ಮಹದೇವ ನಿಮ ಪೂಜೆ ಮಾಡುವ ಮನಕೂಡೊ ಶಂಭೋ
ಮಹದೇವ ಶಂಭೋಮಹಾದೇವ
ನಿಮ್ಮ ಪೂಜೆ ಮಾಡುವ ಮನಕೂಡೊ ಶಂಭೋ ಮಹದೇವ || ಪ ||

ಆಧಾರ ಚಕ್ರಕೆ ನಾಲ್ಕು ಬೀಜಾಕ್ಷರ ನಾಲ್ಕು ಎಸಳಿನ ಕಮಲ
ನಾಲ್ಕು ವರ್ಣದ ಲಿಂಗ ನಾಲ್ಕು ವರ್ಣದ ಜ್ಯೋತಿ ಮಹದೇವ || ಪ ||

ಸ್ವಾದಿಷ್ಟಾನ ಚಕ್ರಕ್ಕೆ ಆರು ಬೀಜಾಕ್ಷರ ಆರು ಎಸಳಿನ ಕಮಲ
ಆರು ವರ್ಣದ ಲಿಂಗ ಆರು ವರ್ಣದ ಜ್ಯೋತಿ ಮಹದೇವ || ಪ ||

ಮಣಿಪುರ ಚಕ್ರಕ್ಕೆ ಹತ್ತು ಬೀಜಾಕ್ಷರ ಹತ್ತು ಎಸಳಿನ ಕಮಲ
ಹತ್ತು ವರ್ಣದ ಲಿಂಗ ಹತ್ತು ವರ್ಣದ ಜ್ಯೋತಿ ಮಹದೇವ || ಪ ||

ಅನಾಥ ಚಕ್ರಕ್ಕೆ ಹನ್ನೆರಡು ಬೀಜಾಕ್ಷರ ಹನ್ನೆರಡು ಎಸಳಿನ
ಕಮಲ ಹನ್ನೆರಡು ವರ್ಣದ ಲಿಂಗ
ಹನ್ನೆರಡು ವರ್ಣದ ಜ್ಯೋತಿ ಮಹದೇವ || ಪ ||

ವಿಶುದ್ಧಿಯ ಚಕ್ರಕ್ಕೆ ಹದಿನಾರು ಬೀಜಾಕ್ಷರ
ಹದಿನಾರು ಎಸಳಿನ ಕಮಲ ಹದಿನಾರು ವರ್ಣದಲಿಂಗ
ಹದಿನಾರು ವರ್ಣದ ಜ್ಯೊತಿ ಮಹದೇವ || ಪ ||

ಆಗ್ನೇಯ ಚಕ್ರಕ್ಕೆ ಎರಡೇ ಬೀಜಾಕ್ಷರ ಎರಡೇ
ಎಸಳಿನ ಕಮಲ ಎರಡೇ ವರ್ಣದ ಲಿಂಗ ಎರಡೇ
ವರ್ಣದ ಜ್ಯೋತಿ ಮಹದೇವ || ಪ ||

ಬ್ರಹ್ಮಪೂರಿ ಚಕ್ರಕ್ಕೆ ಸಹಸ್ರ ಬೀಜಾಕ್ಷರ
ಸಹಸ್ರ ಎಸಳಿನ ಕಮಲ ಸಹಸ್ರ ವರ್ಣದಲಿಂಗ
ಸಹಸ್ರ ವರ್ಣದ ಜ್ಯೋತಿ ಮಹದೇವ || ಪ ||

ಶಿರಾಚಕ್ರಕ್ಕೆ ಮೂರೇ ಬೀಜಾಕ್ಷರ ಮೂರೇ ಎಸಳಿನ ಕಮಲ
ಮೂರೇ ವರ್ಣದ ಲಿಂಗ ಮೂರೇ ವರ್ಣದ ಜ್ಯೋತಿ
ಮಹದೇವ || ಪ ||

ಪಶ್ಚಿಮ ಚಕ್ರಕ್ಕೆ ಒಂದೇ ಬೀಜಾಕ್ಷರ
ಒಂದೇ ಎಸಳಿನ ಕಮಲ ಒಂದೇ ವರ್ಣದ ಲಿಂಗ
ಒಂದೇ ವರ್ಣದ ಜ್ಯೋತಿ ಮಹದೇವ || ಪ ||