ಸರದಾರ ನಾಗೂರರ ಧರ್ಮಪತ್ನಿ ಸತ್‌ಶೀಲ ಸುಶೀಲಮ್ಮನವರು |
ಧೀರತನದ ಸಂಸಾರ ಸಾಗರದ ಹಿರಿಯ ದಾರಿಯನೆ ತೋರಿಹರು

ಸತ್ಯವಾನ ಸತಿ ಸಾವಿತ್ರಿಯಂತೆ ಪತಿಪ್ರೀತಿಯಲಿ ನಿಂದವರು |
ಸತ್ಯನ್ಯಾಯ ನಿಷ್ಪಕ್ಷಪಾತದ ತತ್ವದಲ್ಲಿ ಸದಾ ತತ್ಪರರು

ತರುಣರ ಮನ ತಿರುಗಿಸುವ ಶಕ್ತಿ ಸಾಮರ್ಥ್ಯವುಳ್ಳ ಸರದಾರರು |
ನಿರ್ಭಯ ನಿರ್ದಾಕ್ಷಿಣ್ಯ ನಿಷ್ಠುರ ಮಾತಿನಲ್ಲಿ ಅತಿ ಚತುರರು ||
ನಿರಾಶೆ ನೀತಿವಂತರು | ದುರಾಶೆಯವನು ದೂಷಿಪರು |
ಸತ್ಯತನವನತಿ ಪ್ರೀತಿಪರು | ಸರದಾರ ಬಿರುದ ಧರಿಸಿಹರು ||
ಧೈರ್ಯದಿಂದ ಸರಿಯಾದ ದಾರಿಗೆ ತರುಣರನ್ನು ಹುರಿಗೊಳಿಸುವರು |
ಸರದಾರ ಬಸವರಾಜರು

ರೀತಿ ನೀತಿ ಕೃತಿ ಮಾತಿನಲ್ಲಿ ಶಾರದೆಯ ಪುತ್ರರೆಂದೆನಿಸಿಹರು |
ಮತಿಗೆ ಮೆಚ್ಚಿ ಮೈಸೂರ ಕೋರ್ಟಿನ ನ್ಯಾಯಾಧೀಶರ ಪುತ್ರಿಯರು |
ಹತ್ತೊಂಬತ್ತು ನೂರಾ ಐವತ್ತಾರರಲಿ ಸರದಾರರ ಕೈ ಹಿಡಿದಿಹರು |
ನಿತ್ಯನೇಮ ಸತ್ಪಥದಿ ಆದರಾತಿಥ್ಯದಲ್ಲಿ ಕಡುಜಾಣೆಯರು ||
ಪಾರಮಾರ್ಥಕೆ ಪ್ರಪಂಚ ಕೂಡಿಸ ಸಂಸಾರ ಸಾರುವ ಸವಿದವರು |
ಸಾರ್ವಜನಿಕ ಕಾರ್ಯದಲಿ ಸರಿಯಾಗಿ ಬೆರೆತು ಬಲ್ಲಿದರೆನಿಸಿಹರು ||
ಸುಶೀಲ ಸುಗುಣವಂತರು | ಶಶಿಕಾಂತಿ ಹಸನ್ಮುಖದವರು |
ಸುಸಂಸ್ಕೃತ ಸುವಿಚಾರಿವರು | ಹೆಸರಾದ ಸುಶೀಲದೇವಿಯರು |
ತನು ಎರಡಾದರೂ ಮನ ಬೆಸುಗೆಯ ಘನ ಸವಿ ಸೌರಭವನು ಸವಿದವರು
ನಾಗೂರ ಸತಿಪತಿದ್ವಯರು

ರಚನೆ : ಶರಣಪ್ಪ ವಾಲಿ
ಕೃತಿ :
ಶರಣಸ್ಮೃತಿ