ಹವಾಮಾನ ಬದಲಾಣೆಯ ಬಗ್ಗೆ ಇಂದು ಹಲವು ತದ್ವಿರುದ್ದದ ಅಭಿಪ್ರಾಯಗಳಿವೆ. ವಾಗ್ವಾದಗಳಿವೆ. ವಿಜ್ಞಾನದ ಈ ಸಂಕೀರ್ಣ ವಿಷಯದ ಬಗ್ಗೆ ಸಜ್ಞರಲ್ಲದಬರಿಗೆ ಸರಳ ಹಾಗೂ ನೇರ ಮಾಹಿತಿ ನೀಡುವ ಉದ್ದೇಶದಿಂದ ಬ್ರಿಟನ್ನಿನ ರಾಯಲ್ ಸೊಸೈಟಿಯು ಹವಾಮಾನ ಬದಲಾವಣೆಯ ಬಗ್ಗೆ ಸ್ಥೂಲ ನೋಟ ಮತ್ತು ಇಂದು ದೊರಕುತ್ತಿರುವ ವೈಜ್ಞಾನಿಕ ಮಾಹಿತಿಯನ್ನು ಸಿದ್ಧಪಡಿಸಿದೆ.

ಹವಾಮಾನ ಬದಲಾವಣೆಯ ವೈಜ್ಞಾನಿಕ ಸತ್ಯವನ್ನು ಮುಚ್ಚಲು ಮತ್ತು ಜಾಗತಿಕ ಬಿಸಿಯೇರುವಿಕೆಯಿಂದಾಗುವ ಭೀಕರ ಪರಿಣಾಮಗಳನ್ನು ಮರೆಮಾಚಲು ಮತ್ತು ತಿರುಚಲು ಹಲವರು ಪ್ರಯತ್ನಿಸುತ್ತಿದ್ದಾರೆ. ಅಂತವರಿಗೆ ವಿವರವಾದ ಉತ್ತರವನ್ನು ನೀಡುವ ಪ್ರಯತ್ನ ಇದಲ್ಲ. ಬದಲಿಗೆ ಪ್ರಸ್ತುತ ಚಲಾವಣೆಯಲ್ಲಿರುವ ಆರು ಪ್ರಮುಖ ವಾಗ್ವಾದಗಳ ಬಗ್ಗೆ ಇಂಗ್ಲೆಂಡಿನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯಾಗಿ ಸರಳ ಮಾತುಗಳಲ್ಲಿ ಉತ್ತರ ನೀಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ತಪ್ಪು ದಾರಿಗೆಳೆಯುವ ವಾಗ್ವಾದ ೧. ಭೂಮಿಯ ಹವಾಮಾನವು ಸದಾ ಬದಲಾವಣೆಗೆ ಒಳಗಾಗುತ್ತಿದೆ. ಮಾನವನಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ತಪ್ಪು ದಾರಿಗೆಳೆಯುವ ವಾಗ್ವಾದ ೨. ಕಾರ್ಬನ್ ಆಕ್ಸೈಡ್‌ನ ಪ್ರಮಾಣ ಹೆಚ್ಚಿರುವುದಕ್ಕೆ ವಾತಾವರಣದಲ್ಲಿ ಉಷ್ಣತೆ ಹೆಚ್ಚಿರುವುದೇ ವಿನಾ ಅದರ ವಿರುದ್ದ ಪರಿಣಾಮವಲ್ಲ.

ತಪ್ಪು ದಾರಿಗೆಳೆಯುವ ವಾಗ್ವಾದ ೩. ಭವಿಷ್ಯದ ಹವಾಮಾನದ ಬಗ್ಗೆ ಮುನ್ಸೂಚನೆ ನೀಡುವ ಕಂಪ್ಯೂಟರ್ ಮಾದರಿಗಳು ನಂಬಲರ್ಹವಲ್ಲ ಮತ್ತು ಅವು ಹಲವು ಊಹೆಗಳನ್ನು ಆಧರಿಸಿವೆ.

ತಪ್ಪು ದಾರಿಗೆಳೆಯುವ ವಾಗ್ವಾದ ೪. ಹವಾಮಾನ ಬದಲಾವಣೆಗೆ ಸೂರ್ಯನೇ ಕಾರಣ. ಉದಾಹರಣೆಗೆ ಸೂರ್ಯನಲ್ಲಿ ಕಂಡುಬರುವ ಸೌರಕಲೆಗಳ ಸಂಖ್ಯೆಗೂ ಭೂಮಿಯಲ್ಲಿ ಉಷ್ಣತೆ ಏರುವುದಕ್ಕೂ ಪ್ರಬಲವಾದ ಸಂಬಂಧವಿದೆ.

ತಪ್ಪು ದಾರಿಗೆಳೆಯುವ ವಾಗ್ವಾದ ೫. ವಾಸ್ತವವಾಗಿ ಬ್ರಹಾಂಡ ಕಿರಣಗಳಿಂದ (ಕಾಸ್ಮಿಕ್ ರೇಗಳು) ಹವಾಮಾನ ಬದಲಾವಣೆಗೆ ಒಳಗಾಗುತ್ತದೆ.

ತಪ್ಪು ದಾರಿಗೆಳೆಯುವ ವಾಗ್ವಾದ ೬. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳ ತೀವ್ರತೆಯನ್ನು ಅತಿ ಹೆಚ್ಚಾಗಿ ಹೇಳಲಾಗುತ್ತಿದೆ. ಅದಕ್ಕೆ ಹೆದರುವ ಮತ್ತು ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿಲ್ಲ.

ಹವಾಮಾನ ಬದಲಾವಣೆಯ ಬಗ್ಗೆ ನಮಗಿರುವ ವೈಜ್ಞಾನಿಕ ತಿಳುವಳಿಕೆ ಸ್ಪಷ್ಟವಾಗಿ ತಿಳಿಸುವುದೇನೆಂದರೆ ಹಸಿರುಮನೆ ಅನಿಲಗಳ ಹೊರಸೂಸುವಿಕೆಯು ಜಾಗತಿಕ ಬಿಸಿಯೇರುವಿಕೆಗೆ ಕಾರಣವಾಗಿದೆ. ವಿಜ್ಞಾನವು ಸವಾಲು ಹಾಗೂ ಚರ್ಚೆಗಳಿಂದ ಮುಂದೆ ಸಾಗುತ್ತದೆ. ಈ ಕ್ರಿಯೆ ಮುಂದುವರೆಯುತ್ತದೆ. ಆದರೆ ಹವಾಮಾನ ವಿಜ್ಞಾನವನ್ನು ಈಗ ಟೀಕೆಮಾಡುತ್ತಿರುವವರಾರೂ ಜಾಗತಿಕ ಬಿಸಿಯೇರುವಿಕೆಯ ಬಗ್ಗೆ ಪರಿಹಾರೋಪಾಯಗಳನ್ನು ಸೂಚಿಸುತ್ತಿಲ್ಲ.

ಹವಾಮಾನ ಬದಲಾವಣೆಯ ತೀವ್ರ ಪರಿಣಾಮವನ್ನು ಕಡಿಮೆ ಮಾಡುವುದಕ್ಕಾಗಿ ವಾತಾವರಣಕ್ಕೆ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಆದಷ್ಟು ಶೀಘ್ರವಾಗಿ ಕಡಿಮೆ ಮಾಡುವ ಅಗತ್ಯವಿದೆಯೆಂದು ವಿಜ್ಞಾನ ನೇರವಾಗಿ ತಿಳಿಸುತ್ತಿದೆ. ಹವಾಮಾನ ಬದಲಾವಣೆಯ ಕೆಲವು ಹರಿಣಾಮಗಳು ಈಗಾಗಲೇ ಅನಿವಾರ್ಯವಾಗಿರುವುದರಿಂದ ನಾವು ಅದರ ಪರಿಣಾಮಗಳಿಗೆ ಸಿದ್ಧತೆಯನ್ನೂ ಮಾಡಿಕೊಳ್ಳಬೇಕು.

ರಾಯಲ್ ಸೊಸೈಟಿಯ ಹವಾಮಾನ ಬದಲಾವಣೆ ಸಲಹಾ ಸಮಿತಿ ಮತ್ತು ಇತರೆ ಪ್ರಮುಖ ತಜ್ಞರ ಸಹಾಯದಿಂದ ಈ ದಸ್ತಾವೇಜನ್ನು ಸಿದ್ಧಪಡಿಸಲಾಗಿದೆ.

ತಪ್ಪುಹಾದಿಗೆಳೆಯುವ ವಾಗ್ವಾದ ೧ :

ಭೂಮಿಯ ಹವಾಮಾನ ಸದಾ ಬದಲಾಗುತ್ತಿದೆ. ಮಾನವನ ಚಟುವಟಿಕೆಗಳಿಗೂ ಇದಕ್ಕೂ ಸಂಬಂಧವಿಲ್ಲ. ಕೈಗಾರಿಕಾ ಕ್ರಾಂತಿಯ ಪೂರ್ವದಲ್ಲಿಯೇ, ಮಾನವ ಬೃಹತ್ ಪ್ರಮಾಣದ ಕಾರ್ಬನ್ ಡೈ ಆಕ್ಸೈಡ್‌ನ್ನು ವಾತಾವರಣಕ್ಕೆ ತುಂಬಿದ. ಭೂಮಿಯ ಬಿಸಿ ವಾತಾವರಣವನ್ನು ಆಗಾಗ್ಗೆ ಅನುಭವಿಸಿದೆ. ಉದಾಹರಣೆಗೆ ಇಂಗ್ಲೆಂಡಿನಲ್ಲಿ ಹೆಚ್ಚು ದ್ರಾಕ್ಷಿ ಬೆಳೆಯುತ್ತಿದ್ದ ಕಾಲದಲ್ಲಿ ಮದ್ಯಮ ಬಿಸಿಯ ಕಾಲಾವಧಿಯಿತ್ತು.

ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ?

ಮಾನವನ ಯಾವುದೇ ರೀತಿಯ ಮಧ್ಯಪ್ರವೇಶವಿಲ್ಲದೆ ಭೂಮಿಯ ಉಷ್ಣ ಅಥವಾ ತಂಪು ಕಾಲಾವಧಿಗಳನ್ನು ಅನುಭವಿಸಿರುವುದು ಸತ್ಯ ಸಂಗತಿ. ಹವಾಮಾನದ ಜಾಗತಿಕ ಬದಲಾವಣೆಗಳಿಗೆ ಹಿಮಯುಗಗಳು ಉತ್ತಮ ಉದಾಹರಣೆ. ಹವಾಮಾನದಲ್ಲಿ ಕೆಲವು ಪ್ರಾದೇಶಿಕ ಬದಲಾವಣೆಗಳೂ ಉಂಟಾಗುತ್ತಿವೆ. ಉದಾಹರಣೆಗೆ “ಮಧ್ಯಮ ಬಿಸಿ ಕಾಲಾವಧಿ”, ಇಂಗ್ಲೆಂಡಿನಲ್ಲಿ ಹೆಚ್ಚು ದ್ರಾಕ್ಷಿ ಬೆಳೆಯುತ್ತಿದ್ದ ಕಾಲದಲ್ಲಿ ಬಿಸಿ ಕಾಲಾವಧಿ ಉಂಟಾಗಿತ್ತು. ಅದೇ ರೀತಿ ಥೇಮ್ಸ್ ನದಿ ಕೆಲ ಸಮಯ ಹಿಮಗಟ್ಟಿತ್ತು. ಅದನ್ನು “ಪುಟ್ಟ ಹಿಮಯುಗ” ಎನ್ನುವರು. ಹವಾಮಾನದ ಈ ಬದಲಾವಣೆಗಳಿಗೆ ಹೋಲಿಸಿದರೆ, ಕಳೆದ ಶತಮಾನದಲ್ಲಿ ಜಾಗತಿಕ ಉಷ್ಣತೆಯ ಸರಾಸರಿಯಲ್ಲಿ ಸುಮಾರು ಮುಕ್ಕಾಲು ಸೆಂಟಿಗ್ರೇಡ್ ಉಷ್ಣಾಂಶ ಹೆಚ್ಚಾಗಿದೆ. ಇದು ಕೇವಲ ನೈಸರ್ಗಿಕ ಕಾರಣಗಳಿಂದಾಗಲು ಸಾಧ್ಯವಿಲ್ಲ.

ಭೂಮಿಯ ಹವಾಮಾನವು ಸಂಕೀರ್ಣ ಹಾಗೂ ಅನೇಕ ಅಂಶಗಳ ಪ್ರಭಾವಕ್ಕೆ ಒಳಗಾಗುವ ವಿಷಯ. ವಿಶೇಷವಾಗಿ ಸೂರ್ಯನ ಸುತ್ತ ಭೂಮಿ ತಿರುಗುವ ಕಕ್ಷೆಯು ಭೂ‌ಇತಿಹಾಸದಲ್ಲಿ ಹಿಮಯುಗಗಳ ಆವರ್ತಗಳು ಉಂಟಾಗುವುದಕ್ಕೆ ಕಾರಣವಾಗಿದೆ. ಅಲ್ಲದೆ ಅಗ್ನಿಪರ್ವತಗಳ ಉಗುಳುವಿಕೆ ಮತ್ತು ಸೂರ್ಯನಿಂದ ಹೊರಸೂಸಲ್ಪಡುವ ಶಕ್ತಿಯಲ್ಲಿನ ವ್ಯತ್ಯಾಸಗಳು ಸಹ ಭೂಮಿಯ ಹವಾಮಾನದ ಮೇಲೆ ಪರಿಣಾಮ ಬೀರುತ್ತವೆ. ನಾವು ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡರೂ ಸಹ ಕಳೆದ ೧೦೦ ವರ್ಷಗಳಲ್ಲಿ ಭೂ ಪ್ರದೇಶ ಹಾಗೂ ಸಾಗರಗಳಲ್ಲಿ ಉಷ್ಣತೆ ಏರುತ್ತಿರುವುದನ್ನು ವಿವರಿಸಲು ಸಾಧ್ಯವಿಲ್ಲ. ಉದಾಹರಣೆಗೆ ನಾವು ಉಷ್ಣತೆಯನ್ನು ೧೮೫೦ರಿಂದ ದಾಖಲಿಸುತ್ತಿದ್ದು, ಕಳೆದ ೧೨ ವರ್ಷಗಳಲ್ಲಿ ೧೧ ವರ್ಷಗಳು ಅತಿ ಹೆಚ್ಚು ಉಷ್ಣತೆಯಿರುವ ವರ್ಷಗಳಾಗಿವೆ.

ಆದ್ದರಿಂದ ಜಾಗತಿಕ ಸರಾಸರಿ ಉಷ್ಣತೆಯನ್ನು ಯಾವುದು ಹೆಚ್ಚು ಮಾಡುತ್ತಿದೆ? ನೈಸರ್ಗಿಕವಾಗಿರುವ ಹಸಿರುಮನೆ ಅನಿಲಗಳು ಭೂಮಿಯ ಸರಾಸರಿ ಉಷ್ಣತೆಯನ್ನು ೩೦ºC ಇರುವಂತೆ ಮಾಡಿವೆ. ಆ ಅನಿಲಗಳಿಲ್ಲದಿದ್ದಲ್ಲಿ ಭೂಮಿಯ ಅತಿ ಶೀತವಿರುವ ಸ್ಥಳವಾಗಿರುತ್ತಿತ್ತು. ಹಸಿರುಮನೆ ಅನಿಲಗಳಾದ ಕಾರ್ಬನ್ ಡೈ ಆಕ್ಸೈಡ್, ಮೀಥೇನ್ ಮತ್ತು ಹೆಚ್ಚಿನದಾಗಿ ನೀರಾವಿಯು ಭೂಮಿಯ ಸುತ್ತ ಹೊದಿಕೆಯಂತೆ ವರ್ತಿಸುತ್ತವೆ.

ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ಈ ಅನಿಲಗಳು ಅವಕಾಶ ನೀಡುತ್ತವೆ. ಆದರೆ ಭೂಮಿಯಿಂದ ಶಾಖವು ಬಾಹ್ಯಾಕಾಶಕ್ಕೆ ಹೋಗದಂತೆ ತಡೆಯುತ್ತವೆ. ಈ ರೀತಿ ಶಾಖವನ್ನು ತಡೆಹಿಡಿಯುವ ಸಾಮರ್ಥ್ಯವು ಕಾರ್ಬನ್ ಡೈ ಆಕ್ಸೈಡ್ ಮತ್ತು ಇತರೆ ಹಸಿರುಮನೆ ಅನಿಲಗಳಿಗಿರುವುದನ್ನು ಕಳೆದ ೨೦೦ ವರ್ಷಗಳಿಂದ ಅರಿತುಕೊಳ್ಳಲಾಗಿದೆ. ಈ ಕ್ರಿಯೆಯು ಅತ್ಯಂತ ಸ್ಪಷ್ಟವಾಗಿ ದೃಢೀಕರಣಗೊಂಡ ವಿಜ್ಞಾನವಾಗಿದೆ.

ವಾಯುಗೋಳದಲ್ಲಿ ಹಸಿರುಮನೆ ಅನಿಲಗಳ ಮಟ್ಟ ಹೆಚ್ಚಿದಂತೆ ಹೆಚ್ಚೆಚ್ಚು ಶಾಖ ತಡೆಹಿಡಿಯಲ್ಪಡುತ್ತದೆ ಮತ್ತು ಜಾಗತಿಕ ಉಷ್ಣತೆ ಹೆಚ್ಚಾಗುತ್ತಾ ಹೋಗುತ್ತದೆ. ಈ ಪರಿಣಾಮವನ್ನೇ “ಜಾಗತಿಕ ಬಿಸಿಯೇರುವಿಕೆ” – ಗ್ಲೋಬಲ್ ವಾರ್ಮಿಂಗ್ ಎನ್ನುವರು. ಧೃವ ಪ್ರದೇಶದ ಹಿಮ ಬಂಡೆಗಳೊಳಗೆ ಬಂಧಿಸಲ್ಪಟ್ಟಿರುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಆ ಅಧ್ಯಯನದ ಪ್ರಕಾರ ಹಾಲಿ ವಾಯುಗೋಳದಲ್ಲಿನ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣಕ್ಕೆ ಹೋಲಿಸಿದರೆ ಶೇಕಡ ೩೫ರಷ್ಟು ಹೆಚ್ಚಾಗಿದೆ. ಫಾಸಿಲ್ ಇಂಧನಗಳ ದಹನ, ಸಿಮೆಂಟ್ ಉತ್ಪಾದನೆ ಮತ್ತು ವಿಶ್ವದ ಅರಣ್ಯಗಳನ್ನು ಸುಟ್ಟುಹಾಕಿರುವುದೇ ಈ ಏರಿಕೆಗೆ ಪ್ರಮುಖ ಕಾರಣವೆಂದು ಅನಿಲಬಳ ವಿಕಿರಣಪಟುತ್ವ ಮತ್ತು ರಾಸಾಯಮಿಕ ಸಂಯೋಜನೆಯ ಅಧ್ಯಯನದಿಂದ ತಿಳಿದು ಬಂದಿದೆ. ವಾಯುಗೋಳದಲ್ಲಿ ಕಾರ್ಬನ್ ಡೈ ಆಕ್ಸೈಡ್ ಮತ್ತು ಇತರೆ ಹಸಿರು ಮನೆ ಅನಿಲಗಳು ಎಷ್ಟು ಪ್ರಮಾಣದಲ್ಲಿ ಹೆಚ್ಚಾದರೆ, ಜಾಗತಿಕ ಉಷ್ಣತೆ ಎಷ್ಟು ಹೆಚ್ಚಾಗುವುದೆಂದು ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೋ, ಅಷ್ಟೇ ಪ್ರಮಾಣದಲ್ಲಿ ಜಾಗತಿಕ ಉಷ್ಣತೆ ಹೆಚ್ಚಾಗಿದೆ.

ವಾಯುಗೋಳದಲ್ಲಿ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣ ಹೆಚ್ಚಾಗಿರುವುದಕ್ಕೆ ಅಗ್ನಿ ಪರ್ವತಗಳಿಂದ ಉಂಟಾಗಿರುವ ಹೊರಸೂಸುವಿಕೆಯೇ ಕಾರಣವೆಂದು ಆರೋಪಿಸಲಾಗುತ್ತಿದೆ. ಆದರೆ ಮಾನವನ ಚಟುವಟಿಕೆಗಳಿಂದ ಉಂಟಾಗುವ ಹೊರಸೂಸುವಿಕೆಯಲ್ಲಿನ ಕೇವಲ ಒಂದರಷ್ಟು ಮಾತ್ರ ಈ ಅಗ್ನಿ ಪರ್ವತಗಳಿಂದ ಉಂಟಾಗುತ್ತಿದೆ ಎಂಬುದು ವಾಸ್ತವಿಕ ಸತ್ಯ.

 

ತಪ್ಪುಹಾದಿಗೆಳೆಯುವ ವಾಗ್ವಾದ ೨ :

ಉಷ್ಣತೆ ಹೆಚ್ಚಾದ ಕಾರಣದಿಂದ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಿದೆಯೇ ವಿನಾ ಅದರ ವಿರುದ್ಧ ಪರಿಣಾಮವಲ್ಲ. ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ?

ಸೂರ್ಯನ ಸುತ್ತ ತಿರುಗುವ ಭೂಮಿಯ ಕಕ್ಷೆಯಲ್ಲಿನ ಬದಲಾವಣೆಗಳಿಂದ ಉಷ್ಣತೆಯಲ್ಲಿ ಏರುಪೇರುಂಟಾಗಿ ಹಿಮಯುಗಗಳುಂಟಾದವು ಎಂಬುದು ಸತ್ಯವೇನೋ ಹೌದು. ಇದರಿಂದ ವಾಯುಗೋಳದಲ್ಲಿನ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣದಲ್ಲಿಯೂ ಬದಲಾವಣೆಗಳಾದವು. ಹಿಮಬಂಡೆಗಳೊಳಗೆ ಹುದುಗಿರುವ ಅನಿಲಗಳ ಅಂಕಿ ಅಂಶಗಳ ಆಧಾರದ ಮೇಲೆ ಮೊದಲು ಉಷ್ಣತೆ ಹೆಚ್ಚಾಯಿತು ಮತ್ತು ಅನಂತರ ಕೆಲವು ಶತಮಾನಗಳವರೆಗೆ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣ ಹೆಚ್ಚಾಯಿತು. ಇದಕ್ಕೆ ಸ್ಪಷ್ಟವಾದ ಕಾರಣಗಳು ಗೊತ್ತಿಲ್ಲದಿದ್ದರೂ, ಕೆಲವು ಸೂಚಿಗಳಿವೆ. ಸಾಗರಗಳು ಕಾರ್ಬನ್ ಡೈ ಆಕ್ಸೈಡನ್ನು ಬಿಸಿಯಾದಾಗ ಹೊರಸೂಸುತ್ತವೆ ಮತ್ತು ತಂಪಾದಾಗ ಹೀರುತ್ತವೆ. ಜೊತೆಗೆ ಮಣ್ಣು ಸಹ ಬಿಸಿಯಾದಾಗ ಹಸಿರು ಮನೆ ಅನಿಲಗಳನ್ನು ಹೊರಸೂಸುತ್ತದೆ. ಹೀಗೆ ವಾಯುಗೋಳದಲ್ಲಿ ಹೊಕ್ಕಾಗ ಹಸಿರುಮನೆ ಅನಿಲಗಳು ಮತ್ತಷ್ಟು ಬಿಸಿಯಾಗುವುದಕ್ಕೆ ಕಾರಣವಾಗುತ್ತವೆ. ಇದೊಂದು ಪಾಸಿಟಿವ್ ಫೀಡ್ ಬ್ಯಾಕ್ ರೀತಿ ಅಂದರೆ ಮತ್ತಷ್ಟು ಬಿಸಿಯಾಗುವುದಕ್ಕೆ ಸಹಾಯಕವಾಗುವ ಕ್ರಿಯೆ.

ಕಳೆದ ನೂರು ವರ್ಷಗಳಲ್ಲಿ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣದಲ್ಲಿ ಸುಮಾರು ಶೇಕಡ ೩೦ರಷ್ಟು ತೀವ್ರ ಹೆಚ್ಚಳವಾಗಿರುವುದಕ್ಕೆ ಕೇವಲ ನೈಸರ್ಗಿಕ ಕ್ರಿಯೆಗಳೇ ಕಾರಣಗಳಲ್ಲ. ಏಕೆಂದರೆ ಹೆಚ್ಚಳಗೊಂಡಿರುವ ಕಾರ್ಬನ್ ಡೈ ಆಕ್ಸೈಡ್‌ನಲ್ಲಿ ಅತಿ ಹೆಚ್ಚು ಪ್ರಮಾಣವು ಫಾಸಿಲ್ ಇಂದನಗಳಾದ ಪೆಟ್ರೋಲ್, ಡೀಸೆಲ್, ಕಲ್ಲಿದ್ದಲು, ಸೀಮೆ‌ಎಣ್ಣೆಗಳ ದಹನದಿಂದಲೇ ಉಂಟಾಗಿದೆ ಎಂಬುದನ್ನು ರಾಸಾಯನಿಕ ವಿಶ್ಲೇಷಣೆಯಿಂದ ತಿಳಿದುಬಂದಿದೆ. ತಪ್ಪುಹಾದಿಗೆಳೆಯುವ ವಾಗ್ವಾದ ೧ರಲ್ಲಿ ಪ್ರಸ್ತಾಪಿಸಿರುವಂತೆ ಮಾನವನ ಚಟುವಟಿಕೆಗಳಿಂದ ಉಂಟಾಗಿರುವ ಕಾರ್ಬನ್ ಡೈ ಆಕ್ಸೈಡೇ ಕಳೆದ ೫೦ ವರ್ಷಗಳಲ್ಲಿ ಉಂಟಾಗಿರುವ ಉಷ್ಣತೆ ಏರುವಿಕೆಗೆ ನೇರ ಕಾರಣವೆಂಬುದು ಸ್ಪಷ್ಟವಾಗಿದೆ. ಈ ವಿವರಣೆಯನ್ನು ಬೆಂಬಲಿಸುವ ಅನೇಕ ಸಾಕ್ಷ್ಯಾಧಾರಗಳಿವೆ ಮತ್ತು ವಿರೋಧಿಸುವ ಯಾವ ಸಾಕ್ಷ್ಯಾಧಾರಗಳೂ ಇಲ್ಲ.

ಮಾನವನ ಚಟುವಟಿಕೆಯಿಂದ ಉಂಟಾಗಿರುವ ಹಸಿರುಮನೆ ಅನಿಲಗಳು ನೈಸರ್ಗಿಕ ಕ್ರಿಯೆಗಳನ್ನು ಪ್ರಚೋದಿಸಿ ಮತ್ತಷ್ಟು ಹಸಿರುಮನೆ ಅನಿಲಗಳು ಹೊರಸೂಸುವುದಕ್ಕೆ ಮತ್ತು ಮೇಲೆ ಸೂಚಿಸಿರುವಂತೆ, “ಪಾಸಿಟಿವ್ ಫೀಡ್‌ಬ್ಯಾಕ್” ಕ್ರಿಯೆ ಒಳಗಾಗಬಹುದು.

 

ತಪ್ಪು ಹಾದಿಗೆಳೆಯುವ ವಾಗ್ವಾದ – ೩

ಭವಿಷ್ಯದ ಹವಾಮಾನದ ಬಗ್ಗೆ ಮುನ್ಸೂಚನೆ ನೀಡುವ ಕಂಪ್ಯೂಟರ್ ಮಾದರಿಗಳು ನಂಬಲರ್ಹವಲ್ಲ ಮತ್ತು ಅವು ಹಲವು ಊಹೆಗಳನ್ನು ಆಧರಿಸಿವೆ.

 

ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ?

ವಾಸ್ತವವಾಗಿ ಹವಾಮಾನ ಹೇಗೆ “ಕೆಲಸ ಮಾಡುತ್ತದೆ” ಎಂಬುದನ್ನು ತಿಳಿಸುವ ಆಧುನಿಕ ಹವಾಮಾನ ಮಾದರಿಗಳು ಹೆಚ್ಚೆಚ್ಚು ನಿಖರಗೊಳ್ಳುತ್ತಿವೆ. ಮೂಲಭೂತ ವೈಜ್ಞಾನಿಕ ತತ್ವಗಳ ತಿಳುವಳಿಕೆ, ಹವಾಮಾನದ ಅವಲೋಕನ ಮತ್ತು ಹವಾಮಾನ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ನಮ್ಮ ತಿಳುವಳಿಕೆಯನ್ನು ಈ ಮಾದರಿಗಳು ಅವಲಂಬಿಸಿವೆ.

ಹವಾಮಾನ ವ್ಯವಸ್ಥೆಯ ವಿವಿಧ ಘಟಕಗಳಾದ ಮೋಡಗಳು, ಸೂರ್ಯ, ಸಾಗರಗಳು, ಜೀವ ಪ್ರಪಂಚ, ವಾಯುಗೋಳದಲ್ಲಿನ ಮಲಿನ ವಸ್ತುಗಳು ಇತ್ಯಾದಿಗಳು ಹೇಗೆ ವರ್ತಿಸುತ್ತವೆ ಮತ್ತು ಪ್ರಕ್ರಿಯೆಗಳಿಗೆ ಒಳಗಾಗುತ್ತವೆ ಎಂಬುದನ್ನು ಆಧರಿಸಿ ಕಂಪ್ಯೂಟರ್ ಮಾದರಿಗಳನ್ನು ಸೃಷ್ಟಿಸಲಾಗಿದೆ. ಇವುಗಳ ಸಹಾಯದಿಂದ ವಿಜ್ಞಾನಿಗಳು ಹವಾಮಾನದ ಬದಲಾವಣೆಗಳು ಕಳೆದ ಶತಮಾನದಲ್ಲಿ ಹೇಗುಂಟಾದವು ಎಂಬುದನ್ನು ತಿಳಿಸಲು ಸಾಧ್ಯವಾಗಿದೆ. ಹವಾಮಾನ ವ್ಯವಸ್ಥೆಯ ಈ ತಿಳುವಳಿಕೆಯನ್ನು ಉಪಯೋಗಿಸಿಕೊಂಡು, ಮಾನವನ ಚಟುವಟಿಕೆಗಳು ಭವಿಷ್ಯದಲ್ಲಿ ಎಷ್ಟಾಗಬಹುದೆಂಬುದನ್ನು ಊಹಿಸಿ, ಅದರ ಪರಿಣಾಮದಿಂದ ಭವಿಷ್ಯದ ಹವಾಮಾನ ಸ್ಥಿತಿ ಹೇಗಿರಬಹುದೆಂಬುದನ್ನು ಮುಂಚಿತವಾಗಿಯೇ ಊಹಿಸಲು ವಿಜ್ಞಾನಿಗಳಿಗೆ ಸಾಧ್ಯವಾಗಿದೆ.

ಕಂಪ್ಯೂಟರ್ ಮಾದರಿಗಳು ಭವಿಷ್ಯದ ಹವಾಮಾನವನ್ನು ಕರಾರುವಾಕ್ಕಾಗಿ ಊಹಿಸಲು ಸಾಧ್ಯವಿಲ್ಲವೆಂಬುದು ಪ್ರಮುಖವಾಗಿ ಗಮನಿಸಬೇಕಾದ ಅಂಶ. ಏಕೆಂದರೆ ಮುಂದೆ ಏನಾಗಬಹುದೆಂಬ ಬಗ್ಗೆ ಗೊತ್ತಿಲ್ಲದ ಅನೇಕ ಅಂಶಗಳಿರುತ್ತವೆ. ಭವಿಷ್ಯದಲ್ಲಿ ಭೂಮಿಯ ಮೇಲಿನ ಸಂಗತಿಗಳು ಕ್ರಿಯೆಗಳ ಬಗ್ಗೆ ವಿವಿಧ ದೃಷ್ಟಿಕೋನಗಳನ್ನು ಆಧರಿಸಿ ಭವಿಷ್ಯದ ಹವಾಮಾನ ಸ್ಥಿತಿಯ ಅಂದಾಜನ್ನು ವಿಜ್ಞಾನಿಗಳು ಮಾದರಿಯಲ್ಲಿ ಪ್ರತಿಬಿಂಬಿಸುತ್ತಾರೆ. ಮಾನವ ಜನಸಂಖ್ಯೆ ಎಷ್ಟು ಹೆಚ್ಚಬಹುದು, ಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಯಾವ ನೀತಿ ನಿಯಮಗಳನ್ನು ಜಾರಿ ಮಾಡಬಹುದು ಮತ್ತು ವಾಯುಗೋಳಕ್ಕೆ ಎಷ್ಟು ಕಾರ್ಬನ್ ಡೈ ಆಕ್ಸೈಡ್ ಮತ್ತು ಇತರೆ ಹಸಿರುಮನೆ ಅನಿಲಗಳು ಸೇರ್ಪಡೆಯಾಗುತ್ತದೆ ಎಂಬ ಬಗ್ಗೆ ಪ್ರತಿ ದೃಷ್ಟಿಕೋನವು ವಿಭಿನ್ನ ಊಹೆಗಳನ್ನು ಹೊಂದಿರುತ್ತದೆ. ಆದ್ದರಿಂದ ಭವಿಷ್ಯದ ಹವಾಮಾನದ ಬಗ್ಗೆ ಊಹಿಸಲ್ಪಡುವ ಪ್ರತಿ ಮಾದರಿಯು ಹೆಚ್ಚಲ್ಪಡುವ ಉಷ್ಣತೆಯ ಬಗ್ಗೆ ವಿವಿಧ ಸಿದ್ಧತೆಗಳನ್ನು ನೀಡುತ್ತದೆ.

ಆದರೆ ಈ ವ್ಯತ್ಯಾಸಗಳು ಒಂದು ನಿರ್ದಿಷ್ಟ ಪರಿಧಿಯಲ್ಲಿರುತ್ತವೆ.

ಈಗ ಹವಾಮಾನದ ಮಾದರಿಗಳು ಜಾಗತಿಕ ಹವಾಮಾನದಲ್ಲಿನ ಹಿಂದಿನ ಹಾಗೂ ಭವಿಷ್ಯದ ಬದಲಾವಣೆಗಳನ್ನು ಸರಿಸುಮಾರು ನಿಖರವಾಗಿ ತಿಳಿಸಬಲ್ಲವಾಗಿವೆ. ಆದರೆ ಜಾಗತಿಕ ಹವಾಮಾನ ಬದಲಾವಣೆಗಳಿಂದ ಸ್ಥಳೀಯ ಅಥವಾ ಪ್ರಾಂತೀಯವಾಗಿ ಉಂಟಾಗುವ ಪರಿಣಾಚಗಳನ್ನು ಸ್ಟಷ್ಟವಾಗಿ ತಿಳಿಸುವಷ್ಟು ಅಭಿವೃದ್ಧಿಯಾಗಿಲ್ಲ. ಇಷ್ಟಾದರೂ ಅವು ಭವಿಷ್ಯದ ಹವಾಮಾನದ ಬದಲಾವಣೆಯ ದಿಕ್ಕನ್ನು ತೋರಿಸುವಷ್ಟು ನಂಬಲರ್ಹವಾಗಿವೆ. ಆಧುನಿಕ ತಂತ್ರಜ್ಞಾನಗಳಿಂದ ಹಾಗೂ ತಂತ್ರವಿಧಾನಗಳಿಂದ ಇವುಗಳ ವಿಶ್ವಾಸಾರ್ಹತೆ ನಿರಂತರವಾಗಿ ಉತ್ತಮವಾಗುತ್ತಿದೆ.

 

ತಪ್ಪುಹಾದಿಗೆಳೆಯುವ ವಾಗ್ವಾದ ೪:

ಜಾಗತಿಕ ಬಿಸಿಯೇರುವಿಕೆಗೂ ಸೂರ್ಯನಿಗೂ ಸಂಬಂಧವಿದೆ. ಉದಾಹರಣೆಗೆ ಸೂರ್ಯನಲ್ಲಿರುವ ಕಲೆಗಳ ಸಂಖ್ಯೆಗೂ ಮತ್ತು ಭೂಮಿಯಲ್ಲಿನ ಉಷ್ಣತೆ ಏರುವುದಕ್ಕೂ ಪ್ರಬಲ ಸಂಬಂಧವಿದೆ.

 

ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ?

ಹವಾಮಾನದ ಮೇಲೆ ಪ್ರಭಾವ ಬೀರುವ ಅನೇಕ ಅಂಶಗಳಲ್ಲಿ ಸೂರ್ಯನ ಚಟುವಟಿಕೆಗಳಲ್ಲಿನ ಬದಲಾವಣೆಯು ಒಂದು. ಆದರೆ ನಾವು ೨೦ನೇ ಶತಮಾನದಲ್ಲಿ ಕಾಣುತ್ತಿರುವ ಜಾಗತಿಕ ಸರಾಸರಿ ಉಷ್ಣತೆಯ ಎಲ್ಲ ಬದಲಾವಣೆಗಳಿಗೂ ಸೌರಕಲೆಗಳೇ ಕಾರಣವಾಗಲು ಸಾಧ್ಯವಿಲ್ಲ.

ಸೌರ ಚಟುವಟಿಕೆಗಳು ಭೂಮಿಯ ಹವಾಮಾನದ ಮೇಲೆ ಸ್ವಲ್ಪ ಪ್ರಮಾಣದ ಆದರೆ ಗುರುತರವಾದ ಪ್ರಭಾವ ಬೀರುತ್ತದೆ. ಸೂರ್ಯನ “ಸಕ್ರಿಯಾ” ಹಂತ ಹೆಚ್ಚಾದಾಗ ಅಂದರೆ ಹೆಚ್ಚು ಸೌರಕಲೆಗಳು ಸೂರ್ಯನ ಮೇಲ್ಮೈಯಲ್ಲಿ ಗೋಚರಿಸಿದಾಗ, ಸೂರ್ಯ ಅಧಿಕ ಬೆಳಕು ಹಾಗೂ ಶಾಖವನ್ನು ಹೊರಸೂಸುತ್ತದೆ. ೨೦ನೇ ಶತಮಾನದ ಮೊದಲ ಭಾಗದಲ್ಲಿ ಭೂಹವಾಮಾನದಲ್ಲಿ ಸ್ವಲ್ಪ ಉಷ್ಣತೆ ಹೆಚ್ಚಾಗಿದ್ದಕ್ಕೂ ಮತ್ತು ಸೌರಚಟುವಟಿಕೆಗಳಿಗೂ ಸಂಬಂಧವಿರುವುದಕ್ಕೆ ಆಧಾರಗಳನ್ನು ಹುಡುಕಬೇಕು. ಕಳೆದ ೩೦ ವರ್ಷಗಳಲ್ಲಿ ಸೌರ ಚಟುವಟಿಕೆಗಳಲ್ಲಿ ಅಂತಹ ಗಮನಾರ್ಹ ಬದಲಾವಣೆಗಳಿಲ್ಲವೆಂಬುದನ್ನು ಉಪಗ್ರಹಗಳ ಸಹಾಯದಿಂದ ಅಂಕಿ ಅಂಶಗಳು ತೋರಿಸುತ್ತವೆ. ನಿಖರವಾಗಿ ಹೇಳುವುದಾದರೆ, ಸೌರ ಚಟುವಟಿಕೆಗಳು ಸ್ವಲ್ಪ ಕಡಿಮೆ ಆಗಿವೆ ಎಂಬುದಕ್ಕೆ ಆಧಾರಗಳಿವೆ. ಆದ್ದರಿಂದ ಇತ್ತೀಚೆಗೆ ಜಾಗತಿಕ ಉಷ್ಣತೆ ಹೆಚ್ಚಾಗಿರುವುದಕ್ಕೆ ಸೌರಕಲೆಗಳು ಕಾರಣವಲ್ಲ.

ಉಷ್ಣತೆಯಲ್ಲಾಗಿರುವ ಬದಲಾವಣೆ ಮತ್ತು ಪ್ರಮಾಣವನ್ನು ಅರಿಯಬೇಕಾದರೆ ನೈಸರ್ಗಿಕ ಹಾಗೂ ಮಾನವ ನಿರ್ಮಿತ ಕಾರಣಗಳೆರಡನ್ನೂ ತಿಳಿದುಕೊಳ್ಳಬೇಕು. ಉದಾಹರಣೆಗೆ ಬೃಹತ್ ಅಗ್ನಿಪರ್ವತಗಳ ಉಗುಳುವಿಕೆಯಿಂದ ಅಪಾರ ಪ್ರಮಾಣದ ಹಾರುಬೂದಿ ವಾಯುಗೋಳವನ್ನು ಸೇರುತ್ತದೆ ಮತ್ತು ತಂಪು ಪರಿಣಾಮ ಉಂಟುಮಾಡುತ್ತದೆ. ಕೆಲವು ವರ್ಷಗಳವರೆಗೆ ಹಾರುಬೂದಿಯ ಕಣಗಳು ವಾಯುಗೋಳದಲ್ಲಿ ಉಳಿಯುವುದರಿಂದ ಸೂರ್ಯನ ಶಕ್ತಿಯು ಮೇಲ್ಮೈ ತಲುಪದಂತೆ ತಡೆಯುತ್ತವೆ. ಅದೇ ರೀತಿ, ಫಾಸಿಲ್ ಇಂಧನಗಳ ದಹನದಿಂದ ಸಲ್ಫೇಟ್ ಏರೋಸಾಲ್‌ಗಳೆಂಬ ಕಣಗಳು ಉತ್ಪತ್ತಿಯಾಗಿ ಹವಾಮಾನವನ್ನು ತಂಪುಮಾಡಲು ಕಾರಣವಾಗುತ್ತವೆ.

೨೦ನೇ ಶತಮಾನದ ಮೊದಲ ಭಾಗದಲ್ಲಿ ಅಧಿಕವಿದ್ದ ಸೌರ ಚಟುವಟಿಕೆ ಮತ್ತು ಮಾನವ ನಿರ್ಮಿತ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಳದಿಂದ ಹವಾಮಾನದ ಉಷ್ಣತೆ ಹೆಚ್ಚಾಯಿತು. ೧೯೪೦ ಮತುತ ೧೯೭೦ರ ನಡುವಿನ ಸಮಯದಲ್ಲಿ ಅಧಿಕಗೊಂಡ ಕಾರ್ಬನ್ ಡೈ ಆಕ್ಸೈಡ್‌ನ ಪರಿಣಾಮವನ್ನು ವಾಯುಗೋಳದಲ್ಲಿದ್ದ ಸಲ್ಫೇಟ್ ಏರೋಸಾಲ್ ಕಣಗಳು ಬಹುಶಃ ಕಡಿಮೆ ಮಾಡಿವೆ. ಜೊತೆಗೆ ಆ ಸಮಯದಲ್ಲಿ ಸೌರ ಚಟುವಟಿಕೆ ಮತ್ತು ಅಗ್ನಿ ಪರ್ವತಗಳ ಉಗುಳುವಿಕೆಯೂ ಕಡಿಮೆಯಾಗಿತ್ತು. ಹಾಗಾಗಿ ಈ ಕಾಲಘಟ್ಟದಲ್ಲಿ ಜಾಗತಿಕ ಉಷ್ಣತೆಯು ಕೆಳಮುಖವಾಗಿತ್ತು.

ಆದರೆ ೨೦ನೇ ಶತಮಾನದ ಕೊನೆಯ ಭಾಗದಲ್ಲಿ ೧೯೪೦ರಲ್ಲಿದ್ದ ಉಷ್ಣತೆಗಿಂತ ಹೆಚ್ಚಾಯಿತು. ವಿಶ್ವದ ಕೆಲವು ಪ್ರದೇಶಗಳಲ್ಲಿ ಸಲ್ಫೇಟ್ ಮಾಲಿನ್ಯವನ್ನು ಕಡಿಮೆಮಾಡಲು ಕೈಗೊಂಡ ಕಠಿಣ ಕ್ರಮಗಳಿಂದ ಕೈಗಾರಿಕಾ ಏರೋಸಾಲ್‌ಗಳಿಂದ ಉಂಟಾಗುತ್ತಿದ್ದ ತಂಪು ಪರುಣಾಮ ಕಡಿಮೆಯಾಯಿತು. ಕಾರ್ಬನ್ ಡೈ ಆಕ್ಸೈಡ್ ಹೆಚ್ಚಳದಿಂದ ಜಾಗತಿಕ ಉಷ್ಣತೆ ಹೆಚ್ಚಾಗತೊಡಗಿತು. ಉಷ್ಣತೆಯ ಹೆಚ್ಚಳವನ್ನು ಆಗಾಗ್ಗೆ ಉಂಟಾದ ಅಗ್ನಿ ಪರ್ವತಗಳ ಉಗುಳುವಿಕೆಯು ಸ್ವಲ್ಪ ಕಡಿಮೆ ಮಾಡಿದೆ.

ತಪ್ಪುಹಾದಿಗೆಳೆಯುವ ವಾಗ್ವಾದ ೫

ಬ್ರಹ್ಮಾಂಡದ ಕಿರಣಗಳು (ಕಾಸ್ಮಿಕ್ ಕಿರಣಗಳು) / ವಾಸ್ತವವಾಗಿ ಹವಾಮಾನದ ಮೇಲೆ ಪರಿಣಾಮ ಬೀರಿವೆ

ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ?

ಬ್ರಹಾಂಡದ ಕಿರಣಗಳು ಹವಾಮಾನದ ಮೇಲೆ ಯಾವ ಪರಿಣಾಮ ಉಂಟುಮಾಡುತ್ತವೆ ಎಂಬ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲ. ಒಂದುವೇಳೆ ಪರಿಣಾಮವಿದ್ದರೆ, ಅದರ ಪ್ರಮಾಣ ಗೌಣವಿರುವ ಸಾದ್ಯತೆ ಹೆಚ್ಚು. ಬ್ರಹಾಂಡದ ಕಿರಣಗಳೆಂದರೆ ಬಾಹ್ಯಾಕಾಶದಿಂದ ಬರುವ ವೇಗವಾಗಿ ಚಲಿಸುವ ಕಣಗಳು. ಅವು ವಾಯುಗಳಳದಲ್ಲಿ ವಿದ್ಯುತ್ ಆವೇಶವನ್ನು ಬಿಡುಗಡೆ ಮಾಡುತ್ತವೆ.

ಬ್ರಹಾಂಡದ ಕಿರಣಗಳು ಮೋಡಗಳ ರಚನೆಯಲ್ಲಿ ಪಾತ್ರವಹಿಸುವ ಕಣಗಳ ಉತ್ಪತ್ತಿಯಲ್ಲಿ ಪಾತ್ರ ವಹಿಸುತ್ತೆಂಬುದು ಪ್ರಯೋಗಾಲಯಗಳಲ್ಲಿ ಕೈಗೊಂಡ ಪ್ರಯೋಗಗಳಿಂದ ತಿಳಿದುಬಂದಿದೆ. ಒಂದು ವೇಳೆ ವಾಯುಗೋಳದಲ್ಲಿ ಈ ಕ್ರಿಯೆ ಅದೇ ರೀತಿ ನಡೆದಿದ್ದರೆ, ಅದರಿಂದ ಅಧಿಕ ಮೋಡಗಳು ಉಂಟಾಗುತ್ತವೆ. ಮೋಡಗಳು ಸೂರ್ಯನ ಕಿರಣಗಳನ್ನು ಬಾಹ್ಯಾಕಾಶಕ್ಕೆ ಪ್ರತಿಫಲಿಸುವುದರಿಂದ ಹವಾಮಾನ ತಂಪಾಗಲು ಸಾಧ್ಯವಾಗುತ್ತದೆ. ಇದರ ಬಗ್ಗೆ ಸ್ಪಷ್ಟ ಸಾಕ್ಷ್ಯಾಧಾರಗಳಿಲ್ಲ. ಈ ಪ್ರಕ್ರಿಯೆಯ ಎಲ್ಲ ಹಂತಗಳು ವಾಸ್ತವವಾಗಿ ಉಂಟಾಗುತ್ತವೆ ಎಂಬುದು ಊಹಾತ್ಮಕವಾದುದು. ಆದರೆ ಕೆಲವು ಹಂತಗಳು ಉಂಟಾಗುತ್ತಿರಬಹುದು.

ಈ ಪ್ರಕ್ರಿಯೆಯು ಭೂಮಿಯ ಹವಾಮಾನದ ಮೇಲೆ ಸೂರ್ಯನ ಪ್ರಭಾವ ಹೆಚ್ಚಿಸಲು ಕಾರಣವಾಗುತ್ತದೆಂದು ಕೆಲವರು ಪ್ರಸ್ತಾಪಿಸಿದ್ದಾರೆ. ಸೂರ್ಯ ಹೆಚ್ಚು ಸಕ್ರಿಯವಾಗಿದ್ದಾಗ, ಅದರ ಆಯಸ್ಕಾಂತ ಬಲವು ಹೆಚ್ಚಾಗುತ್ತದೆ. ಇದರಿಂದ ಬ್ರಹ್ಮಾಂಡ ಕಿರಣಗಳು ಭೂಮಿಯಿಂದ ದೂರ ಸಾಗುತ್ತದೆ. ಆದ್ದರಿಂದ ಹೆಚ್ಚು ಸಕ್ರಿಯವಾಗಿರುವ ಸೂರ್ಯನಿಂದಾಗಿ ಕೆಲವೇ ಬ್ರಹ್ಮಾಂಡ ಕಿರಣಗಳು ಭೂಮಿಯನ್ನು ತಲುಪುತ್ತವೆ. ಇದರಿಂದ ಕಡಿಮೆ ಸಂಖ್ಯೆಯ ಮೋಡಗಳಾಗುತ್ತವೆ. ಆದ್ದರಿಂದ ಭೂಮಿಯಲ್ಲಿ ಅಧಿಕ ಉಷ್ಣತೆ ಉಂಟಾಗುತ್ತದೆ.

ಆದರೆ ಮೋಡಗಳು ಮತ್ತು ಬ್ರಹ್ಮಾಂಡ ಕಿರಣಗಳ ನಡುವೆ ಇರಬಹುದಾದ ಸಂಬಂಧವು ಅತ್ಯಂತ ಗೌಣವಾದುದು ಎಂಬುದನ್ನು ಮೋಡಗಳು ಮತ್ತು ಬ್ರಹ್ಮಾಂಡ ಕಿರಣಗಳ ಅವಲೋಕವ ತೋರಿಸಿದೆ. ಒಂದು ವೇಳೆ ಬ್ರಹ್ಮಾಂಡ ಕಿರಣಗಳು ಪರಿಣಾಮಕಾರಿ ಪ್ರಭಾವವನ್ನು ಹೊಂದಿದ್ದರೂ ಸಹ, ಸೌರ ಚಟುವಟಿಕೆಯು ಕಳೆದ ಕೆಲವು ದಶಕಗಳಲ್ಲಿ ಅತ್ಯಂತ ಕಡಿಮೆ ಬದಲಾಗಿದೆ. ಇದು ಇತ್ತೀಚೆಗೆ ಅಧಿಕಗೊಂಡಿರುವ ಉಷ್ಣತೆಯನ್ನು ವಿವರಿಸುವುದಿಲ್ಲ.

 

ತಪ್ಪು ಹಾದಿಗೆಳೆಯುವ ವಾಗ್ವಾದ – ೬

ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಅತಿ ಹೆಚ್ಚು ಎಂದು ಹೇಳುತ್ತಿದ್ದಾರೆ. ಆದರೆ ಅಷ್ಟೇನು ಭಯಪಡಬೇಕಿಲ್ಲ. ತುರ್ತು ಕ್ರಮಗಳ ಅಗತ್ಯವೂ ಇಲ್ಲ.

ಹವಾಮಾನ ಬದಲಾವಣೆಯ ಅಂತರ ಸರ್ಕಾರಿ ಸಮಿತಿಯು (Intergovernmental panel on climate change (IPCC)) ವಿಶ್ವದ ಹವಾಮಾನ ಬದಲಾವಣೆಯ ಅಧ್ಯಯನದ ಶ್ರೇಷ್ಠ ಸಂಸ್ಥೆಯಾಗಿದೆ. ಈ ಸಂಸ್ಥೆಯ ಪ್ರಕಾರ ಈ ಶತಮಾನದಲ್ಲಿ ೨ರಿಂದ ೩ºCನಷ್ಟು ಸರಾಸರಿ ಜಾಗತಿಕ ಉಷ್ಣತೆ ಅಧಿಕವಾಗುತ್ತದೆ. ಕಳೆದ ೧೦,೦೦೦ ವರ್ಷಗಳಲ್ಲಿ ಭೂಮಿ ಅನುಭವಿಸದೆ ಇದ್ದಷ್ಟು ಉಷ್ಣತೆಯನ್ನು ಈಗ ಭೂಮಿ ಅನುಭವಿಸಬೇಕಾಗಿತ್ತದೆ. ಅನೇಕ ಜನರು ಮತ್ತು ಪರಿಸರ ವ್ಯವಸ್ಥೆಗಳು ಹವಾಮಾನ ಬದಲಾವಣೆಯ ವೇಗ ಮತ್ತು ಪರಿಣಾಮಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ ಹವಾಮಾನ ಬದಲಾವಣೆಯಿಂದ ಭೂಮಿಯ ಕೆಲವು ಪ್ರದೇಶಗಳಿಗೆ ಅನುಕೂಲವಾಗುತ್ತದೆ. ಉದಾಹರಣೆಗೆ ವಿಶ್ವದ ಬಹುತೇಕ ಉತ್ತರ ಗೋಳದ ಪ್ರದೇಶಗಳು ಬೆಳೆಗಳಿಗೆ ಅನುಕೂಲವಾಗುವಂತಹ ದೀರ್ಘಾವಧಿ ಸಮಯ ಹೊಂದುತ್ತವೆ. ವಾಯುಗೋಳದಲ್ಲಿ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣ ಅಧಿಕವಾಗುವುದರಿಂದ ಸಸ್ಯಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚುತ್ತದೆ.

ಆದರೆ IPCC ಸಮಿತಿಯ ವರದಿಯಂತೆ ಹವಾಮಾನ ಬದಲಾವಣೆಯ ಪ್ರಕ್ರಿಯೆಗಳು ಅಧಿಕವಾದಾಗ, ಹೆಚ್ಚೂ ಕಡಿಮೆ ಎಲ್ಲ ಕಡೆ ದುಷ್ಪರಿಣಾಮಗಳೇ ಪ್ರಮುಖವಾಗುತ್ತವೆ. ಉಷ್ಣತೆ ಮತ್ತಷ್ಟು ಅಧಿಕವಾಗುವ ಸಾಧ್ಯತೆ ಹೆಚ್ಚು. ಉದಾಹೃಣೆಗೆ ಬಿಸಿಗಾಳಿ, ಚಂಡಮಾರುತ ಹಾಗೂ ಪ್ರವಾಹಗಳ ತೀವ್ರತೆ ಮತ್ತು ಸಂಖ್ಯೆ ಹೆಚ್ಚಾಗುವುದು.

ಅಲ್ಲದೆ ದೀರ್ಘಾವಧಿಯಲ್ಲಿ ವಾಸ್ತವವಾಗಿ ಹಲವು ಆತಂಕಕಾರಿ ಘಟನೆಗಳಾಗುತ್ತವೆ. ವಾಯುಗೋಳದಲ್ಲಿ ಹಸಿರುಮನೆ ಅನಿಲಗಳ ಮಟ್ಟ ಅಧಿಕವಾಗುವುದರಿಂದ ನಮ್ಮ ಭೂಗ್ರಹದ ನೈಸರ್ಗಿಕ ವ್ಯವಸ್ಥೆಗಳಲ್ಲಿ ಅಗಾಧವಾದ ವ್ಯತ್ಯಾಸಗಳು ತಕ್ಷಣವೇ ಕಂಡುಬರಬಹುದು. ಅಂತಹ ಕೆಲವು ವ್ಯತ್ಯಾಸಗಳು ಪೂರ್ವಸ್ಥಿತಿಗೆ ಬರಲಾರದಷ್ಟು ತೀವ್ರವಾಗಿರುತ್ತವೆ. ಉದಾಹರಣೆಗೆ ಅಧಿಕಗೊಂಡ ಉಷ್ಣತೆಯಿಂದ ಬೃಹತ್ ಪ್ರಮಾಣದ ಹಿಮಬಂಡೆಗಳು ಕರಗಿ ಜಗತ್ತಿನಾದ್ಯಂತ ತಗ್ಗಿನ ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಅಪಾರ ಹಾನಿ ಉಂಟಾಗುತ್ತದೆ.

ಹವಾಮಾನ ಬದಲಾವಣೆಯಿಂದ ಉಂಟಾಗುವ ಪರಿಣಾಮಗಳು ಅಭಿವೃದ್ಧಿಶೀಲ ಹಾಗೂ ಬಡರಾಷ್ಟ್ರಗಳ ಮೇಲೆ ತೀವ್ರವಾಗಿರುತ್ತವೆ. ಈ ದೇಶಗಳು ಬದಲಾವಣೆಗೆ ಹೊಂದಿಕೊಳ್ಳಲು ಶಕ್ತವಾಗಿರುವುದಿಲ್ಲ. ಆದ್ದರಿಂದ ಹವಾಮಾನ ಬದಲಾವಣೆಯಿಂದ ಯೋಗ್ಯವಾದ ಕುಡಿಯುವ ನೀರು, ಸಾಕಷ್ಟು ಆಹಾರ, ಆರೋಗ್ಯ ಮುಂತಾದವುಗಳಲ್ಲಿ ಅಸಮಾನತೆಗಳು ಮತ್ತಷ್ಟು ಅಧಿಕವಾಗುತ್ತವೆ.

೨೦೦೭ರ ಏಪ್ರಿಲ್‌ನಲ್ಲಿ ಪ್ರಕಟಿತ ರಾಯಲ್ ಅಕಾಡೆಮಿ ೧೬೬೦ರಲ್ಲಿ ಆರಂಭವಾದ ಸಂಸ್ಥೆ. ಇದು ವಿಜ್ಞಾನದಲ್ಲಿ ಉತ್ಕೃಷ್ಟತೆ ಪ್ರೋತ್ಸಾಹಿಸಲು ಮುಡುಪಾಗಿರುವ ಇಂಗ್ಲೆಂಡಿನ ಸ್ವತಂತ್ರ ವಿಜ್ಞಾನ ಅಕಾಡೆಮಿ.

ರಾಯಲ್ ಸೊಸೈಟಿ

೬-೯, ಕಾರ್ಲ್‌ಟನ್ ಹೌಸ್ ಟೆರೇಸ್

ಲಂಡನ್ SW1Y5AG

Tel. +44 (O) 2074512500

Fax. +44 (O) 2074512170

Email: info@royalsoc.ac.uk

www.royalsoc.ac.uk