ಆಕಾಶವನ್ನೇ ತಮ್ಮ ಸಾಮ್ರಾಜ್ಯನ್ನಾಗಿಸಿಕೊಂಡಿರುವ ಪಕ್ಷಿಗಳು, ಜೀವವಿಕಾಸದಲ್ಲಿ ಕೋಟ್ಯಾಂತರ ವರ್ಷಗಳ ಹಿಂದೆಯೇ ಬಹು ದೊಡ್ಡ ಸಾಧನೆ ಮಾಡಿವೆ ಎಂದರೂ ತಪ್ಪಿಲ್ಲ. ಜ್ಞಾನಾರ್ಜನೆಯಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಇಂದಿನ ವಿದ್ಯಾಗಳಿಗೆ ಬಹು ಮುಖ್ಯ. ಅದರಲ್ಲೂ ಪ್ರಕೃತಿಯಲ್ಲಿ ಕಂಡುಬರುವ ವಿಸ್ಮಯಕರ ಹಾಗೂ ಮನೋಲ್ಲಾಸಕರ ಸಂಗತಿಗಳನ್ನು ಸ್ವತಃ ತಾವೇ ನಡೆದು, ನೋಡಿ, ಕೇಳಿ, ಓದಿ ತಿಳಿದುಕೊಳ್ಳಬಯಸುವ ವಿದ್ಯಾಗಳಿಗೆ ಇದು ಬಹು ಮಹತ್ತ್ವವುಳ್ಳ ವಿಚಾರವಾಗಿದೆ. ಪರಿಸರ ರಕ್ಷಣೆಯ ಬಗ್ಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಇವು ಬಹಳ ಸಹಕಾರಿಯಾಗಿವೆ. ಪಕ್ಷಿವೀಕ್ಷಣೆ ಸುಲಭವೂ, ರೋಮಾಂಚನಕಾರಿಯೂ ಆದ ಹವ್ಯಾಸವಾಗಿದೆ.

ಪಕ್ಷಿಗಳು ಪ್ರಕೃತಿಯ ಒಂದು ಅವಿಭಾಜ್ಯ ಅಂಗ. ಅವು ನಮ್ಮ ಸುತ್ತಮುತ್ತಲ ಹೊಲ-ಗದ್ದೆಗಳಲ್ಲಿ, ಮನೆಗಳಲ್ಲಿ, ಕೆರೆಗಳಲ್ಲಿ, ನದಿ-ನಾಲೆಗಳ ಸುತ್ತಮುತ್ತಲಿನ ಜಾಗಗಳಲ್ಲಿ ಕಾಣಸಿಗುತ್ತವೆ. ಅಂದರೆ ಪಕ್ಷಿಗಳ ಜೀವನಚಕ್ರಗಳು ಹೆಚ್ಚಾಗಿ ಮನುಷ್ಯನ ನಂದಿನ ಜೀವನ, ಆಹಾರ ಪದ್ಧತಿ ಮತ್ತು ಋತುಮಾನದ ಬದಲಾವಣೆಗಳೊಂದಿಗೆ ಹಾಸುಹೊಕ್ಕಾಗಿವೆ. ಆದ್ದರಿಂದ ಪಕ್ಷಿವೀಕ್ಷಣೆಯನ್ನು ಎಲ್ಲಿ ಬೇಕಾದರೂ ಸುಲಭವಾಗಿ ಮಾಡಬಹುದು. ಹೆಚ್ಚಿನ ಬಗೆಯ ಹಕ್ಕಿಗಳು ನಮ್ಮ ಊರಿನ ಸುತ್ತಮುತ್ತಲ ಪ್ರದೇಶಗಳಲ್ಲಿಯೇ ಇರುವುದರಿಂದ ಅವುಗಳನ್ನು ನಾವು ನಮ್ಮ ಮನೆಯ ಕಿಟಕಿ-ಬಾಗಿಲಿನ ಮೂಲಕವೇ ನೋಡಬಹುದಾದರೂ, ಹಲವು ಬಾರಿ ಪಕ್ಷಿವೀಕ್ಷಣೆ ನಮ್ಮನ್ನು ಮನೆಯಿಂದ ಹೊರಗೆ ಬರುವಂತೆ ಮಾಡುತ್ತದೆ. ಅದರಲ್ಲಿಯೂ ಎಸ್ಟೇಟುಗಳಲ್ಲಿ, ಅರಣ್ಯಗಳಲ್ಲಿ ಮರಗಳು ಹೂವು-ಹಣ್ಣುಗಳನ್ನು ತಳೆದು, ಸಾವಿರಾರು ಹಕ್ಕಿಗಳನ್ನು ಆಕರ್ಷಿಸುವ ಸನ್ನಿವೇಶಗಳು ಪಕ್ಷಿವೀಕ್ಷಕರಿಗೆ ರಸದೌತಣವನ್ನು ನೀಡುತ್ತವೆ. ದಟ್ಟವಾದ ಅರಣ್ಯ ಪ್ರದೇಶ ಪಕ್ಷಿವೀಕ್ಷಣೆಗೆ ನಿರಾಶಾದಾಯಕ ಜಾಗ; ಎಷ್ಟು ಸುತ್ತಿದರೂ ಒಂದೂ ಹಕ್ಕಿ ಕಾಣಸಿಗದಿರಬಹುದು.  ಯಾವುದೋ ಒಂದು ತಿರುವಿನಲ್ಲಿ, ಕಾಡು ವಿರಳವಾದಾಗ, ಇದ್ದಕ್ಕಿದ್ದಂತೆ ಎಲ್ಲಿಂದಲೋ ಹಲವಾರು ಜಾತಿಯ ಹಕ್ಕಿಗಳು ಒಮ್ಮೆಲೇ ದೊಡ್ಡ ಅಲೆಯಂತೆ ಧಾಳಿಯಿಡುತ್ತವೆ. ಕೀಟ, ಮಕರಂದ, ಹಣ್ಣು ಮುಂತಾದ ಆಹಾರವನ್ನರಸಿ ಬರುವ ಈ ಮಿಶ್ರಪಕ್ಷಿಬೇಟೆಯನ್ನು  ನಿಯತವಾಗಿ ಪ್ರತಿದಿನ ಕಾಣಬಹುದು.

ಪಕ್ಷಿವೀಕ್ಷಣೆ ಮಾಡುವುದು ಹೇಗೆ?

ಪಕ್ಷಿಗಳು ನಮ್ಮ ಸುತ್ತಮುತ್ತಲ ಎಲ್ಲಾ ಪರಿಸರದಲ್ಲೂ ವಾಸಿಸುವುದರಿಂದ ಅವುಗಳನ್ನು ಗಮನಿಸುವುದು ಬಹಳ ಸುಲಭ. ಪ್ರಾರಂಭದಲ್ಲಿ ಬರಿಗಣ್ಣಿನಿಂದಲೇ ಹಕ್ಕಿಗಳನ್ನು ಗುರುತಿಸಿ ಅವುಗಳ ಚಲನವಲನಗಳನ್ನು ಗಮನವಿಟ್ಟು ನೋಡುವ ಅಭ್ಯಾಸ ಮಾಡಿಕೊಳ್ಳಬೇಕು. ಇದರೊಂದಿಗೆ, ಅವುಗಳ ಧ್ವನಿಯನ್ನು ಕೇಳಿ ನೆನೆಪಿನಲ್ಲಿಟ್ಟುಕೊಳ್ಳುವುದು ಅವಶ್ಯ. ನಾವು ಭೇಟಿ ನೀಡುವ ಸ್ಥಳದಲ್ಲಿ ಯಾವ ಯಾವ ಪ್ರಭೇದದ ಪಕ್ಷಿಗಳನ್ನು ನಿರೀಕ್ಷಿಸಬಹುದು ಎಂಬ ಅರಿವು ನಮಗೆ ಮೊದಲೇ ಇದ್ದಲ್ಲಿ, ಅವುಗಳನ್ನು ಗುರುತು ಹಿಡಿಯುವುದು ಸಲೀಸಾಗುತ್ತದೆ.

ಪಕ್ಷಿವೀಕ್ಷಣೆ ಮಾಡುವಾಗ ನಾವು ಗಮನದಲ್ಲಿರಿಸಬೇಕಾದ ಸಂಗತಿಗಳು:

  • ತಿಳಿಬಣ್ಣದ ಬಟ್ಟೆಗಳನ್ನೇ ಧರಿಸಬೇಕು. ಕಣ್ಣಿಗೆ ರಾಚುವಂತಹ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಬಾರದು.
  • 2-3 ಜನರಿರುವ ಸಣ್ಣ ಗುಂ ಪಕ್ಷಿವೀಕ್ಷಣೆಗೆ ಸೂಕ್ತ.
  • ಪಕ್ಷಿಗಳನ್ನು ವೀಕ್ಷಿಸುವಾಗ ಆದಷ್ಟೂ ನಿಶ್ಶಬ್ದವಾಗಿರಬೇಕು. ಓಡಾಡುವಾಗ ಚರಪರ ಶಬ್ದ ಮಾಡಬಾರದು. ಹಕ್ಕಿಗಳು ಆಗಂತುಕರನ್ನು ಬಹು ಬೇಗ ಪತ್ತೆ ಮಾಡುತ್ತವೆ!
  • ಮುಂಜಾನೆ ಹಕ್ಕಿಗಳು ತಮ್ಮ ನೆಲೆಯಿಂದ ಹೊರಬರುವ, ಹಾಗೂ ಸಂಜೆ ನಃ ಹಿಂದಿರುಗುವ ಸಮಯ, ಪಕ್ಷಿವೀಕ್ಷಣೆಗೆ ಸೂಕ್ತ.
  • ಪಕ್ಷಿಗಳ ಚಟುವಟಿಕೆಗಳಿಗೆ ಭಂಗಬಾರದಂತೆ, ದೂರದಿಂದಲೇ ಅವುಗಳನ್ನು ಗಮನಿಸಬೇಕು. ದೆ-ಎಲೆ, ಗಿಡಗಂಟಿಗಳೊಳಗಿನ ಸಣ್ಣ ಅಲುಗಾಟಗಳನ್ನು ನಾವು ನೇರವಾಗಿ ನೋಡುವುದಕ್ಕಿಂತ, ಕಣ್ಣಂಚಿನಿಂದಲೇ ಅರಿಯುವ ಅಭ್ಯಾಸ ಮಾಡಿಕೊಳ್ಳಬೇಕು.
  • ಹಕ್ಕಿಗಳ ಗೂಡು ಕಂಡಲ್ಲಿ, ಪಕ್ಷಿಗಳಿಗೆ ಮತ್ತು ಮೊಟ್ಟೆ ಹಾಗೂ ಮರಿಗಳಿಗೆ ತೊಂದರೆಯಾಗದಂತೆ ಬಹಳ ಎಚ್ಚರವಹಿಸಬೇಕು. ನಿಮ್ಮನ್ನು ಹಿಂಬಾಲಿಸುತ್ತಿರುವ ಕಾಗೆಗಳು ಇಂತಹ ಗೂಡುಗಳನ್ನು ಗುರುತಿಟ್ಟುಕೊಂಡು ನಂತರ ನಾಶ ಮಾಡುತ್ತವೆ.
  • ನಿಮ್ಮದು ಬರೇ ಪಕ್ಷಿವೀಕ್ಷಣೆಯಾಗಿರಲಿ, ಅಥವಾ ಹಕ್ಕಿಗಳ ಛಾಯಾಗ್ರಹಣ, ಧ್ವನಿಗ್ರಹಣ, ವೈಜ್ಞಾನಿಕ ಅನ್ವೇಷಣೆ, ಅಥವಾ ಇನ್ನಾವುದೇ ನಿರ್ದಿಷ್ಟ ವಿಷಯವಿರಲಿ, ಹಕ್ಕಿಗಳ ಹಿತವನ್ನು ಕಾಯುವುದೇ ನಿಮ್ಮ ಲಕ್ಷ್ಯವಾಗಿರಬೇಕು.
  • ಪ್ಲಾಸ್ಟಿಕ್ ಚೀಲಗಳನ್ನು ಕೊಂಡೊಯ್ದ ಪಕ್ಷದಲ್ಲಿ ಅವನ್ನು ಕಂಡಲ್ಲಿ ಬಿಸಾಡದೆ, ವಾಪಾಸ್ ಹಿಂತರಲು ಮರೆಯಬೇಡಿ.

ಪಕ್ಷಿವೀಕ್ಷಣೆಗೆ ಬೇಕಾಗುವ ಸಾಮಗ್ರಿಗಳು:

ಪಕ್ಷಿವೀಕ್ಷಣೆಯ ಅವಧಿಯಲ್ಲಿ ನಾವು ನೋಡುವ ಎಲ್ಲಾ ಹಕ್ಕಿಗಳನ್ನು ಮತ್ತು ವಿಚಾರಗಳನ್ನು ವಿವರವಾಗಿ ನೆನಪಿಡಲು ಅಸಾಧ್ಯ. ಆದ್ದರಿಂದ ನಾವು ನೋಡುವ ಸಂಗತಿಗಳನ್ನು ಆಗಿಂದಾಗಲೇ ಗುರುತಿಸಿಕೊಳ್ಳಲು ಒಂದು ಕಿರು ಸ್ತಕ ಹಾಗು ಚಿಕ್ಕ ಪೆನ್ಸಿಲ್ ಅಥವಾ ಪೆನ್ನು ಯಾವಾಗಲೂ ಕಿಸೆಯಲ್ಲಿಟ್ಟುಕೊಂಡಿರಬೇಕು. ಹೀಗೆ ಮಾಡುವುದರಿಂದ ಮುಂದೆ ಈ ಮಾಹಿತಿಗಳು ನಃ ಆ ಹಕ್ಕಿಗಳನ್ನು ಗುರುತಿಸುವಲ್ಲಿ ಸಹಾಯ ಮಾಡುತ್ತವೆ.

ಪಕ್ಷಿವೀಕ್ಷಣೆಯಲ್ಲಿ ಅತ್ಯಂತ ಉಪಯೋಗವಾಗುವ ಮತ್ತೊಂದು ಸಾಮಗ್ರಿ, ಬೈನಾಕ್ಯುಲರ್ ಅಥವಾ ದುರ್ಬೀನು. (ರಕ್ಷಾಟದ ಒಳಬದಿಯಲ್ಲಿರುವ ಚಿತ್ರ  ನೋಡಿ). ಇದರಿಂದ ಪಕ್ಷಿಗಳನ್ನು ಕರಾರುವಾಕ್ಕಾಗಿ ಗುರುತುಹಿಡಿಯಲು ಹಾಗೂ ಅದರ ದೇಹದ ವಿವರಗಳನ್ನು ಸ್ಪಷ್ಟವಾಗಿ ತಿಳಿಯಲು ಅನುಕೂಲವಾಗುತ್ತದೆ. ಹೆಗಲಿಗೆ ಭಾರವಲ್ಲದ, ಹಗುರವಾದ ದುರ್ಬೀನನ್ನು ಆಯ್ದುಕೊಳ್ಳಿ. ಒಬ್ಬೊಬ್ಬರಿಗೆ ಒಂದೊಂದು ಬೈನಾಕ್ಯುಲರ್ ಬೇಕೇ ಬೇಕು. ಇವೆರಡು ಸಾಮಗ್ರಿಗಳಲ್ಲದೆ, ಪಕ್ಷಿವೀಕ್ಷಣೆಗೆ ಹೋಗುವಾಗ ಹಕ್ಕಿಗಳ ಬಗ್ಗೆ ವಿವರಣೆ ಹಾಗೂ ಮಾಹಿತಿಗಳುಳ್ಳ ಕೈಪಿಡಿಯನ್ನು ಕೊಂಡೊಯ್ಯಲು ಮರೆಯಬಾರದು.

ಪಕ್ಷಿಗಳ ವರ್ಣನೆಯನ್ನು ದಾಖಲಿಸಬೇಕಾದ ಕ್ರಮ:

ದಿನಚರಿಯನ್ನು ಪ್ರಾರಂಭಿಸುವ ಮುನ್ನ ಈ ಮುಂದಿನ ಸಂಗತಿಗಳನ್ನು ನಿಮ್ಮ ಕಿರು ಸ್ತಕದಲ್ಲಿ ದಾಖಲಿಸಿ. ದಿನಾಂಕ, ಪಕ್ಷಿವೀಕ್ಷಣೆಯನ್ನು ಮಾಡುತ್ತಿರುವ ಊರು ಅಥವಾ ಜಾಗದ ಹೆಸರು, ಸಮಯ, ಋತು: ಚಳಿಗಾಲವೇ? ಬೇಸಿಗೆಯೇ? ಮಳೆಗಾಲವೇ? ವಿವಿಧ ಋತುಗಳಲ್ಲಿ ಕೆಲವು ಜಾಗಗಳಿಗೆ ಪಕ್ಷಿಗಳು ಸಂತಾನಾಭಿವೃದ್ಧಿಗೆ ಮತ್ತು ಆಹಾರಾನ್ವೇಷಣೆಯಲ್ಲಿ ವಲಸೆ ಬರುತ್ತವೆ ಎಂಬುದನ್ನು ನೆನಪಿಡಿ. ಈ ವಿವರಗಳನ್ನು ಕೈಪಿಡಿಗಳಲ್ಲಿ ಓದಿ ತಿಳಿಯಿರಿ.

ಇವಿಷ್ಟಾದ ನಂತರ, ನೀವು ಗುರುತಿಸಿದ ಪ್ರತಿಯೊಂದು ಪಕ್ಷಿಯ ವಿವರಗಳನ್ನು ಈ ಕೆಳಕಂಡ ರೀತಿಯಲ್ಲಿ ಬರೆಯಿರಿ. ಹಕ್ಕಿಯ ದೇಹದ ವಿವಿಧ ಭಾಗಗಳನ್ನು ಚಿತ್ರ ನೋಡಿ ಮನದಟ್ಟು ಮಾಡಿಕೊಳ್ಳಿ. (ರಕ್ಷಾಟದ ಒಳಬದಿಯಲ್ಲಿರುವ ಚಿತ್ರ  ನೋಡಿ)

ಗಾತ್ರ: ಒಂದು ಪಕ್ಷಿಯ ಕೊಕ್ಕಿನಿಂದ ಅದರ ಬಾಲದ ತುದಿಯವರೆಗಿನ ಉದ್ದ, ಆ ಪಕ್ಷಿಯ ಗಾತ್ರವನ್ನು ಸೂಚಿಸುತ್ತದೆ, ಆದರೆ, ಪಕ್ಷಿಯನ್ನು ವೀಕ್ಷಿಸುವಾಗ ಈ ಉದ್ದವನ್ನು ನಾವು ನಿಖರವಾಗಿ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ ಕೆಲವು ಸಾಮಾನ್ಯ ಹಕ್ಕಿಗಳನ್ನು ಹೋಲಿಕೆಗೆ ಮಾಪನವಾಗಿ ಇಟ್ಟುಕೊಂಡಿದ್ದೇವೆ: ಗುಬ್ಬಚ್ಚಿ – 15; ಬುಲ್ಬುಲ್ – 20; ಮೈನಾ – 25; ಕಾಗೆ – 45; ಗಿಡುಗ – 60; ಬಾತು – 65; ಕೋಳಿ – 75; ರಣಹದ್ದು – 90 ಸೆಂಟಿಮೀಟರುಗಳು. ನೀವು ಕಂಡ ಒಂದು ಪಕ್ಷಿಯು ಮೈನಾಗಿಂತ ಸ್ವಲ್ಪ ದೊಡ್ಡದಾಗಿದ್ದರೆ, ಅದನ್ನು ಮೈನಾ+ ಎಂದೂ, ಕೋಳಿಗಿಂತ ಚಿಕ್ಕದಾಗಿದ್ದರೆ, ಕೋಳಿ- ಎಂದೂ ಗುರುತಿಸಬಹುದು.

ಅದಾದ ಮೇಲೆ, ಪ್ರಮುಖ ವೈಶಿಷ್ಟ್ಯಗಳು ಅಂದರೆ ಆ ಹಕ್ಕಿಯಲ್ಲಿ ನಿಮ್ಮ ಗಮನವನ್ನು ಸೆಳೆದ ವಿಶೇಷ ಲಕ್ಷಣಗಳನ್ನು ಗುರುತು ಮಾಡಿ. ಉದಾ: ಬಣ್ಣ-ಬಣ್ಣದ ಬಾಲ, ಉದ್ದವಾದ ಕಾಲು, ಕ್ಕವಿಲ್ಲದ ಕತ್ತು, ಬಾಗಿರುವ ಕೊಕ್ಕು ಇತ್ಯಾದಿ. ಅಥವಾ ಆ ಹಕ್ಕಿಯ ನಡವಳಿಕೆಯಲ್ಲಿ ನಿಮ್ಮ ಗಮನ ಸೆಳೆದ ವಿಶಿಷ್ಟ ಗುಣಗಳು, ಉದಾ: ಕ್ಷಣ-ಕ್ಷಣಕ್ಕೂ ಬಾಲವನ್ನು ಮೀಟುವ ಮಡಿವಾಳ, ರೆಕ್ಕೆಯನ್ನು ಹರಡಿ ಒಣಗಿಸಿಕೊಳ್ಳುತ್ತಿರುವ ನೀರುಕಾಗೆ ಇತ್ಯಾದಿ.

ಬಣ್ಣ: ಪಕ್ಷಿಗಳಲ್ಲಿ ಯಾವುದಾದರೂ ಒಂದು ಬಣ್ಣ ಎದ್ದು ಕಾಣುತ್ತದೆ. ಆ ಬಣ್ಣ ನೀವು ನೋಡಿದ ಪಕ್ಷಿಯ ಮೈಯಲ್ಲಿ ಎಲ್ಲೆಲ್ಲಿ ಕಂಡುಬರುತ್ತದೆ ಎಂದು ಬರೆಯಿರಿ. ಉದಾ: ಕೆಂಬೂತದ ಮೈ ಕೂಡ ಕಾಗೆಯಂತೆ ಕ್ಪ, ಆದರೆ ಅದರ ರೆಕ್ಕೆ ಉಜ್ವಲ ಕೆಂಗಂದು ಬಣ್ಣದ್ದು. ಅಲ್ಲದೆ, ಋತುಮಾನಗಳಿಗೆ ಅನುಗುಣವಾಗಿ ಕೆಲವು ಪಕ್ಷಿಗಳ ಬಣ್ಣ ಬದಲಾಗುತ್ತವೆ.

ಧ್ವನಿ: ಶಾಸ್ತ್ರೀಯ ಸಂಗೀತದ ದೃಷ್ಟಿಯಿಂದ ಹೇಳುವುದಾದರೆ, ಹಕ್ಕಿಗಳ ಸಂಗೀತದಲ್ಲಿ ಶ್ರದ್ಧೆ, ಸಾಧನೆ,  ಶ್ರುತಿಬದ್ಧತೆ, ಸ್ವರಶುದ್ಧತೆ ಇದೆ ಮತ್ತು ಎಷ್ಟೋ ವೇಳೆ ತಾಳಬದ್ಧತೆಯನ್ನೂ ನಾವು ಕಾಣಬಹುದು. ಪಕ್ಷಿಗಳ ಧ್ವನಿಗಳಲ್ಲಿ ಎರಡು ವಿಧ: ಅವುಗಳ ಕರೆ ಒಂದು ಬಗೆಯಾದರೆ, ಹಾಡು ಮತ್ತೊಂದು ಬಗೆ. ಈ ಧ್ವನಿಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ. ಇನ್ನೊಮ್ಮೆ ಅದೇ ಧ್ವನಿಯನ್ನು ಕೇಳಿದಾಗ, ಪಕ್ಷಿಯನ್ನು ನೋಡದೆಯೇ ಗುರುತಿಸಬಹುದು. ಹಕ್ಕಿಗಳು ಹಾಡುವ ಧ್ವನಿಯನ್ನು ಕೇಳಿ ಅವುಗಳ ಸ್ವರಗಳನ್ನು ಬರೆಯುವುದು ಆಗದ ಕೆಲಸ. ಆದರೂ ಆ ಧ್ವನಿಗೆ ಅತಿ ಹತ್ತಿರವಾದ ಸ್ವರಗಳನ್ನು ಶಬ್ದಗಳಲ್ಲಿ ಬರೆಯಲು ಪ್ರಯತ್ನಿಸಬಹುದು. ಉದಾ: ಕೋಗಿಲೆಯ ಕುಹೂ ..ಕುಹೂ…, ಕುಟ್ರುಹಕ್ಕಿಯ ಕುಟ್ರೂ… ಕುಟ್ರೂ…, ಇತ್ಯಾದಿ. ಅಲ್ಲದೆ ಕಳಿಂಗ, ಕಾಜಾಣ ಹಕ್ಕಿಗಳು ಇತರ ಪಕ್ಷಿಗಳ ಧ್ವನಿಯನ್ನು ಅಣಕವಾಡಬಲ್ಲವು. ನೀವು ನಿರೀಕ್ಷಿಸಿರದ ಯಾವುದೋ ಹಕ್ಕಿಯ ಸ್ವರವನ್ನು ಕೇಳಿ ನೀವು ಗೊಂದಲಗೊಳ್ಳುವ ಸಂದರ್ಭವೂ ಉಂಟು! ವಿವಿಧ ಪ್ರಾಂತ್ಯಗಳಲ್ಲಿ ನಾವು ಕನ್ನಡವನ್ನೇ ವಿವಿಧ ಆಡುಭಾಷೆಗಳಲ್ಲಿ ಮಾತನಾಡುವಂತೆ, ಒಂದೇ ಪ್ರಭೇದದ ಹಕ್ಕಿಗೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಆಡುಭಾಷೆಯಿದೆ ಎಂಬುದನ್ನು ನೆನಪಿಡಿ.

ಗಂಡು ಅಥವಾ ಹೆಣ್ಣು: ಅನೇಕ ಗಂಡು ಮತ್ತು ಹೆಣ್ಣು ಹಕ್ಕಿಗಳ ಆಕಾರ, ಬಣ್ಣ ಮುಂತಾದುವುಗಳಲ್ಲಿ ವ್ಯತ್ಯಾಸವಿರುತ್ತದೆ. ಉದಾಹರಣೆಗೆ, ಗುಬ್ಬಚ್ಚಿ, ಗಿಳಿ. ಇವುಗಳ ವಿವರಗಳನ್ನು ಕೈಪಿಡಿಗಳಲ್ಲಿ ಆಗಾಗ ಓದಿ ತಿಳಿಯಿರಿ.

ಪಕ್ಷಿಯ ನಡವಳಿಕೆ : ನೀವು ಆ ಪಕ್ಷಿಯನ್ನು ನೋಡಿದಾಗ ಆದು ಏನುಮಾಡುತ್ತಿತ್ತು? ಮರ/ಗಿಡದ ಮೇಲೆ ಕುಳಿತು ಹೊಂಚುಹಾಕುತ್ತಿತ್ತೇ? ಹಾಡುತ್ತಿತ್ತೇ? ಆಕಾಶದಲ್ಲಿ ಕೀಟಗಳನ್ನು ಹಿಡಿಯುತ್ತಿತ್ತೇ? ಸಂಗಾತಿಯೊಡನೆ ವ್ಯವಹರಿಸುತ್ತಿತ್ತೇ? ಅಥವಾ ಮರಿಗಳಿಗೆ ಗುಟುಕು ನೀಡುತ್ತಿತ್ತೇ? ಹಕ್ಕಿಗಳು ಹಾರುವಾಗ, ರೆಕ್ಕೆ ಬಡಿಯುವ, ತೇಲುವ, ಹೊರಳುವ ಶೈಲಿ ಒಂದೊಂದು ಹಕ್ಕಿಗೂ ವಿಭಿನ್ನ. ಈ ಹಾರುವ ರೀತಿಯಿಂದಲೇ ಅವುಗಳನ್ನು ಗುರುತು ಹಿಡಿಯಬಹುದು.

ಎಲ್ಲಿ ನೋಡಿದಿರಿ? ನೀರಿನಲ್ಲಿ, ಮರದ ಮೇಲೆ, ನೆಲದ ಮೇಲೆ, ಗಾಳಿಯಲ್ಲಿ … ಇತ್ಯಾದಿ ವಿವರಗಳನ್ನು ಗುರುತಿಸಿಕೊಳ್ಳಿ.

ಗೂಡುಗಳ ರಚನೆ ಹಾಗೂ ವಿವರ : ಉದಾಹರಣೆಗೆ, ಗೀಜಗನ ಗೂಡನ್ನು ನೀವೆಲ್ಲ ಕಂಡೇ ಇದ್ದೀರ. ಸಿಂಪಿಗ, ಎರಡು ಎಲೆಗಳನ್ನು ಹೊಲೆದು ಗೂಡು ಮಾಡುತ್ತದೆ, ಮರಕುಟ್ಟಿಗ ಮರದಮೇಲೆ ಟರೆಗಳೊಳಗೆ ಗೂಡುಕಟ್ಟಿದರೆ, ಹದ್ದಿನಂತಹ ಹಕ್ಕಿಗಳು ಮರದ ಕೊಂಬೆಯ ಕವಲುಗಳ ನಡುವೆ ಅಟ್ಟಣಿಗೆ ಗೂಡುಕಟ್ಟುತ್ತವೆ. ಪ್ರತಿಯೊಂದು ಪಕ್ಷಿಯೂ ತನ್ನದೇ ಆದ ವಿಶಿಷ್ಟವಾದ ರೀತಿಯಲ್ಲಿ ಗೂಡುಕಟ್ಟಬಲ್ಲದು.

ಮೊಟ್ಟೆ ಮತ್ತು ಮರಿಗಳ ಬಣ್ಣ ಹಾಗೂ ಆಕಾರ : ಹಲವು ಬಾರಿ ಮರಿಗಳು ತಮ್ಮ ತಂದೆ-ತಾಯಿಯನ್ನು ಬಣ್ಣದಲ್ಲಿಯೇ ಆಗಲಿ, ಆಕಾರದಲ್ಲಿಯೇ ಆಗಲಿ ಹೋಲುವುದೇ ಇಲ್ಲ. ಕೈಪಿಡಿಗಳನ್ನು ನೋಡಿ ಇದನ್ನು ಗುರುತಿಸಿ.

ಈ ಮೇಲಿನ ವಿವರಗಳನ್ನಲ್ಲದೇ ಒಂದು ಹಕ್ಕಿಯ ಕೊಕ್ಕು, ಕಣ್ಣು, ಗರಿಗಳ ರಚನೆ, ಬಾಲದ ಆಕಾರ ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ, ವಿವರಗಳನ್ನು ಬರೆಯಿರಿ. ಸಾಧ್ಯವಾದರೆ, ಆ ಪಕ್ಷಿಯ ಚಿತ್ರವನ್ನೂ ಬರೆಯಿರಿ. ಹಕ್ಕಿಗಳು ಬಲು ನಾಜೂಕು; ಅದರಲ್ಲೂ ಮರಿಗಳು ಅತ್ಯಂತ ನಾಜೂಕು. ಆದ್ದರಿಂದ ಅವುಗಳನ್ನು ಮುಟ್ಟಬಾರದು, ಹೆದರಿಸಲೂಬಾರದು. ಸಣ್ಣ ಹಕ್ಕಿಗಳು ಅತಿ ದುರ್ಬಲ ಮತ್ತು ಅವುಗಳ ಎದೆಯ ಮೇಲೆ ಸ್ವಲ್ಪ ಒತ್ತಡ ಬಿದ್ದರೂ ಸತ್ತೇ ಹೋಗುವ ಪ್ರಮೇಯವಿದೆ. ಗಾಯಗೊಂಡ ಹಕ್ಕಿಗಳ ಶುಶ್ರೂಷೆಗೆ ಅಥವಾ ಇನ್ನಾವುದೇ ಕಾರಣಕ್ಕಾಗಿ ಅವುಗಳನ್ನು ಹಿಡಿಯುವುದು ಅನಿವಾರ್ಯವಾದಲ್ಲಿ ಬಹು ಎಚ್ಚರದಿಂದ ತೋರುಬೆರಳು ಮತ್ತು ಮಧ್ಯದ ಬೆರಳುಗಳ ನಡುವೆ ಹಕ್ಕಿಯ ಕತ್ತು ಬರುವಂತೆ, ಅಂಗೈಯಲ್ಲಿ ಅವುಗಳ ರೆಕ್ಕೆ ಮುದುಡದ ಹಾಗೆ ಹಗುರವಾಗಿ ಎತ್ತಿ ಹಿಡಿದು ಪರೀಕ್ಷಿಸಬೇಕು. ಅವು ಬೆನ್ನಿನ ಮೇಲೆ ಮಲಗಿರುವವರೆಗೂ ತಟಸ್ಥವಾಗಿರುತ್ತವೆ. ನಃ ಅವುಗಳನ್ನು ಹಾರಿಸಲು ಹಿಡಿತವನ್ನು ಹಿಂದಿರುಗಿಸಿ ನಂತರ ಬಿಡಬೇಕು.

ಪ್ರಾರಂಭದಲ್ಲಿ ಸ್ತಗಳ ನೆರವಿನಿಂದ ಸಾಮಾನ್ಯವಾಗಿ ಸುತ್ತಮುತ್ತ ಕಾಣುವ ಪಕ್ಷಿಗಳನ್ನು ಗುರುತಿಸಬೇಕು. ಹಕ್ಕಿಗಳು ಎಲೆಗಳ ನಡುವೆ ಅವಿತಿರುವಾಗ, ಕುಳಿತಲ್ಲಿ ಕೂರದೆ ಹಾರುತ್ತಿರುವಾಗ, ಸೂರ್ಯನ ಪ್ರಭೆಗೆ, ಅಥವಾ ನೆರಳಿನಲ್ಲಿ, ಅವುಗಳನ್ನು ಸುಲಭವಾಗಿ, ಸ್ಪಷ್ಟವಾಗಿ ಗುರುತಿಸಲು ಕಷ್ಟಸಾಧ್ಯ. ಇಂತಹ ಸಂದರ್ಭಗಳಲ್ಲಿ ಅವುಗಳ ಬಣ್ಣ ಮಾತ್ರದಿಂದಲ್ಲದೆ, ಕೊಕ್ಕು, ಜುಟ್ಟು, ಕಾಲುಗಳು, ಬಾಲ ಮುಂತಾದ ಚಹರೆ ಮತ್ತು ಅವುಗಳ ಚಲನವಲನ, ಹಾರಾಟದ ವೈಖರಿ, ಅಲ್ಲದೆ ಅವುಗಳ ಕೂಗು ಮತ್ತು ಇಂಚರದಿಂದ ಆ ಹಕ್ಕಿಯನ್ನು ಕಂಡುಹಿಡಿಯಬಹುದು.

ವಿವಿಧ ಪ್ರದೇಶದಲ್ಲಿ ವಾಸಿಸುವ ಹಕ್ಕಿಗಳ ಜೀವನ ಚರಿತ್ರೆಯನ್ನು  ತಿಳಿದು, ಅವು ಇತರ ಜೀವಿಗಳೊಡನೆ ಹೊಂದಿರುವ ನಿಕಟ ಸಂಬಂಧವನ್ನು ಅರಿಯುವುದು ಪಕ್ಷಿವೀಕ್ಷಣೆಯ ಒಂದು ಉದ್ದೇಶ. ಈ ಕಾರ್ಯಕ್ಕೆ ಹೆಚ್ಚಿನ ತಾಳ್ಮೆ ಮತ್ತು ಸಾಧನೆ ಅಗತ್ಯ. ಪಕ್ಷಿವೀಕ್ಷಣೆಯನ್ನು ನೀವು ಎರಡು ರೀತಿ ಮಾಡಬಹುದು: 1. ಒಂದು ನಿರ್ದಿಷ್ಟ ಸ್ಥಳಕ್ಕೆ ವರ್ಷರ್ತಿ ಭೇಟಿ ನೀಡಿ, ಪಕ್ಷಿಗಳ ಚಲನವಲನ, ನಡವಳಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು. 2. ದೇಶದ ವಿವಿಧೆಡೆ ಸುತ್ತಾಡಲು ಅವಕಾಶ, ಆಸಕ್ತಿ ಮತ್ತು ಸಮಯವಿರುವವರು ಬೇರೆ ಬೇರೆ ಆವಾಸಗಳಲ್ಲಿರುವ ವಿವಿಧ ಪ್ರಭೇದದ ಹಕ್ಕಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು. ಇವೆಲ್ಲವೂ ಮುಂದೆ ನಿಮ್ಮ ಪರಿಶೀಲನೆಗೆ ಸಹಾಯವಾಗುವುದು. ವಿವಿಧ ಸ್ಥಳಗಳಲ್ಲಿ, ವಿವಿಧ ಋತುಗಳಲ್ಲಿ ಹಕ್ಕಿಗಳ ಜಾತಿ ಮತ್ತು ಸಂಖ್ಯೆ ಬದಲಾಗುತ್ತದೆ. ಪ್ರತಿಯೊಂದು ಹಕ್ಕಿಯಲ್ಲೂ ಒಂದು ನಿರ್ದಿಷ್ಟ ಜೀವನ ಚಕ್ರವನ್ನು ನಾವು ಕಾಣುತ್ತೇವೆ. ಈ ಚಕ್ರದಲ್ಲಿ ಏನಾದರೂ ಬದಲಾವಣೆಯಾದಲ್ಲಿ – ಅದು ಎಷ್ಟೇ ಚಿಕ್ಕದಾದರೂ – ಅದಕ್ಕೊಂದು ಕಾರಣವಿರುತ್ತದೆ ಎಂಬುದನ್ನು ಮನಗಾಣಬೇಕು.

ನೀವು ಶ್ರದ್ಧೆಯಿಂದ, ಲಕ್ಷ್ಯವಿಟ್ಟು ಗಮನಿಸಿದ ವಿಷಯಗಳನ್ನು ಕ್ಲಿಪ್ತವಾಗಿ, ಪ್ರಾಮಾಣಿಕವಾಗಿ ಬರೆದಿಟ್ಟುಕೊಂಡಲ್ಲಿ, ಮುಂದೆ ಅದು ಪಕ್ಷಿಗಳ ನಡವಳಿಕೆ, ಆವಾಸ, ಸಂಖ್ಯೆ ಮುಂತಾದುವುಗಳ ಬಗ್ಗೆ ವಿಶ್ವಾಸಾರ್ಹವಾದ ದಾಖಲೆ ಅಥವಾ ಮಾಹಿತಿಯಾಗುತ್ತದೆ. ನಿಮ್ಮ ಈ ಸಮೀಕ್ಷೆಗಳನ್ನು ಇತರ ಪಕ್ಷಿವೀಕ್ಷಕರೊಂದಿಗೆ, ಪಕ್ಷಿತಜ್ಞರೊಂದಿಗೆ ಪತ್ರಮುಖೇನ, ವಿವಿಧ ನಿಯತಕಾಲಿಕಗಳ ಮೂಲಕ ಅಥವಾ ಅಂತರಜಾಲದ ಮೂಲಕ ಪರಸ್ಪರ ವಿಚಾರ ವಿನಿಮಯ ಮಾಡಬಹುದು.

ಇದೇ ರೀತಿ, ಈ ಹಿಂದಿನ ಪಕ್ಷಿವೀಕ್ಷಕರೂ, ಪಕ್ಷಿತಜ್ಞರೂ ಕೂಡಿಟ್ಟ ಮಾಹಿತಿಯ ಆಧಾರದಿಂದಲೇ ಇಂದು ಪಕ್ಷಿಲೋಕದ ಅದ್ಭುತಗಳ ಪರಿಚಯ ನಮಗಾಗಿರುವುದು! ನೀವು ಕಂಡ ಹೊಸ ವಿಚಾರವು ಪಕ್ಷಿತಜ್ಞರಿಗೆ ಬಹುಮುಖ್ಯ ವೈಜ್ಞಾನಿಕ ಸಂಶೋಧನಾ ವಿಷಯವಾಗಬಲ್ಲದು.

ಹೀಗೆ ಪಕ್ಷಿವೀಕ್ಷಣೆ ಎಂಬ ಹವ್ಯಾಸ, ಮನಸ್ಸಿಗೆ ಆಹ್ಲಾದಕರವೂ, ದೇಹಕ್ಕೆ ವ್ಯಾಯಾಮವೂ, ಸಮಾಜಕ್ಕೆ ಉಪಯುಕ್ತವೂ ಆಗಿರುವುದಲ್ಲದೆ, ಅನೇಕ ವೈಜ್ಞಾನಿಕ ಸಂಶೋಧನೆಗಳಿಗೂ ಅಡಿಪಾಯವಾಗುತ್ತವೆ. ಆದ್ದರಿಂದಲೇ, ಇದನ್ನು ಒಂದು ಪರಿರ್ಣ ಹವ್ಯಾಸ ಎಂದು ಕರೆಯಬಹುದು.