ಕನ್ನಡ ನಾಡ ಸಾಹಿತಿ | ಶಾರದೆಯ ಕೃತಿ | ಹಿಂದಿನ ಸ್ಥಿತಿ |
ಇಂದಿನ ಪ್ರಗತಿ | ಬೆಳೆಸುವ ಶಕ್ತಿ | ನಾಡ ತುಂಬ ಜ್ಯೋತಿ |
ಬೆಳಗ ಹತ್ತೈತಿ | ಅದರ ಪ್ರಖರತೆಗೆ ನೀನೇ ಆಧಾರ ನೀನೆ ಆಧಾರ|| ಪ ||
ಐದಕ್ಷರ ನಿನ್ನಯ ಹೆಸರ | ಕೀರ್ತಿ ಸದಾ ಅಮರ | ಸಾಹಿತ್ಯ ಶೃಂಗಾರ |
ನಿನ್ನ ಸಾಕ್ಷಾತ್ಕಾರ | ತೋರು ಅವತಾರ | ತೋರು ಅವತಾರ|| ೧ ||
ನಿನ್ನ ಶಕ್ತಿ ವಿವಿಧ ವಿನ್ಯಾಸ | ಮಧುರಮಂದಹಾಸ | ಹಿಂದಿನಿತಿಹಾಸ |
ತೋರುವ ಸಾಹಸ | ಜನತೆಗತಿ ಹರುಷ | ದೇವಿ ನಿನ್ನ ಧ್ಯಾಸ |
ಆಗಿ ನಿನ್ನ ದಾಸ | ಸತತ ನಿಂತಿಹರು | ಸತತ ನಿಂತಿಹರು|| ೨ ||
ಕೃಷ್ಣ ನವತಾರ | ಹುಟ್ಟಿ ಬಂದಿಹರು | ಶಾರದೆಯ ಕುವರ |
ಶಾಂತಿಸಾಗರ | ಹೃದಯ ವಿಸ್ತಾರ | ಲುಂಗಿ ಧರಿಸುವರು |
ಜೆಪಿ ಗಾಂಧಿ ಶಿಖರ | ನಾರಾಯಣರ | ಜಿ. ನಾರಾಯಣರು|| ೩ ||
ಕನ್ನಡ ನುಡಿಯ ಆನಂದ | ಮಂದಾರ ಮಕರಂದ | ಹೃದಯ ಅರವಿಂದ |
ರಸದಲಿ ಮಿಂದು | ಮಧುರ ರಸಗಂಧ | ನಾಡ ಮಮಕಾರ |
ಕನ್ನಡ ಹರಿವ ಜಲಧಾರ | ಭೂಮಿ ಫಲಪೂರ | ಹಾಡು ಝೇಂಕಾರ|| ೪ ||
ಇನಿಯ ಇಂಚರ | ಸಾಹಿತಿಯನುಸಾರ | ಮಾಡಿ ಪ್ರಸಾರ |
ಮೇಳ ನಾಲ್ವರ | ವಾಲಿ ಶರಣರ | ಸಾಲೊಟಗಿಯವರು | ಸಾಲೊಟಗಿಯವರು|| ೫ ||
ರಚನೆ : ಶರಣಪ್ಪ ವಾಲಿ
ಕೃತಿ : ಶರಣಸ್ಮೃತಿ
Leave A Comment