ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ|
ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ||
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ|
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ||

ಎಂಬ ಕವಿವಾಣಿಯಂತೆ, ಪ್ರಕೃತಿಮಾತೆ ತನ್ನ ಇಚ್ಛೆಯ ತಾಣವನ್ನಾಗಿ ಆರಿಸಿಕೊಂಡ ಪ್ರದೇಶವೇ ಕೊಡಗು. ಕರ್ನಾಟಕದ ಇಪ್ಪತ್ತೇಳು ಜಿಲ್ಲೆಗಳಲ್ಲಿ, ಬರೀ 4,100 ಚದರ ಕಿ.ಮೀ. ವಿಸ್ತೀರ್ಣವುಳ್ಳ ಜಿಲ್ಲೆಯಾದ ಕೊಡಗಿನಲ್ಲಿ ಮೂರು ತಾಲ್ಲೂಕುಗಳು: ಉತ್ತರದಲ್ಲಿ, ಮಡಿಕೇರಿ ಹಾಗೂ ಸೋಮವಾರಪೇಟೆ; ದಕ್ಷಿಣದಲ್ಲಿ ವಿರಾಜಪೇಟೆ. ಜಿಲ್ಲೆಯ ಬಹುಭಾಗ, ಪ್ರಪಂಚದಲ್ಲಿಯೇ ಜೀವವೈವಿಧ್ಯತೆಗೆ ಹೆಸರಾದ ಪಶ್ಚಿಮಟ್ಟಗಳಿಂದಾವೃತವಾಗಿದೆ.

ಕಾವೇರಿಮಾತೆಯ ಜನ್ಮಸ್ಥಳ ತಲಕಾವೇರಿ. ಕಾವೇರಿಯ ಉಪನದಿಗಳಾದ ಲಕ್ಷ್ಮಣತೀರ್ಥ, ಬರಳೆ ಮತ್ತು ಹಾರಂಗಿ ಅಲ್ಲದೆ ಹೇಮಾವತಿ ಮತ್ತು ಅಸಂಖ್ಯಾತ ಝರಿ-ತೊರೆಗಳು ಪಶ್ಚಿಮಟ್ಟಗಳ ಕಣಿವೆಗಳಲ್ಲಿ ಹರಿದು ಕೊಡಗಿನ ನೆಲವನ್ನು ಪಾವನಗೊಳಿಸುತ್ತವೆ. ಈ ಗಿರಿಶಿಖರಗಳ ಮಧ್ಯೆಯಿರುವ ಕಮರಿ-ಕಣಿವೆಗಳೆಷ್ಟೋ!

ಬಹುಭಾಗ ನೀರೆಲ್ಲ ಹರಿದುಹೋಗುವುದರಿಂದ, ಕೊಡಗಿನಲ್ಲಿ ದೊಡ್ಡ ಜಲಾಶಯಗಳಿಲ್ಲ; ಸಣ್ಣ ಕೆರೆಗಳನ್ನು ಮಾತ್ರ ಕಾಣಬಹುದು. ನದಿ, ಕಾಲುವೆ, ಕೆರೆಗಳ ತೀರದಲ್ಲಿ ಜೌಗುಪ್ರದೇಶಗಳಿವೆ. ಇಲ್ಲಿ ಸೊಂಪಾಗಿ ಬೆಳೆದ ಹುಲ್ಲು, ಜೊಂಡು ಮತ್ತು ಬಿದಿರು ಕಾಡುಗಳನ್ನು ಕಾಣುತ್ತೇವೆ. ಬೆಟ್ಟಗಳ ಬುಡದಲ್ಲಿರುವ ಸಮತಟ್ಟು ಪ್ರದೇಶಗಳಲ್ಲಿ ರೈತರು ಭತ್ತ ಬೆಳೆಯುತ್ತಾರೆ. ವರ್ಷದಲ್ಲಿ ಮಳೆಗಾಲದ ಒಂದೇ ಬೆಳೆ ಬೆಳೆಯುವುದರಿಂದ,  ನಾಡಿನ ಎಲ್ಲ ಹಬ್ಬ-ಹರಿದಿನಗಳೂ ಪ್ರಕೃತಿಯ ವಾರ್ಷಿಕ ಚಕ್ರವನ್ನವಲಂಬಿಸಿ, ಭತ್ತದ ಬೆಳೆಯೊಂದಿಗೆ ಹೆಣೆದುಕೊಂಡಿವೆ. ಬೆಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ವಿಲವಾಗಿ ಕಾಫಿ, ಮೆಣಸು ಮತ್ತು ಏಲಕ್ಕಿ ತೋಟಗಳನ್ನು ಕಾಣಬಹುದು. ಈ ಎಸ್ಟೇಟುಗಳಲ್ಲಿರುವ ನೆರಳು ಮರಗಳೇ ಅಸಂಖ್ಯ ಜೀವಿಗಳಿಗೆ ಆಶ್ರಯ ನೀಡುತ್ತವೆ.

ಕಣ್ಣಿಗೆ ಹಬ್ಬವನ್ನುಂಟುಮಾಡುವ ಪಶ್ಚಿಮಟ್ಟಗಳ ಸಾಲು, ಕಾಫಿ-ಏಲಕ್ಕಿ ಎಸ್ಟೇಟುಗಳು, ದಿಗಂತದವರೆಗೂ ಪಸರಿಸಿರುವ ಭತ್ತದ ಗದ್ದೆಗಳು, ಕೊಡಗಿನ ನೆಲದ ಫಲವತ್ತತೆಗೆ ಸಾಕ್ಷಿ. ಇಲ್ಲಿ ನಾಲ್ಕು ರೀತಿಯ ಕಾಡುಗಳನ್ನು ಕಾಣಬಹುದು: ಕೊಡಗಿನ ಪಶ್ಚಿಮದಲ್ಲಿ, ಸೂರ್ಯರಶ್ಮಿಯೂ ನೆಲಕ್ಕೆ ತಾಗದಂತೆ ಎತ್ತರವಾಗಿ, ಒತ್ತಾಗಿ ಬೆಳೆದ ಅರೆ-ನಿತ್ಯ ಮತ್ತು ನಿತ್ಯಹರಿದ್ವರ್ಣ ಕಾಡುಗಳು ಕಣ್ಣಿಗೆ ತಂಪನ್ನೆರೆಯುತ್ತವೆ. ಉತ್ತರ, ಮಧ್ಯ ಹಾಗೂ ದಕ್ಷಿಣ ಕೊಡಗಿನಲ್ಲಿ ಒಣ ಮತ್ತು ಶೀತ ಉದುರೆಲೆ ಕಾಡುಗಳಿವೆ. ಈ ಕಾಡುಗಳಲ್ಲಿ ಬೀಟೆ, ನಂದಿ, ಸಂಪಿಗೆ, ಹಲಸು, ಹೆಬ್ಬಲಸು, ಮತ್ತಿ, ಮಾವು, ಧೂಪ, ದೇವದಾರು, ಗೋಳಿ, ಹೊನ್ನೆ, ಕರ್ಪಚೆಕ್ಕೆ, ಹಿಪ್ಪೆ, ಅಶೋಕ, ಬಿಳಿನಂದಿ, ಗೇರು, ಆಲ-ಅತ್ತಿ ಮುಂತಾದ ಮರಗಳೂ, ನೆಟ್ಟುಬೆಳೆಸಿದ ತೇಗದ ಕಾಡುಗಳೂ ಇವೆ. ಅಲ್ಲದೆ ಶೀತಗಾಡುಗಳಲ್ಲಿ ನಾನಾಬಗೆಯ ಬೆತ್ತಗಳು, ವಿವಿಧ ಜಾತಿಯ ಜರಿಗಿಡಗಳು, ಅಸಂಖ್ಯ ಬಳ್ಳಿ, ಬಿದಿರುಗಳು, ಪಾಚಿ ಮತ್ತು ಆರ್ಕಿಡ್ಗಳೂ ಬೆಳೆಯುತ್ತವೆ.
ಪಶ್ಚಿಮ ಟ್ಟಗಳ ಕಣಿವೆ ಪ್ರದೇಶಗಳಲ್ಲಿ ಶೋಲಾ ಹಸಿರುಗಾಡುಗಳಿದ್ದರೆ, ಇಳಿಜಾರು ಪ್ರದೇಶಗಳಲ್ಲಿರುವ ಒತ್ತಾದ, ವಿಶಾಲವಾದ ಹುಲ್ಲುಕಾಡುಗಳು ವಿಶೇಷ ಸ್ಥಾನವನ್ನೇ ಪಡೆದಿವೆ. ಇವು ಸ್ಪಂಜಿನಂತೆ ಮಳೆನೀರನ್ನು ಹೀರಿಕೊಂಡು, ನೆಲದಲ್ಲಿ ಇಂಗಲು ಸಹಾಯ ಮಾಡುವುದಲ್ಲದೆ, ಭೂ ಸವಕಳಿ ತಡೆಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.

ಜಿಲ್ಲೆಯ ರ್ವದಲ್ಲಿ ಪ್ರಸ್ಥಭೂಮಿಯನ್ನು ಕಾಣಬಹುದು. ಇಲ್ಲಿ ಸೀಗೆ, ಲಾಂಟಾನ, ಇನ್ನಿತರ ಮುಳ್ಳು ದೆಗಳ ಕುರುಚಲು ಕಾಡು ಹಾಗೂ ವಿರಳ ಕಾಡುಗಳಿವೆ. ವಿಶಾಲವಾದ ಬಯಲು ಪ್ರದೇಶಗಳಲ್ಲಿರುವ ಹಳ್ಳಿಗಳಲ್ಲಿ ರೈತಾಪಿ ಜನರ ಹೊಲ-ತೋಗಳಿವೆ. ಕೊಡಗಿನ ವಿವಿಧ ನೆಲೆ-ಆವಾಸಗಳ ಸವಿವರವುಳ್ಳ ಭೂಪಟಕ್ಕೆ ರಕ್ಷಾಟದ ಒಳಬದಿಯಲ್ಲಿರುವ ಚಿತ್ರ ನೋಡಿ.

ಸಂರಕ್ಷಿತ ಪ್ರದೇಶಗಳು:

ಕೊಡಗಿನ ಪ್ರಕೃತಿ ಸೌಂದರ್ಯದ ಖನಿಯನ್ನು ಉಳಿಸಿ, ಬೆಳೆಸಲು ಹಲವೆಡೆ ೋಷಿತ ರಕ್ಷಿತಾರಣ್ಯಗಳಿವೆ. ಉತ್ತರದಲ್ಲಿ ತಲಕಾವೇರಿ, ಷ್ಪಗಿರಿ ಮತ್ತು ಬ್ರಹ್ಮಗಿರಿ ರಕ್ಷಿತಾರಣ್ಯಗಳು ಹಾಗೂ ದಕ್ಷಿಣದಲ್ಲಿ ನಾಗರಹೊಳೆ (ರಾಜೀವ್ ಗಾಂಧಿ) ರಾಷ್ಟ್ರೀಯ ಉದ್ಯಾನವನ ಇವುಗಳಲ್ಲಿ ಪ್ರಮುಖವಾದುವು. ಈ ಅರಣ್ಯಗಳು ಲಕ್ಷೋಪಲಕ್ಷ ಜೀವಿಗಳಿಗೆ ಆಶ್ರಯ ತಾಣವಾಗಿರುವುದಲ್ಲದೆ, ಜೀವವೈವಿಧ್ಯತೆಯ ಆಗರಗಳಾಗಿವೆ. ಸಸ್ಯಾಹಾರಿ ಪ್ರಾಣಿಗಳ ವರ್ಗಕ್ಕೆ ಸೇರಿದ ಆನೆ, ಕಾಡೆಮ್ಮೆ, ಹುಲ್ಲೆ, ಹುಲ್ಲೆಯ ಜಾತಿಗೆ ಸೇರಿದ ನಾಲ್ಕು ಕೊಂಬಿನ ಕೊಂಡುಕುರಿ ಮತ್ತು ಕಾಡುಹಂದಿಗಳಲ್ಲದೆ, ಜಿಂಕೆಯ ಜಾತಿಗೆ ಸೇರಿದ ಕಡವೆ, ಸಾರಂಗ, ಕಾಡುಕುರಿ, ಹಾಗೂ ಬೆಕ್ಕಿನ ಗಾತ್ರದ ಕೂರಹಂದಿ ಇವೆಲ್ಲ ಸೇರಿವೆ.

ಮಾಂಸಾಹಾರಿಗಳ ಗುಂಪಿನಲ್ಲಿ ಮಾರ್ಜಾಲಗಳಾದ ಹುಲಿ, ಚಿರತೆ, ಕಾಡುಬೆಕ್ಕು, ಹುಲಿಬೆಕ್ಕು, ಅಲ್ಲದೆ ಕಬ್ಬೆಕ್ಕು, ಮುಂಗುಸಿ ಮತ್ತು ಅಪರೂಪದ ಮರನಾಯಿಗಳು; ಬೇಟೆಗಾರ ಪ್ರಾಣಿಗಳಾದ ಕತ್ತೆಕಿರುಬ, ತೋಳ, ಕೆನ್ನಾಯಿ, ನೀರ್ನಾಯಿ, ಅಲ್ಲದೆ ಮುಳ್ಳುಹಂದಿ, ಕೀಟಭಕ್ಷಕ ಚಿ್ಪಹಂದಿ ಮತ್ತು ಕರಡಿಗಳಿವೆ.

ಇನ್ನು ವಾನರರ ವರ್ಗದಲ್ಲಿ ಕೋತಿ, ಮುಚ್ಚ, ನೀಲಗಿರಿ ಮುಚ್ಚ, ಮುಸುವ, ಕಾಡುಪಾಪ ಮತ್ತು ಅಪರೂಪದ ಸಿಂಗಲೀಕ ಸೇರಿವೆ. ಈ ಪ್ರಾಣಿಗಳಲ್ಲದೆ, ಮೊಲ, ಹಾರುವ ಅಳಿಲು, ಕೆಂಚಳಿಲು, ಮುಂತಾದ ವಿಶಿಷ್ಟ ಪ್ರಾಣಿಗಳೂ ಈ ಕಾಡುಗಳಲ್ಲಿವೆ.

ಉರಗಸಂಕುಲಕ್ಕೆ ಸೇರಿದ ಹಲವಾರು ವಿಷ-ವಿಷರಹಿತ ಹಾವುಗಳು, ಮೊಸಳೆ, ಉಡಗಳೂ ಇಲ್ಲಿವೆ. ಹಂದಿಮೀನು (ಮಹಶೀರ್), ಕಾರ್ಪ್, ಮ್ಯೂರೆಲ್ ಮುಂತಾದ ಮೀನುಗಳು ಮತ್ತು ಹುಲ್ಲುಕಪ್ಪೆ, ಗೂಳಿಕಪ್ಪೆ ಮುಂತಾದ ಕಪ್ಪೆಯ ವಿವಿಧ ಪ್ರಭೇದಗಳಿವೆ. ಮೆದುಚಿಪ್ಪಿನ ಆಮೆ, ಕರಿ ಆಮೆ, ಟ್ರಾವಂಕೂರ್ ಆಮೆ, ಬೆಳುವಾಮೆ, ಬೆತ್ತದಾಮೆ ಮುಂತಾದ ಕೂರ್ಮವರ್ಗದ ಪ್ರಾಣಿಗಳಿವೆ. ಇನ್ನು ಕೀಟ ವಿಜ್ಞಾನಿಗಳಿಗೆ-ಪಕ್ಷಿತಜ್ಞರಿಗೆ ಹಾಗೂ ಪಕ್ಷಿವೀಕ್ಷಕರಿಗೆ ಚಿಟ್ಟೆ-ಪತಂಗ-ಹಕ್ಕಿಗಳಿಂದ ತುಂಬಿ ತುಳುಕುತ್ತಿರುವ ಈ ಕಾಡುಗಳು ಸ್ವರ್ಗಸಮಾನವಾಗಿವೆ.

ಇಂದು ವಿಜ್ಞಾನದ ಹೊಸ ಆವಿಷ್ಕಾರವಾದ ಡಿ.ಎನ್.ಎ. ಬೆರಳಚ್ಚು ತೆಗೆಯುವ ವಿಧಾನದಿಂದ ಸಕಲ ಸಸ್ಯ-ಪ್ರಾಣಿಗಳ ಪ್ರಭೇದಗಳನ್ನು ಕರಾರುವಾಕ್ಕಾಗಿ ಗುರುತುಹಿಡಿಯಲು ಸಾಧ್ಯವಾಗಿದೆ. ಅಲ್ಲದೆ ಈ ಕ್ರಮ ಪಶ್ಚಿಮಟ್ಟಗಳ ಜೀವಿವೈವಿಧ್ಯತೆಯ ಹೊಸ ಭಂಡಾರವನ್ನೇ ತೆರೆದಿದೆ.
ದೇವರಕಾಡು: ಸಂರಕ್ಷಣೆಯ ಸಂಪ್ರದಾಯ

ಸಸ್ಯಸಂಕುಲಗಳನ್ನು, ಪ್ರಾಣಿಪಕ್ಷಿಗಳನ್ನು ದೇವರ ಹೆಸರಿನಲ್ಲಿ ಜಿಸಿ, ರಕ್ಷಿಸುವ ಸಂಪ್ರದಾಯಗಳು ಪ್ರಪಂಚದ ನಾನಾ ಭಾಗಗಳಲ್ಲಿ ಆಚರಣೆಯಲ್ಲಿವೆ. ಭಾರತದಲ್ಲಿ, ಅದರಲ್ಲಿಯೂ ಕರ್ನಾಟಕದ ಕೊಡಗಿನಲ್ಲಿ ದೇವಕಾಡ್ ಅಥವಾ ದೇವರಕಾಡುಗಳೆಂದು ಕರೆಯಲ್ಪಡುವ ಪವಿತ್ರವನಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಪ್ರತಿ ಹಳ್ಳಿಯಲ್ಲಿ ಒಂದಕ್ಕಿಂತ ಹೆಚ್ಚು ದೇವರಕಾಡುಗಳನ್ನು ನಾವು ಕಾಣಬಹುದು. ಸಣ್ಣಸಣ್ಣ ಕಾಡುಗಳನ್ನು ಜಾಸ್ಥಾನಗಳಾಗಿ ಪರಿವರ್ತಿಸಿ, ಅವುಗಳನ್ನು ರಕ್ಷಿಸುವ ಕಾರ್ಯ ಒಂದು ವಿಶೇಷ ಪದ್ಧತಿಯಾಗಿ ಇಲ್ಲಿಯ ಜನರಲ್ಲಿ ಬೆಳೆದುಬಂದಿದೆ. ಸುಮಾರು 1,214 ಇಂತಹ ದೇವರಕಾಡುಗಳು 3,650 ಚದರ ಕಿ.ಮೀ. ವಿಸ್ತೀರ್ಣದಲ್ಲಿದೆ! ಇತ್ತೀಚೆಗೆ ಅರಣ್ಯ ಇಲಾಖೆ, ಸರ್ಕಾರೇತರ ಸ್ವಯಂಸೇವಾಸಂಸ್ಥೆಗಳು ಹಾಗೂ ಹಲವಾರು ಸಂಶೋಧನಾ ಕೇಂದ್ರಗಳು ದೇವರಕಾಡು ಸಂರಕ್ಷಣೆಗಾಗಿ ಸ್ಥಳೀಯ ಸಮುದಾಯದೊಂದಿಗೆ ಕೈಜೋಡಿಸಿದ್ದಾರೆ. ಇವು ವನ್ಯಜೀವಿಗಳಿಗೆ ಸುರಕ್ಷಿತ ಸ್ಥಾನಗಳಲ್ಲದೆ, ಸಂಶೋಧನೆಗಳಿಗೂ ಉತ್ತಮ ತಾಣಗಳಾಗಿವೆ. ಈ ದೇವರಕಾಡುಗಳ ಬಗ್ಗೆ ಜನರಲ್ಲಿ ಇತ್ತೀಚೆಗೆ ಇನ್ನೂ ಹೆಚ್ಚಿನ ಕಳಕಳಿ, ಉತ್ಸಾಹ ಕಂಡುಬರುತ್ತಿರುವುದು ಮತ್ತೊಂದು ಉತ್ತಮ ಬೆಳವಣಿಗೆ. ಯಾವುದೇ ಶುಭ್ರವಾದ ಮುಂಜಾನೆ ನೀವು ಒಂದು ದೇವರಕಾಡಿನಲ್ಲಿ ಪಕ್ಷಿವೀಕ್ಷಣೆ ಮಾಡಿದಲ್ಲಿ ನೀವು ಅಲ್ಲಿ ಏನಿಲ್ಲವೆಂದರೂ 30-40 ಪ್ರಭೇದದ ಹಕ್ಕಿಗಳನ್ನು ಕಾಣಬಹುದು!

ಹೀಗೆ, ವಿಸ್ತಾರವಾದ ಕಾಫಿ. ಏಲಕ್ಕಿ ಎಸ್ಟೇಟುಗಳು, ಅವುಗಳಲ್ಲಿರುವ ಅಸಂಖ್ಯಾತ ನೆರಳು ಮರಗಳು, ಮನೆಗಳ ಸುತ್ತಮುತ್ತ ಅಂಗಳದಲ್ಲಿ ವಿಶೇಷವಾಗಿ ಬೆಳೆಸಿರುವ ಹಣ್ಣು ಹಾಗೂ ಹೂದೋಟಗಳು, ಇವೆಲ್ಲ ಕೊಡಗನ್ನು ಸಮೃದ್ಧಿಗೊಳಿಸಿವೆ. ಹೀಗೆ ಕೊಡಗಿನಲ್ಲಿರುವ, ಬೇರೆಲ್ಲಿಯೂ ಕಾಣದ, ವೈವಿಧ್ಯಮಯ ಆವಾಸಸ್ಥಾನಗಳು ಇಲ್ಲಿಯ ಸಮೃದ್ಧ ಜೀವವೈವಿಧ್ಯತೆಗೆ ಕಾರಣವಾಗಿ ಒಟ್ಟಿನಲ್ಲಿ ಪ್ರಕೃತಿಮಾತೆಯ ಹೆಮ್ಮೆಯ ತಾಣವನ್ನಾಗಿಸಿವೆ.

ಪುಸ್ತಕದ ಬಗ್ಗೆ ಎರಡು ಮಾತು:

ಹಕ್ಕಿಗಳು ಸ್ವಾತಂತ್ರ್ಯ, ಶಾಂತಿ ಮತ್ತು ಸೌಂದರ್ಯದ ಪ್ರತಿನಿಧಿಗಳು. ಅವು, ಅಪರಿಮಿತ ನೈಸರ್ಗಿಕ ವೈಭವವುಳ್ಳ ಕೊಡಗಿನ ಸೊಬಗನ್ನು ಇಮ್ಮಡಿಗೊಳಿಸಿವೆ. ಕೊಡಗಿನಲ್ಲಿ ಕಂಡುಬರುವ ಪಕ್ಷಿವೈವಿಧ್ಯತೆ ಅರ್ವ. ಕೊಡಗಿನ ಅರಣ್ಯ ಪ್ರದೇಶಗಳಲ್ಲಿ, ಎಸ್ಟೇಟುಗಳಲ್ಲಿ, ಹಣ್ಣು-ಹೂದೋಟಗಳ ನಡುವೆ ಸುತ್ತಾಡುತ್ತಾ, ಪ್ರಕೃತಿಯ ಮಡಿಲಲ್ಲಿ ಚಿಲಿಪಿಲಿಗುಟ್ಟುತ್ತಾ ಹಾರಾಡುವ ಹಕ್ಕಿಗಳನ್ನು ನೋಡುವುದು, ಮನಸ್ಸಿಗೆ ಅನಿರ್ವಚನೀಯ ಆನಂದವನ್ನು ನೀಡುತ್ತದೆ!

ನೂರಾರು ವರ್ಷಗಳ ಹಿಂದಿನ ಇತಿಹಾಸದಲ್ಲೂ, ಬ್ರಿಟಿಷ್ ಆಡಳಿತದ ಸಮಯದಲ್ಲೂ ಕೊಡಗಿಗೆ ಒಂದು ಪ್ರತ್ಯೇಕ ಹಾಗೂ ವಿಶಿಷ್ಟ ಸ್ಥಾನವಿತ್ತು. ಇಂದಿಗೂ ಪಶ್ಚಿಮಟ್ಟಗಳ ಸಾಲಿನಲ್ಲಿ ಬರುವ ಇತರ ಜಿಲ್ಲೆಗಳನ್ನು ಗಮನಿಸಿದಲ್ಲಿ ಕೊಡಗು ಈ ವಿಶೇಷತೆಯನ್ನು ಉಳಿಸಿಕೊಂಡು ಬಂದಿದೆ. ಇಲ್ಲಿಯ ಜನಜೀವನ, ಭಾಷೆ, ವೇಷ-ಭೂಷಣ, ಸಾಂಸ್ಕೃತಿಕ ಪರಂಪರೆ, ಎಲ್ಲವೂ ವಿಭಿನ್ನ ಹಾಗೂ ವಿಶಿಷ್ಟ. ಅಲ್ಲದೆ ಇಲ್ಲಿರುವ ವೈವಿಧ್ಯಮಯ ಪ್ರಾಕೃತಿಕ ಆವಾಸಗಳು ಇಲ್ಲಿಯ ಸಮೃದ್ಧ ಜೀವವೈವಿಧ್ಯತೆಗೆ ಕಾರಣ. ಒಂದು ದೇಶದ ಅತಿ ಟ್ಟ ಭೂವಿಸ್ತೀರ್ಣದಲ್ಲಿ ಆ ದೇಶದ ಶೇಕಡ 25ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳು ಮನೆಮಾಡಿವೆ ಎಂದರೆ ಈ ನಾಡಿನ ಉತ್ಕೃಷ್ಟತೆಯನ್ನು ನಾವು ಮನಗಾಣಬಹುದು. ಆದರೆ ಇಲ್ಲಿರುವ ಅತ್ಯರ್ವ ಪಕ್ಷಿಸಂಕುಲದ ಬಗ್ಗೆ ಸಮಗ್ರ ಮಾಹಿತಿಯುಳ್ಳ ಗ್ರಂಥ ಇಲ್ಲಿಯವರೆಗೆ ಲಭ್ಯವಿರಲಿಲ್ಲ ಮತ್ತು ಈ ಕೊರತೆ ಎದ್ದುಕಾಣುತ್ತಿತ್ತು.

ಆದ್ದರಿಂದ ಭಾರತದೇಶದಲ್ಲಿಯೇ ಅತಿ ವಿಶಿಷ್ಟವಾದ ಕೊಡಗಿನ ಖಗರತ್ನಗಳ ಬಗ್ಗೆ ಸಂರ್ಣ ಮಾಹಿತಿಯನ್ನು ನೀಡುವುದೇ ಈ ಸ್ತಕದ ಉದ್ದೇಶ. ಪಕ್ಷಿಗಳ ಮಾಹಿತಿಗಳುಳ್ಳ, ಕ್ಷೇತ್ರ-ಮಾರ್ಗದರ್ಶಕದಂತೆ ಇರುವ, ಇತರ ಸ್ತಕಗಳ ಧಾಟಿಯಲ್ಲಿಯೇ ಈ ಹೊತ್ತಗೆಯೂ ರೂಗೊಂಡಿದೆ. ಕೊಡಗಿನ ಒಟ್ಟು 310 ಪಕ್ಷಿಪ್ರಭೇದಗಳ ಚಿತ್ರಗಳು ಮತ್ತು ಮಾಹಿತಿಗಳನ್ನು, ಜೊತೆಜೊತೆಯಲ್ಲಿ ಒತ್ತಟ್ಟಿಗೆ ಕಾಣಬಹುದು. ಇದು ಆಯಾ ಕುಟುಂಬದ ಹಕ್ಕಿಗಳನ್ನು ಹೋಲಿಸಿ ನೋಡಲು ಮತ್ತು ಹೆಚ್ಚು ಶ್ರಮವಿಲ್ಲದೆ ಓದಲು ಅನುಕೂಲವಾಗುವುದು. ಪ್ರತಿಯೊಂದು ಹಕ್ಕಿಯ ಆಕಾರ, ರೂರೇಷೆ, ಆವಾಸಸ್ಥಾನ, ನಡವಳಿಕೆ, ಆಹಾರ, ಗೂಡಿನ ರಚನೆ, ಮೊಟ್ಟೆಗಳ ವಿವರಗಳನ್ನು ಇಂಗ್ಲಿಷಿನಲ್ಲಿ ಬರೆಯಲಾಗಿದೆ. ಇಂಗ್ಲಿಷ್ ಮತ್ತು ಕನ್ನಡ ಈ ಎರಡೂ ಭಾಷೆಗಳಲ್ಲಿ ಪಠ್ಯವಿದ್ದರೂ, ಅದು ಒಂದರ ಮತ್ತೊಂದು ಭಾಷಾಂತರವಲ್ಲ. ಸ್ವಾರಸ್ಯಕರ, ಮುಖ್ಯ ಹಾಗೂ ವಿಶಿಷ್ಟ ವಿಚಾರಗಳು ಕನ್ನಡದಲ್ಲಿ ಕಾಣಬಹುದು. ಹಕ್ಕಿಗಳ ಕೊಡವ ಹೆಸರು ಇದ್ದಲ್ಲಿ ಅವುಗಳನ್ನು ಆವರಣದಲ್ಲಿ ನೀಡಲಾಗಿದೆ. ನಿರ್ದಿಷ್ಟವಾಗಿ ಹೇಳದಿದ್ದಲ್ಲಿ, ಚಿತ್ರವು ಗಂಡುಹಕ್ಕಿಯದ್ದೆಂದೇ ತಿಳಿಯತಕ್ಕದ್ದು.

ಕೊಡಗಿನಲ್ಲಿ ವಾಸವಿರುವ ಸಕಲ ಪಕ್ಷಿಗಳ ಬಗ್ಗೆ ಸಪ್ರಮಾಣವಾದ, ವಿಶ್ವಾಸಾರ್ಹವಾದ ಮಾಹಿತಿಯನ್ನೂ ಒಂದೇ ಹೊತ್ತಗೆಯಲ್ಲಿ ಕ್ರೋಢೀಕರಣಗೊಳಿಸಲು ಪ್ರಯತ್ನಿಸಲಾಗಿದೆ. ಆದ್ದರಿಂದ ಪಕ್ಷಿಗಳ ಬಗ್ಗೆ ಕುತೂಹಲ, ಅಭಿರುಚಿ, ಕಳಕಳಿಯಿರುವ ವಿದ್ಯಾಗಳಿಗೆ, ಸಾರ್ವಜನಿಕರಿಗೆ, ಈ ಸ್ತಕ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ.

ಎಷ್ಟೋ ಅಂತರರಾಷ್ಟ್ರೀಯ ನಿಯಮಗಳು, ನಿಬಂಧನೆಗಳು, ಕಟ್ಟುಪಾಡುಗಳಿದ್ದರೂ, ಮಾನವನ ದುರಾಸೆ, ಸ್ವಾರ್ಥ, ಕ್ರೌರ್ಯದ ಮುಂದೆ ಈ ಸಂಪತ್ತನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳೂ ನಿಷ್ಫಲವಾಗಿವೆ.

ನಮ್ಮ ದೇಶವು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಸಂಸ್ಕೃತಿಯುಳ್ಳದ್ದಾಗಿದೆ. ಪಕ್ಷಿಗಳ ಬಗ್ಗೆ ಆಸಕ್ತಿಯಿರುವ ಸುಮಾರು ಹದಿನಾರು ಸಾವಿರಕ್ಕೂ ಹೆಚ್ಚು ಪಕ್ಷಿವೀಕ್ಷಕರು ಭಾರತದಲ್ಲಿದ್ದಾರೆ. ಪ್ರಪಂಚದಾದ್ಯಂತ ಪಕ್ಷಿಸಂಕುಲ ನಾಶವಾಗುತ್ತಿರುವ ಬಗ್ಗೆ ಆತಂಕಕಾರಿ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ, ಹಲವಾರು ಸಂ-ಸಂಸ್ಥೆಗಳು ಈ ಬಗ್ಗೆ ವಿದ್ಯಾಗಳಲ್ಲಿ, ಜನಸಾಮಾನ್ಯರಲ್ಲಿ, ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಪಕ್ಷಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದರ ಮೂಲಕ, ಅಳಿವಿನ ಅಂಚಿಗೆ ತಲುಪಿರುವ ಪಕ್ಷಿಪ್ರಭೇದಗಳ ವಿವರಗಳನ್ನು ಪಡೆಯಲು ನೆರವಾಗುತ್ತದೆ. ಯಾವ ಪ್ರಭೇದದ ಪಕ್ಷಿಯ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕೆಂಬುದನ್ನು ತೀರ್ಮಾನಿಸಲು ಈ ಮಾಹಿತಿಗಳು ಸಹಾಯಕವಾಗುತ್ತವೆ.