ಎಚ್ಐವಿ ಎಂದರೇನು ?

ಹ್ಯುಮನ್ ಇಮ್ಯುನೋಡೆಫಿಷಿಯೆನ್ಸಿ ವೈರಸ್. ಇದು ಏಡ್ಸಗೆ ಕಾರಣವಾಗುವ ವೈರಸ್. ರಕ್ತ, ವೀರ್ಯ, ಯೋನಿದ್ರವ, ಗಾಯಗಳು ಮುಂತಾದ ಮಾರ್ಗಗಳ ಮೂಲಕ ಈ ವೈರಸ್ ಹರಡುತ್ತದೆ. ಸೋಂಕಿತ ಗರ್ಭಿಣಿಯಿಂದ ಹೊಟ್ಟೆಯಲ್ಲಿರುವ ಮಗುವಿಗೂ ಸೋಂಕು ತಗಲುತ್ತದೆ. ಎದೆ ಹಾಲಿನ ಮೂಲಕ ತಾಯಿಯಿಂದ ಮಗುವಿಗೆ ಹರಡುತ್ತದೆ.

ಏಡ್ಸ

ಏಡ್ಸ ಅಂದರೆ  ಅಕ್ವಾಯರ್ಡ್ ಇಮ್ಯುನೊಡೆಫಿಷಿಯನ್ಸಿ ಸಿಂಡ್ರೋಮ್. ಅಕ್ವಾಯರ್ಡ್ ಅಂದರೆ ಆರ್ಜಿತ – ಸಂಪಾದಿಸಿದ್ದು – ರೋಗಕ್ಕೆ ಕಾರಣವಾದ ವೈರ್ನ ಸಂಪರ್ಕದಿಂದ ಬರುವಂತಹುದು ಎಂದರ್ಥ. ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಗುಣ ಇರುತ್ತದೆ. ಸಿಂಡ್ರೋಮ್ ಎಂಬುದು ರೋಗದ ಗುಣಲಕ್ಷಣಗಳನ್ನು ಸೂಚಿಸುವ ಶಬ್ದ. ಎಚ್ಐವಿ ವೈರಸ್ ಸೋಂಕಿನಿಂದ ಏಡ್ಸ ಬರುತ್ತದೆ. ರಕ್ತದ ಮೂಲಕ, ಲೈಂಗಿಕ ಸಂಪರ್ಕದ ಮೂಲಕ ಈ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.

ದೇಹದಲ್ಲಿರುವ ರೋಗನಿರೋಧಕ ವ್ಯವಸ್ಥೆಗೆ ಸಿಡಿ4 ಜೀವಕೋಶಗಳು ಬಹುಮುಖ್ಯ. ಎಚ್ಐವಿ ಈ ಜೀವಕೋಶಗಳನ್ನು ನಾಶಪಡಿಸುತ್ತ ಹೋಗುತ್ತದೆ. ಈ ಜೀವಕೋಶಗಳು ಕಡಿಮೆ ಆದಂತೆಲ್ಲಾ  ಎಚ್ಐವಿ ಬೆಳೆಯುತ್ತ ಹೋಗುತ್ತದೆ.

ಎಚ್ಐವಿ ಮತ್ತು ಏಡ್ಸ ಎರಡೂ ಒಂದೇ ಹೌದಾ ?

ಅಲ್ಲ, ಎಚ್ಐವಿ ದೇಹದೊಳಕ್ಕೆ ಪ್ರವೇಶಿಸಿದ ಮೇಲೆ ಬಿಳಿರಕ್ತಕಣಗಳಲ್ಲಿ ಹೋಗಿ ಅಲ್ಲಿ ಸುಮ್ಮನೆ ಇರುತ್ತದೆ. 5-10 ವರ್ಷಗಳ ನಂತರ ವೈರಸ್ ಪ್ರೊಟಿನ್‌ಗಳನ್ನು ಉತ್ಪಾದಿಸುವಂತೆ ರಕ್ತಕಣಗಳನ್ನು ವೈರಸ್ ಪ್ರಚೋದಿಸುತ್ತದೆ. ಆಗ ಬಿಳಿಯ ರಕ್ತಕಣಗಳಲ್ಲಿ ವೈರಸ್‌ಗಳ ಸಂಖ್ಯೆ ಅಧಿಕವಾಗಿ ವೃದ್ಧಿಸಿ ಕಣಗಳು ಒಡೆದು ರಕ್ತದಲ್ಲಿ ವೈರಸ್‌ರಗಳು ಬಿಡುಗಡೆ ಆಗುತ್ತವೆ. ಹಾಗೆ ಬಿಡುಗಡೆಯಾದ ವೈರಾಣುಗಳು ಉಳಿದ ಬಿಳಿ ರಕ್ತಕಣಗಳನ್ನು ಹಿಡಿದುಕೊಳ್ಳುತ್ತವೆ. ಇದರಿಂದ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಸೋಂಕು ನಿಯಂತ್ರಿಸಲಾಗದ ಸ್ಥಿತಿ ತಲುಪುತ್ತದೆ. ಆಗ ಕ್ಷಯ, ಚರ್ಮದ ಕ್ಯಾನ್ಸರ್ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಆಗ ಎಚ್ಐವಿಯೇ ಏಡ್ಸ ಆಗಿದೆ ಎಂದು ಹೇಳಬಹುದು.

1996ಕ್ಕಿಂತ ಮುಂಚೆ ವಿಜ್ಞಾನಿಗಳು ಅಂದಾಜು ಮಾಡಿದ ಪ್ರಕಾರ ಎಚ್ಐವಿ ಸೋಂಕು ಹತ್ತು ವರ್ಷಗಳಲ್ಲಿ ಏಡ್ಸ ಆಗಿ ಬೆಳೆಯುತ್ತದೆ. ಆದರೆ ಇಷ್ಟೇ ವರ್ಷ ಎಂದು ಹೇಳಲು ಸಾಧ್ಯವಿಲ್ಲ. ವ್ಯಕ್ತಿಯ ಆರೋಗ್ಯ, ನಡವಳಿಕೆ ಮುಂತಾದ ಅನೇಕ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ.

1996ರಿಂದ ಎಆರ್‌ಟಿ (ಆಂಟಿ ರಿಟ್ರೊವೈರ್ ಚಿಕಿತ್ಸೆ) ಬಂದಿರುವುದರಿಂದ ಎಚ್ಐವಿ ಬೆಳೆದು ಏಡ್ಸ ಆಗುವ ಸಂಭವ ಕಡಿಮೆಯಾಗತೊಡಗಿದೆ. ಇತರ ಕಾಯಿಲೆ ಗಳಂತೆ ಇದರಲ್ಲಿಯೂ ಎಷ್ಟು ಬೇಗ ಸೋಂಕು ಪತ್ತೆಯಾಗುತ್ತದೋ ಅಷ್ಟು ಒಳ್ಳೆಯದು.

ದೇಹದಿಂದ ಹೊರಗೆ ಅಂದರೆ ಹೊರಗಿನ ವಾತಾವರಣಕ್ಕೆ ಬಂದಾಗ ಎಚ್ಐವಿಯ ಪಾತ್ರ ಎಂತಹುದು?

ದೇಹದ ಹೊರಗೆ ಎಚ್ಐವಿ ಬದುಕುವುದಿಲ್ಲ. ಹಾಗಾಗಿ ಪರಿಸರದ ಮೂಲಕ ಅದು ಹರಡುವ ಸಾಧ್ಯತೆಯಿಲ್ಲ. ಹೊರಗಿನ ಉಷ್ಣತೆಗೆ, ವಾತಾವರಣಕ್ಕೆ ಸ್ಪರ್ಶಿಸಿದ ತಕ್ಷಣ ವೈರ್ ಬದುಕುವುದಿಲ್ಲ, ಸಾಯುತ್ತದೆ.

ಹರಡುವ ಮಾರ್ಗಗಳು

ಎಚ್ಐವಿ ಸೋಂಕಿತ ವ್ಯಕ್ತಿಯ ರಕ್ತ, ವೀರ್ಯ, ಯೋನಿದ್ರವ, ಎದೆಹಾಲು, ಸೋಂಕಿಲ್ಲದ ವ್ಯಕ್ತಿಯ ದೇಹವನ್ನು ಪ್ರವೇಶಿಸಿದರೆ ಸೋಂಕು ತಗಲುತ್ತದೆ. ಗಾಯದಿಂದ, ಚುಚ್ಚುಮದ್ದಿನ ಮೂಲಕವೂ ಎಚ್ಐವಿ ದೇಹವನ್ನು ಪ್ರವೇಶಿಸಬಲ್ಲದು. ಎಚ್ಐವಿ ಹರಡಲು ಸಾಮಾನ್ಯ ಮಾರ್ಗಗಳು –

* ಎಚ್ಐವಿ ವ್ಯಕ್ತಿಯೊಂದಿಗಿನ ಲೈಂಗಿಕ ಸಂಪರ್ಕ.

* ಎಚ್ಐವಿ ಸೋಂಕಿತನಿಗೆ ಬಳಸಿದ ಚುಚ್ಚುಮದ್ದಿನ ಸೂಜಿಯನ್ನು ತಕ್ಷಣ ಇತರರಿಗೆ ಬಳಸುವುದು, ಇದು ಹೆಚ್ಚಾಗಿ ಚುಚ್ಚುಮದ್ದಿನ ಮೂಲಕ ಮಾದಕವಸ್ತು ಸೇವಿಸುವವರಲ್ಲಿ ಕಂಡುಬರುತ್ತದೆ.

* ಎಚ್ಐವಿ ಸೋಂಕಿತ ಮಹಿಳೆಯಿಂದ ಹೆರಿಗೆಯ ಸಮಯದಲ್ಲಿ ಇಲ್ಲವೇ ಎದೆಹಾಲುಣಿಸುವ ಸಂದರ್ಭದಲ್ಲಿ ಹರಡುತ್ತದೆ.

ಲೈಂಗಿಕ ರೋಗಗಳು (ಎಸ್‌ಟಿಡಿ) ಮತ್ತು ಎಚ್ಐವಿ

ಲೈಂಗಿಕ ರೋಗಗಳಿಗೂ ಮತ್ತು ಎಚ್ಐವಿಗೂ ಬಲು ಹತ್ತಿರದ ನಂಟು. ಲೈಂಗಿಕ ರೋಗಗಳು ಇರುವವರಿಗೆ ಎಚ್ಐವಿ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಲೈಂಗಿಕ ರೋಗಗಳಿಂದ ಜನನಾಂಗದಲ್ಲಿ ಉಂಟಾಗುವ ಗಾಯಗಳಿಂದಾಗಿ ಲೈಂಗಿಕ ಕ್ರಿಯೆಯ ಸಮಯದಲ್ಲಿ ಎಚ್ಐವಿ ದೇಹದೊಳಗೆ ಪ್ರವೇಶ ಮಾಡುವುದು ಸುಲಭವಾಗುತ್ತದೆ. ಗಾಯಗಳಿಲ್ಲದಿದ್ದರೂ ಕೆಲವು ಬಾರಿ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಅಲ್ಲದೆ ಎಚ್ಐವಿ ಇರುವ ವ್ಯಕ್ತಿಗೆ ಲೈಂಗಿಕ ರೋಗವೂ ಇದ್ದಲ್ಲಿ ಆತ ಲೈಂಗಿಕ ಸಂಪರ್ಕದ ಮೂಲಕ ಎಚ್ಐವಿ ಹರಡುವ ಸಾಧ್ಯತೆ ಐದು ಪಟ್ಟು ಹೆಚ್ಚು.

ಮುತ್ತಿಡುವುದರಿಂದ ಸೋಂಕು ಹರಡುತ್ತದೆಯೇ ?

ಕೆನ್ನೆ ಮೇಲೆ ಮುತ್ತಿಡುವುದರಿಂದ ಎಚ್ಐವಿ ಸೋಂಕು ಖಂಡಿತ ಹರಡಲಾರದು. ಸುದೀರ್ಘ ಮುತ್ತು (ತೆರೆದ ಬಾಯಿಯ ಮುತ್ತು) ನೀಡುವುದರಿಂದ, ಬಾಯಿ ಮತ್ತು ತುಟಿಗಳಲ್ಲಿ ಗಾಯವಾಗಿ ಆ ಮೂಲಕ ಎಚ್ಐವಿ ಹರಡುವ ಸಾಧ್ಯತೆ ಇರುತ್ತದೆ.

ರಕ್ತ ಪಡೆಯುವುದರಿಂದ ಸೋಂಕು ತಗುಲಬಹುದೇ ?

ನೀವು ಪಡೆಯುವ ರಕ್ತದಲ್ಲಿ ಎಚ್ಐವಿ ಇದ್ದರೆ ಮಾತ್ರ ಸೋಂಕು ತಗಲುತ್ತದೆ. ಈಗ ಬ್ಲಡ್ ಬ್ಯಾಂಕರಕ್ತದಲ್ಲಿ ವೈರಸ್ ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಯೇ ರಕ್ತ ಸಂಗ್ರಹಿಸಿರುತ್ತಾರೆ. ಆದರೂ ಯಾವುದೇ ವ್ಯಕ್ತಿ ರಕ್ತ ಪಡೆಯವ ಸಂದರ್ಭ ಬಂದಾಗ ರಕ್ತದ ಪರೀಕ್ಷೆ ಆಗಿದೆಯೋ ಇಲ್ಲವೋ ತಿಳಿಯಬೇಕು.

ಚುಚ್ಚುಮದ್ದು (ಇಂಜಕ್ಷ್) ಮತ್ತು ವೈರಸ್ ಹರಡುವಿಕೆ

ಎಚ್ಐವಿ ಸೋಂಕಿತ ರಕ್ತ ಸೂಜಿಗೆ ಅಂಟಿಕೊಂಡಿದ್ದರೆ ವೈರ್ ಹರಡುವುದು ಸಾಧ್ಯವಿದೆ. ಆದ್ದರಿಂದ ಯಾವುದೇ ಕಾರಣಕ್ಕೆ ಚುಚ್ಚುಮದ್ದು ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಉಪಯೋಗಿಸಿ ಬಿಸಾಡುವ ಸಿರಿಂಜು, ಸೂಜಿ ಬಳಸಿ ಇಲ್ಲವೇ ಒಮ್ಮೆ  ಬಳಸಿದ ಸೂಜಿ ಮತ್ತು ಸಿರಿಂಜನ್ನು ಕನಿಷ್ಠ 20 ನಿಮಿಷ ನೀರಿನಲ್ಲಿ ಕುದಿಸಿರಬೇಕು.

ಹಚ್ಚೆಯಿಂದ ಹರಡುವುದೇ ? (Tatoo)

ಸೋಂಕಿತ ವ್ಯಕ್ತಿಗೆ ಉಪಯೋಗಿಸಿದ ಸೂಜಿಯಲ್ಲಿ ರಕ್ತದ ಅಂಶ ಇರುವುದರಿಂದ ಅದನ್ನು ಸರಿಯಾಗಿ ಶುದ್ಧೀಕರಿಸದೇ ಇನ್ನೊಬ್ಬನಿಗೆ ಬಳಸಿದರೆ ವೈರ್ ಹರಡುವ ಅಪಾಯ ಇದ್ದೇ ಇರುತ್ತದೆ.

ಯಾವುದರಿಂದ ಹರಡಲಾರದು ?

ಕೈ ಕುಲುಕುವುದರಿಂದ

ತಬ್ಬಿಕೊಳ್ಳುವುದರಿಂದ

ಸೀನುವುದರಿಂದ, ಕೆಮ್ಮುವುದರಿಂದ

ಶೌಚಾಲಯ ಬಳಸುವುದರಿಂದ

ಸೋಂಕಿತರು ಕುಡಿದ ಲೋಟ ಬಳಸುವುದರಿಂದ

ಒಟ್ಟಿಗೇ ಊಟ ಮಾಡುವುದರಿಂದ

ಕೆಲಸದ ಸ್ಥಳ, ಶಾಲೆ ಮುಂತಾದ ಕಡೆ ಒಬ್ಬರಿಗೊಬ್ಬರು ಬೆರೆತು ಕೆಲಸ ಮಾಡುವುದರಿಂದ

ಸೋಂಕಿತರು ಮುಟ್ಟಿದ ಸಾಮಗ್ರಿಗಳನ್ನು ಮುಟ್ಟುವುದರಿಂದ

ಅವರು ಧರಿಸಿದ ಬಟ್ಟೆ ಧರಿಸುವುದರಿಂದ

ಅಕ್ಕಪಕ್ಕ ಕುಳಿತು ಮಾತನಾಡುವುದರಿಂದ

ಸೊಳ್ಳೆ ಕಚ್ಚುವುದರಿಂದ ಹರಡುವುದಿಲ್ಲ.

ಎಚ್ಐವಿ / ಏಡ್ಸಗೆ ಲಸಿಕೆ

ಸದ್ಯಕ್ಕೆ ಯಾವುದೂ ಲಸಿಕೆ ಇಲ್ಲ. ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಲಸಿಕೆಗಳ ಸಂಶೋಧನೆ ನಡೆಯುತ್ತಿದೆ. ಕೆಲವು ವರ್ಷಗಳಲ್ಲಿ ಲಭ್ಯವಾಗಬಹುದು. ಆದರೆ ಸದ್ಯದಲ್ಲಿ ಯಾವುದೇ ಲಸಿಕೆ ಇಲ್ಲ.

ಎಚ್ಐವಿ / ಏಡ್ಸಗೆ ಚಿಕಿತ್ಸೆ

ಏಡ್ಸಗೆ ಯಾವುದೇ ಸಂಪೂರ್ಣ ಚಿಕಿತ್ಸೆ ಇಲ್ಲ. ಎಚ್ಐವಿ/ಏಡ್ಸ ಬಾರದಂತೆ ತಡೆಗಟ್ಟುವುದೊಂದೇ ಮಾರ್ಗ. ಎಚ್ಐವಿ ಸೋಂಕು ತಗುಲಿದ ನಂತರ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಿದಲ್ಲಿ ಅಂದರೆ ಉತ್ತಮ ಪೌಷ್ಠಿಕಾಂಶವುಳ್ಳ ಆಹಾರ, ವೈಯಕ್ತಿಕ ಸ್ವಚ್ಛತೆ, ಅವಕಾಶವಾದಿ ಇತರ ಸೋಂಕುರೋಗಗಳು ಬಾರದಂತೆ ನೋಡಿಕೊಳ್ಳುವ ಉತ್ತಮ ಜೀವನ ಶೈಲಿ ರೂಢಿಸಿಕೊಂಡಲ್ಲಿ ಇತರ ಸಾಮಾನ್ಯರಂತೆ ಉತ್ತಮ ಜೀವನ ನಡೆಸಬಹುದು. ಆದರೆ ಆಗಾಗ ರಕ್ತಪರೀಕ್ಷೆ ಮಾಡಿಸಿಕೊಳ್ಳುತ್ತ ಸಿಡಿ4 ಸಂಖ್ಯೆ ಗಮನಿಸಿಕೊಳ್ಳುತ್ತಿರಬೇಕು. ಸಿಡಿ4 ಸಂಖ್ಯೆ 200ಕ್ಕಿಂತ ಕಡಿಮೆಯಾದಲ್ಲಿ ತಕ್ಷಣ ಎಅರ್‌ಟಿ ಬೇಕು. ವೈದ್ಯರ ಸಲಹೆ ಮೇರೆಗೆ ಎಆರ್‌ಟಿ ಆರಂಭಿಸಿ ಮುಂದುವರೆಸಬೇಕು.

ಏನಿದು ಎಆರ್‌ಟಿ ?

ಆಂಟಿರಿಟ್ರೊವೈರ್ ಚಿಕಿತ್ಸೆಗೆ ಎಆರ್‌ಟಿ ಎಂದು ಹೆಸರು. ದೇಹದಲ್ಲಿ ರೋಗನಿರೋಧಕ ಶಕ್ತಿ ಕುಸಿದು ಸಿಡಿ4 ಜೀವಕೋಶಗಳ ಸಂಖ್ಯೆ 200ಕ್ಕಿಂತ ಕಡಿಮೆಯಾದಾಗ ಮತ್ತು ದೇಹದಲ್ಲಿ ಅವಕಾಶವಾದಿ ಸೋಂಕುಗಳು ಹೆಚ್ಚಾದಾಗ ಎಆರ್‌ಟಿ ಚಿಕಿತ್ಸೆ ನೀಡಲಾಗುತ್ತದೆ. ಎಆರ್‌ಟಿ ನಿಜಕ್ಕೂ ಎಚ್ಐವಿ ಸೋಂಕಿತರಿಗೆ ಜೀವದಾನ ನೀಡುವ ಔಷಧಿ ಎಂದರೆ ತಪ್ಪಾಗಲಾರದು. ಸೋಂಕಿತ ವ್ಯಕ್ತಿಯ ಬದುಕು ಆರೋಗ್ಯಕರಗೊಳಿಸುವುದಕ್ಕೆ ನೀಡುತ್ತಾರೆ. ಎಆರ್‌ಟಿ ಚಿಕಿತ್ಸೆಯೂ ಎಚ್ಐವಿ / ಏಡ್ಸ ಅನ್ನು ಸಂಪೂರ್ಣವಾಗಿ ವಾಸಿ ಮಾಡುವುದಿಲ್ಲ. ಇದು ಕೇವಲ ದೇಹದಲ್ಲಿ ಎಚ್ಐವಿ ವೈರ್ ಅಧಿಕಗೊಳ್ಳುವುದನ್ನು ತಡೆಯುತ್ತದೆ ಮತ್ತು ರೋಗನಿರೋಧಕ ಶಕ್ತಿಗೆ ಕಾರಣವಾದ ಸಿಡಿ4 ಜೀವಕೋಶಗಳ ಸಂಖ್ಯೆ ಹೆಚ್ಚಿಸುತ್ತದೆ.

ಒಂದು ಬಾರಿ ಎಆರ್‌ಟಿ ಸೇವನೆ ಆರಂಭಿಸಿದರೆ ವ್ಯಕ್ತಿ ತನ್ನ ಜೀವನ ಪರ್ಯಂತ ನಿಯಮಿತವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಅಧಿಕ ರಕ್ತದ ಒತ್ತಡ (ಬಿ.ಪಿ.) ಮತ್ತು ಸಕ್ಕರೆ ಕಾಯಿಲೆಗೆ ಚಿಕಿತ್ಸೆ ತೆಗೆದುಕೊಳ್ಳುವಂತೆ ತೆಗೆದುಕೊಳ್ಳಬೇಕಾಗಿರುತ್ತದೆ. ಪ್ರತಿದಿನ ಈ ಔಷಧಿಯನ್ನು ಜೀವನದುದ್ದಕ್ಕೂ ಸೇವನೆ ಮಾಡಬೇಕು. ಎಝ್ಟಿ, ಡಿಡಿಎನ್, ಡಿಡಿಸಿ ಮುಂತಾದ ಎಆರ್‌ಟಿ ಔಷಧಗಳು ದುಬಾರಿ ಬೆಲೆಯವು. ಆದರೆ ನ್ಯಾಕೋ ಹಾಗೂ ಕರ್ನಾಟಕ ರಾಜ್ಯ ಏಡ್ಸ ಪ್ರಿವೆನ್‌ಷೆನ್ ಸೊಸೈಟಿ ಮುಖಾಂತರ ಉಚಿತವಾಗಿ ಎಆರ್‌ಟಿ ನೀಡಲಾಗುತ್ತದೆ.

ಎಆರ್‌ಟಿಯಿಂದ ಕೆಲವು ಬಾರಿ ಅಡ್ಡಪರಿಣಾಮಗಳು ಉಂಟಾಗುತ್ತವೆಯಾದರೂ ಅವುಗಳ ಬಗ್ಗೆ ಅರಿವಿದ್ದಲ್ಲಿ ಉತ್ತಮ. ವಾಕರಿಕೆ, ವಾಂತಿ, ಹಸಿವೆಯಾಗದಿರುವುದು,

ಭೇದಿ, ತಲೆನೋವು, ರಕ್ತಹೀನತೆ, ಚರ್ಮದ ಮೇಲೆ ಗುಳ್ಳೆಗಳೇಳುವುದು ಮುಂತಾದವು ಆಗಬಹುದು. ಆ ಸಮಯದಲ್ಲಿ ವೈದ್ಯರ ಸಲಹೆ ಅತ್ಯಗತ್ಯ. ಎಆರ್‌ಟಿ ಪಡೆಯುವವರು ತಕ್ಷಣ ನಿಲ್ಲಿಸಬಾರದು. ತಕ್ಷಣ ಚಿಕಿತ್ಸೆ ನಿಲ್ಲಿಸಿದಲ್ಲಿ ಎಚ್ಐವಿ ಸಂಖ್ಯೆ ದೇಹದಲ್ಲಿ ಹೆಚ್ಚಾಗುತ್ತದೆ ಮತ್ತು ಸಿಡಿ4 ಜೀವಕೋಶಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತದೆ. ಅಲ್ಲದೇ ದೇಹದಲ್ಲಿ ವೈರಸ್ ಈ ಔಷಧಿಗೆ ವಿರುದ್ಧ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತದೆ.

ಎಆರ್‌ಟಿ ಪ್ರಯೋಜನಗಳು

ಎಚ್ಐವಿ ಸೋಂಕಿತರ ಜೀವನಾವಧಿ ಹೆಚ್ಚಿಸುತ್ತದೆ. ಸೋಂಕಿತರು ತಮ್ಮ ಮುಂದಿನ ಜೀವನದ ಕುರಿತು ಯೋಚಿಸಲು ಸಾಧ್ಯವಾಗುತ್ತದೆ. ಅವಕಾಶವಾದಿ ಸೋಂಕುಗಳನ್ನು ಕಡಿಮೆ ಮಾಡುತ್ತದೆ. ಆತ್ಮಸ್ಥೈರ್ಯ ಹೆಚ್ಚಿಸುತ್ತದೆ.ಇತರರ ಮೇಲೆ ಅವಲಂಬನೆ ಕಡಿಮೆ ಮಾಡುತ್ತದೆ.

ಎಆರ್‌ಟಿ ಎಲ್ಲಿ ಸಿಗುತ್ತದೆ ?

ಕರ್ನಾಟಕ ಏಡ್ಸ ಪ್ರಿವೆನ್‌ಷನ್ ಸೊಸೈಟಿಯ ಸಹಾಯದೊಂದಿಗೆ ಎಆರ್‌ಟಿ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

1) ಬೌರಿಂಗ್ ಮತ್ತು ಲೇಡಿ ಕರ್ಜ್ ಆಸ್ಪತ್ರೆ, ಶಿವಾಜಿನಗರ, ಬೆಂಗಳೂರು.

2) ಕೆ.ಆರ್. ಸಾರ್ವಜನಿಕ ಆಸ್ಪತ್ರೆ, ಮೈಸೂರು.

3) ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ), ಹುಬ್ಬಳ್ಳಿ.

4) ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ವಿಮ್ಸ), ಬಳ್ಳಾರಿ.

5) ಎಲ್ಲಾ ಜಿಲ್ಲಾ ಆಸ್ಪತ್ರೆಗಳು.

ಮಕ್ಕಳು ಮತ್ತು ಎಆರ್‌ಟಿ

15 ವರ್ಷ ಮತ್ತು ಕೆಳಗಿನ ವಯಸ್ಸಿನ ಮಕ್ಕಳಲ್ಲಿ ಎಚ್ಐವಿ / ಏಡ್ಸ ಸೋಂಕು ಕಂಡುಬಂದಲ್ಲಿ ಅವರಲ್ಲಿ ಕೆಲವರಿಗೆ ಎಆರ್‌ಟಿ ಚಿಕಿತ್ಸೆ ಬೇಕಾಗುತ್ತದೆ. ಮಕ್ಕಳಿಗೆ ಸರಿಹೊಂದುವ ಪ್ರಮಾಣದ ಎಆರ್‌ಟಿ ಔಷಧಿಗಳನ್ನು ಡಿಸೆಂಬ್ 1, 2006ರಿಂದ ರಾಜ್ಯಾದ್ಯಂತ ಉಚಿತವಾಗಿ ನೀಡಲಾಗುತ್ತಿದೆ.

ಅಂಕಿ ಅಂಶಗಳು

ಕರ್ನಾಟಕದಲ್ಲಿ 1987ರಿಂದ ಜುಲೈ 2007ರ ವರೆಗೆ ದಾಖಲಾದ ಎಚ್ಐವಿ / ಏಡ್ಸ ಸೋಂಕಿತರ ಅಂಕಿ ಸೂಚಿ ಹೀಗಿದೆ.

1987 ರಿಂದ ಜುಲೈ 2007

ಎಚ್ಐವಿ ಪಾಸಿಟಿವ್     ಏಡ್ಸ ಸಂಖ್ಯೆ      ಏಡ್ಸನಿಂದ ಉಂಟಾದ ಸಾವಿನ ಸಂಖ್ಯೆ

ಒಟ್ಟು            88,837                12,145                    947

ಕೆಂಪು ರಿಬ್ಬ್ ಚಿಹ್ನೆ

ಜಾಗತಿಕ ಮಟ್ಟದಲ್ಲಿ ಎಚ್ಐವಿ/ಏಡ್ಸ ಜಾಗೃತಿಗೆ ರೂಪಿಸಿರುವ ಚಿಹ್ನೆ. ಎಚ್ಐವಿ/ಏಡ್ಸ ಸೋಂಕಿತರೊಂದಿಗೆ ನಾವೂ ಇದ್ದೇವೆ ಎಂಬುದನ್ನು ತಿಳಿಸಲು ಮತ್ತು ಅದರ ಹರಡುವಿಕೆ ವಿರುದ್ಧ ಹೋರಾಡಲು ಬದ್ಧತೆಯನ್ನು ತೋರಿಸಲು ಈ ಚಿಹ್ನೆ ಬಳಸಲಾಗುತ್ತದೆ. ಇದರ ಕಲ್ಪನೆ ಮೂಡಿದ್ದು 1991ರಲ್ಲಿ. ಏಡ್ಸ ಚಿಹ್ನೆಯಲ್ಲಿರುವ ಕೆಂಪು ಬಣ್ಣ ರಕ್ತದ ಸಂಕೇತ. ಕೋಪ ಮಾತ್ರವಲ್ಲ, ವ್ಯಾಲಂಟೈನ್ಸ ಡೇ ಸಮಯದಲ್ಲಿ ಬಳಸುವಂತೆ ಪ್ರೀತಿಗೂ ಇದು ಸಂಕೇತ ಎಂದು ವಿಷ್ವ ಏಡ್ಸನ ಫ್ರಾಂಕಮೂರ್ ಅಭಿಪ್ರಾಯಪಡುತ್ತಾರೆ. ಸೋಂಕಿನಿಂದ ಸತ್ತವರು ಮತ್ತು ಸಾಯುತ್ತಿರುವ ಸಹೋದ್ಯೋಗಿಗಳು ಹಾಗೂ ಸ್ನೇಹಿತರ ಗೌರವಾರ್ಥ ಮತ್ತು ಅವರ ನೆನಪಿಗಾಗಿ ಈ ಕೆಂಪು ರಿಬ್ಬ್ ಚಿಹ್ನೆ ರೂಪುಗೊಂಡಿತು.

ಐಸಿಟಿಸಿ (ICTC) – ಸಮಗ್ರ ಆಪ್ತ ಸಮಾಲೋಚನಾ ಕೇಂದ್ರ ಮತ್ತು ಪರೀಕ್ಷಾ ಕೇಂದ್ರ

ಎಚ್ಐವಿ/ಏಡ್ಸ ಕುರಿತು ಮಾಹಿತಿ, ಸಲಹೆ, ಮಾರ್ಗದರ್ಶನವನ್ನು ನೀಡುವ ಮತ್ತು ಎಚ್ಐವಿಗಾಗಿ ರಕ್ತಪರೀಕ್ಷೆ ನಡೆಸುವ ಕೇಂದ್ರ. ಇಲ್ಲಿ ಗೌಪ್ಯತೆ ಕಾಪಾಡಲಾಗುತ್ತದೆ. ಮಹಿಳೆಯರಿಗೆ ಮಹಿಳಾ ಸಮಾಲೋಚಕರು, ಪುರುಷರಿಗೆ ಪುರುಷ ಸಮಾಲೋಚಕರು ಇರುತ್ತಾರೆ. ಎಚ್ಐವಿ ಸೋಂಕಿತರಿಗೆ ಯಾವುದಾದರೂ ಸಮಯಸಾಧಕ ಸೋಂಕುಗಳ ಲಕ್ಷಣಗಳಿದ್ದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಕರ್ನಾಟಕದ ಎಲ್ಲಾ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ಆಸ್ಪತ್ರೆ, ಎಲ್ಲ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಮಾಹಿತಿ, ಮಾರ್ಗದರ್ಶನ, ಆಪ್ತಸಮಾಲೋಚನೆ ಎಲ್ಲವೂ ಉಚಿತ. ಗರ್ಭಿಣಿಯರಿಗೆ ಉಚಿತ ಪರೀಕ್ಷೆ ಮಾಡಲಾಗುತ್ತದೆ. ರಕ್ತಪರೀಕ್ಷೆ ಮಾಡಲಾಗುತ್ತದೆ. ಅವರ ಒಪ್ಪಿಗೆ ಪಡೆದೇ ರಕ್ತಪರೀಕ್ಷೆ ಮಾಡಲಾಗುತ್ತದೆ.

ಕಾಂಡೂಮ್ ಬಳಕೆ

ಎಚ್ಐವಿ/ಏಡ್ಸ ತಡೆಗಟ್ಟುವಲ್ಲಿ ಕಾಂಡೂಮ್ ಪ್ರಮುಖ ಪಾತ್ರವಹಿಸುತ್ತದೆ. ಕಾಂಡೂಮನ್ನು ನಾವು ಕೇವಲ ಸಂತಾನ ನಿರೋಧಕ ಸಾಧನವಾಗಿ ಮಾತ್ರ ಭಾವಿಸುತ್ತೇವೆ. ಆದರೆ ಕಾಂಡೂಮ್ ಬಳಕೆ ಕಡ್ಡಾಯ ಮಾಡುವುದರಿಂದ ಮತ್ತು ಪ್ರತಿಯೊಬ್ಬ ಮಹಿಳೆಯೂ ತನ್ನ ಸಂಗಾತಿಗೆ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಕಾಂಡೂಮ್ ಬಳಸುವಂತೆ ಒತ್ತಾಯ ಮಾಡಿದಲ್ಲಿ ಎಚ್ಐವಿ/ಏಡ್ಸನ್ನು ತಡೆಗಟ್ಟಲು ಖಂಡಿತ ಸಾಧ್ಯವಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕಾಂಡೂಮ್ ದೊರೆಯುತ್ತದೆ.

ರಸಾಯನ ಚಿಕಿತ್ಸೆ :

ಎಚ್.ಐ.ವಿ. ಸೋಂಕಿತರು ತಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ರಸಾಯನ ಚಿಕಿತ್ಸೆ ತೆಗೆದುಕೊಳ್ಳಬೇಕು. ಅಶ್ವಗಂಧ, ಹಿಪ್ಪಲಿ, ಆಮಲಕಿ, ಶತಾವರಿ ಮುಂತಾದವುಗಳು ರಸಾಯನವಾಗಿ ಕೆಲಸ ಮಾಡುತ್ತದೆ. ಇವುಗಳಲ್ಲಿ ಯಾವುದಾದರೊಂದರ ಪುಡಿಯನ್ನೋ ಇಲ್ಲವೇ ಲೇಹ್ಯವನ್ನೋ ಸೇವಿಸಬೇಕು. ದಿನಕ್ಕೆರಡು ಬಾರಿ ಒಂದು ಚಮಚೆಯಂತೆ ಹಾಲಿನೊಂದಿಗೆ ಇಲ್ಲವೇ ಜೇನುತುಪ್ಪ ದೊಂದಿಗೆ ಸೇವಿಸಿದಲ್ಲಿ ಉತ್ತಮ. ಇದರೊಂದಿಗೆ ಮನೆಯೊಳಗಿನ ಮತ್ತು ಹೊರಗಿನ ಪರಿಸರದ ಸ್ವಚ್ಛತೆ, ದೇಹದ ಸ್ವಚ್ಛತೆ, ಉತ್ತಮ ಪೋಷಕಾಂಶವುಳ್ಳ ಆಹಾರ ಸೇವನೆ, ನಿಯಮಿತ ನಿದ್ರೆ, ಮಾನಸಿಕ ನೆಮ್ಮದಿಗೆ ಧ್ಯಾನ, ಯೋಗ ಮಾಡಿದಲ್ಲಿ ದೀರ್ಘಾವಧಿಯ ಆರೋಗ್ಯಕರ ಬದುಕು ಸಾಧ್ಯ.