ತುಂಗಭದ್ರೆ ಮಂಗಲ ತರಂಗ ಸಂಗೀತ ಹಾಡುವಲ್ಲಿ |
ಸಂಗಮಾನ್ವಯದ ಹುಕ್ಕಬುಕ್ಕ ಸೋದರರು ಬಂದರಲ್ಲಿ |
ಹರಿಹರಾಭಿದಾನದಲಿ ಹುಕ್ಕ ಓಂ ಪ್ರಥಮ ರಾಜನಾದ |
ಕಿರಿಯ ಬುಕ್ಕ ಯುವರಾಜನಾದ ಮಾಧವನು ಮಂತ್ರಿಯಾದ |
ನಿಟ್ಟಿಸಿದರು ಪುದುವಾಳ್ದು ನಾಡು ಘನಘಟ್ಟಿಗೊಳ್ವಾದನ್ನು
ಮೆಟ್ಟಿದರು ದುರಾಕ್ರಮಣ ಶೀಲಯುವನೋಗ್ರ ಭೀತಿಯನು |
ಕಟ್ಟಿದರು ಮಹೋದಗ್ರ ಗೋಪುರಾದಿಗಳ ಸಾಂದ್ರವಾಗಿತ್ತು |
ನೀರು ಹರಿದು ಬೆಳೆ ಬೆಳೆದು ವಾಣಿಜ್ಯ ವಿಪುಲವಾಗಿ |
ಭೂರಿ ಕನಕ ಕವಿಸೂರಿ ಕುಶಲರಿಗೆ ಸೂರೆ ಸೂರೆಯ |
ಪ್ರಜೆಗಳೇರಿದರು ಸುಖಸಮೃದ್ಧ ಜೀವನದ ಪರಮಶಿರಾ |
ವಿಜಯ ನಗರ ಕರ್ನಾಟಕ ಜಾನಪದಾಭ್ಯುದಯ | ಶಿಖರಿ ಶಿಖರ ||

ರಚನೆ : ಎ.ಜಿ. ನೀಲಗಾರ
ಕೃತಿ :
ಜಾನಪದ ಝೇಂಕಾರ