(ಧಾಟಿ : ಪ್ರಭೋ ಆನಂದದಾತ)

ಬಾಬಾ ಬಾಬಾ ಸಂತ ವಿನೋಬಾ | ಸಂತ ವಿನೋಬಾ |
ಭಾವೆ ಬಾಬಾ|| ಪ ||

ಎಪ್ಪತ್ತೆರಡ ವರುಷದ ಮುಪ್ಪಿನವನೆ ಬಾ |
ಇಪ್ಪತ್ತೆರಡ ಭಾಷಾ ಅರಿತವ ನೀ ಬಾ |
ತಪ್ಪದೆ ಶಾಂತಿ ಮಂತ್ರ ಬೋಧಿಸುತ ನೀ ಬಾ|| ೧ ||

ಬಡತನ ಭೂತನು ಬಿಡಿಸುತ ನೀ ಬಾ |
ದುಡಿಯುವ ಬಡವರಿಗೆ ಹೊಲಾ ಕೊಡಿಸುತ ನೀ ಬಾ |
ಬಡವ ಶ್ರೀಮಂತರ ಕೂಡಿಸುತ ನೀ ಬಾ|| ೨ ||

ಗ್ರಾಮದಾನ ಯಜ್ಞವ ನಡಿಸುತ ನೀ ಬಾ |
ಗ್ರಾಮ ಸ್ವರಾಜ್ಯವ ಮಾಡಿಸೂತ ನೀ ಬಾ |
ಗ್ರಾಮದ ಏಳ್ಗೆಗಾಗಿ ದುಡಿಯುವ ನೀ ಬಾ|| ೩ ||

ಅರ್ಥಶಾಸ್ತ್ರವನು ಅರಿತಂವ ನೀ ಬಾ |
ಸ್ವಾರ್ಥದ ಗುರಿಯನು ಮುರಿಯಂವ ನೀ ಬಾ |
ತುರ್ತ ಭೀಮೇಶನ ಪದದೊಳು ನೀ ಬಾ|| ೪ ||

ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು