ಗುಂಪಾಗಿ ವಾಸಿಸುವ, ದೊಡ್ಡ ಕ್ಪ ನೀರುಹಕ್ಕಿಗಳು. ಮತ್ಸ್ಯಪ್ರಿಯರು. ಉದ್ದವಾದ, ಚೂಪಾದ ಕೊಕ್ಕೆಕೊಕ್ಕು; ನೀಳವಾದ ಕತ್ತು, ದೇಹ; ಉದ್ದಾನಾದ ಬೆಣೆಯಂತಿರುವ ಬಾಲ; ಜಾಲಪಾದವಿರುವ ಕಾಲುಗಳು. ಕತ್ತನ್ನು ನೀಡಿಕೊಂಡು ಶಕ್ತಿಶಾಲಿ ಹಾರಾಟ. ಉತ್ತಮ ಈಜುಗಾರ ಕೂಡ. ಆದರೆ, ರೆಕ್ಕೆಯ ಬುಡಗಳಲ್ಲಿ ತೈಲಗ್ರಂಗಳಿಲ್ಲವಾದ್ದರಿಂದ, ನೀರಿನಿಂದ ಹೊರಗೆದ್ದರೆ, ಮೈಯ್ಯೆಲ್ಲ ಒದ್ದೆಯಾಗಿ ಭಾರವಾಗುತ್ತದೆ. ಹಾಗಾಗಿ, ಆಗಾಗ ಈ ಹಕ್ಕಿಗಳು ಬಂಡೆಯ ಮೇಲೋ, ಮರದ ಮೇಲೋ ಕುಳಿತು ರೆಕ್ಕೆಯನ್ನಗಲಿಸಿ ಒಣಗಿಸಿಕೊಳ್ಳುವುದನ್ನು ಕಾಣಬಹುದು. ಸಾಮುದಾಯಿಕವಾಗಿ ಇತರ ನೀರುಹಕ್ಕಿಗಳೊಂದಿಗೆ, ಮರದ ಮೇಲೆ, ಬಂಡೆಗಳ ಮೇಲೆ ಒಣಕಡ್ಡಿ-ಜೊಂಡಿನಿಂದ ಕಟ್ಟಿದ ಅಟ್ಟಣಿಗೆ ಗೂಡುಗಳು.

2. Great Cormorant (Phalacrocorax carbo) Large Cormorant R Duck+  ದೊಡ್ಡ ನೀರುಕಾಗೆ (ಬಲ್ಯ ನೀರ್ಕಾಕೆ)

80 ಸೆಂಮೀ. ವಯಸ್ಸಾದ ಹಾಗೆ ದೇಹದ ಬಣ್ಣವೂ ಬದಲು. ಸಂತಾನಋತುವಿನಲ್ಲಿ, ಮೈಬಣ್ಣ, ಕಪ್ಪನೆಯ ಹೊಳೆಯುವ ನೀಲಿ-ಹಸಿರು; ಬಿಳಿ ಕೆನ್ನೆ, ಗಂಟಲು, ತೊಡೆ; ಅಚ್ಚ ಹಳದಿ ಗಂಟಲು ಮಚ್ಚೆ. ನೇರವಾದ, ವೇಗದ ಹಾರಾಟ.