ಗಾಮೊಕ್ಕಲು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಹೊನ್ನಾವರ ತಾಲೂಕಿನ ಹಳ್ಳಿಗಳಲ್ಲಿ ನೆಲೆಸಿದ್ದಾರೆ. ಈ ಜನರ ಮೂಲ ಸ್ಥಾನವನ್ನು ಕುರಿತಾಗಿ ಅಧಿಕೃತ ದಾಖಲೆಗಳಿಲ್ಲ. ಅಹಿಚ್ಛತ್ರದಿಂದ ಹವ್ಯಕರು ಉತ್ತರ ಕನ್ನಡ ಜಿಲ್ಲೆಗೆ ವಲಸೆ ಬರುವ ಕಾಲಕ್ಕೆ ತಾವು ಅವರ ಜೊತೆಗೆ ಇಲ್ಲಿಗೆ ಬಂದವು,. ಹವ್ಯಕರು ಈ ಜಿಲ್ಲೆಗ ವಲಸೆ ಬರುವಾಗ ಅವರ ಮುಂದೆ ಶುದ್ಧಿಗಾಗಿ “ಗೋಮಯ”ವನ್ನು ಸಿಂಪಡಿಸುತ್ತ ಬಂದುರಿಂದ ತಾಮಗೆ “ಗಾಮೊಕ್ಕಲು”ಎಂಬ ಹೆಸರು ಬಂತೆಂದು ಅವರಲ್ಲಿ ಕೆಲವರ ಹೇಳಿಕೆಯಿದೆ. ಬಹುಶಃ ಇವರೂ ಹಾಲಕ್ಕಿ ಒಕ್ಕಲಿಗರ ಒಂದು ಪಂಗಡದವರಿರಬೇಕು.ಹಾಲಕ್ಕಿ ಒಕ್ಕಲಿಗರಿಗೂ ಹವ್ಯಕರಿಗೂ ಸಂಬಂಧ ಕಲ್ಪಿಸುವ ಐತಿಹ್ಯಗಳಿರುವುದನ್ನೂ ಈ ಸಂದರ್ಭದಲ್ಲಿ ನೆನೆಯಬಹುದು. ಇವರು ಹಾಲಕ್ಕಿ ಒಕ್ಕಲಿಗರೆಂದು “ಕುಂಬ್ರಿ ಬೇಸಾಯ”ವನ್ನು ಮಾಡದೇ, ಅವರಿಗಿಂತ ಮೊದಲು ಕಾಡು ಬಿಟ್ಟು ಗ್ರಾಮಗಳಲ್ಲಿ ನೆಲೆಸಿ ಒಕ್ಕಲುತನ ಕೈಗೊಂಡಿರಬೇಕು. ಇದರಿಂದ ಇಗರು (ಗ್ರಾಮ >ಗಾಮ + ಒಕ್ಕಲು)ಗಾಮೊಕ್ಕಲಾದರು. ಈ ಗಾಮೊಕ್ಕಲು ಇಂದೂ ಗುಡ್ಡ ಬೆಟ್ಟಗಳ ಮಧ್ಯ ವಾಸಮಾಡದೆ, ಕರಾವಳಿಯ ಬೈಲು ಗ್ರಾಮಗಳಲ್ಲಿ ಮಾತ್ರ ವಾಸಿಸುತ್ತಾರೆ.  ಹಾಲಕ್ಕಿ ಒಕ್ಕಲಿಗರಂತೆ  ಇವರೂ ತಮ್ಮ ಹೆಸರಿನ ಮುಂದೆ ಗೌಡ ಎಂಬ ಅಡ್ಡ ಹೆಸರನ್ನು ಹಾಕಿಕೊಳ್ಳುತ್ತಾರೆ. ಈ ಅಡ್ಡ ಹೆಸರಲ್ಲದ ಹಾಲಕ್ಕಿ ಒಕ್ಕಲಿಗರಲ್ಲಿ ಬಳಕೆಯಲ್ಲಿಲ್ಲದ “ಪಟಗಾರ” ಎಂಬ ಅಡ್ಡ ಹೆಸರನ್ನೂ ಇವರಲ್ಲಿ ಅನೇಕರು ಬಳಸುತ್ತಾರೆ.  ಕೆಲವೆಡೆ ಇವರನ್ನು ಗಾಮೊಕ್ಕಲೆಂದು ಕರೆಯುವುದರ ಬದಲಾಗಿ ‘ಪಟಗಾರರು’ ಎಂದು

[1] ಕರೆಯುತ್ತಾರೆ. ಈ ಜನ ಪಟಗಾರಿಕೆ ಎಂದರೆ ನೇಕಾರಿಕೆ ಕೆಲಸವನ್ನು ಈ ಜಿಲ್ಲೆಯಲ್ಲಿ ಮಾಡಿದ್ದು ನಾನು ನೋಡಿಲ್ಲ. ಆದ್ದರಿಂದ  ನೇಕಾರಿಕೆಯಿಂದ ಈ ಹೆಸರು ಇವರಿಗೆ ಬಂದಿರಲಿಕ್ಕಿಲ್ಲ “ಪಟ:” ಎನ್ನುವುದು ವಿಸ್ತಾರ ಪ್ರದೇಶ ಎಂಬ ಅರ್ಥದಲ್ಲಿಯೂ ಬಳಕೆಯಲ್ಲಿದೆ. ಆದ್ದರಿಂದ ಪಟಿ+ಕಾ ಬೇಸಾಯ ಕೈಗೊಂಡವರು ಎಂಬ ಅರ್ಥವನ್ನು “ಪಟಗಾರ ಪದ ಸೂಚಿಸುವಂತಿದೆ.  ಒಟ್ಟಿನಲ್ಲಿ ಗ್ರಾಮೊಕ್ಕಲು ಗ್ರಾಮವಾಸಿಗಳು, ಬೈಲು ವ್ಯವಸಾಯ ಕೈಗೊಂಡವರು ಕಾಡಾಡಿಗಳಲ್ಲ. ಕುಂಬ್ರಿ ಬೇಸಾಯಗಾರರಲ್ಲ.

ಹಾಲಕ್ಕಿ ಒಕ್ಕಲಿಗರಂತೆ ತಿರುಪತಿಯ ವೆಂಕಟರಮಣನು ಇವರ ಕುಲದೇವರು ಇವರ ಮನೆಯ ಮುಂದೆ ತುಲಸಿಯ  ಕಟ್ಟೆ ಇಲ್ಲವೇ ತಿರುಪತಿ ವೆಂಕಟರಮಣನ ಮೂರ್ತಿಯಿರುವ ಸಣ್ಣ ಗುಡಿ ಇರುತ್ತದೆ. ತಿರುಪತಿ ಯಾತ್ರೆ ಮಾಡಿ “ಹರಿದಿನ”ವನ್ನಾಚರಿಸುವುದರಲ್ಲಿ ಇವರು ತಮ್ಮ ಬದುಕಿನ ಸಾರ್ಥಕತೆಯನ್ನು ಕಾಣುತ್ತಾರೆ. ಗೋಕುಲಾಷ್ಟಮಿ, ದೀಪಾವಳಿ, ಗಂಟಿ ಹುಣ್ಣಿಮೆ, ತುಲಸಿ ವಿವಾಹ, ಯುಗಾಧಿ ಸುಗ್ಗಿ ಮುಂತಾದ ಹಬ್ಬಗಳನ್ನಾಚರಿಸುತ್ತಾರೆ. ಹಾಲಕ್ಕಿ, ಒಕ್ಕಲಿಗರಂತೆ, ಸುಗ್ಗಿ ಹಬ್ಬದಲ್ಲಿ ಮೇಳ ಕಟ್ಟಿಕೊಂಡು ಮನೆಯ ಮನೆಯ ಮುಂದೆ ಕುಣಿಯುವ ರೂಢಿ ಇವರಲ್ಲಿ ಕಡಿಮೆ.

ಹಾಲಕ್ಕಿ ಒಕ್ಕಲಿಗರಂತೆ ಚಿಕ್ಕ ಚಿಕ್ಕ ಮನೆಗಳಲ್ಲಿ ಇವರ ವಾಸ. ಅಕ್ಕಿ, ರಾಗಿ, ಮೀನ, ಮಾಂಸಗಳು ಇವರ ಮುಖ್ಯ ಆಹಾರ. ಬೆಲ್ಲಕಾಯಿ ಪ್ರೀತಿಯ ತಿಂಡಿ. ಪಾಯಸದ ದೂಟ ಮೇಜವನಿ.

ಇವರ ಆಚಾರ, ವಿಚಾರ, ಆಹಾರ ಮತೀಯ ಆಚರಣೆಗಳೆಲ್ಲ ಹೆಚ್ಚು ಕಡಿಮೆ ಹಾಲಕ್ಕಿ ಒಗ್ಗಲಿಗರಂತೆಯೇ ಇದ್ರೂ ಉಡಿಗೆ ತೊಡಿಗೆ ಹಾಗೂ ಆಡು ನುಡಿಯಲ್ಲಿ  ವ್ಯತ್ಯಾಸ ಗೋಚರಿಸುತ್ತದೆ. ಹೆಂಗಸರ ಉಡಿಗೆ ತೊಡುಗೆಯಲ್ಲಂತೂ ಹೊಡೆದು ಕಾಣುವ ಭಿನ್ನತೆಯಿದೆ. ಹಾಲಕ್ಕಿ ಹೆಣ್ಣು ಮಕ್ಕಳಂತೆ ಗಾಮೊಕ್ಕಲ ಹೆಂಗಸರು ಕುತ್ತಿಗೆ ತುಂಬ ಕರಿಮಣಿ ಸರಗಳನ್ನು ಕೈತುಂಬ ಬಳೆಗಳನ್ನು ಹಾಕುವುದಿಲ್ಲ. ಸೀರೆ ಉಡುವುದು, ತುರುಬು ಕಟ್ಟುವುದರಲ್ಲಿಯೂ ಭಿನ್ನತೆಯಿದೆ.

ಗಾಮೊಕ್ಕಲರದು ವ್ಯವಸ್ಥಿತ ಬದುಕು. ಹಾಲಕ್ಕಿ ಒಕ್ಕಲಿಗರಿಗಿಂತ ಇವರು ಮುಂದುವರೆದವು. ಅವರಂತೆ ಇವರೂ ಶ್ರಮಜೀವಿಗಳು: ವಿನಯಶೀಲರು. ಬಹಳಷ್ಟು ಜನ ಗೇಣಿದಾರರು.  ಇತ್ತಿಚೆಗೆ “ಉಳುವವನೇ ಹೊಲದೊಡೆಯ” ಎನ್ನುವ ಕಾನೂನು ಬಂದ ಮೇಲೆ ಕೆಲವರು ಭೂ ಮಾಲೀಕರಾಗಿದ್ದಾರೆ. ಆದರೂ ಇನ್ನೂ ಅನೇಕರು ಭೂ ಮಾಲೀಕರ ಪ್ರಭಾವ ವಲಯದಿಂದ ಹೊರ ಬರಲಾಗದೆ ಗೇಣಿದಾರರಾಗಿಯೇ ಹೇಗೋ ಬದುಕುತ್ತಿದ್ದಾರೆ.


[1]     ಈಗ ಕುಂಬ್ರಿ ಬೇಸಾಯ ಕಣ್ಮರೆಯಾಗಿ ಹೋಗಿದೆಸ