ಧನ್ಯ ಧನ್ಯ ಮಲ್ಲಮ್ಮ ರಾಣಿ
ಬೆಳವಡಿಯ ಭಾಗ್ಯದೇವಿ |
ಧನ್ಯ ಕನ್ನಡದ ಶಕ್ತಿ ಪತಾಕೆಯ
ಎತ್ತಿ ಹಿಡಿದ ತಾಯೆ|| ೧ ||

ಪತಿವೃತೆಯೊಳು ಪಾರ‍್ವತಿಯೌ ನೀ |
ಕ್ರೋಧದಲಿ ಕಾಳಿ |
ಸಮರದಲ್ಲಿ ದುರ್ಗಾವತಾರಿ
ರತಿದೇವಿ ಚಲ್ವಿಕೆಯಲ್ಲಿ|| ೨ ||

ಪ್ರಮೀಲೆಯೇ ಸರಿ ರಾಜ ತಂತ್ರದಲ್ಲಿ
ಗಾರ್ಗಿ ಜ್ಞಾನದಲ್ಲಿ |
ಕಲ್ಪಲತೆಗೆ ಸಮದಾನದಲ್ಲಿ
ಶಾರದೆಯು ಕಲೆಗಳಲ್ಲಿ|| ೩ ||

ನಿನ್ನ ವೀರಕಥೆ ಕನ್ನಡಿಗರಿಗೆ
ಚೈತನ್ಯ ನೀಡುತಿಹುದು |
ನಿನ್ನ ಕೀರ್ತಿ ಪ್ರಭೆ ನಮ್ಮ ಮನಕೆ
ಹೊಸ ಕಣ್ಣ ನೀಡುತಿಹುದು|| ೪ ||

ರಚನೆ : ಎ.ಜಿ. ನೀಲಗಾರ
ಕೃತಿ :
ಜಾನಪದ ಝೇಂಕಾರ