ಕೊರಕೋಡು

ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ
ಕಲ್ಲೇಶ್ವರ ದೇವಾಲಯದ ಮುಂದೆ
ಎ.ಕ. VIII, ಸೊರಬ – ೧೭೫
ಕ್ರಿ.ಶ. ೧೧೫೫

೧ ಸ್ವಸ್ತಿ ಶ್ರೀಮಚ್ಚಾಳುಕ್ಯಚಕ್ರವರ್ತ್ತಿ ತ್ರೈಳೋಕನಮಲ್ಲದೇವಂ ಸುಖದಿಂ ರಾಜ್ಯಂಗೆಯ್ಯುತ್ತಿರೆ ಸಕ ನ್ರಿಪ –

೨ ಕಾಳಾತೀತ ಸಂವತ್ಸರಂಗಳು ೧೦೭೭ನೆಯ ಯುವಸಂವತ್ಸರದಧಿಕ ಫಾಲ್ಗುಣ ಬಹುಳ ೩ ಸೋಮವಾರದಂ –

೩ ದು ಶ್ರೀಮನ್ಮಮಹಾಮಂಡಳೇಶ್ವರಂ ಜಗದೇವರಸರ ಬೆಸದಿಂ ಮದಸಾಲೆಯ ಕಾಳರಸಂ ಸಮಸ್ತ ಸಾಮಾ –

೪ ತ್ತಿಯಂಬೆರಸು ಬಂದು ಶ್ರೀಮದನಾದಿಯಗ್ರಹಾರಂ ಕುಪ್ಪಗಡೆಯ ಹಳ್ಳಿ ಕೊರಕೋಡನಿಱಿದು ತುಱುವಂ ಕೊಂ

೫ ಡುಡೆಯುಚ್ಚಿ ಹೋಹಾಗಳಲ್ಲಿ ಹುಟ್ಟಿದ ಬಾವಗಾವುಂಡನ ಮಗಂದಿರು ದೇವಗಾವುಂಡನುಂ ಮಲ್ಲಗಾವುಂ

೬ ಡನುಂ ಬಿಲ್ಲಮಂಬುಮಂ ಕೊಂಡೀರ್ವ್ವರುಂ ಹೆಬ್ಬಾಗಿಲಡ್ಡಂ ನಿಂದು ಗುಹೆಯ ಬಾಗಿಲೊಳು ಸಿಂ –

೭ ಹನಿಪ್ಪಂತೆ ತಾಗಿ ತಳ್ತೆಸುವಾಗಳು ಕಾರಮಳೆ ಕಱೆದಂತೆಯುಂ ಕಡಂದುರಹುಟ್ಟಿಯ

೮ ಕೆಣಕಿದಂತೆಯುಂ ಕವಿದ ಕಾಲಬಾಯೊಳಂ ಜವನೊಕ್ಕಿಲಿಕ್ಕಿದಂತೆ ತೊತ್ತಳ –

೯ ಳದುಳಿದ ವೋಲುತಂ ಕಯ್ಯನೆರದುಂ ಬಿಲ್ಲುತಿರುಮಂ ಪಱಿವಂನ್ನವೆಚ್ಚು ನೆಱೆಯದೆ ಕಟ್ಟಿದಲಗಂ ಕಿ –

೧೦ ತ್ತು. ಲ್ಕುಱಿಯ ಹಿಂಡಂ ತೋಳಂ ಪೊಕ್ಕಂತೆಯುಂ ಕರ್ಬ್ಬುದೋಂಟವನಾನೆ ಪೊಕ್ಕಂತೆಯುಂ –

೧೧ ನಿಕ್ಕುರಳಿಲುಪೊಕ್ಕುದೊಳಹಿಂಡು ಕುತ್ತಿ ನೂಂಕುತ್ತ ಬಪ್ಪಾಗಳು || ವ್ರಿತ್ತ || ಮಲೆದಿದಿರಾಂತ ಮಾರ್ವ್ವಲ

೧೨ ವನಳ್ಕುಱೆ ತಾಗಿ ಭುಜಪ್ರತಾಪದಿಂದಲಗನೆ ಕಿರ್ತ್ತು ಪೊಯ್ಯೆ ನಿರುತಂ ಕಣಕಾಲ ಮೊಳಕಾಲ್ಮು –

೧೩ ಖಂ ಭುಜೆನುತಲೆಬಳೆಯಾಗೆ ಸಂಬಳಿತಯೋಪಿನದೊಂದೆರಡಟ್ಟಿಯೋಡಲುಂ ತೊಲಗದೆ ನಿಂದು

೧೪ . . . . ಳಿಱಿದರಿಬ್ಬರುಮಾಹವರಂಗಭೂಮಿಯೊಳು | ಅಂತವರಿಬ್ಬರುಂ ಪೋಗದೆ ನಿಂದುದಂ ಕಂಡು ಪೊ

೧೫ ರಿದಾಳು ಕುದುರೆಯಮೊರ್ಬ್ಬಂತಾಗಿಯೆ ಸಲ್ವಿಱಿಯಲುಂ ಕೋಲ್ಕೊಂತಂಗಳೂಡಾಗಿ ಬಿರ್ದ್ದು

೧೬ ಸುರಲೋಕಪ್ರಾಪ್ತರಾದವರಿರ್ಬ್ಬರ ಪೆಣನಂ ಮೆಟ್ಟಿ ತುಱುಪರಿಯಲವರಿಬ್ಬರಿಂ ಕಿೞಿಯ ಬೊಪ್ಪಗಾ –

೧೭ ವುಂಡ ತಂಮಂಣಂದಿರಿಬ್ಬರ ಕಳೇಬರವಂ ಕಂಡು ಸೈರಿಸಲಾಱದೆ ನಿಮ್ಮಾದುದನಪ್ಪೆ ನಲ್ಲದೊಡೇಂ ತುಱು

೧೮ ವಂ ಮಗುಳ್ಚಿ ಬಪ್ಪೆನಿರದೊಂದೆಮೆಯ್ಯೊಳು ಹಿಂದಹತ್ತಲಾತಂಗೆ ಪಡಿಬಲದಾಗಿ ಮಂಡಳಿಕಂ ವುದ್ದ –

೧೯ ರೆಯೆಕ್ಕಲರಸನಾಳ್ಕುದರೆಯಂ ಹೇಳಲಾ ನೆಱವಂ ಕೂಡಿಕೊಂಡು ಹಾಲ್ಗಟ್ಟದ ಬಯಲ

೨೦ ಲೊಡ್ಡನೊಡ್ಡಿದರಿಬಲವಂ ಬೊಪ್ಪಗವುಂಡ ಕೊಂದು ತುಱುವಂ ಮಗುಳ್ಚಿ ಕೊಂಡುಬಂದಣ್ನಂ

೨೧ ದಿರಂ ಸಂಸ್ಕಾರಿಸಿ ಜಲದಾನಕ್ರಿಯೆಯ್ಮಂ ಪರೋಕ್ಷ ವಿನಯಮುಮಂ ಮಾ –

೨೨ ಡಿ ಯಿರ್ಬ್ಬಗ್ಗಂ ಕಲ್ಲನಿಱಿಸಿದಲ್ಲಿ ಮಂಗಳ ಮಹಾ ಶ್ರೀ ಶ್ರೀ ಶ್ರೀ ಶ್ರೀ

 

ತಾಳಗುಂದ

ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ
ಪ್ರಣವೇಶ್ವರ ದೇವಾಲಯದ ಮುಂದಿನ ವೀರಗಲ್ಲು
(ಎ.ಕ. VII ಶಿಕಾರಿ ೧೮೧)
ಕ್ರಿ.ಶ.೧೧೭೦

೧ ಸ್ವಸ್ತಿ ಶ್ರೀಮತು ಕಳಚುರ್ಯ್ಯ ಚಕ್ರುವರ್ತ್ತಿ ರಾಯಮುರಾರಿ ಸೋವಿದೇವ ವರುಷದ ವಿರೋಧಿಕ್ರಿತು

೨ ಸಂವತ್ಸರದ ಆಶ್ವಜ ಬಹುಳ ೪ನೇ ಆದಿವಾರದಂನ್ದು ಶ್ರೀಮನುಮಹಾಪ್ರಭಾ . .

೩ ಬನವಸೆನಾಡ ಹೆಗ್ಗಡೆ ದಂಡನಾಯಕ ಜೊಳಿಕ್ಯಕೇಸಿಮಯ್ಯನು ಸಂತ್ತಳಿಗೆನಾ

೪ ಡ ಬಳಿಯ ಬಾಡದ ಅಳಹೂರ ನಿಱುದು ಪೆಂಡಿರಉಡೆಉಚ್ಚಿಕೊಂ

೫ ಡು ಹೋಹಲ್ಲಿ ನಾಡಕುಳತಿಳಕಮಪ್ಪ ಮುಕ್ಕಡರ ಸೋವಿಸೆಟಿಯ ಮಗಂ ಕಾಳೆಯ

೬ ನಾಯಕತಳ ಕುದುರೆಯಂ ನಿಱಿದು ಪಲರಂ ಕೊಂದು ತುಱುವಂ ಮಗುಳ್ಚಿ ಸು

೭ ರಲೋಕ ಪ್ರಾಪ್ತನಾದ | ಆತನ ಮಗಂ ಸೋಮೆಯ ಬಮ್ಮಯಂಗಳು ಪರೋಕ್ಷ

೮ ವಿನಯದಿಂ ಮಾಡಿ ಕಲಂ ನಿಱಿಸಿದರು || ದ್ವಾವಿ ಮೌಪುರುಶೌಲೋಕೇಸೂರ್ಯ ಮಂಡ್ಡಳಭೇದಿನೌ

೯ ಪರಿಬ್ರಾಟುಯೋಗಯುಕ್ತಶ್ಚರಣೇಶೂರಮುಖೇಹತಃ ||

 

ಜಂಬೂರು

ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ
ಎ.ಕ. VII ಶಿಕಾರಿಪುರ – ೭೫
ಕ್ರಿ.ಶ. ೧೧೭೫

೧ ಸ್ವಸ್ತಿ ಶ್ರೀಮತು ಕಳಚುರ್ಯ ಭುಜಬಳ ಚಕ್ರವರ್ತಿ ರಾಯಮು

೨ ರಾರಿ ಸೋವಿದೇವವರ್ಷದ ೮ನೆಯ ಜಯಸಂವತ್ಸರದ ಪಾ

೩ ಲ್ಗುಣ ಸುದ್ಧ ೧೪ ಆದಿವಾರದಂದು ಶ್ರೀಮತ್ ಅನಾ

೪ ದಿ ಅಗ್ರಹಾರಂ ಜಂಬೂರ ಸಾಸಿರ್ವ್ವರ ಬೆಸ

೫ ದಿಂ ದೀವರ ಬಾಚೆಯ ಬಿಟ್ಟೆಯೂರ ಸಿಂಗದ ಮಂಚಗೌಡ ಯೂರ

೬ ನಿಱಿದು ಹೆಂಡಿರುಡೆಯುರ್ಚ್ಚಿ ತುಱುವಂ ಕೊಂಬಲಿ

೭ ಹಲರಂ ಕೊಂದು ಸುರಲೋಕ ಪ್ರಾಪ್ತನಾದ || ಜಿತೇನ ಲಭ್ಯತೇ . . . .

೮ ಲಕ್ಷ್ಮೀಮ್ರಿತೇನಾಪಿ ಸುರಾಂಗನಾ ಕಣಯೂರ್ದನಿ ಕಾಯೇ ಕಾ ಚಿತ್ತೇ

೯ ಮರಣೇರಣೇ

 

ಕುಪ್ಪಟೂರು

ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ
ನಾಡಿಗರ ತೋಟದಲ್ಲಿರುವ ವೀರಗಲ್ಲು
(ಎ.ಕ. VIII ಸೊರಬ ೨೫೧)
ಕ್ರಿ.ಶ. ೧೧೭೭

೧ ಸ್ವಸ್ತಿ ಶ್ರೀಮತು ಕಳಚುರ್ಯ್ಯ ಭುಜಬಳ ಚಕ್ರವರ್ತ್ತಿ ರಾಯ

೨ ಮುರಾರಿ ಸೋವಿದೇವವರ್ಷದ ೧೦ನೆಯ ದುರ್ಮ್ಮತಿಸಂವತ್ಸರದ

೩ ಮಾಘದ ಪುಣ್ನಮಿ ಸೋಮವಾರದಂದು || ಕಂದ || ಬನವಸೆನಾಡಂ ಹಡ

೪ ದಿಂತನುನಯದಿಂ ವಿಕ್ರಮಾಂಕನಾಳುತ್ತಿರಲಾ ಮನುನೀತಿಮಾರ್ಗ್ಗ

೫ ವೊಪ್ಪುವಧನದ ಶ್ರೀಕುಪ್ಪಟೂರ ಸಾಸಿರ್ವ್ವರ್ಕ್ಕಳು || ಸುಖವಿರ

೬ ಲನ್ತಾವೂರಂ ಮಖಮಂ ಕಿಡಿಪ ಸುರನನ್ತೆ ಕಿಡಿಸಲು ಬರ್ಪ್ಪಾ ಸು

೭ ಖರಹಿತ ಗವುಡಸಾಮಿಯ ಸಖರೊಳಗಾಗೆಯ್ದೆಪಿಡಿಯೆ ಪಾರ್ವ್ವರು

೮ ಸೆಱೆಯ || ವ || ಅನ್ತಾಗವುಡಸ್ವಾಮಿ ದಣ್ಡನಾಥಂ ಸಿದ್ಧಾಯಮಂ ನೆ

೯ ಱೆಯೆ ಕೊಂಡನ್ಯಾಯದಿಂದುಚ್ಚಂಗಿಯ ಹಡುದೇವನ ಧಾಳಿಯಂ

೧೦ ತಂದು ಗ್ರಾಮಮಂ ಮೂವಳಸಾಗಿ ಮುತ್ತಿ ಯಿಱಿದು ಸೂಱೆಯಂ

೧೧ ಕೊಂಡುಡೆಯುರ್ಚ್ಚಿ ಸೆಱೆಯಂ ಪಿಡಿಯೆ || ಪಿಡಿವುದುಮನ್ತಾಕ್ಷಣದಿಂ ದಿ

೧೨ ಡುಕೆಯ ನಾಯಕ ತನೂಜನಂ ಕರೆದಾಗಳು ಕಡುಗಲಿ ಕೇತೆಯ

೧೩ ನಾಯಕನಿಂ ಬಿಡಿಸಿ ಸ್ತ್ರೀ ಗೋವನೆಂದು ಬೆಸಸಲಶೇಷ || ವ || ಅನ್ತು ಬೆಸಸುವು

೧೪ ದುಂ ಮಾರಿಯ ಮಸಕದನ್ತೆ ಮಾಮಸಕಂ ಮಸಗಿ ಪಲವರಂ ತಳುತ್ತಿಱಿದು

೧೫ ಸೆಱೆಉಯಂ ಜೀವಧನಮುಮಂ ಮಗುಳ್ಚಿ ಸುರಲೋಕ ಪ್ರಾಪ್ತನಾದನದಕಶೇಷಮ

೧೬ ಹಾಜನಂ ಮೆಚ್ಚಿ ನೆತ್ತಗೊಡಗೆಯ್ಯಂ ದಾತನ ಮಗಂ ಮಾಕೆಯನಾಯಕಂ

೧೭ ಗೆ ಹಾದಕೆಯ್ಯುಮಂ ಹತ್ತು ಕೆಯ್ಯ ಮನೆಯುಮಂ ಸರ್ವ್ವಾಬಾಧಪರಿ

೧೮ ಹರವಾಗಲಾಚಂದ್ರರ್ಕ್ಕತಾರಂಬರಂ ಸಲುವನ್ತಾಗಿ ಕೊಟ್ಟರು || ಜಿ

೧೯ ತೇನಲಭ್ಯತೇಲಕ್ಷ್ಮೀರ್ಮ್ರಿತೇನಾಪಿಸುರಾಂಗನಾ ಕ್ಷಣವಿಧ್ವಂಸಿನೀಕಾ

೨೦ ಯೇ ಕಾ ಚಿನ್ತಾ ಮರಣೇ ರಣೇ ||

 

ಕಿತ್ತನಕೆರೆ

ಹಾಸನ ತಾಲೂಕು, ಹಾಸನ ಜಿಲ್ಲೆ
ಎ.ಕ.೮ (ಹೊ) – ಹಾಸನ – ೧೦೫
ಕ್ರಿ.ಶ. ೧೧೯೬

೧ ಸ್ವಸ್ತಿ ಸಮಸ್ತಭುವನಾಶ್ರಯಂ ಶ್ರೀಪ್ರಿಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಸ್ವ

೨ ರ ಪರಮಭಟ್ಟಾರಕಂ ದ್ವಾರಾವತೀಪುರವರಾಧೀಸ್ವರಂ ಯಾದವಕುಲಾಂಬರದ್ಯುಮ

೩ ಣಿ ಸಮ್ಯಕ್ತ್ವ ಚೂಡಾಮಣಿ ಮಲೆರಾಜರಾಜ ಮಲೆಪರೊಳುಗಂಡ ತಳಕಾಡುಗಂಗವಾಡಿನೊ

೪ ಣಂಬವಾಡಿ ಬನವಸೆ ಹಾನುಂಗಲ್ಲು ಹುಲಿಗೆಱಿ ಹಲಸಿಗೆ ಬೆಳ್ವೊಲ ತಟ್ಟವಾಡಿ ತೞಕಾಡುನಾಡ

೫ ಗೊಂಡ ಭುಜಬಳವೀರಗಂಗನೇಕಾಂಗವೀರ ಸನಿವಾರಸಿದ್ಧಿ ಗಿರಿದುರ್ಗ್ಗಮಲ್ಲ ಚಲದಂಕರಾಮನಸಹಾ

೬ ಯಶೂರ ನಿಶ್ಯಂಕಪ್ರತಾಪಚಕ್ರವರ್ತ್ತಿ ಹೊಯ್ಸಳ ವೀರಬಲ್ಲಾಳದೇವರಸರು ಕಲ್ಯಾಣಪರ್ಯ್ಯತಮಾ

೭ ಗಿ ಸಕಲಜನಕಲ್ಯಾಣ ಮಹೋತ್ಸವದಿನೇಕಚ್ಛತ್ರಚ್ಛಾಯೆಯಿಂ ಸುಖ ಕಥಾವಿನೋದದಿಂ ರಾಜ್ಯಂಗೆಯುತ್ತ

೮ ಮಿರೆ ||

೯ ಸ್ವಸ್ತಿ ಶ್ರೀಮತು ಸಕವರ್ಷ ೧೧೧೭ನೆಯ ರಾಕ್ಷಸ ಸಂವತ್ಸರದ ಮಾಘ ಸು ೧೦ ಬ್ರಿಹವಾ

೧೦ ರದಂದು ಚಟ್ಟಗೌಂಡರ ಮಾಳಯ್ಯನ ಮಗ ಸೋಮೆಯನು ಹಾರುವನಹಳ್ಳಿಯ ದಾರಿಯಲು

೧೧ ಹೆಮ್ಮಕ್ಕಳ ಉಡೆಉರ್ಚ್ಚಲೀಯದೆ ತಾನುಂ ತನ ಸಂಗಡದ ಬೆಚ್ಚೆಯಮಾವನುಂ ವೀರಗಾಳೆಗಂ ಕಾದಿ ಹೆ

೧೨ ಮ್ಮಕ್ಕಳ ಕಾದು ಕಳಿಹಿ ಕಳ್ಳರಂ ಕೊಂದು ತಾವು ಸುರಲೋಕಪ್ರಾಪ್ತರಾಗಿ ದೇವಕನ್ನೆಯರುಯ್ದರು ಆ

೧೩ ತನಿಲ್ಲದ ಹೆಱಗೆ ಆತನಿಂ ಹಿರಿಯಣ್ನ ಕಲ್ಲೆಯನುಂ ಆತನ ತಂಮ ಬೆನಚೆಯನುಂ ಅವರ ಕಿಱಿ

೧೪ ಯಯ್ಯ ಕಟ್ಟದಹಳ್ಳಿಯ ಮಾದಿಗೌಡನುಂ ಇನ್ತೀ ಮೂವರುಂ ಆತನ ವೀರವಸ್ತುವಂ ನಿಲಿಸಿದ ಸಿಲಾಲೇಖೆ

೧೫ ಚಟ್ಟಗೌಡರಕೆಱೆಯ ಕೆಳಗೆ ತಂಮ ಕೆಱೆಮಂಣ್ನಿನಲ್ಲಿ ಬೆನಚೆಯನುಂ ಬಮ್ಮೆಯನು ಸೋಮಜೀಯನ ಕಾಲಂ ಕ

೧೬ ರ್ಚ್ಚಿ ವೀರಗಲ್ಲಿಂಗೆ ನಿವೇದ್ಯಕ್ಕಂ ಹೂಪತ್ರೆಗಂ ಧಾರಾಪೂರ್ಬ್ಬಕಂ ಮಾಡಿ ಬಿಟ್ಟ ಗದೆ ಕೊ ೪ (ಯಿ ಧರ್ಮ್ಮ)

೧೭ ಯೀ ಧರ್ಮ್ಮಮಂ ಪೂಜಿಸದೆ

೧೮ ಉದಾಸೀನ ಮಾಡಿದಡೆ ಕವಿಲೆ

೧೯ ಯಂ ಬ್ರಾಹ್ಮಣರ ಕೊಂದ ಪಾಪ

 

ನಿಟ್ಟೂರು

ಹಾಸನ ತಾಲೂಕು, ಹಾಸನ ಜಿಲ್ಲೆ
ಸೋಮೇಶ್ವರ ದೇವಾಲಯದ ಪೂರ್ವಕ್ಕೆ ನೆಟ್ಟ ವೀರಗಲ್ಲು
(ಎ.ಕ. ೮ (ಹೊ), ಹಾಸನ – ೬೯)
ಕ್ರಿ.ಶ.೧೨೧೩ ಜುಲೈ ೧೩, ಶನಿವಾರ

೧ನೇ ಪಟ್ಟಿ

೧. ನೋಡಿರೆ ವೀರನಂ ನೆಗಳ್ದ ಸಾಹಸಮಲ್ಲನ ನಾಜಿರಂಗದೊಳು ಕೂಡಿಯೆ ಬಂದಾ

೨. ರಂ ನೆಱೆಯ ಕಾಯಲು ನಿಂದನದೊಂದೆ ಬಿಲ್ಲಿನಿಂ ಱೂಢಿಗೆ ಸಂದ ಮೆಟ್ಟಱೆ

೩. ಯ ದಾರಿಯಳೊಪ್ಪಿರೆ ನಾಡ . . . . ಡಿಳೆಗಿಟ್ಟನಂದದಡಿನ್ನಾ ಕಲಿ ಬೇಡರ ಜಕ್ಕ

೪. ನುರ್ವ್ವಿಯೊಳು || ಕಾಡೊಳಗಾವರ್ಬ್ಬೆ . . . ತೆಱಡಿಯೆಂದು ಪಲರಂದಲ್ಲಿ ತಾಗಿದಡ

೫. ವರಂ ವೋಡಿಸಿ ಗೆಲ್ದಂ ಧುರದೊಳು ಕಾಡೊಡೆಯನ . . . ಸವಿ ಕಂಡಂ ಜಕ್ಕಂ ||

೬. ಹೆಂಡಿರುಡೆವುಚ್ಚುವಾಗಲು . . . ಕಲಿ ಬಿಲ್ಲನೆಸೆಯೆ ಬೇಡರ ಜಕ್ಕಂ ಖಂ

೭. ಡದೊಳಿಂದೆಯ ನಾಡಿಯೆಚ್ಚಂಡಕಲಿ ಸತ್ತು ಪಡೆದನಾ ಸುರಪುರಮಂ ||

೨ನೇ ಪಟ್ಟಿ

೧. ಸ್ವಸ್ತಿಶ್ರೀ ಸಕವರ್ಷ ೧೧೩೫ನೆಯ ಶ್ರೀಮುಖ ಸಂವತ್ಸರದ ಆಶಾಡ ರ್ಬ ಮಂಗಳವಾ

೨. ರದಂದು ಜಕ್ಕಬೋವಮಲ್ಲಂ ಅಯದಾರಿಯೋಳ್ಕಾದಿ ತಾಂ ಸುರಲೋಕ ಪ್ರಾಪ್ತನಾದ

೪. ಆತನ ಮಕ್ಕಳು ದೇವಣ ಮಾರೆಯಂಗಳು ವೀರಗಲ್ಲ ನಿಲಿಸಿದರು || ಹೂವಿನ ವಿ

೫. ಮಾನವೇಱಿಸಿ ತೀವಿದ ಚೌವನೆಯರೆಸೆವರತಿ ಚೆಂನೆಯರುಂ ದೇವಾಂಗನೆಯರ್ಪ್ಪ

೬. ಲರುಂ ಭಾವಿಸಿ ಸುರಲೋಕಕೆಸೆಯೆ ಜಕ್ಕನನುಯ್ದರು | ಸುರವನಿತೆಯರು

೭. ಯ್ಯಲೊಡಂ ಸುರದುಂದುಭಿ ಪೊಯ್ಯೆ ಸುರಿಯೆ ಪೂವಿನ ಮೞೆ

೮. ಯಂ ಸುರಲೋಕದಲ್ಲಿ ಜಕ್ಕನನಿರ್ಸಿಯೆ ತಾಂ ವೀರರಸವ ಪಾಡಿದರಾಗಳು ||

 

ಅಬ್ಬಲೂರು

ಹಿರೇಕೆರೂರು ತಾಲೂಕು, ಹಾವೇರಿ ಜಿಲ್ಲೆ
ಎ.ಇ.V ೨೬೧ – ೬೫
ಕ್ರಿ.ಶ.೧೨೧೯, ಜೂನ್ ೨೯, ಶನಿವಾರ
ಅಲ್ಲಿಯ ಕಂಪಣಂ ನಾಗರಖಂ

೩ ಡವೆಪ್ಪತ್ತರ ಬಳಿಯ ಬಾಡ ಅಬ್ಬಲೂರ ವಿಸ್ತಾರವೆನ್ತೆಂದಡೆ || ಗಿಳಿಕುಳದಿಂ ಪಿಕಾವಳಿಯಿನೊಪ್ಪುವ ನಂದನದಿಂ ವಿಳಾಸದಿಂ

೪ ಬೆಳಸಿದ ಗಂಧಶಾಲಿ ಶಿವಾಲಯದೊಳೀ ಬಾಳನೇತ್ರ ಪೂಜಿತ ಗೃಹದಿಂ ಬಳಾಧಿಕ ಕಳಾವಿಧವೀರ ಸಮೂಹದಿಂದೀ

೫ ಳಾತಳದೊಳಗಬ್ಬಲೂರತಿ ವಿಚಿತ್ರತರಂ ನಿಜಮಾಗಲೊಪ್ಪುಗುಂ || ಅನ್ತು ಶೋಭೆವೆತ್ತಬ್ಬಲೂರ ಬೀರಗಾವುಂಡನ ಗುಣ

೬ ಕಥನವೆಂತೆಂದಡೆ || ವ್ರಿ || ಪರಹಿತನೆಂದು ದಾನವಿನನೆಂದು ಗುಣಾಂಬುಧಿಯೆಂದು ಲೀಲೆಯಿಕರಕರ ತೇಜನಂ ಗುರುಪದಾಂಬು

೭ ಜ ಭಕ್ತನನೆಂತು ನೋಪ್ಪಡ ಪುರುತರ ಧೈರ್ಯ್ಯನಂ ಸಕಳವಂದಿಜನಾಶ್ರಯ ಕಳ್ಪವೃಕ್ಷನಂ ವರ ವಿಭುದೋತ್ಕರಂ ಮುದದೆ ಬಂ

೮ ಣ್ಣಿಸುಗಂ ಸಲೆ ಬೀರಗಾವುಂಡನಂ || ಅನ್ತಾಬೀರಗಾವುಂಡ ಸುಖದಿಂದವಿರೆ ಬೆಳಗವಟ್ಟಿ ಈಶ್ವರದೇವಂ ಹಲ

೯ ಬರು ಮಂನ್ನೆಯರು ಕೂಡಿ ಸಾತಳಿಗೆನಾಡ ನಾಯಕರ ಕೂಡಿಕೊಂಡು ಹತ್ತು ಸಾಸಿರರಾಳು ಸಾಯಿರ ಕುದುರೆ ವೆರ

೧೦ ಸಿ ನಡದು ಬಂದಬ್ಬಲೂರನಿಱಿದು ಹಿಂಡು (ಹೆಂಣ್ಣು) ಸೆರೆ ತುರುವಂ ಕೊಂಬಲ್ಲಿಯಾ ಸೆಱೆ ತುಱುವಂ ಹಿಂದಿಕ್ಕಿ ಬೀರಗಾವುಂಡನ ಬೆಸವರಂ

೧೧ ಬಡಗಿ ಕೇತೋಜನ ಮಕ್ಕಳು ಮಾಚಂ ಗೋಮಂಗಳು ಮಾಡಿದ ವೀರವೆಂನ್ತೆಂದಡೆ || ಕ || ಘಟ್ಟಿಸಿ ನೂಂಕಿದ ವಾಜಿಯ ಥಟ್ಟಂ ಕಟ್ಟಾಳು ಬಡಗಿ

೧೨ ಮಾಚಂ ತಾಗಲು ನಿಟ್ಟಿಸಿ ಗೋಮನುಯಿಸೆ ಪಡಲಿಟ್ಟುದು ತತುಕ್ಷಣದಿ ವೈರೀ ಬಲವೆನಿತನಿತುಂ || ಮಾತೇನೊ ಪೇಳಲಿಂ

೧೩ ತುಪಮಾತೀತಂ ನೋಡಲತಿಭಯಂಕರ ಮೆನಲಿಂತಾಂತರಿಬಲಮುಮನೋವದೆ ಕೇತೋಜನ ಮಗ ಮಾಚ ಪೊಕ್ಕು ತಿವಿದಂ ಪಲ

೧೪ ರಂ || ಸೋದರರಿಬ್ಬರ ವೀರಂ ಮೇದಿನಿಗಚ್ಚರಿ ಇದೆನ್ನಿಸಿ ಧುರದೊಳು ಪಲರಂ ಕಾದಿತವೆ ಕೊಂದು ಸ್ವರ್ಗ್ಗ

೧೫ ಕ್ಕೋದರ್ಜಸವೆಸೆಯೆ ಮಾಚನುಂ ಆ ಗೋವನುಂ || ಜಿತೇನ ಲಭ್ಯತೇ ಲಕ್ಷ್ಮೀಮೃತೇನಾ . . . . . .

 

ಹಾಲ್ತೊರೆ

ಬೇಲೂರು ತಾಲೂಕು, ಹಾಸನ ಜಿಲ್ಲೆ

ಎ.ಕ.೯ (ಹೊ) ಬೇಲೂರು – ೫೦೫

ಕ್ರಿ.ಶ.೧೨೩೦

ಒಂದನೆಯ ಪಟ್ಟಿ

೧ ಸ್ವಶ್ತಿ ಸಮಸ್ತಭುವನಾಶ್ರಯಂ ಶ್ರೀಪ್ರಿಥ್ವೀವಲ್ಲಭಂ ಮಹಾರಾಜಾಧಿರಾಜ ಪರಮೇ

೨ ಶ್ವರಂ ದ್ವಾರಾವತೀಪುರವರಾಧೀಶ್ವರಂ ಯಾದವಕುಳಾಂಬರದ್ಯುಮಣಿ ಸರ್ವ್ವ

೩ ಜ್ಞ ಚೂಡಾಮಣಿ ಮಲೆರಾಜರಾಜ ಮಲಪರೊಳುಗಂಡ ಗಂಡಭೇರುಂಡ

೪ ಕದನಪ್ರಚಂಡನಸಹಾಯ ಶೂರನೇಕಾಂಗವೀರ ಗಿರಿದುರ್ಗ್ಗಮಲ್ಲ ಚಲ

೫ ದಂಕರಾಮ ಮಗರರಾಜ್ಯನಿರ್ಮ್ಮೂಳ ಚೋಳರಾಜ್ಯಪ್ರತಿಷ್ಠಾಚಾರ್ಯ್ಯರುಮಪ್ಪ ಶ್ರೀ ವೀರನಾ

ಎರಡನೆಯ ಪಟ್ಟಿ

೬ ರಸಿಹ್ವದೇ(ವ)ರು ಹೊರನೂರಪಟ್ಟಣದಲೂ ಸುಕಸಂಕಥಾವಿನೋ(ದ)ದಿಂ ಪ್ರಿಥ್ವಿರಾಜ್ಯಂಗೆಯ್ಯು

೭ ತ್ತುಮಿರ್ದ್ಧಲ್ಲಿ ಹಾಲುತೊಱೆಯನಗ್ರಹಾರಮಂ ಮಾಡಿದೆವೆಂದು ರಾಜಾಜ್ಞೆವಟ್ಟಪ

೮ ಡಿ ಮಹಾಪ್ರಸಾದವೆಂದು ಗಾಉಂಡುಗಳೆಲ್ಲರುಂ ಕೈಕೊಂಡು ಮಹಾಜನಂಗ

೯ ಳಂ ತಂದು ಸಂಮುಖಂ ಮಾಡೆಂದಡೊಲ್ಲದೆ ಹೋಗೆ ದಾಳಿಯಂ ತಂದು ಊ

೧೦ ರೆಲ್ಲವಂ ಸೂಱೆಗೊಂಡು ಉಡೆಉರ್ಚ್ಚೆ ಹೆಣ್ಣುಸೆಱೆ ತುಱುಸೆಱೆಯಂ ಕಳೆ

ಮೂರನೆ ಪಟ್ಟಿ

೧೧ ದು ಆ ಹರಿಮಾರಗೌಡನ ಮಗ ಮಾರಯಪೆರಯ ಉಗ್ರತೆಯಿಂದಾಳಿ . . .

೧೨ ಕಾದಿ ಕುದುರೆಯ ಮಾ(ರ್ಬ್ಬಲ) ವಂ ತಾಗಿ ಗತಲೋಕ ಪ್ರಾಪ್ತನಾದ ಸಕವರಿಶ ೧೧೫೨ ವಿಕ್ರಿತಿಸಂವ

೧೩ ತ್ಸರದ ಕಾರ್ತ್ತಿಕ ಶು ೯ ಬ್ರಿಹವಾರದಂದು ಆ ಮಹಾಜನಂಗಳುಂ ಆ ನಾಡ ಮಹಾಪ್ರಜೆ

೧೪ ಗೌಡುಗಳುಂ ಸಹ ಕೊಟ್ಟ ಕ್ರಮವೆಂತೆಂದಡೆ ಆ ಗೌಂಡುಗಳಿಗೆ ಕೊಡಗಿಯಾಗಿ ಹಾ

೧೫ ಲುತೊಱೆಯ ಕೆಱೆಗೆ ಹುಲ್ಗುಂಡಿಯ ದಾರಿಯಿಂ ಬಡಗಲು ಕಂಡು . . ಭೂಮಿಯು ಆವಂ . . . .