ಅತ್ತ ಮಹಿಕೊ ಬಿಟಿ ಹೈಬ್ರಿಡ್ ಬದನೆಯನ್ನು ರಂಗಕ್ಕೆ ತರಲು ತಾಲೀಮು ನಡೆಸುತ್ತಿದ್ದರೆ, ಇತ್ತ 2006ರ ಆರಂಭಕ್ಕೆ ‘ಯುಎಸ್ಏಡ್ನ ಆರ್ಥಿಕ ನೆರವಿನೊಂದಿಗೆ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯ ಬಿ.ಟಿ. ತಂತ್ರಜ್ಞಾನವನ್ನು ಸಾರ್ವಜನಿಕ ವಲಯದ ಸಂಶೋಧನಾ ಸಂಸ್ಥೆಗಳ ಮೇಲೆ ಹೇರುವ, ಆ ಮೂಲಕ ಕುಲಾಂತರಿ ಆಹಾರ ಬೆಳೆಗಳ ಸಂಶೋಧನೆ ಪ್ರಮುಖವಾಗುವಂತೆ ನೋಡಿಕೊಳ್ಳುವ ಯೋಜನೆ ರೂಪಿಸಿತು.
ಬಿಟಿ ಬದನೆಯ ಸಂಶೋಧನೆ ನಡೆಸಲು ತಮಿಳುನಾಡು ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತು ವಾರಣಾಸಿಯ ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆಯ ಜತೆ ಒಪ್ಪಂದಕ್ಕೆ ಸಹಿ ಹಾಕಿತು. ಕಾರ್ನೆಲ್ ವಿಶ್ವವಿದ್ಯಾಲಯ ‘ಸಿಆರ್ವೈ1ಎಸಿ ಬಿ.ಟಿ. ಜೀನ್ ಅನ್ನು ನೀಡಿದರೆ, ಬದನೆ ಗಿಡಕ್ಕೆ ಈ ಬಿ.ಟಿ. ಜೀನ್ ಸೇರಿಸಲು ಬೇಕಾದ ತಂತ್ರಜ್ಞಾನವನ್ನು ಉಚಿತವಾಗಿ ಕೊಡಲು ಮಹಿಕೊ ಮುಂದೆ ಬಂತು.
ಬಿ.ಟಿ. ತಂತ್ರಜ್ಞಾನವನ್ನು ಉಚಿತವಾಗಿ ನೀಡಿದ ಮಹಿಕೋ, ಬಿ.ಟಿ. ಬದನೆ ಹೈಬ್ರಿಡ್ ತಳಿ ಅಭಿವೃದ್ಧಿ ಪಡಿಸದಂತೆ ಕೃಷಿವಿಶ್ವವಿದ್ಯಾಲಯಕ್ಕೆ ಷರತ್ತು ವಿಧಿಸಿದೆ! ಸ್ಥಳೀಯ ಅಥವಾ ಸುಧಾರಿತ ಬದನೆ ತಳಿಗಳಿಗೆ ಮಾತ್ರ ಬಿ.ಟಿ. ಜೀನ್ ಸೇರಿಸಲು ಅವಕಾಶವಿದೆ. ಮಾರುಕಟ್ಟೆಯಲ್ಲಿ ಎದುರಾಳಿ ಇಲ್ಲದಂತೆ ನೋಡಿಕೊಳ್ಳುವ ಮಾನ್ಸಂಟೋ-ಮಹಿಕೋದ ಜಾಣತನ ಹೇಗಿದೆ ನೋಡಿ..!
Leave A Comment