ಕವಿ ಗಮಕಿ ವಾದಿ ವಾಗ್ಮಿ
ಪ್ರವರರ್ ಶ್ರೀಮಾದಿರಾಜ ಮುನಿಪುಂಗವರು
ತ್ಸವದಿಂ ತಿರ್ದಿದರೆನೆ ಭೂ-
ಭುವನದೊಳಿದೞ್ದು ಕೊಂಡು ಕೊನೆಯದರೊಳರೇ ೨೬

ಚತುರಂತಾಶೇಷಧಾತ್ರೀತಳ ಜನವಿನ್ಮತಂ ನೀತಿಶಾಸ್ರ್ತಾನುವಿದ್ದಂ
ಕತೆ ಪೇಳ್ದಂ ಶಿಷ್ಯ ಚಿಂತಾಮಣಿ ಮನುಚರಿತಂ ದುರ್ಗನುದ್ದಾಮ ವಾಕ್ಪ್ರೀ-
ಪತಿ ಕಯ್ಕೊಂಡಛ್ತಿಯಿಂ ಶೋಸಿ ಬರೆಸಿದಂ ಸಂದ ಗೋವಿಂದನೆಂದಂ-
ದತಿಸೂಕ್ತಂ ಭಾವಿಪಂಗೀ ಕೃತಿ ಮರಳಾಪ ಸಂಪ್ರೀತಿಯಿಚಿದಂ ೨೭

ಧರೆಯಂ ದ್ವಾಪರದೊಳ್ ವದಾನ್ಯತಿಲಕಂ ಲೋಕಿತ್ತರಂ ಮುನ್ನೆಭಾ –
ಸಖರಪ್ಯತ್ರಂ ನಿಜದಾನದಿಂ ತಣಿಪದಂತೀರೇಚ್ಮಿಹೀಭಾಗಮಂ
ದೊರೆವೆತ್ತುತ್ತಮಭೋಗದೊಳ್‌ತಣಿಪಿದಂಭೂಪೋತ್ತಮಂ ಸಂದ ಭಾ-
ಸ್ಕರಪ್ಯತ್ರಂ ಕಲಿಕಾಲಕರ್ಣವೆಸರಂ ಭೂವಿಶ್ಮ್ರತಂ ಮಾಡಿದಂ ೨೮

ಸ್ವಸ್ತಿಶ್ರೀ ವನಿತಾ ಸ್ವಯವರವರಂ ಚಾಳಯಕ್ಯ ರಾಜಾನ್ವಯ
ಪ್ರಸ್ಮ್ರತ್ಯೋದಯ ಶೆಲಭಾನು ವಿನತಾಷದ್ವಿಷನ್ಮಸಕ್ತ
ನ್ಯಸ್ತಾಂಘ್ರಿದ್ವಯಬ್ದಿವೇಷ್ಟಿತ ಮಹೀರಾಕ್ಷಾಕ್ಷಮೋತ್ತುಂಗ ಬಾ
ಹುಸ್ತಂಭಂ ನೃಪಚಕ್ರವರ್ತಿ ತಿಲಕಂ ಶ್ರೀಕೀರ್ತಿ ವಿದ್ಯಾಧರಂ ೨೯

ಅಭಿನವ ಭಗದತ್ತಂ ನಿಖಿ
ಳ ಭವನ ಸಂಸ್ತೂಯಮಾನ ಚಾಳುಕ್ಯಕುಲ
ಪ್ರಭವಂ ದಿಳೀಪನಾಭಾ
ಗ ಭರತ ನಹುಷಾಂಬರೀಷ ನಿರ್ಮಲ ಚರಿತಂ ೩೦

ಸುಕವಿ ಇಂದೂ ಇಲ್ಲ ಮುಂದು ಆಗಲಾರನು. ೨೨ ಹೊಸದಾದ ದೇಸಿಯಿಂದಲೂ ನವರಸಗಳು ಒಸರುವಂತೆ ಒಳಿತನ್ನು  ಹೊಂದಿದ ಮಾರ್ಗದಿಂದ ಇಳೆಯಲ್ಲಿ ಸುಕವಿಗಳಾದ ಅಸಗ, ಮನಸಿಜ, ಚಂದ್ರಭಟ್ಟನ ಕೃತಿಗಳು ಶೋಭಿಸುತ್ತಿದ್ದವು. ೨೩. ಕಾವ್ಯಮಾರ್ಗಗಳೆರಡರಲ್ಲೂ ಪರಿಣತನಾದವನು ಕವಿ ಮಾರ್ಗಮನೋಹಾರಿಯದುದು ಎಂದು ಸಮಸ್ತ ಪಂಡಿತರು ತಮ್ಮ ಗರ್ವವನ್ನು ತೊರೆದು ಪಂಪನ ವಾಗ್ವೆಭವದ ಹಿರಿಮೆಯನ್ನು ಯಾವಾಗಲೂ  ವರ್ಣಿಸುವರು. ೨೪. ಮೂರು ಲೋಕಗಳಿಂದ ಹೊಗಳಿಸಿಕೊಂಡವನೂ ವಾಗ್ವೆಭವದಲ್ಲಿ ನೂರುಮಡಿ ಹಿರಿಮೆಯನ್ನು ಪಡೆದವನು ಶತ್ರುಗಳನ್ನು ಗೆದ್ದವನು  ಅದ ದಂಡನಾಯಕ  ಗಜಾಂಕುಶ ಎಂಬ ಕವಿ ಕುಶಲ ವಾಂಛಿತಪ್ರಿಯ ಶೌರ್ಯನಾಗಿದ್ದನು. ೨೫. ಶ್ರೇಷ್ಠವಾದ ನೀತಿಮಾರ್ಗನಿರತನೂ ಶ್ರೇಷ್ಠ ಕವಿತಾ ವೈಭವವುಳ್ಳನು  ಭೂಮಿಯಲ್ಲಿ ಮನುವಿಗೂ ವ್ಯಾಸನಿಗೂ ಮಿಗಿಲು ಎನ್ನಿಸಿದವನೂ ಅದ ಕವಿತಾವಿಳಾಸ ಎಂಬ ಕವಿಯನ್ನು ಹೊಗಳದವರು ಯಾರಿದ್ದಾರೆ ? ೨೬. ಕವಿ ಗಮಕಿ ವಾದಿ ವಾಗ್ಮಿಗಳಲ್ಲಿ  ಶ್ರೇಷ್ಠರಾದ ಶ್ರೀ ಮಾದಿರಾಜ ಮುನಿಪೋತ್ತಮರು ಇದನ್ನು ಸಂತೋಷದಿಂದ ತಿದ್ದಿದವರು ಎನ್ನುವಾಗ ಪ್ರಪಂಚದಲ್ಲಿ ಈ ಕೃತಿಯನ್ನು ಎತ್ತಿಕೊಂಡು ಹೊಗಳದವರುಂಟೇ ? ೨೭. ಸಮಸ್ತ ಧಾತ್ರಿತಳಜನವಿನುತವೂ ನೀತಿಶಾಸ್ರ್ತದಿಂದ ಕೂದಿದುದು ಅದ  ಕತೆಯನ್ನು ಶಿಷ್ಟ ಚಿಂತಾಮಣಿಯೂ ಮನುಚರಿತನೂ ಅದ ದುರ್ಗಸಿಂಹನು ಹೇಳಿದನು. ಉದ್ದಾಮವಾಕ್ಪ್ರೀಪತಿಯೆನಿಸಿದ ಪ್ರಸಿದ್ದ ಗೋವಿಂದ ನೆಂಬುವನು ಇದನ್ನು ಪ್ರೀತಿಯಿಂದ ತೆಗೆದುಕೊಂಡು ಶೋಸಿ ಬರೆದನು ಎಂದ ಮೇಲೆ ಕೃತಿ ಪ್ರೀತಿಯಿಂದ ಭಾವಿಸುವವನಿಗೆ ಅತಿ ಸೂಕ್ತವೂ ಜೇನಿನಂತೆ ಮಧುರಾಲಾಪವೂ ಅಗಿದೆ.

೨೮. ಭೂಮಿಯನ್ನು ದ್ವಾಪರಯುಗದಲ್ಲಿ ಮಾನ್ಯಶ್ರೇಷ್ಠನೂ ಭಾಸ್ಕರಪುತ್ರನೂ ಆದ ಕರ್ಣನು ಲೋಕೋತ್ತರವಾಗಿ ಮೊದಲು ತನ್ನ ದಾನಗಳಿಂದ ತೃಪ್ತಿಪಡಿಸಿದಂತೆ ಭೂಪೋತ್ತಮನಾದ ಜಗದೇಕಮಲ್ಲ ಜಯಸಿಂಹನು ಶ್ರೇಷ್ಠ ಭಾಸ್ಕರ ಪುತ್ರನಾಗಿ ಹದಿನಾಲ್ಕು ಲೋಕಗಳನ್ನು  ಆಳುತ್ತ ಉತ್ತಮ ಭೋಗದಿಂದ ತಣಿಸುತ್ತ ತನ್ನ ಕಲಿಕಾಲ ಕರ್ಣ ಎಂಬ ಹೆಸರನ್ನು ಜಗತ್ಪ್ರಸಿದ್ಧವನ್ನಾಗಿ ಮಾಡಿದನು. ೨೬. ಲಕ್ಷಿಯು ತಾನಾಗಿಯೇ ಸ್ವಯಂವರದಲ್ಲಿ ವರಿಸಿಕೊಂಡ ಪತಿಯೂ, ಚಾಳುಕ್ಯವಂಶವೆಂಬ ಪ್ರಸಿದ್ದವಾದ ಉದಯಪರ್ವತಕ್ಕೆ ಸೂರ್ಯನಂತಿರುವವನು ಅನರಾದ ಶತ್ರುರಾಜರ ತಲೆಯ ಮೇಲೆ ಕಾಲಿಟ್ಟವನೂ ಸಮದ್ರದಿಂದ ಅವೃತವಾದ ಭೂಮಂಡಲವನ್ನು ರಕ್ಷಿಸಲು ಸಮರ್ಥವಾದ ಉತ್ತುಂಗ ಬಹುಸ್ತಂಭವನ್ನುಳ್ಳವನು ಅದ ಚಕ್ರವರ್ತಿತಿಲಕನೂ ಶ್ರೀ ಕೀರ್ತಿ ವಿಧ್ಯಾಧರನೆನಿಸಿದನು. ೩೦. ಅಭಿನವ ಭಗವದತ್ತನೂ ಸಮಸ್ತಲೋಕದಿಂದ ಪ್ರಶಂಸಿತವಾದ ಚಾಳುಕ್ಯಕುಲ ಸಂಭೂತನೂ ದೀಲಿಪ  ನಾಭಾಗ ಭರತ ನಹುಷ ಅಂಬರೀಷ ಮೊದಲಾದವರ ನಿರ್ಮಲ

ಜಯಲಕ್ಷ್ಮಿ ಪತಿ ಸತ್ಯಾ
ಶ್ರಯನಪ್ರತಿಮಪ್ರಾಪನಂಗಜರೂಪಂ
ಜಯಸಿಂಹನರಪಂ ಸತ್ಯಾ
ಶ್ರಯಕುಲತಿಲಕಂ ಸಮಸ್ತಭವನಾಧಾರಂ ೩೧

ದಿಗಿಭವ್ರಾತದೊಳಿಂದ್ರಂತಿ ಸುರರರೊಳ್ ಚಕ್ರಾತಧಂ ಚಕ್ರವ
ರ್ತಿಗಳೊಳ್ ಶ್ರೀ ಜಗದೇಕಮಲ್ಲ ಮಹಿಪಂ ಶೈಲಂಗಳೊಳ್ ಮೇರು ಪ
ನ್ನಗರೊಳ್ ವಾಸುಕಿ ದಂಡನಾಯಕರೊಳಂ ಶ್ರೀಗಂಡ ಭೂರಿಶ್ರವಂ
ಮಿಗಿಲೆಚಿದಾರ್ ಪೊಗಛಿರ್ ಪಯೋನಿದಿ ಪರಿತಾಶೇಷ  ಭೂಭಾಗದೊಳ್ ೩೨

ಸಕಳೋರ‍್ವೀಶ್ವರ ದಂಡನಾಯಕ ವಿನೂತಾಂಘ್ರಿದ್ವಯಂ ದಂಡನಾ
ಯಕವೀರಾಗ್ರಣಿ ದಂಡನಾಯಕ ಚಮೂ ಚಕ್ರಾಯುಧಂ ದಂಡನಾ
ಯಕ ತೇಜೋನಿದಿ ದಂಡನಾಯಕ ನಿಕಾಯಾಶ್ವರಂ ದಂಡನಾ
ಯಕ ಚೂಡಾಮಣಿಯೆಂದು ಬಣ್ಣಿಸದರಾರ್ ಶ್ರೀ ಸಿಂಹಸನ್ನಾಗನಂ ೩೩

ತಚ್ಚರಣ ಕಮಳ ಭೃಂಗಂ
ಸಚ್ಚರಿತಂ ಶೌರ‍್ಯರ್ವಾ ವಿಪ್ರಕಲೋದ
ನ್ವಚ್ಚಂದ್ರನಪಗತಾರಿ ಕು
ಭ್ಯಚ್ಚಕ್ರಂ ಚಕ್ರವರ್ತಿ ದಂಡಾಶಂ ೩೪

ಧರಣಿಚಕ್ರದೊಳುಳ್ಳ ಪಾರ್ಥಿವರನಿರ್ಪತ್ತೋಂದು ಸೂೞ್ ಕೊಂದು ಭೀ
ಕರಕೋಪಾನಳನಂ ತದೀಯ ಯುವತೀನ್ಭೆತ್ರಾಂಬುಧಾರಾಪರಂ
ಪರೆಯಿಂ ಮೞ್ಗೆಸಿ ಗೆಲ್ಲಮಂ ತಳೆದ ರಾಮಂಗಗ್ಗಳಂ ವಿಕ್ರಮಾ
ಭರಣಂ ವಿಕ್ರಮದಿಂ ತಿವಿಕ್ರಮನಿಭಂ ಕೋದಂಡರಾಮಾಪಂ ೨೫

ಚತುರಂಬುರಾಶಿವಲಯ
ಕ್ಷಿತಿಜರಕ್ಷಣದಕ್ಷ ತೀಕ್ಷ ಕೌಕ್ಷೇಯಕಮಂ
ಡಿತಬಾಹುರಾಹು ಕಬಳೀ
ಕೃತ ಚೋಳೀ ಮಾಳಿಕಾ ಮುಖೇಂದುವಿಳಾಸಂ ೩೬

ಬುಧ ವೆತಾಳಿಕ ಗಾಯಕಾರ್ಥೀನಟ ವೀಣಾವಾದ ಭೂದೇವ ಮಾ
ಗಧವಂದಿಪ್ರಕರಾರ್ಥಿ ಕಲ್ಪಮಹಿಜಂ ದೋರ್ಗರ್ವದಿಂದಾಂತ ವೈ
ಎಧರಾಶ ಬಲಕ್ಕೆ ಗಾಂಡಿವಧರಂ ಗಂಗಾಧರಂ ತುಂಗಶ
ಕ್ತಿಧರಂ ವಜ್ರಧರಂ ಧರಾಧರಧರಂ ಶ್ರೀ ಕೀರ್ತಿವಿದ್ಯಾಧರಂ ೩೭

ಎನೆ ನೆಗಳ್ಗಿ ಕುಮಾರಸ್ವಾ
ಮಿ ನಚ್ಚಿ ಮುದದಿಂದಮೀಯೆ
ಶನ ಸಂವಿಗ್ರಹಾಸ್ಪದ
ಮನಾತ್ಮ ಸಾತ್ಕೃತ ನೃಪತಿವರ್ಗಂ ದುರ್ಗಂ ೩೮

ಅತನ ವಿಶುದ್ದ ಗುಣಸಂ
ಘಾತಾತ್ಮಜ ಜನ್ಮಭೂಮಿ ಕರ್ಣಾಟಕ ಧಾ
Wತಿಲಕಮಖಿಳಜಗತೀ
ಖ್ಫ್ಯತಂ ಕಿಸುಕಾಡನಾಡು ಸೊಗಯಿಸಿ ತೋರ್ಕುಂ ೩೯

ಆ ನಾಡೊಳಗ್ರಹಾರಂ
ಭೂನಾರೀ ಕುಚತಟಾಗ್ರಹಾರಂ ವಿಪುಳ
ಶ್ರೀನಿಳಮೆನಿಸಿ ಸಯ್ಯಡಿ
ನಾನಾವಸ್ತೂತ್ಕಕರಂ ಕರಮಸೆಗುಂ ೪೦

ಚರಿತ್ರವುಳ್ಳವನೂ ಆಗಿರುವನು. ೩೧. ಜಯಶ್ರೀಗೆ ಪತಿಯೂ ಸತ್ಯಕ್ಕೆ ಆಶ್ರಯನೂ ಅಸಾದಾರಣ ಪ್ರತಾಪವುಳ್ಳವನೂ, ಮನ್ಮಥರೂಪನು ಸತ್ಯಾಶ್ರಯ ಕುಲಕ್ಕೆ ಸಮಸ್ತ ಜಗತ್ತಿನ ಧಾರ ಸ್ವರೂಪನೂ ಎಂದು ಜಯಸಿಂಹನೃಪನು ಪ್ರಸಿದ್ದನಾಗಿದ್ದನು. ೩೨. ದಿಗ್ದಂತಿಗಳಲ್ಲಿ ಐರಾವತ ದೇವತೆಗಳಲ್ಲಿ ವಿಷ್ಣು, ಚಕ್ರವರ್ತಿಗಳಲ್ಲಿ  ಶ್ರೀಜಗದೇಕಮಲ್ಲ ಶೈಲಗಳಲ್ಲಿ ಮೇರು ಸರ್ಪಗಳಲ್ಲಿ ವಾಸುಕಿ, ದಂಡನಾಯಕರಲ್ಲಿ ಶ್ರೀಗಂಡ ಭೂರಿಶ್ರವರಿಗೆ ಮಿಗಿಲು ಎಂದು ಸಮುದ್ರಾಂಚಿತ ಭೂಭಾಗದಲ್ಲಿ ಅವನನ್ನು ಹೊಗಳದವರಾರು ? ೩೩. ಸಮಸ್ತ ಚಕ್ರವರ್ತಿಗಳ ದಂಡನಾಯಕರಿಂದ ವಿನುತವಾದ ಪಾದಗಳಿರುವವನೂ ದಂಡನಾಯಕ ವೀರಗ್ರಣಿಯೂ,ದಂಡನಾಯಕ ಸ್ಯೆನ್ಯಕ್ಕೆ ವಿಷ್ಣುವಿಂತಿರುವವನೂ ದಂಡನಾಯಕರಲ್ಲಿ ತೇಜಸ್ವಿಯೂ ದಂಡನಾಯಕ ಸಮೂಹಕ್ಕೆ ಅಪತಿಯೂ ದಂಡನಾಯಕರಲ್ಲಿ ಶ್ರೇಷ್ಠನೂ ಎಂದು ಜಯಸಿಂಹನೃಪನನ್ನು ವರ್ಣಿಸದವರಾರು ?೩೪.  ಅ ಕ*ದಂ*ಬ ವಂಶಾಶನಾಗಿರುವ ಚಾಳುಕ್ಯರಾಜನು ಜಯಂತೀಪುರದಲ್ಲ್ಲಿ ಪೃಥ್ವೀ ಸಾಮ್ರಾಜ್ಯವನ್ನು ಮಾಡುತ್ತಿರಲು ಸಚ್ಚರಿತನೂ ಶೌರ್ಯಸಮುದ್ರನೂ ವಿಪ್ರಕುಲಸಮುದ್ರಕ್ಕೆ ಚಂದ್ರನೂ ಶತ್ರುಗಳೆಂಬ ಪರ್ವತಗಳನ್ನು ನಿವಾರಿಸಿದವನೂ ಚಕ್ರವರ್ತಿಯ ದಂಡಾನಾಶನೂ ಅವನ ಪಾದಕಮಲಗಳಲ್ಲಿ ಭೃಂಗನಾಗಿದ್ದನು. ೩೫. ಕೋದಂಡ ರಾಮಾಪನೆಂಬ ಹೆಸರುಳ್ಳ ಈ ಚಕ್ರವರ್ತಿಯು ಭೂಮಿಯಲ್ಲರುವ  ಕ್ಷತ್ರಿಯರನ್ನೆಲ್ಲ ಇಪ್ಪತ್ತೊಂದು ಬಾರಿ ಕೊಂದು  ಉಂಟಾದ ಭಯಂಕರಕೋಪಾಗ್ನಿಯನ್ನು ಆ ಕ್ಷತ್ರಿಯ ಸ್ರ್ತೀಯರ ಕಣ್ಣೀರ ಕೋಡಿಯಿಂದ ಕುಗ್ಗಿಸಿ ಜಯಶಾಲಿಯಾದ ಪರಶುರಾಮನಿಗಿಂತ ಶ್ರೇಷ್ಠನಾಗಿರುವವನು : ಅಂಥ  ವಿಕ್ರಮಾಭರಣನು ಪರಾಕ್ರಮದಲ್ಲಿ ತಿವಿಕ್ರಮನಿಗೆ ಸಮಾನನಾದವನು. ೩೬. ನಾಲ್ಕು ಸಮುದ್ರಗಳಿಂದ ಅವೃತವಾದ ಭೂಮಿಯ ಸಂರಕ್ಷಣೆಯಲ್ಲಿ ದಕ್ಷವಾದ ತೀಕ್ಣ್ಷ ಖಡ್ಗದಿಂದ ಶೋಭಿಸುವ ಕೈಯೆಂಬ ರಾಹುವಿನೀಂದ ಗ್ರಸ್ತವಾದ ಚೋಳಸ್ರ್ತೀಯರ ಮುಖಚಂದ್ರ  ವೈಭವನ್ನು ಹೊಂದಿದೆ. ೩೭. ಶ್ರೀಕೀರ್ತಿ ವಿದ್ಯಾಧರನು ಪಂಡಿತ, ವೈತಾಳಿಕ ಗಾಯಕ, ಅರ್ಥಿ, ನಟ, ವೀಣಾವಾದಕ ಬ್ರಾಹ್ಮಣ ಮಾಗಧ ವಂದಿ ಮೊದಲಾದವರ ಸಮುಹಕ್ಕೆ ಕಲ್ಪವೃಕ್ಷವಾಗಿರುವವನು. ಬಾಹುಗಳ ದರ್ಪದಿಂದ ಮೇಲೆ ಬಿದ್ದ ವೈರಿರಾಜರ ಬಲಕ್ಕೆ ಅರ್ಜುನನೂ ಶಿವನೂ ಸ್ಕಂದನೂ ಇಂದ್ರನೂ ಶ್ರೀಕೃಷ್ಣನೂ ಅಗಿದ್ದನು. ೨೮. ಎಂಬಂತೆ ಪ್ರಸಿದ್ದನಾದ ಕುಮಾರಸ್ವಾಮಿಯ ನಂಬಿ ಸಂತೋಷದಿಂದ ಕೊಡಲು ಚಕ್ರವರ್ತಿಯಿಂದ ಸಂವಿಗ್ರಹಿ ಪದವಿಯನ್ನು ನೃಪತಿವರ್ಗದಿಂದ ಸತ್ಕೃತನಾದ ದುರ್ಗಸಿಂಹನು ಪಡೆದನು* ೩೬.  ಆತನ ಪವಿತ್ರವಾದ ಗುಣಸಮೂಹಗಳಿಂದ ಕೂಡಿದ ಜನ್ಮಭೂಮಿಯು ಕರ್ಣಾಟಕ ಭೂಮಿಯಲ್ಲಿ  ಶ್ರೇಷ್ಠವೂ ಸಮಸ್ತ ಜಗತ್ತಿನಲ್ಲಿ ಪ್ರಸಿದ್ದವೂ ಅದ ಕಿಸುಕಾಡನಾಡು ಶೋಭಿಸಿ ತೋರುತ್ತಿತ್ತು. ೪೦. ಆ ನಾಡಿನ ಅಗ್ರಹಾರವು ಭೂಕಾಂತೆಯ ಸ್ತನತಟದ ಹಾರದ ತುದಿಯೂ ವಿಪುಲವಾದ ಸಂಪತ್ತಿನ ನಿಲಯವೂ