್ವತೀಸ್ವಯಂ-
ವರವರನಬ್ಬಜೋಪಮನಪಾಸರಜಂ ನಿಜವಾಗ್ವಿಸಭಾ-
ಸುರತರಚಂದ್ರಿಕಾದ್ಯುತಿರಸ್ತ ಸಮಸಜಗತ್ತಮಂ ಕಳಾ
ಪರಿಣತನೆಚಿದೊಡೆವೊಗಚ್ಚನುನ್ನುತಿಯಂ ಕವಿ ಕಾಳಿದಾಸನಾ ೧೩

ಕವಿ ರಾಜಶಿರಶ್ಯೇಖರ-
ನವನೀಶ್ವರ ಚಕ್ರವರ್ತಿ ಹರ್ಷ ನರೇಂದ್ರ
ಪ್ರವರಂ ಕುಡೆ ಪಡೆದಂ ವ-
ಶ್ಯವಾಣಿ ಕವಿಚಕ್ರವರ್ತಿವೆಸರಂ ಬಾಣಂ ೧೪

ಸಕಲಸುರಾದೀಶ್ವರ ಮ
ಸ್ತಕಸ್ಥಿತಕ್ರಮನನರ್ಕನಂ ವ್ಮೆಚ್ಚಿಸಿದಂ
ಸುಕವಿತ್ವವಿಳಾದಿನೇಂ
ಸುಕವಿಯೊ ಕವಿಮಖ್ಯರೊಳ್ ಮಯೂರ ಕವೀಚಿದ್ರಂ ೧೫

ಸೂರಿಕವಿರಾಜದರ್ಪ ವಿ-
ದಾರಣಚತುರಂ ವಿನೀತನೆಂಬ ಗುಣದಿಂ
ನಾರಾಯಣನಂತೆಸೆದಂ
ನಾರಾಯಣನಖಿಳಭುವನವಂದಿತಚರಣಂ ೧೬

ಸಮರ್ಥರಾಗುವರೋ? ೧೨. ಶ್ರೇಷ್ಠವಾದ ವಾಗ್ವಿಲಾಸದಿಂದ  ದೇವತೆಗಳಿಂದ ವಂದಿತೆಯಾದ ಗಂಗೆಯನ್ನು ಮೆಚ್ಚಿಸಿ ಸುಂದರ ರತ್ನಕಂಕಣವನ್ನು ವರರುಚಿಯಂತೆ ತಂದವರು. ಅದಿಕವಿಗಳಲ್ಲಿ ಯಾರಿದ್ದಾರೆ? ೧೩.ಪರಮಕವಿಂದ್ರವೃಂದದಿಂದ ಪ್ರಶಂಸಿತವಾದ ಉತ್ತಮ ವಾಗ್ವೆಭವವುಳ್ಳವನೂ ಸರಸ್ವತೀ ಸ್ವಯಂವರದಲ್ಲಿ ವರನಾದವನೂ ಬ್ರಹ್ಮಸಮಾನನೂ, ದೋಷರಹಿತನೂ ತನ್ನ ವಾಗ್ವಲಾಸವೆಂಬ ಪ್ರಕಾಶಮಾನವಾದ ಬೆಳದಿಂಗಳಿಂದ ಸಮಸ್ತ ಜಗತ್ತಿನ ಕತ್ತಲೆಯನ್ನು ಕಳೆದವನೂ ಕಳಾಪರಿಣತನೂ ಅದ ಕವಿ ಕಾಳಿದಾಸನ ಮಹತ್ವವವನ್ನು ಎನೆಂದು ಹೊಗಳುವೆನು. ೧೪. ಕವಿರಾಜ ಶಿರಶ್ಯೇಖರನೂ, ಅವನೀಶ್ವರರಿಗೆ ಚಕ್ರವರ್ತಿ ಯೂ ಅದ ಹರ್ಷನರೇಂದ್ರನು ಕೊಡಲು ಕವಿಚಕ್ರವರ್ತಿ ಎಂಬ ಹೆಸರನ್ನು ವಾಣಿಯನ್ನು ವಶಪಡಿಸಿಕೊಂಡ ಬಾಣನು ಪಡೆದನು. ೧೫ ಸಮಸ್ತ ದೇವತೆಗಳ ಅಪತಿಯಾದ ಇಂದ್ರನ ಮಸ್ತಕದ ಮೇಲೆ ಪಾದವಿಟ್ಟು ಸೂರ್ಯನನ್ನ ಮೆಚ್ಚಿಸಿದ ಮಯೂರನೆಂಬ ಕವಿಂದ್ರನು ಸುಕವಿತ್ವ  ವೈಭವದಲ್ಲಿ ಕವಿಮುಖ್ಯರಲ್ಲಿ ಸುಕವಿಯೆನಿಸಿದನು.೧೬.  ಪಂಡಿತರ ಹಾಗೂ ಕವಿರಾಜರ ದರ್ಪವನ್ನು ಚತುರನೂ ವಿನೀತನೂ ಸಾಕ್ಷತ್ ಶ್ರೀಮನ್ನಾರಾಯಣನಂತೆ ಶೋಭಿಸುವವನು ಅದ ನಾರಾಯಣನೆಂಬ ಕವಿ ಸಮಸ್ತ ಜಗತ್ತಿನ ಜನರಿಂದ

ಅನುಪಮ ಕವಿವಜ್ರಂ ಜೀ –
ಯೆನೆ ರಾಘವ ಪಾಚಿಡವೀಚಿiಮಂ ಪೇಳ್ ಯಶೋ
ವನಿತಾದೀಶ್ವರನಾದಂ
ಧನಂಜಯಂ ವಾಗ್ವದೂಪ್ರಿಯಂ ಕೇವಳನೇ ೧೭

ವಾಮನ ಭಲ್ಲಟ ಭಾಮಹ
ಭೀಮಂ ಭವಭುತಿ ಭಾಸ ಭಾರವಿ ಭಟ್ಟಿ
ಶ್ರೀ ಮಾಘ ರಾಜಶೇಖರ
ಕಾಮಂದಕರೆಸೆವ ಸೂಕ್ತಿಯಂ ಪೊಗಳದರಾರ್ ೧೮

ವಿಪುಲ ಕವಿತಾಗುಣಪಾ
ಸ್ತ ಪುರಾಣಕವೀಂದ್ರನೆನಿಪ ಮಹಿಮೆಯನಿಂದ್ರ
ದ್ವಿಪದುಗ್ದವಾ ಡಿಂಢೀ
ರ ಪಿಂಡಪಾಂಡುರಯಶಕ್ಕೆ ದಂಡಿಯೆ ನೋಂತಂ ೧೯

ಶ್ರೀವಿಜಯರ ಕವಿಮಾರ್ಗಂ
ಭಾವಿಪ ಕವಿಜನದ ಮನಕೆ ಕನ್ನಡಿಯಂ ಕೆ-
ಯ್ದೀವಿಗೆ ಯುಮಾದುವದಳೆಂ
ಶ್ರೀ ವಿಜಯರ್ ದೇವರವರನೇವಣ್ಣಿಪುದೋ ೨೦

ಪರಮಕವೀಶ್ವರ ಚೇತೋ-
ಹರಮೆಂಬಿನಮೆಸೆವ ಮಾಳವೀ ಮಾಧವಮಂ
ವಿರಚಿಸಿದ ಕನ್ನಮಯ್ಯಂ-
ಬರಮಾಗಂ ಸುಕವಿ ಬಗೆವೊಡಿನ್ನಂ ಮುನ್ನಂ             ೨೧

ವಂದಿತನಾದವನು. ೧೭. ಅಸಾಧಾರಣರಾದ ಕವಿಗಳ ಸಮೂಹವು ಹೊಗಳುತ್ತಿರಲು ರಾಘವಪಾಂಡವೀಯ ಎಂಬ ಕಾವ್ಯವನ್ನು ಹೇಳಿ ಯಶೋಲಕ್ಷ್ಮಿಯನ್ನು ವರಿಸಿದನೂ ವಾಗ್ವಧೂಪ್ರಿಯನೂ ಅದ ಧನಂಜಯ ಕವಿಯು ಸಾಮಾನ್ಯನೇ ! ವಾಮನ, ಭಲ್ಲಟ ಭಾಮಹ, ಭೀಮ ಭವಭೂತಿ, ಭಾಸ ಭಾರವಿ, ಭಟ್ಟಿ, ಮಾಘ ರಾಜಶೇಖರ, ಕಾಮಂದಕ ಮೊದಲಾದ ಕವಿಗಳ ಶೋಭಿಸುವ ಸೂಕ್ತಿಗಳನ್ನು ಹೊಗಳದವರು ಯಾರು ? ೧೯.ವಿಪುಲವಾದ ಕವಿತಾಗುಣಗಳಿಂದ ಕೂಡಿದ ಪುರಾಣ ಕವಿಯೆನ್ನಿಸಿದ ಮಹಿಮೆಯನ್ನು ಐರಾವತ, ಕ್ಷೀರಸಾಗರದ ನೊರೆಯ ಹಿಂಡಿನ ಹಾಗೆ ಇರುವ ಧವಲ ಕೀರ್ತಿಯನ್ನು ದಂಡಿಯೇ ಸಾಸಿದನು. ೨೦. ಶ್ರೀ ವಿಜಯ ಎಂಬ ಕವಿಯ ಕವಿರಾಜಮಾರ್ಗ ಎಂಬ ಕೃತಿಯು  ಪ್ರಸಿದ್ದರಾದ ಕವಿಗಳ ಮನಸ್ಸಿಗೆ ಕನ್ನಡಿಯೂ ಕಯ್ದೀವಿಗೆಯೂ ಆದುದು. ಅದರಿಂದ ಶ್ರೀವಿಜಯದೇವರನ್ನು ಎನೆಂದು ಬಣ್ಣಿಸಲಿ. ೨೧. ಪರಮ ಕವೀಶ್ವರರಿಗೂ ಚೇತೋಹಾರಿ ಎಂಬಂತೆ ಶೋಭಿಸುವ ಮಾಳವೀಮಾಧವ ಎಂಬ ಕೃತಿಯನ್ನು ರಚಿಸಿದ ಕನ್ನಮಯ್ಯನವರೆಗೆ

ಪೊಸತೆನಿಷ ದೇಸಿಯೆಂ ನವ-
ರಸವೊಸರಲ್ಕೊಳ್ಪುವೆತ್ತ ಮಾರ್ಗದಿನಿಳೆಗೇ-
ನೆಸೆದುವೊ ಸುಕವಿಗಳೆನೆ ನೆಗ-
ೞ್ದಸಗನ ಮನಸಿಜನ ಚಂದ್ರಭಟ್ಟ ಕೃತಿಗಳ್ ೨೨