ಸೋನ್ಸ್ ಅವರ ಫಾರ್ಮ್‌ನಲ್ಲೇ ನರ್ಸರಿಯೂ ಇದೆ. ರಂಬುಟಾನ್ ಬೀಜದ ಮತ್ತು ಕಸಿಯ ಗಿಡವಿದೆ. ಋತುವಿನಲ್ಲಿ ಹಣ್ಣೂ ಸಿಗುತ್ತದೆ. “ಇಷ್ಟೊಂದು ಕಷ್ಟಪಟ್ಟು ಬೆಳೆಸಿದ ಹಣ್ಣಿನ ಗಿಡ ನೀವು ಮಾರಬಾರದಿತ್ತು. ನೀವೇ ಏಕಸ್ವಾಮ್ಯ ಸಾಧಿಸಿಕೊಂಡರೆ ಈಗ ಹಣ ಕೊಯ್ಯಬಹುದಿತ್ತು” ಎಂದು ಹೇಳುವವರಿದ್ದಾರೆ. ಆದರೆ ಹಂಚಿ ತಿನ್ನುವುದರಲ್ಲೇ ಸೋನ್ಸ್ ಅವರಿಗೆ ತೃಪ್ತಿ. ಅತೃಪ್ತಿಯ ಭಾವ ಇರುವುದು ನಮ್ಮ ಮಣ್ಣಿಗೆ ಹೊಂದುವ ಇನ್ನೆಷ್ಟೋ ಬೆಳೆಗಳಿವೆ. ಅದನ್ನು ಹುಡುಕಿ ತರಿಸಿ ಬೆಳೆಸಲಾಗಿಲ್ಲ ಎನ್ನುವುದರಲ್ಲಿ. ಉಳಿದಂತೆ ಅವರು ಯಾವಾಗಲೂ ಆಶಾವಾದಿ. ತೀರದ ಜ್ಞಾನದ ಹಸಿವೆ (ಹೊಸಸಂಗತಿ, ಸಾಧನೆಯ ಪ್ರಸ್ತಾಪ ಮಾಡಿದರೆ, ಫೋನು ನಂಬರು ಕೊಡಿ, ಒಮ್ಮೆ ಹೋಗಿ ನೋಡೋಣ ಎಂಬ ಉತ್ತರ).

ಈವರೆಗಿನ ಒಡನಾಟದಲ್ಲಿ ತಪ್ಪಿಯೂ ಇವರು ಗೊಣಗಿದ್ದು, ಪರದೂಷಣೆ ಮಾಡಿದ್ದು ಒಮ್ಮೆಯೂ ಕೇಳಿಲ್ಲ.
– ಶ್ರೀ ಪಡ್ರೆ, ಖ್ಯಾತ ಜಲತಜ್ಞರು, ಪ್ರಜಾವಾಣಿ ಕೃಷಿ ಪುಟದಲ್ಲಿ

ಸೋನ್ಸ್ ಫಾರ್ಮ್ ಅನಾನಾಸು ಹಣ್ಣಿನ ಕಾಶಿ. ಈ ಫಾರ್ಮ್ ಅಷ್ಟು ಹೆಸರುವಾಸಿಯಾಗಲು ಕಾರಣ ಅದರ ಮಾಲೀಕರು. ಡಾ ಎಲ್.ಸಿ. ಸೋನ್ಸ್ ಕೃಷಿಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಹೊಸ ಹೊಸ ಪ್ರಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿದೇಶಕ್ಕೆ ಹೋದಾಗ ಅಲ್ಲಿನ ಕೃಷಿಪದ್ಧತಿ ತಿಳಿದುಕೊಂಡು ಅದನ್ನು ತಮ್ಮ ಫಾರ್ಮ್‌ನಲ್ಲಿ ಅಳವಡಿಸುತ್ತಾರೆ. ಯಶಸ್ವಿಯಾದ ನಂತರ ಇತರ ರೈತರಿಗೂ ಹಂಚುತ್ತಾರೆ. ಕೆಲವು ವಿದೇಶಿ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಯಶಸ್ವಿ ಫಲಿತಾಂಶ ಪಡೆದಿದ್ದಾರೆ.

– ಬೆಳುವಾಯಿ ಸೀತಾರಾಮ ಆಚಾರ್ಯ, ಪತ್ರಕರ್ತರು, ವಿಜಯಕರ್ನಾಟಕ

ದಶಕಗಳ ಹಿಂದೆ ತಮ್ಮ ಆಸುಪಾಸು ತೋಟಗಳಿಗೆ ನೀರು ತೀರಾ ಅಭಾವವಾದಾಗ, ಭೂಗರ್ಭ ವಿಜ್ಞಾನಿಗಳ ಸಲಹೆಗಳು ಫಲ ಕೊಡದಾದಾಗ, ಅವಶ್ಯಕತೆಯ ಕಾರಣದಿಂದ ಊಹಾ ಶೋಧದ ಪುಸ್ತಕಗಳನ್ನು ಜಾಳಿಸಿ ಕವಲುಗೋಲು ಹಿಡಿಯುವ ಅಭ್ಯಾಸ ನಡೆಸಿ, ಈ ಮಟ್ಟಕ್ಕೆ ತಲುಪಿರುವ ಸೋನ್ಸ್, ಈ ವಿದ್ಯೆಯನ್ನು ಸ್ವಾರ್ಥಕ್ಕಾಗಿ ಗುಪ್ತವಾಗಿಡಲು ಬಯಸಿದವರಲ್ಲ. ಇನ್ನಷ್ಟು ಸಮಯ, ಉತ್ಸಾಹ ಇರುವವರು ಹೆಚ್ಚಿನ ಅಧ್ಯಯನ ನಡೆಸಿ ಇದನ್ನು ಲೋಕ ಕಲ್ಯಾಣಕ್ಕಾಗಿ ಬಳಸಲಿ ಎಂಬುದು ಇವರ ಉದ್ದೇಶ. ಡಾ ಎಲ್.ಸಿ. ಸೋನ್ಸ್ ಜಲಶೋಧನೆ ವಿಭಾಗದಲ್ಲಿ ಸಾಕಷ್ಟು ಪಾಂಡಿತ್ಯ ಪಡೆದಿದ್ದಾರೆ.

– ಶಂಕರ್ ಸಾರಡ್ಕ, ಸುಧಾ ವಾರಪತ್ರಿಕೆ – 1996

Model Farmer : Soans farm near Moodbidri in Dakshina Kannada District- has turned. Tourist spot thanks to the innovative farming methods adopted by its owner. Chandramohan Soans. Dr. L.C. Soans set out to be a model farmer and has Accomplished his goal. A doctorate in agricultural sciences has helped to some extent.

Over four decades of his unflagging commitment to innovative farming has today paid rich devidends. The 100 odd acres of Soans farm stand testimony to the viability of innovative farming for anyone prepared to take up cultivation seriously and scientifically.
ಆಶಾ. ಕೆ., ಡೆಕ್ಕನ್ ಹೆರಾಲ್ಡ್ – ‘ಸ್ಪೆಕ್ಟ್ರಮ್’ನಲ್ಲಿ

ಮಾನವ ಪ್ರಯತ್ನಕ್ಕೆ ನಿಲುಕದ ವಿಚಾರವಿಲ್ಲ. ನಿರಂತರ ಶ್ರಮ, ಹಿಡಿದ ಕೆಲಸವನ್ನು ಮಾಡಿ ತೋರಿಸುವ ಛಲ – ಹಾಗೆಯೇ ಪ್ರಕೃತಿಯ ಸಹಕಾರ ಒದಗಿದಲ್ಲಿ ಏನು ಸಾಧಿಸಬಹುದು ಎಂಬುದನ್ನು ಮನಗಾಣಲು ಒಮ್ಮೆ ಸೋನ್ಸ್ ಫಾರ್ಮನ್ನು ಸುತ್ತಿ ಬರಬೇಕು. ಇದೊಂದು ಸಾಮಾನ್ಯ ಫಾರ್ಮ್ ಅಲ್ಲ, ಅನೇಕ ಅದ್ಭುತ ಸಾಧನೆಗಳ ಪ್ರತ್ಯಕ್ಷ ತಾಣ. ಸಸ್ಯಪ್ರಿಯರಿಗೆ ಇದೊಂದು ಪ್ರೇಕ್ಷಣೀಯ ಸ್ಥಳ. ಸಸ್ಯ ಶಾಸ್ತ್ರಿಗಳಿಗೆ ಪ್ರಕೃತಿಯಲ್ಲಿ ಪ್ರಾತ್ಯಕ್ಷಿಕ ಪ್ರಯೋಗಶಾಲೆ ಇದು. ಪುಸ್ತಕದ ಹುಳುವಾಗಿ, ಎಲ್ಲೋ ಏರ್‌ಕಂಡಿಶನ್ ಛೇಂಬರ್‌ಗಳಲ್ಲಿ ಕುಳಿತು ಸಸ್ಯಶಾಸ್ತ್ರದ ವಿಚಾರಗಳ ಬಗ್ಗೆ ಸಂಶೋಧಿಸಿ, ದಾಖಲಿಸುವ, ಡಾಕ್ಟರೇಟ್ ಗಳಿಸುವ ಅನೇಕ ವ್ಯಕ್ತಿಗಳಿರುವಾಗ ಅದಕ್ಕೆ ವಿರುದ್ಧವಾಗಿ ಹೊರದೇಶದಲ್ಲಿ ಅಭ್ಯಸಿಸಿ, ಡಾಕ್ಟರೇಟ್ ಪಡೆದು ಮಣ್ಣಿನ ಮಗನಾಗಿ ಮಣ್ಣಿನ ಪ್ರಕೃತಿಯ ಗುಣವರಿತು ಹೊಸದನ್ನು ಕಾಣುವ, ಸಾಧಿಸಿದ್ದನ್ನು ಇತರರಿಗೆ ತಿಳಿಸುವ ಹೆಮ್ಮೆಯ ವ್ಯಕ್ತಿ ಡಾ ಎಲ್.ಸಿ. ಸೋನ್ಸ್.

– ಭಗವಾನ್, ‘ಬದುಕು ಭವಿಷ್ಯ’ ಅಂಕಣದಲ್ಲಿ

A man with a doctorate from an American University, with possibilities of a easy career in Indian Universities or the corporate world, decides to live and work on a farm in the hinterland of tulunadu, and enjoys the choice he made forty years ago. He has introduced many varieties of plants from all over the world to tulunadu. He is keen on helping the local farmers to adopt multiple crops that need less water and can be more rewarding.

Joh B. Monteiro, ‘The Vijay Times’ – 2005

ಕೃಷಿಯನ್ನೇ ಮೆಚ್ಚಿಕೊಂಡು ಸಮೃದ್ಧ ಬದುಕನ್ನು ನಡೆಸುತ್ತಿರುವ ಡಾ ಸೋನ್ಸ್ ಅವರಿಗೆ ‘ಉತ್ತಮ ಕೃಷಿಕ’ ಪ್ರಶಸ್ತಿ ಸಂದಿರುವುದು ನಿಜವಾಗಿಯೂ ಸಂತೋಷದ ವಿಷಯ. ಕೃಷಿಯನ್ನೇ ಮೆಚ್ಚಿಕೊಂಡು ಸಂತೃಪ್ತ-ಸಮೃದ್ಧ ಜೀವನವನ್ನು ನಡೆಸಬಹುದು ಎಂಬುದಕ್ಕೆ ಡಾ ಸೋನ್ಸ್‌ರೇ ಉತ್ತಮ ಉದಾಹರಣೆ. ಡಾ ಎಲ್.ಸಿ. ಸೋನ್ಸ್ ಕೃಷಿಯನ್ನು ಉದ್ದಿಮೆಯಾಗಿ ನಡೆಸಿದ ಯಶಸ್ವಿ ಸಾಧಕ.

ಕೆ.ಎಂ. ಉಡುಪ, ‘ಉದಯವಾಣಿ’

Moodbidri is known for its pioneering efforts in farm toursim. Soans Farm is known for its’s fruits and flower bearing trees. A chinese bamboo grove there has become a major attraction for tourists arriving here through the cruise circuit.

According to the creator of Medicine wheet and labyrinth at moodbidre Dr. L.C. Soans’ one has to see them to believe them.
– M. Raghuram, ‘The Hindu’ 2006