ಸ್ವಾಗತ ಮಾಳ್ಪೆವು ಆಗಮಿಸಿದ ಕಲಬುರ್ಗಿ ಮಲ್ಲಿನಾಥರಿಗೆ |
ಡಾಕ್ಟರೇಟ ಪದವೀಧರರಿಗೆ || ಪ ||

ಹಿಂದಿನ ಕನ್ನಡ ಲೇಖ ಶಿಲಾಲಿಪಿ ಸಂಶೋಧಕ ತಜ್ಞರಿಗೆ |
ಮೇಧಾವಿಯೆನಿಪ ಮಾನ್ಯರಿಗೆ || ಅ.ಪ. ||

ಮಾಧ್ಯಮಿಕ ಓದನು ಸಿಂದಗಿಯಲ್ಲಿ ಮುಗಿಸಿ |
ಬುದ್ಧಿವಂತರಾಗಿ ಬಿ.ಎ. ಪ್ರಥಮತೆಗಳಿಸಿ
ಧಾರವಾಡದಿಂದ ಎಂ.ಎ. ದಲ್ಲಿ ರ‍್ಯಾಂಕ ಉಳಿಸಿ | ಶಿಕ್ಷಣ
ಶಿಕ್ಷಣದಿ ಸಾಗಿ ಸಂಶೋಧನೆಯಲ್ಲಿ ಸಿದ್ಧಿ ಪಡೆದ ಮಾನ್ಯರಿಗೆ |
ಸ್ವಾಗತಿಪೆವು ಸನ್ಮಾನ್ಯರಿಗೆ || ೧ ||

ಕರ್ನಾಟಕ ಮಹಾವಿದ್ಯಾಲಯದಲ್ಲಿ ಕನ್ನಡ ಪಂಡಿತರೆನಿಸಿ |
ಕನ್ನಡ ಅಧ್ಯಾಪನವನು ಮಾಡುತ ಬೇಗನೆ ಹೆಸರನು ಗಳಿಸಿ |
ವಿಶ್ವವಿದ್ಯಾಲಯದಲ್ಲಿ ಅಡಿಯಿರಿಸುತ ಮುನ್ನಡೆದು | ಕರ್ನಾಟಕ |
ಕರ್ನಾಟಕ ವಿ.ವಿ. ಕನ್ನಡಪೀಠದ ತಜ್ಞ ಪ್ರೊಫೆಸರರಿಗೆ |
ಸುಸ್ವಾಗತ ಮಾಳ್ವೆವು ನಿಮಗೆ  || ೨ ||

ಅರುಣೋದಯದಿಂ ಸರಸಿಜಸಮೂಹಕೆ ಹರುಷವಾದ ತೆರದಲ್ಲಿ |
ಹರುಷಾಗಿದೆ ನಮ್ಮೆಲ್ಲರಿಗೆ |
ಗೀಗೀ ಮೇಳದ ನಾಲ್ವರೂ ಒಂದಾಗಿ ಸ್ವಾಗತಿಪರು ಸಂಭ್ರಮದಿ |
ಒಲವಿಟ್ಟು ಬಂದ ಮಾನ್ಯರಿಗೆ ||

ರಚನೆ : ಶರಣಪ್ಪ ವಾಲಿ
ಕೃತಿ :
ಶರಣಸ್ಮೃತಿ