ಏಳುಕೊಳ್ಳದ ಎಲ್ಲಮ್ಮಾ ಮಾಯ ಕಾರ್ತಿ ಜಗದಂಬಾ || ಉಧೋ ಉಧೋ || ಪ ||
ಕೃತ ಯುಗದಿ ಅವತಾರ ತಾಳಿದಿ |
ಕಾಶ್ಮೀರ ಅರಸನ ಮಗಳಾದಿ |
ಜಮದಗ್ನಿ ಮುನಿ ಗಂಡನ್ನಾಗಿ ಪರಶುರಾಮನ್ಹಡದಿ || ಉಧೋ ಉಧೋ||೧||
ಕಾರ್ತಿವಿರ್ಯಾರ್ಜುನನ ಗರ್ವ ಮುರದಿ |
ಕೈರಟ್ಟಿಗೆ ಹಗ್ಗ ಹಚ್ಚಿಸಿದಿ |
ಸಿಡಿ ಮುಳ್ಳ ನಡು ಬೆನ್ನಾಗ ಚುಚ್ಚಿ ಸಿಡಿ ಹೊಡದಿ || ಉಧೋ ಉಧೋ||೨||
ಪಂಜ್ಹಿಡಿಸಿ ಮಾರಿ ಸುಡಸಿದಿ |
ಅಂಜಿ ಪಾದದ ಮೇಲೆ ಬಿತ್ತೂ ಮಂದಿ |
ಹಿಂಜರಿಯದೆ ಕಾಮಧೇನು ರಾಮನಿಂದ ತರಿಸಿದಿ || ಉಧೋ ಉಧೋ||೩||
ಸೊಕ್ಕಿನವರ ದಿಕ್ಕ ತಪ್ಪಿಸಿದಿ |
ಯಕ್ಕಯ್ಯ ಜೋಗಯ್ಯನ್ಹತ್ತರ ಹಿಡಿತಂದಿ |
ಕವಡಿ ಸರಾ ಹಾಕಿಸಿ ಬಂಡಾರ ಕೊಡಿಸಿ ತಿಂಡಿ ಕಳದಿ || ಉಧೋ ಉಧೋ||೪||
ಬೇವಿನ ಉಡಿಗಿ ಉಡಿಸಿ ಆಕ್ಷಣದಿ |
ಹಡ್ಡಲಗಿ ಕೈಯಾಗ ಕೊಡಿಸಿದಿ |
ಕನ್ನಡದೇವಿ ರೇಣುಕಾತಾಯಿ ಆದಿಶಕ್ತಿ ಉಧೋ ಉಧೋ ||೫||
ಹುಣ್ಣವಿ ಮಂಗಳವಾರ ಜಾತ್ರಿಗರದಿ |
ಕಣವಿ ಜೋಗಳ ಬಾವಿ ಜನ ಸಂದಿಗೊಂದಿ |
ಹಣ್ಣು ಕಾಯಿ ತರವೂರಂತ ಹುಲಕುಂದ ಭೀಮೇಶ ಅಂದ ||
ಉಧೋ ಉಧೋ ||೬||
ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು
Leave A Comment