ಜೋ ಜೋ ಜೋ ಬಾಲಾ ಹಣಮಂತ ಲೀಲಾ
ಪವನಂಜ ಭೂಪಾಲಾ ಆಂಜನೆಯ ಬಾಲಾ ||

ಶ್ರೀರಾಮನ ಶಿಷ್ಯನಾಗಿ ಸೀತಾದೇವಿ ಸೋದಕ್ಕಾಗಿ
ಲಗುಬಗಿಯಿಂದ ಲಂಕಾಕ್ಕ ಹೋಗಿ ಪತಿವ್ರತಿ ಪಾದಕ್ಕೆರಗಿ ||

ಅಂಜಲಿಲ್ಲ ರಾಕ್ಷಸರಿಗಿ ಲಂಕಾ ಸುಟ್ಟ ಬಂದಿ ತಿರುಗಿ
ಶ್ರೀರಾಮ ಸುಗ್ರೀವರಿಗಿ ಸುದ್ದಿ ಹೇಳಿ ಚರಣಕ್ಕೆರಗಿ ||

ದ್ವಾಪರ ಯುಗದಲ್ಲಿ ಶೀಲಾ ಎಂಬೊ ನದಿ ಮ್ಯಾಲಿ
ಸೋಲಲಿಲ್ಲ ಯುದ್ಧದಲಿ ಅರ್ಜುನನನ ಹಿಂಬಾಲಿ ||

ಬಾಲ ಬ್ರಹ್ಮಚಾರಿ ಪುರುಷಾ ಮಾನವರೆಲ್ಲಾ ಮಾಡ್ವರುದ್ಯಾಸಾ
ತಿಗಡೊಳ್ಳಿಯಲ್ಲಿ ನಿನ್ನವಾಸಾ ಮರಿಕಲ್ಲಗ ಆದಿಯೋ ಲೇಸಾ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು