ನಿಟ್ಟೆ ವಿದ್ಯಾಸಂಸ್ಥೆ

1979ರ ಜೂನ್ 30ರಂದು ಜನ್ಮ ತಳೆದ ನಿಟ್ಟೆ ವಿದ್ಯಾಸಂಸ್ಥೆಗೀಗ 30ರ ಹರೆಯ. ಹೀಗಾಗಿಯೇ ಇದು ಸದೃಢವಾಗಿ ಬೆಳೆದು ನಿಂತಿದೆ. ಭೌತಿಕವಾಗಿ – ಬೌದ್ಧಿಕವಾಗಿ ಪ್ರೌಢವಾಗಿದೆ. ದೇಶ – ವಿದೇಶಗಳ ವಿದ್ಯಾರ್ಥಿಗಳನ್ನು ತನ್ನೆಡೆಗೆ ಆಕರ್ಷಿಸುತ್ತಿದೆ. ವಿದ್ಯೆಯಿಂದ ವಿನಯ ಬರುತ್ತದೆ. ವಿನಯದಿಂದ ಕಾರ್ಯ ಸಾಮರ್ಥ್ಯ ಬರುತ್ತದೆ; ಕಾರ್ಯ ಸಾಮರ್ಥ್ಯದಿಂದ ಸಂಪತ್ತು ಬರುತ್ತದೆ. ಸಂಪತ್ತು ಧರ್ಮಕಾರ್ಯಕ್ಕೆ ನೆರವಾಗುತ್ತದೆ. ಅದರಿಂದ ಸಂತೃಪ್ತಿ ಉಂಟಾಗುತ್ತದೆ ಎಂಬುದನ್ನರಿತು ಈ ವಿದ್ಯಾಸಂಸ್ಥೆಯು ಉತ್ತಮ ಶಿಕ್ಷಣವನ್ನು ನೀಡುತ್ತ ಬಂದಿದೆ. ಈ ಸಂಸ್ಥೆಯಲ್ಲಿ ಶಿಶುಮಂದಿರ, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ತಾಂತ್ರಿಕ ವಿದ್ಯಾಲಯ, ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್, ಹೋಟೆಲ್ ಆಡಳಿತವೂ ಸೇರಿದಂತೆ ಒಟ್ಟು 24 ಶಿಕ್ಷಣ ಸಂಸ್ಥೆಗಳಿವೆ. ಅಲ್ಲದೆ ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ, ಕಾಸರಗೋಡು, ಕೊಡಗು ಜಿಲ್ಲೆಗಳಲ್ಲಿ ಹದಿನೇಳು ಆರೋಗ್ಯಕೇಂದ್ರಗಳಿದ್ದು ಆಸುಪಾಸಿನ ಜನರಿಗೆ ಉಚಿತವಾಗಿ ದಂತ ವೈದ್ಯಕೀಯ ಹಾಗೂ ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತಿದೆ. ಅಲ್ಲದೆ ಮಂಗಳೂರು ಸಮೀಪದ ನಾಟೇಕಲ್, ಅಂಬ್ಲಮೊಗರು ಹಾಗೂ ಬೋಳಿಯಾರ್‌ಗಳಲ್ಲಿನ ಮೂರು ಸರಕಾರಿ ಪ್ರಾಥಮಿಕ ಆರೋಗ್ಯಕೇಂದ್ರಗಳನ್ನು ದತ್ತು ಸ್ವೀಕರಿಸಲಾಗಿದೆ. ಈ ಆಸ್ಪತ್ರೆಗಳಲ್ಲಿನ ಹೊರರೋಗಿಗಳಿಗೆ ಹೆಚ್ಚುವರಿ ಚಿಕಿತ್ಸೆ ಬೇಕಾದಾಗ ಅವರಿಗೆ ಉಚಿತ ಸೌಲಭ್ಯ ನೀಡಲಾಗುತ್ತಿದೆ.

ನಿಟ್ಟೆ ವಿದ್ಯಾಸಂಸ್ಥೆಯ ಆಡಳಿತಕ್ಕೊಳಪಟ್ಟ ಶಿಕ್ಷಣ ಸಂಸ್ಥೆಗಳನ್ನು ಮುಖ್ಯವಾಗಿ ಏಳು ವಿಭಾಗಗಳಲ್ಲಿ ವಿಂಗಡಿಸಬಹುದು. ಅವುಗಳೆಂದರೆ – ಆರೋಗ್ಯ ವಿಜ್ಞಾನ ವಿದ್ಯಾಲಯಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಕಾರ್ಯನಿರ್ವಾಹಕ ವ್ಯವಸ್ಥೆ (ಆಡಳಿತ) ವಿದ್ಯಾಲಯಗಳು, ಇಂಜಿನಿಯರಿಂಗ್ ಮಹಾವಿದ್ಯಾಲಯಗಳು, ವಿಜ್ಞಾನ ಮತ್ತು ವಾಣಿಜ್ಯ ಶಿಕ್ಷಣ ಸಂಸ್ಥೆಗಳು, ಶಾಲೆಗಳು ಹಾಗೂ ಗ್ರಾಮೀಣ ಆರೋಗ್ಯ ಕೇಂದ್ರಗಳು.

ಆರೋಗ್ಯ ವಿಜ್ಞಾನ ವಿದ್ಯಾಲಯಗಳು

I) ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ, ಮಂಗಳೂರು (ಓಖಏಉಅ ಕ್ಷೇಮ)

1990ರಲ್ಲಿ ನಿಟ್ಟೆ ವಿದ್ಯಾಸಂಸ್ಥೆಯು ವೈದ್ಯಕೀಯ ಕಾಲೇಜೊಂದನ್ನು ಆರಂಬಿಸುವ ಯೋಜನೆ ಕೈಗೊಂಡಿತು. ಅನಂತರ ಸಂಸ್ಥೆಯು ಜನಸಾಮಾನ್ಯರ ಆರೋಗ್ಯ ಸೇವೆಗೆ ಇತ್ತ ಕೊಡುಗೆಯನ್ನು ಅರಿತುಕೊಂಡು, ವೈದ್ಯಕೀಯ ಕಾಲೇಜು ಆರಂಬಿಸಲು ದಾರಿ ಸುಗಮವಾಗಿದೆ ಎಂಬುದನ್ನು ತಿಳಿಯಿತು. 1999ರಲ್ಲಿ ಸರಕಾರದ ಅನುಮತಿಯೊಂದಿಗೆ ಸುಸಜ್ಜಿತವಾದ ಕಟ್ಟಡದಲ್ಲಿ ವೈದ್ಯಕೀಯ ಕಾಲೇಜನ್ನು ಆರಂಭಿಸಿತು. ನಿಟ್ಟೆಗೆ ಬಂದು ನೆಲೆಯೂರಿದ್ದ ಕೆ.ಎಸ್. ಹೆಗ್ಡೆಯವರು ತಾನು ಸುಖವಾಗಿರುವುದರ ಜೊತೆಯಲ್ಲಿ ತನ್ನ ಸುತ್ತಣ ಜನರು ಆರೋಗ್ಯವಂತರಾಗಿರಬೇಕೆಂದು ಬಯಸಿದವರು. ಆ ಕಾಲದಲ್ಲಿಯೇ ಗ್ರಾಮೀಣ ಜನರಿಗೆ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸಿದವರು. ‘ಆರೋಗ್ಯವಂತ ಸಮಾಜದ ಸೃಷ್ಟಿ’ಯ ಕನಸು ಕಂಡಿದ್ದ ಕೆ.ಎಸ್. ಹೆಗ್ಡೆಯವರ ಕನಸನ್ನು ನನಸಾಗಿಸಿದ ವಿನಯ ಹೆಗ್ಡೆಯವರು ವೈದ್ಯಕೀಯ ಕಾಲೇಜಿಗೆ ತನ್ನ ತಂದೆಯವರ ಹೆಸರನ್ನಿಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ.

ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಜೊತೆಗಿದ್ದು, ‘ಕ್ಷೇಮ’ವು 715 ಹಾಸಿಗೆಗಳುಳ್ಳ ಸುಸಜ್ಜಿತವಾದ ಆಸ್ಪತ್ರೆಯೆನ್ನಿಸಿಕೊಂಡಿದೆ. ಇಲ್ಲಿ ವರ್ಷಕ್ಕೆ ಅಂದಾಜು ಇಪ್ಪತ್ತು ಸಾವಿರ ರೋಗಿಗಳು ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸೇವೆಯನ್ನು ಪಡೆಯುತ್ತಿದ್ದಾರೆ. ‘ನೆರೆಕರೆ ಕ್ಷೇಮ’ ಯೋಜನೆಯಡಿ ದಾಖಲಾದ ಎಲ್ಲ ಹೊರರೋಗಿಗಳು ಹಾಗೂ ಒಳರೋಗಿಗಳಿಗೆ ಧರ್ಮಾರ್ಥ ಸೇವೆಯನ್ನು ನೀಡಲಾಗುತ್ತಿದೆ. ವಯೋವೃದ್ಧರಿಗಾಗಿ ಆರೋಗ್ಯ ತಪಾಸಣೆ ಹಾಗೂ ಕೌನ್ಸಿಲಿಂಗ್‌ಗಾಗಿ ‘ಸಹಾರ’ ಎನ್ನುವ ವಿಶೇಷ ಕಾರ್ಯಕ್ರಮವನ್ನು ಅಳವಡಿಸಲಾಗಿದೆ. ‘ಜೀವನ್‌ದಾನ್’ ಕಾರ್ಯಕ್ರಮದಲ್ಲಿ ಹೆಚ್.ಐ.ವಿ. ಪಾಸಿಟಿವ್ ಹಾಗೂ ಏಡ್ಸ್ ಕುರಿತಂತೆ ವಿಶೇಷ ಮಾಹಿತಿ ನೀಡಲಾಗುತ್ತಿದೆ. ಯೂನಿವರ್ಸಿಟಿ ಆಫ್ ಟೆಕ್ಸಾಸ್ ಹೆಲ್ತ್ ಸೈನ್ಸಸ್ ಸೆಂಟರ್, ಹಸ್ಟನ್, ಯುಎಸ್ ಇದರ ಸಹಯೋಗದೊಂದಿಗೆ ‘ಕಮ್ಯೂನಿಕೇಬಲ್ ಡಿಸೀಸಸ್’ ಎಂಬ ಸಂಶೋಧನಾ ವಿಭಾಗವನ್ನೂ ತೆರೆಯಲಾಗಿದೆ. ಸುಮಾರು ಏಳೂವರೆ ಸಾವಿರ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯೂ ಸೇರಿದಂತೆ ಪ್ರತಿವರ್ಷ ಒಂದು ಲಕ್ಷಕ್ಕೂ ಮಿಕ್ಕಿದ ರೋಗಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ii)  ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಕಾಲೇಜು, ಮಂಗಳೂರು

1985ರಲ್ಲಿ ಆರಂಭಗೊಂಡ ಈ ಸಂಸ್ಥೆಯಲ್ಲಿ ಕೇವಲ 40 ವಿದ್ಯಾರ್ಥಿಗಳಿದ್ದರು. ಆದರೆ ಇದೀಗ ಪ್ರತೀವರ್ಷ ನೂರು ದಂತವೈದ್ಯರು ಹಾಗೂ 50 ಮಂದಿ ದಂತ ತಜ್ಞರು ಈ ಸಂಸ್ಥೆಯಲ್ಲಿ ರೂಪುಗೊಳ್ಳುತ್ತಾರೆ. ‘ಮಾನವ ಸಮುದಾಯದ ಸೇವೆ’ಯನ್ನು ಧ್ಯೇಯವಾಗಿಸಿರಿಕೊಂಡ ಈ ಸಂಸ್ಥೆಯು ಸ್ಮೆ ಲ್ ಟ್ರೈನ್ ಫೌಂಡೇಶನ್ ಯುಎಸ್‌ಎ, ಕ್ಲೆಫ್ಟ್ ಚಿಲ್ಡ್ರನ್ ಇಂಟರ್‌ನ್ಯಾಷನಲ್ ಜ್ಯೂರಿಕ್ ಮತ್ತು ರಾಯಲ್ ಕಾಲೇಜ್ ಆಫ್ ಸರ್ಜನ್ಸ್, ಎಡಿನ್‌ಬರೋ ಸಂಸ್ಥೆಯೊಂದಿಗೆ ಸಹಯೋಗ ಹೊಂದಿದೆ.

iii) ಕೆ.ಎಸ್. ಹೆಗ್ಡೆ ಆಸ್ಪತ್ರೆ, ಮಂಗಳೂರು

ದೇರಳಕಟ್ಟೆಯಲ್ಲಿರುವ ಈ ಆಸ್ಪತ್ರೆಯು ಉತ್ತಮ ಸೇವೆಯನ್ನು ಒದಗಿಸುತ್ತಾ ಬಂದಿದ್ದು ಬಡಜನರಿಗೆ ಆರೋಗ್ಯ ಭಾಗ್ಯವನ್ನು ಕರುಣಿಸಿದೆ.

i) ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಕ್ರಾ ್ಯನಿಯೋಫೇಶಿಯಲ್ ಸರ್ಜರಿ, ಮಂಗಳೂರು

ನಿಟ್ಟೆ ಗುಲಾಬಿ ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ಮಂಗಳೂರು

i)ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್, ಮಂಗಳೂರು

ii) ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಪಿಸಿಯೋಥೆರಪಿ, ಮಂಗಳೂರು

iii) ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಎಂಡ್ ಹಿಯರಿಂಗ್, ಮಂಗಳೂರು

ಇಂಜಿನಿಯರಿಂಗ್ ಮಹಾವಿದ್ಯಾಲಯಗಳು

i) ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ನಿಟ್ಟೆ

‘ಅದ್ಭುತ ಸಾಧನೆಗಳೆಲ್ಲದರ ಮೂಲವೂ ಒಂದು ಚಿಕ್ಕ ಆರಂಭ’ ಎಂಬುದು ನಮಗೆಲ್ಲರಿಗೂ ಗೊತ್ತು. 1979ರಲ್ಲಿ ಆರಂಭವಾದ ನಿಟ್ಟೆ ವಿದ್ಯಾಸಂಸ್ಥೆಗೆ ಕೀರ್ತಿ ಕಳಸವೆಂಬಂತೆ 1986ರಲ್ಲಿ ನಿಟ್ಟೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಆರಂಭಗೊಂಡಿತು. ರಾಷ್ಟ್ರದಲ್ಲಿಯೇ ಗುರುತಿಸಲ್ಪಟ್ಟ – ಗೌರವಿಸಲ್ಪಟ್ಟ ಈ ತಾಂತ್ರಿಕ ವಿದ್ಯಾಲಯವು ದೇಶ – ವಿದೇಶಗಳ ವಿದ್ಯಾರ್ಥಿಗಳನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಇದೀಗ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ವಿದ್ಯಾಲಯದ ಬೇರೆ ಬೇರೆ ಶಾಖೆಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.

ಈ ತಾಂತ್ರಿಕ ವಿದ್ಯಾಲಯವು ಆರಂಭದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿದ್ದು, ನವದೆಹಲಿಯ ಎ.ಐ.ಸಿ.ಟಿ.ಇ. (ಅ್ಝ್ಝ ಐ್ಞಜಿ ಇಟ್ಠ್ಞ್ಚಜ್ಝಿ ್ಛಟ್ಟ ಛ್ಚಿಜ್ಚಿಚ್ಝ ಉಛ್ಠ್ಚಠಿಜಿಟ್ಞ) ಸಂಸ್ಥೆಯಿಂದ ಮಾನ್ಯತೆ ಪಡೆದಿದೆ. ಐ.ಎಸ್.ಬಿ. 9001-2000 ಮನ್ನಣೆ ಪಡೆದಿರುವ ಈ ತಾಂತ್ರಿಕ ವಿದ್ಯಾಲಯವು 2007-08ರಿಂದ ನಿಟ್ಟೆ ಸ್ವಾಯತ್ತ ವಿಶ್ವವಿದ್ಯಾಲಯದ ಸಂಸ್ಥೆಗಳಲ್ಲಿ ಒಂದಾಗಿದೆ.

ಈ ವಿದ್ಯಾಲಯದಲ್ಲಿ 4 ವರ್ಷಗಳ ಇಂಜಿನಿಯರಿಂಗ್ ಪದವಿ, ಎರಡು ವರ್ಷಗಳ ಎಂ.ಟೆಕ್. ಪದವಿ, ಮೂರು ವರ್ಷಗಳ ಎಂ.ಸಿ.ಎ. ಪದವಿ ಶಿಕ್ಷಣವನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ ನೀಡಬಲ್ಲಂಥ ಪ್ರಾಧ್ಯಾಪಕ ವೃಂದ ಮಾತ್ರವಲ್ಲದೆ, ವಿದ್ಯಾರ್ಥಿ ಮಾನಸಿಕ ಒತ್ತಡದಿಂದ ಹೊರಬರಲು ಸಹಕರಿಸುವ ಕೌನ್ಸೆಲಿಂಗ್ ವ್ಯವಸ್ಥೆಯೂ ಅತ್ಯುತ್ತಮವಾಗಿದೆ. ಅಂತಿಮ ವರ್ಷದ ವಿದ್ಯಾಭ್ಯಾಸ ಪೂರ್ತಿಗೊಳಿಸುವ ಮುನ್ನವೇ ಉದ್ಯೋಗದ ಆಯ್ಕೆಗಾಗಿ ರಾಷ್ಟ್ರದ ಪ್ರತಿಷ್ಠಿತ ಕಂಪೆನಿಗಳ ಸಹಕಾರದೊಂದಿಗೆ ವಿದ್ಯಾಲಯದಲ್ಲಿಯೇ ಸಂದರ್ಶನ ಹಾಗೂ ಆಯ್ಕೆಯ ಪ್ರಕ್ರಿಯೆ ನಡೆಸಲಾಗುತ್ತದೆ. ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡಕೊಂಡಿದ್ದಾರೆ.

ii) ನಿಟ್ಟೆ ಮೀನಾಕ್ಷಿ ಸ್ಮಾರಕ ತಾಂತ್ರಿಕ ವಿದ್ಯಾಲಯ, ಬೆಂಗಳೂರು

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕೆನ್ನುವ ಹಂಬಲ ನಿಟ್ಟೆ ವಿದ್ಯಾಸಂಸ್ಥೆಯದಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ| ಎನ್.ಆರ್. ಶೆಟ್ಟಿಯವರು ಜನಜಂಗುಳಿಯಿಂದ ಕೂಡಿರುವ ಬೆಂಗಳೂರು ನಗರ ಪ್ರದೇಶದ ಹೊರವಲಯದಲ್ಲಿ ಪ್ರಥಮ ದರ್ಜೆ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಬೇಕೆಂಬ ಪ್ರಸ್ತಾಪ ಮಾಡಿದರು. ಹೀಗಾಗಿ 2000ನೇ ಇಸವಿಯಲ್ಲಿ ನಿಟ್ಟೆ ವಿದ್ಯಾಸಂಸ್ಥೆಯು ಬೆಂಗಳೂರು ನಗರದ ಹೊರವಲಯದಲ್ಲಿರುವ ಗೋವಿಂದ ಹಳ್ಳಿಯಲ್ಲಿ 25 ಎಕರೆ ಸ್ಥಳವನ್ನು ಖರೀದಿಸಿತು. ಶಿಕ್ಷಣ ಸಂಸ್ಥೆಗಾಗಿ ಆವರಣವನ್ನು ನಿರ್ಮಿಸಿತು. 2001ರಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯವು ಹುಟ್ಟಿಕೊಂಡಿತು.

ಕಾರ್ಯನಿರ್ವಹಣೆ ವ್ಯವಸ್ಥೆ (ಆಡಳಿತ ವ್ಯವಸ್ಥೆ) ಶಿಕ್ಷಣ ಸಂಸ್ಥೆಗಳು

i) ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ನಿಟ್ಟೆ

ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೂಡ ನಗರ ಪ್ರದೇಶದ ವಿದ್ಯಾರ್ಥಿಗಳ ಜೊತೆಗೆ ಸ್ಪರ್ದಿಸುವಂತಾಗಬೇಕು. ರಾಷ್ಟ್ರದ ವಿವಿಧ ಸಂಸ್ಥೆಗಳು, ಬೇರೆ ಬೇರೆ ಇಲಾಖೆಗಳ ಹೊಣೆ ನಿಭಾಯಿಸುವ ಜವಾಬ್ದಾರಿಯುತ ನಾಯಕರಾಗಿ ಬೆಳೆಯಬೇಕು ಎಂಬ ನಿಟ್ಟಿನಲ್ಲಿ 1998ರಲ್ಲಿ ನಿಟ್ಟೆಯಲ್ಲಿ ಕೆ.ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯನ್ನು ಸ್ಥಾಪಿಸಲಾಯಿತು.

ii) ಸರೋಶ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಅಡ್ಮಿನಿಷ್ಟ್ರೇಶನ್, ಮಂಗಳೂರು

ಇಂದಿನ ಯುವಜನರಲ್ಲಿ ಉತ್ತಮ ಗುಣನಡತೆ, ಮೌಲ್ಯಗಳು ಹಾಗೂ ಕೌಶಲ್ಯಗಳನ್ನು ಬೆಳೆಸುವ ಮೂಲಕ ಅವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮವಿಶ್ವಾಸದಿಂದ ಬಾಳಲು ಪ್ರೇರೇಪಿಸುವ ಉದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು.

ತಾಂತ್ರಿಕ ವಿದ್ಯಾಲಯಗಳು

i) ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಪಾಲಿಟೆಕ್ನಿಕ್, ನಿಟ್ಟೆ

1982ರಲ್ಲಿ ನಿಟ್ಟೆಯ ಲೆಮಿನಾ ಫ್ರೌಂಡ್ರೀಸ್‌ನಲ್ಲಿಯೇ ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಪಾಲಿಟೆಕ್ನಿಕ್ ಆರಂಭಗೊಂಡಿತು. ರಾಜ್ಯ ಸರಕಾರದ ಅನುಮತಿಯೊಂದಿಗೆ ಆರಂಭವಾದ ಈ ಪಾಲಿಟೆಕ್ನಿಕ್ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಾಸಗಿ ಪಾಲಿಟೆಕ್ನಿಕ್ ಎಂಬ ಹೆಸರಿಗೆ ಪಾತ್ರವಾಯಿತು. ಸಂಸ್ಥೆ ಆರಂಭವಾಗಿ ಆರು ತಿಂಗಳ ಬಳಿಕ ಕಾಲೇಜು ತನ್ನದೇ ಆದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿದ್ದು, ಉತ್ತಮ ಶಿಕ್ಷಣವನ್ನು ನೀಡುತ್ತ ಬಂದಿರುವ ಈ ಸಂಸ್ಥೆಯು ಇದೀಗ ಸರಕಾರದ ಮಾನ್ಯತೆ ಹೊಂದಿದ್ದು ಇಲ್ಲಿನ ಪ್ರಾಧ್ಯಾಪಕರು ಹಾಗೂ ಸಿಬಂದಿ ಸರಕಾರದಿಂದ ವೇತನ ಪಡೆಯುತ್ತಿದ್ದಾರೆ.

ii) ಮೂಲ್ಕಿ ರಾಮಕೃಷ್ಣ ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ, ತೋಕೂರು

ನಿಟ್ಟೆಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಮೂಲ್ಕಿಯಲ್ಲಿ 1984ರಲ್ಲಿ ಈ ಸಂಸ್ಥೆ ಜನ್ಮ ತಾಳಿತು. ಉದ್ಯೋಗ ಕೇಂದ್ರಿತ ತರಬೇತಿ ನೀಡುತ್ತಿರುವ ಈ ಕೈಗಾರಿಕಾ ತರಬೇತಿ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳು ಸ್ವತಂತ್ರವಾಗಿ, ಸ್ವಾವಲಂಬಿಗಳಾಗಿ ಬಾಳುವುದಕ್ಕೆ ಅನುವು ಮಾಡಿಕೊಟ್ಟಿದೆ. ಉತ್ತಮ ಗುಣಮಟ್ಟದ ಶಿಕ್ಷಣದಿಂದಾಗಿ ನಾಡಿನ ಮೂಲೆ ಮೂಲೆಗಳ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

ವಿಜ್ಞಾನ ಮತ್ತು ವಾಣಿಜ್ಯ ಶಿಕ್ಷಣ ಸಂಸ್ಥೆಗಳು

i) ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪದವಿಪೂರ್ವ ಕಾಲೇಜು

1979ರ ಆಗಸ್ಟ್ 30ರಂದು ಜನ್ಮ ತಳೆದ ನಿಟ್ಟೆ ವಿದ್ಯಾ ಸಂಸ್ಥೆಯ ಚೊಚ್ಚಲ ಸಂಸ್ಥೆ ಇದಾಗಿದೆ. 1980ರಲ್ಲಿ ಕೇವಲ 76 ಮಕ್ಕಳೊಂದಿಗೆ ಆರಂಭಗೊಂಡಿದ್ದ ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರೌಢಶಾಲೆಯ 1984ರಲ್ಲಿ ಪದವಿಪೂರ್ವ ವಿದ್ಯಾಲಯವಾಗಿ ಮೇಲ್ದರ್ಜೆಗೇರಿತು. ಈ ಕಾಲೇಜಿನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿದ್ದು, ಅತ್ಯುತ್ತಮವಾದ ಗ್ರಂಥಾಲಯ, ಪ್ರಯೋಗಾಲಯ ಹಾಗೂ ಕಂಪ್ಯೂಟರ್ ಶಿಕ್ಷಣದ ವ್ಯವಸ್ಥೆಯಿದೆ. ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಮಕ್ಕಳನ್ನು ಸಮಾಜ ಸೇವೆಯ ಕಾಯಕಕ್ಕೆ ಅಣಿಗೊಳಿಸಲಾಗುತ್ತಿದೆ.

ಪ್ರೌಢಶಾಲೆಯಲ್ಲಿ ಪಾಠಗಳ ಜತೆಯಲ್ಲಿ ಪಾಠೇತರ ಚಟುವಟಿಕೆಗಳಾದ ಎನ್.ಸಿ.ಸಿ., ಗೈಡ್ಸ್, ಮೊದಲಾದ ತರಗತಿಗಳನ್ನು ನಡೆಸುವ ಮೂಲಕ ಮಕ್ಕಳ ಕ್ರಿಯಾಶೀಲ ಬೆಳವಣಿಗೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತಿದೆ.

ii) ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜು, ನಿಟ್ಟೆ

1988ರಲ್ಲಿ ಬಿ.ಎಸ್.ಸಿ. ವಿಭಾಗವನ್ನು ಆರಂಭಿಸಿ, ಅನಂತರ ವಿಶ್ವವಿದ್ಯಾಲಯದ ಅನುಮತಿಯೊಂದಿಗೆ ಗಣಿತ, ವಿದ್ಯುನ್ಮಾನ ಹಾಗೂ ಕಂಪ್ಯೂಟರ್ ವಿಭಾಗಗಳನ್ನು ಆರಂಬಿಸಲಾಯಿತು. ಕರ್ನಾಟಕವೇ ಅಲ್ಲದೆ ಇತರ ರಾಜ್ಯಗಳ ಅನೇಕ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

iii) ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜು, ಬೆಂಗಳೂರು

ಶಿಕ್ಷಣದ ಸೇವೆ ಕೇವಲ ನಿಟ್ಟೆಗಷ್ಟೇ ಮೀಸಲಾಗಿರಬಾರದು ಎಂಬ ಉದ್ದೇಶದಿಂದ ರಾಜ್ಯದ ರಾಜಧಾನಿಯಲ್ಲಿ 2000ನೇ ಇಸವಿಯಲ್ಲಿ ಪ್ರಥಮ ದರ್ಜೆ ಕಾಲೇಜನ್ನು ಸ್ಥಾಪಿಸಲಾಯಿತು.

i) ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪದವಿಪೂರ್ವ ಕಾಲೇಜು, ಬೆಂಗಳೂರು

1979ರಲ್ಲಿ  ಸ್ಥಾಪಿತವಾದ ನಿಟ್ಟೆ ವಿದ್ಯಾಸಂಸ್ಥೆಯ ಚೊಚ್ಚಲ ವಿದ್ಯಾಸಂಸ್ಥೆ ಇದಾಗಿದೆ. 1980 ಜೂನ್ 2ರಂದು ಆರಂಭಗೊಂಡ ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರೌಢಶಾಲೆಯು 1984ರಲ್ಲಿ ಡಾ| ಎನ್. ಶಂಕರ ಅಡ್ಯಂತಾಯ ಸ್ಮಾರಕ ಪದವಿಪೂರ್ವ ವಿದ್ಯಾಲಯವಾಗಿ ಮೇಲ್ದರ್ಜೆಗೇರಿತು.

ii) ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪದವಿಪೂರ್ವ ಕಾಲೇಜು, ಮಂಗಳೂರು

ಮಂಗಳೂರಿನ ವೈದ್ಯಕೀಯ ಕಾಲೇಜು ಸಮೀಪದಲ್ಲಿಯೇ ಇದ್ದು, ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರ ಮಕ್ಕಳು ಹಾಗೂ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯರು ಹಾಗೂ ಇತರ ಉದ್ಯೋಗಿಗಳ ಮಕ್ಕಳಿಗೆ ಪದವಿಪೂರ್ವ ಶಿಕ್ಷಣ ಪಡೆಯಲು ಇಲ್ಲಿ ಉತ್ತಮ ಅವಕಾಶವಿದೆ.

ಶಾಲೆಗಳು

i) ಡಾ| ನಿಟ್ಟೆ ಇಂಟರ್‌ನ್ಯಾಷನಲ್ ಸ್ಕೂಲ್, ಬೆಂಗಳೂರು

ದೇಶ ವಿದೇಶಗಳಿಂದ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯೋಗಿಗಳ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಈ ಶಾಲೆ ಆರಂಭಗೊಂಡಿತು.

ii) ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನಿಟ್ಟೆ

ನಿಟ್ಟೆಯಲ್ಲಿ ತಾಂತ್ರಿಕ ವಿದ್ಯಾಲಯ ಆರಂಭಗೊಂಡ ಬಳಿಕ, ಬೇರೆ ಬೇರೆ ಕಡೆಗಳಿಂದ ಬಂದ ಪ್ರಾಧ್ಯಾಪಕರ, ಉಪನ್ಯಾಸಕರ ಮಕ್ಕಳು ಆಂಗ್ಲಭಾಷಾ ಶಿಕ್ಷಣ ಪಡೆಯುವುದು ಅಂದು ಅನಿವಾರ್ಯವಾಗಿತ್ತು. ಹೀಗಾಗಿ, 1988ರಲ್ಲಿ ನಿಟ್ಟೆಯ ರೋಟರಿ ಕ್ಲಬ್ ಸಂಸ್ಥೆಯು ಆಂಗ್ಲಮಾಧ್ಯಮ ಶಾಲೆಯನ್ನು ಪ್ರಾರಂಭಿಸಿತು. ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿರುವ ಈ ಶಾಲೆಯು ಬ್ರಿಟಿಷ್ ಕೌನ್ಸಿಲ್‌ನಿಂದ ಕೊಡಮಾಡುವ ಅಂತಾರಾಷ್ಟ್ರೀಯ ಶಾಲಾ ಪ್ರಶಸ್ತಿಯನ್ನು ಪಡೆದಿರುವುದು ಕೇವಲ ಶಾಲೆಗಷ್ಟೇ ಅಲ್ಲ, ನಿಟ್ಟೆ ವಿದ್ಯಾಸಂಸ್ಥೆಗೂ ಹೆಮ್ಮೆಯ ವಿಷಯ.

iii) ಡಾ| ಮುಂಡ್ಕೂರು ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲಮಾಧ್ಯಮ ಪ್ರೌಢಶಾಲೆ, ತೋಕೂರು

ಮೂಲ್ಕಿ ಸಮೀಪದ ತಪೋವನ, ತೋಕೂರಿನಲ್ಲಿದೆ. ಮೂಲ್ಕಿ ಹಾಗೂ ಪರಿಸರದ ವಿದ್ಯಾರ್ಥಿಗಳಿಗೆ ಆಂಗ್ಲಭಾಷಾ ಮಾಧ್ಯಮದ ಶಿಕ್ಷಣ ಪಡೆಯಲು ಇಲ್ಲಿ ಉತ್ತಮ ಅವಕಾಶವಿದೆ.

i) ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆ, ಮಲ್ಲಾಯಬೆಟು್ಟ

ನಿಟ್ಟೆಯ ಸಮೀಪದ ಕಲ್ಯಾ ಗ್ರಾಮದಲ್ಲಿರುವ ಸರಕಾರಿ ಶಾಲೆಯನ್ನು ದತ್ತು ಸ್ವೀಕರಿಸಿರುವ ನಿಟ್ಟೆ ವಿದ್ಯಾಸಂಸ್ಥೆಯು ಶಾಲೆಗೆ ಬೇಕಾಗಿರುವ ಅಚ್ಚುಕಟ್ಟಾದ, ಸುಂದರವಾದ ಕಟ್ಟಡವನ್ನು ನಿರ್ಮಿಸಿರುವ ಜೊತೆಯಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ.

ii) ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆ, ಬೋಳಕೋಡಿ

ಇದೂ ಕೂಡಾ ಸರಕಾರಿ ಶಾಲೆಯಾಗಿದ್ದು, ಆರಂಭದಲ್ಲಿ ಬಹಳಷ್ಟು ಸಮಸ್ಯೆಗಳಿಂದ ಕೂಡಿತ್ತು. ಸರಕಾರದ ತೊಂದರೆ ಏನೇ ಇರಲಿ, ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ನಿಟ್ಟೆ ವಿದ್ಯಾಸಂಸ್ಥೆಯು ಈ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕಾರ ಮಾಡಿತು. ಶಾಲೆಗೆ ಬೇಕಾದ ಉತ್ತಮ ಕಟ್ಟಡ, ಪೀಠೋಪಕರಣಗಳು ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಿತು. ಅಲ್ಲದೆ, ಇಲ್ಲಿನ ಶಿಕ್ಷಕರಿಗೆ ಪ್ರತಿವರ್ಷ ಅಧ್ಯಾಪನಕ್ಕೆ ಸಂಬಂಧಪಟ್ಟಂತೆ ಪುನಶ್ಚೇತನ ಶಿಬಿರಗಳನ್ನೂ ನಡೆಸಿತು. ಇಷ್ಟೇ ಏಕೆ, ಶಿಕ್ಷಕರ ವೇತನದ ಜವಾಬ್ದಾರಿಯನ್ನೂ ನಿಟ್ಟೆ ವಿದ್ಯಾಸಂಸ್ಥೆಯೇ ಭರಿಸಿತು.

ಉಪಗ್ರಹಾಧಾರಿತ ಗ್ರಾಮೀಣ ಆರೋಗ್ಯ ಕೇಂದ್ರಗಳು

ಸದೃಢವಾದ ಶರೀರದಲ್ಲಿ ಮಾತ್ರ ಸದೃಢವಾದ ಮನಸ್ಸು ಇರುತ್ತದೆ’ ಎಂಬುದಾಗಿ ನಮ್ಮ ಹಿರಿಯರು ಹೇಳಿರುವ ಮಾತು ಅಕ್ಷರಶಃ ಸತ್ಯ. ಏಕೆಂದರೆ ಮನುಷ್ಯನಿಗೆ ಆರೋಗ್ಯಸಂಪತ್ತು ಇದ್ದರೆ ಉಳಿದೆಲ್ಲ ಸಂಪತ್ತುಗಳನ್ನು ಅವನು ಪಡೆಯಲು ಸಾಧ್ಯ. ಸಂಸ್ಥೆಯ ಸ್ಥಾಪಕರಾದ ಕೌಡೂರು ಸದಾನಂದ ಹೆಗ್ಡೆಯವರ ಗ್ರಾಮಸ್ವರಾಜ್ಯದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅವರ ಪುತ್ರ ಎನ್. ವಿನಯ ಹೆಗ್ಡೆಯವರು ಸುಬ್ರಹ್ಮಣ್ಯ, ಶೃಂಗೇರಿ, ಮೂಲ್ಕಿ, ಯಲ್ಲಾಪುರ, ಮುಂಡ್ಕೂರು, ನಿಟ್ಟೆ, ಬೈಲೂರು, ತಾಳಿಪಾಡಿ, ದಬ್ಬೆಕಟ್ಟೆ, ನಾಡ, ಮಡಿಕೇರಿ, ಮಾರ್ಣಕಟ್ಟೆ, ಬೆಳ್ಳಿಕೊಟ್ಟೆ, ಸಸಿಹಿತ್ಲು, ಹೆಜಮಾಡಿ, ಮುಕ್ಕ ಹಾಗೂ ಜೆಪ್ಪಿನಮೊಗರುಗಳಲ್ಲಿ ಉಪಗ್ರಹಾಧಾರಿತ ಗ್ರಾಮೀಣ ಆರೋಗ್ಯ ಕೇಂದ್ರಗಳನ್ನು ತೆರೆದಿದ್ದಾರೆ. ಹೀಗಾಗಿ ಅನೇಕ ಬಡ ಜನತೆಗೆ ಉಚಿತ ಆರೋಗ್ಯಸೇವೆ ದೊರೆಯುತ್ತಿದೆ.

ವಿವೇಕಾನಂದ ಜ್ಞಾನವಾಹಿನಿ ಕೇಂದ್ರ

ಕಳೆದ 5 ವರ್ಷಗಳ ಹಿಂದೆ ದೂರದ ಮೇಘಾಲಯದಿಂದ ಬಂದ 24 ವಿದ್ಯಾರ್ಥಿಗಳು ಇಲ್ಲಿ ಆಶ್ರಯ ಪಡೆಯುತ್ತಿದ್ದು ನಿಟ್ಟೆ ವಿದ್ಯಾಸಂಸ್ಥೆಯ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಅವರಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಉಚಿತ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೇಲ್ವಿಚಾರಕಿಯರು ಅವರ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.

ಈ ಕೇಂದ್ರದಲ್ಲಿ ಎರಡರಿಂದ 5 ವರ್ಷದೊಳಗಿನ ಮಕ್ಕಳಿಗೆ ಅತ್ಯುತ್ತಮ ಸಂಸ್ಕಾರ ನೀಡುವ ಶಿಶುಮಂದಿರವೂ ಇದೆ. ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ ಎನ್ನುವಂತೆ, ಈ ಕೇಂದ್ರದಲ್ಲಿ ಭಾರತೀಯ ಸಂಸ್ಕೃತಿಯ ಸಂಸ್ಕಾರಪೂರ್ಣ ಶಿಕ್ಷಣ ಪಡೆದ ಮಕ್ಕಳು ಮುಂದಿನ ದಿನಗಳಲ್ಲೂ ಈ ಸಂಸ್ಕಾರವನ್ನು ಮುಂದುವರಿಸಿಕೊಂಡು ಬಂದಿರುವುದೇ ಶಿಶುಮಂದಿರದ ಅತ್ಯುತ್ಕೃಷ್ಟವಾದ ಶಿಕ್ಷಣ ವಿಧಾನಕ್ಕೆ ಕನ್ನಡಿ ಹಿಡಿದಂತಿದೆ.

ನೆರೆಕರೆ ಕ್ಷೇಮ ಯೋಜನೆ

ಸಮುದಾಯ ಅಭಿವೃದ್ಧಿಯನ್ನು ಕೇಂದ್ರವಾಗಿರಿಸಿಕೊಂಡಿರುವ ಈ ಯೋಜನೆಯು ನಿಟ್ಟೆ ಹಾಗೂ ಪರಿಸರದ ಆರ್ಥಿಕವಾಗಿ ಹಿಂದುಳಿದ ಜನರ ಶೈಕ್ಷಣಿಕ – ಆರ್ಥಿಕ ಪ್ರಗತಿಗೆ ಹೆಚ್ಚು ಮಹತ್ವ ನೀಡಿದುದಾಗಿದೆ. ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ವೈದ್ಯಕೀಯ ಸೇವೆಯನ್ನು ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ ನಿರುದ್ಯೋಗಿ ಯುವ ಜನತೆಗೆ ಸ್ವ-ಉದ್ಯೋಗ ತರಬೇತಿಗಳನ್ನು ನೀಡುವ ಮೂಲಕ ಅವರು ಸ್ವಾವಲಂಬಿಗಳಾಗಿ, ಸ್ವತಂತ್ರ ಜೀವನವನ್ನು ನಡೆಸುವುದಕ್ಕೆ ಸಹಕಾರಿಯಾಗಿದೆ. ಆದುದರಿಂದ ವಿದ್ಯಾಸಂಸ್ಥೆಯ ಸುತ್ತಮುತ್ತಲಿನ ಜನತೆ ‘ನಿಟ್ಟೆ ವಿದ್ಯಾಸಂಸ್ಥೆ ನಮ್ಮದು’ ಎಂಬುದಾಗಿ ಅಭಿಮಾನದಿಂದ ಹೇಳಿಕೊಳ್ಳುವಂತಾಗಿದೆ.

ನೆರೆಕರೆ ಕ್ಷೇಮ ಯೋಜನೆಯಡಿ ಪ್ರತಿವರ್ಷವೂ ನಿಟ್ಟೆ ಪರಿಸರದ ಬಡಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಜನರು ನಾಡಿನ ಸಂಸ್ಕೃತಿಯ ಸುಗಂಧವನ್ನರಿಯಬೇಕು ಎಂಬ ದೃಷ್ಟಿಯಿಂದ, ವಿದ್ಯಾಸಂಸ್ಥೆಯ ಆವರಣದಲ್ಲಿಯೇ ನಡೆಯುವ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ‘ನೆರೆಕರೆ ಕ್ಷೇಮ’ಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಹಬ್ಬ ಹರಿದಿನಗಳಂದು ಬಡ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ – ಬೆಲ್ಲ ವಿತರಿಸುವ ಸಂಪ್ರದಾಯವೂ ಈ ಯೋಜನೆಯಲ್ಲಿದೆ.

‘ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮ’ದನ್ವಯ ನಿಟ್ಟೆ ವಿದ್ಯಾಸಂಸ್ಥೆಯು ಹದಿಮೂರೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಶಾಲೆಗಳಿಗೆ ಮೂವತ್ತೈದು ಕಂಪ್ಯೂಟರ್‌ಗಳನ್ನು ಒದಗಿಸಿದೆ. ಇಪ್ಪತ್ಮೂರು ಶಾಲೆಗಳಿಗೆ ತರಗತಿಯ ಪೀಠೋಪಕರಣಗಳು, ಬೋಧನೋಪಕರಣಗಳು ಹಾಗೂ ಕ್ರೀಡಾ ಸಾಮಗ್ರಿಗಳನ್ನು ಒದಗಿಸಿದೆ.

14-2-2002ರಂದು ಅಧಿಕೃತವಾಗಿ ಉದ್ಘಾಟನೆಗೊಂಡ ಈ ನೆರೆಕರೆ ಕ್ಷೇಮ ಯೋಜನೆಯು ನಿಟ್ಟೆ ಗ್ರಾಮದ ಸಮಸ್ತ ಜನತೆಯ ಕಲ್ಯಾಣ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದು ಜನರಿಗೆ ನೆಮ್ಮದಿಯ ಜೀವನ ಕಲ್ಪಿಸುವ ಉದ್ದೇಶವನ್ನು ಹೊಂದಿದೆ. ೞಸರ್ವೇ ಜನಾಃ ಸುಖಿನೋ ಭವಂತು! ಎಂದು ನಂಬಿದ್ದ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರು ತಮ್ಮ ಬದುಕಿನ ದಿನಗಳಲ್ಲಿಯೇ ಈ ಯೋಜನೆಯ ಕುರಿತಾದ ಮಹಾ ಕನಸನ್ನು ಕಂಡಿದ್ದರು. ಇದೀಗ ಅವರ ಪುತ್ರ ಎನ್. ವಿನಯ ಹೆಗ್ಡೆಯವರು ತಂದೆಯ ಕನಸನ್ನು ಸಾಕಾರಗೊಳಿಸಿದ್ದಾರೆ.

ಉಚಿತ ತಾಂತ್ರಿಕ ತರಬೇತಿ

ನಿಟ್ಟೆಯಲ್ಲಿರುವ ಸಂಸ್ಥೆಯ ಸಮುದಾಯ ಪಾಲಿಟೆಕ್ನಿಕ್‌ನಲ್ಲಿ ಕಳೆದ ಆರು ವರ್ಷಗಳಿಂದ ಇಲೆಕ್ಟ್ರಿಕಲ್, ಪ್ಲಂಬಿಂಗ್, ಮೆಕ್ಯಾನಿಕ್, ಟೈಲರಿಂಗ್, ಮೋಟಾರು ವಾಹನ ಚಾಲನೆ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳ ದುರಸ್ತಿ ಕುರಿತ ಉಚಿತ ವೃತ್ತಿಪರ ತರಬೇತಿಯನ್ನು ನಡೆಸಲಾಗುತ್ತಿದೆ. ವಿದ್ಯಾಸಂಸ್ಥೆಯು ಪ್ರತಿವರ್ಷವೂ ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳನ್ನು ಉಚಿತ ವೃತ್ತಿಪರ ತಾಂತ್ರಿಕ ತರಬೇತಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ವಿನಿಯೋಗಿಸುತ್ತಿದೆ.

1981ರಲ್ಲಿ ನಿಟ್ಟೆಯಲ್ಲಿ ಸ್ಥಾಪಿಸಲಾದ ‘ಲೆಮಿನಾ ಫ್ರೌಂಡ್ರೀಸ್’ನಲ್ಲಿ ಅಮೆರಿಕಾ ಮತ್ತು ಐರೋಪ್ಯ ದೇಶಗಳಿಗೆ ರಫ್ತು ಮಾಡುವಂತಹ ಮೋಟಾರು ವಾಹನಗಳ ಬ್ರೆಕ್ ಡ್ರಂಗಳನ್ನು ಉತ್ಪಾದಿಸಲಾಗುತ್ತಿದೆ. ಈ ಫ್ರೌಂಡ್ರಿಯು ನಿಟ್ಟೆ ಗ್ರಾಮದ ಸುಮಾರು 700 ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ.

ಮಹಿಳಾ ಉದ್ಯೋಗ ಮಂಡಲಿ

ವಿದ್ಯಾಸಂಸ್ಥೆಯು ಸ್ಥಾಪಿಸಿರುವ ಮಹಿಳಾ ಉದ್ಯೋಗ ಮಂಡಲಿಯಡಿ ಮುದ್ರಣಾಲಯ, ಹೊಲಿಗೆ ತರಬೇತಿ ಘಟಕ, ಒಂದು ಕ್ಯಾಂಟೀನ್, ಗೃಹೋಪಯೋಗಿ ವಸ್ತುಗಳ ಉತ್ಪಾದನೆ ಮತ್ತು ಮಾರಾಟ ಘಟಕಗಳಿದ್ದು, ಲಾಭಾಂಶವನ್ನು ಹೊಂದಿದೆ. ಹದಿನೈದು ಲಕ್ಷ ರೂಪಾಯಿಗಳ ವಾರ್ಷಿಕ ವಹಿವಾಟನ್ನು ನಡೆಸುತ್ತಿರುವ ಈ ಮಹಿಳಾ ಉದ್ಯೋಗ ಮಂಡಲವು ಸುಮಾರು ಇನ್ನೂರೈವತ್ತು ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸಿದೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ವಸತಿ ಸೌಕರ್ಯ

ಅನ್ಯಾಯದ ವಿರುದ್ಧ ಸಿಡಿದೆದ್ದು, ರಾಷ್ಟ್ರದ ಉನ್ನತ ಹುದ್ದೆಯನ್ನು ನಿರಾಕರಿಸಿ, ಮರಳಿ ತನ್ನ ನಾಡಿಗೆ ಬಂದ ಕೆ.ಎಸ್. ಹೆಗ್ಡೆಯವರು ನಿಟ್ಟೆ ವಿದ್ಯಾಸಂಸ್ಥೆಯನ್ನು ಆರಂಬಿಸುವ ಮೊದಲೇ ಬಡವರಿಗಾಗಿ ಕಡಿಮೆ ವೆಚ್ಚದಲ್ಲಿ ನೂರಾರು ಸಣ್ಣ ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು. ಇದುವರೆಗೆ ವಿದ್ಯಾಸಂಸ್ಥೆಯ ವೆಚ್ಚದಲ್ಲಿ ಸುಮಾರು ಇನ್ನೂರೈವತ್ತು ಮನೆಗಳ ನವೀಕರಣಕ್ಕೆ ಕಟ್ಟಡ ಸಾಮಗ್ರಿಗಳನ್ನು ಪೂರೈಸಲಾಗಿದೆ. ನೂರಕ್ಕೂ ಹೆಚ್ಚು ಕಡಿಮೆ ವೆಚ್ಚದ ಮನೆಗಳನ್ನು ನಿರ್ಮಿಸಲಾಗಿದೆ.

ಎಪ್ಪತ್ತೈದು ಫಲಾನುಭವಿಗಳಿಗೆ ತಲಾ ಅರುವತ್ತು ಸಾವಿರ ರೂಪಾಯಿಗಳ ಆರ್ಥಿಕ ಸಹಾಯವನ್ನು ಮನೆ ನಿರ್ಮಾಣಕ್ಕಾಗಿ ನೀಡಲಾಗಿದೆ. ಅಲ್ಲದೆ ಮನೆ ದುರಸ್ತಿ ಮತ್ತು ನವೀಕರಣ ಉದ್ದೇಶಗಳಿಗೆಂದು ಇನ್ನೂರು ಲಕ್ಷ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ. ಕುಡಿಯುವ ನೀರಿನ ಪೂರೈಕೆಗಾಗಿ ವಿದ್ಯಾಸಂಸ್ಥೆಯು ಈಗಾಗಲೇ ಹನ್ನೆರಡು ಲಕ್ಷ ರೂಪಾಯಿಗಳನ್ನು ವಿನಿಯೋಗಿಸಿದೆ.

ಸನ್ಮತಿ

ನಮ್ಮಲ್ಲಿರುವ ಒಳ್ಳೆಯ ಆಲೋಚನೆ, ಒಳ್ಳೆಯ ಚಿಂತನೆಗಳೇ ನಮ್ಮನ್ನು ಸುಸಂಸ್ಕೃತ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ. ಕೌಡೂರು ಸದಾನಂದ ಹೆಗ್ಡೆಯವರ ಮನಸ್ಸು ಪರಿಶುದ್ಧವಾಗಿತ್ತು; ಹೃದಯ ನಿರ್ಮಲವಾಗಿತ್ತು. ಹಾಗಾಗಿಯೇ ಅವರು, ತಾನು ಬದುಕುವುದರೊಂದಿಗೆ – ತನ್ನ ಸುತ್ತಣ ಸಮಾಜವು ನೆಮ್ಮದಿಯಿಂದ ಬದುಕಬೇಕು ಎಂಬ ಕನಸು ಕಂಡರು. ಆ ಕನಸನ್ನು ನನಸಾಗಿಸಿದರು. ಸುಸಂಸ್ಕೃತ ತಾಯಿ ತಂದೆಯರಿಗೆ ಮಾತ್ರ ಮಗನಾಗಲಿಲ್ಲ; ಹೊತ್ತ ಭೂಮಿ ತಾಯಿಗೂ ಹೆಮ್ಮೆಯ ಪುತ್ರನಾಗಿ ಬದುಕಿ ಸಮಾಜದ ಋಣ ತೀರಿಸಿದರು. 1990ರ ಮೇ 25ರಂದು ಅವರು ಭೌತಿಕ ಶರೀರವನ್ನು ಬಿಟ್ಟು, ಇಹಲೋಕದ ಯಾತ್ರೆಯನ್ನು ಮುಗಿಸಿದರು. ಇಹಲೋಕದಿಂದ ದೂರವಾದರೂ ಅವರು ವಿದ್ಯಾಸಂಸ್ಥೆಯಿಂದ ದೂರವಾಗಿಲ್ಲ ಎಂಬುದನ್ನು ನೆನಪಿಸುತ್ತಿದೆ – ನಿಟ್ಟೆಯಲ್ಲಿರುವ ಅವರ ಹಾಗೂ ಮೀನಾಕ್ಷಿ ಹೆಗ್ಡೆಯವರ ಸ್ಮಾರಕ – ‘ಸನ್ಮತಿ’.

ಸಮಾದಿ ಸ್ಥಳದ ಸಮೀಪದಲ್ಲಿಯೇ ಚಿಕ್ಕದಾದ – ಚೊಕ್ಕದಾದ ವಸ್ತು ಸಂಗ್ರಹಾಲಯವಿದೆ. ಈ ವಸ್ತು ಸಂಗ್ರಹಾಲಯ ಬಹಳಷ್ಟು ಸುಂದರವಾಗಿದೆ. ಚಿಕ್ಕದಾದ ಗ್ರಂಥಾಲಯವೂ ಇದರಲ್ಲಿದೆ. ಕೆ.ಎಸ್. ಹೆಗ್ಡೆಯವರು ನ್ಯಾಯಾಧೀಶರಾಗಿದ್ದ ಸಂದರ್ಭದಲ್ಲಿ ತೊಡುತ್ತಿದ್ದ ಅವರ ಕೋಟು, ಕೊರಳ ಪಟ್ಟಿ, ಪೆನ್ನು, ಕ್ಷೌರ ಮಾಡಲು  ಉಪಯೋಗಿಸುತ್ತಿದ್ದ ಸಾಮಗ್ರಿಗಳು ಹಾಗೂ ಅವರು ಬಳಸುತ್ತಿದ್ದ ಕೆಲವು ವಸ್ತುಗಳನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಅಲ್ಲದೆ ರಾಜ್ಯಸಭಾ ಸದಸ್ಯರಾಗಿ, ಲೋಕಸಭೆಯ ಸ್ಪೀಕರ್ ಆಗಿ, ನ್ಯಾಯವಾದಿಗಳಾಗಿ, ನ್ಯಾಯಾಧೀಶರಾಗಿ, ರಾಷ್ಟ್ರ ರಾಜಕಾರಣಿಯಾಗಿ ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಬೆಳೆಯುತ್ತಿರುವ ಬೃಹತ್ ವಿದ್ಯಾಸಂಸ್ಥೆಗೆ ಬೀಜಕ್ಷೇಪ ಮಾಡಿ ತಮ್ಮ ಬದುಕನ್ನು ಸಾರ್ಥಕಗೊಳಿಸಿದ ಕೆ.ಎಸ್. ಹೆಗ್ಡೆಯವರ ಬಾಳ ಪುಟಗಳನ್ನು ತೆರೆದಿಡುವ ಭಾವಚಿತ್ರಗಳು ಈ ವಸ್ತು ಸಂಗ್ರಹಾಲಯದಲ್ಲಿವೆ. ಈ ಸನ್ಮತಿ ಭವನದ ಒಳಹೊಕ್ಕರೆ ಪ್ರಶಾಂತ ಭಾವ ನಮ್ಮಲ್ಲಿ ಮೂಡುತ್ತದೆ. ಹಸಿರು ರಾಶಿಯಲ್ಲಿ ಬಗೆ ಬಗೆಯ ಬಣ್ಣ ಬೀರಿ ಅರಳಿ ನಿಂತ ಗುಲಾಬಿ ಗಿಡಗಳು ಒಂದೆಡೆಯಾದರೆ, ಶುಭ್ರ ನೀರಿನಿಂದ ಕೂಡಿರುವ ಕೆರೆಗಳು – ಬಣ್ಣ ಬಣ್ಣದ ಮೀನುಗಳು ನಮ್ಮ ಮೈರೋಮಾಂಚನಗೊಳಿಸುತ್ತವೆ. ‘ಸನ್ಮತಿ’ಯ ವಾತಾವರಣ ನೊಂದ ಮನಸ್ಸಿಗೆ ಸಾಂತ್ವನ ನೀಡುತ್ತದೆ. ಬೆಂದ ನೋವಿಗೆ ನೆಮ್ಮದಿಯ ತಂಪೆರೆಯುತ್ತದೆ. ನಿರಾಶೆಯ ಮುಗಿಲುಗಳನ್ನು ದೂರ ಸರಿಸಿ, ಆಸೆಯ ಹೊಂಗಿರಣಗಳನ್ನು ಮೂಡಿಸುತ್ತದೆ. ಇಲ್ಲಿ ಕವಿಹೃದಯ ಬಿಚ್ಚಿಕೊಳ್ಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಪರಿಸರದ ಬಂಧುಗಳಾಗುತ್ತೇವೆ. ಇಲ್ಲಿನ ಮರ – ಗಿಡ – ಹೂ – ಬಳ್ಳಿಗಳ ನಂಟು ನಮಗೆ ಅಂಟಿನಂತೆ ಅಂಟಿಕೊಳ್ಳುತ್ತದೆ. ನಮ್ಮ ಮತಿಯೂ ‘ಸನ್ಮತಿ’ಯಾಗಿ ರೂಪುಗೊಳ್ಳುತ್ತದೆ. ನಮಗೆ ಮಾರ್ಗದರ್ಶನವಿತ್ತ ಹಿರಿಯ ಚೇತನಗಳಿಗೆ ವಂದಿಸಿ ಕೃತಾರ್ಥರಾಗುತ್ತೇವೆ.

ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಸೇವಾ ಪ್ರತಿಷ್ಠಾನ

1990ರಲ್ಲಿ ಕೆ.ಎಸ್. ಹೆಗ್ಡೆಯವರು ನಿಧನ ಹೊಂದಿದಾಗ ಅವರ ಸ್ಮರಣಾರ್ಥವಾಗಿ ಸಾಮಾಜಿಕ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ವಿಸ್ತತ ನೆಲೆಯಲ್ಲಿ ಕೈಗೊಳ್ಳಲು ‘ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಸೇವಾ ಪ್ರತಿಷ್ಠಾನ’ ಎಂಬ ಸೇವಾಸಂಸ್ಥೆಯನ್ನು ಸ್ಥಾಪಿಸಲಾಯಿತು. ಆರೋಗ್ಯ ಸೇವೆ, ಶಾಲೆ, ಶೈಕ್ಷಣಿಕ ಬೆಂಬಲ, ವಸತಿ, ಕುಡಿಯುವ ನೀರಿನ ಪೂರೈಕೆ, ಜಲಾಗಾರ ಸ್ಥಾಪನೆ, ಅನಾಥ ಮಕ್ಕಳ ಪುನರ್ವಸತಿ, ಸರಕಾರಿ ಮತ್ತಿತರ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸುವಿಕೆ ಮೊದಲಾದ ಧ್ಯೇಯೋದ್ದೇಶಗಳನ್ನು ಈ ಪ್ರತಿಷ್ಠಾನ ಹೊಂದಿದ್ದು, ಅವುಗಳ ಸಾಧನೆಗಾಗಿ ಕಾರ್ಯತತ್ಪರವಾಗಿದೆ. ಈ ಸಂಸ್ಥೆಯು ಸಮುದಾಯ ಅಭಿವೃದ್ಧಿ ಯೋಜನೆಯನ್ವಯ ಆರೋಗ್ಯಸೇವೆಗಾಗಿ ಇದೀಗ ವರ್ಷಕ್ಕೆ ಮೂರು ಕೋಟಿಗೂ ಮಿಕ್ಕಿ ಹಣ ವ್ಯಯಿಸಿದ್ದು ಒಂದು ಲಕ್ಷಕ್ಕೂ ಹೆಚ್ಚು ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ನ್ಯಾ| ಕೆ.ಎಸ್. ಹೆಗ್ಡೆ ಪ್ರತಿಷ್ಠಾನ ಪ್ರಶಸ್ತಿ

ಸಮಾಜದ ವಿವಿಧ ಸ್ತರಗಳಲ್ಲಿ ಉನ್ನತ ಸ್ಥಾನಕ್ಕೇರಿ ಜನಜನಿತರಾದ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರು 1990ರಲ್ಲಿ ನಿಧನರಾದ ಬಳಿಕ ಅವರ ಸ್ಮರಣಾರ್ಥವಾಗಿ ಜನ್ಮ ತಳೆದ ಸಂಸ್ಥೆಯೇ ‘ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಸೇವಾ ಪ್ರತಿಷ್ಠಾನ’. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಾನ್ ವ್ಯಕ್ತಿಗಳನ್ನು ಗುರುತಿಸಿ, ಗೌರವಿಸುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಪ್ರತಿಷ್ಠಾನ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಯು ಎರಡು ಲಕ್ಷ ರೂಪಾಯಿ ನಗದು ಬಹುಮಾನ, ಸ್ಮರಣಿಕೆ, ಬೆಳ್ಳಿಯ ಫಲಕ ಹಾಗೂ ಸನ್ಮಾನಪತ್ರಗಳನ್ನು ಒಳಗೊಂಡಿದೆ.