ಈ ಹಾಡುಗಳನ್ನು ನಾನು ೧೯೯೬ರಲ್ಲಿ “ಮಹಾಪ್ರಬಂಧವನ್ನು” ಬರೆಯುವ ಕಾಲಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳಗೆರೆ ಮತ್ತು ಮಾವಿನ ಕುರ್ವೆಗಳಲ್ಲಿ ಸಂಗ್ರಹಿಸಿದ್ದರು. ಇವೆರಡೂ ಊರುಗಳು ಶರಾವತಿಯ ನದಿಯಲ್ಲಿಯ ನೆರೆಹೊರೆಯ ನಿಸರ್ಗ ರಮ್ಯ ಕುರುಹುಗಳು. ಈ ಊರುಗಳಲ್ಲಿ ಹಿಂದಕ್ಕೆ ಅಮ್ಮನವರು ಹಾಗೂ ಹನುಮಂತ ದೇವರನ್ನು ಮೆರವಣಿಗೆಯ ಮಾಡುವಾಗ ಈ ಹಾಡುಗಳನ್ನು ಹಾಡುವ ಪರಿಪಾಠವಿತ್ತಂತೆ. ಈ ಮಹಾಭಾರತ ಹಾಡುಗಳ ಜೊತೆಗೆ ಇನ್ನಿತರೆ ಬೇರೆ ಬೇರೆ ಹಾಡುಗಳ ಸೂರೆಯೂ ಈ ಸಂದರ್ಭದಲ್ಲಿ ಆಗುತ್ತಿತ್ತು.  ಇಲ್ಲಿಯ ಹಾಡುಗಳು ಪ್ರಮುಖ ಹಾಡುಗಾರ್ತಿ ಹಳಿಗೇರಿಯ ಕುಪ್ಪಜ್ಜಿ. ಇವರ ಹೆಸರು ಸುಬ್ಬಿ ಎಂದಾದರೂ ಊರಿನವರೆಲ್ಲ ಇವಳನ್ನು ಕುಪ್ಪಜ್ಜಿಯೆಂದೇ ಕರೆಯುವುದು. ಅವಳಿಗೂ ಆ ಹೆಸರೇ ಪ್ರೀಯ. ಕುಪ್ಪಜ್ಜಿ ಒಂದು  ಖಂಡುಗ ಅಕ್ಕಿಯನ್ನು ಕೊಟ್ಟು, ಒಬ್ಬಳಿಂದ ಧರ್ಮದ ಹಾಡುಗಳ ಮತ್ತು ಸುಭದ್ರೆಯ ಹಾಡು ಕುಲಿತಿದ್ದಳಂತೆ. ಆದರೆ ಇಂದು ಕುಪ್ಪಜ್ಜಿ ಚಿಕ್ಕಂದಿನಿಂದಲ್ಲಿ ಅವಳೀಗೆ ಹಾಡನ್ನು ಕಲಿಸಿಕೊಟ ಹಾಡುಗಾರ್ತಿಯ ಹೆಸರು ಹಾಗೂ ಊರನ್ನು ಮರೆತು ಬಿಟ್ಟಿದ್ದಾಳೆ. ಇನ್ನಿಬ್ಬರು ಹಾಡುಗಾರ್ತಿಯರಾದ ಬೆಳಿಯಮ್ಮ ಲಕ್ಷ್ಮೀ ಮತ್ತು ಗೌರಿ ಹಳಿಗೆರೆಯವರೇ. ಇವರು ಹಾಡು ಕಲಿತದ್ದು, ಕುಪ್ಪಜ್ಜಿಯಿಂದ. ಕುಪ್ಪಜ್ಜಿಗೆ ಭಾರತದ ಎಲ್ಲ ಹಾಡುಗಳು ಬರುತ್ತಿದ್ದರೂ, ಅವಳು ಉಳಿದಿವರಿಂದಲೂ ಹಾಗೂ ಹೇಳಿಸಿಕೊಳ್ಳಲು ನಿರ್ದೆಶಿಸಿದ ಪ್ರಯುಕ್ತ, ಉಳಿದವರಿಂದ ನಾವು ಹಾಡು ಸಂಗ್ರಹಿಸಿದ್ದು, ಗೌರಿ ಉಳಿದ ಹಾಡುಗಾರ್ತಿಯರಾದ ಈರಿ ಮತ್ತು ಕನ್ನೆಯ ಮಾವಿನ ಕುರ್ವೆಯವರು.  ಜಾನಪದ ಗೀತೆಗಳನ್ನು ವಿಭಿನ್ನ ದಾಟಿಯಲ್ಲಿ ಹಾಡಿ, ಕೇಳುಗರನ್ನು ಮಂತ್ರಮುಗ್ದಗೊಳಿಸುವ ಕಲೆಗಾರಿಕೆ ಹಿರಿಯದ್ದು. ಹಾಡುಗಳನ್ನು ಹಾಡುವಾಗ ಹಾಸ್ಯ ಚಟಾಕಿಗಳನ್ನು ಹಾರಿಸುತ್ತ ಹಾಡು ಬರೆದುಕೊಳ್ಳುವವರಿಗೆ ರಸದೌತಣ ನೀಡುವಲ್ಲಿ ಈರಿ ನಿಪುಣೆ, ನಾನು ಮೊನ್ನೆ ಮೊನ್ನೆ ಅವಳನ್ನು ಅಂಕೋಲದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದವರು ಅಯೋಜಿಸಿದ್ದ ಆಖಿಲ ಕರ್ನಾಟಕ ಜಾನಪದ ಸಮ್ಮೇಳನಕ್ಕೆ ಕರೆದೊಯ್ಯುವ ಸಲುವಾಗಿ ನಮ್ಮ ಮನೆಗೆ ಕರೆದಾಗ, ಅವಳ ಸ್ಥಿತಿ ಕಂಡು ನನಗೆ ವ್ಯಥ್ಯೆಯಾಯಿತು. ೧೨ ವರ್ಷಗಳ ಹಿಂದೆಕಟ್ಟು ಮಸ್ತಾಗಿದ್ದ ಈರಿ ನಡೆದಾಡುವ ತ್ರಾಣವನ್ನು ಕಳೆದುಕೊಂಡಿದ್ದಾಲೆ. ದಮ್ಮಿನ ರೋಗದಿಂದ ಗುರುತಿಸಲಕ್ಕೂ ಬಾರದ ಹಾಗೆ ಹೈರಾಣಾಗಿ ಹೋಗಿದ್ದಾಳೆ. ಇಂದು ಅವಳೀಗೆ ಸಭೆ ಸಮ್ಮೇಳನ ಕೀರ್ತಿ ಯಾವುದೂ ಬೇಕಾಗಿಲ್ಲ. ಏನೋ ಬದುಕುಳಿದಿದ್ದಾರೆ ಆದರೆ ಹಾಡುವ ಸ್ಥಿತಿಯಲ್ಲಿಲ್ಲ.