ತ್ಯಾಗವೀರ ಸಿರಸಂಗಿ ಲಿಂಗರಾಜರ ನಾಮಸ್ಮರಣೆಯ ಮಡೂನೂ ಬಾ |
ಅವರಂತೆ ನಡೆಯುದು ಕಲಿಯೋಣು ಬಾ |
ಜಗದೊಳು ಮಾನವರಾಗೂನು ಬಾ |
ತ್ಯಾಗವೀರ ಸಿರಸಿಂಗಿ ಲಿಂಗರಾಜರ ನಾಮಸ್ಮರಣೆಯ ಮಾಡೂನು ಬಾ|| ೧ ||

|| ಅಂತಾ || ರಾಜ್ಯಭೋಗ್ಯದ ತ್ಯಾಗ ಮಾಡಿದ | ಭಾರ್ಗವನಂತೆ ಮಹಾದಾನಿ ಎನಿಸಿದ |
ಜಗದೊಳು ಅಳಿಯದೆ ಧರ್ಮವೀರ ಯೋಗಿಯ ನೆನಿಯೂನು ಬಾ |
ಜಗದೊಳು ಮಾನವರಾಗೂನು ಬಾ |
ತ್ಯಾಗವೀರ ಸಿರಸಂಗಿ ಲಿಂಗರಾಜರ ನಾಮಸ್ಮರಣೆಯ ಮಾಡೂನು ಬಾ |||| ೨ ||

|| ಅಂತಾ || ಒಬ್ಬ ಮಗನ ತಂದಿಯಾಗದೆ ಜಗದೊಳು ನಾಡಿನ ಮಕ್ಕಳಿಗೆಲ್ಲ ತಂದಿಯಾಗಿ |
ಲೋಕ ಕಲ್ಯಾಣ ಉಪಕಾರಿಯಾದ ಲಿಂಗರಾಜರ ನೆನಿಯೂನು ಬಾ |
ಜಗದೊಳು ಮಾವನರಾಗೂನು ಬಾ ||
ತ್ಯಾಗವೀರ ಸಿರಸಂಗಿ ಲಿಂಗರಾಜರ ನಾಮಸ್ಮರಣೆ ಮಾಡೂನು ಬಾ || ೩ ||

|| ಅಂತಾ || ಕನ್ನಡನಾಡಿನ ಪುಣ್ಯ ಪುರುಷನ | ಉನ್ನತ ಧ್ಯೇಯ ಸಾಧಿಸಿದವನ |
ಕನ್ನಡ ತಾಯಿಯ ಪುಣ್ಯ ಪುತ್ರನಿಗೆ ವಂದನೆ ಮಾಡೂನು ಬಾ |
ಜಗದೊಳು ಮಾನವರಾಗೂನು ಬಾ |
ತ್ಯಾಗವೀರ ಸಿರಸಂಗಿ ಲಿಂಗರಾಜರ ನಾಮಸ್ಮರಣೆಯ ಮಾಡೂನು ಬಾ || ೪ ||

|| ಅಂತಾ || ಪರಶುರಾಮನ ಪ್ರತಿ ಅವತಾರದವನ | ಪ್ರತಿ ನಿತ್ಯ ಮಾಡಿರಿ ಆತನ ಸ್ತವನ |
ಆ ಚಂದ್ರಾರ್ಕ ಉಳಿದ ಬೆಳಗಿದ ಮಹಾಲಿಂಗರಾಜರ ನೆನಿಯೂನು ಬಾ |
ಜಗದೊಳು ಮಾನವರಾಗೂನು ಬಾ |
ತ್ಯಾಗವೀರ ಸಿರಸಿಂಗಿ ಲಿಂಗರಾಜರ ನಾಮಸ್ಮರಣೆಯ ಮಾಡೂನು ಬಾ || ೫ ||

|| ಅಂತಾ || ಖ್ಯಾತ ಬನಹಟ್ಟಿ ಕವಿ ಗಂಗಾತನಯಾ | ಅಪ್ಪಣ ತೋರಿದ ಆತನ ಹೃದಯಾ |
ನಾಡಿನ ನಂದಾದೀಪವೆನಿಸಿದ ದಿವ್ಯ ಜ್ಯೋತಿಯ ನೆನಿಯೂನು ಬಾ |
ತ್ಯಾಗವೀರ ಸಿರಸಂಗಿ ಲಿಂಗರಾಜರ ನಾಮಸ್ಮರಣೆಯ ಮಾಡೂನು ಬಾ ||*|| ೬ ||

ರಚನೆ : ಅಪ್ಪಣ್ಣ ಜಂಬಗಿ, ಬನಹಟ್ಟಿ
ಕೃತಿ :
ಲಿಂಗರಾಜು ವಿಜಯ ಕಾವ್ಯ ಹಾಗೂ ಕೆಲವು ಲಾವಣಿಗಳು