(ಮುಖ್ಯಾಂಶಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ)

 

ಪ್ರಸ್ತಾವನೆ

1. ಜೈವಿಕ ವೈವಿಧ್ಯ ಸಂರಕ್ಷಣೆಯು ಜಗತ್ತಿನ ಎಲ್ಲ ಮಾನವರಿಗೂ ಸಂಬಂಧಿಸಿದ ವಿಷಯ.

2. ಜೈವಿಕ ಸಂಪನ್ಮೂಲಗಳ ಮೇಲೆ ಆಯಾ ರಾಷ್ಟ್ರಗಳಿಗೆ ಸಾರ್ವಭೌಮ ಹಕ್ಕಿದೆ.

3. ಎಲ್ಲರಿಗೂ ಜೈವಿಕ ವೈವಿಧ್ಯದ ಜ್ಞಾನ ಹಾಗೂ ಮಾಹಿತಿಯ ಕೊರತೆಯಿದೆ. ಆದ್ದರಿಂದ ಜೈವಿಕ ವೈವಿಧ್ಯದ ಬಗ್ಗೆ ವೈಜ್ಞಾನಿಕ, ತಾಂತ್ರಿಕ ಹಾಗೂ ಸಾಂಸ್ಥಿಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವ ತುರ್ತು ಅಗತ್ಯವಿದೆ. ಹಾಗಾದಾಗ ಜೈವಿಕ ವೈವಿಧ್ಯದ ಸಂರಕ್ಷಣೆಯ ಬಗ್ಗೆ ಯುಕ್ತವಾದ ಯೋಜನೆ ಹಾಗೂ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

4. ವಿವಿಧ ಪರಿಸರ ವ್ಯವಸ್ಥೆಗಳು, ಜೀವಾವಾಸಗಳು ಹಾಗೂ ಪ್ರಭೇದಗಳ ಗಮನಾರ್ಹ ಸಂಖ್ಯೆಯಷ್ಟು ಜೀವಿಗಳನ್ನು ಅವುಗಳ ಸ್ವಾಭಾವಿಕ ನೆಲೆಯಲ್ಲಿಯೇ ಸಂರಕ್ಷಿಸುವುದು ಜೈವಿಕ ವೈವಿಧ್ಯ ಸಂರಕ್ಷಣೆಯ ಮಾರ್ಗದಲ್ಲಿ ಮೊದಲ ಹೆಜ್ಜೆಯಾಗುತ್ತದೆ.

5. ಅನೇಕ ಸ್ಥಳೀಯ ಹಾಗೂ ಬುಡಕಟ್ಟು ಜನರು ಜೈವಿಕ ಸಂಪನ್ಮೂಲಗಳ ಮೇಲೆ ನಿಕಟ ಹಾಗೂ ಪಾರಂಪರಿಕ ಅವಲಂಬನೆ ಹೊಂದಿರುವುದನ್ನು ಗಮನಿಸಲಾಗಿದೆ. ಆ ಜನರ ಪಾರಂಪರಿಕ ಜ್ಞಾನ, ತಿಳುವಳಿಕೆ ಹಾಗೂ ಅನುಭವದಿಂದ ಜೈವಿಕ ವೈವಿಧ್ಯದ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಗೆ ಅನುಕೂಲವಾದರೆ, ತನ್ಮೂಲಕ ಬರುವ ಲಾಭವನ್ನು ಅವರಿಗೆ ನ್ಯಾಯಯುತವಾಗಿ ನೀಡಬೇಕು.

6. ಜೈವಿಕ ವೈವಿಧ್ಯದ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಯಲ್ಲಿ ಮಹಿಳೆಯರು ನಿರ್ವಹಿಸುವ ಪಾತ್ರ ಪ್ರಮುಖವಾದುದು. ಆದ್ದರಿಂದ ಜೈವಿಕ ವೈವಿಧ್ಯದ ಸಂರಕ್ಷಣೆಯ ಎಲ್ಲ ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನದ ಎಲ್ಲ ಹಂತಗಳಲ್ಲಿ ಮಹಿಳೆಯರನ್ನು ಒಳಗೊಳ್ಳಬೇಕು.

7. ಅಧಿಕ ಆರ್ಥಿಕ ಸಹಾಯ ಹಾಗೂ ಯುಕ್ತ ತಂತ್ರಜ್ಞಾನದ ಅಳವಡಿಕೆಯಿಂದ ಜೈವಿಕ ವೈವಿಧ್ಯದ ನಾಶವನ್ನು ಗಮನಾರ್ಹವಾಗಿ ತಡೆಯಲು ಸಾಧ್ಯವಿದೆ.

8. ಜೈವಿಕ ವೈವಿಧ್ಯದ ಸಂರಕ್ಷಣೆಗಾಗಿ ಅಭಿವೃದ್ದಿಶೀಲ ರಾಷ್ಟ್ರಗಳಿಗೆ ನೂತನ ಹಾಗೂ ಅಧಿಕ ಆರ್ಥಿಕ ಸಹಾಯವನ್ನು ಒದಗಿಸಬೇಕು. ಅಲ್ಲದೆ ಈ ಉದ್ದೇಶಕ್ಕಾಗಿ ಪೂರಕವಾದ ತಂತ್ರಜ್ಞಾನದ ಮಾಹಿತಿಯನ್ನು ಪೂರೈಸಬೇಕು.

9. ಜೈವಿಕ ವೈವಿಧ್ಯ ಸಂರಕ್ಷಣೆಗೆ ಸಾಕಷ್ಟು ಪ್ರಮಾಣದ ಹಣವನ್ನು ತೊಡಗಿಸಬೇಕು. ಇದರಿಂದ ಸಾಮಾಜಿಕ, ಆರ್ಥಿಕ ಹಾಗೂ ಪರಿಸರದ ವಿಸ್ತೃತ ಲಾಭ ಉಂಟಾಗುವುದೆಂದು ನಿರೀಕ್ಷಿಸಲಾಗಿದೆ.

10. ಜೈವಿಕ ವೈವಿಧ್ಯದ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಯಿಂದ ಇಂದಿನ ಹಾಗೂ ಭವಿಷ್ಯ ಜನಾಂಗಕ್ಕೆ ಲಾಭವಿದೆ.

 

ಅಧಿನಿಯಮ 1 ಉದ್ದೇಶಗಳು

ಈ ಸಮಾವೇಶದ ಉದ್ದೇಶಗಳೆಂದರೆ ಸಂಬಂಧಪಟ್ಟ ನಿಯಮಗಳುಸಾರವಾಗಿ i)ೊಜೈವಿಕ ವೈವಿಧ್ಯವನ್ನು ಸಂರಕ್ಷಿಸುವುದು ii) ಜೈವಿಕ ವೈವಿಧ್ಯದ ಘಟಕಗಳನ್ನು ಸುಸ್ಥಿರ ಬಳಕೆ ಮಾಡಿಕೊಳ್ಳುವುದು iii) ಅದರ ಅನುವಂಶೀಯ ಸಂಪನ್ಮೂಲಗಳಿಂದ ಬರುವ ಲಾಭವನ್ನು ಸಮ ಹಾಗೂ ನ್ಯಾಯಯುತವಾಗಿ ಹಂಚಿಕೊಳ್ಳುವುದು iv) ಅನುವಂಶೀಯ ಸಂಪನ್ಮೂಲಗಳನ್ನು ಪಡೆಯುವುದಕ್ಕೆ ಮತ್ತು ಅದಕ್ಕೆ ಸಂಬಂಧಿತ ತಂತ್ರಜ್ಞಾನವನ್ನು ಹೊಂದುವುದಕ್ಕೆ ಅವಕಾಶ ನೀಡುವುದು. ಈ ಸಂಪನ್ಮೂಲಗಳಿಗೆ ಮತ್ತು ತಂತ್ರಜ್ಞಾನದ ಹಕ್ಕುಗಳಿಗೆ ಮಾನ್ಯತೆ ನೀಡುತ್ತಾ ಮತ್ತು ಯುಕ್ತ ಆರ್ಥಿಕ ಬೆಂಬಲದಿಂದ ಸಂಪನ್ಮೂಲ ಹಾಗೂ ತಂತ್ರಜ್ಞಾನದ ಹಂಚಿಕೆ ಮಾಡಿಕೊಳ್ಳುವುದು.

 

ಅಧಿನಿಯಮ 2 ಪದಗಳ ಬಳಕೆ

ಈ ಸಮಾವೇಶದ ಉದ್ದೇಶಕ್ಕಾಗಿ ಕೆಳಕಂಡ `ಪದ‘ಗಳಿಗೆ ಸೂಚಿಸಿರುವ ಅರ್ಥವನ್ನು ನೀಡಲಾಗಿದೆ.

i) ಜೈವಿಕ ವೈವಿಧ್ಯ ಎಂದರೆ ಇಲ್ಲಿರುವ ಭೂ ಹಾಗೂ ಜಲ ಪರಿಸರ ವ್ಯವಸ್ಥೆಗಳು ಮತ್ತು ಪರಿಸರ ಸಂಕೀರ್ಣಗಳಲ್ಲಿರುವ ಎಲ್ಲ ಜೀವಿಗಳಲ್ಲಿರುವ ವ್ಯತ್ಯಾಸಗಳು ಹಾಗೂ ಈ ಎಲ್ಲ ಪರಿಸರ ವ್ಯವಸ್ಥೆಗಳ ವ್ಯತ್ಯಾಸಗಳು. ಇದು ಪ್ರಭೇದದ ಸದಸ್ಯರ ನಡುವೆ ಪ್ರಭೇದಗಳ ನಡುವೆ ಹಾಗೂ ಪರಿಸರ ವ್ಯವಸ್ಥೆಗಳ ನಡುವಿನ ವ್ಯತ್ಯಾಸಗಳನ್ನು; ವೈವಿಧ್ಯಗಳನ್ನು ಒಳಗೊಂಡಿದೆ.

ii)  `ಅನುವಂಶೀಯ ಸಂಪನ್ಮೂಲಗಳು ಉದ್ಭವಿಸಿರುವ ದೇಶ‘ವೆಂದರೆ ಆ ಅನುವಂಶೀಯ ಸಂಪನ್ಮೂಲಗಳು ಸ್ವಾಭಾವಿಕ ನೆಲೆ ಹಾಗೂ ವಾತಾವರಣದಲ್ಲಿ ಜೀವಿಸುತ್ತಿರುವ ದೇಶ.

iii) `ಅನುವಂಶೀಯ ಸಂಪನ್ಮೂಲಗಳು‘ ಎಂದರೆ ಅನುವಂಶೀಯ ವಸ್ತುವಿನ ವಾಸ್ತವಿಕ ಅಥವಾ ವಿಭವ / ಸಾಧ್ಯತೆಯಿರುವ ಮೌಲ್ಯ.

iv)  `ಸ್ವಾಭಾವಿಕ ನೆಲೆಯ ಸ್ಥಿತಿಗಳು‘ ಎಂದರೆ ಅನುವಂಶೀಯ ಸಂಪನ್ಮೂಲಗಳಿರುವ ಸ್ವಾಭಾವಿಕ ಜೀವಾವಾಸ ಹಾಗೂ ಪರಿಸರ ವ್ಯವಸ್ಥೆಗಳಲ್ಲಿನ ಸ್ಥಿತಿಗತಿಗಳು. ಸಾಕಿದ ಅಥವಾ ಕೃಷಿ ಮಾಡಿದ ಪ್ರಭೇದಗಳಲ್ಲಾದರೆ ಅವು ತಮ್ಮ ವಿಶಿಷ್ಟ ಗುಣ ಲಕ್ಷಣಗಳನ್ನು ಅಭಿವೃದ್ದಿ ಪಡಿಸಿಕೊಂಡಿರುವ ಸ್ಥಳದ ಸ್ಥಿತಿಗತಿಗಳು.

v) `ಸ್ವಾಭಾವಿಕ ನೆಲೆಯ ಸಂರಕ್ಷಣೆ‘ ಎಂದರೆ ಸ್ವಾಭಾವಿಕ ಜೀವಾವಾಸಗಳ ಹಾಗೂ ಪರಿಸರ ವ್ಯವಸ್ಥೆಗಳ ಸಂರಕ್ಷಣೆ ಹಾಗೂ ಪ್ರಭೇದಗಳ ಅಗತ್ಯ ಸಂಖ್ಯೆಯ ಜೀವಿಗಳನ್ನು ಅವುಗಳ ಸ್ವಾಭಾವಿಕ ಪರಿಸರದಲ್ಲಿ ಕಾಪಾಡುವುದು. ಸಾಕಿದ ಅಥವಾ ಕೃಷಿ ಮಾಡಿದ ಪ್ರಭೇದಗಳಲ್ಲಿ, ಅವು ತಮ್ಮ ವಿಶಿಷ್ಟ ಗುಣ ಲಕ್ಷಣಗಳನ್ನು ಅಭಿವೃದ್ದಿಪಡಿಸಿಕೊಂಡ ಪರಿಸರದಲ್ಲಿ ಕಾಪಾಡುವುದು.

 

ಅಧಿನಿಯಮ 3 ಪ್ರಧಾನ ತತ್ವ

ವಿಶ್ವಸಂಸ್ಥೆಯ ನಿಲುವು ಹಾಗೂ ಅಂತಾರಾಷ್ಟ್ರೀಯ ಕಾನೂನಿನ ತತ್ವಗಳ ಪ್ರಕಾರ ಎಲ್ಲ ರಾಷ್ಟ್ರಗಳು ತಮ್ಮ ಸಂಪನ್ಮೂಲಗಳ ಮೇಲೆ ಸಾರ್ವಭೌಮ ಹಕ್ಕನ್ನು ಪಡೆದಿವೆ. ಆ ಸಂಪನ್ಮೂಲಗಳನ್ನು, ಆ ರಾಷ್ಟ್ರಗಳ ಪರಿಸರ ರೀತಿ-ನೀತಿಗಳ ಪ್ರಕಾರ ಹಾಗೂ ರಾಜ್ಯದ ಎಲ್ಲೆಯೊಳಗೆ ಬಳಸಿಕೊಳ್ಳಲು ಹಕ್ಕಿದೆ. ಆದರೆ ಅದರಿಂದ ಬೇರೆ ರಾಷ್ಟ್ರಗಳ ಪರಿಸರಕ್ಕೆ ಹಾನಿಯಾಗಬಾರದು ಮತ್ತು ಅವರ ಚಟುವಟಿಕೆಗಳು ರಾಷ್ಟ್ರದ ಎಲ್ಲೆಯನ್ನು ಮೀರಬಾರದು.

 

ಅಧಿನಿಯಮ 6 ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಗಾಗಿ ಕೈಗೊಳ್ಳಬೇಕಾದ ಕಾರ್ಯಗಳು

ಒಪ್ಪಂದಕ್ಕೆ ಸಹಿಮಾಡಿದ ಎಲ್ಲ ರಾಷ್ಟ್ರಗಳವರು, ಅವರ ಸಾಮರ್ಥ್ಯ ಹಾಗೂ ನಿರ್ದಿಷ್ಟ ಪರಿಸ್ಥಿತಿಗಳಿಗೆ ಅನುಗುಣವಾಗಿ :

ಅ) ಜೈವಿಕ ವೈವಿಧ್ಯದ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಗಾಗಿ ರಾಷ್ಟ್ರೀಯ ನೀತಿ – ನಿಯಮಗಳನ್ನು, ಯೋಜನೆಗಳನ್ನು ಅಥವಾ ಕಾರ್ಯಕ್ರಮಗಳನ್ನು ಅಭಿವೃದ್ದಿಪಡಿಸಬೇಕು ಅಥವಾ ಹಾಲಿ ಜಾರಿಯಲ್ಲಿರುವ ನೀತಿ – ನಿಯಮ, ಯೋಜನೆ ಅಥವಾ ಕಾರ್ಯಕ್ರಮಗಳಲ್ಲಿ ಈ ಸಮಾವೇಶದ ಉದ್ದೇಶಗಳಿಗೆ ಅನುಸಾರವಾಗಿ ಸೂಕ್ತ ಮಾರ್ಪಾಟುಗಳನ್ನು ಮಾಡಿಕೊಳ್ಳಬೇಕು.

ಆ) ಜೈವಿಕ ವೈವಿಧ್ಯದ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯನ್ನು ಸಾಧ್ಯವಾದಷ್ಟು ಹಾಗೂ ಯುಕ್ತವಾದಷ್ಟು ಸಂಬಂಧಿತ ವಿಭಾಗೀಯ ಅಥವಾ ಅಂತರ ವಿಭಾಗೀಯ ಯೋಜನೆ, ಕಾರ್ಯಕ್ರಮ ಮತ್ತು ನೀತಿ ನಿಯಮಗಳಲ್ಲಿ ಅಳವಡಿಸಬೇಕು.

 

ಅಧಿನಿಯಮ 7 ಗುರುತಿಸುವಿಕೆ ಹಾಗೂ ನಿರ್ವಹಣೆ

ಸಮಾವೇಶದ ಒಪ್ಪಂದಕ್ಕೆ ಸಹಿ ಮಾಡಿರುವ ಪ್ರತಿ ರಾಷ್ಟ್ರವು ಸಾಧ್ಯವಾದಷ್ಟು ಮತ್ತು ಯುಕ್ತವಾದಷ್ಟು, ಅದರಲ್ಲಿಯೂ ಅಧಿನಿಯಮ 8ರಿಂದ 10ವರೆಗಿನ ಉದ್ದೇಶಗಳಿಗಾಗಿ:

ಅ) ಪರಿಚ್ಛೇದ ಒಂದರಲ್ಲಿ ಪಟ್ಟಿ ಮಾಡಿರುವ ಅಂಶಗಳಿಗೆ ಅನುಸಾರವಾಗಿ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಗೆ ಮುಖ್ಯವಾಗಿರುವ ಜೈವಿಕ ವೈವಿಧ್ಯದ ಘಟಕಗಳನ್ನು ಗುರುತಿಸಬೇಕು.

ಆ) ಮೇಲಿನ ಪ್ಯಾರಾದ ಪ್ರಕಾರ ಗುರುತಿಸಲಾದ ಜೈವಿಕ ವೈವಿಧ್ಯದ ಘಟಕಗಳನ್ನು ಮಾದರಿ ಆಯ್ಕೆ ವಿಧಾನ ಹಾಗೂ ಇತರೆ ವಿಧಾನಗಳ ಮೂಲಕ ನಿರ್ವಹಿಸಬೇಕು.

ಇ) ಜೈವಿಕ ವೈವಿಧ್ಯದ ಸಂರಕ್ಷಣೆ ಹಾಗೂ ಬಳಕೆಯನ್ನು ಗಮನಾರ್ಹವಾಗಿ ಹಾಳುಮಾಡುವ ಅಥವಾ ಹಾಳುಮಾಡಬಹುದಾದ ವಿಧಾನ ಮತ್ತು ಕ್ರಿಯೆಗಳನ್ನು ಪತ್ತೆ ಹಚ್ಚಬೇಕು. ಅಂತಹ ಕ್ರಿಯೆಗಳ ಪರಿಣಾಮವನ್ನು ಮಾದರಿ ಆಯ್ಕೆ ಹಾಗೂ ಇತರ ವಿಧಾನಗಳಿಂದ ಆಗಾಗ್ಗೆ ತಿಳಿದುಕೊಳ್ಳುವ ವ್ಯವಸ್ಥೆ ಮಾಡಬೇಕು.

ಈ) ಮೇಲಿರುವ ಅ, ಆ, ಇ ನಿಯಮಗಳಂತೆ ಗುರುತಿಸುವ ಹಾಗೂ ನಿರ್ವಹಿಸುವ ವಿಧಾನಗಳಿಂದ ಬಂದ ಅಂಕಿ ಅಂಶಗಳನ್ನು ವ್ಯವಸ್ಥಿತವಾಗಿ ದಾಖಲಿಸುವ ಯಾವುದಾದರೂ ಕ್ರಮ ಕೈಗೊಳ್ಳಬೇಕು ಮತ್ತು ಅದನ್ನು ನಿರಂತರವಾಗಿ ಮುಂದುವರೆಸಬೇಕು.

 

ಅಧಿನಿಯಮ 8 – `ಸ್ವಾಭಾವಿಕ ನೆಲೆ ಸಂರಕ್ಷಣೆ

ಸಮಾವೇಶದ ಒಪ್ಪಂದಕ್ಕೆ ಸಹಿ ಹಾಕಿರುವ ಪ್ರತಿ ರಾಷ್ಟ್ರವು ಸಾಧ್ಯವಾದಷ್ಟು ಹಾಗೂ ಯುಕ್ತವಾದಷ್ಟು:

ಇ) ಜೈವಿಕ ಸಂಪನ್ಮೂಲಗಳ ರಕ್ಷಣೆ ಹಾಗೂ ಸುಸ್ಥಿರ ಬಳಕೆಯನ್ನು ಖಾತ್ರಿಗೊಳಿಸುವ ದೃಷ್ಟಿಯಿಂದ ರಕ್ಷಿತ ಪ್ರದೇಶಗಳ ಒಳಗೆ ಹಾಗೂ ಹೊರಗೆ ಜೈವಿಕ ವೈವಿಧ್ಯಕ್ಕೆ ಸಂರಕ್ಷಣೆ ನೀಡುವುದು ಅಥವಾ ನಿರ್ವಹಿಸುವುದು.

ಈ) ಸ್ವಾಭಾವಿಕ ಪರಿಸರದಲ್ಲಿ ಪ್ರಭೇದದ ಅಗತ್ಯವಾದ ಸಂಖ್ಯೆಯ ಜೀವಿಗಳನ್ನು ಕಾಪಾಡಿಕೊಳ್ಳುವ ಮತ್ತು ನೈಸರ್ಗಿಕ ನೆಲೆ ಮತ್ತು ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಪ್ರೋನೀಡುವುದು.

ಐ) ಜೈವಿಕ ವೈವಿಧ್ಯದ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಗೆ ಸಂಬಂಧಿಸಿದ ಪಾರಂಪರಿಕ ಜೀವನ ವಿಧಾನಗಳನ್ನು ಪಾಲಿಸುವ ಸ್ಥಳೀಯ ಹಾಗೂ ಬುಡಕಟ್ಟು ಜನರ ಅನುಭವ, ಜ್ಞಾನ ಹಾಗೂ ಅಭ್ಯಾಸಗಳನ್ನು ಗೌರವಿಸುವ, ಕಾಪಾಡುವ ಹಾಗೂ ದಾಖಲಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಅಲ್ಲದೆ ಅಂತಹ ಜ್ಞಾನ, ಅನುಭವ, ಅಭ್ಯಾಸಗಳ ಅಳವಡಿಕೆಯನ್ನು ಪ್ರೋಮತ್ತು ಆ ರೀತಿಯ ಪ್ರಯತ್ನಗಳಿಂದ ಬರಬಹುದಾದ ಲಾಭವನ್ನು ನ್ಯಾಯೋಚಿತ ಹಾಗೂ ಸಮನಾಗಿ ಹಂಚಬೇಕು.

 

ಅಧಿನಿಯಮ 10 ಜೈವಿಕ ವೈವಿಧ್ಯದ ಘಟಕಗಳ ಸುಸ್ಥಿರ ಬಳಕೆ

ಸಮಾವೇಶದ ಒಪ್ಪಂದಕ್ಕೆ ಸಹಿ ಹಾಕಿರುವ ಪ್ರತಿ ರಾಷ್ಟ್ರವು ಸಾಧ್ಯವಾದಷ್ಟು ಹಾಗೂ ಯುಕ್ತವಾದಷ್ಟು:

ಅ) ಜೈವಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಯ ವಿಷಯವನ್ನು ರಾಷ್ಟ್ರೀಯ ತೀರ್ಮಾನ ಕೈಗೊಳ್ಳುವ ವಿಧಾನಕ್ಕೆ ಸಮನ್ವಯಗೊಳ್ಳುವಂತೆ ಮಾಡಬೇಕು.

ಆ) ಜೈವಿಕ ಸಂಪನ್ಮೂಲಗಳ ಬಳಕೆಯ ವಿಧಾನಗಳನ್ನು ಅಳವಡಿಸಿಕೊಳ್ಳುವಾಗ ಜೈವಿಕ ವೈವಿಧ್ಯಕ್ಕೆ ಹಾನಿ ಉಂಟುಮಾಡುವ ವಿಧಾನಗಳನ್ನು ಕೈಬಿಡಬೇಕು ಅಥವಾ ಹಾನಿ ಕನಿಷ್ಟ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು.

ಇ) ಜೈವಿಕ ಸಂಪನ್ಮೂಲಗಳ ಸಂರಕ್ಷಣೆ ಅಥವಾ ಸುಸ್ಥಿರ ಬಳಕೆಗೆ ಪೂರಕವಾಗಿರುವ ಪಾರಂಪರಿಕ, ಸಾಂಸ್ಕೃತಿಕ ಆಚರಣೆಗಳನ್ನು ಪ್ರೋಮತ್ತು ರಕ್ಷಿಸಬೇಕು.

ಈ) ಜೈವಿಕ ವೈವಿಧ್ಯವು ಕ್ಷೀಣಿಸಿರುವ ಪ್ರದೇಶಗಳಲ್ಲಿ ಸ್ಥಳೀಯ ಜನರು ಪುನರ್ ಅಭಿವೃದ್ದಿಯ ಕಾರ್ಯಗಳನ್ನು ಕೈಗೊಂಡರೆ, ಅದನ್ನು ಪ್ರೋ

 

ಅಧಿನಿಯಮ 11 ಪ್ರೋಕಾರ್ಯಕ್ರಮಗಳು

ಸಮಾವೇಶದ ಒಪ್ಪಂದಕ್ಕೆ ಸಹಿ ಮಾಡಿದ ಪ್ರತಿ ರಾಷ್ಟ್ರವು ಜೈವಿಕ ವೈವಿಧ್ಯದ ರಕ್ಷಣೆ ಮತ್ತು ಅದರ ಘಟಕಗಳ ಸುಸ್ಥಿರ ಬಳಕೆಗೆ ಪ್ರೋನೀಡುವ ಆರ್ಥಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಮತ್ತು ಯುಕ್ತವಾದಷ್ಟು ಪ್ರಮಾಣದಲ್ಲಿ ಹಮ್ಮಿಕೊಳ್ಳಬೇಕು.

 

ಅಧಿನಿಯಮ 12 ಸಂಶೋಧನೆ ಮತ್ತು ತರಬೇತಿ

ಅಭಿವೃದ್ದಿಶೀಲ ರಾಷ್ಟ್ರಗಳ ಪರಿಸ್ಥಿತಿಯನ್ನು ವಿಶೇಷವಾಗಿ ಗಮನಿಸಿ, ಸಮಾವೇಶದ ಒಪ್ಪಂದಕ್ಕೆ ಸಹಿ ಮಾಡಿದ ರಾಷ್ಟ್ರಗಳು :-

ಅ) ಜೈವಿಕ ವೈವಿಧ್ಯದ ರಕ್ಷಣೆ ಹಾಗೂ ಸುಸ್ಥಿರಬಳಕೆ ಮತ್ತು ಅದರ ಘಟಕಗಳ ಗುರುತಿಸುವಿಕೆ, ರಕ್ಷಣೆಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಮತ್ತು ನಿರ್ವಹಿಸಬೇಕು. ಅಂತಹ ಕಾರ್ಯಕ್ರಮಗಳನ್ನು ನಡೆಸಲು ಅಗತ್ಯವಾದ ಶಿಕ್ಷಣ ಮತ್ತು ತರಬೇತಿಗೆ ಅಗತ್ಯವಾದ ಬೆಂಬಲವನ್ನು ಅಭಿವೃದ್ದಿಶೀಲ ರಾಷ್ಟ್ರಗಳಿಗೆ ನೀಡಬೇಕು.

ಆ) ವೈಜ್ಞಾನಿಕ, ತಾಂತ್ರಿಕ ಮತ್ತು ತಂತ್ರಜ್ಞಾನದ ಸಲಹಾ ಸಮಿತಿಯ ಶಿಪಾರಸಿನ ಮೇಲೆ ಜೈವಿಕ ವೈವಿಧ್ಯದ ರಕ್ಷಣೆ ಮತ್ತು ಸುಸ್ಥಿರ ಬಳಕೆಗೆ ಉಪಯೋಗವಾಗುವ ಸಂಶೋಧನೆಗಳಿಗೆ ಪ್ರೇರಣೆ ಮತ್ತು ಪ್ರೋನೀಡಬೇಕು. ಸಮಾವೇಶದಲ್ಲಿ ಒಪ್ಪಂದಕ್ಕೆ ಸಹಿ ಮಾಡಿದ ರಾಷ್ಟ್ರಗಳು ಸಲಹಾ ಸಮಿತಿಯ ಶಿಫಾರಸ್ಸನ್ನು ಗಮನಿಸಿ, ಇಂತಹ ಕಾರ್ಯಕ್ರಮಗಳು ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ನಡೆಯುವುದಕ್ಕೆ ವಿಶೇಷ ನೆರವು ನೀಡಬೇಕು.

ಇ) ಅಧಿನಿಯಮ 16, 18 ಮತ್ತು 20ರ ಅನ್ವಯದಂತೆ ಜೈವಿಕ ವೈವಿಧ್ಯದ ರಕ್ಷಣೆ ಮತ್ತು ಸುಸ್ಥಿರ ಬಳಕೆಗೆ ಸೂಕ್ತ ವಿಧಾನಗಳನ್ನು ಅಭಿವೃದ್ದಿಪಡಿಸಲು ಪೂರಕವಾದ ವೈಜ್ಞಾನಿಕ ಪ್ರಗತಿಯನ್ನು ಪ್ರೇರೇಪಿಸಲು ಮತ್ತು ಹಂಚಿಕೊಳ್ಳಲು ಸಿದ್ಧರಿರಬೇಕು.

 

ಅಧಿನಿಯಮ 13 ಸಾರ್ವಜನಿಕ ಶಿಕ್ಷಣ ಮತ್ತು ಜಾಗೃತಿ

ಸಮಾವೇಶಕ್ಕೆ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರಗಳು :-

ಅ) ಜೈವಿಕ ವೈವಿಧ್ಯದ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಹಾಗೂ ರಕ್ಷಣಾ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳನ್ನು ಹಮ್ಮಿಕೊಳ್ಳಬೇಕು ಮತ್ತು ಪ್ರೋಅಲ್ಲದೆ ಇಂತಹ ಕಾರ್ಯಕ್ರಮಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪಠ್ಯವಾಗುವಂತೆ ಮಾಡಬೇಕು ಮತ್ತು ಸಮೂಹ ಮಾಧ್ಯಮಗಳಲ್ಲಿ ಸೂಕ್ತವಾಗಿ ಪ್ರಚಾರವಾಗುವಂತೆ ಮಾಡಬೇಕು.

 

ಅಧಿನಿಯಮ 14 ಪರಿಣಾಮ ತಿಳಿಯುವ ಹಾಗೂ ದುಷ್ಪರಿಣಾಮಗಳನ್ನು ಕಡಿಮೆಗೊಳಿಸುವ ಬಗ್ಗೆ

ಒಪ್ಪಿರುವ ಪ್ರತಿರಾಷ್ಟ್ರವು ಸಾಧ್ಯವಾದಷ್ಟು ಹಾಗೂ ಯುಕ್ತವಾದಷ್ಟು :

ಅ) ಜೈವಿಕ ವೈವಿಧ್ಯದ ಮೇಲೆ ಗಮನಾರ್ಹ ದುಷ್ಪರಿಣಾಮ ಬೀರಬಹುದಾದ ಯೋಜನೆಗಳ ಪರಿಸರ ಪರಿಸ್ಥಿತಿಯನ್ನು ಅರಿಯುವ ಯುಕ್ತ ವಿಧಾನಗಳನ್ನು ಅಳವಡಿಸಬೇಕು. ತತ್ಪ್ರಯುಕ್ತ ಅಂತಹ ದುಷ್ಪರಿಣಾಮಗಳನ್ನು ತಡೆಗಟ್ಟುವ ಅಥವಾ ಕನಿಷ್ಟಗೊಳಿಸುವ ಪ್ರಯತ್ನ ಮಾಡಬೇಕು ಮತ್ತು ಇಂತಹ ಪ್ರಕ್ರಿಯೆಗಳಲ್ಲಿ ಯುಕ್ತವಾದಾಗ ಸಾರ್ವಜನಿಕರ ಭಾಗವಹಿಸುವಿಕೆಗೆ ಅವಕಾಶವಿರಬೇಕು.

ಆ) ಸರ್ಕಾರದ ಯೋಜನೆಗಳು ಮತ್ತು ನೀತಿ-ನಿಯಮಗಳು ಜೈವಿಕ ವೈವಿಧ್ಯದ ಮೇಲೆ ದುಷ್ಪರಿಣಾಮ ಬೀರಬಲ್ಲವಾದವುಗಳಾದರೆ, ಅವುಗಳಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮವನ್ನು ತಿಳಿಯುವ ಯುಕ್ತ ವಿಧಾನಗಳನ್ನು ಕೈಗೊಳ್ಳಬೇಕು ಮತ್ತು ಸೂಕ್ತ ಪರಿಹಾರೋಪಾಯಗಳನ್ನು ಜಾರಿಗೊಳಿಸಬೇಕು.

 

ಅಧಿನಿಯಮ 15 ಅನುವಂಶೀಯ ಸಂಪನ್ಮೂಲಗಳನ್ನು ಪಡೆದುಕೊಳ್ಳಲು ಅವಕಾಶ

1. ನೈಸರ್ಗಿಕ ಸಂಪನ್ಮೂಲಗಳ ಮೇಲೆ ರಾಜ್ಯಗಳ ಸಾರ್ವಭೌಮ ಹಕ್ಕನ್ನು ಗೌರವಿಸಬೇಕು. ಆ ಸಂಪನ್ಮೂಲಗಳು ಇತರೆ ರಾಷ್ಟ್ರಗಳಿಗೆ ದೊರಕುವಂತೆ ಮಾಡುವ ಅಧಿಕಾರವು ಆಯಾ ರಾಷ್ಟ್ರಗಳ ಸರ್ಕಾರಗಳಿಗೆ ಬಿಟ್ಟ ವಿಷಯ ಮತ್ತು ಅಲ್ಲಿಯ ರಾಷ್ಟ್ರೀಯ ಕಾನೂನುಗಳಿಗೆ ಸಂಬಂಧಿಸಿದ ವಿಷಯ.

2. ಈ ಸಮಾವೇಶಕ್ಕೆ ಒಪ್ಪಿದ ಪ್ರತಿ ರಾಷ್ಟ್ರವು ಮತ್ತೊಂದು ರಾಷ್ಟ್ರಕ್ಕೆ ಅದರ ಪರಿಸರ ಪೂರಕ ಉದ್ದೇಶಗಳಿಗಾಗಿ ಜೈವಿಕ ವೈವಿಧ್ಯವನ್ನು ಬಳಕೆಮಾಡಿಕೊಳ್ಳಲು ಅಗತ್ಯವಾದ ಅವಕಾಶ ಮಾಡಿಕೊಡಲು ಪ್ರಯತ್ನಿಸಬೇಕು. ಹಾಗೆ ಅವಕಾಶ ನೀಡಿದಾಗ ಈ ಸಮಾವೇಶದ ಉದ್ದೇಶಗಳಿಗೆ ಅಡ್ಡಬರುವಂತಹ ನಿರ್ಬಂಧವನ್ನು ಹೇರಬಾರದು.

3. ಈ ಸಮಾವೇಶದ ಉದ್ದೇಶಗಳನ್ನು ಒಪ್ಪಿದ ಒಂದು ರಾಷ್ಟ್ರವು ನೀಡಿದ ಅನುವಂಶೀಯ ಸಂಪನ್ಮೂಲಗಳು ಈ ಅಧಿನಿಯಮ ಮತ್ತು ಅಧಿನಿಯಮ 16 ಮತ್ತು 19ರಲ್ಲಿ ತಿಳಿಸಿರುವಂತೆ ಪಡೆದಿರುವವು ಮತ್ತು ಅನುವಂಶೀಯ ಸಂಪನ್ಮೂಲಗಳೆಂದರೆ ಆ ದೇಶದಲ್ಲಿ ಸ್ವಾಭಾವಿಕವಾಗಿ ಜನಿಸಿದ ಸಂಪನ್ಮೂಲಗಳು ಅಥವಾ ಈ ಸಮಾವೇಶದ ಅನ್ವಯದಂತೆ ಪಡೆದ ಅನುವಂಶೀಯ ಸಂಪನ್ಮೂಲಗಳು.

5. ಅನುವಂಶೀಯ ಸಂಪನ್ಮೂಲಗಳನ್ನು ಪಡೆಯುವ ಅವಕಾಶವು, ಅದನ್ನು ನೀಡಬೇಕಾದ ರಾಷ್ಟ್ರದ ಪೂರ್ವಾನುಮತಿಗೆ ಒಳಪಟ್ಟಿದೆ ಅಥವಾ ಆ ರಾಷ್ಟ್ರದ ಇತರೆ ಕಾನೂನುಗಳ ಪ್ರಕಾರ ಪಡೆಯಬಹುದಾದ ವಿಷಯ.

6. ಒಪ್ಪಂದಿತ ರಾಷ್ಟ್ರಗಳಿಂದ ಅನುವಂಶೀಯ ಸಂಪನ್ಮೂಲಗಳನ್ನು ಪಡೆದ ರಾಷ್ಟ್ರವು ವೈಜ್ಞಾನಿಕ ಸಂಶೋಧನೆಗಳನ್ನು ಅಭಿವೃದ್ದಿಪಡಿಸುವಾಗ ಮತ್ತು ಜಾರಿಗೊಳಿಸುವಾಗ ನೀಡಿದ ರಾಷ್ಟ್ರವನ್ನು ಸಾಧ್ಯವಾದಾಗಲೆಲ್ಲ ಪೂರ್ಣವಾಗಿ ಪಾಲ್ಗೊಳ್ಳುವಂತೆ ಮಾಡಬೇಕು.

7. ಅಧಿನಿಯಮ 16 ಮತ್ತು 19ರ ಪ್ರಕಾರ ಒಪ್ಪಿದ ಪ್ರತಿ ರಾಷ್ಟ್ರವು ಸಾಧ್ಯವಾದಷ್ಟು ಮತ್ತು ಯುಕ್ತವಾದಷ್ಟು ಕಾನೂನು ರೀತಿಯ, ಆಡಳಿತಾತ್ಮಕವಾದ ಅಥವಾ ರಾಷ್ಟ್ರ ನೀತಿಯ ಪ್ರಕಾರ ಕಾರ್ಯಗಳನ್ನು ಕೈಗೊಳ್ಳಬೇಕು. ಅಧಿನಿಯಮ 20 ಮತ್ತು 21ರಂತೆ ಸ್ಥಾಪಿತವಾದ ಆರ್ಥಿಕ ಬೆಂಬಲದಿಂದ ಕೈಗೊಂಡ ಸಂಶೋಧನೆ ಮತ್ತು ಅಭಿವೃದ್ದಿಯ ಫಲಗಳನ್ನು; ಅನುವಂಶೀಯ ಸಂಪನ್ಮೂಲಗಳನ್ನು ನೀಡಿದ ರಾಷ್ಟ್ರದೊಂದಿಗೆ ನ್ಯಾಯೋಚಿತ ಹಾಗೂ ಸಮನಾಗಿ ಹಂಚಿಕೊಳ್ಳಬೇಕು. ಅನುವಂಶೀಯ ಸಂಪನ್ಮೂಲಗಳ ವಾಣಿಜ್ಯ ಹಾಗೂ ಇತರ ಬಳಕೆಯಿಂದ ಬರುವ ಲಾಭವನ್ನೂ ಹಂಚಿಕೊಳ್ಳಬೇಕು.

 

ಅಧಿನಿಯಮ 16 ತಂತ್ರಜ್ಞಾನ ಪಡೆಯಲು ಮತ್ತು ವರ್ಗಾವಣೆಗೆ ಅವಕಾಶ

1. ತಂತ್ರಜ್ಞಾನವು ಜೈವಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಸಮಾವೇಶದ ಉದ್ದೇಶವನ್ನು ಸಫಲಗೊಳಿಸಲು, ಒಪ್ಪಂದಿತ ರಾಷ್ಟ್ರಗಳ ನಡುವೆ ತಂತ್ರಜ್ಞಾನವನ್ನು ತಿಳಿಯುವ ಮತ್ತು ವರ್ಗಾಯಿಸಿಕೊಳ್ಳುವ ಅವಕಾಶವಿರಬೇಕು. ತತ್ಪ್ರಯುಕ್ತ ಜೈವಿಕ ವೈವಿಧ್ಯದ ರಕ್ಷಣೆ ಮತ್ತು ಸುಸ್ಥಿರ ಬಳಕೆಗೆ ಪೂರಕವಾದ ತಂತ್ರಜ್ಞಾನವನ್ನು ತಿಳಿಯುವ ಮತ್ತು ವರ್ಗಾವಣೆಮಾಡಿಕೊಳ್ಳುವ ಹಕ್ಕು ಈ ಅಧಿನಿಯಮದಂತಿರುತ್ತದೆ. ಈ ಪ್ರಕ್ರಿಯೆಯಲ್ಲಿ ಅನುವಂಶೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು ಮತ್ತು ಇದರಿಂದ ಪರಿಸರಕ್ಕೆ ಗಮನಾರ್ಹ ಆಘಾತ ಉಂಟಾಗದಂತೆ ನೋಡಿಕೊಳ್ಳಬೇಕು.

2. ಮೇಲಿನ ಪ್ಯಾರ ಒಂದರಲ್ಲಿ ಸೂಚಿಸಿರುವಂತೆ ಅಭಿವೃದ್ದಿಶೀಲ ರಾಷ್ಟ್ರಗಳಿಗೆ ತಂತ್ರಜ್ಞಾನದ ತಿಳುವಳಿಕೆ ಹಾಗೂ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು ಮತ್ತು / ಅಥವಾ ರಿಯಾಯಿತಿ ಹಾಗೂ ಆದ್ಯತೆಯ ನಿಬಂದನೆಗಳ ಪ್ರಕಾರ ನ್ಯಾಯಯುತ ಮತ್ತು ಅನುಕೂಲಕರ ನಿಯಮಗಳನ್ನು ರಚಿಸಿ ತಂತ್ರಜ್ಞಾನವನ್ನು ನೀಡಬೇಕು. ಅಗತ್ಯವೆನಿಸಿದರೆ ಅಧಿನಿಯಮ 20 ಮತ್ತು 21ರಲ್ಲಿ ಸೂಚಿಸಿರುವಂತೆ ಆರ್ಥಿಕ ವ್ಯವಸ್ಥೆಯನ್ನು ರಚಿಸಿ, ಅದರಂತೆಯೂ ತಂತ್ರಜ್ಞಾನವನ್ನು ವರ್ಗಾವಣೆ ಮಾಡಬೇಕು. ತಂತ್ರಜ್ಞಾನವು ಸ್ವಾಮ್ಯ ಹಕ್ಕಿಗೆ ಮತ್ತು ಇತರೆ ಭೌದ್ದಿಕ ಸ್ವಾಮ್ಯಹಕ್ಕಿಗೆ ಸೇರಿದ ವಿಷಯವಾದರೆ ಆ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ಆ ನಿಯಮಗಳ ಪ್ರಕಾರವೇ ತಂತ್ರಜ್ಞಾನವನ್ನು ಪಡೆಯಬೇಕು. ಕೆಳಗಿನ ಪ್ಯಾರ 3, 4 ಮತ್ತು 5ರ ಅನ್ವಯವಾಗಿ ಈ ಪ್ಯಾರವನ್ನು ಅನ್ವಯಿಸಬೇಕು.

 

ಅಧಿನಿಯಮ 17 ಮಾಹಿತಿಯ ವಿನಿಮಯ

1. ಅಭಿವೃದ್ದಿಶೀಲ ರಾಷ್ಟ್ರಗಳ ವಿಶೇಷ ಅಗತ್ಯಗಳನ್ನು ಪರಿಗಣಿಸಿ ಜೈವಿಕ ವೈವಿಧ್ಯದ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಗೆ ಸಂಬಂಧಿಸಿದ ಮಾಹಿತಿಯು ಸಾರ್ವಜನಿಕವಾಗಿ ದೊರೆಯುವ ಎಲ್ಲ ಮೂಲಗಳಿಂದ ದೊರೆಯುವಂತೆ ಒಪ್ಪಂದಿತ ರಾಷ್ಟ್ರಗಳು ಅವಕಾಶ ಮಾಡಿಕೊಡಬೇಕು.

2. ಮಾಹಿತಿಯ ವಿನಿಮಯವು ತಾಂತ್ರಿಕ, ವೈಜ್ಞಾನಿಕ ಮತ್ತು ಸಾಮಾಜಿಕ-ಆರ್ಥಿಕ ಸಂಶೋಧನೆಯ ಫಲಿತಾಂಶಗಳನ್ನು; ಸರ್ವೇಕ್ಷಣೆ ಮತ್ತು ತರಬೇತಿಯ ಮಾಹಿತಿಯನ್ನು, ವಿಶೇಷ ಜ್ಞಾನವನ್ನು, ಸ್ಥಳೀಯ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಮತ್ತು ಅಂತಹ ಜ್ಞಾನವು ತಂತ್ರಜ್ಞಾನಗಳ ಬೆಂಬಲದಿಂದ ಅಧಿನಿಯಮ 16 ಪ್ಯಾರ 1ರಂತೆ ಪರಿಷ್ಕರಣಗೊಂಡ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದು ಮಾಹಿತಿಯನ್ನು ಮತ್ತೆ ಆ ದೇಶಕ್ಕೆ ಹಿಂತಿರುಗಿಸುವುದನ್ನೂ ಒಳಗೊಂಡಿದೆ.

 

ಅಧಿನಿಯಮ 18 ತಾಂತ್ರಿಕ ಮತ್ತು ವೈಜ್ಞಾನಿಕ ಸಹಕಾರ

1. ಈ ಸಮಾವೇಶದ ಘೋಷಣೆಗೆ ಅನುಸಾರವಾಗಿ ಒಪ್ಪಂದಿತ ರಾಷ್ಟ್ರಗಳು ಅವುಗಳ ರಾಷ್ಟ್ರೀಯ ಕಾನೂನು ಮತ್ತು ನೀತಿಗಳಂತೆ ಸ್ಥಳೀಯ ಹಾಗೂ ಸಾಂಪ್ರದಾಯಿಕ ತಂತ್ರಜ್ಞಾನವನ್ನೂ ಸೇರಿದಂತೆ ಅಭಿವೃದ್ದಿ ಮತ್ತು ತಂತ್ರಜ್ಞಾನಗಳ ಬಳಕೆಯ ವಿಧಾನಗಳನ್ನು ಪ್ರೋಮತ್ತು ಅಭಿವೃದ್ದಿಪಡಿಸಬೇಕು. ಈ ಉದ್ದೇಶದ ಈಡೇರಿಕೆಗಾಗಿ ಒಪ್ಪಂದಿತ ರಾಷ್ಟ್ರಗಳು ತರಬೇತಿ ಮತ್ತು ತಜ್ಞರ ವಿನಿಮಯದ ಬಗ್ಗೆಯೂ ಸಹಕಾರವನ್ನು ಏರ್ಪಡಿಸಿಕೊಳ್ಳಬೇಕು.

 

ಅಧಿನಿಯಮ 19 ಜೈವಿಕ ತಂತ್ರಜ್ಞಾನದ ನಿಬಾವಣೆ ಮತ್ತು ಅದರ ಪ್ರಯೋಜನಾಂಶಗಳ ಹಂಚಿಕೆ

1. ಒಪ್ಪಂದಿತ ರಾಷ್ಟ್ರಗಳಿಂದ ಅದರಲ್ಲಿಯೂ ಅಭಿವೃದ್ದಿಶೀಲ ರಾಷ್ಟ್ರಗಳಿಂದ ಪಡೆದ ಅನುವಂಶೀಯ ಸಂಪನ್ಮೂಲಗಳನ್ನು ಸಂಶೋಧನೆಗಾಗಿ ಪಡೆದಾಗ, ಆದೇಶಗಳು ಜೈವಿಕ ತಂತ್ರಜ್ಞಾನದ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರತಿ ಒಪ್ಪಂದಿತ ರಾಷ್ಟ್ರವು ಯುಕ್ತವಾದ ಕಾನೂನು ರೀತ್ಯ, ಆಡಳಿತಾತ್ಮಕ ಅಥವಾ ನೀತಿ-ನಿಲುವುಗಳ ಕ್ರಮಗಳನ್ನು ಕೈಗೊಳ್ಳಬೇಕು.

 

ಅಧಿನಿಯಮ 20 ಆರ್ಥಿಕ ಸಂಪನ್ಮೂಲಗಳು

1. ಪ್ರತಿ ಒಪ್ಪಂದಿತ ರಾಷ್ಟ್ರವು ಅದರ ರಾಷ್ಟ್ರೀಯ ಯೋಜನೆ, ಆದ್ಯತೆ ಹಾಗೂ ಕಾರ್ಯಕ್ರಮಗಳ ಭಾಗವಾಗಿ ಸಾಧ್ಯವಾದಷ್ಟು ಪ್ರಮಾಣದ ಉತ್ತೇಜನ ಮತ್ತು ಆರ್ಥಿಕ ಬೆಂಬಲವನ್ನು ಈ ಸಮಾವೇಶದ ಪೋಷಣೆಗಳಿಗೆ ಪೂರಕವಾದ ರಾಷ್ಟ್ರೀಯ ಚಟುವಟಿಕೆಗಳಿಗೆ ಮುಡುಪಾಗಿಡಬೇಕು.

2. ಅಭಿವೃದ್ದಿಯಾಗಿರುವ ರಾಷ್ಟ್ರಗಳು ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಈ ಸಮಾವೇಶದ ಘೋಷಣೆಗಳನ್ನು ಜಾರಿಮಾಡಲು ಮತ್ತು ಅಧಿನಿಯಮಗಳ ಪ್ರಯೋಜನಗಳನ್ನು ಪಡೆಯಲು ನೂತನ ಹಾಗೂ ಅಧಿಕ ಆರ್ಥಿಕ ಸಹಾಯ ನೀಡಬೇಕು. ಅಧಿನಿಯಮ 21ರಂತೆ ಸಾಂಸ್ಥಿಕ ರೂಪ ನೀಡಿ, ಅದು ಆರ್ಥಿಕ ಸಹಾಯ ನೀಡುವುದಕ್ಕೆ ನೀತಿ, ನಿಯಮ, ತಂತ್ರ, ಕಾರ್ಯಕ್ರಮ ಮತ್ತು ಅರ್ಹತಾ ಯೋಗ್ಯತೆ ನಿರ್ಧಾರವಾಗಬೇಕು.

3. ದ್ವಿಪಕ್ಷೀಯ, ವಲಯ ಮತ್ತು ಬಹುಪಕ್ಷೀಯ ಮಾತುಕತೆಗಳ ಮೂಲಕ ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಈ ಸಮಾವೇಶದ ಘೋಷಣೆಗಳ ಜಾರಿಗೆ ಪೂರಕವಾಗುವ ಕಾರ್ಯಕ್ರಮಗಳಿಗೆ ಆರ್ಥಿಕ ಬೆಂಬಲವನ್ನು ಅಭಿವೃದ್ದಿಶೀಲ ರಾಷ್ಟ್ರಗಳಿಗೆ ನೀಡಬಹುದು.

5. ಹಣ ನೀಡುವಾಗ ಮತ್ತು ತಂತ್ರಜ್ಞಾನವನ್ನು ವರ್ಗಾವಣೆಮಾಡುವಾಗ ಕನಿಷ್ಠ ಅಭಿವೃದ್ದಿಹೊಂದಿದ ರಾಷ್ಟ್ರಗಳ ನಿರ್ದಿಷ್ಟ ಅಗತ್ಯಗಳನ್ನು ಮತ್ತು ವಿಶಿಷ್ಟ ಪರಿಸ್ಥಿತಿಯನ್ನು ಒಪ್ಪಂದಿತ ರಾಷ್ಟ್ರಗಳು ಗಮನಕ್ಕೆ ತೆಗೆದುಕೊಳ್ಳಲೇಬೇಕು.

 

ಅಧಿನಿಯಮ 21 ಹಣಕಾಸಿನ ವ್ಯವಸ್ಥೆ

1. ಈ ಸಮಾವೇಶದ ಘೋಷಣೆಗಳನ್ನು ಜಾರಿಮಾಡಲು ಒಪ್ಪಂದಿತ ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಆರ್ಥಿಕ ಸಂಪನ್ಮೂಲಗಳನ್ನು ಅನುದಾನ ಅಥವಾ ರಿಯಾಯಿತಿ ಆಧಾರದಲ್ಲಿ ಒದಗಿಸುವ ಉದ್ದೇಶದಿಂದ ಹಣಕಾಸಿನ ವ್ಯವಸ್ಥೆ ನಿರ್ಮಿಸಲಾಗುವುದು. ಈ ಅಧಿನಿಯಮದಲ್ಲಿ ರಿಯಾಯಿತಿ ಅಥವಾ ಅನುದಾನ ನೀಡಬೇಕಾದ ಪರಿಸ್ಥಿತಿಯ ಮುಖ್ಯಾಂಶಗಳನ್ನು ವಿವರಿಸಲಾಗಿದೆ.

 

ಅಧಿನಿಯಮ 25 ವೈಜ್ಞಾನಿಕ, ತಾಂತ್ರಿಕ ಮತ್ತು ತಂತ್ರಜ್ಞಾನದ ಸಲಹಾ ಸಮಿತಿ

1. ಒಪ್ಪಂದಿತ ರಾಷ್ಟ್ರಗಳಿಗೆ ಮತ್ತು ಅವುಗಳ ಉಪಸಮಿತಿಗಳಿಗೆ ಯುಕ್ತವಾದ ಸಕಾಲಿಕ ಸಲಹೆಗಳನ್ನು ನೀಡಲು ವೈಜ್ಞಾನಿಕ, ತಾಂತ್ರಿಕ ಮತ್ತು ತಂತ್ರಜ್ಞಾನದ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಒಪ್ಪಂದಿತ ರಾಷ್ಟ್ರಗಳೆಲ್ಲವು ಈ ಸಮಿತಿಯೊಂದಿಗೆ ಪಾಲ್ಗೊಳ್ಳಲು ತೆರೆದ ಅವಕಾಶವಿರಬೇಕು ಮತ್ತು ಈ ಸಮಿತಿಯಲ್ಲಿ ಎಲ್ಲ ವಿಷಯಗಳ ತಜ್ಞರಿರಬೇಕು. ಈ ಸಮಿತಿಯಲ್ಲಿ ಸಂಬಂಧಿತ ವಿಷಯದಲ್ಲಿ ಪಾಂಡಿತ್ಯವಿರುವ ತಜ್ಞರು ಸರ್ಕಾರಗಳ ಪ್ರತಿನಿಧಿಗಳಾಗಿರುತ್ತಾರೆ. ಈ ಸಮಿತಿಯು ತನ್ನ ಎಲ್ಲ ಕಾರ್ಯಗಳ ಬಗ್ಗೆ ಒಪ್ಪಂದಿತ ರಾಷ್ಟ್ರಗಳಿಗೆ ಆಗಾಗ್ಗೆ ವರದಿಯನ್ನು ನೀಡುವುದು.

 

ಅನುಬಂಧ I

ಗುರುತಿಸುವಿಕೆ ಮತ್ತು ನಿರ್ವಹಣೆ

1. ಪರಿಸರ ವ್ಯವಸ್ಥೆಗಳು ಮತ್ತು ಜೀವಾವಾಸಗಳು : ಅಂದರೆ ಹೆಚ್ಚಿನ ವೈವಿಧ್ಯವಿರುವ, ವಲಸೆ ಬರುವ ಪ್ರಭೇದಗಳಿಗೆ ಅಗತ್ಯವಿರುವ; ಹೆಚ್ಚಿನ ಸಂಖ್ಯೆಯ ಸ್ಥಳೀಯ ಅಥವಾ ವಿನಾಶದ ಅಂಚಿನಲ್ಲಿರುವ ಅಥವಾ ಕಾಡಿನ ಪ್ರಭೇದಗಳು ವಾಸಿಸುವ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಥವಾ ವೈಜ್ಞಾನಿಕ ಪ್ರಾಮುಖ್ಯತೆಯಿರುವ ಅಥವಾ ವಿವಿಧ ಜೈವಿಕ ಕ್ರಿಯೆಗಳ ಅಥವಾ ವಿಕಾಸದ ಕ್ರಿಯೆಗಳೊಡನೆ ಪ್ರಮುಖ ಸಂಬಂಧ ಹೊಂದಿರುವ ವಿಶಿಷ್ಟ ಅಥವಾ ಪ್ರಾತಿನಿಧಿಕ ಸ್ಥಳಗಳು.

2. ಪ್ರಭೇದಗಳು ಮತ್ತು ಜೀವಿ ಸಮುದಾಯಗಳೆಂದರೆ : ಅಪಾಯದಲ್ಲಿರುವ; ಸಾಕಿದ ಅಥವಾ ಕೃಷಿ ಮಾಡಿದ ಪ್ರಭೇದಗಳ ಕಾಡುಜಾತಿಗಳು; ಅಥವಾ ಔಷಧೀಯ, ಕೃಷಿ ಅಥವಾ ಇತರೆ ಆರ್ಥಿಕ ಮೌಲ್ಯವಿರುವ, ಅಥವಾ ಸಾಮಾಜಿಕ, ವೈಜ್ಞಾನಿಕ ಅಥವಾ ಸಾಂಸ್ಕೃತಿಕ ಪ್ರಾಮುಖ್ಯತೆ ಇರುವ; ಅಥವಾ ಜೈವಿಕ ವೈವಿಧ್ಯದ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಗೆ ಸಂಶೋಧನೆ ನಡೆಸುವಾಗ ಅಗತ್ಯ ಬೀಳುವ (ಉದಾಹರಣೆಗೆ ಸೂಚನಾ ಪ್ರಭೇದಗಳು) ಪ್ರಭೇದಗಳು.

3. ಸಾಮಾಜಿಕ, ವೈಜ್ಞಾನಿಕ ಅಥವಾ ಆರ್ಥಿಕ ಪ್ರಾಮುಖ್ಯತೆಯಿರುವ ಜೀನ್‌ಗಳು ಮತ್ತು ಜೀನೋಮುಗಳು.

 

 

(ಚಿತ್ರ)

 

(ಚಿತ್ರ)