ಪಲ್ಲವಿ : ಪೂರ್ಣಾವತಾರ ಕೃಷ್ಣಾವತಾರ
ಧರ್ಮವನುಳಿಸಿ ಅಧರ್ಮವ ಅಳಿಸಿ
ಕರ್ಮ ಜೀವ ಉದ್ಧರಿಸಿದ ಕೃಷ್ಣ

ಚರಣ :  ದೇವಕಿ ಆಸೆಯಂತೆ ಸೆರೆಮನೆ ಜನ್ಮವಂತೆ
ತಂದೆ ಹೊತ್ತನಂತೆ ಯಮುನೆ ದಾರಿ ಬಿಟ್ಟಳಂತೆ

ನಂದನ ಮನೆಗೆ ಸೇರಿದನಂತೆ
ಯಶೋದಮ್ಮಗೆ ಸಂತಸವಂತೆ
ಹಿಂಡು ಲೀಲೆಗಳ ತೋರಿದೆಯಂತೆ
ಮಾನವ ಕುಲಕೇ ಅಚ್ಚರಿಯಂತೆ

ಗೋಪಬಾಲರದು ಎಂತಹ ಭಾಗ್ಯವೋ
ಎಷ್ಟು ಹೇಳಲಿ ಸ್ವಾಮಿ ಕಥೆಯನು
ಕನಸು ಮನಸಿನಲೂ ಕೃಷ್ಣ ಧ್ಯಾನವೇ
ಜಗನ್ನಾಥನಿಗೆ ಸತತವೂ ಜಯವೇ