ಯಾರೊ ನೀ ಗೌರಾಂಗ ವೇಷಿಯೆ, ತಪ್ತಕಾಂಚನ ಬಂಧುರ
ನನ್ನ ಎದೆಗೀ ಸುಧೆಯ ಕರೆಯುವ ದಿವ್ಯಮೋಹನ ಸುಂದರ

ಪ್ರೇಮ ಸಿಂಧುವಿನಲ್ಲಿ ನೀನೇ ಚಂಡಮರುತನ ಎಬ್ಬಿಸಿ
ನನ್ನ ದೊಣಿಯನೇತಕೀ ತೆರ ಕಾಡಿಸಿಹೆಯೋ ನೋಯಿಸಿ

ಹಿಂದೆ ಬೃಂದಾವನದಿ ಗೋವನು ಕಾದವನು ನೀನಲ್ಲವೆ ?
ಕೊಳಲನೂದುತ ಗೋಪಿಯರ ನೀ ಮರುಳುಗೊಳಿಸಿದೆಯಲ್ಲವೆ ?

ಅಂದು ಗೊವರ್ಧನವನೆತ್ತುತ ವ್ರಜರ ಕೇಡನು ತವಿಸಿದೆ
ನೊಂದ ಗೋಪೀವೃಂದ ಪದತಲದಲ್ಲಿ ಪ್ರೇಮದಿ ಕರಗಿದೆ.