||ಪಲ್ಲ||
ರಾಮಚಂದ್ರ ಲಕ್ಷ್ಮಣ ಸೀತಾ ಮೂರು ಮಂದಿ ಕೂಡಿ ಬಿಟ್ಟಹೋದ್ರ
ಅಯೋಧ್ಯಾಪೂರ ಕಾಡ ಸೇರಿ |
ಅವರಿಗೆ ಹದಿನಾಕ ಪಟ್ಟಾ ವನವಾಸ ಇತ್ತ ಮುಂಚೆ ಪೂರ್ವಿ |
ಹೆಂತಾ ಕಾಡೂಕಾಲ ಬತ್ತ ಅವರ ದೈವ ಕಡಿಮಿ ||
ದ್ರೋಣ ಕಾಂಡವನದ ಒಳಗ ದುಃಖದಲ್ಲಿ ಇದ್ದಾರವರು –
ಎದ್ದ ಹೋದರ ಹದ್ದ ಬಡದಂಗ ಭೂಮಿ |
ಬಾಳಾತ ಜುಲಮಿ ||
ಚೌಕ – ೧
||ನುಡಿ||
ಕಲ್ಲನಾರ ಮದಿಯನುಟ್ಟ ಹುಲ್ಲ ಹಾಂವ ಚೇಳಿನಾಗ ಜಲ್ಲ ಹತ್ತಿ ತಿರಗತಾರ ಬರಿಗಾಲ |
ಮದಿ ಹುರಿ ತೆಲಿಗೆ ಸುತ್ತಿದಾರ ಹಾಕಿ ಹೆಣೋಲ |
ಮದಿ ಚರಿ ಉಡದಾರ ಕಟ್ಟಿದಾರ ಋಷಿ ಡವಲಾ ||
ಮದಿ ಚರಿ ಹೊಸದ ಮೆಯ್ಯಾಗ ಅಂಗಿ ಮಾಡಿ ತೊಟ್ಟಾರವರು ಮಂದಿ
ಹೊರತಾರ ಅಂಗಿ ಅರಿಬಿಲ್ಲಾ |
ಹಿಡದಾರ ಬಾಣ ಬಿಲ್ಲಾ||೧||
ಮದಿ ಸೀರಿ ಉಟ್ಟಾಳ ಸೀತಾ ಮದಿ ಕುಸಬಾ ತೊಟ್ಟಾಳಾಕಿ ಮದಿಚರಿ
ಕಯ್ಯಾಗ ಕಟ್ಯಾಳ ಬಳಿಯ ಇಲ್ಲಾ |
ಕಟಗಿ ಗುಳದಾಳಿ ಕಟ್ಟಿದಾಳ ತನ್ನ ಎದಿಯ ಮ್ಯಾಲ |
ಕಿಂವ್ಯಾಗ ವಾಲಿಜೋಡ ಇಟ್ಟಾಳಾಕಿ ಹೊಸದ ಹುಲ್ಲಾ ||
ಮನಿ ಇಲ್ಲ ಮಾರ ಇಲ್ಲ ತೋಸಿಗೊಂಡ ಒಣಗಸತಾರ ಆರತಿಂಗಳದಿನಾ
ತಂಡಿ ಮಳಗಾಲಾ |
ಬ್ಯಾಸಿಗಿ ಬಿಸಲಾ||೨||
ಗಡ್ಡ ಗೆಣಸ ತಿಂದ ಅವರು ಗಿರಿಗುಡ್ಡವನದ ಒಳಗ ಗಿಡದ ಗಿಣ್ಣ
ತಿಂಬುತಾರ ಹಸಿಯ ತಪ್ಪಲಾ |
ಕಾರಿಬಾರಿಕಾಯಿ ಕವಳಿಕಾಯಿ ಹಣ್ಣ ಹಂಪಲಾ |
ಹುಲ್ಲ ಹುಣಚಿನಬೀಜ ತಿಂಬುತಾರ ಹೆಂತಾ ಕಾಲಾ ||
ಅನ್ನ ಅನ್ನು ಅಂತ ಕೂನ ಪುನಃ ಅವರು ಕಾಣಲಿಲ್ಲ ದಿನಾಹಾಕತಾರ
ಹೊತ್ತ ಮಾಡಿ ಮಜಲಾ |
ಹಿಂಗ ಅನುಗಾಲಾ||೩||
ಚೌಕ – ೨
||ನುಡಿ||
ರಾಮಚಂದ್ರ ಹೊಂಟನಿಂತ ರಾಣಿ ಬಿಟ್ಟ ಹೋಗತೀನ ನಾರಿ ನನ್ನ
ಮುಖ ನೋಡ ಹೊರಳಿ ತಿರಗಿ |
ನಾ ಬೆಟ್ಟಿ ಆಗುಹಂತಾ ಕಾಲ ಬಿತ್ತ ಬಿರಿಗಿ |
ನಾ ಹೋದ ಬಳಿಕ ಹುಚ್ಚ ಹತ್ತಿ ಬಾಳ ಮರಗಿ ||
ಲಕ್ಷ್ಮಣನ ಕಾವಲಿಟ್ಟ ನಿಷ್ಠುರ ಮಾತ ಹೇಳಿ ಹೋದ ಜೋಕಿ
ಮಾಡಕೊಂಡ ಇರೊ ಜಾನಕಿಗಿ |
ಬಾಳ ಇಟ್ಟ ನಂಬಿಗಿ||೧||
ಹಕ್ಕಿ ಬೆನ್ನ ಹತ್ತಿ ಹೋದ ಸಿಕ್ಕಿತಂತ ವನದ ಒಳಗ ಕೂಗತಾನ
ಬಾಗತಾನ ಹಾಕಿ ಗುದಮುರಗಿ |
ಅದು ಮಲುಮಾಡಿ ಎಳದ ಒಯ್ತ ದೂರ ಮರಿಗಿ |
ನಿತ್ತ ಬಾಣ ಹೊಡೆದ ಬಾಯಮಾಡಿ ಬಂದ ಸಿಟ್ಟಿಗಿ ||
ಕಪಟ ರೂಪದಿಂದ ಅದು ಕರಗಿ ಹೋತ ಲಂಕಾದಾಗ ರಾಮರಾಮ
ಅಂತ ಬಿದ್ದ ಬಾಳ ಮರುಗಿ |
ಗೊತ್ತ ಇಲ್ಲ ಯಾರಿಗಿ||೨||
||ಚಾಲ||
ಶಬ್ದಾತ ರಾಮನದನಿ-ಇಲ್ಲ ಅಂವ ಸನಿ-ಕೇಳಿದಾಳ ಸೀತಾ |
ಬಡಕೊಂಡ ಎದಿಗಿ ತಿಳವುsತಾ||೧||
ರಾಮನ್ನಹಕ್ಕಿ ಹೊಡದೀತ-ನನಗ ತಿಳದೀತ-ಸ್ಮರಣಿ ಮಾಡುsತ |
ಬಿಡತಾನ ಪ್ರಾಣ ನನ್ನ ಕಾಂತ||೨||
||ದುಯೇರಿ||
ಲಕ್ಷ್ಮಣ ಲಗು ಹೋಗಿನ್ನ | ಅವನ ಬೆನ್ನ ||
ಹ್ಯಾಂಗ ಬಿಟ್ಟ ನಿಂತ್ಯೊ ಆತನ್ನ | ನಿನ್ನ ಮನಾ ||
ಅವನಿನಗ ಮಾಡಿದಾನ ಏನ | ಹೇಳಕೂನಾ ||
||ಕೂ.ಪ.||
ಕಾಂತ ಮಡದ ಹೋದ ಬಳಿಕ ಸಂತೋಷ ಏನೊ ನಿನ್ನ ಮನಕ –
ನನ್ನ ಗುಡ ಇರಬೇಕಂತಿ ಜಲ್ಮಾ ಜಲ್ಮಿ |
ಹಿಂಗ ಏಸದಿನಾ ಭಾವಿಸತಿದ್ಯೊ ಬಾಳಧರ್ಮಿ |
ನಾ ಕೈವಶ ಆದೀನೇನೊ ನಿನಗ ಬಾಳ ಬಲಿಮಿ || ದ್ರೋಣಕಾಂಡ||೨||
ಚೌಕ – ೩
||ನುಡಿ||
ಸೀತಾನ ಮಾತ ಕೇಳಿದಾಗ ಸೋತ-ಬಾಣ ಬಡದಾಂಗಾತ
ಅಳತ ಬಿದ್ದ ಲಕ್ಷ್ಮಣ ಧರಣಿ ಮ್ಯಾಗ |
ಹೆಂತಾ ಕೆಟ್ಟ ಶಬ್ದ ಮಾತನಾಡಿದೆವ್ವ ನನಗ |
ನಾ ಸಿರಾ ಕೊಯ್ಕೋಳ್ಳೇನ ನಿನ್ನ ಮುಂದ ಈಗ ||
ಬಿಟ್ಟ ಹೋಗತೀನ ಇರ ಪ್ಪಷ್ಟ ಮಾರಿ ನೋಡೂದಿಲ್ಲ ಪೆಟ್ಟ
ಹಚ್ಚಿದೆವ್ವ ನನ್ನ ದೇಹದಾಗ |
ತಿಳಿಲಿಲ್ಲ ನಿನಗ||೧||
ಏಳು ಮಂಡಲ ಬರದ ಇಟ್ಟ-ಹೇಳಿಕೇಳಿ ಜಾನಕಿಗೆ-ಗಾಳಿಪರಿ
ಆಗಿಹೋದ ವನದ ಒಳಗ |
ರಾಮ ರಾಮ ಎಂಬು ಶಬ್ದ ಹಿಡಿದ ಬಾಯಿ ಒಳಗ |
ಲಕ್ಷ ಯೋಜನಕ ಹೋಗಿ ಕೂಡಿದಾನ ರಾಮಚಂದ್ರಗ |
ಹತ್ತ ತೆಲಿ ಭುಜಗಳು ಗುಪ್ತ ಮಾಡಿ ರಾವಣೇಶ್ವರ ಬಡವ ಆಗಿ ಬಳಲತಾನ ನಿತ್ತ ಹೊರಗ |
ದಯಾ ಮಾಡ ನನಗ||೨||
ಕಪಟ ರೂಪ ತಿಳೀದ ಸೀತಾ ಅಗಟಿನಿಂತ-ಕೇಳತಾಳ
ಬಗಟಿ ಏಳು ಮಂಡಲದಾಟಿ ಬರಲಿ ಇನ್ಯಾಂಗ |
ನಾ ನೀಡಬಾರದಂಬು ಬುದ್ಧಿ ಇಲ್ಲೊ ನಿನಗ ||
ನನ್ನ ಜೋಡಿನ ಪುರುಷರ ಹೋಗ್ಯಾರ ಇಲ್ಲೊ ಸನಿದಾಗ ||
ಹೇಳತಾನ ರಾವಣೇಶ್ವರ ಏಳು ಮಂಡಲದಾಟಿ ನೀಡಿದ ಕೋಟಿ ಅಯ್ತಿ ರಾಮ-ಲಕ್ಷ್ಮ
ಮಾಯಾ ಸೀತಾ ನಿನಗ||೩||
||ಚಾಲ||
ಇಷ್ಟ ಮಾತ ಕೇಳಿ ಖುಷಿಯಾಲ-ಏಳು ಮಂಡಲ-ದಾಟಿ ಬಂದ
ರಾವಣನ ಕೈಯಾಗ ಸಿಕ್ಕಾಳು||೧||
ಹತ್ತ ತೆಲಿಯ ತಗದ ಅರಭಾಟ-ನೋಡ್ಯಾಳ ಕಣ್ಮುಟ್ಟ-ಬೊಬ್ಬೆಹೊಡದ
ನೆಲ ಬಗಟಿ ಭೂಮ್ಯಾಗ ಹೊಗತಾಳು||೨||
||ದುಯೇರಿ||
ಅಯ್ಯೋ ಕಾಂತ ಹ್ವಾದ್ಯೊ ಯಾವಕಡಿ | ಘಾತ ಮಾಡಿ ||
ಬಡಕೊಂಡ ಎದಿಗೆ ಭೋರ್ಯಾಡಿ | ಹೊರಳ್ಯಾಡಿ ||
||ಕೂ.ಪ.||
ಅಬ್ಬರದಿಂದ ರಾವಣೇಶ್ವರ ಜಬರಮಾಡಿ ಜಾನಕಿನ ತೀವ್ರದಿಂದ
ರಥದಾಗ ಹಾಕ್ಯಾನ ಹೆಂತಾ ….
ಹೆಂತಾ ಮೂಗಾವುದ ರಥಾ ಹೋತ ಅವನ ಮಾತಾಮಿ |
ಅಲ್ಲಿ ಜಟಾ ಪಕ್ಷಿ ಗಂಟಬಿತ್ತ ನೋಡ ಬಾತಾಮಿ ||
ಚೌಕ – ೪
||ನುಡಿ||
ಪಕ್ಷಿ ಮಾತ ಪರಾಕ್ರಮಿ ಸಾಕ್ಷಿ ಮರಣ ಕೇಳಿ ಅಂವ ರಾಕ್ಷಿ ದೈವ
ರೆಕ್ಕಿಕಿತ್ತ ಮುರದ
ಅಲ್ಲಿ ಜಟಾಪಕ್ಷಿ ನೆಲಕ್ಕ ಬಿದ್ದ ಆದ ಹೈರಾಣಾ ||
ಕೇಶವಮಾರ್ಗದಿಂದ ರಥಾ ಹೊಡದ ನೋಡ ರಾವಣ ||
ಕಣ್ಣ ಮುಚ್ಚಿ ಬಿದ್ದ ಸೀತಾ ಹೆಣ್ಣ ಬಳಲತಾಳ ತನ್ನ ವಸ್ತ ಎಲ್ಲಾ ಒಗದ ಓದ
ಮುಂದ ಆತ ಕಠಿಣ||೧||
ಒಂದ ಸಮುದ್ರ ದಾಟಿ ಯುಗತ್ಕಾಂಡ ಲಂಕಾದಾಗ ಅಶೋಕ…
ಬನದ ಒಳಗ ಇಟ್ಟ…
ಕಾವಲ ಬಂದು ಬಸ್ತ ಹಿರದ ಕತ್ತಿ ಬಿಲ್ಲ ಬಾಣಾ |
ರಾಜಹಂಸ ಬಂದಿ ಹಾಕಿದಾಂಗ ಬಿತ್ತ ಕಠಿಣ ||
ರಾಮಚಂದ್ರ ಲಕ್ಷ್ಮಣ ತಿರಗಿ ಬಂದ ನೋಡತಾರ ಸೀತಾ ಇಲ್ಲ ಹಾರಿತ….
ಗುಡ್ಡ ಅಡವಿ ಆರ್ಯಾಣ||೨||
ಘಾತ ಆತ ಲಕ್ಷ್ಮಣ ಸೀತಾ ಇಲ್ಲ ಕುಟಿರ ಒಳಗ ರಾಮಚಂದ್ರ
ನೆಲಕಬಿದ್ದ ಆದೊ ಹೈರಾಣಾ |
ಅಯ್ಯೊ ಸೀತಾ ಸೀತಾ ಆಗಲೆಂದೊ ನನಗ ಮರಣ |
ಜೀವ ಹುಲ್ಲಸರಿ ಕಲ್ಲಪಡಿಗೆ ಹಾದ ನಾರಾಯಣ ||
ಲಕ್ಷ್ಮಣ ತೆಕ್ಕಿ ಹಾದ ಎದಿಗೆ ಅಮಚಿಕೊಂಡ ದುಃಖ ಧೈರ್ಯ ಹೇಳತಾನ
ಮಾತ ಕೇಳೊ ಅಣ್ಣಾ ||
ಆತ ನಿರ್ವಾಣಾ||೨||
||ಚಾಲ||
ವಾಲ್ಮೀಕಿ ಬರೆದ ರಾಮಾಯಣ-ಪೂರ್ವ ನಮ್ಮ ಪುಣ್ಯ-ಹಿಂಗ ಆಗೂದ |
ಇದು ನಮಗ ಎಂದಿಗೂ ತೆಪ್ಪದ||೧||
ದುಃಖನುಂಗ ಹೊಟ್ಯಾಗಿನ ಉರಿ-ಸೀತಾನ ಮರಿ-ಮುಂದ ಅಡ್ಡ ಬಿsದ್ದ |
ಹಣಿಹಚ್ಚಿ ಚರಣ ಹಿಡದಾ||೨||
ಕಣ್ಣೀರ ಒರಿಸಿ ಹಿಂಗ ಹೇಳಿ-ಮಾರಿ ಇನ್ನ ತೊಳಿ-ಧೈರ್ಯ ಹೇಳಿsದ |
ನಿನ್ನ ಸೇವಾ ಮಾಡತೀನ ಸದಾ||೩||
||ದುಯೇರಿ||
ಕವಿಯಲ್ಲ ಮದರಖಂಡಿ ಊರ | ಜಾಗೀರ ||
ಬಲಭೀಮಸೈನ ದೇವರ | ವಜ್ಜರ ||
ಹುಸೇನಸಾಬ ವಸ್ತಾದ ಶಾಹೀರ | ಗಂಭೀರ ||
||ಕೂ.ಪ.||
ಕವಿಯಲ್ಲ ಅಣ್ಣಾರಾಮ ಕಲಿದ ಒಳಗ ಬೇಡಿ ಬಂದ ಕವಿತಕ್ಕ ಸದ್ಗುರು ಆದವಲ್ಮಿ |
ಬರದ ಭಾಗವತ ಹರಿಲಿಲ್ಲ ಎಲ್ಲಾ ಬಲಿಮಿ |
ಈ ಪದ ಕೇಳಿದವರಿಗೆ ಅsತಿ ಬಾಳ ಪೋಲಿಮಿ | ದ್ರೋಣಕಾಂಡ||೪||
ರಚನೆ : ಹುಸೇನ ಸಾಬ ವಸ್ತಾದ
ಕೃತಿ : ಚಾಪ ಹಾಕತೀವಿ ಡಪ್ಪಿನ ಮ್ಯಾಲ
Leave A Comment