ನಮ್ಮ ಊರಿನ ಆಸುಪಾಸಿನಲ್ಲಿ ಅವರು ಜೇನುಭಟ್ಟರೆಂದೇ ಪರಿಚಿತರು. ಅವರ ನಿಜನಾಮ ನಮಗೆ ಇಂದಿಗೂ ಗೊತ್ತಿಲ್ಲ. ನಮಗೆ ಜೇನುಭಟ್ಟರು ೧೯೭೧ನೇ ಇಸವಿಯಿಂದಲೂ ಗೊತ್ತು. ಅವರ ಸ್ವಂತ ಊರು ಶೃಂಗೇರಿ ತಾಲೂಕಿನ ಯಾವುದೋ ಒಂದು ಪುಟ್ಟ ಹಳ್ಳಿ. ಸಾಗುವಳಿ ಮಾಡಲು ಸಾಕಷ್ಟು ಜಮೀನು ಇಲ್ಲದ ಕಾರಣ, ಅವರು ಹೆಜ್ಜೇನು ಸಂಗ್ರಹಿಸುವುದನ್ನೇ ತನ್ನ ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು.

ಜೇನುಭಟ್ಟರು ನಂಬಿಕಸ್ಥ ಮನುಷ್ಯ. ಅವರು ಸಾಧಾರಣ ಐದಡಿ ಎಂಟು ಇಂಚು ಎತ್ತರದ ಕೃಶಕಾಯದ ವ್ಯಕ್ತಿ. ನಾನು ಅವರನ್ನು ಮೊದಲಬಾರಿ ಕಂಡಾಗ ಸುಮಾರು ಇಪ್ಪತ್ತೈದು ವರ್ಷ ಪ್ರಾಯದ ಯುವಕ. ಅವರ ಸ್ವಭಾವ ಸ್ವಲ್ಪ ನಾಚಿಕೆಯ ಸ್ವಭಾವ. ಅದಕ್ಕೆ ಪೂರಕವಾಗಿ ಆತ ಮಿತಭಾಷಿಯೂ ಆಗಿದ್ದರು. ೧೯೭೧ನೇ ಇಸವಿಯಲ್ಲಿ ಮೊದಲ ಬಾರಿ ಆತ ಮಧ್ಯಾಹ್ನದ ಹೊತ್ತು ನಮ್ಮ ಮನೆಗೆ ಬಂದರು. ನಾನು ಅವರನ್ನು ಹಜಾರದಲ್ಲಿ ಕುಳ್ಳಿರಿಸಿ, ಬಾಯಾರಿಕೆ ಅಂದರೆ ಕಾಫಿಕೊಟ್ಟು ಅವರನ್ನು ಯಾವ ಊರು ಎಂದು ಕೇಳಿದೆ.

ನಮ್ಮದು ಶೃಂಗೇರಿ ಹತ್ತಿರದ ಒಂದು ಹಳ್ಳಿ. ನಾನು ಹೆಜ್ಜೇನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇನೆ. ನಾನು ಸರಕಾರಿ ಕಾಡುಗಳಲ್ಲಿ ಜೇನು ಸಂಗ್ರಹಿಸುವುದಿಲ್ಲ. ನಮಗೆ ಅರಣ್ಯ ಇಲಾಖೆಯ ಕಾನೂನುಗಳು ಸಹಕಾರಿಯಾಗಿಲ್ಲ. ತೊಡುವೆ ಜೇನು ಸಾಕಣೆಯಿಂದ ನನ್ನ ಜೀವನ ಸಾಗುವುದಿಲ್ಲ. ಆದ್ದರಿಂದ ನಾನು ಖಾಸಗಿ ತೋಟಗಳಿಂದ ಮತ್ತು ಹಿಡುವಳಿದಾರರ ಜಮೀನುಗಳಿಂದ ಜೇನು ಸಂಗ್ರಹಿಸುತ್ತೇನೆ. ತಾವು ಅನುಮತಿ ಇತ್ತರೆ, ತಮ್ಮ ತೋಟವನ್ನು ಸುತ್ತಿ ಎಲ್ಲೆಲ್ಲಿ ಹೆಜ್ಜೇನುಗಳು ಗೂಡುಕಟ್ಟಿವೆ ಎಂದು ನೋಡಿಕೊಂಡು ಬರುತ್ತೇನೆ. ತಮ್ಮ ತೋಟದ ಕಾಫಿಗಿಡಗಳು ಹೂಬಿಟ್ಟು ಹದಿನೈದು ದಿವಸಗಳ ಒಳಗೆ ಬಂದು, ಹೆಜ್ಜೇನಿರುವ ಮರಗಳನ್ನು ಹತ್ತಿ, ಜೇನುತಟ್ಟಿ ಕೊಯ್ದು ಜೇನು ಸಂಗ್ರಹಿಸಿ, ಅದರಲ್ಲಿ ತಮ್ಮ ಪಾಲೆಂದು ಅರ್ಧವಾಸಿ ತಮಗೆ ಕೊಟ್ಟು, ಉಳಿದ ಅರ್ಧವನ್ನು ತಾನು ಒಯ್ಯುತ್ತೇನೆ ಎಂದು ಹೇಳಿದರು.                    ನಮ್ಮಲ್ಲಿ ಮೂರು ತರಹೆಯ ಜೇನುನೊಣಗಳು ಕಂಡುಬರುತ್ತವೆ. ಅವನ್ನು ಹೆಜ್ಜೇನು, ತೊಡುವೆ ಜೇನು ಮತ್ತು ನುಸಿ ಜೇನು (ತುಳುಭಾಷೆಯಲ್ಲಿ ಇದನ್ನು ಮೊಜಂಟಿ ಜೇನು ಎನ್ನುವರು) ಎಂದು ಕರೆಯುತ್ತೇವೆ. ಹೆಜ್ಜೇನು ಅಂದರೆ, ದೊಡ್ಡಗಾತ್ರದ ಜೇನುನೊಣಗಳು. ಇವನ್ನು ಸಾಕಲು ಬರುವುದಿಲ್ಲ. ಇವು ತಾನಾಗಿ ದೊಡ್ಡಮರಗಳ ಮೇಲೆ ಜೇನುತಟ್ಟಿ ಕಟ್ಟುತ್ತವೆ. ಕೆಲವೊಮ್ಮೆ ಇವು ದೊಡ್ಡ ಬಂಡೆಗಳ ಸಂದಿನಲ್ಲೂ ತಟ್ಟಿಕಟ್ಟುತ್ತವೆ. ಇವು ನಗರ ಪರಿಸರದಲ್ಲೂ ದೊಡ್ಡ ಕಟ್ಟಡಗಳ ಸಜ್ಜಗಳ ಕೆಳಗೆ ಗೂಡು ಕಟ್ಟುವುದೂ ಉಂಟು. ಈ ಜೇನುನೊಣಗಳನ್ನು ಮಲೆಯಾಳಿ ಭಾಷೆಯಲ್ಲಿ ಮತ್ತು ತುಳುಭಾಷೆಯಲ್ಲಿ ಪೆರಿಯ ಎನ್ನುತ್ತಾರೆ. ಪೆರಿಯ ಅಂದರೆ ದೊಡ್ಡದು ಎಂದು ಅರ್ಥ. ಈ ನೊಣಗಳು ಬಹು ಬೇಗ ಸಿಟ್ಟಿಗೆದ್ದು ಕಚ್ಚುವ ಸ್ವಭಾವದವು. ಇವು ಹೆಚ್ಚಿನ ಸಂಖ್ಯೆಯಲ್ಲಿ ಮನುಷ್ಯ ಅಥವಾ ಪ್ರಾಣಿಗಳಿಗೆ ಕಚ್ಚಿದರೆ ಪ್ರಾಣಾಪಾಯ ಆಗುತ್ತೆ. ಮಲೆನಾಡಿನಲ್ಲಿ ನಾವು ಹೆಜ್ಜೇನಿನ ಹುಟ್ಟನ್ನು ಕಂಡರೆ ಹತ್ತಿರ ಹೋಗುವುದಿಲ್ಲ. ಈ ಹೆಜ್ಜೇನನ್ನು ಆಗ ನಾನು ನನ್ನ ಹೆಸರು ವೇಣು ಅಲ್ಲ! ಎನ್ನುತ್ತಾ ಮುನ್ನಡೆದೆ.

ಮೂರನೆಯಾಕೆ, ಅಣ್ಣಾ! ಹೂ ಕೊಡಲೇ? ಎಂದಳು. ನಾನು ಬಹು ಸಂತೋಷದಿಂದ ಮೂವತ್ತು ರೂಪಾಯಿಯ ಹೂ ಕೊಡಿ, ತಾಯೀ! ಎನ್ನುತ್ತಾ ಆಕೆ ಕೊಟ್ಟಷ್ಟು ಹೂವನ್ನು ಮರುಮಾತಿಲ್ಲದೆ ಕೊಂಡೆ. ಬೆಳಗಿನ ಹೊತ್ತು ಕನ್ನಡದ ನಾಡಿನಲ್ಲಿ ಕನ್ನಡದ ಸವಿನುಡಿ ಕೇಳಿ ನನ್ನ ಮನ ಪ್ರಫುಲ್ಲಿತವಾಗಿತ್ತು..!

ಅಲ್ಲೆಲ್ಲೂ ವ್ಯಾಪಾರಕ್ಕೆ ಇಟ್ಟ ಬಾಳೆಹಣ್ಣು ಕಾಣಲಿಲ್ಲ. ಅಲ್ಲಿಂದ ಹೊರಟ ನಾನು, ಹಾಗೆಯೇ ಹಲಸೂರು ಕೆರೆಯ ಏರಿಯ ಮಾರ್ಗದಲ್ಲಿ ಸಾಗುತ್ತಾ ಬಾಳೆಹಣ್ಣಿನ ಬೇಟೆಯನ್ನು ಮುಂದುವರೆಸಿದೆ. ಕಾಮರಾಜರಸ್ತೆಯ ಕಡೆಗೆ ಹೋಗುವ ತಿರುವಿನಲ್ಲಿ ಗಡ್ಡಧಾರಿ ಮುಸ್ಲಿಂಬಂಧು ಒಬ್ಬ ಬಾಳೆಹಣ್ಣು ಮಾರುತ್ತಿದ್ದ. ನನಗೆ ಇಪ್ಪತ್ತೈದು ಬಾಳೆಹಣ್ಣು ಬೇಕು. ಎಷ್ಟು ಕ್ರಯ? ಎಂದು ಆತನನ್ನು ಅಚ್ಚ ಕನ್ನಡದಲ್ಲೇ ಕೇಳಿದೆ.

ಆತ ನಗುತ್ತಾ, ಇಪ್ಪತ್ತರ ಮೇಲೆ ಐದು ರೂಪಾಯಿ ಕೊಡಿ, ಸಾರ್! ಅಂದ. ನಾನು ಇಪ್ಪತ್ತೈದು ರೂಪಾಯಿ ತೆತ್ತು ಬಾಳೆಹಣ್ಣುಗಳನ್ನು ಕೊಂಡೆ.

ನಾನು ಹೊರಟಾಗ, ಆತನು ನನಗೆ ಸಲಾಮ್! ಎಂದ. ನಾನು ನಮಸ್ಕಾರ ನಿಮಗೆ, ಭಾಯೀ! ಎನ್ನುತ್ತಾ ಕಾರಿನ ಕಡೆಗೆ ನಡೆದೆ. ಅಂತೂ, ಬಾಳೆಹಣ್ಣು ಮತ್ತು ಹೂವುಗಳ ಖರೀದಿ ಮುಗಿದಿತ್ತು!

ಮನೆಕಡೆಗೆ ಬರುತ್ತಾ ನಾನು ಅಚ್ಚ ಕನ್ನಡ ಮಾತುಗಳನ್ನು ಆಡಿ, ವ್ಯಾಪಾರಮಾಡುವ ಜನರು ನಮ್ಮ ದಂಡಿನ ವಿಸ್ತರಣೆಯಲ್ಲಿ ಎಷ್ಟು ಮಂದಿ ಇದ್ದಾರು?  ಎಂಬ ಬಗ್ಗೆ ಆಲೋಚಿಸಿದೆ. ಬೇರೆ ಯಾವುದಾದರೂ ದಿನ ಆಗಿದ್ದರೆ, ನಾನು ಇಷ್ಟು ಹಠಮಾಡಿ ಕನ್ನಡ ಮಾತನಾಡಿ ಬಾಳೆಹಣ್ಣು ಕೊಳ್ಳುತ್ತಿರಲಿಲ್ಲ. ನಮ್ಮ ವಿಸ್ತರಣೆಯ ಎಲ್ಲಾ ಕನ್ನಡಿಗರಂತೆ, ನಾನು ಕೂಡಾ,  ವ್ಯಾಪಾರಿಗಳು ಯಾವ ಭಾಷೆಯನ್ನು ಆಡಿದರೂ, ಆ ಭಾಷೆಯಲ್ಲಿ ವ್ಯವಹರಿಸಿ ವ್ಯಾಪಾರ ಮಾಡುತ್ತಿದ್ದೆ! ಇಂದು ‘ಕನ್ನಡ ಮಾತ್ರ ಆಡಿ ನಾನು ಎಂತಹಾ ಸನ್ನಿವೇಷ ನೋಡುತ್ತಿದ್ದೇನೆ! ಎಂಬ ವಿಚಿತ್ರ ಅರಿವು ನನಗೆ ರಾಜ್ಯೋತ್ಸವದ ದಿನ ಉಂಟಾಯಿತು.

ಪೂರ್ವ ಬೆಂಗಳೂರಿನ ಈ ಭಾಗದಲ್ಲಿ ವಾಸಿಸುವ ‘ಅಚ್ಚ ಕನ್ನಡಿಗರು ಈ ಬವಣೆಯನ್ನು ದಿನಾ ಅನುಭವಿಸುತ್ತಿರಬಹುದಲ್ಲವೇ? ಎಂಬ ಅರಿವು ಮೂಡಿ ಮನಸ್ಸಿಗೆ ತುಂಬಾ ಕಸಿವಿಸಿ ಉಂಟಾಯಿತು.

ಇನ್ನು ಬೆಂಗಳೂರಿನಲ್ಲಿ ಎಲ್ಲಿಗೇ ಹೋಗಲಿ, ನಾನು ಕನ್ನಡದಲ್ಲೇ ವ್ಯವಹಾರ ಮಾಡಿ, ಅದರ ಫಲವನ್ನು ಸಂತೋಷದಿಂದಲೇ ಅನುಭವಿಸುವೆ ಎಂಬ ತೀರ್ಮಾನವನ್ನು ಇಂದು ಮನದಲ್ಲೇ ಮಾಡಿದೆ.

***