ಸಹ್ಯಾದ್ರಿಯನ್ನು ಮೀರುವ ಸಸ್ಯಾದ್ರಿ

ಮತ್ತದೇ ತುತ್ತೂರಿ. ದೇಶದ ಕೃಷಿರಂಗ ಭಾರೀ ಬಿಕ್ಕಟ್ಟಿನಲ್ಲಿದೆ. ಒಂದು ಬಿಕ್ಕಟ್ಟಿನಿಂದ ಇನ್ನೊಂದು ಬಿಕ್ಕಟ್ಟಿನತ್ತ, ಒಂದು ಕಂಟಕದಿಂದ ಇನ್ನೊಂದು ಕಂಟಕದತ್ತ ಸಾಗುತ್ತಿದೆ. ಒಂದೆಡೆ ಜಾಗತೀಕರಣ ಹಾಗೂ ಮುಕ್ತ ಮಾರುಕಟ್ಟೆಯ ಉದಾರ ನೀತಿಯಿಂದಾಗಿ ಧನಾಡ್ಯ ದೇಶಗಳು ನಮ್ಮ ಕೃಷಿಕರಿಗೆ ಮಾರುಕಟ್ಟೆಯೇ ಇಲ್ಲದಂತೆ ಮಾಡುತ್ತಿವೆ. ಹೈಟೆಕ್ ಕೃಷಿ ಕಂಪನಿಗಳು ಕುಲಾಂತರಿ ತಳಿಗಳನ್ನು ಛೂಬಿಟ್ಟು ನಮ್ಮ ಸಾಂಪ್ರದಾಯಿಕ ರೈತರ ಬಳಿ ಸ್ಥಳೀಯ ತಳಿಗಳೇ ಇಲ್ಲದಂತೆ ಮಾಡುತ್ತಿವೆ. ಇನ್ನೇನು, ಉಚಿತ ನೀರೂ ರೈತರಿಗೆ ಸಿಗದಂತೆ ಅದನ್ನೂ ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಯತ್ನಗಳು ನಡೆದಿವೆ. ನಿಂತ ನೆಲವಾದರೂ ಉಳಿದೀತೆ? ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿ ಕೃಷಿಕರ ನೆಲವನ್ನೂ ಕಸಿದುಕೊಳ್ಳುವ ಹುನ್ನಾರು ಹಂತಹಂತವಾಗಿ ಜಾರಿಗೆ ಬರುತ್ತಿದೆ. ಎಂಥ ಕಷ್ಟದ ದಿನಗಳಲ್ಲೂ ಅವಡುಗಚ್ಚಿ ಸಹಿಸಿಕೊಂಡಿದ್ದ ಕೃಷಿಕರು ಇಂದು ಇವೆಲ್ಲವುಗಳ ವಿರುದ್ಧ ದನಿಯೆತ್ತಿ ಹೋರಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ತಮಗೆ ತಾವೇ ಉಸಿರುಗಟ್ಟಿ ಜೀವಹರಣ ವಾಡಿಕೊಳ್ಳುತ್ತಿದ್ದಾರೆ.

ಇವು ಸಾಲದೆಂಬಂತೆ ಮುಂಬರು ದಿನಗಳಲ್ಲಿ ಬಿಸಿ ಪ್ರಳಯ ಬರಲಿದೆಯೆಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಋತುಮಾನಗಳು ಏರುಪೇರಾಗಿ, ನಿಸರ್ಗವೂ ಕೃಷಿಕರ ವಿರುದ್ಧ ಮುದು ಲ್ಲುವ ಸೂಚನೆಗಳು ಕಾಣಿಸತೊಡಗಿವೆ. ಅರಣ್ಯಗಳನ್ನು ಹೇರಳವಾಗಿ ಬೆಳೆಸಬೇಕು ಎನ್ನುತ್ತಿದ್ದಾರೆ ತಜ್ಞರು; ಪೆಟ್ರೋಲ್, ಡೀಸೆಲ್‌ಗಳನ್ನು ಉರಿಸುವ ಬದಲು ಎಣ್ಣೆಸಸ್ಯಗಳನ್ನು ಹೇರಳವಾಗಿ ಬೆಳೆಸಿ ಜೈವಿಕ ತೈಲವನ್ನು ಉರಿಸಿದರೆ ಭೂಮಿಯ ತಾಪಮಾನವನ್ನು ಸಮತೂಗಿಸಲು ಸಾಧ್ಯವೆಂದು ಹೇಳುತ್ತಿದ್ದಾರೆ.

ಒಂದೆಡೆ ಆಹಾರ ಅಭಾವ ಎದುರಾಗುವ ಸಾಧ್ಯತೆ; ಇನ್ನೊಂದೆಡೆ ಅರಣ್ಯವನ್ನು ಬೆಳೆಸಲೇಬೇಕಾದ ಅನಿವಾರ್ಯತೆ. ಈ ಎರಡೂ ಸವಾಲನ್ನು ಸಮನಾಗಿ ಎದುರಿಸುವ ಕೃಷಿಪದ್ಧತಿಯ ಪರಿಚಯ ಈ ಕೃತಿಯಲ್ಲಿದೆ. ಹಳೇ ಪದ್ಧತಿಯ ಬೇಸಾಯಗಾರರಿಗೆ, ಅದರಲ್ಲೂ ಮಲೆನಾಡು-ಪಶ್ಚಿಮಘಟ್ಟಗಳ ಕೃಷಿಕರಿಗೆ ಇದು ಹೊಸದೇನೂ ಅಲ್ಲ, ನಿಜ. ಆದರೆ ಹಸಿರುಕ್ರಾಂತಿಯ ಭರಾಟೆಯಲ್ಲಿ ನಾವು ಅವನ್ನೆಲ್ಲ ಮರೆತಿದ್ದೇವೆ. ಪ್ರಧಾನ ಧಾನ್ಯಗಳಿಗಷ್ಟೇ ಆದ್ಯತೆ ನೀಡಿ, ಇತರ

ಫಸಲುಗಳನ್ನು ಕಡೆಗಣಿಸಿ, ಜೀವಿವೈವಿಧ್ಯವನ್ನೆಲ್ಲ ಹೊಸಕಿ ಹಾಕುತ್ತಲೇ ಬೇಸಾಯ ನಡೆಸಬೇಕೆಂದು ಕೃಷಿ ಪದವೀಧರರು ಕಳೆದ 50 ವರ್ಷಗಳಿಂದ ಹೇಳುತ್ತ ಬಂದಿದ್ದರ ಪರಿಣಾಮವಾಗಿ ಆ ಪುರಾತನ ಸುಸ್ಥಿರ ಸಂಪ್ರದಾಯ ಈಗಿನ ತಲೆಮಾರಿನ ಕೃಷಿಕರಿಗೆ ಮರೆತೇ ಹೋದಂತಿದೆ. ಅದನ್ನು ಮತ್ತೆ ನೆನಪಿಸಿಕೊಳ್ಳಬೇಕಾದ, ಮತ್ತೆ ಜಾರಿಗೆ ತರಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ.

ನಮಗೆ ಧಾನ್ಯವೂ ೇಕು, ಕಿರುಧಾನ್ಯಗಳೂ ಬೇಕು, ಗಡ್ಡೆಗೆಣಸು, ಸೊಪ್ಪು, ತರಕಾರಿ-ಹಣ್ಣುಹಂಪಲು, ನಾರು-ಬೇರು ಬೇಕು; ಜತೆಗೆ ಹಕ್ಕಿಪಕ್ಷಿ, ಉರಗ, ದ್ವಿಚರಿಗಳು, ಎರೆಹುಳು, ಜೇನ್ನೊಣ, ಚಿಟ್ಟೆ-ಪತಂಗಗಳಿಂದ ಹಿಡಿದು ಹುಲಿ, ಹುಲ್ಲೆ, ಬಾವಲಿಗಳವರೆಗಿನ ಸಕಲ ಜೀವರಾಶಿ ಬೇಕು. ಕೃಷಿಯ ಶತ್ರುಗಳೆಂದು ಬೆದರಿಸಿ ಓಡಿಸಿ, ತುಳಿದು ಸಾಯಿಸಿ, ಕೊಚ್ಚಿ ತುಂಡರಿಸಿ, ಬಡಿದು ಬೆಂಕಿಯಿಟ್ಟು ಅಳಿವಿನಂಚಿಗೆ ಅಟ್ಟಿದ್ದ ಜೀವಜಂತುಗಳೆಲ್ಲ ಮರಳಿ ಬರಬೇಕು. ಒಟ್ಟಾರೆಯಾಗಿ ಸುಸ್ಥಿರ, ಸ್ವಾವಲಂಬಿ ಬದುಕು ಮತ್ತೆ ಮರಳಿ ನಮ್ಮ ಕೃಷಿಕರ ಕೈಗೆಟುಕಬೇಕು.

ಅದು ತ್ರೂಪಿ ಅರಣ್ಯ ನಿರ್ಮಾಣದ ಮೂಲಕ ಸಾಧ್ಯವಿದೆ ಎಂಬುದನ್ನು ಈ ಕೃತಿಯಲ್ಲಿ ಸಮರ್ಥವಾಗಿ ಬಿಂಬಿಸಲಾಗಿದೆ. ಎಲ್ಲೋ ಶ್ರೀಲಂಕಾದಲ್ಲೋ ಅಥವಾ ಪಶ್ಚಿಮ ಘಟ್ಟಗಳ ದಟ್ಟ ಕಾನನಗಳ ಕಣಿವೆಯಲ್ಲೋ ಮಾತ್ರ ಇದು ಸಾಧ್ಯವೆಂದು ಕೈಚೆಲ್ಲಬೇಕಿಲ್ಲ. ನಮ್ಮದು ಅದ್ಭುತ ನೆಲ. ತುಸು ಆಸರೆ ಕೊಟ್ಟರೆ ಎಲ್ಲಿ ಎಂಥ ಸಸ್ಯಾದ್ರಿಯನ್ನೂ ಸೃಷ್ಟಿಸಲು ಸಾಧ್ಯವಿದೆ ಎಂಬುದಕ್ಕೆ ಅನೇಕ ನಿದರ್ಶನಗಳು ಹಾಸನ, ಚಿತ್ರದುರ್ಗ, ಬೀದರ್, ಬೆಂಗಳೂರು, ತುಮಕೂರು, ಕೋಲಾರ ಜಿಲ್ಲೆಗಳಲ್ಲೂ ಸಿಗುತ್ತವೆ. ಸರಕಾರದ ಬಿಗಿ ಬಂದೋಬಸ್ತಿನಲ್ಲೋ, ಕಂಪನಿಗಳ ರೆಸಾರ್ಟ್‌ಗಳಲ್ಲೋ ಅಥವಾ ಕೋಟ್ಯಧೀಶರ ಖಯಾಲಿ ಫಾರ್ಮ್‌ಹೌಸ್‌ಗಳಲ್ಲೋ ಕಾಣಬರುವ ಅಂಥ ಜೀವಮಂಡಲದ ನಿರ್ಮಾಣಕ್ಕೆ ಹಣಕ್ಕಿಂತ ಹೆಚ್ಚಾಗಿ ಈ ನಾಡಿನ ನೆಲದ ಪುಣ್ಯವೇ ಕಾರಣ; ಮಣ್ಣಿನ ಫಲವತ್ತತೆ, ಸುಳಿಯುವ ಗಾಳಿ, ಸೂಸುವ ಬಿಸಿಲು, ಸುರಿಯುವ ಮಳೆಯಂಥ ಈ ಐಸಿರಿಗಳೆಲ್ಲ ಕೆಳಸ್ತರದವರಿಗೂ ಎಟುಕಬೇಕು. ನಾಡಗೀತೆಯಲ್ಲಿ ಹಾಡಿ ಹೊಗಳಿದ ನಿಸರ್ಗ ಸಂಪತ್ತು ನಾಡಿನ ಎಲ್ಲ ರೈತರ ಎಕರೆಗಳಲ್ಲೂ ಕಾಣಬೇಕು.

ಅಂಥ ಸಾಧ್ಯತೆಗೆ ಬೀಜಾಂಕುರವಾಗಬಲ್ಲ ಸಾಮಗ್ರಿಗಳು ಈ ಕೃತಿಂುಲ್ಲಿವೆ.

ನಾಗೇಶ ಹೆಗಡೆ

10ನೇ ಅಕ್ಟೋಬರ್ 2008

 

ಅಡವಿ ತೋಟದ ಅನನ್ಯ ಮಾದರಿ

ಮಲೆನಾಡಿನಲ್ಲಿ ಮರ ಬೆಳೆಯುವದು ಪ್ರಕೃತಿಯ ಕೃಪೆ.  ಈ ಸರಳ ಸತ್ಯ ತಿಳಿಯದವರು ಕಾಡಿಗೆ ಬೆಂಕಿ ಹಾಕಿ, ಕುಮರಿ ಕೃಷಿ ಮಾಡಿ, ರಬ್ಬರ್ ಅಕೇಶಿಯ ನೆಟ್ಟು ನೆಲವನ್ನು ಬಂಜೆಯಾಗುಸುತ್ತಾರೆ.

ಬುಡಕಟ್ಟು ಜನಾಂಗ. ನದಿಗಳ ಜೀವನಾಡಿಯಾದ ಕಾಡು ಈಗ ತೀವ್ರ ಅಪಾಯದಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಭೂಕುಸಿತ, ಅಂತರ್ಜಲ ಕುಸಿತ, ಮಣ್ಣು ಸವಕಳಿ, ಬೆಳೆ ಹಾನಿ ಹೀಗೆ ವಿವಿದ ಸಮಸ್ಯೆಗಳಿವೆ. ಹಸುರು ಬೆಳೆಸುವ ಕೆಲಸ ಕಳೆದ 70ರ ದಶಕದ ಈಚೆಗೆ ನಡೆದರೂ ಅದು ಉದ್ಯಮ, ಉರುವಲು ಬಳಕೆಯ ಮೊನೋಕಲ್ಚರ್ ನೆಡುತೋಪಾಗಿದೆ.

ಶ್ರೀಲಂಕಾದ ಕೃಷಿಕರು ಗು್ಡಗಾಡಿನಲ್ಲಿ ಅನುಸರಿಸಿದ ತದ್ರೂಪಿ ಕಾಡು (ಅನಲಾಗ್ ಫಾರೆಸ್ಟ್) ತತ್ವ ಮಲೆನಾಡೀಕರಣಗೊಳ್ಳಬೇಕಿದೆ. ಈಗಾಗಲೇ ಮರ ಬೆಳೆಸುವ ಜ್ಞಾನವಿರುವ ಇಲ್ಲಿ ಸುಲಬನಾಗಿ ಕಾಡುತೋಟ ಸಾಕಾರಗೊಳಿಸಬಹುದಾಗಿದೆ.

ತದ್ರೂಪಿ ಕಾಡು ಅನ್ನಕೊುವ ಅನನ್ಯ ತೋಟ. ಇದು ಸುಸ್ಥಿರ ಕೃಷಿಯ ಮುಂದುವರಿಕೆಯೇ ಹೊರತು ಇದನ್ನು ಹೀಗೆ ಮಾಡಬೇಕು ಎನ್ನುವಂತಿಲ್ಲ, ಕಾಡು ರೂಪಿಸಲು ಯೂನಿಫಾರ್ಮ ಸ್ವರೂಪದ ಅಗತ್ಯವಿದೆಯೆೀ!.

ತದ್ರೂಪಿ ಕಾಡು ಪು್ತಕವನ್ನ ಎರಡು ಭಾಗ ಗಳಲ್ಲಿ ಪ್ರಸ್ತುತಪಡಿಸಿದ್ದೇವೆ. ಶ್ರೀಲಂಕಾದ ಅನುಭವವನ್ನ ಮೂಲವಾಗಿಟ್ಟುಕೊಂಡು ತದ್ರೂಪಿ ಕಾಡಿನ ಕಲ್ಪನೆ, ರೂಪುಗೊಳ್ಳುವ ಬಗೆಯನ್ನು ಮೊದಲ ಭಾಗದಲ್ಲಿ ಮತ್ತು ಕರ್ನಾಟಕದ ತದ್ರೂಪಿ ಕಾಡು ಹೋಲುವ ತೋಟಗಳು, ಜನರ ಜ್ಞಾನ, ಭವಿಷ್ಯದ ಕಾಡು ದಾರಿಯ ಹುಡುಕಾಟ ಎರಡನೇ ಭಾಗದಲ್ಲಿದೆ.

ನೀವು ಪಟ್ಟಾಗಿ ಕೂತು ುಸ್ತಕ ಓದಿ, ತದ್ರೂಪಿ ಕಾಡು ಬೆಳೆಸಲು ಮುಂದಾದರೆ ನಮಗದೇ ಸಂೋಷ.

ಜಿ. ಕೃಷ್ಣಪ್ರಾದ್

ಶಿವಾನಂದ ಕಳೆ

19 ಅಕ್ಟೋಬರ್ 2008