೫
ರಾತ್ರಿಯ ತಮೋಲೋಕದಲ್ಲಿ ಚಂದ್ರೋದಯದಂತಹ ಸುಂದರವಾದ ಮತ್ತು ರೋಮಾಂಚಕಾರಿಯಾದ ಘಟನೆ ಮತ್ತೊಂದಿಲ್ಲ. ಚಂದ್ರ ಸೌಂದರ್ಯದ ಸಂಕೇತ. ಚಂದ್ರೋದಯವಾಯಿತೆಂದರೆ ಬೇರೊಂದು ಮೋಡಿ ನಮ್ಮನ್ನು ಬೆರಗುಗೊಳಿಸುತ್ತದೆ. ಕಾವ್ಯಲೋಕದಲ್ಲಿಯಾದರೋ ಚಂದ್ರೋದಯವಾದರೆ ಸೂಳೆಗೇರಿಯ ಬಾಗಿಲಿನ ಬೀಗ ತೆಗೆದಂತೆ! ‘ಕಾಮರಾಗ ರಸಮಂ ನೆಲೆವೆರ್ಚಿಸುವ ಚಂದ್ರಾತಪ’ ಎಲ್ಲ ಕಾವ್ಯದಲ್ಲೂ. ಹೀಗೆ ಬೆಳುದಿಂಗಳು ಕವಿದಾಗ ‘ಕವಿದತ್ತು ವಿಲಾಸಿನೀಜನಂ.‘ ‘ಅಂಗನೆಯರ ಅನಂಗ ಚೇಷ್ಟೆಗೆ ಬೆಳುದಿಂಗಳು ಧೂಪವೆರಚುತ್ತದೆ.
“ಇಂತಾದ ಚಂದ್ರೋದಯಮಂ ಕಂಡು ಭೋಗ ಸಹಾಯಕರಪ್ಪ ನಾಗರಿಕ ವಿಟವಿದೂಷಕ ಪೀಠಮರ್ದಕರ್ ಭರಂ ಪರಿತಂದು…. ದೇವಾ, ಇಂದಿನ ದಿನಂ ಬೆಳತಿಗೆಗೆ ಬೆಳದಿಂಗಳೊಳ್ ಪುರವೀಧಿಯ ವಿಲಾಸಮಂ ಕೆಯ್ಮಿಕ್ಕು ನೋಡಿ ರಾತ್ರೀ ವಿಹಾರಮಂ ಮಾಡಲ್ವೇಳ್ಪುದು” – (ಗಿರಿಜಾ ಕಲ್ಯಾಣ : ಹರಿಹರ) ಎಂದು ಬಿನ್ನವಿಸುತ್ತಾರೆ. ಸರಿ; ಮಹಾರಾಜನು ಇಂತಹ ಅವಕಾಶವನ್ನು ಕಳೆದುಕೊಳ್ಳಲು ಒಪ್ಪದೆ ತಕ್ಷಣ ನಗರ ಸಂಚಾರಕ್ಕೆ ಹೊರಡುತ್ತಾನೆ, – “ದರಿದ್ರ ವಿಟ ವೇಶ್ಯಾಲಾಪಂಗಳುಮನಲ್ಲಲ್ಲಿಗೆ ನಿಂದು ಕೇಳುತ್ತಂ, ಉಚಿತಾನುಚಿತ ಚೇಷ್ಟೆಗಳುಮಂ ಪ್ರಚ್ಛನ್ನದಿಂ ನೋಡುತ್ತುಂ” (ಲೀಲಾವತಿ : ನೇಮಿಚಂದ್ರ). ಈ ವಿಹಾರದಲ್ಲಿ ಊರಿನ ವಿಟವಿಟೀಜನರ, ವೇಶ್ಯೆಯರ ಪ್ರಣಯ ಸಲ್ಲಾಪ ವಿದೂಷಕ ಮಹಾಶಯನ ವ್ಯಾಖ್ಯಾನದ ಸಮೇತ ನಮ್ಮ ಕಿವಿಗೆ ಬೀಳುತ್ತದೆ. ‘ಶೃಂಗಾರಮೆ ರಸಂ’ ಎನ್ನುವುದು ಸರಿ ಎನ್ನಿಸುತ್ತದೆ – ಈ ಬೆಳುದಿಂಗಳಲ್ಲಿ. ಕವಿಯ ಸ್ಫೂರ್ತಿ ಕಡಿವಾಣವನ್ನು ಕಿತ್ತೆಸೆದ ತುಂಟ ಕುದುರೆಯಂತೆ ಸೂಳೆಗೇರಿಯಲ್ಲಿ ಅಲೆಯುತ್ತದೆ!
ಇದು ಸಾಮಾನ್ಯವಾಗಿ ಚಂದ್ರೋದಯದ ಸೌಂದರ್ಯ ಹಿಂದಿನ ಕವಿಗಳ ಕಾವ್ಯದಲ್ಲಿ. ಚಂದ್ರಿಕಾ ವಿಹಾರವಿಲ್ಲದ ಕಾವ್ಯ ಎಂತಹ ಕಾವ್ಯ! ಈ ಸಂಪ್ರದಾಯವನ್ನು ಹರಿಹರನಂತಹ ಸ್ವತಂತ್ರ ಮನೋಧರ್ಮದ ಕವಿಯೂ ಪಾಲಿಸಲು ಹೋಗಿ ‘ಗಿರಿಜಾ ಕಲ್ಯಾಣ’ದಲ್ಲಿ ಗಿರಿ ರಾಜನೊಂದಿಗೆ ನಾರದನನ್ನೂ ಅಲೆಸಿದ್ದಾನೆ ಸೂಳೇಗೇರಿಯ ಬೀದಿ ಬೀದಿಗಳಲ್ಲಿ. ಪಾಪ! ನಾರದನಿಗೂ ಯಾವುದೋ ಪೂರ್ವ ಜನ್ಮದ ಕರ್ಮದ ಫಲವಾಗಿ ಹರಿಹರನ ಕಾವ್ಯದಲ್ಲಿ ಈ ಅವಸ್ಥೆ ಒದಗಿದೆ. ಆದರೆ ಚಂದ್ರೋದಯದ ಸೌಂದರ್ಯವನ್ನು, ಬೆಳುದಿಂಗಳ ಶಾಂತ ಭವ್ಯತೆಯನ್ನು ಹಲವರು ಬಣ್ಣಿಸಿದ್ದಾರೆ. ಮತ್ತೆ ನಿಜವಾದ ಸೌಂದರ್ಯಕ್ಕೆ ನಾವು ಪಂಪನಲ್ಲಿಗೇ ಹೋಗಬೇಕು. ಪಂಪನ ಕಣ್ಣಿಗೆ ಚಂದ್ರ ಸಿಂಹದಂತೆ ತೋರುತ್ತಾನೆ-
ಬಳೆದ ತಮೋ ಮದೇಭಘಟೆಯೊಡ್ಡೊಡೆವನ್ನೆಗಂ
ಉನ್ನತ ಉದಯಾಚಳಗುಹೆಯಿಂ ಲಸತ್ಕಿರಣ ಕೇಸರಮಂ ಪರಪುತ್ತುಂ
ಆಗಳ್ ಅಗುಳಿಸುವ ಬಾಯಕೆಂಪನ್ ಉದಯಂಗೆಯೆ ಪೊಣ್ಮುವ ಕೆಂಪು ಪೋಲ್ವಿನಂ
ತಳರೆ ಬೆಡಂಗಿನೊಳ್ ಪುದಿದುದು ಎೞುರಮ್ ಉದ್ಗತ ಚಂದ್ರಸಿಂಹದಾ
(ಆದಿಪುರಾಣ. ೧೨-೫)
ಇದೊಂದು ಅಪೂರ್ವ ಕಲ್ಪನಾಮಯ ಸೌಂದರ್ಯ. ತಮೋ ಮದೇಭಗಳ ಕುಂಭಸ್ಥಳವನ್ನು ಒಡೆಯುತ್ತಾ ಕಿರಣ ಕೇಸರವನ್ನು ಕೆದರುತ್ತಾ ಕೆಂಪಾದ, ಬಾಯಿಂದ ಆಗುಳಿಸುತ್ತಾ ಉನ್ನತ ಉದಯಾಚಲ ಶಿಖರದಿಂದ ಬರುವ ಸಿಂಹದಂತೆ ಅಗುರ್ವಾಗಿ ತೋರುತ್ತದೆ – ಆಗತಾನೇ ಮೂಡಿದ ಚಂದ್ರನ ಆರಕ್ತವಾದ ಬಿಂಬ. ಈ ಪದ್ಯ ಸಂಸ್ಕೃತ ಕವಿ ಬಾಣನದಾದರೂ ಕನ್ನಡಕ್ಕೆ ಈ ಚಿತ್ರವನ್ನು ಪಂಪನು ತಂದಿರುವ ಕ್ರಮ ಶ್ಲಾಘನೀಯವಾದುದು. ಪಂಪನದೇ ಆದ ಈ ಪದ್ಯವನ್ನು ನೋಡಿ :
ಅದೊಂದಿನಿಸು ಬೇಗದಿಂ ನವಜಪಾ ಪ್ರಸೂನಾಭಮಾಯ್ತು
ಅದೊಂದಿನಿಸು ಬೇಗದಿಂ ಕನಕ ಕುಂಭದಂತಾಯ್ತು
ಮತ್ತದೊಂದಿನಿಸು ಬೇಗದಿಂ ಮೃದುಮೃಣಾಳ ಸಂಕಾಶಮಾಯ್ತು
ಅದೇಂ ಬೞಿಕೆ ಬಿಂಬದುಜ್ಜಳಿಕೆಯೋ ಸುಧಾಸೂತಿಯಾ
(ಆದಿಪುರಾಣ ೧೨-೪೭)
ಇಲ್ಲಿ ಕವಿಯ ಕಣ್ಣು ವಸ್ತುಸೌಂದರ್ಯವನ್ನು ಕ್ಷಣಕ್ಷಣದಲ್ಲೂ ತೀವ್ರ ಆಸಕ್ತಿಯಿಂದ ಸಂಭ್ರಮದಿಂದ ಸೋಜಿಗದಿಂದ ವರ್ಣಿಸುತ್ತಿದೆ. ಈ ಸಂಭ್ರಮ, ಸೋಜಿಗ ‘ಅದೊಂದಿನಿಸು ಬೇಗದಿಂ’ ಎಂಬ ಮಾತಿನಲ್ಲಿ ವ್ಯಕ್ತವಾಗುತ್ತದೆ. ಕವಿಯ ಮನಸ್ಸು ಚಂದ್ರೋದಯ ಸೌಂದರ್ಯವನ್ನು ‘ತಟಸ್ಥ ತಲ್ಲೀನತೆ’ಯಲ್ಲಿ ಅನುಭವಿಸಿ ಹೆಜ್ಜೆ ಹೆಜ್ಜೆಗೂ ಮೂಡುವ ಚಂದ್ರನಲ್ಲಾಗುವ ಪರಿವರ್ತನೆಯನ್ನು ಅತ್ಯಂತ ಸಹಜವಾಗಿ, ಸುಂದರವಾಗಿ ಚಿತ್ರಿಸುತ್ತದೆ. ಅದೆಷ್ಟು ಬೇಗ ಚಂದ್ರನು ಹೊಸ ಜಪಾಕುಸುಮಗಳ ಕಾಂತಿಯನ್ನು ಪಡೆದಿದ್ದಾನೆ. ಅದೆಷ್ಟುಬೇಗ ಚಂದ್ರನು ಮೆಲ್ಲಮೆಲ್ಲನೆ ಎದ್ದು ಚಿನ್ನದ ಕುಂಭದಂತಾಗಿದ್ದಾನೆ. ಮತ್ತೆ ಅದೆಷ್ಟು ಬೇಗ ಚಂದ್ರನು ಸಂಪೂರ್ಣವಾಗಿ ಅರಳಿದ ಕೋಮಲವಾದ ಕಮಲದ ಚೆಲುವನ್ನು ಪಡೆದಿದ್ದಾನೆ! ಆಹಾ! ಈಗ ಚಂದ್ರನೆಷ್ಟು ಉಜ್ವಲನಾಗುತ್ತಿದ್ದಾನೆ! ಎಂದು ಪಂಪನು ಸೌಂದರ್ಯಾನಂದದಿಂದ ಉದ್ಗಾರವೆತ್ತುತ್ತಿದ್ದಾನೆ ಇಲ್ಲಿ. ಆದರೆ ಜನ್ನನು ಅನಂತನಾಥ ಪುರಾಣದಲ್ಲಿ ಇದೇ ದೃಶ್ಯವನ್ನು ಬೇರೊಂದುರೀತಿಯಲ್ಲಿ ವರ್ಣಿಸಿರುವುದನ್ನು ಗಮನಿಸಬಹುದು :
ಉದಯೋರ್ವೀಧರ ಕುಂಕುಮೋದ್ಗಮರಜಂ ಪಾಯ್ವಂತೆ ಕೆಂಪೇೞಿ
ಪೂರ್ವದಿಶಾಕನ್ಯೆಯ ತೋಳೊಳಿರ್ದರಿಸಿನಂ ತಳ್ತಂತೆ ಪೊಂಬಣ್ಣ ವೇಱಿ
ದಿವೌಕೌಘ ಪ್ಲವದೊಳ್ ಮುೞುಂಗಿ ತೊಳೆದೇೞ್ವಂತೆ ಬೆಳ್ಪೇಱ
ತತ್ವ ದೃಢಾಭ್ಯಾಸಿಯ ಚಿತ್ತದಂತೆ ತಿಳಿದಂ ತಾರಾ ಮನೋವಲ್ಲಭಂ
(ಅನಂತನಾಥ ಪುರಾಣಂ ೭-೮೨)
ಇಲ್ಲಿಯೂ ಕ್ರಮ ಕ್ರಮವಾಗಿ ಕೆಂಪು, ಹಳದಿ, ಬಿಳುಪು, ಉಜ್ವಲತೆ ಇವುಗಳನ್ನು ಕವಿ ತನ್ನ ಕಲ್ಪನೆಯ ಮೂಲಕ ಚಿತ್ರಿಸಿದ್ದರೂ ಚಂದ್ರೋದಯದ ಸಹಜಾನುಭವವಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಚಂದ್ರನು ‘ತತ್ವ ದೃಢಾಭ್ಯಾಸಿಯ ಚಿತ್ತದಂತೆ ತಿಳಿದಂ’ ಎನ್ನುವುದನ್ನು ರಾಗಪೂರ್ಣನಾದ ವ್ಯಕ್ತಿ ಕ್ರಮ ಕ್ರಮವಾಗಿ ತನ್ನ ಸಾಧನೆಯಿಂದ ಚಿತ್ತಶುದ್ಧಿಯನ್ಸು ಸಾಧಿಸಿದ ಯೋಗಿಯಂತಾದ ಚಿತ್ರವನ್ನು ಕವಿ ನಮಗೆ ಚಂದ್ರೋದಯ ವರ್ಣನೆಯ ನೆಪದಲ್ಲಿ ಚಿತ್ರಿಸಿ ಮನಸ್ಸನ್ನು ಪ್ರಸನ್ನಗೊಳಿಸುತ್ತಾನೆ. ಶೃಂಗಾರ ಕವಿಯಾದ ನೇಮಿಚಂದ್ರನಂತೂ,
“…….ಕಾಲಮೆಂಬ ಶಂ
ಭುವಿನ ಶರೀರದೊಳ್ ಪುದಿದ ಗೌರಿಗೆ ರಾಗಮನೊಟ್ಟಿಕೊಂಡು ಮೂ
ಡುವ ಮೊಲೆಯಂತೆ ಮೂಡಿದುದು ಮೂಡಣದಿಕ್ಕಿನೊಳಿಂದುಮಂಡಲಂ”
(ಲೀಲಾವತಿ ೨-೩)
ಎಂದು ವರ್ಣಿಸುತ್ತಾನೆ. ತಿರುಮಲಾರ್ಯ ಮೂಡುವ ಚಂದ್ರನನ್ನು – “….ಇದೆ ಉರಿಗೊಂಡು ಪೊಣ್ಮುವ ಫಿರಂಗಿಯ ಗುಂಡೆನೆ ಚಂದ್ರಮಂಡಲಂ (ಚಿಕ್ಕದೇವರಾಜ ವಿಜಯ ೬-೧೭) ಎಂದು ವರ್ಣಿಸುವ ರೀತಿ ನವೀನವಾಗಿದೆ. ಚಂದ್ರನ ಕಿರಣಗಳಿಂದ ಭುವಿಯೆಲ್ಲ ಬೆಳಗಾಯಿತು ಎಂಬ ಅನುಭವವನ್ನು ಕವಿಕಲ್ಪನೆ ತುಂಬ ಚಮತ್ಕಾರವಾಗಿ ಬಣ್ಣಿಸಿದೆ, ‘ಮಲ್ಲಿನಾಥ ಪುರಾಣದಲ್ಲಿ’ –
ಪುಗಿಸಿದುವು ಅಟ್ಟಿ ಪರ್ವತಗುಹಾಂತರಮಂ ಕೆಲವಂ,
ಗವಾಕ್ಷದಿಂದುಗಿದುವು ದೇವಸದ್ಮದೊಳ್ ಅಡಂಗಿದುವಂ,
ಬಯಲಿಂಗೆ ಬಿೞ್ದುವಂ ತಗುಳ್ದು ಅರೆಯಟ್ಟಿ ನುಂಗಿದುವು,
ಪೆರ್ಮರದೊಳ್ ಸೆಱಗೆಯ್ದು ಪರ್ಣಸಂಧಿಗಳೆಡೆಯಿಂದಲ್ ಇಟ್ಟು ಒರೆಸಿ
ಕೊಂದುವು ಕಳ್ತಲೆಯಂ ಹಿಮಾಂಶುಗಳ್
(ಮಲ್ಲಿನಾಥ ಪುರಾಣ : ೭-೩೯)
ನಾಗಚಂದ್ರನ ಸುಕುಮಾರಶೈಲಿಗೆ ವಿವರಣೆ ಅನಗತ್ಯ. ಕೋಮಲವಾದ ಚಂದ್ರನ ಕಿರಣಗಳು ಕತ್ತಲೆಯನ್ನು ಹೇಗೆ ಹೇಗೆ ಕೊಂದುವು ಎನ್ನುವ ಸಾಹಸವನ್ನು ಕವಿಯ ಕಲ್ಪನೆ ಮಾತ್ರ ಕಾಣಬಲ್ಲದು. ಬೆಳುದಿಂಗಳಿನ ಮೋಡಿಯನ್ನೂ, ವೈವಿಧ್ಯತೆಯನ್ನೂ ನೋಡಬೇಕಾದರೆ ನಾಗವರ್ಮನ ಕಾದಂಬರೀ ಕಾವ್ಯಲೋಕಕ್ಕೆ ಪ್ರವೇಶಿಸಬೇಕು. ಅಲ್ಲಂತೂ ಎಲ್ಲಾ ಘಟನೆಗಳೂ ಬೆಳದಿಂಗಳ ನೂಲಿನಿಂದ ಹೆಣೆದಂತಿವೆ. ಚಂದ್ರನೇ ಕಾವ್ಯ ನಾಯಕನಾಗಿರುವುದರಿಂದ ಇಡೀ ಕಾವ್ಯವೇ ಬೆಳುದಿಂಗಳಿನಲ್ಲಿ ಕಡೆದ ಭವ್ಯ ಶಿಲ್ಪದಂತಿದೆ. ಬೆಳುದಿಂಗಳ ಸಂಪತ್ತನ್ನು ಕುರಿತು ಕವಿ ಒಂದೆಡೆ ಮಾಡಿರುವ ವರ್ಣನೆಯನ್ನು ನೋಡಿ –
ಜಗಮಿದು ಮೌಕ್ತಿಕದಿಂದಂ ತೆಗೆದುದೋ,
ದಂತದೊಳೆ ಸಮೆದುದೋ,
ಪಾಲ್ಗಡಲಿಂದೊಗೆದುದೋ,
ಪೇಳೆಂಬಿನಂ ಸೊಗಯಿಸಿದುದು ಸಾಂದ್ರ ಚಂದ್ರಿಕಾ ವಿಸ್ತಾರಂ.
(ಕಾದಂಬರಿ ಸಂಗ್ರಹ ೧-೫೭)
ನಾಗವರ್ಮನ ಕಾವ್ಯದಲ್ಲಿ ಕಾಣುವ ಬೆಳದಿಂಗಳೂ ಮಹಾಶ್ವೇತೆಯ ತಪಸ್ಸಿನಿಂದ ಸಾತ್ವಿಕಾತಿಶಯವನ್ನು ಪಡೆದುದು. ಸಾಮಾನ್ಯವಾಗಿ ಬೆಳುದಿಂಗಳು ಎಲ್ಲಾ ಕಾವ್ಯದಲ್ಲೂ ಶೃಂಗಾರ ರಂಗವನ್ನೇ ತೆರೆಯುವ ಕಾರ್ಯಕ್ಕೆ ನಿಯೋಜಿತವಾಗಿದೆ. ‘ಶೃಂಗಾರ ಕಾರಾಗೃಹನಾದ ನೇಮಿಚಂದ್ರನ ‘ಲೀಲಾವತಿ’ಯಲ್ಲಿ ಬೆಳದಿಂಗಳು ಶೃಂಗಾರಸಾಗರವಾಗಿದೆ.
ಎಲೆ ಶೃಂಗಾರಾರ್ಣವಂ ಸಗ್ಗದಿನಿಳಿದುದು ಅತಿಶ್ವೇತಮೆಂಬನ್ನೆಗಂ
ಕೞ್ತಲೆಯಂ ಬೆಂಕೊಳ್ವವೊಲ್ ಎಣ್ದೆಸೆಯನನಿತುಮಂ
ಬೇಱವೇಱಲ್ಲ ತಾರಾವಲಿಯಂ ತೞ ಸುವಂತೆ ಆಗಸಮನನಿತುಮಂ
ಪರ್ವಿದತ್ತೊರ್ಮೊದಲ್ ನೆಯ್ದಿಲನೆಲ್ಲಂ ಚುಂಬಿಪಂತು
ಉರ್ವರೆಯನನಿತುಮಂ ಚಂದ್ರಪಾದ ಪ್ರವಾಹಂ
(ಲೀಲಾವತಿ ೨-೧೪)
ಅತಿಶ್ವೇತವಾದ ಆ ಶೃಂಗಾರ ಸಾಗರ ಸಗ್ಗದಿಂದ ಇಳಿದು, ಅಷ್ಟದಿಕ್ಕುಗಳನ್ನು ಬೇರೆ ಬೇರೆಯಾದ ಎಲ್ಲ ತಾರಾವಳಿಗಳನ್ನೂ ತಬ್ಬುತ್ತಾ ಆಕಾಶವೆಲ್ಲವನ್ನೂ ವ್ಯಾಪಿಸಿ ನೈದಿಲೆಯನ್ನು ಚುಂಬಿಸುತ್ತಾ ಉರ್ವರೆಯನ್ನೆಲ್ಲಾ ವ್ಯಾಪಿಸಿದೆ – ಎಂಬ ವರ್ಣನೆಯಲ್ಲಿ ಕವಿ ಶೃಂಗಾರದ ವರ್ಣನೆಗೆ ಬೆಳುದಿಂಗಳನ್ನು ಇಳಿಸಿದ್ದಾನೆ. ಇರುಳಿನಲ್ಲಿ ಹೀಗೆ ತುಂಬಿದ ಬೆಳುದಿಂಗಳನ್ನು ನೋಡಿ ರನ್ನನ ಮನಸ್ಸಿನಲ್ಲಿ ಒಂದು ವಿಚಿತ್ರವಾದ ಭಾವನೆ ಸ್ಫುರಿಸುತ್ತದೆ. ಕವಿ ಅದನ್ನು ತನ್ನ ಅಜಿತನಾಥಪುರಾಣದಲ್ಲಿ ಹೀಗೆ ಚಿತ್ರಿಸಿದ್ದಾನೆ:
ಬೆಲಗಸೆ ತೀವಿಕೊಂಡು ಕುಡಿಯಲ್
ಮೊಗೆಯಲ್ ಕೊಡಗೊಂಡು
ತಿರ್ದಿ ಬಚ್ಚಲನೆಲೆ ತೋಟದೊಳ್ ಪರಿಯಿಸಲ್
ಪಱುಗೋಲ್ಗಳನಿಕ್ಕಿ ಪಾಯಿಸಲ್
ನೆಲೆಯಿನಿತೆಂದು ನೋಡಲ್ ಒಳಪೊಕ್ಕು ದುಡುಮ್ಮಿೞಿದಾಡಲ್ ಈಸಲ್
ಅಗ್ಗಲಿಸುವ ಅಲಂಪಿನಿಂದ ಎಳಸಿದರ್
ಘನ ಚಂದ್ರಿಕೆಯಂ ಲತಾಂಗಿಯರ್
(ಅಜಿತನಾಥ ಪುರಾಣ ೬-೪೫)
ಬೆಳುದಿಂಗಳನ್ನು ಬೊಗಸೆಯಲ್ಲಿ ತುಂಬಿಕೊಂಡು ಕುಡಿಯಬಹುದು; ಕೊಡದಲ್ಲಿ ತುಂಬಿಕೊಳ್ಳಬಹುದು. ಕಾಲುವೆಗಳ ಮೂಲಕ ತೋಟಕ್ಕೆ ಹಾಯಿಸಬಹುದು; ಹರಿಗೋಲನ್ನು ಹಾಕಿ ದಾಟಬಹುದು; ಆಳ ಬೇಕಾದಷ್ಟಿರುವುದರಿಂದ ಧುಢುಂ ಎಂದು ಧುಮುಕಿ ಈಜಾಡಬಹುದು – ಎನ್ನಿಸಿತಂತೆ ಅರಮನೆಯ ಲತಾಂಗಿಯರಿಗೆ ! ಬೆಳುದಿಂಗಳನ್ನು ಕಂಡು ಕವಿ ಎಂತಹ ಉನ್ಮಾದದಲ್ಲಿದ್ದಾನೆ. ಈ ಉನ್ಮಾದವೇ ಇಲ್ಲಿ ಇಷ್ಟು ಸುಂದರವಾಗಿರುವುದು. ಕವಿಗಲ್ಲದೆ ಇನ್ನಾರಿಗೆ ಹೊಳೆದೀತು ಈ ಕಲ್ಪನೆ. ಆದರೆ ಲೋಕದಲ್ಲಿ ಯಾವುದು ಕೇವಲ ಔಪಯೋಗಿಕ ದೃಷ್ಟಿಯೋ, ಯಾವ ಈ ದೃಷ್ಟಿ ಸೌಂದರ್ಯಾನುಭವಕ್ಕೆ ಸಹಾಯಕವಲ್ಲವೋ ಅದೇ ದೃಷ್ಟಿಯನ್ನು ರನ್ನ ಇಲ್ಲಿ ಅನ್ವಯಿಸಿ ಎಂತಹ ಚೆಲುವನ್ನು ಬೆರಗನ್ನು ತೆರೆದಿದ್ದಾನೆ! ಹರಿವ ಹೊಳೆಯೊಂದನ್ನು ನೋಡಿ ಬೊಗಸೆಯಲ್ಲಿ ಕುಡಿಯಬಹುದು, ತೋಟಕ್ಕೆ ಹಾಯಿಸಬಹುದು, ಹರಿಗೋಲಿನಿಂದ ದಾಟಬಹುದು, ಈಸಾಡಬಹುದು – ಎಂದರೆ ಅದು ಕಾವ್ಯವಾಗುವುದಿಲ್ಲ; ವರದಿಯಾಗುತ್ತದೆ. ಅಲ್ಲಿ ಸದ್ಯಃಪ್ರಯೋಜನದ ದೃಷ್ಟಿ ಹೊರತು ಸೌಂದರ್ಯ ದೃಷ್ಟಿ ಕಾಣದು. ಆದರೆ ಅದೇ ಭಾವವನ್ನು ಕವಿ ಬೆಳುದಿಂಗಳನ್ನು ಕುರಿತು ಹೇಳಿದಾಗ ನಿಜವಾಗಿಯೂ ಅದು ಕಾವ್ಯವಾಗಿದೆ; ಸೌಂದರ್ಯವಾಗಿದೆ. ಇದು ಕಲ್ಪನಾ ಸೌಂದರ್ಯದ ಮೋಡಿ! ಆದರೆ ಭಕ್ತ ಕವಿಯಾದ ಹರಿಹರನಿಗೆ ಬೆಳುದಿಂಗಳಿನಲ್ಲಿ ಕಾಣುವುದು ಶೃಂಗಾರವೂ ಅಲ್ಲ; ಇಂತಹ ಸುಖಪ್ರದ ಭಾವನೆಯೂ ಅಲ್ಲ. ಅವನ ಕಣ್ಣಿಗೆ ಕಾಣುವುದು ಶಿವನ ಮಹೋನ್ನತಿ
ಹರನ್ ಉದ್ಧೂಳಿಸಿದ ಅತ್ಯನೂನ ಭಸಿತ ಪ್ರದ್ಯೋತಮೋ
ಚಂದ್ರಶೇಖರನ ಆನಂದಾಟ್ಟಹಾಸ ರುಚಿಯೋ
ಸರ್ವೇಶ ಸತ್ಕೀರ್ತಿಯೋ
ಪರಮೋತ್ತುಂಗ ಮರುನ್ನದೀ ಪ್ರಬಳ ಗೌರಚ್ಛಾಯೆ
ಭೂಭಾಗದೊಳ್ ಪರಿದತ್ತೋ
ಎನೆ ಪರ್ವಿತುರ್ವಿಯನ್ ಆಗುರ್ವಿಂ ಸಾಂದ್ರ ಚಂದ್ರಾತಪಮ್
(ಗಿರಿಜಾ ಕಲ್ಯಾಣ ೪-೧೦೭)
೬
ಪ್ರತಿಯೊಂದು ಋತುವಿನ ಸೊಗಸನ್ನು ವರ್ಣಿಸುವುದರಲ್ಲಿ ಪ್ರಾಚೀನ ಕವಿಗಳು ತಳೆದಿರುವ ಆಸಕ್ತಿ ಆಶ್ಚರ್ಯಕರವಾದುದು. ಪ್ರತಿಯೊಬ್ಬ ಕವಿಯೂ ಸಾಂಪ್ರದಾಯಿಕವಾಗಿ ಋತುವರ್ಣನೆ ಮಾಡಿದರೂ ಕೆಲವರು ದೊಡ್ಡ ಕವಿಗಳು ಪ್ರತಿಯೊಂದು ಋತುಗಳ ಪರಿವರ್ತನೆಯನ್ನೂ, ಆದರ ಸೊಗಸನ್ನೂ ಕಂಡಿದ್ದಾರೆ, ಅನುಭವಿಸಿದ್ದಾರೆ ಎನ್ನುವ ವಿಚಾರದಲ್ಲಿ ಅನುಮಾನವಿಲ್ಲ.
ಋತುಗಳಲ್ಲೆಲ್ಲಾ ಕವಿಜನ ಹೃದಯಾಕರ್ಷಕವಾದುದು ವಸಂತ. ವಸಂತ ಋತುವು ಮಧುನೃಪನೆಂದೂ, ಅಳಿಗಿಳಿ ಕೋಗಿಲೆಗಳು ಅವನ ಸ್ತುತಿಪಾಠಕರೆಂದೂ, ಮಾವು ಮಲ್ಲಿಗೆ ಬೆಳುದಿಂಗಳು ಅವನ ಪರಿವಾರವೆಂದೂ ವ್ಯಕ್ತೀಕರಿಸಿರುವುದು (personification) ಸೊಗಸಾಗಿದ್ದರೂ, ಎಲ್ಲ ಕವಿಗಳು ಹೇಳಿದ್ದನ್ನೇ ಹೇಳಿರುವುದು ಕೊಂಚ ಬೇಸರ ತರುತ್ತದೆ. ಒಂದು ಮಾವಿನ ಮರಕ್ಕೆ ಮಲ್ಲಿಗೆ ಬಳ್ಳಿಯನ್ನು ಹಬ್ಬಿಸಿ ಅದರಲ್ಲೊಂದು ಕೋಗಿಲೆಯನ್ನು ಕೂಗಿಸಿದರೆ ವಸಂತ ಬಂದಂತೆಯೇ ! ಪಂಪನಂತಹ ಕವಿ ಆ ವಸಂತದ ರಮ್ಯತೆಯನ್ನು ಉಜ್ವಲವಾಗಿ ವರ್ಣಿಸುತ್ತಾನೆ. ಉಳಿದವರು ಅದರ ಯಾವುದೋ ಒಂದು ಅಂಶವನ್ನು ಕಾಣಿಸುತ್ತಾರೆ. ವಸಂತ ಮಾಸದಲ್ಲಿ ಮಾವಿನ ಮರಕ್ಕೆ ಮುಖ್ಯಮಂತ್ರಿ ಪದವಿ ಕಾವ್ಯಸಾಮ್ರಾಜ್ಯದಲ್ಲಿ. ಮಾವಿನ ಮರವನ್ನು ಬಗೆಬಗೆಯಾಗಿ ವರ್ಣಿಸದ ಕವಿಯೇ ಇಲ್ಲ. ಪಂಪನಿಗಂತೂ ಮಾವಿನ ಮರವನ್ನು ಕಂಡರೆ ಹುಚ್ಚು. ಆದಿಪುರಾಣದಲ್ಲಿ ಕವಿ ಭರತನ ಅಂತಃಪುರದ ಸ್ತ್ರೀ ಜನರ ಮೂಲಕ ಮಾವಿನ ಮರದ ವಿಜಯ ಪ್ರಶಸ್ತಿಯನ್ನು ಹೀಗೆ ಬರೆಯಿಸಿದ್ದಾನೆ-
ತಳಿರೊಳ್ ನೀನೆ ಬೆಡಂಗನಯ್, ನನೆಗಳೊಳ್ ನೀಂ ನೀಱನೈ
ಪುಷ್ಪ ಸಂಕುಳದೊಳ್ ನೀನೆ ವಿಲಾಸಿಯೈ
ಮಿಡಿಗಳೊಳ್ ನೀ ಚೆಲ್ವನೈ
ಪಣ್ತ ಪಣ್ಗಳಿನೋವೋ ಪೆಱತೇನೂ ನೀನೆ ಭುವನಕ್ಕಾರಾಧ್ಯನೈ
ಭೃಂಗಕೋಕಿಳ ಕೀರ ಪ್ರಿಯ ಚೂತರಾಜ
ತರುಗಳ್ ನಿನ್ನಂತೆ ಚೆನ್ನಂಗಳೇ….
(ಆದಿಪುರಾಣ ೧೧-೯)
ಇಲ್ಲಿ ಕಾಣುವುದು ವಸ್ತುವಿನ ಸೌಂದರ್ಯಾನುಭವದ, ಭಾವಗೀತಾತ್ಮಕವಾದ ಆನಂದೋದ್ಗಾರ. ಬಹು ಕಾಲದಿಂದಲೂ ಮಾವಿನ ಮರಗಳನ್ನು ಕಂಡು ಒಲಿದ ಕವಿಯ ಹೃದಯಾನುಭೂತಿ ಸುಂದರ ಪ್ರಶಂಸೆಯೊಂದರಲ್ಲಿ ಬಿಡುಗಡೆ ಪಡೆದಿದೆ; ಪಂಪನಿಗೆ ಇಷ್ಟು ಪ್ರಿಯವಾಗಿ ಕಂಡ ಮಾವಿನ ಮರ ರನ್ನನ ಕಣ್ಣಿಗೆ ವಿಯೋಗಿಗಳನ್ನು ಹೆದರಿಸುವ ಸಿಂಹದಂತೆ ಕಾಣುತ್ತದೆ. ಪೊನ್ನನಾದರೋ, ಪಂಪ ಮಾವಿನ ಮರಕ್ಕೆ ಪಟ್ಟಗಟ್ಟಿದನಲ್ಲಾ ಎಂದು ತಾನೂ ಮಲ್ಲಿಗೆ ಬಳ್ಳಿಗೆ ಪಟ್ಟಕಟ್ಟಿದ್ದಾನೆ ಶಾಂತಿನಾಥ ಪುರಾಣದಲ್ಲಿ. ಪ್ರತಿಯೊಬ್ಬ ಕವಿಯೂ ಒಂದಲ್ಲ ಒಂದು ಚಮತ್ಕಾರಕವಾದ ರೀತಿಯಲ್ಲಿ ಮಾವಿನ ಮರವನ್ನು ವರ್ಣಿಸಿದ್ದಾರೆ. ವಸಂತ ಋತು ಎಂದರೆ ಮಾವಿನ ಮರದಲ್ಲಿ ಕೋಗಿಲೆ ಕೂಗಬೇಕು. ನಾಗಚಂದ್ರನು ಮಾತ್ರ ಮಾವಿನ ಮರದಲ್ಲಿ ಕೋಗಿಲೆ ಕೂಗಿದ್ದನ್ನು ಅತಿ ನವೀನವಾಗಿ ಚಿತ್ರಿಸಿದ್ದಾನೆ –
ಆನಿರ್ದ ಬನದೊಳ್ ಉಳಿದುವನೇನಂ ನೃಪ ನೋೞ
ಬರ್ಪುದು ಎಂಬಂದದಿಂ
ಏನುಲಿದುದೊ ಪಿಕ ಮಧುರಧ್ವಾನದಿಂ
ಆರಕ್ತ ಕೋರಕಂ ಸಹಕಾರಂ
(ಮಲ್ಲಿನಾಥ ಪುರಾಣ ೮.೨೧)
ನಾನಿರುವ ವನದಲ್ಲಿ ಬೇರೇನನ್ನು ನೋಡುವೆ ಇತ್ತ ಬಾ ಎಂಬಂತೆ, ಕೆಂಪಾದ ಚಿಗುರಿಡಿದ ಮಾವಿನ ಮರವೇ ಕೋಗಿಲೆಯ ದನಿಯಿಂದ ಕೂಗಿತಂತೆ! ಇಲ್ಲಿ ಕೂಗಿದ್ದು ಕೋಗಿಲೆಯಲ್ಲ ಮಾವಿನ ಮರ! ವಸಂತದ ಸೌಂದರ್ಯದಲ್ಲಿ ಮಾವಿನ ಮರವೂ ಕೋಗಿಲೆಯ ದನಿಯೂ ಎಂತಹ ಅಪೂರ್ವ ಬೆಸುಗೆಯನ್ನು ಪಡೆದು ರಮ್ಯವಾಗಿದೆ! ಆಲರ್ದ ಅದಿರ್ಮುತ್ತೆ, ಪೂತಪೊಸಮಲ್ಲಿಗೆ, ಕಂಪನವುಂಕುತಿರ್ಪ ತೆಂ ವಸಂತಮಾಸದ ಸಮಸ್ತಾನುಭವವನ್ನೂ ತುಂಬಿಕೊಂಡು ಮೂಡಿದೆ ಈ ಪದ್ಯ. ಇಂದ್ರಿಯ ಸೌಂದರ್ಯದ ಸೊಗಸಾದ ನಿದರ್ಶನ ಇದು. ಅದರಲ್ಲೂ ‘ಕಂಪನವುಂಕುತಿರ್ಪ ತಂಬೆಲರ್’ ಎನ್ನುವ ಮಾತಿನೊಳಗಣ ಸೂಕ್ಷ್ಮತೆ ಗಮನಿಸುವಂಥದು. ಕವಿಕುಲ ಗುರು ಕುಮಾರವ್ಯಾಸ ವಸಂತದ ಈ ಪರಿಮಳ ಪ್ರಸರವನ್ನು ಬಣ್ಣಿಸಿರುವ ಮೋಡಿಯನ್ನು ನೋಡಿ : ಪಸರಿಸಿತು ಮಧುಮಾಸ ತಾವರೆಯೆಸಳ ದೋಣಿಯ ಮೇಲೆ ಹಾಯ್ದುವು ವಸಂತದಲ್ಲಿ ಹೂವಿನ ಕಂಪು ಹೊನಲಾಯಿತು. ಆ ಕುಸುಮ ರಸದ ಉಬ್ಬರದ ತೊರೆಯನ್ನು ದುಂಬಿಗಳೂ ತಾವರೆಯೆಸಳ ದೋಣಿಯಲ್ಲಿ ಹಾಯ್ದುವಂತೆ! ಹೂವಿನಿಂದೊಸರುವ ಮಕರಂದದಿಂದಾಗಿ ಕೆಸರಿನಲ್ಲಿ ಕ್ರೌಂಚ ಸಾರಸಗಳು ಅದ್ದಿದುವಂತೆ. ಈ ವ್ಯಾಖ್ಯಾನ ಕವನದ ಮುಂದೆ ದುರ್ಬಲ. ಕವಿ ಇಂದ್ರಿಯಾನುಭವದ ತೀವ್ರತೆಯನ್ನು ಎಂತಹ ಪ್ರತಿಮಾ ನಿರ್ಮಾಣದಿಂದ ಸಾಧಿಸಿ ಕಲ್ಪನಾ ಸೌಂದರ್ಯದ ಚಕ್ರವರ್ತಿಯಾಗಿದ್ದಾನೆ. ಇಲ್ಲಿ ! ಸಾಮಾನ್ಯವಾಗಿ ವಸಂತಮಾಸ, ನಾರಣಪ್ಪನ ಮಾತಿನಲ್ಲೇ ಹೇಳುವುದಾದರೆ ‘ಯೋಗಿಗೆತ್ತಿದ ಖಡುಗ ಧಾರೆ, ವಿಯೋಗಿಗೆತ್ತಿದ ಸಬಳ….ಭೋಗಿಗಳ ಕುಲದೈವ’. ರಾಜರಾಣಿಯರ ವನ ವಿಹಾರ ಹಾಗೂ ಜಲಕೇಳಿಗೆ ಇದೊಂದು ಸುಂದರವಾದ ಸಂದರ್ಭ. ವಸಂತಮಾಸ ಈ ಉದ್ದೇಶದಿಂದ ಬೇರೆಯಾದ ಒಂದು ಭಾವ ಪ್ರಚೋದನೆಗೂ ಬಳಸಲ್ಪಟ್ಟಿದೆ ಎನ್ನುವುದನ್ನು ತೋರಿಸಲು ಎರಡು ನಿದರ್ಶನಗಳನ್ನು ನೋಡಬಹುದು: ಪಾಂಡುಮಾದ್ರಿಯರ ಪ್ರಣಯ ಪ್ರಸಂಗದಲ್ಲಿ ನಾವು ಕಾಣುವ ವಸಂತ ಸೌಂದರ್ಯವೇಷಿಯಾದ ಮೃತ್ಯು, ಸುಂದರವಾದುದು ಹೌದು ಭಯಂಕರವೂ ಹೌದು. ಸೌಂದರ್ಯದ ಹೃದಯದಲ್ಲಿಯ ವಿಧಿಯ ವಜ್ರನಿಯತಿ ಯಾವ ರೂಪದಲ್ಲಿ ಹುದುಗಿರುವುದೋ ಹೇಳಲಾಗುವುದಿಲ್ಲ. ಈಗ ಶಂಕರವಾದುದು ಮರುಕ್ಷಣವೇ ಭಯಂಕರವಾಗಬಹುದು. ಮಾದ್ರಿಯ ಸೌಂದರ್ಯದಿಂದ ಮೋಹಿತನಾಗಿ, ಅವಳೊಡನೆ ಕೂಡಿ ಮೃತ್ಯುವನ್ನಪ್ಪಿದ ಪಾಂಡುರಾಜನ ಪ್ರಸಂಗದಲ್ಲಿ ಪಾಂಡುವಿನಲ್ಲಿ ಕಾಮವನ್ನು ಕೆರಳಿಸಿದ ವಸಂತ ಋತುವನ್ನು ಪಂಪ ವಸಂತಗಜವೆಂದು ಚಿತ್ರಿಸಿದ್ದಾನೆ – ಪೋಗದೆ ಪಾಡುತಿರ್ಪ ಅಳಿಯೆ ಬೃಂಹಿತಮಾಗಿರೆ ಇಲ್ಲಿ ಕೋಡುಗೊಂಡು ಪರಿವ ಮದದಾನೆಗೂ, ಬಂದ ವಸಂತಋತುವಿಗೂ ಅಭೇದವನ್ನು ಕಲ್ಪಿಸುವುದರ ಮೂಲಕ ವಿಯೋಗಿಯಾದ ಪಾಂಡುವಿಗೆ ಮುಂದೊದಗುವ ಗತಿಯನ್ನೂ ಧ್ವನಿಸಿದ್ದಾನೆ ಪಂಪ. ಮತ್ತೊಂದು ನಿದರ್ಶನ ಜನ್ನನ ಯಶೋಧರ ಚರಿತ್ರೆಯಲ್ಲಿ. ಅಲ್ಲಿ ನಾವು ಕಾಣುವ ವಸಂತ ಜನ್ನನಿಗೇ ವಿಶಿಷ್ಟವಾದುದು. ಅಲ್ಲಿ ಬರುವ ವಸಂತ ಪಾಪಕಳಾ ಪಂಡಿತೆ ಚಂಡಮಾರೀದೇವತೆಯ ಗುಡಿಯ ಬನದಲ್ಲಿ ಕಂಡುದು. ಮಂದೆ ಬರುವ ಮಾರಿಯ ಜಾತ್ರೆಯನ್ನೂ, ಅಲ್ಲಿ ನಡೆಯುವ ಬಲಿ ಕ್ರಿಯೆಗಳನ್ನೂ ಕನ್ನಡಿ ಹಿಡಿದು ಬಿಂಬಿಸುತ್ತದೆ ಈ ವಸಂತ. …ಮೊಳೆವೋದೆಳವೆಱು ಸಿರದಗಾಳಮ್ ಸಿಸಿರಮನೆ ಪಿಡಿದು ಪರಕೆಗೆ ವಸಂತನ್ ಬಾಲಚಂದ್ರ ಪ್ರಾಣಿಗಳನ್ನು ನೇತುಹಾಕುವ ಗಾಳದಂತೆಯೂ, ಚಿಗುರಿದ ಅಶೋಕೆ ಉರಿಯ ಉಯ್ಯಾಲೆಯಂತೆಯೂ, ಕೋಗಿಲೆಯ ದನಿ ಮೂದಲೆಯುಲಿಯಂತೆಯೂ, ಮಾವಿನ ಮರದಡಿ ಉದುರಿದ ಮುತ್ತುಗದ ಮೊಗ್ಗುಗಳೂ ಹರಕೆಗೆಂದು ವಸಂತನು ಶಿಶಿರವನ್ನು ತರಿದು ಬಲಿಕೊಟ್ಟ ಮಾಂಸದ ತುಂಡುಗಳಂತೆಯೂ ತೋರಿದುವು ಎಂದು ಕವಿ ವರ್ಣಿಸಿರುವುದು ವಸಂತದ ಸೌಂದರ್ಯದೊಳಗಿನ ರೌದ್ರತೆಯನ್ನು ತೋರುತ್ತದೆ. ಹಾಗೆ ಕಂಡುದು ಮಾರಿಗುಡಿಯ ಸುತ್ತಣ ಪ್ರಕೃತಿಯಲ್ಲಿ; ಅದೂ ಹಿಂಸಾರಭಸಮತಿಗಳ ಕಣ್ಣಿಗೆ. ಸಾಮಾನ್ಯವಾಗಿ ವಸಂತಮಾಸದ ವರ್ಣನೆಯಲ್ಲಿ ಅನಿವಾರ್ಯವಾದ ಅಂಗ ವನವಿಹಾರ ವರ್ಣನಂ. ವಸಂತ ಬಂದೊಡನೆಯೇ ವನಪಾಲಕ ಓಡಿಬಂದು ರಾಜನಿಗೆ ಬಿನ್ನವಿಸುತ್ತಾನೆ. ರಾಜ ತನ್ನ ಅಂತಃಪುರದ ಲಲನಾಮಣಿಯರೊಂದಿಗೆ ವನವಿಹಾರಕ್ಕೆ ಹೊರಡುತ್ತಾನೆ. ಅರಮನೆಯ ರಮಣಿಯರು, ‘ಕೊಳದೊಳಗೋಲಾಡಿ ತಳಿರ್ತೆಳಮಾವಿನೊಳುಯ್ಯಲೆಯಾಡಿ ರತಿರಾಗದಿನೋಕುಳಿಯಾಡಿ’ (ಜನ್ನ-ಯಶೋಧರ ಚರಿತೆ) ಉದ್ಯಾನದ ಹೂವುಗಳನ್ನು ಕಿತ್ತು ಮುಡಿದು ಬಳಲಿ ಅರಮನೆಗೆ ಹಿಂತಿರುಗುತ್ತಾರೆ. ಈ ಪುಷ್ಪಾಪಚಯ ವರ್ಣನೆಯಲ್ಲಿ ಅಪೂರ್ವ ವಾಸ್ತವತೆಯನ್ನು ಸೊಗಸನ್ನು ಕನಕದಾಸರು ‘ಮೋಹನತರಂಗಿಣಿ’ಯಲ್ಲಿ ತಂದಿದ್ದಾರೆ. ಕೃಷ್ಣನ ಅರಮನೆಯ ರಮಣಿಯರು ಉದ್ಯಾನವನದಲ್ಲಿ ನಾನಾ ಬಗೆಯ ಕುಸುಮಗಳನ್ನು ಕಿತ್ತು ಪೊಟ್ಟಣ ಕಟ್ಟಿದರಂತೆ ! ಅಷ್ಟೇ ಅಲ್ಲ “ಅಂಬೆ ಹಳದಿ ಕಾರ್ಗೆಣಸು ನೀರುಳ್ಳಿ ಕೊತ್ತುಂಬರಿ ಕರಿಬೇವು ಸಹಿತ, ಸಿಂಬೆ ಕೂಗಲಿ ಪಿಪ್ಪಲಗಾಯ ಕೊಯ್ದರು ನಿಂಬೆಯ ಕೞಿವಣ್ಗಳೊಡನೆ” (೪-೫೯). ಯಾವ ಅರಮನೆಯ ಸ್ತ್ರೀಯರೂ ಅಡುಗೆಗೆ ಅಗತ್ಯವಾದ ಇಂಥ ವಸ್ತುಗಳನ್ನು ಸಂಗ್ರಹಿಸಿದಂತೆ ಬೇರೆ ಯಾವ ಕಾವ್ಯದಲ್ಲೂ ನಾವು ಕಾಣೆವು. ಇಲ್ಲಿನ ಸ್ತ್ರೀಯರು ಕೇವಲ ಭೋಗವಿಲಾಸಿಗಳಾದ ಅರಮನೆಯ ಅರಗಿಳಿಗಳಲ್ಲ; ಅರಮನೆಯ ಹೆಣ್ಣುಗಳಾದರೂ ಅಡುಗೆಮನೆಯನ್ನು ಮರೆತ ಗರತಿಯರಲ್ಲ. ಸಾಮಾನ್ಯವಾಗಿ ಅರಮನೆಯ ಸ್ತ್ರೀಯರು ನಾನಾ ಬಗೆಯಾದ ಹೂವುಗಳಷ್ಟನ್ನೇ ಕಿತ್ತು ಮುಡಿದು ತೃಪ್ತರಾದರೆ ಇವರು ಹೂವನ್ನು ಕಿತ್ತು ಪೊಟ್ಟಣ ಕಟ್ಟಿದ್ದಲ್ಲದೆ ಅಡುಗೆಗೆ ಬೇಕಾದ ಕರಿಬೇವು, ನೀರುಳ್ಳಿ, ಗೆಣಸು, ಕೊತ್ತಂಬರಿ, ನಿಂಬೆ ಇತ್ಯಾದಿಗಳನ್ನು ಸಂಗ್ರಹಿಸಿದರಂತೆ. ಈ ವರ್ಣನೆಯಲ್ಲಿನ ಸ್ತ್ರೀಯರು ನಾವು ದಿನ ದಿನವೂ ಕಾಣುವ ಹೆಣ್ಣುಮಕ್ಕಳ ಸಾಲಿಗೆ ಸೇರಿ ಸಂತೋಷವನ್ನು ಉಂಟುಮಾಡುತ್ತಾರೆ. ಮಲ್ಲಣಾರ್ಯನ ‘ಭಾವಚಿಂತಾರತ್ನ’ದಲ್ಲಿ ಸತ್ಯೇಂದ್ರ ಚೋಳನ ರಾಜ್ಯದಲ್ಲಿ ವಸಂತಋತು ಬಂದಾಗ ಸತ್ಯೇಂದ್ರಚೋಳನು ಆ ಋತುವನ್ನು ಕಂಡ ರೀತಿ ವಿಶಿಷ್ಟವಾಗಿದೆ. ಅದೊಂದು ಅಂಶಕ್ಕಾದರೂ ಅವನನ್ನು ಅಭಿನಂದಿಸಲೇ ಬೇಕು. ಅಲ್ಲಿ ವಸಂತ ಋತು ಬರುವುದು ಸ್ಮರಪೂಜಾರಂಗವಾಗಿ ಅಲ್ಲ; ಹರಪೂಜಾರಂಗವಾಗಿ, ಭೋಗಪರವಾಗಿ ಅಲ್ಲ; ಯೋಗಪರವಾಗಿ. ಸಮಸ್ತ ವಸಂತದ ಶೋಭೆಯೂ ಶಿವನ ಸೌಂದರ್ಯಕ್ಕಾಗಿಯೇ ಎಂದು ಸತ್ಯೇಂದ್ರಚೋಳ ಭಾವಿಸುತ್ತಾನೆ. ಅಲ್ಲಿಯೂ ಪುಷ್ಪಾಪಚಯ ನಡೆಯುತ್ತದೆ ಅರಮನೆಯ ಹೆಣ್ಣುಗಳಿಂದ. ಆದರೆ ಹೂವಿನ ಸಂಗ್ರಹ ಮೈಚೆಲುವಿನ ಸಿಂಗಾರಕ್ಕಲ್ಲ; ಮಹಾದೇವನ ಸಿರಿಮುಡಿಗೆ! ವಸಂತ ಮುಗಿದೊಡನೇ ಧಾವಿಸುತ್ತದೆ ಗ್ರೀಷ್ಮ; ಬಿರು ಬೇಸಗೆಯ ಬಿಸಿಲಿನಲ್ಲಿ ಬೆಂದ ನಮ್ಮ ಕವಿಗಳು ಬೇಸಗೆಯ ವಿವಿಧ ಪರಿಣಾಮಗಳನ್ನು ಚಿತ್ರಿಸುತ್ತಾರೆ. ಬೇಸಗೆಯಿಂದ ಜಲಾಶಯಗಳ ಮೇಲೆ ಏನು ಪರಿಣಾಮವಾಯಿತು. ಮಾನವರ ಮೇಲೆ, ಪಕ್ಷಿಗಳ ಮೇಲೆ, ಕಾಡುಗಳ ಮೇಲೆ, ಕಾಡು ಪ್ರಾಣಿಗಳ ಮೇಲೆ ಏನು ಪರಿಣಾಮವಾಯಿತು ಎಂಬುದನ್ನು ಚಿತ್ರಿಸಿದ್ದಾರೆ. ಅದರಲ್ಲೂ ಪಕ್ಷಿಗಳು ಗರಿ ಸೀದುಬಿದ್ದುವು, ಆನೆಯ ಕುಂಭಸ್ಥಳ ಬಿಸಿಲಿಗೆ ಫಳಾರನೆ ಒಡೆದು ಮುತ್ತು ಚೆಲ್ಲಿತು, ಶಿವನು ಗೌರಿಯನ್ನುಳಿದು ಗಂಗೆಯನ್ನು ಸೇರಿದ. ವಿಷ್ಣು ಮತ್ಸ್ಯಾವತಾರಕ್ಕೋ, ಹಾಲ್ಗಡಲಿಗೋ ಹೋದ – ಎನ್ನುವ ಅಂಶಗಳಂತೂ ಎಲ್ಲಾ ಕವಿಗಳ ಸ್ವತ್ತಾಗಿದೆ – ಬೇಸಗೆಯ ವರ್ಣನೆಯಲ್ಲಿ. ಆದರೆ ವಾಸ್ತವವಾಗಿ ಬೇಸಗೆಯ ಬಿಸಿಲಿನ ನಾನಾ ಪರಿಗಳನ್ನು ಹರಿಹರನಂತೆ ಮತ್ತಾರೂ ಅರಿಯರು – ಮರದಡಿಯೊಳ್ ಕಾನನದೊಳ್ ಗಿರಿತಟದೊಳ್ ಮರದಡಿಯ ನೆರಳೂ ಸಹ ಬೇಸಗೆಯಲ್ಲಿ ಕರಿಯ ಬಿಸಿಲ್! ಕಾಡಿನಲ್ಲಿ ಉರಿಯ ಬಿಸಿಲ್, ಗಿರಿತಟದಲ್ಲಿ ಅಚ್ಚರಿಯ ಬಿಸಿಲ್, ಬಟ್ಟಬಯಲಲ್ಲಿ ಪಿರಿಯ ಬಿಸಿಲ್, ಅಂಬರತಲದಲ್ಲಿ ಅಖಂಡಿತದ ಬಿಸಿಲ್! ಇನ್ನು ಮಳೆಗಾಲ. ಮುಂಗಾರಿನ ತಾಂಡವಾಡಂಬರವನ್ನು ಅದರ ರುದ್ರ ಮಾಧುರ್ಯವನ್ನು ನಮ್ಮ ಕವಿಗಳು ಬಲ್ಲರು. ಪಂಪ, ರುದ್ರಭಟ್ಟ, ನಾಗಚಂದ್ರ, ಹರಿಹರ – ಇವರ ವರ್ಣನೆಗಳು ಸೊಗಸಾಗಿವೆ. ಮಳೆ ಬರುವ ಸೂಚನೆಯನ್ನು ಪ್ರಕೃತಿಯಲ್ಲಿ ಕಂಡ ಪಂಪ ಅದನ್ನು ಚಿತ್ರಿಸುತ್ತಿದ್ದಾನೆ – ದೆಸೆ ಪಸುರೇಱು ಪಚ್ಚೆಯೊಳೆ ಮುಚ್ಚಿ ಮುಸುಂಕಿದ ಮಾಱು ಯಾದುದಾ ಪಂಪನ ಕಣ್ಣು ಪ್ರತಿಯೊಂದು ಋತುವಿನ ಸೌಂದರ್ಯದ ಪದರ ಪದರಗಳನ್ನೂ ಬಲ್ಲುದು. ಮಳೆಯ ಮೋಡ ಕಟ್ಟಿದಾಗ, ದಿಕ್ಕೆಲ್ಲವೂ ಹಸುರಾಗಿ ಪಚ್ಚೆಯಲ್ಲಿ ಮುಚ್ಚಿಮುಸುಕಿದಂತಾಯಿತು. ಆಕಾಶದಲ್ಲಿ ದುಂಬಿಗಪ್ಪಿನ ನವಿಲಿನ ಕಂಠದ ನೀಲಿಯ, ಹೊಂಗೆಯ ಶ್ಯಾಮಲತೆಯ -ಬಣ್ಣದ ಮೋಡಗಳ ಪ್ರಸರ ಹೊಳೆಯತೊಡಗಿತು. ಕದಂಬ ಕೇತಕೀ ಕುಸುಮಗಳ ಪರಾಗಪುಂಜಲಿಪ್ತವಾದ ಗಾಳಿ ಬೀಸತೊಡಗಿತು. ಸ್ವಾನುಭವದಿಂದ ಬಂದ ಈ ಬಣ್ಣನೆಯಲ್ಲಿ ಸೊಗಸಿದೆ, ವಿಶಿಷ್ಟತೆ ಇದೆ. ನಾಗಚಂದ್ರನು ಮುಂಗಾರಿನ ಮಹಾದ್ಭುತವನ್ನು ಕಾಳಾಸುರನೆಂಬಂತೆ ರೂಪಿಸಿ ಚಿತ್ರಿಸಿದ್ದಾನೆ – ಉಗುೞುತ್ತುಂ ಸಿಡಿಲೆಂಬ ತೋರಕಿಡಿಯಂ ಕಾಲೂಱ ಭೂಭಾಗದೊಳ್ ಕುಮಾರವ್ಯಾಸ ಮಳೆಗಾಲದ ಚಿತ್ರವನ್ನು ಬೇರೊಂದು ಮೋಡಿಯಲ್ಲಿ ಚಿತ್ರಿಸುತ್ತಾನೆ. ಅವನ ವರ್ಣನೆಯ ಒಂದು ಪಂಕ್ತಿ ಸಾಕು – ‘ಮುಗಿಲ ಬೆನಕಗೆ ಲಡ್ಡುಗೆಗಳಾದುವು ಸಮಸ್ತಗ್ರಹಸುತಾರೆಗಳು ಎಂಬ ಒಂದೇ ಮಾತಿನಲ್ಲಿ ಮೋಡ ಕವಿದ ಪರಿಯನ್ನು ಅದ್ಭುತವಾಗಿ ಚಿತ್ರಿಸಿದ್ದಾನೆ. ಕನಕದಾಸರು, ‘ಮೋಹನತರಂಗಿಣಿ’ಯಲ್ಲಿ, ಬಂದ ಮಳೆಗಾಳಿಯನ್ನು ಸೊಂಡಿಲಿನಿಂದ ನೀರನ್ನು ಫೂತ್ಕರಿಸುವ ಮದಗಜಕ್ಕೆ ಹೋಲಿಸಿದ್ದಾರೆ: ತುಱುಗಿದ ಕಾಯಿಪಣ್ಗಳ ಸಾಲ ವೃಕ್ಷವ ಮುರಿದು ದೂಳಿಯ ಚಲ್ಲಿಕೊಳುತ ಈ ಮದಗಜದ ಪ್ರತಿಮೆ ನಿಜಕ್ಕೂ ನವನವೀನವಾಗಿದೆ. ರುದ್ರಭಟ್ಟನೂ ಹರಿಹರನೂ ವರ್ಣನೆಯ ಪದಗಳಿಂದಲೇ ಮಳೆಯ ಅನುಭವವನ್ನು ಹಿಡಿದಿದ್ದಾರೆ – ಬಲ್ಸರಿ, ಬಿರುಸರಿ, ಪೆರ್ಮಳೆ, ಮೆಲ್ಸರಿ, ತುಂತುರ್, ತುಷಾರ ಮಿಡುಕಂಬನಿ, ಒತ್ತರಿಸುತ್ತಂಬರಮಂ, ಮುತ್ತುತ್ತುಂ ದಿಗ್ವಿತಾನಮಂ, ಹರಿಹರನ ‘ಇಳೆಯಾಂಡ ಗುಡಿಮಾರರ ರಗಳೆ’ಯಲ್ಲಿ ಬರುವ ಮಳೆಯ ಚಿತ್ರವೂ ಸಹಜವಾಗಿದೆ, ಸುಂದರವಾಗಿದೆ – ‘ತನತನಗೆ ತೀವಿತ್ತು ನೀರದ ಬಳಂ ಸರಳವಾದ ನಾಲ್ಕೇ ಪಂಕ್ತಿಗಳಲ್ಲಿ ಹರಿಹರ ಮಳೆಯ ಅದ್ಭುತವಾದ ನೈಜಾನುಭವವನ್ನು ನೀಡಿದ್ದಾನೆ. ಮಳೆಗಾಲದಲ್ಲಿ ಕಾಣುವ ಸುತ್ತಣ ಪ್ರಕೃತಿ ವ್ಯಾಪಾರವನ್ನು ಹರಿಹರ ಚೆನ್ನಾಗಿ ಗುರುತಿಸಿದ್ದಾನೆ, ಮತ್ತೊಂದು ವೃತ್ತದಲ್ಲಿ. ಗಗನಂ ಕೆಟ್ಟುದು; ಸೂರ್ಯಚಂದ್ರರ್ ಅಳಿದರ್; ದಿಕ್ಚಕ್ರಮ್ ಇಲ್ಲಾಯ್ತು ಮಳೆಗಾಲದ ಒಂದೊಂದು ವ್ಯಾಪಾರವೂ ಸೇರಿ ಸಮಗ್ರವಾದ ಚಿತ್ರವನ್ನು ನೀಡುತ್ತವೆ. ಪ್ರತಿಯೊಂದು ಚಿತ್ರವೂ ಕವಿಯ ಅನುಭವದಿಂದ ಜೀವಂತವಾಗಿದೆ. ನಿಜವಾಗಿಯೂ ಈತ ಮಳೆ ಬಿಸಿಲಲ್ಲಿ ನೆನೆದವನು. ಅರಮನೆಯ ಕರುಮಾಡದಲ್ಲಿ ಕುಳಿತು ಮಳೆ ಬಿಸಿಲನ್ನು ವರ್ಣಿಸುವ ಕಾವ್ಯ ಬೇರೆ; ಮಳೆ ಬಿಸಿಲನ್ನು ಕಂಡು ಉಂಡು ವರ್ಣಿಸುವ ಕಾವ್ಯವೇ ಬೇರೆ. ಹರಿಹರನಲ್ಲಿ ಅನುಭವವೇ ಕಾವ್ಯವಾಗಿದೆ ಇಂತಹ ವರ್ಣನೆಗಳಲ್ಲಿ. ಮಳೆಗಾಲ ಕಳೆಯಿತು. ಶರತ್ಕಾಲ ಬಂದಿದೆ. ಸಸ್ಯ ಶಾಮಲೆಯಾದ ಪೃಥುವಿ ತಾಯ್ತನದಲ್ಲಿದ್ದಾಳೆ. ಕಾಂತಿ, ದೀಪ್ತಿ, ನೈರ್ಮಲ್ಯಗಳು ಪ್ರಕೃತಿಯಲ್ಲಿ ಯೋಗಸ್ಥವಾಗಿವೆ. ವಸಂತದಲ್ಲಿ ಲಗ್ಗೆ ನುಗ್ಗಿದ ಚೆಲುವಿಗೀಗ ಸಂಯಮದ ಶಿಕ್ಷಣ ಲಭಿಸಿದೆ. ಮೂರೇ ಮಾತಿನಲ್ಲಿ ಕುಮಾರವ್ಯಾಸ ಶರದದ ಸೊಬಗನ್ನು ಸೆರೆಹಿಡಿದಿದ್ದಾನೆ- ಜಾರಿದುದು ಮಳೆಗಾಲ ಅತಿ ಬಿಳುಪೇರಿದುವು ಮುಗಿಲುಗಳು, ಮುಗಿಲು ಅತಿ ಶುಭ್ರವಾದುವು; ಕತ್ತಲೆಯಂತೂ ಹಗಲು ಸೂರ್ಯನಿಂದ ಇರುಳುಚಂದ್ರತಾರೆಗಳ ದೀಪ್ತಿಯಿಂದ ಸೂರೆವೋಯಿತಂತೆ. ಲಕ್ಷ್ಮೀಶ ಬೆಳ್ಳಗಾದ ಮುಗಿಲುಗಳನ್ನು ‘ನಾಣ್ಚಿ ಬೆಳ್ಪಾದ ತೆರದಿಂ ಮುಗಿಲ್ಗಳಿರೆ ಬೆಳ್ದಿಂಗಳೊಪ್ಪಿದುದು; ಬೆಳಸುಗಳ ಪಣ್ದೆನೆಗಳ ಮಿರುಪ ಹೊಂಬಣ್ಣದ ಹರಿದ್ರಲೇಪನದಿಂದ ಮೆರೆವ ಮೈಸಿರಿಯ ಮಾಂಗಲ್ಯದಿಂ ಭೂದೇವಿ’, (ಜೈ.ಭಾ. ೨೫-೫) ಶೋಭಿಸಿದಳೆಂದು ವರ್ಣಿಸುತ್ತಾನೆ. ಜನ್ನನು ಶರತ್ ಕಾಲದಲ್ಲಿ ಹಾರುವ ಬೆಳ್ಳಕ್ಕಿಗಳ ಚಿತ್ರವನ್ನು – ‘ತರದೆ ಪಾಱದುವು ಬೆಳ್ಳಕ್ಕಿ ನೂಲ್ದೆಗೆದಂತೆ ಎಂದು ಎರಡೇ ಸಾಲಿನಲ್ಲಿ ವರ್ಣಿಸಿದ್ದಾನೆ. ನಾಗಚಂದ್ರನಂತೂ ಶರದದ ನಿರ್ಮಲತೆಯನ್ನು ಜೈನ ದಿವ್ಯ ಯೋಗಿಗೆ ಹೋಲಿಸಿ- ‘ಶರದಾಗಮಂ ನೆನೆಯಿಸಿತ್ತು ಜಿನಾಗಮ ದಿವ್ಯಯೋಗಿಯಂ’ ಎಂದು ವಿನೂತನ ಭಾವವನ್ನು ಪ್ರಚೋದಿಸುತ್ತಾನೆ, ಮಲ್ಲಿನಾಥ ಪುರಾಣದಲ್ಲಿ (೮-೧೧೯). ಎಲ್ಲರಿಗೂ ಮಿಗಿಲಾಗಿ ಪಂಪ ನಾಲ್ಕು ಸಾಲುಗಳಲ್ಲಿ ಶರದದ ವಾಸ್ತವ ಚಿತ್ರವನ್ನು ಕೊಡುತ್ತಾನೆ. ಪುಳಿಯೊಳ್ ಕರ್ಚಿದ ಬಾಳಬಣ್ಣಮನೆ ಪೋಲ್ವಾಕಾಶಂ, ಶರದದ ನೀಲಾಕಾಶ ಹುಳಿಯಲ್ಲಿ ತೊಳೆದ ಕತ್ತಿಯಂತೆ ಥಳಥಳಿಸುತ್ತಿದೆ; ಆಕಾಶ ಮಂಡಲವನ್ನು ಬಿಳಿಮುಗಿಲುಗಳು ಹಬ್ಬಿವೆ; ಮುಗಿಲ ಬೆಳ್ಪಿನಿಂದ ರಾರಾಜಿಸುವ ದಿಗ್ಭಾಗಗಳು; ಭತ್ತದ ಪೈರಿನ ಗಂಧದಿಂದ ಅಂಧವಾದ ದುಂಬಿಗಳ ಬಳಗ-ಇವುಗಳಿಂದ ಶರದ ಲೋಕಕ್ಕೆ ಕಣ್ಣು ಬರುವಂತೆ ಬಂದಿತಂತೆ. ಪಂಪನ ಈ ಪ್ರತಿಭೆಗೆ ವಿಮರ್ಶೆಯ ಸೊಡರನ್ನು ಹಿಡಿದು ವಿವರಿಸಬೇಕಾಗಿಲ್ಲ. ಶರದ ಕಳೆದು ಮಾಗಿ ಬರುತ್ತಿದೆ. ಲೋಕವನ್ನೆಲ್ಲಾ ಮಂಜು ಮುಸುಕಿದೆ. ಛಳಿಯ ಪರಿಣಾಮವಾಗಿ ನಮ್ಮ ಪ್ರಾಚೀನಕವಿಗಳಾರೂ ಹೊರಕ್ಕೇ ಹೋಗಲಿಲ್ಲ. ಮನೆಯೊಳಗೇ ಕುಳಿತುಬಿಟ್ಟರೆಂದು ಕಾಣಿಸುತ್ತದೆ. ಹೀಗಾಗಿ ಕವಿ ಹೊರಪ್ರಕೃತಿಯಲ್ಲಾಗುವ ದಾರುಣ ಪರಿವರ್ತನೆಯನ್ನು ಕಂಡು ನಿಡುಸುಯ್ಯಲಿಲ್ಲ; ಹೇಮಂತ ಕಲೆಯ ರಮ್ಯತೆಯನ್ನು ಬಣ್ಣಿಸಲಿಲ್ಲ. ಜನಗಳಿಗೆ ನೆಳಲೂ, ನೀರೂ ಬೇಡವಾಯಿತು. ಮಾತನಾಡಿದರೆ ಹುಹು ಎಂಬುದೇ ನುಡಿಯಾಯಿತು – ಎಂದು ವರ್ಣಿಸುವುದರಲ್ಲೇ ಮಾಗಿಯಿಂದ ಜಾರಿ ಕವಿಯ ಮನಸ್ಸು ವಸಂತ ವರ್ಣನೆಗೆ ಬೇಕಾದ ಸಾಮಗ್ರಿಗಳ ಕಡೆ ಕಣ್ಣು ಹೊರಳಿದಂತೆ ತೋರುತ್ತದೆ. ದೇವಕವಿಯೊಬ್ಬನ ಕಣ್ಣಿಗೆ ಮಾತ್ರ ಮಾಗಿ ಹಿಮೋಗ್ರಖಡ್ಗವನ್ನು ಹಿಡಿದು ತರುಲತೆಯ ಹೂವುಗಳನ್ನು ಮೂಲೋತ್ಪಾಟನ ಮಾಡುವ ನೋಟ ಕಾಣುತ್ತದೆ. ಹರಿಹರನಾದರೋ ಮಾಗಿ ಚಳಿಯ ಮಹಿಮೆಯನ್ನು ಕುರಿತು ‘ಒಡಲೇ ಪ್ರಾಣಂಗೆ ಚಳಿಯ ಕುಪ್ಪಸಮಾಯ್ತು’ ‘ಅಗ್ನಿಗೆ ಶೀತಂ ಪತ್ತಿತೇನೆಂಬೆಂ ಹಿಮದೊಳ್’ (ಬೆಂಕಿಗೇ ಛಳಿಯಾಯಿತಂತೆ!) ಎಂದು ಸ್ವಾರಸ್ಯವಾದ ಮಾತಿನಲ್ಲಿ ಚಿತ್ರಿಸುತ್ತಾನೆ. ಹೆಸರರಿಯದ ಕವಿಯೊಬ್ಬ ಮಂಜಿನ ಪರಿಯನ್ನು ಕಂಡಿದ್ದಾನೆ – ಗಗನಂ, ದಿಗ್ವಳಯಂ, ದಿನೇಶ ವಳಯಂ, ಶೈಲಾಳಿ, ತೋಯಾಶಯಂ, ಸೂಕ್ತಿ ಸುಧಾರ್ಣವದಲ್ಲಿ ದೊರೆಯುವ ಹೆಸರರಿಯದ ಕವಿಯೊಬ್ಬನು ಚಿತ್ರಿಸುವ ಮಂಜಿನ ಅನುಪಮ ವರ್ಣನೆ ಇದು. ಹೇಮಂತನೆಂಬ ಇಂದ್ರಜಾಲಿಗ ಮಂತ್ರಧೂಮವನ್ನೂದಿದ್ದಾನೆ. ಮುಗಿಲು, ದಿಕ್ಕು, ಸೂರ್ಯಬಿಂಬ, ಗಿರಿ, ಹೊಳೆ – ಕೊಳ, ನಗರ, ನಂದನ ಇವುಗಳನ್ನು ಯಾರೂ ಕಾಣದಂತಾಗಿ ಕಣ್ ವಂಚಿಸಿ ನುಂಗಿದೆ ಈ ಹೇಮಂತ ಮಾಂತ್ರಿಕನ ಮಾಟ! ಪ್ರಕೃತಿಲೋಕದಲ್ಲಿ ಎಂತೋ ಅಂತೆ ಮಾನವಲೋಕದಲ್ಲಿಯೂ ಮಾಗಿ ಅನಿವಾರ್ಯ. ಮಾನವ ಶರೀರದ ಎಲೆ ಈ ಲೋಕವ್ಯಾಪಾರದ ಕೊಂಬೆಯಿಂದ ಕಳಚಿ ಬೀಳಲೇಬೇಕು. ಈ ಮಾಗಿಯಲ್ಲಿ ಕವಿ ಕಂಡ ಸ್ಮಶಾನದ ರುದ್ರಸೌಂದರ್ಯವನ್ನೂ ಚಿತಾಗ್ನಿಯ ಪರಿಯನ್ನೂ ಪರಿಭಾವಿಸಿ ವರ್ಣಿಸಬಲ್ಲನು. ಸ್ಮಶಾನದಲ್ಲಿ ವಿಧವಿಧವಾದ ಬೆಂಕಿಯ ವಿನ್ಯಾಸಗಳನ್ನೂ ವಿಲಯಾಗ್ನಿಯೇ ಬೀಡುಬಿಟ್ಟಂತಿರುವ ಸ್ಮಶಾನದಲ್ಲಿ ಕವಿಯ ಕಣ್ಣು ಚಿತಾಗ್ನಿಯ ಎಷ್ಟೊಂದು ಪರಿಗಳನ್ನು ಕಂಡಿದೆ ! ಯಾವುದು ಲೋಕದಲ್ಲಿ ಸಾಧುವಲ್ಲವೋ ಕಲೆಯಲ್ಲಿ ಅದು ಪ್ರಿಯವಾಗುತ್ತದೆ – ಎಂದ ಕಾಳಿದಾಸ. ಯಾರು ತಾನೇ ಲೋಕದಲ್ಲಿ ನಿಂತು ಸ್ಮಶಾನದ ಬೆಂಕಿಯ ವಿವಿಧ ಚಿತ್ರಗಳನ್ನು ಕವಿಯಂತೆ ಕಾಣಲು ಸಾಧ್ಯ? ಕವಿ ತನ್ನ ನಿರ್ಲಿಪ್ತ ಪರಿಭಾವನೆಯಿಂದ ಸ್ಮಶಾನದ ಚಿತಾಗ್ನಿಯನ್ನು ಸುಂದರವಾದ ವರ್ಣಚಿತ್ರವನ್ನಾಗಿ ಚಿತ್ರಿಸಿದ್ದಾನೆ. ೭ ಪ್ರಕೃತಿಲೋಕಕ್ಕೂ ಮಾನವಲೋಕಕ್ಕೂ ಅಂತರ್ಗತವಾದ ಅಭಿನ್ನ ಸಂಬಂಧವಿದೆ. ಆದುದರಿಂದ ಒಂದರ ಸೊಬಗನ್ನು ನೋಡುವಾಗ ಮತ್ತೊಂದರ ಸೊಬಗು ನೆನಪಿಗೆ ಬಂದು ನಾವು ಕಾಣುವ ವಸ್ತು ಚೆಲುವಾಗುವುದುಂಟು. ವಸ್ತುವನ್ನು ಅದರ ಚೆಲುವಿಗಾಗಿ ನೋಡುವುದು ಒಂದು. ವಸ್ತುವಿನ ಸೌಂದರ್ಯಾನುಭವದಲ್ಲಿ ನಾವು ಬೇರೊಂದೆಡೆ ಕಂಡ ಚೆಲುವನ್ನು ಸದಸ್ಯದ ವಸ್ತುವಿಗೆ ಆರೋಪಿಸಿದಂತೆ ಕಾಣುವುದು ಮತ್ತೊಂದು. ಇದನ್ನೇ ಪಾಶ್ಚಾತ್ಯರಲ್ಲಿ ಎನ್ಫಿಲಿಂಗ್ (Einfulung) ತತ್ವ ಎನ್ನುತ್ತಾರೆ. ಮಾನವಲೋಕದ ಚೆಲುವನ್ನು ಕಾಣುವಾಗ ಪ್ರಕೃತಿಯ ಚೆಲುವನ್ನು ಆರೋಪಿಸುವುದೂ ಪ್ರಕೃತಿಯ ಚೆಲುವನ್ನು ಕಾಣುವಾಗ ಮಾನವ ಚೆಲುವನ್ನು ಆರೋಪಿಸುವುದೂ- ಸೌಂದರ್ಯಾನುಭವದ ಒಂದು ಪರಿ. ಆದರೆ ವಾಸ್ತವವಾಗಿ ಇಲ್ಲಿ ಆರೋಪಿಸುವುದು ಎನ್ನುವುದು ಅಷ್ಟು ಸರಿಯಲ್ಲ. ಒಂದನ್ನೂ, ಮತ್ತೊಂದನ್ನೂ ಬೇರೆಂದು ಭಾವಿಸದೆ ಒಂದನ್ನು ಮತ್ತೊಂದರಲ್ಲಿ ಕಾಣಿಸುವುದು, ಅವೆರಡರ ಅಂತರಂಗದ ಅಭಿನ್ನ ಸಂಬಂಧವನ್ನು ಅರಿತ ದೃಷ್ಟಿಯ ಒಂದು ವಿಶೇಷತೆ ಎನ್ನಬಹುದು. ಪಂಪನ ಕಣ್ಣು ಈ ದೃಷ್ಟಿಯಿಂದ ಪ್ರಕೃತಿಯಲ್ಲಿ ಮಾನವಲೋಕದ ವ್ಯಾಪಾರವನ್ನು ಕಾಣುತ್ತದೆ. ಅಳಿ ನಿನದದ, ಮದಕೋಕಿಳ ಕಳ ನಿನದದ ಜತಿಯೊಳ್ ವಸಂತ ವನಸಿರಿಯಲ್ಲಿ ಮಲಯಾನಿಲ-ನರ್ತಕ ಲತಾನಟಿಯನ್ನು ಆಡಿಸಿದುದೂ, ಚೂತಲತಿಕೆ ತನ್ನ ಅಂಕುರಪಲ್ಲವದಿಂದ ಅಭಿನಯಗೈದುದೂ ಕೇವಲ ಚಮತ್ಕಾರದ ವಿಚಾರವಲ್ಲ; ಅನುಭವದ ವಿಚಾರ. ಪಂಪನು ಇಂಥ ನೃತ್ಯಗಳನ್ನು ಮಾನವಲೋಕದಲ್ಲಿ ಕಂಡಿದ್ದನು.ಅದರ ಅನುಭವ ಅಂತರಂಗದಲ್ಲಿ ಅಡಗಿತ್ತು. ಯಾವಾಗ ಪ್ರಕೃತಿ ಲೋಕದಲ್ಲಿ ಅವನು ಮೆಲುಗಾಳಿಗೆ ಮಿಳಿರ್ದಾಡುವ ಲತೆಯನ್ನೂ ಮಾವಿನ ಚಿಗುರನ್ನೂ ಕಂಡನೋ ಕೂಡಲೇ ಅವನಲ್ಲಿ ಸುಪ್ತವಾದ ನರ್ತನಾದಿಗಳ ಸೌಂದರ್ಯದ ಅನುಭವ ಮನಸ್ಸಿನಲ್ಲಿ ಮೇಲೆದ್ದು ಬಂದು ಸದ್ಯದ ಅನುಭವದಲ್ಲಿ ಸೇರ್ಕೆಗೊಂಡು, ಅವನಲ್ಲಿ ರಸೋಲ್ಲಾಸವನ್ನುಂಟುಮಾಡಿ ವಾಸ್ತವವಾಗಿ ವಸ್ತುವಿನಲ್ಲೇ ಆ ಸೌಂದರ್ಯವಿರುವಂತೆ ಅವನ ಅನುಭವಕ್ಕೆ ಭಾಸವಾಗಿದೆ. ಪಂಪನ ವೈಯಕ್ತಿಕಾನುಭವ, ವ್ಯಕ್ತಿನಿಷ್ಠಭಾವನೆಯ ಪರಿಣಾಮವಾಗಿ, ವನದಲ್ಲಿ ಕಂಡ ಬಳ್ಳಿ ಅವನಲ್ಲಿ ಪೂರ್ವಾನುಭವವನ್ನು ಜಾಗೃತಗೊಳಿಸಿ ಪ್ರಚೋದಿಸುವುದರ ಮೂಲಕ, ವಸ್ತು ವ್ಯಕ್ತಿ ತಾದಾತ್ಮ್ಯದಲ್ಲಿ, ವಸ್ತುವಾದ ಬಳ್ಳಿ ‘ಲತಾನರ್ತಕಿ’ ಎಂಬ ರಸಮೌಲ್ಯವನ್ನು ಪಡೆದು ಸುಂದರವಾಗಿದೆ. ಇದಕ್ಕೂ ಮಿಗಿಲಾದ ಒಂದು ಸ್ಥಿತಿ ಎಂದರೆ ತನಗೂ ಈ ಪ್ರಕೃತಿ ಲೋಕಕ್ಕೂ ಇರುವ ಚೈತನ್ಯ ಸ್ಪಂದನದ ಆನಂದಾನುಭವದ ಸ್ಥಿತಿ. ಅಂತಹ ಸ್ಥಿತಿಯಲ್ಲಿ ತಾನು ಬೇರೆಯಲ್ಲ ಪ್ರಕೃತಿ ಬೇರೆಯಲ್ಲ ಎಂಬ ಅನುಭವವಾಗುತ್ತದೆ ಕವಿಗೆ. ಲಕ್ಷ್ಮೀಶ ಜೈಮಿನಿ ಭಾರತದಲ್ಲಿ ಒಂದೆರಡು ಸಂದರ್ಭಗಳಲ್ಲಿ ಈ ಅಂಶವನ್ನು ವ್ಯಕ್ತಪಡಿಸಿದ್ದಾನೆ. ಚಂದ್ರಹಾಸನ ಶೋಕದಲ್ಲಿ ಸಮಸ್ತ ಕಾನನವೇ ರೋದಿಸಿತು ಎಂದು ಚಿತ್ರಿಸುವ ಪ್ರಸಂಗ ಒಂದು; ಮತ್ತೊಂದು ಲಕ್ಷ್ಮಣನು ಬಿಟ್ಟುಹೋದನಂತರ ಗಂಗಾನದೀ ತೀರದಲ್ಲಿ ಮೂರ್ಛೆ ಹೋದ ಸೀತಾಮಾತೆಯನ್ನು ಸಂತೈಸಲೆಂದು ಬೀಸಿದ ತಂಗಾಳಿಯ ವರ್ಣನೆಯಲ್ಲಿ. ಸೀತೆ ಮೂರ್ಛೆ ಹೋದಾಗ ಆಚೆಯ ದಡದಿಂದ ಗಾಳಿ ಬೀಸಿ ಬಂದಿತಂತೆ, ಅವಸರದಿಂದ- ಸುರನದಿಯ ತೆರೆತೆರೆಯ ನಡುನಡುವೆ ಬಿದ್ದೆದ್ದು ಬರಲಾರದಿರ್ದೊಡಂ ಲೋಕದಲ್ಲಿ ಗಾಳಿ ಬೀಸುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಅದರಲ್ಲೇನು ವಿಶೇಷ ಎಂದು ಸುಮ್ಮನಿರುತ್ತೇವೆ. ಆದರೆ ಕಾವ್ಯಲೋಕದಲ್ಲಿ ಗಾಳಿ ಬೀಸುವ ಪರಿಯೇ ಬೇರೆ. “ಹೂವುಗಳನ್ನು ಸೆಂಡಾಡುತ್ತಾ, ತಳಿರನ್ನು ಅಲುಗಿಸುತ್ತಾ. ಮದದಾನೆಯಂತೆ ಗಾಳಿ ಬೀಸಿತು’ ಎಂದೋ, ವೇಶ್ಯಾವಾಟಿಯಲ್ಲಿ, ‘ತೀಡಿದುದು ವಲ್ಲಭನಂತಿರೆ ಮಂದಮಾರುತಂ’ ‘ಸಂಚರಿಪಂ ವಿಟನಂತೆ ಮಾರುತಂ’ – ಎಂದೋ ಕವಿಗಳು ವರ್ಣಿಸಿದ್ದಾರೆ. ಆದರೆ ಇಲ್ಲಿ ಗಾಳಿ ಬೀಸುತ್ತಿರುವುದು ಪುಣ್ಯಪಾವನ ಗಂಗಾನದಿಯ ದಡದಲ್ಲಿ; ಮೂರ್ಛಿತಳಾದ ಸೀತಾದೇವಿಯ ಪೂಜ್ಯ ಸನ್ನಿಧಿಯಲ್ಲಿ. ಗಾಳಿ ಗಂಗಾನದಿಯ ತೆರೆ ತೆರೆಯ ಮೇಲೆ ಬಿದ್ದು ಎದ್ದು ಬರುತ್ತಿದೆಯಂತೆ, ಆದರೆ ಗಂಗೆಯಲ್ಲಿ ಅರಳಿದ ಅರವಿಂದದ ಗಂಧವನ್ನೂ ಅದು ಹೊರಬೇಕಾಗಿ ಬಂದರೂ (ಹರಿಯುವ ಹೊಳೆಯಲ್ಲಿ ಕಮಲಗಳಿರಲು ಸಾಧ್ಯವಿಲ್ಲವಾದರೂ ಕವಿಯ ಕಾವ್ಯಲೋಕದ ನದಿಯಲ್ಲಿ ಕಮಲವರಳುವುದು ಅಸಂಭವಲ್ಲ!) ಸೀತಾದೇವಿಯ ದುಃಖವನ್ನು ಪರಿಹರಿಸದಿರಬಾರದೆಂದು ಗಾಳಿ ತರಹದಿಂದ ಬೀಸುತ್ತದೆ. ಇಲ್ಲಿನ ಗಾಳಿ ಬರಿ ಗಾಳಿಯಲ್ಲ; ಆರ್ತರನ್ನು ಕಂಡು ನೆರವಾಗುವ, ನೋವನ್ನು ನಿವಾರಿಸುವ ಒಂದು ಚೇತನ. ಇದನ್ನೂ ಸುಮ್ಮನೆ ಚೇತನಾರೋಪಣ (Pathetic fallacy) ಎಂದು ಹೇಳಿಬಿಡಬಹುದು ಯಾರಾದರೂ. ಆದರೆ ಅದು ಕವಿಯ ಅನುಭವದಲ್ಲಿ ‘ಆರೋಪಣೆ’ ಅಲ್ಲ. ಗಾಳಿಯಾಗಲೀ ಗಂಗಾನದಿಯಾಗಲೀ ಸೀತಾದೇವಿಯಾಗಲೀ ಈ ಸಂದರ್ಭದಲ್ಲಿ ಕವಿಯ ಅನುಭವದಲ್ಲಿ ಬೇರೆ ಬೇರೆ ಅಲ್ಲ. ಅಷ್ಟೇ ಅಲ್ಲ, ಮಹಾವ್ಯಕ್ತಿಗಳ ನೋವು ನಲವುಗಳಲ್ಲಿ ಪ್ರಕೃತಿ ತಟಸ್ಥವಲ್ಲ – ಎಂಬ ಸತ್ಯವನ್ನು ಹಿರಿಯ ಕವಿಗಳು ಬಲ್ಲರು. ಭೀಷ್ಮರ ಅವಸಾನದ ಸಮಯದಲ್ಲಿ ಕಂಡ ಸೂರ್ಯಾಸ್ತವನ್ನು ನಾರಣಪ್ಪನ ಅದ್ಭುತ ಪ್ರತಿಭೆ. ‘ಪಡುವಣ ಶೈಲ ವಿಪುಲ ಸ್ತಂಭ ದೀವಿಗೆಯಂತೆ ರವಿ ಮೆರೆದ’ ಎಂಬ ಒಂದು ರೂಪಕದಲ್ಲಿ ನೀಡುತ್ತದೆ. ನಮ್ಮ ಗ್ರಾಮ ಪರಿಸರದಲ್ಲಿ ಮರಣೋನ್ಮುಖರಾದವರ ಬದಿಯಲ್ಲಿ ದೀಪವನ್ನು ಹಚ್ಚಿಡುವುದು ತಿಳಿದ ಸಂಗತಿ. ಆದರೆ ದ್ವಾಪರ ಯುಗದ ಸತ್ವದ ಪ್ರತೀಕವಾದ ಭೀಷ್ಮರ ಅವಸಾನದ ಸಯಮದಲ್ಲಿ ಪ್ರಕೃತಿಯೇ ದೀವಿಗೆ ಹಚ್ಚಿತು. ಪಡುವಣ ಶೈಲವೇ ದೀಪಸ್ತಂಭವಾಯಿತು; ಮುಳುಗುವ ಸೂರ್ಯನೇ ಅದರ ತುದಿಗೆ ಹಣತೆಯಾಗಿ ನಿಂತ – ಎನ್ನುವ ಒಂದು ಚಿತ್ರದಲ್ಲಿ ಕವಿ ಪ್ರಕೃತಿವರ್ಣನೆಯ ಭವ್ಯತೆಯ ಜೊತೆಗೆ, ಭೀಷ್ಮರ ಮಹೋನ್ನತಿಯನ್ನು ಸೂಚಿಸಿದ್ದಾನೆ. ಈ ಬಗೆಯ ಪ್ರಕೃತಿ ಮಾನವ ತಾದಾತ್ಮ್ಯದ ಅನುಭವ ಹಿರಿಯ ಚೇತನಗಳಿಗೆ ಮಾತ್ರ ಸಾಧ್ಯ. ನಾವೂ ಈ ಲೋಕದ ವಸ್ತುಗಳೂ ಬಹುಕಾಲದ ಬಂಧುಗಳಾಗಿರುವುದರಿಂದಲೇ ನಾವು ಅವುಗಳನ್ನು ಕಂಡು ಅಷ್ಟೊಂದು ಆಸಕ್ತಿಯನ್ನು, ಪ್ರೀತಿಯನ್ನು ತಾಳುವುದು. ಈ ಒಂದು ಒಲವು ಇಂದಿನದಲ್ಲ, ನಿನ್ನೆಯದಲ್ಲ; ಜನ್ಮಾಂತರ ಸಂಬಂಧಿಯಾದುದು ಎನ್ನುವ ಅನುಭವವನ್ನು ಪಂಪ ವ್ಯಕ್ತಪಡಿಸಿದ್ದಾನೆ ಆದಿಪುರಾಣದಲ್ಲಿ. ವನವಿಹಾರಕ್ಕೆ ಹೋದ ಭರತೇಶನ ಅಂತಃ ಪುರದ ಹೆಣ್ಣುಗಳಲ್ಲೊಬ್ಬಳು ಮಾವಿನ ಮರವೊಂದನ್ನು ಹಿಡಿದು ಕ್ರೀಡೆಗಾಗಿ ಜಗ್ಗಿದ ಮೇಲೆ ತನ್ನ ಕಾರ್ಯಕ್ಕೆ ತಾನೇ ವ್ಯಥೆಗೊಂಡು ಹೀಗೆನ್ನುತ್ತಾಳೆ. ನೆಗಳ ಗೊಂಚಲನ್, ತಳಿರ ತೊಂಗಲನ್ ಆಡುವ ಚೆಲ್ವವನಪ್ಪ ಕೊಂ ಮಾವಿನ ಮೊಗ್ಗುಗಳ ಗೊಂಚಲನ್ನು, ಚಿಗುರಿನ ಜೊಂಪವನ್ನು, ಆಡುವ ಚೆಲುವಾದ ಮಿಡಿಗಳನ್ನು ಒಂದಿನಿತೂ ಕರುಣೆಯಿಲ್ಲದೆ ಕ್ರೂರಕರ್ಮದಿಂದ ಹರಿದು ನೋಯಿಸಿದೆ; ನೀನು ಇದೊಂದನ್ನೂ ನೆನೆಯದೆ ನಾನೂ ನೀನೂ ಒಂದಾಗಿ ಇದ್ದ ಪರಿಯನ್ನು ನೆನೆ, ಎಳೆಯ ಮಾವಿನಮರವೇ – ಎಂದು ಹೇಳುವ ಬೇಡಿಕೆಯಲ್ಲಿ, ಪಂಪನ ಅಂತಃಕರಣದ ಮಾರ್ದವತೆಯೂ, ಸಂಸ್ಕಾರವೂ ಕಾಣುತ್ತದೆ. ಪ್ರಕೃತಿಯ ಚೆಲುವನ್ನು ನಮ್ಮ ವಿನೋದದ, ಸುಖದ ವಸ್ತುವೆಂದು ನೋಡುವ ದೃಷ್ಟಿಗೆ ಈ ಕರುಣಾಂತಃಕರಣ ಇರುವುದಿಲ್ಲ. ಪ್ರಕೃತಿಯ ಸುಂದರವಾದ ವಸ್ತುಗಳೂ, ತಾನೂ ಬೇರೆ ಬೇರೆಯಲ್ಲ – ಎನ್ನುವ ಅದ್ವೈತ ದೃಷ್ಟಿಗೆ ಹೀಗೆ ತೋರುತ್ತದೆ. ಇಂದು ಕಣ್ಣೆದುರಿಗೆ ತೋರುವ ಮಾವಿನ ಮರವೂ ಮತ್ತು ತಾನೂ ಒಂದೇ ಚೈತನ್ಯದ ವಿವಿಧ ರೂಪಗಳು. ಹಿಂದೆ ಒಮ್ಮೆ ‘ಒಡನಿರ್ದು’ ಈಗ ಮರ – ಮಾನವ ಎಂಬ ಬೇರೆ ಬೇರೆ ರೂಪದಲ್ಲಿ ನಾನು ವ್ಯವಹರಿಸುತ್ತಿದ್ದೇನೆ ಎಂಬ ಒಂದು ದೈವೀ ಸೂತ್ರಾನುಭವದ ಭಾವನೆ[2] ಪಂಪನ ಮನಸ್ಸಿನಲ್ಲಿತ್ತೆಂದು ಊಹಿಸಬಹುದು. ಅಷ್ಟೇ ಅಲ್ಲ; ಸೌಂದರ್ಯಾನುಭವವೆಂದರೆ ಒಂದು ವಸ್ತುವನ್ನು ಕಾಡದೆ, ನೋಯಿಸದೆ, ನಮ್ಮ ಉಪಭೋಗದ ವಸ್ತುವನ್ನಾಗಿ ಬಳಸದೆ ಪ್ರೀತಿಸುವುದು – ಎನ್ನುವ ಅಂಶವನ್ನೂ ಕವಿ ಇಲ್ಲಿ ಸೂಚಿಸಿದ್ದಾನೆ. ವೃಕ್ಷಲತಾದಿಗಳ ಹೂವನ್ನು ಕೊಯ್ಯವುದು ಒಂದು ದೋಷವೆಂದೂ, ಅದು ನಿಜವಾದ ಸೌಂದರ್ಯಪ್ರಿಯತೆಯ ರೀತಿಯಲ್ಲವೆಂದೂ ಪಂಪನ ಭಾವನೆ. ಈ ಕಾರಣದಿಂದಲೇ ಉದ್ಯಾನದ ಹೂವುಗಳನ್ನು ತಮ್ಮ ಸಿಂಗಾರಕ್ಕೆ ಕೊಯ್ದ ಭರತ ಚಕ್ರಿಯ ಅರಮನೆಯ ಸ್ತ್ರೀಜನರು – ಪಡೆದು ಉತ್ತಂಸವತಂಸ ಶೋಭೆಗೆ ಭವತ್ ಬಾಲಪ್ರವಾಲೋಲ್ಲಸನ್ ಎಂದು ಕೇಳಿಕೊಳ್ಳುತ್ತಾರೆ. ನಾವು ಈ ನಮ್ಮ ಅಲಂಕಾರಗಳಿಗಾಗಿ ಹರಿದು ಕಿತ್ತೆವು ನಿಮ್ಮ ಎಳೆಯ ಚಿಗುರು ಹೂ ಗೊಂಚಲುಗಳನ್ನು. ಇನ್ನು ಆ ದೋಷವನ್ನು ಕ್ಷಮಿಸಿ – ಎಂದು ಉದ್ಯಾನದ ಮರಗಳನ್ನು ಬೇಡಿಕೊಂಡು ಅವುಗಳಿಗೆ ಗೌರವದಿಂದ ಪ್ರದಕ್ಷಿಣೆ ಹಾಕುವ ಹೆಣ್ಣು ಹೃದಯದ ಹಿಂದೆ ಪಂಪನ ಸೌಂದರ್ಯಧರ್ಮ ವ್ಯಕ್ತವಾಗುತ್ತದೆ. ತಾನು ಬೇರೆಯಲ್ಲ, ಸುತ್ತಲ ಪರಿಸರ ಬೇರೆಯಲ್ಲ ಎಂಬ ಅನುಭೂತಿಯನ್ನು ಪಡೆದ ಕವಿಯ ಕಣ್ಣಿಗೆ ಸೌಂದರ್ಯ ವಸ್ತುವಿನ ಕೇವಲ ಬಹಿರಂಗಗುಣವಲ್ಲ. ಅದೊಂದು ದೈವೀ ಪ್ರಕಾಶನ. ಈ ಚೈತನ್ಯಾತ್ಮಕವಾದ ಚೆಲುವನ್ನು ನಿರ್ಲಿಪ್ತವಾದ ಪರಿಭಾವನೆಯಿಂದ ಒಲಿಯಬೇಕೇ ಹೊರತು ಅದನ್ನು ನಮ್ಮ ಉಪಭೋಗದ ವಸ್ತುವೆಂಬಂತೆ ಭಾವಿಸುವುದು ಒಂದು ದೋಷ – ಎನ್ನುವ ಭಾವನೆಯನ್ನು ವ್ಯಕ್ತಪಡಿಸುತ್ತಾನೆ. ಮಾವಿನ ಮರಗಳನ್ನು ಕಂಡು ‘ಬಸದಿಯ ಬಾಗಿಲಂ ತೆರೆದ ಮಾಳ್ಕೆಯೊಳಿರ್ದುವು ಬಂದ ಮಾವುಗಳ್’ ಎನ್ನುವ ಅವನ ಮಾತಿನಲ್ಲೂ ಪ್ರಕೃತಿಯ ಚೆಲುವು ದಿವ್ಯ ಜಿನಸೌಂದರ್ಯದ ದೇಗುಲದಂತೆ ಕಾಣುತ್ತದೆ ಪಂಪನಿಗೆ. ಈ ಸುಸಂಸ್ಕೃತ ದೃಷ್ಟಿಯಿಂದ ಪಂಪನು ಇಂದ್ರಿಯ ಸೌಂದರ್ಯದಿಂದ ಆತ್ಮಸೌಂದರ್ಯದವರೆಗಿನ ವಿವಿಧ ಮಜಲುಗಳನ್ನು ಮುಟ್ಟಿದ್ದಾನೆ ಪ್ರಕೃತಿಯಲ್ಲಿಯೂ. ಪಂಪ ಕನ್ನಡ ಕವಿಗಳ ಸೌಂದರ್ಯ ದರ್ಶನದ ಅತ್ಯುತ್ತಮ ಪ್ರತಿನಿಧಿ – ಸಂಸ್ಕೃತಕ್ಕೆ ಕಾಳಿದಾಸನೆಂತೋ ಅಂತೆ. * * * [1] ಶ್ರೀ ದ. ರಾ. ಬೇಂದ್ರೆಯವರ – ‘ಗಿಡಗಂಟೆಯಾ ಕೊರಳೊಳಗಿಂದ ಹಕ್ಕಿಗಳ ಹಾಡು ಹೊರಟಿತು ಹಕ್ಕಿಗಳ ಹಾಡು’ ಎಂಬುದನ್ನು ನೆನೆಯಿರಿ. [2] ‘ನೀನುಂ ಆನುಂ ಒಡನಿರ್ದ ಇರವಂ ನೆನೆ’ – ಎಂದರೆ, ನಾನೂ ನೀನೂ ಕೆಲವು ಕಾಲ, ಈ ವನವಿಹಾರದ ನೆವದಲ್ಲಿ ಜೊತೆಯಲ್ಲಿ ಇದ್ದೆವು ಎನ್ನುವ ಸ್ನೇಹವನ್ನು ಮಾತ್ರ ನೆನೆ, ನಾನು ನಿನಗೆ ಮಾಡಿದ ಕೋಟಲೆಗಳನ್ನು ಮರೆತುಬಿಡು ಎನ್ನುವ ವಾಚ್ಯಾರ್ಥವೂ ರಮ್ಯವಾಗಿಯೇ ಇದೆ.
ಬೆಲರ್, ಇದಂ ಗೆಲಲ್ ಬಗೆವ ತುಂಬಿ, ಗಳಧ್ವನಿಯಿಂ ಕುಕಿಲ್ವ ಕೋ
ಗಿಲೆ, ನನೆದೋಱ ನುಣ್ಪೆಸೆವ ಮಾಮರ, ಒರ್ಮೊದಲಲ್ಲದೆ ಉಣ್ಮುವು
ಯ್ಯಲ ಪೊಸಗಾವರಂ ಪುಗಿಲೊಳೇನೆಸೆದತ್ತೊ ಬಸಂತಮಾಸದೊಳ್
(ಪಂಪ ಭಾರತ ೨-೧೨)
ಕುಸುಮರಸದುಬ್ಬರದ ತೊರೆಯನು ಕೂಡೆ ತುಂಬಿಗಳು.
ಒಸರ್ವ ಮಕರಂದದ ತುಷಾರದ ಕೆಸರೊಳದ್ದುವು ಕೊಂಚೆಗಳು, ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು
(ಆದಿಪರ್ವ ೬-೯)
ಚಂದ್ರಕಾಂತಿ ಕಾಯ್ಪಾಗಿರೆ
ಬೀಸುವೊಂದೆಲರೆ ಬೀಸುವುದಾಗಿರೆ
ಕಾಯ್ಗಳಿಂದಮಿಂಬಾಗಿರೆ
ಸೋರ್ವ ಸೋನೆ ಮದಮಾಗಿರೆ
ಮಾವಿನ ಬಂದ ಕೋಡೆ ಕೋಡಾಗಿರೆ
ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ.
(ಪಂಪ ಭಾರತ ೨.೧೫)
ಉರಿಯುಯ್ಯಲೆ ಕೈವೋದ ಅಸುಗೆ
ಕೋಕಿಲ ಧ್ವನಿ ಮೂದಲೆಯುಲಿಯಾಗೆ ಬಂದುದು ಬಸಂತಂ.
ಅಲರ್ವೋದ ಮಾವಿನ ಅಡಿಮಂಚಿಕೆಯೊಳ್
ಕುಸುರಿ ತಱದ ಅಡಗಿನಂತೆವೋಲ್ ಎಸೆದಿರ್ದುವು
ತದ್ ವನದೊಳ್ ಉದಿರ್ದ ಮುತ್ತದ ಮುಗುಳ್ಗಳ್.
(ಯಶೋಧರ ಚರಿತ್ರೆಯ ಸಂಗ್ರಹ : ೧-೯,೧೦)
ಬಟ್ಟ ಬಯಲೊಳ್ ಅಂಬರತಳದೊಳ್
ಕರಿಯ ಬಿಸಿಲ್, ಉರಿಯ ಬಿಸಿಲ್
ಅಚ್ಚರಿಯ ಬಿಸಿಲ್, ಪಿರಿಯ ಬಿಸಿಲ್
ಅಖಂಡಿತದ ಬಿಸಿಲ್
(ಗಿರಿಜಾ ಕಲ್ಯಾಣ ೯-೨೩)
ಗಸಮ್ ಅಳಿನೀಳ ನೀಳಗಳ ಕಂಠ ತಮಾಳ ವಿನೀಳ ನೀರದ –
ಪ್ರಸರ ವಿಭಾಸಿಯಾದುದು, ಸಮೀರನುದಾರ ಕದಂಬ ಕೇತಕೀ
ಪ್ರಸರ ರಜಸ್ವರ ಪ್ರಕಟ ಪಾಂಸುಳಮಾದುದು ಮೇಘಕಾಲದೊಳ್
(ಪಂಪಭಾರತ ೭-೨೨)
ಗಗನಾಭೋಗಮನೆಯ್ದಿ ನೀಳ್ದ ಘನವೇಣೀ ಬಂಧಮಂ ಬಿರ್ಚಿ ಮಿಂ-
ಚುಗಳೆಂಬುಳ್ಕುವ ದಾಡೆಗಳ್ ಪೊಳೆಯೆ ಚಂದ್ರಾದಿತ್ಯರಂ ನುಂಗಿ ಬೇ
ಸಗೆಯಂ ಬೆರ್ಚಿಸಿ ಗರ್ಜಿಸುತ್ತ ಒಗೆದಂ ಕಾರೆಂಬ ಕಾಳಾಸುರಂ
(ಮಲ್ಲಿನಾಥ ಪುರಾಣ, ೮-೯೪)
(ಆದಿಪರ್ವ, ೧೯-೧೮)
ಸುರಿವ ಸೊಂಡಿಲ ನೀರ್ಗರೆಯುತ ಬಂದುದು ಬಿರುಗಾಳಿ ಮದಗಜದಂತೆ –
(ಮೋಹನ ತರಂಗಿಣಿ ೪-೩೭)
ತಂದಲ್, ಸೋನೆ, ನಟ್ಟ ಬಡಪಮ್ ಎನಲ್ ಸುರಿದುವು ಮಳೆಗಳಿರುಳುಂ
ಪಗಲುಂ
(ಜಗನ್ನಾಥ ವಿಜಯ ೪-೩೨)
ಧರೆಯೊಳ್ ತೀವುತ್ತುಂ, ಕತ್ತಲಿಸುತ್ತುಂ, ಸುತ್ತುಂ ಜಿನುಗಿದುವು ಸೋನೆ ಇರುಳುಂ
ಪಗಲುಂ….
(ಗಿರಿಜಾ ಕಲ್ಯಾಣ, ೯-೫೦)
ಗಗನಂ ಘನೀಭೂತವಾದುದೆಂಬಂದದಿಂ
ಮಿಗೆ ತೀವಿ ಸೂಸಿತ್ತು ಸಲಿಲಮುತ್ಸಾಹದಿಂ
ಮಳೆಗರೆದುದಾಗಸಂ ಜಲವಾದುದೆಂಬಂತೆ
ಇಳೆ ಜಲದ ಮೇಲೆ ತೇಂಕಾಡಿದುದೊ ಎಂಬಂತೆ’
ಬಟ್ಟೆಗಳ್ ಅಸ್ಪಷ್ಟಮಾದುವು; ಆತ್ತ ಜಳದೊಳ್ ಪೂಳ್ದತ್ತು
ಧಾತ್ರೀತಳಂ; ಖಗಸಂಚಾರತೆ ಶೂನ್ಯವಾದುದು; ನಿರುದ್ಯೋಗಕ್ಕೆ
ಪಕ್ಕಾದುದೀ ಜಗಂ ಎಂಬಿನೆಗಂ ಕಟ್ಟಿ ಕರೆದತ್ತು ಆಸಾರಮ್
ಈ ಲೋಕದೊಳ್……
(ಗಿರಿಜಾ ಕಲ್ಯಾಣ ೯-೫೫)
ಕತ್ತಲೆ ಸೂರೆವೋದುದು ಹಗಲಿರುಳು ರವಿಶಶಿಗಳುಪಟಳಕೆ !
(ಆದಿಪರ್ವ, ೧೯-೩೮)
ನೆರೆದ ಕಾಮನಬಿಲ್ಗೆ ಬಿಳಿಯ ತಿರು ಬಿಗಿದಂತೆ’
(ಅನಂತನಾಥಪುರಾಣ, ೯-೧೮೯)
ಆಕಾಶಮಂಡಳಮಂ ಪರ್ವಿದ ಬೆಳ್ಮುಗಿಲ್,
ಮುಗಿಲ ಬೆಳ್ಪು ಒಳ್ಪೊಕ್ಕು ತಳ್ಪೊಯ್ಯೆ ಬಳ್ವಳನೀಳ್ದಿರ್ದ ದಿಶಾಳಿ
ಶಾಳಿವನ ಗಂಧಾಂಧ ದ್ವಿರೇಫಾಳಿ
ಕಣ್ಗೊಳಿಸಿತ್ತು ಒರ್ಮೆಯೆ ಬಂದುದು ಅಂದು ಶರದಂ
ಲೋಕಕ್ಕೆ ಕಣ್ ಬರ್ಪಿನಂ
(ಪಂಪ ಭಾರತ ೭.೭೧)
ನಗರಂ, ನಂದನಮ್ – ಎಂಬ ವಸ್ತುಗಳನ್ ಆರುಂ ಕಾಣದಂ
ತಾಗಿ ತೊಟ್ಟಗೆ ಕಣ್ ವಂಚಿಸಿ ನುಂಗಿ ತೋರ್ಪ ಚಪಲಂ ಹೇಮಂತನೆಂಬ
ಇಂದ್ರ ಜಾಲಿಗನಿರ್ದು ಊದಿದ ಧೂಮದಂತೆ ಅಸದಳಂ ಪರ್ಬಿತ್ತು ಮಂಜೆತ್ತಲುಂ.
(ಕ್ತಿ ಸುಧಾರ್ಣವ, ಪು.೨೭೭ ಪದ್ಯ ೨೩೯)
ನಿರ್ಲಿಪ್ತವಾಗಿ ಕಂಡು ಚಿತ್ರಿಸಿದ್ದಾನೆ ನೇಮಿಚಂದ್ರ, ತನ್ನ ನೇಮಿನಾಥಪುರಾಣದಲ್ಲಿ –
ಪೊಗೆವ ಚಿತಾಗ್ನಿ, ಪೊತ್ತುವ ಚಿತಾಗ್ನಿ, ಪೊದಳ್ವ ಚಿತಾಗ್ನಿ, ಬಾಂಬರಂ
ನಗೆವ ಚಿತಾಗ್ನಿ, ನಂದುವ ಚಿತಾಗ್ನಿ, ಕನಲ್ವ ಚಿತಾಗ್ನಿ, ಗಾಳಿಯಿಂ
ಮಗುಳ್ವ ಚಿತಾಗ್ನಿ, ಮುಗ್ಗುವ ಚಿತಾಗ್ನಿ, ಕಳಲ್ವ ಚಿತಾಗ್ನಿಯಲ್ಲಿಗ –
ಲ್ಲಿಗೆ ಪುದಿದಿರ್ದುವಾ ಮಸಣದೊಳ್ ವಿಲಯಾಗ್ನಿಯ ಬಿಟ್ಟ ಬೀಡುವೋಲ್
(ನೇಮಿನಾಥ ಪುರಾಣ, ೫.೨೩)
ಅಭಿನಯಂ ನೆಗಳ್ವಿನೆಗಂ
ಲಳಿತಮನೇನಾಡಿಸಿದನೋ
ಮಳಯಾನಿಳನರ್ತಕಂ ಲತಾನರ್ತಕಿಯಂ
ಅಂಕುರ ಪಲ್ಲವ ಕುಸುಮಾಲಂಕಾರದ ಚೂತಲತಿಕೆ
ನರ್ತಕಿಯೊಲ್
ತನ್ನಂಕುರದಿಂ ಶಾಖೆಯಿನೇನಂಕುರ ಶಾಖಾಭಿನಯಮನ್
ಅಭಿನಯಿಸಿದುದೋ !
(ಆದಿಪುರಾಣ ೧೧-೯೧, ೯೨)
ಮತ್ತೆ ಗಂಗೆಯೊಳಲರ್ದರವಿಂದ ಗಂಧದತಿ ಭಾರಮಂ ಪೊರಲಾರದಿರ್ದೊಡಂ
ಧರಣಿಸುತೆಯ ಪರಿತಾಪಮಂ ಪರಿಹರಿಸದಿರಬಾರದೆಂದು
ತರಹದಿನೊಯ್ಯೊಯ್ಯನೆಯ್ತಂದು ಬೀಸಿತು
ಸುಖಸ್ಪರುಶವಾತಂ….
(ಜೈಮಿನಿ ಭಾರತ, ೧೯-೩೫)
ಬಿನ ಮಿಡಿಯಂ ತೆರಳ್ಚಿ ತೆಗೆದು, ಓವದೆ ಕಾಯದೆ, ಕ್ರೂರಕರ್ಮದಿಂ
ಸೊನೆ ಸುರಿವನ್ನೆಗಂ ಪಱದು ನೋಯಿಸಿ ಕಾಡಿದೆವು, ಇನ್ನು ಅದೊಂದುಮಂ
ನೆನೆಯದೆ ನೀನುಂ ಆನುಂ ಒಡನಿರ್ದ ಇರವಂ ನೆನೆ ಬಾಳಚೂತಮೇ
(ಆದಿಪುರಾಣ ೧.೧೨೮)
ಮೃದುಪುಷ್ಪಸ್ತಬಕಂಗಳಂ ಪಱದೆವು. ಇನ್ನು ಆ ದೋಷಮಂ ಕೊಳ್ಳದಿ
ರ್ಪುದು ಕೇಳೀವನ ಪಾದಪಂಗಳಿರ, ಚಿತ್ತಂಗೊಂಡು ಬೀಳ್ಕೊಂಡು ರಾ
ಗದ ನಿಮ್ಮಂ ಬಲಂಗೊಂಡು ಪೋಪಗುಣಮಮ್ ಕೊಳ್ಳಿಂ ಮನಃ ಪ್ರೀತಿಯಿಂ
(ಆದಿ ಪುರಾಣ ೧೧-೧೩೦)
Leave A Comment