ಶ್ರೇಷ್ಠವಾದ ರಾಷ್ಟ್ರೀಯ ಮುಖಂಡರು
ಲೋಕಮಾನ್ಯ ಟಿಳಕರೆಂಬುವರು

ಮೊದಲಿಗೆ ಅಂಜತಿದ್ರು ಜನರು
ಜೇಲ ಅಂದ್ರ ಅಪಮಾನ ಅಂತಿದ್ರು

ಮೊದಲಿಗೆ ಇವರು ಜೇಲಿಗೆ ಹೋದವರು
ಜನರಲ್ಲಿಯ ಅಂಜಿಕೆ ತಗದವರು

ಜೇಲಿನಲ್ಲಿ ಗೀತಾ ಬರದವರಿವರು
ಆರು ವರ್ಷ ತುರಂಗ ಭೋಗಿಸಿದರು
ಜೇಲ ಅಂದ್ರ ಸ್ವರ್ಗ ಅಂತ ತಿಳಿದವರು
ಅವರ‍್ನ ಕಂಡ ಹೋದ್ರು ಎಲ್ಲ ಜನರು
ಸ್ವರಾಜ್ಯದ ಹಾದಿಯ ತೋರಿಸಿದರು
ತಮ್ಮ ಕೀರ್ತಿ ಕಾಯಂ ಉಳಿಸಿದರು

ಭೀಮಸಿಂಗ ಸಖಿ ಹೇಳಿದರು
ಟಿಳಕರ ವೃತ್ತಾಂತ ತಿಳಿಸಿದರು

ರಚನೆ : ಹುಲಕುಂದ ಭೀಮಕವಿ
ಕೃತಿ :
ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ