. ನಬಿ ರಸೂಲಿಲ್ಲಾರ ಪದಾ

 

ದೈವಾ ಕೂಡಿ ಕುಂತಿರೊಳೆ ಅಸಲಾ | ಮಾಡದೆ ಗುಲ್ಲಾ ಕೇಳರಿ ಖುಲ್ಲಾ
ನಬಿ ರಸೂಲಿಲ್ಲಾ ಜಗದೊಳು ಮೇಲಾ | ದುಷ್ಟ ಅಬೂಜೈಲಾ ಅವರನು ಕಾಡಿದನಲ್ಲಾ
ಕಾಡಿ ಕಾಡಿ ಕಾಡಿ ಕಡಿಗೆ ನಾಶಾದನಲ್ಲಾ | ಶಾರ ಕುಸೂಗಲ್ಲಾ ಐತ್ರಿ ರಂಗಲಾಲಾ
ರೈಮಾನಶಾವಲಿ ಅವರ ದಯಾ ನಮ್ಮ ಮೇಲಾ ||

. ಇದ್ದರ ಇರಬೇಕು ಎಂತವರಾ

ಮಗ ಇದ್ದರ ಇರಬೇಕು ಎಂತವರಾ
ಇಸ್ಮಾಯಿಲ ಜಬೀರುಲ್ಲಾನಂಥವರಾ ||
ತಂದಿ ಇದ್ದರ ಇರಬೇಕು ಎಂತಾಂವಾ
ಇಬ್ರಾಹೀಮ ಕಲೀಲುಲ್ಲಾನಂತಾಂವಾ
ತಾಯಿ ಇದ್ದರ ಇರಬೇಕು ಎಂತಾವರು
ಬೀಬಿ ಫಾತಿಮಾನಂತಾವರು
ಅಣ್ಣ ತಮ್ಮರು ಇರಬೇಕು ಎಂತಾವರು
ಹಸೇನಿ ಹುಸೇನಿ ಅಂತಾವರು
ಶೂರ ಇದ್ದರ ಇರಬೇಕು ಎಂತಾವರು
ಮಹ್ಮದ ಹನೀಫನಂತಾವರು
ಧೀರ ಇದ್ದರ ಇರಬೇಕು ಎಂತಾವರು
ಮೌಲಾಲಿ ಶರಣರ ಅಂತಾವರು
ಗುರು ಇದ್ದರ ಇರಬೇಕು ಎಂತಾವರು
ಮೈಬೂಬ ಸುಬಾನಿ ಅಂತಾವರು
ಶರಣರಿದ್ದರ ಇರಬೇಕು ಎಂತಾವರು
ಮಹ್ಮದ ಪೈಗಂಬರ ಅಂತಾವರು
* * *