ರಕ್ತವನ್ನು ಬೈಬಲ್‌ನಲ್ಲಿ ಜೀವರಸ ಎಂದು ವರ್ಣಿಸಲಾಗಿದೆ. ಅದು ನಮ್ಮ ಜೀವನದಾದ್ಯಂತ ಸದಾ ಪ್ರವಹಿಸುತ್ತಲೇ ಇದ್ದು, ಜೀವದ ಉಳಿವಿಕೆಗೆ ಮುಖ್ಯ ಜೀವನದಿಯಾಗಿ ಪರಿಣಮಿಸಿದೆ. ರಕ್ತವು ಪ್ರೊಟಿನ್, ಸಕ್ಕರೆ, ಪೋಷಕಾಂಶಗಳು, ಲವಣಗಳು, ಕೊಬ್ಬು, ರಸದೂತಗಳು, ಕಿಣ್ವಗಳು ಮತ್ತು ತ್ಯಾಜ್ಯ ವಸ್ತುಗಳನ್ನೊಳಗೊಂಡಿದೆ. ಬರ್ನಾ್ ಸೀಮ್ ಈ ಜೀವನದಿಯು ಜಗತ್ತಿನಲ್ಲಿಯೇ ಅತ್ಯಂದ ಉದ್ದವಾದ ನದಿಯೆಂದು ವರ್ಣಿಸಿದ್ದಾನೆ. ದೇಹದಲ್ಲಿ ಈ ಹಾದಿ 1,12,000 ಕಿಲೋಮೀಟ್ ಉದ್ದವಾಗಿದೆ. ಸಮುದ್ರದ ನೀರಿಗೂ ಮತ್ತು ರಕ್ತಕ್ಕೂ ಬಹಳ ಸಾಮ್ಯ ಅಂದರೆ ಹೋಲಿಕೆ ಇದೆ. ರಾಸಾಯನಿಕ ದೃಷ್ಟಿಯಿಂದ ರಕ್ತಕಣಗಳನ್ನು ಬಿಟ್ಟರೆ ಅದರಲ್ಲಿನ ದ್ರವ ಸಮುದ್ರದ ನೀರಿನ ಹೋಲಿಕೆ ಪಡೆದಿದ್ದು, ಅದೇ ಬಗೆಯ ಕಾರ್ಯ ನಿರ್ವಹಿಸುತ್ತದೆ. ರಕ್ತ ತನ್ನ ಪರಿಚಲನೆಯಿಂದ ಜೀವಕೋಶಗಳಿಗೆ ಆಮ್ಲಜನಕ ಹಾಗೂ ಇಂಗಾಲದ ಡೈ ಆಕ್ಸೈಡ್‌ನ್ನು ಅನುಕ್ರಮವಾಗಿ ಮೂತ್ರಪಿಂಡ ಮತ್ತು ಶ್ವಾಸಕೋಶಗಳಿಗೆ ವಿಸರ್ಜನೆಗೆ ತರುತ್ತದೆ. ಅಲ್ಲದೇ ಬೇರೆ ಬೇರೆ ನಿರ್ನಾಳ ಗ್ರಂಥಿಗಳು ಸ್ರವಿಸುವ ರಸದೂತಗಳನ್ನು ಸಾಗಿಸುವ ಮಾಧ್ಯಮ. ಅದರ ಫಲವಾಗಿ ದೇಹದ ಬೇರೆ ಬೇರೆ ಅಂಗಾಂಗಗಳು ರಸದೂತಗಳ ಅಧೀನವರ್ತಿಯಾಗಿ ತಮ್ಮ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಬಲ್ಲವು. ಸಾಮಾನ್ಯವಾಗಿ 5 ಲೀಟರ್ ರಕ್ತ ದೇಹದ ಪರಿಚಲನಾ ವ್ಯವಸ್ಥೆಯಲ್ಲಿ ಹರಿಯುತ್ತಿರುತ್ತದೆ. ರಕ್ತದ ಶೇಕಡ 55 ಭಾಗ ದ್ರವರೂಪದಲ್ಲಿದ್ದು, ಉಳಿದ ಭಾಗದಲ್ಲಿ ಕೆಂಪು ರಕ್ತ ಕಣ, ಬಿಳಿಯ ರಕ್ತ ಕಣ ಮತ್ತು ಪ್ಲೇಟ್‌ಲೇಟ್‌ಗಳನ್ನೊಳಗೊಂಡಿದೆ. ದೇಹದ ರಕ್ಷಣೆಗೆ ಪೂರಕವಾದ ಪ್ರತಿರೋಧ ಕಣಗಳು, ರಕ್ತನಾಳಗಳಲ್ಲಿ ಬಿರುಕುಂಟಾದರೆ ಅದನ್ನು ತೇಪೆ (ರಿಪೇರಿ) ಹಾಕುವ ತಟ್ಟೆ ಕಣಗಳು ಮತ್ತು ರಕ್ತ ಹೆಪ್ಪುಗಟ್ಟುವಲ್ಲಿ ಸಹಾಯ ಮಾಡುವ ವಸ್ತು ಕೂಡ ರಕ್ತದಲ್ಲಿವೆ. ದೇಹದಲ್ಲಿನ ಶಾಖವನ್ನು ಹೊರಹಾಕುವಲ್ಲಿ ರಕ್ತ ಮಹತ್ವದ ಪಾತ್ರ ವಹಿಸುತ್ತದೆ.

ದೇಹದಲ್ಲಿನ ಇಂತಹ ರಕ್ತದಲ್ಲಿ ಕೊರತೆ ಕಾಣಿಸಿಕೊಳ್ಳುವುದೇ ರಕ್ತಹೀನತೆ. ಪ್ರತಿಯೊಬ್ಬರ ದೇಹದಲ್ಲಿ ನಿಗದಿತ ಪ್ರಮಾಣದಲ್ಲಿ ರಕ್ತ ಮತ್ತು ಆ ರಕ್ತದಲ್ಲಿ ಹಿಮೊಗ್ಲೊಬಿನ್ ಅಂಶ ಇರಬೇಕಾಗುತ್ತದೆ. ಹಿಮೊಗ್ಲೊಬಿನ್‌ ಪ್ರಮಾಣವು ವಯಸ್ಕ ಪುರುಷರಲ್ಲಿ ನೂರು ಮಿಲಿ ಲೀಟ್ ರಕ್ತಕ್ಕೆ 13 ರಿಂದ 18 ಗ್ರಾಂ, ಸ್ತ್ರೀಯರಲ್ಲಿ 12 ರಿಂದ 15 ಗ್ರಾಂಗಳಷ್ಟಿರುತ್ತದೆ. ಮಗು ಜನಿಸಿದಾಗ 100 ಮಿಲಿ ಲೀಟ್ ರಕ್ತಕ್ಕೆ 20 ಗ್ರಾಂಗಳಷ್ಟಿರುತ್ತದೆ. ನಂತರ ಮೂರು ತಿಂಗಳೊಳಗೆ ಸಹಜವಾಗಿಯೇ ಕಡಿಮೆಯಾಗುತ್ತದೆ. ವಯಸ್ಕ ಪುರುಷರಲ್ಲಿ 13 ಗ್ರಾಂಗಳಿಗಿಂತ ಹಿಮೊಗ್ಲೊಬಿನ್ ಕಡಿಮೆಯಾದರೆ, ವಯಸ್ಕ ಸ್ತ್ರೀಯರಲ್ಲಿ 12 ಗ್ರಾಮ್‌ಗಳಿಗಿಂತ ಕಡಿಮೆಯಾದರೆ ರಕ್ತಹೀನತೆ ಎನ್ನಲಾಗುತ್ತದೆ. ಆರು ತಿಂಗಳಿನಿಂದ ಆರು ವರ್ಷದೊಳಗಿನ ಮಕ್ಕಳಲ್ಲಿ 11 ಗ್ರಾಂಗಳಿಗಿಂತ ಕಡಿಮೆಯಾದರೆ ಮತ್ತು ಆರು ವರ್ಷಗಳಿಂದ 12 ವರ್ಷದೊಳಗಿನ ಮಕ್ಕಳಲ್ಲಿ 12 ಗ್ರಾಂಗಿಂತ ಕಡಿಮೆಯಾದರೆ ರಕ್ತಹೀನತೆ ಎನ್ನಲಾಗುತ್ತದೆ.

ಕಾರಣಗಳು :

1) ರಕ್ತಕಣಗಳು ಉತ್ಪತ್ತಿಯಾಗಲು ಅಗತ್ಯವಿರುವ ವಸ್ತುಗಳ ಕೊರತೆ

2) ವಿವಿಧ ಕಾರಣಗಳಿಂದ ರಕ್ತಕಣಗಳ ನಾಶ

3) ರಕ್ತ ನಷ್ಟವಾಗುವುದು

4) ರಕ್ತಕಣಗಳು ಉತ್ಪತ್ತಿಯಾಗುವ ಮೂಳೆ ಮಜ್ಜೆಯಲ್ಲಿ  (Bone marrow) ತೊಂದರೆ.

ಹಿಮೊಗ್ಲೊಬಿನ್‌ ಉತ್ಪತ್ತಿಯಾಗಲು ಕಬ್ಬಿಣಾಂಶ ಅತ್ಯಂತ ಅವಶ್ಯಕ. ಬಹುತೇಕ ಸಂದರ್ಭಗಳಲ್ಲಿ ಆಹಾರದ ಅಭಾವದಿಂದ ಕಬ್ಬಿಣಾಂಶದ ಕೊರತೆಯಾಗುತ್ತದೆ.

ಕರುಳಿನಲ್ಲಿ ಕೊಕ್ಕೆಹುಳು ವಾಸವಾಗಿದ್ದರೆ ಅದು ದಿನಕ್ಕೆ 0.2 ಮಿಲಿಯಷ್ಟು ರಕ್ತವನ್ನು ಸೇವಿಸಿ ರಕ್ತಹೀನತೆ ತರುತ್ತದೆ. ಇದನ್ನು ಬಹಳಷ್ಟು ಜನರು ಅಲಕ್ಷ್ಯ ಮಾಡುತ್ತಾರೆ. ರಕ್ತ ನಷ್ಟಕ್ಕೆ ಇತರ ಕಾರಣಗಳೆಂದರೆ ಮಲದಲ್ಲಿ ರಕ್ತ ಹೋಗುವ ಮೂಲವ್ಯಾಧಿ, ಮೂಗಿನಿಂದಾಗುವ ರಕ್ತಸ್ರಾವ, ಸ್ತ್ರೀಯರಲ್ಲಿ – ಋತುಸ್ರಾವದ ಸಮಯದಲ್ಲಿ ಉಂಟಾಗುವ ಹೆಚ್ಚಿನ ರಕ್ತಸ್ರಾವದಿಂದ ಕಬ್ಬಿಣಾಂಶ ನಷ್ಟವಾಗುತ್ತದೆ. ಗರ್ಭಿಣಿಯರಾದಾಗ ಬೆಳೆಯುವ ಮಗುವಿಗೆ ಕಬ್ಬಿಣ ಬಳಸಲ್ಪಡುತ್ತದೆ. ಆದ್ದರಿಂದ ಇವರು ರಕ್ತಹೀನತೆಗೊಳಗಾಗುತ್ತಾರೆ. ಮಗುವಿನ ಜನನದ ಸಮಯದಲ್ಲಿ ಅಂದರೆ ಹೆರಿಗೆಯ ಸಮಯದಲ್ಲಿ ಆಗುವ ರಕ್ತಸ್ರಾವ ಇರಬಹುದು ಮತ್ತು ಇತರ ಕಾರಣಗಳಿಂದಲೂ ರಕ್ತಸ್ರಾವವಾದರೆ, ರಕ್ತಹೀನತೆ ಹೆಚ್ಚಾಗುತ್ತದೆ. ಅಲ್ಲದೆ ಮೊದಲೇ ರಕ್ತಹೀನತೆಯುಳ್ಳ ಮಹಿಳೆ ಮೇಲಿಂದ ಮೇಲೆ ಗರ್ಭ ಧರಿಸುತ್ತಿದ್ದರೆ ರಕ್ತಹೀನತೆ ಹೆಚ್ಚಾಗುತ್ತ ಅವಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಪ್ರತಿ ನೂರು ಮಹಿಳೆಯರಲ್ಲಿ 42 ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಗ್ರಾಮೀಣ ಕರ್ನಾಟಕದಲ್ಲಿ ಶೇಕಡ 67ರಷ್ಟು ರಕ್ತಹೀನತೆಯಿಂದ ಬಳಲುತ್ತಿದ್ದು, ಶೇ. 17ರಷ್ಟು ಅತಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದು ಮಹಿಳಾ ಅಭಿವೃದ್ಧಿ ಕ್ರಿಯಾ ಯೋಜನೆಯ ವರದಿ. ಕಬ್ಬಿಣದ ಕೊರತೆಯ ರಕ್ತಹೀನತೆಯಲ್ಲಿ ಕೆಂಪು ರಕ್ತಕಣಗಳು ಕಿರಿದಾಗಿ, ಅವುಗಳ ಬಣ್ಣ ಕಡಿಮೆಯಾಗುತ್ತದೆ. ರಕ್ತಹೀನತೆಯ ಮತ್ತೊಂದು ಮುಖ್ಯ ಕಾರಣವೆಂದರೆ ಜೀವಸತ್ವ ಬಿ12 ಮತ್ತು ಫೊಲಿಕಆಮ್ಲದ ಕೊರತೆ. ಜೀವಸತ್ವ ಬಿ12 ಮತ್ತು ಫೊಲಿಕಆಮ್ಲ ಸಣ್ಣ ಕರುಳಿನಲ್ಲಿ ಹೀರಲ್ಪಡುತ್ತವೆ. ಕೆಲವರಲ್ಲಿ ಸಣ್ಣ ಕರುಳಿನ ಕಾಯಿಲೆಯಿದ್ದಲ್ಲಿ, ಸಣ್ಣ ಕರುಳಿನ ಶಸ್ತ್ರ ಚಿಕಿತ್ಸೆ ಮಾಡಿ ಕೆಲವು ಭಾಗಗಳನ್ನು ತೆಗೆದಿದ್ದರೆ ಆಗ ಬಿ12 ಮತ್ತು ಫೊಲಿಕಆಮ್ಲ ಹೀರಲ್ಪಡುವುದಿಲ್ಲ. ಮೀನು ತಿನ್ನುವವರಲ್ಲಿ ಅದರಲ್ಲಿರುವ ಲಾಡಿಹುಳು ದೇಹವನ್ನು ಸೇರಿ ಕರುಳಿನಲ್ಲಿ ವಾಸಮಾಡುತ್ತ ಈ ಜೀವಸತ್ವಗಳನ್ನು ದೋಚುವುದು. ಸಣ್ಣ ಕರುಳಿನಲ್ಲಿ ಬ್ಯಾಕ್ಟೀರಿಯಾದಂತಹ ರೋಗಾಣುಗಳು ಇದ್ದಲ್ಲಿ ಅದರಿಂದಾಗಿಯೂ ಜೀವಸತ್ವಗಳು ಹೀರಲ್ಪಡುವುದಿಲ್ಲ. ರಕ್ತಕಣಗಳ ನಾಶವು ರಕ್ತಹೀನತೆಯ ಮತ್ತೊಂದು ಕಾರಣ. ಹುಟ್ಟುವಾಗಲೇ ರಕ್ತಕಣಗಳು ದೋಷಪೂರಿತ ವಾಗಿರುತ್ತವೆ. ಸೋಂಕು ರೋಗಗಳಿಗೆ ತೆಗೆದುಕೊಳ್ಳುವ ಜೀವಿರೋಧಕ ಔಷಧಿಗಳು (ಆಂಟಿಬಯೋಟಿಕ ಉದಾ : ಮಲೇರಿಯಾಕ್ಕೆ ತೆಗೆದುಕೊಳ್ಳುವ ಔಷಧಿ) ಕೆಲವು ರಾಸಾಯನಿಕಗಳು, ಸುಟ್ಟ ಗಾಯಗಳು, ಅಪಘಾತ, ಶಸ್ತ್ರಚಿಕಿತ್ಸೆ ಮೊದಲಾದ ಕಾರಣಗಳಿಂದ ಒಮ್ಮೆಲೆ ರಕ್ತನಾಶವಾಗುವುದರಿಂದ ರಕ್ತಹೀನತೆಯುಂಟಾಗುತ್ತದೆ. ಅನುವಂಶೀಯ ಕಾಯಿಲೆಗಳಾದ ಥೆಲಿಸಿಮಿಯಾದಂತ ಕಾಯಿಲೆಗಳು, ಕೆಲವರಲ್ಲಿ ಮೂಳೆಮಜ್ಜೆಯ ತೊಂದರೆಯಿಂದ ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು, ಪ್ಲೇಟ್‌ಲೇಟ್‌ಗಳ ಉತ್ಪತ್ತಿ ಸರಿಯಾಗಿ ಆಗುತ್ತಿರುವುದಿಲ್ಲ. ದೀರ್ಘಾವಧಿಯ ಸೋಂಕುರೋಗಗಳು, ಮೂತ್ರಪಿಂಡ, ಯಕೃ್ತ್ ಮೊದಲಾದ ಅಂಗಗಳ ದೀರ್ಘಕಾಲದ ಕಾಯಿಲೆಗಳು, ಕ್ಯಾನ್ಸರ್ ರೋಗಗಳು ಮುಂತಾದ ಕಾಯಿಲೆಗಳಲ್ಲಿ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ.

ಲಕ್ಷಣಗಳು :

ಆಯಾಸ, ಕೆಲಸ ಮಾಡಿದಾಗ ಬೇಗ ಸುಸ್ತಾಗುವುದು, ಸ್ವಲ್ಪ ದೂರ ನಡೆದರೂ ಉಸಿರಾಡಲು ಕಷ್ಟವಾಗುವುದು, ಎದೆ ಬಡಿತ ಕೇಳುವುದು, ಕೈಬೆರಳುಗಳಲ್ಲಿ ಜುಮ್ಮೆನ್ನುವುದು, ಉಗುರುಗಳು ಬಿಳಿಚಿಕೊಳ್ಳುವುದು ಮತ್ತು ನುಣುಪಾಗಿ ಚಮಚದಂತೆ ಹಳ್ಳ ಬೀಳುವುದು, ಕಣ್ಣು, ನಾಲಿಗೆ, ಚರ್ಮ ಬಿಳಿಚಿಕೊಳ್ಳುವುದು, ಹಸಿವಿಲ್ಲದಿರುವುದು, ಬೆಳಿಗ್ಗೆ ಎದ್ದಾಗ ಮುಖ ಊದಿಕೊಳ್ಳುವುದು.

ಚಿಕಿತ್ಸೆ :

ಥೆಲಿಸಿಮಿಯಾದಂತಹ ಕಾಯಿಲೆಗಳು, ಅಪಘಾತಗಳು, ಅತಿಯಾದ ರಕ್ತಸ್ರಾವವಾದಾಗ ರಕ್ತ ಪೂರಣೆ ಬೇಕಾಗುತ್ತದೆ. ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಕಬ್ಬಿಣಾಂಶದ ಕೊರತೆಯಿಂದ ಉಂಟಾಗುವ ರಕ್ತಹೀನತೆಗೆ ಯಾವ ರೀತಿಯ ಆಹಾರ, ಮನೆ ಔಷಧಿ ಬೇಕಾಗುತ್ತದೆ ಎಂಬುದನ್ನು ನೋಡೋಣ.

ಆಹಾರದಲ್ಲಿ ಸೊಪ್ಪು ಹೆಚ್ಚು ಬಳಸಬೇಕು. ಎಲ್ಲ ಸೊಪ್ಪುಗಳಲ್ಲಿ ಕಬ್ಬಿಣದಂಶ ಇರುತ್ತದೆ. ಪಾಲಕಮೆಂತ್ಯ, ಹರಿವೆ, ದಂಟು, ಕೊತ್ತಂಬರಿ, ಕರಿಬೇವು

ಮುಂತಾದ ಈ ಎಲ್ಲ ಸೊಪ್ಪುಗಳನ್ನು ಗಮನಿಸಿದಾಗ ಅತಿ ಹೆಚ್ಚು ಕಬ್ಬಿಣದಂಶ ಚಕ್ರಮುನಿ ಸೊಪ್ಪಿನಲ್ಲಿ (23 ಮಿ.ಗ್ರಾಂ.) ಇರುತ್ತದೆ. 100 ಗ್ರಾಂ ಕೊತ್ತಂಬರಿ ಸೊಪ್ಪಿನಲ್ಲಿ 8 ಮಿ.ಗ್ರಾಂ. ಕಬ್ಬಿಣದಂಶ ಇರುತ್ತದೆ. ಮೆಂತ್ಯದ ಸೊಪ್ಪಿನಲ್ಲಿ 17.2 ಮಿ.ಗ್ರಾಂ, ಪುದೀನ ಸೊಪ್ಪಿನಲ್ಲಿ 19 ಮಿ.ಗ್ರಾಂ. ಇರುತ್ತದೆ. ಕೊತ್ತಂಬರಿ ಸೊಪ್ಪನ್ನು ಬಿಡಿಸಿ, ಸ್ವಚ್ಛ ಮಾಡಿ ತೊಳೆದು ರಸ ತೆಗೆದು ಹಾಗೆಯೇ ಕುಡಿಯಬಹುದು. ಮಕ್ಕಳಿಗಾದರೆ ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಜೇನುತುಪ್ಪ ಬೆರೆಸಿ ಕುಡಿಸಬಹುದು. ಬಹುಶಃ ಅದಕ್ಕೇ ಇರಬೇಕು ಎಲ್ಲರೂ ಕಡ್ಡಾಯವಾಗಿ ತಿನ್ನಲಿ ಎಂದು ಎಲ್ಲ ಬಗೆಯ ಪಲ್ಯ, ಸಾಂಬಾರು, ಸಾರುಗಳಿಗೂ ಕೊತ್ತಂಬರಿ ಸೊಪ್ಪನ್ನು ಹಾಕುವುದು ವಾಡಿಕೆ. ಮೆಂತ್ಯದ ಸೊಪ್ಪನ್ನು ಸಣ್ಣಗೆ ಹೆಚ್ಚಿ ಉಪ್ಪು, ನಿಂಬೆರಸ ಬೆರೆಸಿ ಸಲಾ್ ಮಾಡಿ ರೊಟ್ಟಿ, ಚಪಾತಿಯೊಂದಿಗೆ ತಿನ್ನಬಹುದು.

ಕೊತ್ತಂಬರಿ ಸೊಪ್ಪಿನಿಂದ ಚಟ್ನಿ ತಯಾರಿಸಬಹುದು. ಸೊಪ್ಪನ್ನು ದೋಸೆ ಹಿಟ್ಟಿನಲ್ಲಿ ಬೆರೆಸಿ ಮಾಡಬಹುದು. ಅದೇ ರೀತಿ ಮೆಂತ್ಯದ ಸೊಪ್ಪು ಚಪಾತಿ ಹಿಟ್ಟಿನಲ್ಲಿ ಬೆರೆಸಿ ಚಪಾತಿ ಮಾಡಬಹುದು. ಪುದೀನ ಚಟ್ನಿಯನ್ನು ತಯಾರಿಸಬಹುದು. ಪುದೀನ ಸೊಪ್ಪಿನ ಚಿತ್ರಾನ್ನ, ಶರಬ್ ಕೂಡ ತಯಾರಿಸಬಹುದು. ಸಜ್ಜೆಯಲ್ಲಿ 14.3 ಮಿ.ಗ್ರಾಂ. / 100 ಗ್ರಾಂ ಇರುತ್ತದೆ. ಸಜ್ಜೆ ರೊಟ್ಟಿತಯಾರಿಸಬಹುದಲ್ಲದೇ ಸಜ್ಜೆ ಹಿಟ್ಟನ್ನು ಹುರಿದು ಪಾಕ ತಯಾರಿಸಿ ತುಪ್ಪ ಬೆರೆಸಿ ಉಂಡೆ ತಯಾರಿಸಬಹುದು. ಗೋಧಿಯಲ್ಲಿಯೂ 11.5 ಮಿ. ಗ್ರಾಂ. ಇರುತ್ತದೆ. ಗೋಧಿಯ ಹಿಟ್ಟು ಹುರಿದು ಬೆಲ್ಲ, ತುಪ್ಪ ಬೆರೆಸಿ ತಿನ್ನಬಹುದು.

1) ಅಶ್ವಗಂಧದ ಬೇರನ್ನು ಕುಟ್ಟಿ ಪುಡಿಮಾಡಿ ಹಾಲಿನಲ್ಲಿ ಬೆರೆಸಿ ಕುಡಿಯಬೇಕು, ಇಲ್ಲವೇ ಜೇನುತುಪ್ಪದಲ್ಲಿ ಬೆರೆಸಿ ಕುಡಿಯಬೇಕು.

2) ಆಡುಸೋಗೆ ಎಲೆಯ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯಬೇಕು.

3) 100 ಗ್ರಾಂ ಚಕ್ರಮುನಿ ಸೊಪ್ಪಿನಲ್ಲಿ 23 ಮಿ.ಗ್ರಾಂ. ಕಬ್ಬಿಣಾಂಶ ಇರುತ್ತದೆ. ಈ ಸೊಪ್ಪಿನಿಂದ ಪಲ್ಯ, ತೊವ್ವೆ, ಸಾರು, ಇಡ್ಲಿ, ದೋಸೆ, ರೊಟ್ಟಿ ಹಿಟ್ಟಿನಲ್ಲಿ ಸೊಪ್ಪು ಬೆರೆಸಿ ಚಟ್ನಿ, ತಂಬುಳಿ, ವಡೆ ತಯಾರಿಸಬಹುದು.

4) ನುಗ್ಗೆಸೊಪ್ಪು – 150 ಗ್ರಾಂ ಎಳೆಯ ಎಲೆ ಮತ್ತು ಹೂವಿಗೆ ಉಪ್ಪು ಬೆರೆಸಿ ಬೇಯಿಸಿ ಕುಡಿಯಬೇಕು.

5) ಪುಂಡಿ ಸೊಪ್ಪಿನ ಚಟ್ನಿ, ಪಲ್ಯ ತಯಾರಿಸಬಹುದು.

6) ಬಸಳೆಯಲ್ಲಿ  ಕಬ್ಬಿಣಾಂಶ 10 ಮಿ.ಗ್ರಾಂ. ಇರುತ್ತದೆ. ಬಸಳೆ ದೋಸೆ, ದಂಟಿನ ಸಾಂಬಾ್, ಬಸಳೆ ಸೊಪ್ಪು ಕೂಟು, ಇಡ್ಲಿ, ಉದುರು ಪಲ್ಯ, ಬೇಳೆಯೊಂದಿಗೆ ಬೆರೆಸಿ ಪಲ್ಯ ತಯಾರಿಸಬೇಕು. ದೋಸೆ ಹಿಟ್ಟಿಗೆ ಉದ್ದಿನ ಬೇಳೆ ಬದಲು ಬಸಳೆಯನ್ನು ಬೆರೆಸಿ ರುಬ್ಬಿಕೊಳ್ಳಬಹುದು.

7) ಹಿಪ್ಪಲಿಯ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು.

ಎಳ್ಳು : 100 ಗ್ರಾಂ ಎಳ್ಳಿನಲ್ಲಿ 10.5 ಮಿ.ಗ್ರಾಂ ಕಬ್ಬಿಣದಂಶ ಇರುತ್ತದೆ. ಕರಿ ಎಳ್ಳನ್ನು ನೀರಿನಲ್ಲಿ ನೆನೆಯಿಸಿ ಅರೆದು ಅದಕ್ಕೆ ಒಂದು ಲೋಟ ಹಾಲು, ಬೆಲ್ಲ ಸೇರಿಸಿ ಕುಡಿಯಬೇಕು. ಎಳ್ಳನ್ನು ಹುರಿದು ಪುಡಿ ಮಾಡಿ ಬೆಲ್ಲದೊಂದಿಗೆ ಬೆರೆಸಿ ಉಂಡೆ ತಯಾರಿಸಬೇಕು. ಪ್ರತಿದಿನ ಈ ಉಂಡೆ ತಿನ್ನಬೇಕು. ಬೆಲ್ಲದಲ್ಲಿ ಕಬ್ಬಿಣದಂಶ, ಸುಣ್ಣಾಂಶ ಇರುತ್ತದೆ, ರುಚಿಕರವಾಗಿರುತ್ತದೆ. ಸಕ್ಕರೆ ಬಳಸಬಹುದಾದ ಕಡೆ ಬೆಲ್ಲವನ್ನು ಬಳಸಿ. ತರಕಾರಿಗಳಲ್ಲಿ ಬೀಟ್‌ರೂಟ್‌, ಕ್ಯಾರೆಟ್, ಬದನೆಕಾಯಿ, ನುಗ್ಗೆಕಾಯಿ, ಗೋರಿಕಾಯಿ, ಈರುಳ್ಳಿ, ಮೂಲಂಗಿಗಳಲ್ಲಿ ಅಧಿಕವಾಗಿರುತ್ತದೆ. ಹಣ್ಣುಗಳಲ್ಲಿ ಬಾಳೆಹಣ್ಣು, ಅಂಜೂರ, ಸೇಬು, ಸೀಬೆ, ಪಪ್ಪಾಯ, ಮಾವಿನಹಣ್ಣು ಎಲ್ಲವುಗಳಲ್ಲಿ ಕಬ್ಬಿಣಾಂಶ ಇರುತ್ತಾದರೂ ಕಲ್ಲಂಗಡಿಯಲ್ಲಿ ಅತ್ಯಧಿಕ ಕಬ್ಬಿಣದಂಶ ಇರುತ್ತದೆ.

ಒಣ ಹಣ್ಣುಗಳಲ್ಲಿ ಖರ್ಜೂರ, ಒಣದ್ರಾಕ್ಷಿ, ಬಾದಾಮಿ, ಅಂಜೂರ ಈ ಎಲ್ಲವುಗಳಲ್ಲಿ ಕಬ್ಬಿಣದಂಶ ಅಧಿಕವಾಗಿರುತ್ತದೆ. ಅದರಲ್ಲಿಯೂ ಒಣಹಣ್ಣುಗಳಿಂದ ತಯಾರಿಸುವ ಅಂಟಿನ ಉಂಡೆ ತುಂಬ ಪುಷ್ಟಿಕರ ಮತ್ತು ಉತ್ತಮವಾಗಿರುತ್ತದೆ. ಖರ್ಜೂರ, ಬಾದಾಮಿ, ಗೋಡಂಬಿ ಹಾಕಿ ತಯಾರಿಸುವಂತಹುದು. ಈ ಕಾರಣಕ್ಕೆ ಬಾಣಂತಿಯರಿಗೆ ತಿನ್ನಲು ಕೊಡುವುದನ್ನು ರೂಢಿ ಮಾಡಿದ್ದಾರೆ.

ನೆಲ್ಲಿಕಾಯಿ ರಸ ಅಥವಾ ಪುಡಿ ಮತ್ತು ಜೇನುತುಪ್ಪ ಬೆರೆಸಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸೇವನೆ ಮಾಡಬೇಕು. ಒಂದು ಲೋಟ ಕಬ್ಬಿನ ರಸದಲ್ಲಿ ಗೋಧಿ ಹಿಟ್ಟನ್ನು ಹುರಿದು ಬೆರೆಸಿ ಕುಡಿಯಬೇಕು. ಕೆಂಪು ಉತ್ತರಾಣಿ ಸೊಪ್ಪಿನ ರಸ ಮತ್ತು ಹಳೆಯ ಬೆಲ್ಲ ಎರಡನ್ನೂ ಸೇರಿಸಿ ಕುಡಿಯಬೇಕು. ಕ್ಯಾರೆಟ್ ಜ್ಯೂಸ್ ತಯಾರಿಸಿ ಕುಡಿಯಬೇಕು.

ಜೀವಸತ್ವ ಬಿ12- ಮಾಂಸಾಹಾರದಲ್ಲಿ ಹೆಚ್ಚು ಇರುತ್ತದೆ. ಸಸ್ಯಾಹಾರಿಗಳು ಬಿ12 ಕೊರತೆಯಿಂದ ರಕ್ತಹೀನತೆಯಿದ್ದರೆ ಹಾಲನ್ನು ಕುಡಿಯಬೇಕು. ಫೊಲಿಕಆಮ್ಲದ ಕೊರತೆಯಾಗಿದ್ದಲ್ಲಿ ಮೊಳಕೆ ಕಾಳುಗಳು, ಕಿತ್ತಳೆ ಹಣ್ಣು ಸೇವಿಸಬೇಕು. ಅಲ್ಲದೇ ಜೀವಸತ್ವ `ಸಿ’ ಕಬ್ಬಿಣದಂಶದ ಹೀರುವಿಕೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಜೀವಸತ್ವ `ಸಿ’ ಹೆಚ್ಚಾಗಿರುವ ಮೊಳಕೆ ಕಾಳುಗಳು, ಕಿತ್ತಲೆ, ಮೋಸಂಬಿ, ನಿಂಬೆ ಹೆಚ್ಚು ಸೇವಿಸಬೇಕು.

ಜಂತುಹುಳುವಿನ ತೊಂದರೆಯಿರುವವರು ವಾಯು ವಿಳಂಗದ ಕಷಾಯ ತಯಾರಿಸಿ ಕುಡಿಯಬೇಕು. ವಿಡಂಗಾಸವ, ವಿಡಂಗಾರಿಷ್ಟ ಎನ್ನುವ ಔಷಧಿಯೂ ಆಯುರ್ವೇದ ಅಂಗಡಿಗಳಲ್ಲಿ ದೊರೆಯುತ್ತದೆ. ಅದನ್ನು ದಿನಕ್ಕೆರಡು ಬಾರಿ ಮೂರು ಚಮಚೆಯಷ್ಟನ್ನು ನೀರಿನೊಂದಿಗೆ ಬೆರೆಸಿ 15 ದಿನಗಳ ಕಾಲ ಕುಡಿಯಬೇಕು. ಕೊಕ್ಕೆ ಹುಳುವಿನ ಬಾಧೆ ತಡೆಗಟ್ಟಲು ಚಪ್ಪಲಿ ಧರಿಸಿ ಓಡಾಡಬೇಕು. ಬಹಳಷ್ಟು ಹಳ್ಳಿಗಳಲ್ಲಿ ಮಲವಿಸರ್ಜನೆಗೆ ಬಯಲು ಪ್ರದೇಶಕ್ಕೆ ಹೋಗುತ್ತಾರೆ. ಹಳ್ಳಿಗಳಲ್ಲಿ ಫೊಲಿಕಆಮ್ಲದ ಮಾತ್ರೆ ಕೊಡುವ ಬದಲು ಶೌಚಾಲಯಗಳನ್ನು ಸರ್ಕಾರ ಕಟ್ಟಿಸಿಕೊಟ್ಟಲ್ಲಿ ಉತ್ತಮ.

ಜೇನುತುಪ್ಪ :

ರಕ್ತಹೀನತೆಗೆ ಜೇನುತುಪ್ಪದಷ್ಟು ಉತ್ಕೃಷ್ಟ ಔಷಧಿ ಮತ್ತು ಆಹಾರ ಬೇರೊಂದಿಲ್ಲ. ಜೇನುತುಪ್ಪದಲ್ಲಿ ಕಬ್ಬಿಣ, ಮೆಗ್ನಿಶಿಯಂ, ಸುಣ್ಣಾಂಶ, ಮ್ಯಾಂಗನೀಸ್, ತಾಮ್ರ, ಸಾವಯವ ಆಮ್ಲಗಳಾದ ಫಾರ್ಮಿಕ್, ಅಸಿಟಿಕ್, ಮ್ಯಾಲಿಕ್, ಸಿಟ್ರಿಕ್, ಅಮೈನೋ, ಸಕ್ಲೆನಿಕ್ ಆಮ್ಲಗಳು, ಪ್ರೊಟಿನ್, ಸುಕ್ರೋಸ್, ವಿಟಮಿನ್ ಬಿ1, ಬಿ2, ಬಿ6, ಬಿ12, ಸಿ ಮತ್ತು ಕೆ ಇರುತ್ತದೆ.

ಜೇನು ನೈಸರ್ಗಿಕ ಮೂಲದ ಒಂದು ಸರಳ ರಚನೆಯ ಶರ್ಕರ ವಸ್ತುಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿದೆ. ಹಾಲಿನಲ್ಲಿ, ನೀರಿನಲ್ಲಿ ಜೇನು ಬೆರೆಸಿ ಕುಡಿಯುವುದಲ್ಲದೇ, ಕಾಫಿ, ಟೀಗೂ ಬೆರೆಸಿ ಕುಡಿಯಬಹುದು, ಚಪಾತಿಯ ಮತ್ತು ರೊಟ್ಟಿಯ ಜೊತೆ ತಿನ್ನಬಹುದು. ಬ್ರೆಡ್, ಬಿಸ್ಕತ್‌ಗಳ ಜೊತೆ ತಿನ್ನಬಹುದು.

ಪರಿಶುದ್ಧವಾದ ಜೇನುತುಪ್ಪ ಅಮೃತ ಸಮಾನವಾದರೆ, ನಕಲಿ ಮತ್ತು ಅಶುದ್ಧ ಜೇನುತುಪ್ಪ ವಿಷವಾಗಿರುವುದು. ಸಕ್ಕರೆ, ಬೆಲ್ಲ, ಮೈದಾ, ಜಿಲಾಟಿನ್, ಆರಾರೋಟ್ ಬೆರೆಸಿರುತ್ತಾರೆ. ಅಗ್‌ಮಾಕಲೇಬ್ ಇರುವ ಜೇನುತುಪ್ಪ ಖರೀದಿಸಬೇಕು.

ಶುದ್ಧತೆ ಪರೀಕ್ಷೆ :

ಜೇನುತುಪ್ಪ ನೀರಿನ ಲೋಟಕ್ಕೆ ಹಾಕಿದಾಗ ನೀರಿನ ತಳಭಾಗಕ್ಕೆ ಹೋಗಿ ನಿಲ್ಲುತ್ತದೆ. ಏಕೆಂದರೆ ಜೇನುತುಪ್ಪದ ಸಾಂದ್ರತೆ ನೀರಿನ ಸಾಂದ್ರತೆಗಿಂತ ಹೆಚ್ಚು ಭಾರವಾಗಿರುವುದು, ಪಾರದರ್ಶಕವಾಗಿರುತ್ತದೆ.

1 ಕೆ.ಜಿ. ಜೇನಿನಲ್ಲಿ 3,500 ಕ್ಯಾಲೊರಿ ದೊರೆಯುತ್ತದೆ

1 ಕೆ.ಜಿ. ಜೇನು          – 12 ಕೆ.ಜಿ. ಸೇಬುಹಣ್ಣಿಗೆ ಸಮ.

– 100 ರಸಬಾಳೆಹಣ್ಣು

– 20 ಕೆ.ಜಿ. ಖರ್ಜೂರ

– ಏಳೂವರೆ ಲೀಟ್ ಹಾಲಿಗೆ ಸಮ.

ಆಯುರ್ವೇದದಲ್ಲಿ ಜೇನುತುಪ್ಪ ಪ್ರಮುಖ ಸ್ಥಾನ ಪಡೆದಿದೆ. ಔಷಧಿಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಇದು ಯೋಗವಾಹಿ ಕೆಲಸ ಮಾಡುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನಿತ್ಯದ ಯೋಜನದ ಪಟ್ಟಿಯಲ್ಲಿ ಜೇನುತುಪ್ಪ ಇದ್ದೇ ಇರುತ್ತಿತ್ತು. ಗ್ರೀಕದೇಶದ ವೈದ್ಯಶಾಸ್ತ್ರಜ್ಞ ಹಿಪೊಕ್ರೆಟಿಸ್  ದೀರ್ಘಾವಧಿ ಬದುಕುವ ಇಚ್ಛೆಯುಳ್ಳವರು ಪ್ರತಿದಿನ ಜೇನುತುಪ್ಪ ಸೇವಿಸಬೇಕೆಂದು ಉಪದೇಶಿಸುತ್ತಿದ್ದರು. ಗಣಿತಶಾಸ್ತ್ರಜ್ಞ ಪೈಥಾಗೊರ್ ದೀರ್ಘಾಯುಷ್ಯಕ್ಕೆ ಜೇನುತುಪ್ಪ ಮುಖ್ಯ ವಸ್ತು ಎಂದಿದ್ದಾರೆ. ಸ್ಯಾಟ್‌ಲೆಂಡಿನ ಸರ್ಜವನ್‌ ಆರೋಗ್ಯವಾಗಿದ್ದು 124 ವರ್ಷ ಬದುಕಿದ್ದು ವೃದ್ಧಾಪ್ಯದಲ್ಲಿಯೂ ಕೆಲವು ಮೈಲು ನಡೆಯುತ್ತಿದ್ದರಂತೆ. ಇದಕ್ಕೆ ಕಾರಣ ಅವರ ಆಹಾರವು ಜೇನು, ಹಾಲು, ತರಕಾರಿ, ನೀರು ಹಾಗೂ ದ್ರಾಕ್ಷಾರಸವಾಗಿತ್ತಂತೆ.

ರಕ್ತಹೀನತೆಯ ದುಷ್ಪರಿಣಾಮಗಳು :

ಯಕೃ್ತ್ (ಲಿವ್), ಪ್ಲೀಹಗಳು ಊದಿಕೊಳ್ಳುತ್ತವೆ. ರಕ್ತಹೀನತೆಯನ್ನು ಚಿಕಿತ್ಸೆ ಮಾಡದೇ ಬಿಟ್ಟಲ್ಲಿ ಹೃದಯ ವೈಫಲ್ಯ ಉಂಟಾಗುತ್ತದೆ. ಉದರ, ಕಾಲುಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಉಸಿರಾಡಲು ಕಷ್ಟವಾಗುತ್ತದೆ. ಸದಾ ಆಯಾಸ, ಗರ್ಭಿಣಿಗೆ ರಕ್ತಹೀನತೆಯಿದ್ದಲ್ಲಿ ಗರ್ಭಪಾತವಾಗಬಹುದು. ಮಗು ತುಂಬ ಕಡಿಮೆ ತೂಕವುಳ್ಳ ದ್ದಾಗಬಹುದು. ಮಗು ಅವಧಿ ತುಂಬುವ ಮುನ್ನವೇ ಹುಟ್ಟಬಹುದು. ಹೆರಿಗೆಯ ಸಮಯದಲ್ಲಿ ಮತ್ತು ಹೆರಿಗೆಯ ನಂತರ ತಾಯಿಗೆ ತೊಂದರೆಗಳಾಗಬಹುದು. ಕೆಲಸ ಮಾಡಲು ಶಕ್ತಿ ಕಡಿಮೆಯಾಗುವುದು. ತಿಂಗಳ ಮುಟ್ಟು ಸರಿಯಾಗಿ ಆಗದಿರಬಹುದು.