ಕಂಡೂ ಕಾಣದಂತಿರುವ ಟ್ಟ ಬಾಲ, ಮೃದುವಾದ ಕ್ಕಗಳಿರುವ ಚಿಕ್ಕ ನೀರುಹಕ್ಕಿಗಳು. ಚಟ್ಟೆಯಾದ ಚೂ ಕೊಕ್ಕು; ಸಣ್ಣ ಚೂಪಾದ ರೆಕ್ಕೆ ಮತ್ತು ಕತ್ತು; ಕಾಲುಗಳು ಬಹಳ ಹಿಂದಿದ್ದು, ಈಜಲು, ಮುಳುಗಲು ಸಹಕಾರಿ. ಜೀರ್ಣಶಕ್ತಿಯನ್ನು ಹೆಚ್ಚಿಸಲು ತನ್ನ ಗರಿಗಳನ್ನು ತಾನೇ ತಿನ್ನುವ ಹವ್ಯಾಸ; ನೀರಿನಿಂದ ಏಳಲು ಕಷ್ಟವೆನಿಸಿದರೂ, ಒಂದು ಸಾರಿ ನೀರಿನಿಂದೆದ್ದರೆ ವೇಗವಾಗಿ, ಬಹುದೂರ ಹಾರುವ ಶಕ್ತಿ. ನೀರಿನಲ್ಲಿರುವ ಹುಳ-ಹುಪ್ಪಟೆ, ಗೊದಮೊಟ್ಟೆ, ಕಪ್ಪೆ, ಇವೇ ಆಹಾರ. ನೀರ ಮೇಲೆ ತೇಲುವ ಅಥವಾ ಅಕ್ಕಪಕ್ಕದ ಜೊಂಡುಹುಲ್ಲಿಗೆ ಅಂಟಿಸಿದ ಹುಲ್ಲು-ಕಸ-ಕಡ್ಡಿಗಳ ಗೂಡು.

1. Little Grebe (Tachybaptus ruficollis) Dabchick R Pigeon +/- ಗುಳುಮುಳುಕ (ಗುಂಡ್ಮುಳ್ಕ)

23 ಸೆಂಮೀ. ಭಾರತದ ಅತಿಚಿಕ್ಕ ನೀರುಹಕ್ಕಿ. ಋತುಮಾನದೊಂದಿಗೆ ರೆಕ್ಕೆಯ ಬಣ್ಣವೂ ಬದಲು. ಸಂತಾನಋತುವಿನಲ್ಲಿ, ತಲೆಯ ಹಿಂಭಾಗ, ಗಂಟಲು, ಕ್ಪ; ಗಾಢ ಚಾಕೊಲೇಟ್ ಬಣ್ಣದ ಎದೆಪಕ್ಕಗಳು; ಕೆಳಹೊಟ್ಟೆ ಬಿಳಿ; ಬೆನ್ನು ಗಾಢಗಂದು; ರೆಕ್ಕೆಯಲ್ಲಿ ಹಾರುವಾಗ ಬಿಳಿ; ಬಾಲವೇ ಇಲ್ಲವೇನೋ ಎಂಬಂತೆ ಕಾಣುವ ಪೃಷ್ಠ. ಸಂಶಯ ಬಂದಾಗ ತಟ್ಟನೆ ನೀರಿನಲ್ಲಿ ಮುಳುಗಿ ಮಾಯವಾಗಿ, ಒಂದಷ್ಟು ದೂರದಲ್ಲಿ ತಲೆಯೆತ್ತುತ್ತದೆ! ತೀಕ್ಷ್ಣ ಸ್ವರದ ಅದಿರು ದನಿ. ನೀರಿನಲ್ಲಿ ಮುಳುಗಿ ಹಿಡಿದ ಟ್ಟ ಜಲಚರಗಳೇ ಆಹಾರ.