ಭಾರತದ ಇತಿಹಾಸದಲ್ಲಿ ಮಹಾರಾಣಾ ಪ್ರತಾಪನ ಹೆಸರು ಸದಾಕಾಲಕ್ಕೂ ಸಾಹಸ,ಶೌರ್ಯ, ತ್ಯಾಗ, ಬಲಿದಾನಗಳೀಗೆ ಪ್ರೇರಣೆಯನ್ನು ನೀಡುವಂತಹದ್ದಾಗಿದೆ.  ಮೇವಾಡದ ಶಿಸೋದಿಯಾ ವಂಶದಲ್ಲಿ ಬಪ್ಪಾರಾವಲ್, ಹಮ್ಮೀರ ಮತ್ತು ರಾಣಾ ಸಾಗರಂತಹ ಶೂರ,ವೀರ ರಾಜರು ಆಗಿ ಹೋದರು. ಅವರನ್ನೆಲ್ಲ “ರಾಣಾ” ಎಂದೇ ಸಂಭೋಧಿಸಲಾಗಿದೆ. ಆದರೆ” ಮಹಾರಾಣಾ” ಎಂದು ಕರೆಸಿಕೊಂಡವನೆಂದರೆ ಪ್ರತಾಪ ಒಬ್ಬನೇ.

ಮೊಗಲ ಸಾಮ್ರಾಟ ಅಕ್ಬರನ ಆಸೆ, ಅಮಿಷಗಳಿಗೆ ಕಾರಾಸ್ಥಾನಗಳಿಗೆ ಬಲಿಬಿದ್ದು, ಅನೇಕ ರಜಪೂತ ರಾಜರು ಅವನಿಗೆ ಶರಣಾಗತರಾದರು. ಕೆಲವರಂತೂ ಸುಖ ಜೀವನಕ್ಕೆ ಮಾರು ಹೋಗಿ ತಮ್ಮ ಮಾನವನ್ನೇ ಬಲಿಕೊಟ್ಟರು. ಸಮಸ್ತ ಭಾರತವೇ ಆತ್ಮಗೌರವ ಕಳೆದುಕೊಂಡಂತೆ ಕಾಣುತ್ತಿತ್ತು.

ಆಗ ಭಾರತದ ಪುಣ್ಯವೇ ಪುರುಷರೂಪ ತಳೆದಂತೆ, ಕ್ಷಾತ್ರ ತೇಜಸ್ಸೆ ಮೂರ್ತಿವೆತ್ತು ಬಂದಂತೆ, ಸ್ವಾತಂತ್ಯ್ರದ ಸೂರ್ಯ, ಭಾಗ್ಯ ರವಿ ಉದಯಿಸಿ ಬಂದಂತೆ, ಮೇವಾಡದ ಮಹಾರಾಣಾ ಪ್ರತಾಪನು ರಾಜಕೀಯ ಕ್ಷಿತಿಜದ ಮೇಲೆ ಕಾಣಿಸಿಕೊಂಡನು.

ಪ್ರಾರಂಭದ ಜೀವನ

ಸುಮಾರು ನಾಲ್ಕುನೂರ ಮೂವತ್ತೈದು ವರ್ಷಗಳ ಹಿಂದೆ ೧೫೪೦ರಲ್ಲಿ ಪ್ರತಾಪನು ಜನ್ಮವೆತ್ತಿದನು.

ಮೇವಾಡದ ರಾಣಾ ಉದಯಸಿಂಹನಿಗೆ ಇಪ್ಪತ್ತಮೂರು ಮಕ್ಕಳಿದ್ದರು. ಇವರಲ್ಲಿ ಪ್ರತಾಪನು ಹಿರಿಯನಾಗಿದ್ದನಲ್ಲದೇ ಗುಣಾಢ್ಯನೂ ಯೋಗ್ಯನೂ ಆಗಿದ್ದನು. ಬಾಲ್ಯದಲ್ಲಿಯೇ ಪ್ರತಾಪನು ಮಹಾಶೂರನೂ ಆಗಿದ್ದನು. ಬಾಲ್ಯದಲ್ಲಿಯೇ ಪ್ರತಾಪನು ಮಹಾಶೂರನೂ ಸ್ವಾಭಿಮಾನಿಯೂ ಆಗುವನೆಂಬ ಸೂಚನೆಗಳು ಕಂಡುಬಂದವು. ಬಾಲ್ಯದಲ್ಲಿ ಪ್ರತಾಪನ ಮನಸ್ಸು ಓದು ಬರಹಗಳ ಕಡೆಗೆ ಇರದೇ, ಆಟ ಪಾಠಗಳಲ್ಲಿ ಇರುತ್ತಿತ್ತು.  ಅವನು ತನ್ನ ತಮ್ಮ ಶಕ್ತಿಸಿಂಹನೊಂದಿಗೆ ದಿನವೆಲ್ಲ ಕಾಡ ಮೃಗಗಳ ಬೇಟೆಯಾಡುವುದರಲ್ಲಿಯೇ ಕಳೆಯುತ್ತಿದ್ದನು.

ಸಿಂಹಾಸನಾರೋಹಣ

ಆಗ ಭಾರತದಲ್ಲಿ ಮೊಗಲ ಬಾದಶಹ ಅಕ್ಬರ್ ಬಹು ಶಕ್ತಿಯುತನಾಗಿದ್ದನು. ಅವನು ಮಹಾ ಚತುರ. ಅವನು ಉಪಾಯದಿಂದ ಶೂರ, ವೀರ ರಜಪೂತ ರಾಜರೊಂದಿಗೆ ಸಖ್ಯ ಬೆಳೆಸಿ ಅವರಲ್ಲಿ ಹಲವರನ್ನು ತನ್ನ ಅಧೀನದಲ್ಲಿ ತೆಗೆದುಕೊಂಡನು. ಹೆಚ್ಚು  ಕಡಿಮೆ ಎಲ್ಲ ರಜಪೂತ ರಾಜರೂ ಅಕ್ಬರನ ಜೋಳದ ಪಾಳೆಗೆ ಕೈ ಒಡ್ಡಿದರು. ಹಲವರು ತಮ್ಮ ಮನೆತನದ ಹೆಣ್ಣು ಮಕ್ಕಳನ್ನು ಅಕ್ಬರನ ಅಂತಃಪುರಕ್ಕೆ ಕಳಿಸಿದ್ದರು.

ಆದರೆ ಮೇವಾಡ, ಬುಂದಿ ಮತ್ತು ಶಿರೋಹಿ ರಾಜ ಮನೆಗಳು ಕೊನೆಯವರೆಗೆ ಅಕ್ಬರನನ್ನು  ಅಪಮಾನವಾದಂತಾಯಿತು. ಅವನು ಕೂಡಲೇ ಬಹು ದೊಡ್ಡ ಸೇನೆಯನ್ನೂ  ಚಿತ್ತೂರಿನ ಮೇಲೆ ದಾಳಿ ಮಾಡಲು ಕಳಿಸಿದನು. ಉದಯಸಿಂಹನಲ್ಲಿ ಮೇವಾಡದ ಕಳೀಸಿದನು. ಉದಯಸಿಂಹನನಲ್ಲಿ ಮೇವಾಡದ ಮಾನ- ಮರ್ಯಾದೆಗಳನ್ನು ಕಾಪಾಡುವಷ್ಟು ಧೈರ್ಯ, ಶೌರ್ಯಗಳಿರಲಿಲ್ಲ. ಮೊದಲಿನಿಂದಲೂ ಅವನು ರಣಹೇಡಿಯೂ ವಿಲಾಸಿಯೂ ಆಗಿದ್ದನು. ದಾಳಿಯ ಸುದ್ಧಿಯನ್ನು ಕೇಳಿದ ಕೂಡಲೇ ಉದಯಸಿಂಹ ಓಡಿ ಹೋಗಿ ಅರಾವಳಿ ಬೆಟ್ಟಗಳಲ್ಲಿ ಬಿಡಾರ ಉದಯಸಿಂಹ ಓಡಿ ಹೋಗಿ ಅರಾವಳಿ ಬೆಟ್ಟಗಳಲ್ಲಿ ಬಿಡಾರ ಹೂಡಿದನು. ಅನಂತರ ಅದೇ ಸ್ಥಳದಲ್ಲಿಯೇ ಉದಯಪುರವೆಂಬ ರಾಜ ಧಾನಿಯನ್ನು ಕಟ್ಟಿಸಿದನು.

ಚಿತ್ತೂರಿನ ಯುದ್ದ ವಾದ ನಾಲ್ಕು ವರ್ಷಗಳ ಅನಂತರ ೧೫೭೨ರ ಮಾರ್ಚ ರಂದು  ಉದಯಸಿಂಹನು ತೀರಿಕೊಂಡನು.

ಉದಯಸಿಂಹನು ತನ್ನ ಕಿರಿಯ ರಾಣಿಯನ್ನು ಬಹಳ ಪ್ರೀತಿಸುತ್ತಿದ್ದನು. ಆದ್ದರಿಂದ ಸಾಯುವ ಮುನ್ನ ಪ್ರತಾಪನಿಗಿಂತಲೂ ಕಿರಿಯವನಾದ , ಕಿರಿಯ ರಾಣಿಯ ಮಗ ಜಗಮಲ್ಲನನ್ನು ತನ್ನ ಉತ್ತರಾಧಿಕಾರಿ  ಎಂದು ಸಾರಿದ್ದನು. ತಂದೆಯ ಇಚ್ಛಯ ಮೇರೆಗೆ ಪ್ರತಾಪನು ಸಿಂಹಾಸನವನ್ನು ತ್ಯಜಿಸಿ ಪ್ರಭು ಶ್ರೀರಾಮಚಂದ್ರನಂತೆ ಮೇವಾಡವನ್ನು ಬಿಟ್ಟು ಹೊಡಲುದ್ಯುಕ್ತನಾದನು. ಆದರೆ ಅಲ್ಲಿಯ ಸರದಾರರಿಗೆ ಇದು ಸರಿದೋರಲಿಲ್ಲ. ರಜಪೂತರ ಮೊದಲನೆಯ ಮಗ ತಂದೆಯ ನಂತರ ಸಿಂಹಾಸವನ್ನೇರುವುದು ವಾಡಿಕೆ. ಇದಲ್ಲದೇ ಜಗಮಲ್ಲನು ಪ್ರತಾಪನಂತೆ ಶೂರನು, ಸ್ವಾಭಿಮಾನಿಯೂ, ಸಾಹಸಿಯೂ ಆಗಿರಲಿಲ್ಲ. ಉದಯಸಿಂಹ ಸುಖಕ್ಕೆ ಆಸೆಪಟ್ಟುದ್ದರಿಂದಾಗಿ ಮೇವಾಡದ ಮಾನ- ಮರ್ಯಾದೆಗಳು ಮಣ್ಣು ಪಾಲಾದ್ದನ್ನು ಸರದಾರರೇ ಕಂಡಿದ್ದರು. ಇಂತಹ ದುರ್ಭರ ಪ್ರಸಂಗದಲ್ಲಿ ಜಗಮಲ್ಲನಿಂದ ಮೇವಾಡದ ರಕ್ಷಣೆಯಾಗುತ್ತದೆಂಬ ಭರವಸೆ ಯಾರಿಗೂ ಇರಲಿಲ್ಲ.

ಆದ್ದರಿಂದ ಮೇವಾಡದ ನಿಷ್ಠಾವಂತ ಸರದಾರರು ಸಭೆ ಸೇರಿ ಪ್ರತಾಪನಿಗೆ ಪಟ್ಟ ಕಟ್ಟಬೇಕೆಂದೂ ಜಗಮಲ್ಲನು ಸಿಂಹಾಸನವನ್ನು ತ್ಯಜಿಸಬೇಕೆಂದೂ ನಿರ್ಧರಿಸಿದರು.

ತಂದೆ ಇಚ್ಛೆಯನ್ನು ನಡೆಸಬೇಕೆಂದೇ ಪ್ರತಾಪನ ತೀರ್ಮಾನ. ಆದರೆ ಸರದಾರರೆಲ್ಲರೂ ಸೇರಿ, ರಜಪೂತರ ಸ್ವಾತಂತ್ಯ್ರ-ಗೌರವಗಳು ಉಳಿಯಬೇಕಾದರೆ ಅವನೇ ಸಿಂಹಾಸನವನ್ನು ಏರಬೇಕೆಂಬುದು ಮನದಟ್ಟು ಮಾಡಿಕೊಟ್ಟರು. ಪ್ರತಾಪನಿಗೆ ಪಟ್ಟಾಭಿಷೇಕವಾಯಿತು.

ವೀರ ಪ್ರತಿಜ್ಞೆ

ರಾಣಾ ಪ್ರತಾಪನು ಸಿಂಹಾಸನವನ್ನೇರಿದಾಗ ಪರಿಸ್ಥಿತಿ ಪ್ರತಿಕೂಲವಾಗಿತ್ತು. ಸುತ್ತಮುತ್ತಲೂ ಹಗೆಗಳಿರು. ದುರ್ದೈವದಿಂದ ಮಾತೆಂದರೆ ಅವನ ಒಡಹುಟ್ಟಿದ ಸಹೋದರರಾದ ಶಕ್ತಿ ಸಿಂಹ ಹಾಗೂ ಜಗಮಲ್ಲ ಇಬ್ಬರು ಮೊಗಲರೊಂದಿಗೆ ಕೂಡಿಕೊಂಡಿದ್ದರು. ಸುಸಜ್ಜಿತ ಸೈನ್ಯವನ್ನು ಕಟ್ಟಬೇಕೆಂದರೆ ಅದಕ್ಕೆ ಅಪಾರ ಧನರಾಶಿಯ ಅವಶ್ಯಕತೆ ಇತ್ತು. ಪ್ರತಾಪನ ರಾಜ್ಯ ಭಂಡಾರ ಚಿತ್ತೂರಿನಲ್ಲಿತ್ತು.  ಅದು ಈಗ ಮೊಗಲರಿಗೆ ಸೇರಿತು. ಇಂತಹ ಸಂಕಟದ ಸಮಯದಲ್ಲಿಯೂ ರಾಣಾ ಪ್ರತಾಪ  ಯಾವುದಕ್ಕೂ ಅಂಜಲಿಲ್ಲ.  ಅದು ಈಗ ಮೊಗಲರಿಗೆ ಸೇರಿತ್ತು. ಇಂತಹ ಸಂಕಟದ ಸಮಯದಲ್ಲಿಯೂ ರಾಣಾ ಪ್ರತಾಪ  ಯಾವುದಕ್ಕೂ  ಅಂಜಲಿಲ್ಲ. ಅಳುಕಲಿಲ್ಲ. ಅವನೆಂದೂ “ಅಕ್ಬರನ ಹತ್ತಿರ ಅಪಾರ ಸೈನ್ಯವಿದೆ, ನನ್ನಲ್ಲಿ ಇಲ್ಲ” ಎಂದು ಕೊರಗಲಿಲ್ಲ.

ರಾಣಾಪ್ರತಾಪ ಯಾವಾಗಲೂ ತನ್ನ ಮಾತೃಭೂಮಿ ಮೇವಾಡವನ್ನು  ಮೊಗಲರಿಂದ ಸ್ವತಂತ್ರಗೊಳಿಸುವ ವಿಚಾರದಲ್ಲಿಯೇ ತೊಡಗಿರುತ್ತಿದ್ನು. ರಜಪೂತ್ ಶ್ರದ್ದಾ ಕೇಂದ್ರವೆನಿಸಿದ ಪರಮಪವಿತ್ರ ಚಿತ್ತೂರಿನ ಕೋಟೆ ಹಾಳಾಗುತ್ತಿರುವುದನ್ನು ಕಂಡು ಮಮ್ಮಲ ಮರಗುತ್ತಿದ್ದನು.

ಒಂದು ದಿನ ರಾಣಾ ಪ್ರತಾಪ ಓಲಗವನ್ನು ಸಿಂಗರಿಸಿ ತನ್ನ ನಂಬಿಕೆಯ ಸರದಾರರೆಲ್ಲರೂ ಕರೆಯಿಸಿದನು. ಅವನು ಅವರನ್ನು ಕುರಿತು: “ನನ್ನ ಶೂರ,ಧೀರ ರಜಪೂತ ಸಹೋದರರೇ! ಇಂದು ನಮ್ಮ ಮಾತೃಭೂಮಿ, ಪುಣ್ಯ ಭೂಮಿ ಮೇವಾಡವು ಯವನರ ಅಧೀನಕೂಟಕ್ಕೊಳಪಟ್ಟಿದೆ. ಇದೇ ಮೇವಾಡವನ್ನು ರಕ್ಷಿಸಲು ನಮ್ಮ ಪೂರ್ವಜರಾದ ಬಪ್ಪರಾವಲ್, ಬಾಮಾನ ಮತ್ತು ರಾಣಾಸಾಂಗ ಮುಂತಾದವರು ನಗುನಗುತ್ತಾ ತಮ್ಮ ಪ್ರಾಣಗಳನ್ನೇ ಅರ್ಪಿಸಿ ಮಾತೆಯ ಮಡಿಲಲ್ಲಿ ಮಲಗಿದರು. ರಜಪೂತ ಮಹಿಳಾಮಣಿಗಳೂ ತಮ್ಮ ಮಾನ ರಕ್ಷಣೆಗಾಗಿ ಉರಿಯುತ್ತಿರುವ ಬೆಂಕಿಯಲ್ಲಿ ಹಾರಿ ಪ್ರಾಣ ಕೊಡುತ್ತಿದ್ದರು. ಆದರೆ ಇಂದು ನಮ್ಮ ತೋಳುಗಳಲ್ಲಿ ಮೇವಾಡವನ್ನು ಪುನಃ ಸ್ವತಂತ್ಯ್ರಗೊಳಿಸುವ ಶಕ್ತಿ, ಸಾಮರ್ಥ್ಯಗಳನ್ನು ಇಲ್ಲವೇ? ನಮ್ಮ ಪೂರ್ವಜರ ಹೆಸರೆತ್ತಿದ್ದರೆ ಶತ್ರುಗಳ ನಿದ್ರೆ ಹಾರಿಹೋಗುತ್ತಿತ್ತು. ಇಂದು ನಮಗೇನಾಗಿದೆ? ಇಂದು ನಾನು ತಮ್ಮೆದುರಿನಲ್ಲಿ ಈ ವೀರ ಪ್ರತಿಜ್ಞೆ ಮಾಡುತ್ತೇನೆ. ಚಿತ್ತೂರನ್ನು ಗೆಲ್ಲುವವರೆಗೂ ಬೆಳ್ಳೀ, ಬಂಗಾರದ ಪಾತ್ರೆಗಳಲ್ಲಿ ಊಟ  ಮಾಡುವುದಿಲ್ಲ,  ಮೃದುವಾದ ಹಾಸಿಗೆ ಮೇಲೆ ಮಲಗುವುದಿಲ್ಲ ಮತ್ತು ಅರಮನೆಗಳಲ್ಲಿ ವಾಸಿಸುವುದಿಲ್ಲ. ಇದರ ಬದಲಾಗಿ ಎಲೆಯಲ್ಲಿ ಊಟಮಾಡುತ್ತೇನೆ, ನೆಲದ ಮೇಲೆ ಮಲಗುತ್ತೇನೆ, ಗುಡಿಸಲಿನಲ್ಲಿ ವಾಸಮಾಡುತ್ತೇನೆ ಮತ್ತು ಚಿತ್ತೂರನ್ನು ಗೆಲ್ಲುವವರೆಗೂ ಗಡ್ಡ ಮೀಸೆಗಳನ್ನು ಕತ್ತರಿಸುವುದಿಲ್ಲ. ಶೂರ ಶಿರೋಮಣಿಗಳೆನ್ನೆಸಿದ ತಾವೆಲ್ಲರೂ  ಈ ಪ್ರತಿಜ್ಞೆ  ಈಡೇರಲು ಎಲ್ಲ ರೀತಿಯಿಂದ ಸಹಾಯ ನೀಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇನೆ, ಎಂದು ವೀರ ಪ್ರತಿಜ್ಞೆ ಮಾಡಿದನು.

ರಾಣಾ ಪ್ರತಾಪನ ಮಾತುಗಳು ಸರದಾರರಲ್ಲಿ ಹುಮ್ಮಸ್ಸಿನ ಹೊಳೆಯನ್ನೆ ಹರಿಸಿದವು. ಅವರು ಸ್ಫೂರ್ತಿಯಿಂದ ಒಂದೇ ಧ್ವನಿಯಲ್ಲಿ ಹೇಳಿದರು. “ಪ್ರಭುಗಳೇ , ನಮ್ಮ ದೇಹದಲ್ಲಿ ರಕ್ತದ ಕೊನೆಯ ಹನಿ ಇರುವವರೆಗೂ ನಾವು ಚಿತ್ತೂರಿನ ವಿಮೋಚನೆಗಾಗಿ  ಹೋರಾಡುವೆವು”.

ಯುದ್ದದ ಸಿದ್ದತೆ

೧೫೭೬ರಲ್ಲಿ ಅಕ್ಬರ್ ಅಪಾರ ಸಂಪತ್ತುಳ್ಳ ಬಾದಶಹನಾಗಿದ್ದನು. ಅವನ ಸೈನ್ಯಶಕ್ತಿ ಅಪಾರವಾಗಿತ್ತು.  ಭಾರತದ ಬಹು ವಿಸ್ತಾರವಾದ ಭೂಭಾಗವು ಅವನ ಆಳ್ವಿಕೆಗೆ ಒಳಪಟ್ಟಿತ್ತು. ಇಂತಹ ಪ್ರಬಲ ಶತ್ರುವನ್ನು ಎದುರಿಸುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಕೋಟೆ ಕೊತ್ತಲಗಳಲ್ಲಿ ಕುಳಿತುಕೊಳ್ಳುವುದು ನಿರುಪಯುಕ್ತವಾಗಿತ್ತು.  ಈ ಎಲ್ಲ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡ ವ್ಯವಹಾರ ಕುಶಲವಾದ ಮಹಾರಾಣಾ ಪ್ರತಾಪ ಕೋಟೆ-ಕೊತ್ತಗಳನ್ನು ಬಿಟ್ಟು ಗಿರಿ-ಕಂದರ ಹಾಗೂ ಕಡಿದಾದ ಮಾರ್ಗಗಳಲ್ಲಿ ಅವಿತುಕೊಂಡು ಹೋರಾಡುವ ಯುದ್ಧ ತಂತ್ರವೇ ಸರಿ ಎಂದು ನಿಶ್ಚಯಿಸಿದನು.

ಚಿತ್ತೂರನ್ನು ಗೆಲ್ಲುವವರೆಗೂ ಮೃದುವಾದ ಹಾಸಿಗೆಯ ಮೇಲೆ ಮಲಗುವುದಿಲ್ಲ.

ಮಹಾರಾಣಾ ಆಗ ತನ್ನ ಸಂಗಡಿಗರೊಂದಿಗೆ ಕಮಲ ಮೇರ್ ದುರ್ಗದಲ್ಲಿ ವಾಸಿಸುತ್ತಿದ್ದನು. ಈದುರ್ಗವು ಬಹು ಎತ್ತರವಾದ ಗಿರಿ ಕಂದರಗಳ ಮಧ್ಯದಲ್ಲಿತ್ತು. ಈಗ ಗಿರಿ-ಕಂದರಗಳ  ಪರಿಚಯವಿದ್ದ ಪರಾಕ್ರಮಶಾಲಿ ರಜಪೂತರು ಮಾತ್ರ ಅಲ್ಲಿಗೆ ನಿರಾಯಾಸವಾಗಿ ಹೋಗಿಬರುತ್ತಲ್ಲಿದ್ದರು. ಉಳಿದವರು ಅಲ್ಲಿಗೆ ಮುಟ್ಟುವುದು ಪ್ರಯಾಸದ ಕೆಲಸವಾಗಿತ್ತು. ಮಹಾರಾಣಾ ಪ್ರತಾಪ ನಿಧಾನವಾಗಿ ಈ ದುರ್ಗದಲ್ಲಿ ಸೈನ್ಯವನ್ನು ಕೂಡಿಸತೊಡಗಿದನು. ಆದರ ಆತನ ಹತ್ತಿರ ಸುಸಜ್ಜಿತವಾದ ಶಸ್ತ್ರಾಸ್ತ್ರಗಳು ಇರಲಿಲ್ಲ ಮತ್ತು ಅವುಗಳನ್ನು ಸಂಗ್ರಹಿಸಲು ಸಾಕಷ್ಟು ಧನರಾಶಿಯೂ ಈರಲಿಲ್ಲ. ರಾಜ್ಯದ ಬೊಕ್ಕಸ ಬರಿದಾಗಿತ್ತು. ಮೇವಾಡದ ಮಾರ್ಗವಾಗಿ ಹೋಗುತ್ತಿದ್ದ ಶ್ರೀಮಂತ ಮೊಗಲ ವ್ಯಾಪಾರಿಗಳನ್ನು ಕೊಳ್ಳೆ ಹೊಡೆಯಲು ಪ್ರತಾಪನು ಅಪ್ಪಣೆ ಮಾಡಿದನು.

ಈ ಲೂಟಿ ಹಾಗೂ ಸುಲಿಗೆಯಿಂದ ಪ್ರತಾಪನಿಗೆ ಸಾಕಷ್ಟು ಸಿರಿಸಂಪತ್ತು , ಬೆಲೆಬಾಳುವ ಸಾಮಾನುಗಳು ಮತ್ತು ಸುಸಜ್ಜಿತವಾದ ಶಸ್ತ್ರಾಸ್ತ್ರಗಳು ದೊರೆತವು.

ಸ್ವಾಭಿಮಾನದ ಪ್ರತೀಕ

ಈ ದಿನಗಳಲ್ಲಿಯೇ ಪ್ರತಾಪನ ಓಲಗಕ್ಕೆ ಸೀತಲನೆಂಬ ಭಾಟ ಕವಿಯೋರ್ವನು ಆಗಮಿಸಿದನು. ಅವನು ಮಹಾರಾಣಾ ಪ್ರತಾಪನ ಬಗ್ಗೆ ಒಂದು ಸುಂದರವಾದ ಕತೆಯನ್ನು ರಚಿಸಿ ಹಾಡಿದನು.  ಅದರಲ್ಲಿ ಮಹಾರಾಣಾನ ಸ್ವಾಭಿಮಾನ, ಶೌರ್ಯ, ಸಾಹಸಗಳನ್ನು ವರ್ಣಿಸಲಾಗಿತ್ತು.  ಇದನ್ನು ಕೇಳಿ ಪ್ರತಾಪನಿಗೆ ಸಂತೋಷವಾಯಿತು. ಅವನು ಕೂಡಲೇ ತನ್ನ ಪಗಡಿಯನುನ ಕವಿಗೆ ಬಹುಮಾನವಾಗಿ ಕೊಟ್ಟನು. ಕವಿ ಪ್ರತಾಪನ ಗುಣಗಾನ  ಮಾಡುತ್ತ ಹೊರಟು ಹೋದನು.

ಕವಿ ಸೀತಲ ಊರಿಂದ ಊರಿಗೆ ಅಲೆದಾಡುತ್ತ ಒಂದು ದಿನ ಅಕ್ಬರನ ದರ್ಬಾರಿಗೆ ಬಂದನು. ದರ್ಬಾರ ನೆರದಿತ್ತು.  ಅಕ್ಬರ್ ಸಿಂಹಾಸನದ ಮೇಲೆ ವಿರಾಜಮಾನನಾಗಿದ್ದ.  ದರ್ಬಾರಿನ ನಿಯಮದಂತೆ ಕವಿಗೆ ನಮಸ್ಕಾರ ಮಾಢಿದ. ಅದರೆ ಒಂದು ಕೈಯಲ್ಲಿ ತನ್ನ ಪಗಡಿಯನ್ನು ಹಿಡಿದುಕೊಂಡಿದ್ದನು.

ಅಕ್ಬರ ಸೀತಲ ಕವಿಗೆ ಇದರ ಕಾರಣವನ್ನು ಕೇಳೀದ. ಸೀತಲ ಕವಿ ಹೆಮ್ಮೆಯಿಂದ ಹೇಳಿದ: “ಮೊಗಲ ಪ್ರಭುಗಳೇ ಈ ಅಮೂಲ್ಯವಾದ ಪಗಡಿಯನ್ನು ಮೇವಾಡದ ಮಹಾರಾಣಾ ಪ್ರತಾಪರವರು ಕರುಣಿಸಿದ್ದಾರೆ. ಇದು ಭರತವರ್ಷದಲ್ಲೆಲ್ಲ ಶೌರ್ಯ, ಸ್ವಾಭಿಮಾನ ಮತ್ತು ದೇಶಭಕ್ತಿಯ ಪ್ರತೀಕವಾಗಿದೆ”.

ಅಕ್ಬರನೂ ದರ್ಬಾರಿನಲ್ಲಿದ್ದವರೂ ಈ ಮಾತುಗಳನ್ನು ಕೇಳೀ ಬೆರಗಾದರು.

ಮಾನಸಿಂಹನ ಮಾನಭಂಗ

ರಾಜಾ ಮಾನಸಿಂಹನು ಜಯಪುರದ ಮಹಾರಾಜ ಬಿಹಾರಿಮಲ್ಲನ ಮಗನು. ಬಿಹಾರಿಮಲ್ ನೇ ಮೊಟ್ಟ ಮೊದಲು ತನ್ನ ಮಗಳನ್ನು ಅಕ್ಬರನಿಗೆ ಒಪ್ಪಿಸಿದ ರಜಪೂತನಾಗಿದ್ದನು. ಅವನ ಮಗ ಮಾನಸಿಂಹನು ಮಹಾಶೂರ , ತೇಜಸ್ವಿ. ಅಕ್ಬರನು ತನ್ನ ಅರ್ಧರಾಜ್ಯವನ್ನು ರಾಜಾ ಮಾನಸಿಂಹನ ಬಲದಿಂದಲೇ ಸಂಪಾದಿಸಿದ್ದನು. ಅಕ್ಬರನು ಮಾನಸಿಂಹನನ್ನು ತನ್ನ ಸೇನಾಧಿಪತಿಯನ್ನಾಗಿ ಮಾಡಿದ್ದನು.

ಮಹಾರಾಣಾ ಪ್ರತಾಪ ಪಟ್ಟಕ್ಕೆ ಬಂದ ಕೆಲವು ದಿನಗಳಲ್ಲಿಯೇ ರಾಜಾ ಮಾನಸಿಂಹನು ಉದಯಪುರಕ್ಕೆ  ತೆರಳಿ ಮಹಾರಾಣಾ ಪ್ರತಾಪನನ್ನು ಕಂಡು ಬರಬೇಕೆಂದು ಅಕ್ಬರನು ಆಜ್ಞೆ ಮಾಢಿದನು. ಮಹಾರಾಣಾ ಮೊಗಲರಿಗೆ ಶರಣು ಬರುವಂತೆ ಮನವೊಲಿಸಲು ಸಕಲ ರೀತಿಯಿಂದ ಪ್ರಯತ್ನಿಸಬೇಕೆಂದು ಕಟ್ಟಪ್ಪಣೆ ಮಾಡಿದನು.

ರಾಜಾಮಾನಸಿಂಹ ಮೊದಲು ಜಯಪುರಕ್ಕೆ ಹೋದ. ಮರುದಿನ ಒಬ್ಬ ದೂತನನ್ನು ಮಹಾರಾಣಾ ಪ್ರತಾಪನ ಬಳೀಗೆ ಕಳೂಹಿಸಿ, ತಾನು ಮಹಾರಾಣಾ ಅವರನ್ನು ಭೇಟಿಯಾಗಬೇಕೆಂದು ಬಯಸುವುದಾಗಿ ಹೇಳಿಕಳೂಹಿಸಿದ.  ಮಹಾರಾಣಾ ಪ್ರತಾಪನಿಗೆ, ಮಾನಸಿಂಹನೆಂದರೆ ಮಹಾದ್ವೇಷ. ಅವನ ಮುಖವನ್ನು ನೋಡುವ ಇಷ್ಟವಿರಲಿಲ್ಲ. ಆಧರೆ ರಜಪೂತರಿಗೆ ಅತಿಥಿ ಸತ್ಕಾರ ಹಿರಿಯ ಧರ್ಮ. ತನ್ನ ಮನೆಗೆ ಬರುತ್ತೇನೆಂದವನನ್ನು ಗೌರವದಿಂದ ಕಾಣದೆ ಇರುವಂತಿಲ್ಲ.

ಮಹಾರಾಣಾ  ತನ್ನ ಕುವರ ಅಮರಸಿಂಹನನ್ನು ರಾಜಾ ಮಾನಸಿಂಹನ ಆದರಾತಿಥ್ಯವನ್ನು ನೋಡಿಕೊಳ್ಳಲು ನಿಯಮಿಸಿದನು.

ಊಟದ ಸಮಯವಾಯಿತು. ಅಮರಸಿಂಹ ಮಾನ ಸಿಂಹನನ್ನು ಅಹ್ವಾನಿಸಿದ.  ಆದರೆ ಮಹಾರಾಣಾ ಪ್ರತಾಪ ಕಾಣಲಿಲ್ಲ. ಮಾನಸಿಂಹ, “ಕುಮಾರಾ, ಮಹಾರಾಣಾರವರು ಎಲ್ಲಿದ್ದಾರೆ?” ಎಂದು ಕೇಳೀದ. ಕೂಡಲೇ ಅಮರಸಿಂಹ ಉತ್ತರಿಸಿದ. “ಮಹಾರಾಜರೇ, ಈಗ ರಾಣಾ ಅವರಿಗೆ ಅಸ್ವಸ್ಥತೆ ಯುಂಟಾಗಿದೆ. ಆದ್ದರಿಂದ ಅವರಿಂದು ಇಲ್ಲಿಗೆ ಬಂದಿಲ್ಲ. ಇಲ್ಲಿಗೆ ಬರಲು ಆಗದೆಯಿರುವುದಕ್ಕೆ ಅವರು ತಮ್ಮಲ್ಲಿ ಕ್ಷಮೆಯನ್ನು ಕೋರಿದ್ದಾರೆ”.

ಮಾನಸಿಂಹ ಕೇಳೀದ:” ಮನೆಯ ಒಡೆಯನೇ ಇಲ್ಲದಿರುವಾಗ, ಮನಗೆ ಬಂದ ಅತಿಥಿಯೂ ಊಟ ಮಾಡುವುದಾದರೂ ಹೇಗೆ?

ಅಮರಸಿಂಹ ನಮ್ರತೆಯಿಂದ ಉತ್ತರವಿತ್ತ: “ನಾನು ತಮ್ಮೊಂದಿಗೆ  ಇರುವೆನು. ತಮ್ಮ ಜೊತೆಗೆ ಊಟ ಮಾಡುವೆನು ಮಹಾರಾಜರೇ”.

ರಾಜಾ ಮಾನಸಿಂಹನ ಮುಖದ ಕಳೆ ಕಟ್ಟಿತು. ಅವನು ಹೇಳೀದ. “ಒಳ್ಳೆಯದು ಕುಮಾರಾ, ಇದರ ಒಳಗುಟ್ಟು ನನಗೆ ತಿಳಿದಿದೆ. ಮಹಾರಾಣಾ ಪ್ರತಾಪ ಅಅವರಿಗೆ ನನ್ನೊಂದಿಗೆ ಊಟ ಮಾಡಲು ಇಷ್ಟವಿಲ್ಲ”.

“ತಾವು ಹೀಗೆ ಹಟಮಾಬಾರದು, ಮಾನಸಿಂಹಜೀ. ಅವರಿಗೆ ಆರೋಗ್ಯ ಸರಿಯಿಲ್ಲ ಈಗ ಆವರು ಊಟ  ಮಾಡುವುದಾದರೂ ಹೇಗೆ?” ಅಮರಸಿಂಹ ಮಾತು ಮುಂದುವರೆಸಿದ.

ಮಾನಸಿಂಹ ನೊಂದ ನುಡಿಯಲ್ಲಿ ಹೇಳಿದ:” ಅವರ ಮೈಯಲ್ಲಿ ಚೆನ್ನಾಗಿರುವ ವಿಷಯ  ಈಗಾಗಲನೇ ನನಗೆ ತಿಳೀದಿದೆ ಅಮರಸಿಂಹ. ಅವರು ಬಂದು ನನ್ನೊಂದಿಗೆ ಊಟ ಮಾಡಿದರೆ ಮಾತ್ರ ನಾನು ಊಟ ಮಾಡುವೆನು. ಇಲ್ಲವಾದರೆ ನಾನು ಹಾಗೆಯೇ ಇಲ್ಲಿಂದ ತೆರಳುವೆನು”.

ಕೊನೆಗೆ ಮಹಾರಾಣಾ ಪ್ರತಾಪನ ಅರಮನೆಯಿಂದ ಬಂದನು. ಮಾನಸಿಂಹನಿಗೆ ಹೇಳಿದ:”ಮಾನಸಿಂಹ, ನಿಮ್ಮ ಜೊತೆಗೆ ನಾನು ಊಟ ಮಾಡುವುದಿಲ್ಲ. ಈ ಮಾತನ್ನು  ಬಹು ದುಃಖದಿಂದ  ಹೇಳುತ್ತಿದ್ದೇನೆ. ಏಕೆಂದರ ನೀವು ರಜಪೂತರ ಮಾನ, ಮರ್ಯಾದೆಗಳನ್ನು ಮಣ್ಣೂ ಪಾಲು ಮಾಡಿರುವಿರಿ. ಸಿರಿ, ಸಂಪತ್ತು, ರಾಜವೈಭವ ಮತ್ತು ಪ್ರತಿಷ್ಠೆಗಾಗಿ ನಿಮ್ಮ ಹೆಣ್ಣು ಮಕ್ಕಳನ್ನು ಮದುವೆಮಾಡಿ ಕೊಟ್ಟಿರಿ. ನಾನು ನಿಮ್ಮೊಂದಿಗೆ ಊಟ ಮಾಡಿ ಬಪ್ಪರಾವಲ್, ರಾಣಾಸಾಂಗ ಮುಂತಾದ ಪವಿತ್ರಾತ್ಮರ ವಂಶಕ್ಕೆ ಕಲಂಕ ಹಚ್ಚಬೇಕೆನ್ನುವಿರಾ?”

ಮಾನಸಿಂಹ ಅವಮಾನದಿಂದ ಉರಿಯತೊಡಗಿದ. ಅವನ ಶಕ್ತಿ ಎಲ್ಲಾ ಉಡುಗಿಹೋದಂತಾಯಿತು. ನಿರ್ವಾಹವಿಲ್ಲೆ ಅವನು ತನ್ನೆಲ್ಲ ಶಕ್ತಿಯನ್ನು ಒಂದುಗೂಡಿಸಿ ಮೇಲಕ್ಕೆದ್ದು ನಿಂತ. ಅನ್ನಪೂರ್ಣೆಗೆ ದ್ರೋಹ ಬಗೆಯಬಾರದೆಂಬ ವಿಚಾರ ಕೂಡಲೇ ಅವನಿಗೆ ಹೊಳೆಯಿತು. ಆಗ ಅವನು ನಾಲ್ಕಾರು ಅನ್ನದ ಅಗಳುಗಳನ್ನು ಕಟ್ಟಿಕೊಂಡ.

ಮಾನಸಿಂಹ ತನ್ನ ಕುದುರೆಯನ್ನೇರಿ ಕುಳಿತು ಪ್ರತಾಪನಿಗೆ ಹೇಳಿದ: “ಮಹಾರಾಣಾ ಪ್ರತಾಪಸಿಂಹ! ಇಂದು ನೀವು ನನ್ನನ್ನು ಅವಮಾನಗೊಳಿಸಿರುವಿರಿ. ಇದರ ಸೇಡನ್ನು ತೀರಿಸಿಕೊಳ್ಳದೇ ಬಿಡೇನು. ಆಗ ನಿಮಗೆ ಮಾನಸಿಂಹನ ಪೂರ್ಣ ಪರಿಚಯವಾಗುವುದು. ಇನ್ನು ಕೆಲವೇ ದಿನಗಳಲ್ಲಿ ನಾನೇ ಇಲ್ಲಿಗೆ ಬಂದು ನಿಮ್ಮನ್ನು ರಣರಂಗದಲ್ಲಿ ಭೇಟಿಯಾಗುವೆನು”.

ಮಾನಸಿಂಹನ ಮಾತುಗಳನ್ನು ಕೇಳಿ ಮಹಾರಾಣಾ ವೀರಾವೇಶದಿಂದ, “ನಿನ್ನದೇ ಆದ ಸೈನ್ಯವನ್ನು ತೆಗೆದುಕೊಂಡು ಬಂದರೆ, ನಾನು ಅದನ್ನು ಎಲ್ಲಡೆಯಲ್ಲಿಯೂ ಸ್ವಾಗತಿಸುವೇನು. ಅಕ್ಬರನ ಸೈನ್ಯದೊಡನೆ ಬಂದಿದ್ದಾದರೆ   ಅದನ್ನೇದುರಿಸಲು ನನ್ನ ಖಡ್ಗ ಸದಾ ಸಿದ್ದವಿದೆ ಎಂದು ನುಡಿದರು.

ಮಾನಸಿಂಹ  ಹೊರಟು ಹೋದ. ದಿಲ್ಲಿಯನ್ನು ತಲುಪಿ ತನಗಾದ ಅವಮಾನದ ಕಥೆಯನ್ನೆಲ್ಲ ಮಾನಸಿಂಹ ಅಕ್ಬರನಿಗೆ ನಿವೇದಿಸಿದ.  ಅಕ್ಬರ್ ತನ್ನ ಪ್ರಯತ್ನವನ್ನು ಅಲ್ಲಿಗೆ ನಿಲ್ಲಿಸಲಿಲ್ಲ. ಅವನು ಪುನಃ ಅಕ್ಟೋಬರ ತಿಂಗಳಲ್ಲಿ ಮಾನಸಿಂಹನ ಅಣ್ಣನ ಮಗ ಭಗವಾನ್ ದಾಸನೆಂಬ ನಂಬಿಕೆಯಮಂತ್ರಿಯನ್ನು ರಾಣಾಪ್ರತಾಪನ ಬಳಿಗೆ ಕಳೂಹಿಸಿದ. ಭಗವಾನ ದಾಸನು ಮಾಡಿದ ಪ್ರಯತ್ನವೆಲ್ಲವೂ ವಿಫಲವಾದವು.

ಹಳದಿಘಾಟಿ ಸಮರ

ಅಕ್ಬರನು ರಾಣಾ ಪ್ರತಾಪನನ್ನು ಒಲಿಸಿಕೊಳ್ಳಲು ಮಾಢಿದ ಪ್ರಯತ್ನಗಳೆಲ್ಲವೂ ವಿಫಲಗೊಂಡವು. ಸಂಧಿ ಪ್ರಸ್ಥಾಪದ ಮಾತು ಮುರಿದಿದ್ದರಿಂದಾಗಿ ಯುದ್ಧ ಅನಿವಾರ್ಯವೆಂಬುವುದನ್ನು ಅಕ್ಬರ್ ಹಾಗೂ ರಾಣಾ ಪ್ರತಾಪ ಒಡೆಯದ ಒಗಟ್ಟಿನಂದಾತ. ತಿಳಿಯದ ತೊಡಕಿನಂದಾದ. ಇದರಿಂದ ಅಕಬರ್ ರೊಚ್ಚಿಗೆದ್ದ. ಮತ್ತು ತನ್ನ ಎರು ಲಕ್ಷ್ಯ ಸೈನ್ಯಕ್ಕೆ ಸಿದ್ಧವಾಗಿರಲು ಆಜ್ಞಾಪಿಸಿದ.  ಈ ಬೃಹರ್ತ ಸೈನ್ಯಕ್ಕೆ ರಾಜಾಮಾನಸಿಂಹನನ್ನು ಸೇನಾಧಿಪತಿ ಎಂದು ನೇಮಿಸಿದ.  ಯುವರಾಜ ಸಲೀಂ ಮತ್ತು ಶಕ್ತಿ ಸಿಂಹರೂ ಹೊರಟರು.

ಇತ್ತ ಮಹಾರಾಣಾ ಪ್ರತಾಪನು ಜಾಗೃತ ಗೊಂಡಿದ್ದನು. ಅವನು ಬೆಟ್ಟ ಗುಡ್ಡಗಳಿಂದ ಆವೃತ್ತವಾದ ಕುಂಬಲ್ ಘರ್ ಕೋಟೆಗೆ ತನ್ನ ರಾಜಾನಿಯನ್ನು ಸ್ಥಳಾಂತರಿಸಿದ್ದನು.

ಇಲ್ಲಿಯವೆಗೆ ಯಾರೂ ಬಳಸಿಕೊಳ್ಳದಂತಹ ಭಿಲ್ ಜಾತಿಯ ಗುಡ್ಡ ಗಾಡು ಜನರನ್ನು ಪ್ರತಾಪನು ತನ್ನ ಸೈನ್ಯದಲ್ಲಿ ಸೇರಿಸಿಕೊಂಡಿದ್ದನು. ಇದಲ್ಲೇ ರಜಪೂತ ಸರದಾರರೆಲ್ಲರಿಗೂ ಸ್ವಾತಂತ್ಯ್ರ ರಕ್ಷಣೆಗಾಗಿ ಒಂದೇ  ಧ್ವಜದಡಿಯಲ್ಲಿ ಬಂದು ಸೇರಲು ಕರೆಕೊಟ್ಟನು. ಅಕ್ಬರನ ಸೈನ್ಯ ಸೇನಾಧಿಪತಿ ಆಜ್ಞೆಯ ಮೇರೆಗೆ ಮೇವಾಡದ ಕಡೆಗೆ  ಹೊರಟಿತು. ರಾಣಾ ಪ್ರತಾಪನ ಬಳೀ ಇದ್ದದ್ದು ಇಪ್ಪತ್ತೇರಡು ಸಾವಿರದ ಸೈನ್ಯ. ಅಕ್ಬರನ ಎರಡು ಲಕ್ಷದ ಸೈನ್ಯವನ್ನು ರಾಣಾ ಪ್ರತಾಪನ ಸೈನ್ಯವು ಎದುರಿಸಲಾರದೆಂದು ಎಲ್ಲರೂ ಮನಗಂಡಿದ್ದರು.

ಪ್ರತಾಪನು ಶೌರ್ಯದಿಂದ ಶತ್ರುಗಳನ್ನು ಯಮಸಧನಕ್ಕೆ ಅಟುತ್ತಿದ್ದನು.

ಪ್ರತಾಪನು ತನ್ನ ಸುಸಜ್ಜಿತವಾದ ಸೈನದೊಡನೆ ಹಳದಿಘಾಟಿಯ ಬಯಲಿಗೆ ಬಂದಿಳಿದನು. ಈ ಬಯಲನ್ನು ತಲುಪಲು ಕಣಿಗೆ ಮಾರ್ಗಗಳನ್ನು ದಾಟಬೇಕಾಗುತ್ತದೆ.  ಪ್ರತಾಪ ಈ ಮಾರ್ಗಗಳ ಎಡಬಲಗಳಲ್ಲಿರುವ ಬೆಟ್ಟಗಳ ಮೇಲೆ ಭಿಲ್ ಸೈನಿಕರನ್ನು ಅಡಗಿಸಿ ನಿಲ್ಲಿಸಿದನು. ಅಕ್ಬರನ ಸೇನೆ  ಈ ಮಾರ್ಗವನ್ನು ದಾಟುತ್ತಿರುವಾಗ ಮೇಲಿನಿಂದ ಒಮ್ಮಿಂದೊಮ್ಮೆಲೆ ಕಲ್ಲುಬಂಡೆಗಳಿಂದ ಮತ್ತು ಬಾಣಗಳಿಂದ ಅವರ ಮೇಲೆ ದಾಳಿ ಮಾಡಿ ಅವರು ಮುಂದೆ ಸಾಗದಂತೆ  ಮಾಡಬೇಕೆಂಬುವುದೇ ರಾಣಾ ಪ್ರತಾಪನ ಉದ್ದೇಶವಾಗಿತ್ತು.

ಸಾಮ್ರಾಟ್ ಅಕ್ಬರನ ಸೈನ್ಯ ಗುಡ್ಡ ಬೆಟ್ಟಗಳನ್ನು ದಾಟಿ ಕಣಿವೆ ಮಾರ್ಗಗಳಿಂದ ಹಳದಿಘಾಟಿಯನ್ನು ಪ್ರವೇಶಿಸತೊಡಗಿತು. ಆಗ ಒಮ್ಮಮ್ಮಿಂದೊಮ್ಮೆ ಶಾಹೀ ಸೈನ್ಯದ ಮೇಲೆ ಬಾಣಗಳ ಹಾಗೂ ಬಂಡೆಗಲ್ಲುಗಳ ಮಳೆ ಪ್ರಾರಂಭವಾಯಿತು. ಸಾವಿರಾರು ಮೊಗಲ ಸೈನಿಕರು ಹತರಾದರು. ಕೂಡಲೇ ಮಾನಸಿಂಹನಿಗೆ ಸ್ಥಿತಿಯ ಅರಿವಾಯಿತು. ಅವನು ಸೈನಿಕರಲ್ಲಿ ಸ್ಫೂರ್ತಿಯನ್ನು ತುಂಬಿದನಲ್ಲದೆ, ಆದಷ್ಟು ಬೇಗ ಕಣಿವೆ ಮಾರ್ಗಗಳನ್ನು ದಾಟಬೇಕೆಂದು ಆಜ್ಞೆ  ಮಾಡಿದ ಮೊಗಲ ಸೈನಿಕರು ಬಾಣಗಳ ಹಾಗೂ ಬಂಡೆಗಲ್ಲುಗಳ ಹೊಡೆತವನ್ನು  ಸಹಿಸುತ್ತ ಎದೆಗಾರಿಕೆಯಿಂದ ಹಳದಿ ಘಾಟಿಯ ಬಯಲನ್ನು ತಲುಪಿದರು. ಅಲ್ಲಿ ರಾಣಾ ಪ್ರತಾಪ ಹಾಗೂ ಮೊಗಲ ಸೈನಿಕರ ನಡುವೆ ಘನಘೋರವಾದ ಯುದ್ಧ ಪ್ರಾರಂಭವಾಯಿತು. ಶೂರ ರಜಪೂತರು ಹಸಿದ ಹುಲಿಗಳಂತೆ ಮೊಗಲ ಸೈನಿಕರ ಮೇಲೆ ಏರಿ ಹೋದರು.

ಮಹಾರಾಣಾ ಪ್ರತಾಪನು ತನ್ನ ಪ್ರೀತಿಯ ಕುದುರೆ ಚೇತಕವನ್ನೇರಿ ಶೌರ್ಯದಿಂದ ವೈರಿಗಳನ್ನು ಯಮಸದನಕ್ಕೆ ಅಟ್ಟುತ್ತಲ್ಲಿದ್ದನು. ಅವನು ಹೋದಲ್ಲೆಲ್ಲ ಹೆಣಗಳ ರಾಶಿಯೇ ಬೀಳೂತ್ತಿತ್ತು.  ಅದೇ ಸಮಯದಲ್ಲಿ ಪ್ರತಾಪನಿಗೆ ರಾಷ್ಟ್ರದ್ರೋಹಿ ಮಾನಸಿಂಹನ ನೆನಪಾಯಿತು. ಅವನು ಕೂಡಲೇ ತನ್ನ ಕುದುರೆಯನ್ನು   ಮಾನಸಿಂಹನ ಆನೆಯ ಕಡೆಗೆ ಓಡಿಸಿದನು. ಅವನ ಸಮೀಪಕ್ಕೆ ಹೋಗಿ ಗುರಿಯಟ್ಟು ತನ್ನ ಭರ್ಜಿಯನುನ ಮಾನಸಿಂಹನಿಗೆ ಎಸೆದನು. ದುರ್ದೈವಾಶತ ಅದು ಆನೆಯ ತಲೆಯಲ್ಲಿ ಸಿಕ್ಕಿಕೊಂಡಿತು. ಅದು ನೋವಿನಿಂದ ನರಳುತ್ತ ಓಡಿಹೋಯಿತು.

ಪ್ರತಾಪನು ಯುದ್ಧ ಭೂಮಿಯಲ್ಲಿ ಮಿಂಚಿನಂತೆ ಅತ್ತಿಂದಿತ್ತ ಇತ್ತಿಂದಿತ್ತ ಓಡಾಡುತ್ತಲ್ಲಿದ್ದನು. ಅಕಸ್ಮಾತ್ತಾಗಿ ಅವನಿಗೆ ಯುವರಾಜ ಸಲೀಮನ ಆನೆ ಕಂಡಿತು. ರಾಣಾ ಸಿಕ್ಕವರ ರುಂಡಗಳನ್ನು ಚೆಂಡಾಡುತ್ತಾ ಸಲೀಮನ ಬಳೀಗೆ ಹೋದನು. ಚೇತಕ ತನ್ನೆರಡು ಕಾಲುಗಳನ್ನು ಸಲೀಮನ ಆನೆಯ ತಲೆಯಮೇಲೆ ಯಿಟ್ಟಿತ್ತು.  ಪ್ರತಾಪನು ವೀರಾವೇಶದಿಂದ ತನ್ನ ಭರ್ಜಿಯನ್ನು ಸಲೀಮನಿಗೆ ಹೊಡೆದನು. ಅದು ಸಲೀಮನಿಗೆ ತಗಲದೇ ಅವನ ಮಾವುತನಿಗೆ ತಗುಲಿತು. ಅವನು ಕೂಡಲೇ ನೆಲಕ್ಕುರುಳಿದನು. ಸಲೀಮ ಅಪಾಯದಿಂದ ಪಾರಾದನು.

ಯುವರಾಜ ಸಲೀಂನ ಬಳೀಗೆ ಮಹಾರಾಣಾ ಪ್ರತಾಪ ಬಂದಿರುವುದನ್ನು ಮೊಗಲ ಸೈನಿಕರು ನೋಡಿದರು.  ಕೂಡಲೇ ಅವರು ಪ್ರತಾಪನನ್ನು ಮುತ್ತಿದರು. ಈಗಾಗಲೇ ಪ್ರತಾಪನಿಗೆ ಅನೇಕ ಗಾಯಗಳಾಗಿದ್ದವು.  ಆದರೂ ಅವನು ಅವನನ್ನು ಲೆಕ್ಕಿಸದೇ ಶತ್ರು ಸೈನ್ಯವನ್ನು ನೆಲಕ್ಕುರುಳಿಸುತ್ತಿದ್ದನು. ಶತ್ರುಗಳ ಸಂಖ್ಯೆ ಬೆಳೆಯತೊಡಗಿತು.

ಪ್ರತಾಪನ ಸತ್ತಿಗೆಯನ್ನು ಗುರುತಿಸಿ, ಶತ್ರುಗಳು ಮುತ್ತಿರುವುದನ್ನು ಝಾಲಾದ ರಾಣಾ ಮಾನಸಿಂಹ ನೋಡಿದ. ಪ್ರತಾಪನ ದಣಿದ ಮುಖವನ್ನು ಗುರುತಿಸಿದ. ಕೂಡಲೇ ಅವನು ಮುಂದಾಗುವ ಅನಾಹುತವನ್ನು ತಪ್ಪಿಸಬೇಕೆಂದು ನಿರ್ಧರಿಸಿದ.  ಅವನು ತಕ್ಷಣ ಮುಂದೆ ಸಾಗಿ ಪ್ರತಾಪನ ಸತ್ತಿಗೆಯನ್ನು ಕಿತ್ತುಕೊಂಡನು. ಅವನ ಕಿರೀಟವನ್ನು ತಾನೇ ಧರಿಸಿದ.  ಪ್ರತಾಪನಿಗೆ ಹೇಳಿದ “ಮಹಾರಾಣಾ ಅವರೇ , ತಾವು ತುಂಬ ದಣಿದಿರುವಿರಿ. ಈಗ ನೀವು ಹೋರಾಡುವುದು ಉಚಿತವಲ್ಲ. ತಾವು ಮರಣವನ್ನಪ್ಪಿದರೆ ಮತ್ತಾವ ರಜಪೂತನೂರ ಮೇವಾಡವನ್ನು ಗೆಲ್ಲಲಾರೆ. ತಾವು ಈಗಲೇ ಇಲ್ಲಿಂದ ಹೊರಟು ಹೋಗಿ”.

ಮಾನಸಿಂಹ ಝಾಲಾನ ಮಾತು ಕೇಳಿ ಪ್ರತಾಪನು ಕುದುರೆಯನ್ನು ಬೇರೆ ಕಡೆಗೆ ತಿರುಗಿಸಿದ. ಶತ್ರು ಸೈನಿಕರು ಮಹಾರಾಣಾನ  ಮುಕುಟವನ್ನು ಕಂಡು ಅವನೇ ಪ್ರತಾಪನೆಂದು ತಿಳೀದು ದಾಳಿ ಮಾಡಿದರು.ಝಾಲಾದ ಮಾನಸಿಂಹ ಧೃತಿಗಡದೆ ಶತ್ರುಗಳನ್ನು ಕತ್ತರಿಸತೊಡಗಿದ. ಅವನು ಕೊನೆಯ ಉಸಿರು ಇರುವವರೆಗೂ ಕೆಚ್ಚೆದೆಯ ಕಲಿಯಂತೆ ಹೋರಾಟ ವೀರಸ್ವರ್ಗವನ್ನು ಪಡೆದ.

ಸಾಯಂಕಾಲ ಸಮಯವಾಗಿತ್ತು. ಸಾವಿರಾರು ಜನಶೂರ ರಜಪೂತರು ಮೇವಾಡದ ಮಾನರಕ್ಷಣೆಗಾಗಿ ಕಲಿತನದಿಂದ ಕಾದಿ ವೀರಮರಣವನ್ನಪ್ಪಿದರು. ಆದ್ದರಿಂದ ಉಳಿದ ರಜಪೂತರು ಸಮರಭೂಮಿಯಿಂದ ಬಹುದೂರ ಹೊರಟು ಹೋಗಿದ್ದರು.

ಶಕ್ತಿಸಿಂಹನ ಪಶ್ಚಾತಾಪ

ಮಹಾರಾಣಾ ಪ್ರತಾಪ ಯಾವುದೋ ದಾರಿಯಿಂದ ಹೋಗುತ್ತಿರುವುದನ್ನು ಇಬ್ಬರು ಮುಸಲ್ಮಾನ ಸರದಾರರು ನೋಡಿದರು. ಅವರು ಮಹಾರಾಣಾನನ್ನು ಬಂಧಿಸಲು ತಮ್ಮ ಕುದುರೆಗಳನುನ ಅತ್ತ ಓಡಿಸಿದರು. ಚೇತಕ ತನ್ನ ಸ್ವಾಮಿಯನುನ ಎತ್ತಿಕೊಂಡು ನಾಗಾಲೋಟದಿಂದ ಓಡುತ್ತಲ್ಲಿತ್ತು. ಮೊಗಲಸರದಾರರು ಪ್ರತಾಪನ ಬೆನ್ನು ಹತ್ತಿದ್ದರು. ಈ ದೃಶ್ಯವನ್ನು ಪ್ರತಾಪನ ಸಹೋದರ ಶಕ್ತಿಸಿಂಹ ಕಣ್ಣಾರೆ ಕಂಡನು. ಆಗ ಅವನಿಗೆ ಎಲ್ಲವೂ ಅರ್ಥವಾಯಿತು. ಅವನಲ್ಲಿ ಸ್ವಧರ್ಮ, ಸ್ವದೇಶ ಮತ್ತು ಸ್ವಾಭಿಮಾನಗಳು ಜಾಗೃತವಾದವು. ಅವನು ತನ್ನ ಕುದುರೆಯನ್ನು ಹತ್ತಿ ಆ ಸರದಾರನನ್ನು ಹಿಂಬಾಲಿಸಿ, ಅವರಿಬ್ಬರನ್ನು ಯಮಸದನಕ್ಕೆ ಅಟ್ಟಿದನು.

ಶಕ್ತಿ ಸಿಂಹನ ತನ್ನ ಮನೋಬಯಕೆಯನ್ನು ಪ್ರತಾಪನಿಗೆ ಹೇಳಬೇಕೆಂದು ಅವನ ಹಿಂದೆ ತನ್ನ ಕುದುರೆಯನ್ನು ಓಡಿಸಿದನು. ಮತ್ತು “ಓ ನೀಲಾ ಘೋಡಾ ಸವಾರ್ ಠೆಹರೋ” ಎಂದು ಕೂಗಿದನು. ಪ್ರತಾಪನಿಗೆ ಈ ಧ್ವನಿ ಎಲ್ಲಿಯೋ ಕೇಳಿದಂತೆ ಎನಿಸಿತು.  ಅವನು  ಹಿಂದಿರುಗಿ  ನೋಡಿದ. ಹಿಂದೆ ಸಹೋದರ ಶಕ್ತಿ ಸಿಂಹ  ಬರುತ್ತಿರುವುದು ಕಾಣಿಸಿತು. ಪ್ರತಾಪನಿಗೆ ಹಿಂದಿನದೆಲ್ಲ ನೆನಪಾಯಿತು. ಅವನು ತನ್ನ ಕುದುರೆಯನ್ನು ನಿಲ್ಲಿಸಿ, ಶಕ್ತಿ ಸಿಂಹನಿಗೆ, “ಬಾ ಶಕ್ತಿ ಸಿಂಹ! ನೀನು ನನ್ನೊಂದಿಗೆ ಹೋರಾಡಿ ಸೇಡು ತೀರಿಸಿಕೋ:” ಎಂದು ಹೇಳೀದನು.

ಈ ಮಾತುಗಳನ್ನು ಕೇಳಿ ಶಕ್ತಿ ಸಿಂಹನ ಕಾಲುಗಳಲ್ಲಿನ ಶಕ್ತಿಯೇ ಉಡುಗಿ ಹೋದಂತಾಯಿತು. ಪ್ರೇಮ, ಶೋಕ, ಲಜ್ಜೆ ಇವುಗಳಿಂದ ಶಕ್ತಿ ಸಿಂಹನು ಕಣ್ಣೀರು ಸುರಿಸುತ್ತಾ ಪ್ರತಾಪನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ತನ್ನೆಲ್ಲ ಕಥೆಯನ್ನೂ, ವ್ಯಥೆಯನ್ನು  ತೋಡಿಕೊಂಡನು. ಅವನ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು.  ಅದನ್ನು ಕಂಡು ಪ್ರತಾಪನಿಗೂ ದುಃಖ ಉಮ್ಮಳಿಸಿ ಬಂದಿತು. ಅವನು ಮುಂದಾಗಿ ಶಕ್ತಿ ಸಿಂಹನನ್ನು ಅಪ್ಪಿಕೊಂಡನು. ಅವರೀರ್ವರಲ್ಲಿ ಬೆಳೆದು ಬಂದ ಹಗೆತನ ಹರಿದು ಹೋಯಿತು. ಭಾತೃ ಭಾವ ಜಾಗೃತವಾಯಿತು.

೧೫೭೬ನೆಯ ಸಂವತ್ಸರದ ಜುಲೈ ತಿಂಗಳಲ್ಲಿ ಹಳದಿ ಘಾಟಿಯು ರಜಪೂತರ ಪವಿತ್ರ ರಕ್ತದಿಂದ ಪಾವನವಾಯಿತು.

ಇತಿಹಾಸದಲ್ಲಿ ಮಹರಾಣಾ ಪ್ರತಾಪಸಿಂಹನಂತೆಯೇ ಅವನ ಕುದುರೆ ಚೇತಕ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ.  ಈ ಯುದ್ಧದಲ್ಲಿ ಅದೂ ಸಹ ಬಹಳ ಗಾಯಗೊಂಡಿತ್ತು. ಅದು ತನ್ನ ಒಡೆಯನ ಪ್ರಾಣವನ್ನುಳಿಸಲು ದಾರಿಯಲ್ಲಿಯ ಮಡು ಒಂದನ್ನು   ಕುಪ್ಪಳಿಸಿ ಹಾರಿತ್ತು.

ಹೀಗೆ ಅದು ತನ್ನೊಡೆಯನನ್ನು ಅಪಾಯದಿಂದ ಪಾರು ಮಾಡಿ ತಾನು ಸಾವಿಗೀಡಾಯಿತು.  ಇದರಿಂದ ಪ್ರತಾಪನಿಗೆ ಅತಿಶಯ ದುಃಖವಾಯಿತು. ಕೆಚ್ಚೆದೆಯ ಕಲಿ ಎನಿಸಿದ ಪ್ರತಾಪ ಮಕ್ಕಳಂತೆ ಕಣ್ಣೀರು ಸುರಿಸಿದನು. ಕುದುರೆ ಅಸುನೀಗಿದ ಸ್ಥಳದಲ್ಲಿಯೇ ಒಂದು ಉದ್ಯಾನವನ್ನು ನಿರ್ಮಿಸಿದನು. ಇದು ಇಂದಿಗೂ ನೋಡಲು ರಮಣೀಯವಾಗಿದೆ.

ಸ್ವತಃ ಅಕ್ಬರನೇ

ಹಳದಿಘಾಟ್ ಯುದ್ಧವು ಅಕ್ಬರನ ಅಪೇಕ್ಷೆಯಂತೆ ನಿರ್ಣಯಾತ್ಮಕವಾಗಿ ಪರಿಣಮಿಸಲಿಲ್ಲ. ಈ ಯುದ್ಧದಲ್ಲಿ ಅನಿವಾರ್ಯವಾಗಿ ಪ್ರತಾಪನ ಕಾಲು ತೆಗೆಯಬೇಕಾಗಿ ಬಂದರೂ, ಅಕ್ಬರನಿಗೆ ಪ್ರತಾಪನನ್ನು ಪೂರ್ಣವಾಗಿ ಪರಾಭವಗೊಳಿಸುವುದು ಸಾಧ್ಯವಾಗಲಿಲ್ಲ. ಇದಾದ ನಂತರ ಮಹಾರಾಣಾ ತನ್ನ ಪ್ರಾಚೀನ ದುರ್ಗಕ್ಕೆ ಮರಳಿ ಬಂದು ಅಲ್ಲಿಯೇನೆಲೆಸಿದನು. ಅಲ್ಲಿಂದ ಅವನು ಗೋಗಾಂಡಾ ದಲ್ಲಿ ತಂಗಿದ್ದ ಮಾನಸಿಂಹನ ಸೈನ್ಯದ ಮೇಲೆ ಆಕಸ್ಮಿಕ ದಾಳಿಯನ್ನು ಮಾಡಲಾರಂಭಿಸಿದನು. ಪ್ರತಾಪನನ್ನು ಪೂರ್ಣವಾಗಿ ಸೋಲಿಸಲಾಗದ ಮಾನಸಿಂಹ ಹಾಗು ಸರದಾರರ ಮೇಲೆ ಅಕ್ಬರನಿಗೆ ಮಿತಿಮೀರಿದ ಕೋಪವುಂಟಾಯಿತು.

ಅಕ್ಬರ ತಾನೇಕ ಸೈನ್ಯ ಸಮೇತನಾಗಿ ಗೋಗಾಂಡಾದ ಕಡೆಗೆ ನಡೆದನು.

ಅಕ್ವರ ತಾನೇ ಸೈನ್ಯ ಸಮೇತನಾಗಿ ಗೊಗಾಂಡಾದ ಕಡೆಗೆ ನಡೆದನು.

ಈ ಸಂಕಟದ ಸಮಯದಲ್ಲಿ ಶಿರೊಹಿಯಾ ಸುರ್ತಾನ ಹಾಗೂ ಝಾಲೋದ ರಾಜ ಮಹಾರಾಣಾನ ಸಹಾಯಕ್ಕೆ ಬಂದು ಸೇರಿದರು. ಇದೇ ಸಮಯಕ್ಕೆ ಅಕ್ಬರನ ಕಡುವೈರಿಯಾಧ ಚಂದ್ರಸೇನ ರಾಠೋಡನು ಪ್ರತಾಪನ ಇಚ್ಛೆಯ ಮೇರೆಗೆ ಬಂಡೆದ್ದನು.

ಇತ್ತ ಅಕ್ಬರನ  ಗೋಗಂಡಾಕ್ಕೆ ಬಂದು ತಳವೂರಿದನು. ಮಹಾರಾಣಾ ಪ್ರತಾಪ ಗುಡ್ಡಗಾಡಿನಲ್ಲಿ ಅವಿತುಕೊಂಡು, ಕೂಟ ಯುದ್ಧವನ್ನು ಪ್ರಾರಂಭಿಸಿದನು. ಪ್ರತಾಪನನ್ನು ಸೆರೆ ಹಿಡಿಯಲು ಅಕ್ಬರನು ನಾಲ್ಕು ದಿಕ್ಕಿಗೂ ತನ್ನ ಶೂರ ಸರದಾರರೊಂದಿಗೆ ಸೈನ್ಯವನ್ನು ಕಳೂಹಿಸಿದನು.  ಸುತ್ತಲೂ ಶತ್ರುಗಳಿಂದ ಆವೃತ್ತನಾಗಿದ್ದರೂ  ಪ್ರತಾಪನು ಎದೆಗುಂದಲಿಲ್ಲ. ಮಹಾರಾಣಾ ಗೋಗಂಡದ ಮೇಲೆ ಮಿಂಚಿನ ದಾಳಿಯನ್ನು ಮಾಡಿ ಗೊಗಾಂಡಾದ ಮತ್ತು ಉದಯಪುರದ ಕೋಟೆಗಳನ್ನು ವಶಪಡಿಸಿಕೊಂಡನು. ಅಕ್ಬರನು ಆರು ತಿಂಗಳವರೆಗೂ ವಿಶ್ವ ಪ್ರಯತ್ನ ಮಾಡಿದರೂ ಪ್ರತಾಪನನ್ನು ಮಣಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಶಹಬಾಜಖಾನನೆಂಬ ಸರದಾರನನ್ನು ನೇಮಿಸಿ ಬರಿಗೈಯಿಂದ ದಿಲ್ಲಿಗೆ ಮರಳಿ ಬಂದನು. ಶಹಬಾಜಖಾನನಾಗಲಿ ಅವನ ನಂತರ ನೇಮಿತವಾದ ಮಿರ್ಜಾ ಅಬ್ದುಲ್ ರಹಮಾನನಾಗಲಿ ಏನೂ ಮಾಡಲು ಆಗಲಿಲ್ಲ.

ಮಿರ್ಜಾ ತನ್ನ ಹೆಂಡತಿ- ಮಕ್ಕಳನ್ನು ಶೇರ್ಪುರ ಎಂಬ ಭದ್ರವಾದ ಕೋಟೆಯಲ್ಲಿರಿಸಿ ಮೇವಾಡದ ಒಳನಾಡಿನಲ್ಲಿ ರಾಣಾನನ್ನು ಸೆರೆಹಿಡಿಯಬೇಕೆಂದು ಹೋದನು. ಇತತ ಗೊಗಾಂಡಾದಲ್ಲಿದ್ದ ರಾಣನ ಮಗ ಅಮರಸಿಂಹನು ಶೇರ್ಪುರದ ಮೇಲೆ ದಾಳಿ ಮಾಡಿ ಮಿರ್ಜಾನ ಹೆಂಡಿರು  ಮಕ್ಕಳನ್ನು ಸೆರೆಹಿಡಿದನು. ಈ ಸಮಾಚಾರ ಪ್ರತಾಪನಿಗೆ ತಿಳೀಯಿತು. ಅವನು ಅಂತಃಪುರದ ಸ್ತ್ರೀಯರನ್ನು ಸುರಕ್ಷಿತವಾಗಿ ಮಿರ್ಜಾ ಬಳೀಗೆ ಕಳುಹಿಸುವಂತೆ ಆಜ್ಞೆ ಮಾಡಿದ.  ಶಿಸೋದಿಯಾ ವಂಶದ ಕುಲತಿಲಕನಾದ ಮಹಾರಾಣಾ ಪ್ರತಾಪನನ್ನು ಮಣಿಸಲು ಅಕ್ಬರನಿಗೆ ಸಾಧ್ಯವಾಗಲಿಲ್ಲ. ಕೊನೆಯ ಪ್ರಯತ್ನವೆಂದು ಅಕ್ಬರನು ೧೫೪೮ರಲ್ಲಿ ಮಹಾಶೂರ ಸೇನಾನಿ ಜಗನ್ನಾಥರನ್ನು  ಮೇವಾಡಕ್ಕೆ ಕಳುಹಿಸಿದನು. ಇವನೂ ಕೂಡ ಎರಡು ವರ್ಷಗಳವರೆಗೆ ಎಡೆಬಿಡದೆ ಪ್ರತಾಪನನ್ನು ಸೆರೆಹಿಡಿಯಲು ಸರ್ವ ವಿಧಗಳಿಂದಲೂ ಪ್ರಯತ್ನಿಸಿ ವಿಫಲನಾದನು.

ಸಂಧಿಯ ಪ್ರಸ್ತಾಪ

ಗುಡ್ಡ ಗವಿಗಳಲ್ಲಿ ನೆಲೆಸಿದ್ದ ಮಾಹಾರಾಣಾನ ಪರಿವಾರಕ್ಕೆ ಯಾವಾಗಲೂ ಶತ್ರುಗಳ ಭಯವಿದ್ದೇಯಿರುತ್ತಿತ್ತು.  ಅವನ ಹೆಂಡತಿ-ಮಕ್ಕಳು ಹಸಿವೆಯಿಂದ ಕಂಗೆಟ್ಟು ಕಂಗಾಲಾದರು. ನಿದ್ರೆ, ನೀರಡಿಕೆಗಳನ್ನು ತೊರೆದು,ಗುಡ್ಡ ಗವಿಗಳನ್ನು ಸುತ್ತಾಡಿದರು. ಅಡುಗೆ ಮಾಡಿ ಎಲೆಯ ಮೇಲೆ ಬಡಿಸಿದರೂ ಶತ್ರುಗಳು ಬಂದರೆಂದು ಒಮ್ಮಮ್ಮೆ ಅದನ್ನು ಬಿಟ್ಟು ಅವರೆಲ್ಲರೂ ಓಡಿ ಹೋಗಬೇಕಾಗುತ್ತಿತ್ತು.

ಒಂದು ದಿನ ಮಹಾರಾಣಿ ಅಡವಿಯಲ್ಲಿ ಬೆಳೆದ ಹುಲ್ಲಿನ ಬೀಜದ ಹಿಟ್ಟಿನಿಂದ ಕೆಲವು ರೊಟ್ಟಿಗಳನ್ನು ಮಾಡಿದಳು. ಎಲ್ಲರೂ ತಮ್ಮತಮ್ಮ ಪಾಲಿನ ರೊಟ್ಟಿಯನ್ನು ತಿಂದು ಮುಗಿಸಿದರು.

ಮಹಾರಾಣೀ ಮಗಳಿಗೆ, “ರೊಟ್ಟಿಯನ್ನು ಪೂರ್ತಿ ತಿಂದುಬಿಡಬೇಡ. ಈಗ ಅರ್ಧ ತಿಂದು ನಾಳೆಗೆ ಅರ್ಧ ಇಟ್ಟುಕೋಡ” ಎಂದಳು. ಮತ್ತೇ ರೊಟ್ಟಿ ಮಾಡಲು ಯಾವಾಗ ಸಾಧ್ಯವಾಗುತ್ತದೋ!

ಮಹಾರಾಣಾನ ಹೆಂಡತಿ ಹೀಗೆ ಮಗಳಿಗೆ ಹೇಳಬಾಕಾಯಿತು!

ಅಷ್ಟು ಹೊತ್ತಿಗೆ ಸರಿಯಾಗಿ ಕಾಡು ಬೆಕ್ಕೊಂದು ಬಂದು ಹುಡುಗಿಯ ಕೈಯಲ್ಲಿದ್ದ ರೊಟ್ಟಿಯನ್ನು ಕಿತ್ತುಕೊಂಡು ಕಚ್ಚಿಕೊಂಡು ಹೋಯಿತು.

ಪುಟ್ಟ ಹುಡುಗಿ ಗಟ್ಟಿಯಾಗಿ ಅಳಲು ಪ್ರಾರಂಭಿಸಿತು.

ಮಹಾರಾಣಾ ನಡೆದದ್ದನ್ನು ಕಂಡನು. ಮಗಳ ಅಳುವನ್ನು ಕೇಳಿದ ಕಿವಿಗೆ ಕಾದ ಸೀಸವನ್ನು ಹೊಯ್ದಂತಾಯಿತು.

ಮಹಾರಾಣಾನ ವೀರ ಹೃದಯವು ಕ್ಷಣಾರ್ಧದಲ್ಲಿ ಕರಗಿ ನೀರು ನೀರಾಯಿತು. ರಾಣಾನ  ಕಣ್ಣುಗಳಲ್ಲಿ ನೀರು ಹರಿಯಿತು. ಒಂದು ಕ್ಷಣದಲ್ಲಿಯೇ ಅವನ ಮನಸ್ಸು ವಿಚಲಿತವಾಯಿತು. ಅವನ ಶೌರ್ಯ, ಸ್ವಾಭಿಮಾನಗಳು ಚೂರುಚೂರದವು.

ವೀರಾಧಿವೀರ ಪ್ರತಾಪ ಅಕ್ಬರನಿಗೆ, “ನಾನು ನಿಮ್ಮೊಂದಿಗೆ ಸಂಧಿ ಮಾಡಿಕೊಳ್ಳುತ್ತೇನೆ” ಎಂದು ಪತ್ರ ಬರೆದನು.

ಮಹಾರಾಣಾ ಮಗಳ ಅಳುವನ್ನು ಕೇಳಿದ.

ಅಕ್ಬರನಿಗೆ ಪತ್ರ ತಲುಪಿತು. ಓದಿದಾಗ ಅವನು ತನ್ನ ಕಣ್ಣೂಗಳನ್ನೇ ನಂಬಲಿಲ್ಲ. ಮತ್ತೇ ಮತ್ತೇ ಓದಿದ. ಅವನ ಮನಸ್ಸು ಸಂತೋಷದಿಂದ ಉಬ್ಬಿಹೋಯಿತು.

ಅಕ್ಬರನ ಹಿಂದೂ ಸಾಮಂತದಲ್ಲಿ ರಾಜಕವಿ ಪ್ರಥ್ವಿರಾಜನೊಬ್ಬನೇ ಯಾವಾಗಲೂ ಮಹಾರಾಣಾನ ಪ್ರತಾಪವನ್ನು ಹೊಗಳುತ್ತಿದ್ದನು.  ಆದುದರಿಂದ ಅಕ್ಬರನು ಸಂತೋಷದಿಂದ, ಹೆಮ್ಮೆಯಿಂದ ಪತ್ರವನ್ನು ಅವನಿಗೆ ತೊರಿಸಿದ. ಪತ್ರವನ್ನು ಓದಿದ ಪ್ರಥ್ವಿರಾಜನು, “ಇದು ಖಂಡಿತವಾಗಿ ಪ್ರತಾಪನು ಬರೆದ ಪತ್ರವಲ್ಲ. ಅವನ ಕೀರ್ತಿಗೆ ಕಳಂಕ ತರಲು ಮತ್ತು ತಮ್ಮನ್ನು ಸಂತೋಷಪಡಿಸಲು ಯಾರೋ ಕುಹುಕಿಗಳು ಈ ಸುಳ್ಳೋಲೆಯನ್ನು ಬರೆದು ಕಳೂಹಿಸಿದ್ದಾರೆ. ನಾನು ರಾಣಾ ಅವರಿಗೆ ಪತ್ರ ಬರೆದು ಸತ್ಯಾಂಶವನ್ನು ತಿಳಿದುಕೊಳ್ಳುವೆನು. ತಾವು ಅನುಮತಿಯನ್ನು  ಕೊಡಬೇಕು” ಎಂದು ಹೇಳೀದ.

ಆಕ್ಬರನು ಸಂತೋಷದಿಂದ ಅನುಮತಿಯಿತ್ತನು. ಪ್ರಥ್ವಿರಾಜ ರಾಜಸ್ಥಾನದಲ್ಲಿಯೇ ಪದ್ಯರೂಪದಲ್ಲಿ ಒಂದು ಸುದೀರ್ಘ ಪತ್ರ ಬರೆದು ಕಳುಹಿಸಿದನು. ಅದರಲ್ಲಿ ಹೀಗೆ ಬರೆದಿದ್ದನು. “ರಾಜಸ್ಥಾನದ ಪೇಟೆಯಲ್ಲಿ ಪ್ರತಾಪನೊಬ್ಬನನ್ನು ಬಿಟ್ಟು ಉಳಿದವರೆಲ್ಲರೂ ಅಕ್ಬರ್ ಕೊಂಡು ಕೊಂಡಿದ್ದಾನೆ. ಕೇವಲ ಪ್ರತಾಪನನ್ನು ಕೊಳ್ಳುವ ಧೈರ್ಯ ಅವನ ಬಳಿಯಿರಲಿಲ್ಲ. ನಮ್ಮ ಕ್ಷಾತ್ರ ತೇಜಸ್ಸನ್ನು ಉಳಿಸಬೇಕೆಂದು ನಿಮ್ಮಲ್ಲಿ ಎಲ್ಲ ರಜಪೂತರು ಬರುವ ಸಮಯವೀಗ ಬಂದೊದಗಿದೆ. ಮಹಾರಾಣಾ ಪ್ರತಾಪನು ತನ್ನದೆಲ್ಲವನ್ನು ತ್ಯಾಗಮಾಡಿ ಶೌರ್ಯ, ಸ್ವಾಭಿಮಾನಿಗಳನ್ನು ಕಾಪಾಡಿದ್ದಾನೆ. ಈ ಅಪ್ರತಿಮ ಸಾಹಸವನ್ನು ಜಗತ್ತೇ ಕೊಂಡಾಡುತ್ತದೆ. ಆಕ್ಬರ ಸ್ಥಿರಜೀವಿ ಅಲ್ಲ. ರಜಪೂತರ ವಂಶವೃಕ್ಷವನ್ನು ಬೆಳೆಸುವ ಕಾಲ ಬಂದೇ ಬರುವುದು. ಆಗ ರಜಪೂತರೆಲ್ಲರೂ ಪ್ರತಾಪನ ಬಳಿಗೆ ಬರುವರು. ಅಂದಿನವರೆಗೆ ಈ ಅಂಕುರವು ನಶಿಸಿದಂತೆ ಅದನ್ನು ರಕ್ಷಿಸುವ ಭಾರ ನಿಮ್ಮ”.

ಪ್ರಥ್ವಿರಾಜನ ಈ ಪತ್ರ ಪ್ರತಾಪನಿಗೆ ಹತ್ತು ಸಾವಿರ ಸೈನ್ಯಬಲಕ್ಕಿತಲೂ ಮಿಗಿಲಾದ ಶಕ್ತಿಯನ್ನು ತಂದುಕೊಟ್ಟಿತು.  ಡೋಲಾಯಮಾನವಾಗಿದ್ದ ಅವನ ಮನಸ್ಸು ಅಚಲವಾಯಿತು. ಪ್ರತಾಪನು ಅಕ್ಬರನಿಗೆ ಶರಣಾಗತನಾಗುವ ಯೋಚನೆಯನ್ನೆ ತೊರೆದು ಕಾರ್ಯೊನ್ಮುಖನಾದರು.

ಭಾಮಾಶಹಾನ ಸ್ವಾಮಿ ಭಕ್ತಿ

ಪ್ರತಾಪನು ತನ್ನಸರದಾರರನ್ನು ಕರೆದು, ತಾನೆಂದೂ ಅಕ್ಬರನ ದಾಸ್ಯವನ್ನು ಸ್ವೀಕರಿಸುವುದಿಲ್ಲವೆಂದೂ ಪ್ರಾಣವಿರುವ ತನಕ ಮೇವಾಡದ ಮಾನ ರಕ್ಷಣೆಗಾಗಿ ಹೋರಾಡುವೆನೆಂದೂ ಹೇಳೀದನು. ಇದಲ್ಲದೇ ಮೇವಾಡದಲ್ಲಿ ಸದಾ ಶತ್ರುಗಳ ಭಯವಿರುವುದರಿಂದಾಗಿ ಎಲ್ಲರೂ ಸಿಂಧು ಬಯಲಿಗೆ ತರಳಿ ಪುನಃ ಸೈನ್ಯವನ್ನು ಕೂಡಿಸಬೇಕೆಂದು ಹೇಳೀದನು.

ಅನಂತರ ಮಹಾರಾಣನು ಧರ್ಮಪತ್ನಿ, ಮಕ್ಕಳು ಹಾಗೂ ಅಳಿದುಳಿದ ಸರದಾರರೊಂದಿಗೆ ಅರಾವಳಿ ಪರ್ವತವನ್ನಿಳಿದು ಸಿಂಧೂ ನದಿಯ ಬಯಲಿಗೆ ಪ್ರಯಾಣ ಬೆಳೆಸಿದನು. ರಾಜಸ್ಥಾನದ ಸೀಮೆಯನುನ ದಾಟುವಾಗ ಋಷಭದೇವನ ಬಳಿ ಓರ್ವ ವೃದ್ಧನ ಭೇಟಿ ಯಾಯಿತು. ಈತನೇ ಭಾಮಾಶಹಾ. ಈತನಿಂದಲೇ ಪ್ರತಾಪನ ಭಾಗ್ಯೋದಯ ಬಾಗಿಲು ತೆರೆಯಿತು.  ಭಾಮಾಶಹಾ ಪ್ರತಾಪನ ಪೂರ್ವಜರಲ್ಲಿ ಮಂತ್ರಿಯಾಗಿದ್ದನು. ಮೇವಾಡದ ಮಹಾರಾಣಾ ಮಾತೃಭೂಮಿಯನ್ನು ತೊರೆದು ಹೋಗುತ್ತಾನೆಂಬ ಸುದ್ಧಿಯನ್ನು ಕೇಳಿ ಅವನು ಅಲ್ಲಿಗೆ ಬಂದಿದ್ದನು. ಒಡೆಯನಿಗೊದಗಿದ ದುರಸ್ಥೆಯನ್ನು ಕಂಡು ಮಮ್ಮಲ ಮರುಗಿದನು. ಆಮಾಶಹಾನು, “ತಾವು ರಜಪೂತರ ತಿಲಕರು, ಹಿಂದೂ ಧರ್ಮದ ರಕ್ಷಕರು, ನನ್ನ ಹತ್ತಿರ ಅಪಾರವಾದ ಧನ ಸಂಪತ್ತು ಇದೆ. ಇದರಿಂದಾಗಿ ತಾವು ೨೫ ಸಾವಿರ ಸೈನಿಕರನ್ನು ೧೨ ವರ್ಷಗಳ ಕಾಲ ಪೋಷಿಸಬಹುದು. ನಾನು ಇದನ್ನು ಇಂದು ತಮಗೆ ಅರ್ಪಿಸಿದ್ದೇನೆ. ತಾವು ಈ ಭೂಮಿಯನ್ನು ಬಿಟ್ಟು ಹೋಗಬೇಡಿ. ನನ್ನಲ್ಲಿಯ ಈ ಧನವು ದೇಶ ಹಾಗೂ ಧರ್ಮದ ರಕ್ಷಣೆಗಾಗಿ ವಿನಿಯೋಗವಾಗುತ್ತದೆ. ಇದರಿಂದ ನನಗೆ ಅಪಾರವಾದ ಸಂತೋಷವಾಗಿದೆ” ಎಂದು ಹೇಳೀದನು. ವೃದ್ಧನ ಮಾತುಗಳನ್ನು ಕೇಳಿ ಪ್ರತಾಪನ ಮನಸ್ಸು ಸಂತೋಷ, ಕೃತಜ್ಞತೆಗಳಿಂದ ತುಂಬಿತು.

ಮಹಾರಣಾ ಪ್ರತಾಪನು ಧನವನ್ನು ನಿರಾಕರಿಸಿದನು. ಆದರೆ ಭಾಮಾಶಹಾನ ಅನುಗ್ರಹದಿಂದ ಅದನ್ನು ಸ್ವೀಕರಿಕಸಿದನು.

ಮಹಾರಾಣಾನ ಕೊನೆಯ ದಿನಗಳು

ಭಾಮಾಶಹನ ಅಪಾರ ಧನವಲ್ಲದೇ ಬೇರೆ ಕಡೆಗಳಿಂದಲೂ ಧನ ಸಂಗ್ರಹವಾಯಿತು. ಇದರಿಂದ ಪ್ರತಾಪ ಚದುರಿದ ತನ್ನ ಸೈನಿಕರನ್ನು ಪುನಃ ಒಂದುಗೂಡಿಸಿದನು. ಪ್ರತಾಪ ಪಲಾನಯನ ಮಾಡಿದನೆಂದೂ ತನ್ನ ಕೊನೆಯ ದಿನಗಳನ್ನು ಗುಡ್ಡ- ಗವಿಗಳಲ್ಲಿ ಕಳೆಯಬಹುದೆಂದೂ ಶತ್ರುಗಳು ಭಾವಿಸಿದ್ದರು. ಹಲಬೀರ ಎಂಬಲ್ಲಿ ಮೊಗಲ ಸೇನಾಧಿಪತಿ ಶಹಬಾಜಖಾನನು ಬಿಡಾರ ಹೂಡಿದ್ದನು. ಒಂದು ರಾತ್ರಿ ಪ್ರತಾಪನು ಹಠಾತ್ತಾಗಿ ಖಾನನ ಅಮೇಲೆ ದಾಳಿ ಮಾಡಿದನು.  ನಿಶ್ಚಿಂತೆಯಿಂದ ಮಲಗಿದ್ದ ಖಾನನ ಸೈನಿಕರು ಮನಬಂದಂತ್ತ ಓಡಿ ಹೋದರು. ಇದೇ ರಭಸದಲ್ಲಿಯೇ ರಾಣಾ ದೇವಿಯರ್, ಅಮಾಯತ್ತಿ ಮತ್ತು ಕಮಲಮೇರು ಕೋಟೆಗಳನ್ನು ವಶಪಡಿಸಿಕೊಂಡನು. ಆಮೇಲೆ ಉದಯಪುರವೂ ಪ್ರತಾಪನ ವಶವಾಯಿತು. ಹೀಗೆ ಪ್ರತಾಪನು ಒಂದೊಂದೇ ಕೋಟೆಯನ್ನು ಗೆಲ್ಲುತ್ತಾ  ಒಟ್ಟು ಮೂವತ್ತೆರಡು ಕೋಟೆಗಳನ್ನು ಗೆದ್ದುಕೊಂಡನು. ಇವನ್ನೆಲ್ಲ ತನ್ನೊಬ್ಬನ ಶಕ್ತಿ ಸಾಮರ್ಥ್ಯದಿಂದಲೇ ಗೆದ್ದುಕೊಂಡಿದ್ದನು.

ಮಹಾರಾಣಾ ಪ್ರತಾಪನು ಪುನಃ ಚೇತರಿಸಿಕೊಂಡು ಮೇವಾಡ ಪ್ರಾಂತ ವಶಪಡಿಸಿಕೊಂಡಿದ್ದನ್ನು ನೋಡಿ ಆಕ್ಬರ ರಾಣಾನ ಗೋಡವೆಯನ್ನೇ ಬಿಟ್ಟು ಬಿಟ್ಟನು. ಆಮೇಲೆ ತನ್ನ ಗಮನವನ್ನೆಲ್ಲಾ ದಕ್ಷಿಣ ಭಾರತದತ್ತ ಹರಿಸಿದನು.

ಈ ವಿಜಯದಿಂದ ಪ್ರತಾಪನಿಗೆ ಸಮಾಧಾನವಾಗಲಿಲ್ಲ. ಅವನು ಪ್ರತಿದಿನ ಆಶಾಪೂರಿ ದೃಷ್ಟಿಯಿಂದ ಚಿತ್ತೂರನ್ನು ನೋಡುತ್ತಿದ್ದನು.  ಆಗ ಅದರ ಗತವೈಭವೆಲ್ಲವೂ ಕಣ್ಣ ಮುಂದೆ ಬರುತ್ತಿತು.  ಮಹಾರಾಣಾ ಪ್ರತಾಪನ ಶೌರ್ಯ, ಸಾಹಸಗಳಿಂದ ಪ್ರೇರಿತರಾದ ರಛಾಲೋರ, ಜೋಧಪುರ, ಇಡಾರ್, ನೋಡೋಲ್ ಮತ್ತು ಬುಂದಿರಾಜರು ದಂಗೆ ಎದ್ದರು. ಪ್ರತಾಪನ ದೂತರು ದೂರದೂರದವರೆಗೆ ದಂಗೆಯನುನ ಹಬ್ಬಿಸುತ್ತಲ್ಲಿದ್ದರು.  ಅಕ್ಬರನ ಸೈನ್ಯಕ್ಕೆ ಇದರ ಸುಳಿವೇ ಹತ್ತಲಿಲ್ಲ. ಸ್ವತಃ ಆಕ್ಬರನು ಗಾಬರಿಗೊಂಡಿದ್ದನು.

ನಾವು ಸಹೋದರರು

ಒಂದು ದಿನ ರಾಣಾನ ಬಳಿ ಓರ್ವ ದೂತನು ಬಂದು ಶಿರಬಾಗಿ ನಮಿಸಿ, ಒಂದು ಪತ್ರವನ್ನು ಕೊಟ್ಟು ತಾನು ಶಿರೋಹಿಯಿಂದ ಬಂಧಿರುವುದಾಗಿ ತಿಳಿಸಿದ. ಮಹಾರಾಣಾ ಮುಂದೆ ಬಾಗಿ, “ಅಲ್ಲಿ ಇಬ್ಬರೂ ಸಾಮಂತರ ಅಧಿಕಾರವಿದೆಯಲ್ಲವೇ?” ಎಂದನು.

“ಹೌದು ಮಹಾಪ್ರಭು” ದೂತ ಹೇಳೀದ, “ರಾವ್ ಸುರ್ತಾನ್ ಒಬ್ಬ ಸಾಮಂತರು. ಮತ್ತೊಬ್ಬರೂ ತಮ್ಮ ಸಹೋದರ ಜಗಮಲ್ಲ”.

“ಅಲ್ಲಿಯ ವಿಶೇಷ ಸಮಾಚಾರವೇನು?”

ಶಿರೋಹಿ ಅಕ್‌ಬರನ ವಿರುದ್ಧ ಹೋರಾಟ ನಡೆಸಿದೆ”

ರಾಣಾನ ಕಣ್ಣುಗಳು ಹೊಳೆದವು. “ನಮ್ಮ ಜಗಮಲ್ಲನು ಈ ಹೋರಾಟದಲ್ಲಿ ಭಾಗವಹಿಸಿದ್ದನೇ?”

“ಪ್ರಭುಗಳು ಅಭಯದಾನ ನೀಡಬೇಕು”

“ಹೌದು, ಹೌದು, ಹೇಳು ನಿನಗೆ ಅಭಯವಚನ ಕೊಟ್ಟಿರುವೆ”.

“ತಮ್ಮಸಹೋದರರು ಹೋರಾಟದಲ್ಲಿ ರಾವ್ ಸುರ್ತಾನರಿಗೆ ಬೆಂಬಲ ಕೊಡಲಿಲ್ಲ. ಅದರಲ್ಲಿ ತಮ್ಮ ಸಹೋದರ ಜಗಮಲ್ಲ ಮಡಿದರು”.

ಪ್ರತಾಪ ಒಂದು ಕ್ಷಣ ಸುಮ್ಮನಿದ್ದ, ಪುನಃ ಮುಗುಳ್ನಗೆ ನಕ್ಕ. “ದೇಶದ್ರೋಹಿ ಸತ್ತರೆ ಯಾರೂ ಅಳುವುದಿಲ್ಲ”.

“ಮಹಾಪ್ರಭು ! ರಾವ್ ಸುರ್ತಾನನು ಈ  ಸುದ್ಧಿಯನ್ನು ತಮಗೆ ತಿಳಿಸಬೇಕೆಂದು ಮತ್ತು ಅವರನ್ನು ಕ್ಷಮಿಸಬೇಕೆಂದು ಹೇಳಿ ಕಳುಹಿಸಿದ್ದಾರೆ.

“ಅವರು ತಪ್ಪು ಮಾಡಿಲ್ಲವೆಂದ ಮೇಲೆ ಕ್ಷಮೆ ಬೇಡುವ ಪ್ರಶ್ನೆಯೇ ಇಲ್ಲ”= ರಾಣಾ ಸಮಾಧಾನದಿಂದ ಹೇಳಿದ, “ಜಗಮಲ್ಲನಂತಹ ಹೇಡಿ ಸಹೋದರನ ನಿಧನದ ವಾರ್ತೆಯಿಂದ ನಮಗೆ ಏನು ದುಃಖವಾಗಿಲ್ಲವೆಂದು ಅವರಿಗೆ ತಿಳಿಸು. ಈ ಸಂಬಂಧದಲ್ಲಿ ನಾವೀರ್ವರು ಸಹೋದರನಾಗಿದ್ದೇವೆ”.

ಮಹಾ ಪ್ರಸ್ಥಾನ

ಕಷ್ಟದ ಕಡಲಿನಲ್ಲಿ ಈಜಿ ಈಜಿ ಮಹಾರಾಣಾನ ಶರೀರ ಜರ್ಜಿರಿತವಾಗಿತ್ತು.

೧೯ ಜನೆವರಿ ೧೫೯೭ನೇ ದಿನ.

ಮಹಾರಾಣಾ ಪ್ರತಾಪ ಸಿಂಹನ ಸ್ವಾಸ್ಥ್ಯ ಅನೇಕ ದಿನಗಳಿಂದ ಚೆನ್ನಾಗಿರಲಿಲ್ಲ. ಅಂದು ರಾಣಾ ಸ್ಥಿತಿ ತೀರ ಹದಗೆಟ್ಟಿತ್ತು. ಅವನು ತನ್ನ ಮಗ ಅಮರಸಿಂಹನನ್ನುಬಳಿಗೆ ಕರೆದು ಹೇಳಿದನು: “ಅಮರಸಿಂಹ, ಈಗ ನನ್ನ ಮಹಾಪ್ರಯಾಣದ ಕಾಲ ಸನ್ನಿಹಿತವಾಗುತ್ತಲ್ಲಿದೆ”.

“ಹಾಗೆನ್ನಬೇಡಿ, ಪಿತಾಜಿ “ಅಮರಸಿಂಹ ಕುಗ್ಗಿದ ಧ್ವನಿಯಲ್ಲಿ ನುಡಿದ.

“ಮಗು, ನಾನು ನನ್ನ ಇಡೀ ಆಯುಷ್ಯವನ್ನು ಹೋರಾಟದಲ್ಲಿಯೇ ಕಳೆದೆನು. ಪರಮಹಿತ ಏಲಿಂಗಜಿಯ ಮಹಾಕೃಪೆಯಿಂದ ಇಂದು ಮೇವಾಡದ ಬಹು ಭಾಗವೆಲ್ಲ ಸೂರ್ಯಾಂಕಿತ ಧ್ವಜದಡಿಯಲ್ಲಿ ಸ್ವತಂತ್ರವಾಗಿದೆ. ಆದರೆ ಚಿತ್ತೂರು ಮತ್ತು ಮಂಗಲಗಡ ಮೊದಲಾದ ಮೂರು ಕೋಟೆಗಳು ಮಾತ್ರ ಮೊಗಲರ ಅಧೀನದಲ್ಲಿವೆ. ನನ್ನ ಅನಂತರ ನೀನು ಈ ಮೂರು ಕೋಟೆಗಳನ್ನು ಸ್ವತಂತ್ರ ಗೊಳಿಸುವೆಯೆಂದು ನನಗೆ ವಚನ ಕೊಡು”.

ಆಗ ಅಮರಸಿಂಹನು ಪಿತಾಜಿಯವರೇ! ನಾನು ಮೂರು ಕೋಟೆಗಳನ್ನು ಗೆಲ್ಲುವವರೆಗೆ ವಿಶ್ರಾಂತಿಯನ್ನು ಪಡೆಯುವುದಿಲ್ಲ”.

ಮನೆಯವರು, ಸರದಾರರು, ಮಹಾಜನಗಳು ಪಂಡಿತರು  ಪ್ರತಾಪನ ಹುಲ್ಲಿನ ಹಾಸಿಗೆ ಸುತ್ತಲೂ ನೆರೆದಿದ್ದರು. ಮಹಾರಾಣಾ ಕೊನೆಯವರೆಗೂ ಮೃದುವಾದ ಹಾಸಿಗೆಯ ಮೇಲೆ ಮಲಗಿಲ್ಲ.  ಏಕೆಂದರೆ ಚಿತ್ತೂರನ್ನು ಸ್ವತಂತ್ರಗೊಳಿಸುವ ಘನ ಘೋರ ಪ್ರತಿಜ್ಞೆ ಪೂರ್ಣವಾಗಿ ಈಡೇರಿರಲಿಲ್ಲ.

ಕೊನೆಗೆ ಪ್ರತಾಪನು ಅಮರಸಿಂಹನ, ಕೈಯಲ್ಲಿ ಅದುಮಿ, “ಕುಮಾರಾ, ನಾನು ನನ್ನ ಅರ್ಧ ಪ್ರತಿಜ್ಞೆಯನ್ನು ನಿನಗೊಪ್ಪಿಸುತ್ತಿದ್ದೇನೆ. ಪೂರ್ಣ ಮಾಡುವಿಯಲ್ಲವೇ?” ಎಂದು ನಿಧಾನವಾಗಿ ಉಸುರಿದ.

“ತಾವು ನಿಶ್ಚಿಂತೆಯಿಂದ ಇರಬೇಕು ಪಿತಾಜಿ” ಎಂದು ಅಮರಸಿಂಹ ದುಃಖಿಸುತ್ತ  ಹೇಳಿದ. ಈ ಉತ್ತರವನ್ನು ಕೇಳಿ ಮಹಾರಾಣಾ ಪ್ರತಾಪನು ತೇಜಸ್ವಿ ಮುಖ ಮಂಡಲದಲ್ಲಿ ಶಾಂತಿ, ಸಮಾಧಾನದ ಕಳೆಯು ಮೂಡಿತು.  ಪಂಡಿತರು ಗಂಗಾಜಲವನ್ನು ಬಾಯಲ್ಲಿ ಹಾಕಿದರು. ಅನಂತರ ಕೆಲವು ಗಳಿಗೆಯಲ್ಲಿಯೇ ಭಾರತ ಮಾತೆಯ ವರಪುತ್ರನ ಪ್ರಾಣವು ಸ್ವರ್ಗವನ್ನು ಸೇರಿತು.

ಮಹಾಜ್ಯೋತಿ ಒಂದು ನಂದಿತು.